ಉತ್ಪ್ರೇಕ್ಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉತ್ಪ್ರೇಕ್ಷೆ ಮಿತಿಮೀರಿದ ರೀತಿಯಲ್ಲಿ ಯಾವುದರದ್ದಾದರೂ ಪ್ರಾತಿನಿಧ್ಯ. ಉತ್ಪ್ರೇಕ್ಷಕನು ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಕನಿಷ್ಠಪಕ್ಷ ಅರಿಸ್ಟಾಟಲ್‍ನ ಆಲಜ಼ೋನ್‍ನ ಚರ್ಚೆಯ ಕಾಲದಿಂದ ಪರಿಚಿತ ವ್ಯಕ್ತಿಯಾಗಿದ್ದಾನೆ: 'ಉತ್ತರಭೂಪನು ವಿಶೇಷ ಗುಣಗಳನ್ನು ಹೊಂದಿದ್ದೇನೆಂದು ತೋರ್ಪಡಿಸಿಕೊಳ್ಳುವವನು ಎಂದು ಪರಿಗಣಿತನಾಗಿದ್ದಾನೆ...ಉತ್ಪ್ರೇಕ್ಷಿಸುವುದು, ಆದರೆ ಅವನು ತೋರ್ಪಡಿಸಿಕೊಂಡಂತೆ ಈ ಗುಣಗಳನ್ನು ಅವನು ಹೊಂದಿರುವುದೇ ಇಲ್ಲ ಅಥವಾ ಕಡಿಮೆ ಮಟ್ಟದಲ್ಲಿ ಹೊಂದಿರುತ್ತಾನೆ'.[೧]

ಇದು ಕನಿಷ್ಠೀಕರಣದ ವಿರುದ್ಧ ಪದ.

ಉತ್ಪ್ರೇಕ್ಷೆಗೆ ಸಂಬಂಧಿಸಿದ ಶಬ್ದಗಳು ಅಥವಾ ಪದವಿನ್ಯಾಸಗಳು ಈ ಕೆಳಗಿನವನ್ನು ಒಳಗೊಂಡಿವೆ:

2
The unnamed parameter 2= is no longer supported. Please see the documentation for {{Columns-list}}.
  • ಅತಿಶಯೋಕ್ತಿ
  • ವರ್ಧನ/ದೊಡ್ಡದು ಮಾಡುವುದು
  • ಗರಿಷ್ಠೀಕರಣ
  • ಅತಿಯಾಗಿ ಉಬ್ಬಿಸುವುದು
  • ಅತಿಪ್ರತಿಕ್ರಿಯೆ ತೋರುವಿಕೆ
  • ಅತಿ ಮಾಡಿ ಹೇಳುವುದು
  • ಸತ್ಯವನ್ನು ಎಳೆದು ಹೇಳುವುದು

ಗಮನ ಬಯಸಲು ಸಾಧನೆಗಳು, ಅಡೆತಡೆಗಳು ಮತ್ತು ಸಮಸ್ಯೆಗಳನ್ನು ಹಿಗ್ಗಿಸುವುದು ಒಂದು ದೈನಂದಿನ ಸಂಗತಿ. ಉತ್ಪ್ರೇಕ್ಷಿಸುವುದು ಒಂದು ಬಗೆಯ ವಂಚನೆ ಕೂಡ, ಜೊತೆಗೆ ಕಾಯಿಲೆಯ ಸೋಗುಹಾಕುವ ವಿಧಾನ – ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳುವ ನೆಪವಾಗಿ ಸಣ್ಣಪುಟ್ಟ ಗಾಯಗಳು ಅಥವಾ ಇರುಸುಮುರುಸನ್ನು ದೊಡ್ಡದು ಮಾಡುವುದು. ತೇಜೋವಧೆಯು ಸಾಮಾನ್ಯವಾಗಿ ಉದ್ದೇಶಪೂರ್ವಕ ಉತ್ಪ್ರೇಕ್ಷೆ ಅಥವಾ ವಾಸ್ತವಾಂಶಗಳ ಕುಶಲ ನಿರ್ವಹಣೆಯನ್ನು ಒಳಗೊಳ್ಳುತ್ತದೆ. ಖಿನ್ನತೆಯಲ್ಲಿ, ಉತ್ಪ್ರೇಕ್ಷಿತ ಎಲ್ಲ ಅಥವಾ ಏನೂ ಇಲ್ಲ ಯೋಚನೆಯು ಸ್ವ-ಬಲವರ್ಧನೆಯ ಆವರ್ತವನ್ನು ರಚಿಸಬಹುದು: ಈ ಯೋಚನೆಗಳನ್ನು ಭಾವನಾತ್ಮಕ ವರ್ಧಕಗಳೆಂದು ಕರೆಯಬಹುದು, ಏಕೆಂದರೆ ಅವು ಸುತ್ತ ಸುತ್ತ ಹೋದಂತೆ, ಹೆಚ್ಚು ತೀವ್ರವಾಗುತ್ತವೆ.

ಅಣಕುಚಿತ್ರವು ಸುಲಭವಾಗಿ ಗುರುತಿಸಬಲ್ಲ ದೃಶ್ಯ ಪ್ರತಿರೂಪವನ್ನು ಸೃಷ್ಟಿಸಲು ಒಬ್ಬ ವ್ಯಕ್ತಿ ಅಥವಾ ಒಂದು ವಸ್ತುವಿನ ವೈಶಿಷ್ಟ್ಯವನ್ನು ಉತ್ಪ್ರೇಕ್ಷಿಸುವ ಅಥವಾ ವಿರೂಪಗೊಳಿಸುವ ಭಾವಚಿತ್ರವನ್ನು ಸೂಚಿಸಬಹುದು. ಸಾಹಿತ್ಯದಲ್ಲಿ, ವಿಡಂಬನೆಯು ಕೆಲವು ಗುಣಲಕ್ಷಣಗಳ ಉತ್ಪ್ರೇಕ್ಷೆ ಮತ್ತು ಉಳಿದವುಗಳ ಅತಿ ಸರಳೀಕರಣ ಬಳಸಿ ಒಬ್ಬ ವ್ಯಕ್ತಿಯ ವಿವರಣೆ.

ಉಲ್ಲೇಖಗಳು[ಬದಲಾಯಿಸಿ]

  1. Aristotle, Ethics (Penguin 1976) p. 165.