ಅತಿಶಯೋಕ್ತಿ
ಅತಿಶಯೋಕ್ತಿ ಅಲಂಕಾರಿಕ ಸಾಧನ ಅಥವಾ ಭಾಷಾಲಂಕಾರವಾಗಿ ಉತ್ಪ್ರೇಕ್ಷೆಯ ಬಳಕೆ. ಕಾವ್ಯ ಮತ್ತು ಭಾಷಣಕಲೆಯಲ್ಲಿ, ಅದು ಒತ್ತು ನೀಡುತ್ತದೆ, ಬಲವಾದ ಅನಿಸಿಕೆಗಳನ್ನು ಪ್ರಚೋದಿಸುತ್ತದೆ, ಮತ್ತು ಬಲವಾದ ಪ್ರಭಾವಗಳನ್ನು ಸೃಷ್ಟಿಸುತ್ತದೆ. ಭಾಷಾಲಂಕಾರವಾಗಿ, ಅದನ್ನು ಸಾಮಾನ್ಯವಾಗಿ ಅಕ್ಷರಶಃ ತೆಗೆದುಕೊಳ್ಳಬಾರದು.
ಅತಿಶಯೋಕ್ತಿಯನ್ನು ಅಂತಹ ಉತ್ಪ್ರೇಕ್ಷೆಗಳ ನಿದರ್ಶನಗಳಿಗೂ ಒತ್ತು ಅಥವಾ ಪರಿಣಾಮಕ್ಕಾಗಿ ಬಳಸಬಹುದು. ಅತಿಶಯೋಕ್ತಿಗಳನ್ನು ಹಲವುವೇಳೆ ಅನೌಪಚಾರಿಕ ಮಾತಿನಲ್ಲಿ ತೀವ್ರಕಾರಿಗಳಾಗಿ ಬಳಸಲಾಗುತ್ತದೆ, ಉದಾಹರಣೆಗೆ "ಈ ಚೀಲ ಒಂದು ಟನ್ ಭಾರವಿದೆ". ಮಾತನಾಡುವವನು ಚೀಲವು ವಿಪರೀತ ಭಾರವಾಗಿದೆ ಎಂದು ಕಂಡುಕೊಂಡನು ಎಂಬ ವಿಚಾರವನ್ನು ಇಲ್ಲಿ ಅತಿಶಯೋಕ್ತಿಯು ಮುಂದಿಡುತ್ತದೆ, ಆದರೆ ಅಕ್ಷರಶಃ ಚೀಲವು ಒಂದು ಟನ್ ಭಾರವಾಗಿರುವುದಿಲ್ಲ. ಅತಿಶಯೋಕ್ತಿಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಸಂದರ್ಭದಲ್ಲಿ ಅವುಗಳ ಬಳಕೆ ಭಾಷಣಕಾರನು ಕಳಿಸುತ್ತಿರುವ ಸಂದೇಶಗಳನ್ನು ತಿಳಿದುಕೊಳ್ಳುವಲ್ಲಿ ಒಬ್ಬರ ಸಾಮರ್ಥ್ಯವನ್ನು ಪ್ರೋತ್ಸಾಹಿಸುತ್ತದೆ. ಅತಿಶಯೋಕ್ತಿಗಳ ಬಳಕೆ ಭಾವನೆಗಳನ್ನು ಪ್ರಸಾರಮಾಡುತ್ತದೆ ಎಂದು ದೃಢಪಡಿಸಲಾಗಿದೆ. ಅತಿಶಯೋಕ್ತಿಯನ್ನು ಹಾಸ್ಯ, ಉತ್ಸಾಹ, ದುಃಖ, ಮತ್ತು ಇತರ ಅನೇಕ ಭಾವನೆಗಳ ರೂಪದಲ್ಲಿ ಬಳಸಬಹುದು, ಎಲ್ಲ ಅದನ್ನು ಭಾಷಣಕಾರನು ಬಳಸುವ ಸಂದರ್ಭವನ್ನು ಆಧರಿಸಿ.[೧]
ಉಲ್ಲೇಖಗಳು
[ಬದಲಾಯಿಸಿ]- ↑ Johnson, Christopher. "The Rhetoric of Excess in Baroque Literature and Thought" (PDF). Scholar.havard.edu. Harvard.