ಅಣಬೆ ಕೃಷಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಣಬೆ ಸಸ್ಯವರ್ಗಕ್ಕೆ ಸೇರಿದ ಶಿಲೀಂದ್ರ. ಆಹಾರ ಪದಾರ್ಥಗಳ ಪಟ್ಟಿಯಲ್ಲಿ ಅಣಬೆಯನ್ನು ತರಕಾರಿ ಎಂದು ಗುರುತಿಸಲಾಗುತ್ತದೆ. ಇದೊಂದು ಉತ್ತಮ ಆಹಾರ. ಹಲವಾರು ವಿಧದ ಅಣಬೆಗಳನ್ನು ನಾವು ಕಾಣಬಹುದು. ಅವುಗಳಲ್ಲಿ ಬಹುಪಾಲು ಅಣಬೆಗಳು ತಿನ್ನಲು ಯೋಗ್ಯವಾಗಿವೆ. ಇನ್ನೂ ಕೆಲವು ವಿಷಪೂರಿತವಾಗಿರುತ್ತವೆ. ಇದರಲ್ಲಿ ಪ್ರೊಟೀನ್, ಜೀವಸತ್ವಗಳು, ಖನಿಜಾಂಶಗಳು ಹೇರಳವಾಗಿದ್ದು ಶರ್ಕರ ಪಿಷ್ಠ ಕಡಿಮೆಯಿರುವುದರಿಂದ ಸಕ್ಕರೆ ರೋಗಿಗಳಿಗೆ ಒಳ್ಳೆಯ ಆಹಾರವಾಗಿದೆ. ಅಣಬೆ ಹೆಚ್ಚು ಮೃದುವಾಗಿರುವುದರಿಂದ ಎಲ್ಲಾ ವಿಧದ ಮಸಾಲೆ ಪರಿಮಳವನ್ನು ಹೀರಿಕೊಳ್ಳುವ ಗುಣ ಇದಕ್ಕಿದೆ. ಹಾಗಾಗಿ ಇದರಿಂದ ರುಚಿಕರ ತಿನಿಸುಗಳನ್ನು ತಯಾರಿಸಹುದು. ಅತ್ಯಧಿಕ ಪ್ರೊಟೀನ್ ಇರುವ ಆಹಾರ ವರ್ಧಕ ಅಣಬೆಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಅಣಬೆ ಕೃಷಿಯಿಂದ ಕಡಿಮೆ ವೇಳೆಯಲ್ಲಿ ಹಾಗೂ ಅಲ್ಪ ಪ್ರದೇಶದಲ್ಲಿ ಅಧಿಕ ಇಳುವರಿ ಪಡೆಯಬಹುದು.

ಅಣಬೆ ಕೃಷಿಯ ವಿಧಾನ[ಬದಲಾಯಿಸಿ]

ಅಣಬೆ ಉತ್ಪಾದಿಸಲು ಭತ್ತದ ಹುಲ್ಲು ಅತ್ಯವಶ್ಯಕ. ಹಾಗಾಗಿ ಭತ್ತದ ಹುಲ್ಲು ಲಭ್ಯವಿರುವ ಜಲಾನಯನ ಪ್ರದೇಶಗಳಲ್ಲಿ ಅದರಲ್ಲೂ ಮಲೆನಾಡು, ಅರೆಮಲೆನಾಡು ಪ್ರದೇಶಗಳಲ್ಲಿ ಅಣಬೆ ಕೃಷಿಯನ್ನು ಉತ್ಪಾದನಾ ಚಟುವಟಿಕೆಯಾಗಿ ಕೈಗೊಳ್ಳಬಹುದು. ಈ ಕೃಷಿಯ ಬಗ್ಗೆ ತೋಟಗಾರಿಕಾ ಇಲಾಖೆ ಕೂಡಾ ತರಬೇತಿ ನೀಡುತ್ತದೆ. ವರ್ಷವಿಡೀ ಅಣಬೆ ಬೆಳೆಯನ್ನು ಬೆಳೆಯಬಹುದು. ಅಣಬೆ ಕೃಷಿಯನ್ನು ಒಳಾಂಗಣದಲ್ಲಿ ಮಾಡಬೇಕಾಗುತ್ತದೆ. ಆಯಿಸ್ಟರ್ ಅಣಬೆ ಭಾರತದಲ್ಲಿ ಬೆಳೆಯಲು ಸೂಕ್ತವಾಗಿದೆ. ಉಳಿದಂತೆ ಬಿಳಿ ಅಣಬೆ ಅಥವಾ ಯುರೋಪಿಅಣಬೆ, ಕಪ್ಪೆ ಚಿಪ್ಪಿನ ಅಣಬೆ ಅಥವಾ ಡಿಗ್ರಿ ಅಣಬೆ, ಬತ್ತದ ಹುಲ್ಲಿನ ಅಣಬೆ ಈ ಮೂರೂ ಗುಂಪಿಗೆ ಸೇರಿದ ಎಲ್ಲಾ ಅಣಬೆ ತಳಿಗಳನ್ನು ಬೆಳೆಯಬಹುದು. ಇದರಲ್ಲೂ ಕಪ್ಪೆ ಚಿಪ್ಪಿನ ಅಣಬೆಯನ್ನು ಬೆಳೆಸುವುದು ಅತಿ ಸುಲಭ. ಇದಕ್ಕೆ ೨೨ ಡಿಗ್ರಿ ಸೆಲ್ಶಿಯಸ್‌ನಿಂದ ೩೦ಡಿಗ್ರಿ ಸೆಲ್ಶಿಯಸ್‌ವರೆಗಿನ ಎಲ್ಲಾ ಹವಾಮಾನವನ್ನು ಹೊಂದಿಕೊಂಡು ಬೆಳೆಯವ ಸಾಮರ್ಥ್ಯವಿದೆ. ಅಣಬೆ ಕೃಷಿ ಮಾಡಲು ವಿವಿಧ ಹಂತಗಳಿವೆ. ಮೊದಲು ಬತ್ತದ ಹುಲ್ಲನ್ನು ೪ರಿಂದ ೫ ಸೆಂ.ಮೀ. ಉದ್ದದ ತಂಡುಗಳಾಗಿ ಕತ್ತರಿಸಿ ಸುಮಾರು ೩ರಿಂದ ೪ ಗಂಟೆಗಳ ಕಾಲ ನೀರಿನಲ್ಲಿ ನೆನೆಸಬೇಕು. ಹುಲ್ಲಿನಲ್ಲಿರುವ ನೀರನ್ನೆಲ್ಲಾ ಬಸಿದು ಕುದಿಯುವ ನೀರಿನಲ್ಲಿ ೨ ಗಂಟೆಗಳ ಕಾಲ ನೆನೆಸಬೇಕು. ಕುದಿಯುವ ನೀರಿನಿಂದ ಹುಲ್ಲನ್ನು ತೆಗೆದು ಅದನ್ನು ಒಣಗಿಸಿ ಹೆಚ್ಚಿನ ನೀರಿನ ಅಂಶವನ್ನು ತೆಗೆಯಬೇಕು.[೧] ಒಣಗಿದ ಹುಲ್ಲನ್ನು ಪಾಲಿಥೀನ್ ಚೀಲಗಳಿಗೆ ತುಂಬಬೇಕು, ಒಂದು ಚೀಲಕ್ಕೆ ಒಂದು ಕೆ.ಜಿ.ಯಷ್ಟು ಹುಲ್ಲು ಹಾಗೂ ೫೦೦ ಗ್ರಾಮ್ ಅಣಬೆ ಬೀಜವನ್ನು ಹಂತ ಹಂತವಾಗಿ ಸಮಾನಾಗಿ ಹರಡಿ ತಂಬಬೇಕು. ಚೀಲದ ಬಾಯನ್ನು ಭದ್ರವಾಗಿ ಕಟ್ಟಬೇಕು. ನಂತರ ಚೀಲಗಳನ್ನು ತಂಪಾಗಿರುವ ಸ್ಥಳದಲ್ಲಿ ೨೦ರಿಂದ ೩೦ ದಿನಗಳ ಕಲ ಇಡಬೇಕು. ಆಗ ಅಣಬೆ ಬೀಜ ಮೊಳಕೆಯೊಡೆದು ಬೆಳೆದಿರುತ್ತದೆ. ಚೀಲಗಳಿಗೆ ಬ್ಲೇಡ್‌ನಿಂದ ರಂಧ್ರಗಳನ್ನು ಮಾಡಬೇಕು. ದಿನಕ್ಕೆ ೨ರಿಂದ ೩ ಬಾರಿ ನೀರು ಚಿಮುಕಿಸುತ್ತಿರಬೇಕು. ಚೀಲಕ್ಕೆ ರಂಧ್ರಗಳನ್ನು ಮಾಡಿದ ಒಂದು ವಾರದ ಒಳಗೆ ಹುಲ್ಲಿನ ಪಿಂಡಿಯ ಸುತ್ತಲೂ ಅಣಬೆ ಕಾಣಸಿಗುತ್ತದೆ. ಪ್ರತಿ ೩ ದಿನಕ್ಕೊಮ್ಮೆ ಅಣಬೆ ಕೊಯಿಲು ಮಾಡಬಹುದು.[೨]

ಅಣಬೆಯನ್ನು ಶೇಖರಿಸಿಡುವ ಕ್ರಮ[ಬದಲಾಯಿಸಿ]

ಕೃತಕವಾಗಿ ಅಣಬೆಯನ್ನು ಬಹಳ ದಿನಗಳವರೆಗೆ ಶೇಖರಿಸಿ ಇಡಬಹುದು. ಒಣಗಿಸಬೇಕಾಗಿರುವ ಅಣಬೆಯನ್ನು ತೊಟ್ಟು ಸಮೇತ ಕತ್ತರಿಸಿ ಚೆನ್ನಾಗಿ ತೊಳೆದು ೫ ನಿಮಿಷಗಳವರೆಗೆ ಹಬೆಯಲ್ಲಿ ಅಥವಾ ಕುದಿಯುವ ನೀರಿನಲ್ಲಿ ಬ್ಲಾಂಚ್ ಮಾಡಬೇಕು. ಸೂರ್ಯನ ಶಾಖದಿಂದ ಅಥವಾ ಡ್ರಯರ್ ಮೂಲಕವೂ ಅಣಬೆಯನ್ನು ಒಣಗಿಸಬಹುದು. ಆದರೆ ಸೂರ್ಯಶಾಖದೊಂದಿಗೆ ಒಣಗಿಸಿದಂತಹ ಅಣಬೆಯನ್ನು ೫೫ರಿಂದ ೬೦ ಡಿಗ್ರಿ ಸೆಲ್ಶಿಯಸ್ ಉಷ್ಣಾಂಶದಲ್ಲಿ ೬ ಗಂಟೆಗಳ ಕಾಲ ಓವನ್‌ನಲ್ಲಿ ಇಟ್ಟು ಪ್ಯಾಕ್ ಮಾಡಬೇಕು. ಹಣ್ಣು ಮತ್ತು ತರಕಾರಿಗಳನ್ನು ಒಣಗಿಸಲು ಉಪಯೋಗಿಸುವ ಕ್ಯಾಬಿನೆಟ್ ಡ್ರೆöÊಯರ್‌ಗಳನ್ನು ಉಪಯೋಗಿಸಿ ಅಣಬೆಯನ್ನು ಒಣಗಿಸಬಹುದು.

ಅಣಬೆಯ ಉಪಯೋಗಗಳು[ಬದಲಾಯಿಸಿ]

ಅಣಬೆಯಿಂದ ವಿವಿಧ ಬಗೆಯ ಆಹಾರ ತಯಾರಿಸಬಹುದು. ಇದನ್ನು ಹಸಿಯಾಗಿಯೇ ನಾನಾ ರೀತಿಯ ಅಡುಗೆಯಲ್ಲಿ ಬಳಸಬಹುದು. ಅಣಬೆಯಲ್ಲಿ ಆರೋಗ್ಯಕ್ಕೆ ಅವಶ್ಯಕವಾದ ಪೋಷಕಾಂಶಗಳು ಇರುವುದರಿಂದ ನೀರಿನಲ್ಲಿ ೨೦ ನಿಮಿಷ ಬೇಯಿಸಿ ಕುಡಿಯಬಹುದು. ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಹಾಲಿನೊಂದಿಗೆ ಬೆರೆಸೊಕೊಂಡು ಕುಡಿಯಬಹುದು. ಅನ್ನ, ರಸಂ, ತರಕಾರಿ ಹೀಗೆ ಯಾವುದೇ ಬಗೆಯ ಅಡುಗೆಯಲ್ಲಾದರು ಪುಡಿ ಬೆರಸಬಹುದು. ಶೇಂಗಾ, ಎಳ್ಳು ಮುಂತಾದ ಬಗೆಬಗೆಯ ಚಟ್ನಿ ಪುಡಿಗಳಲ್ಲೂ ಅಣಬೆ ಬೆರೆಸಿದರೆ ರುಚಿ ಮತ್ತಷ್ಟು ಹೆಚ್ಚುತ್ತದೆ.[೩]

ಅಣಬೆ ಕೃಷಿಗೆ ಮನ್ನೆಚ್ಚರಿಕಾ ಕ್ರಮಗಳು[ಬದಲಾಯಿಸಿ]

ಅಣಬೆ ಕೃಷಿ ಮಾಡುವಾಗ ಹೊಸ ಕಚ್ಛಾ ವಸ್ತುಗಳನ್ನು ಬಳಸಬೇಕು. ಉತ್ತಮ ಬೆಳೆಗಾಗಿ ನೀರಿನ ನಿರ್ವಹಣೆ ಮಹತ್ತರವಾಗಿದೆ. ಅಣಬೆ ಕೃಷಿಯ ವೇಳೆ ಶುಚಿತ್ವ ಕಾಪಾಡಬೇಕು. ಅಣಬೆ ಬೆಳೆಯುವ ಕೋಣೆಗೆ ವಾರಕ್ಕೊಮ್ಮೆ ಪಾರ್ಮಾಲ್ಡಿಹೈಡ್ ಮತ್ತು ಡೈಕ್ಲೊರೋವಾಸ್ ಸಿಂಪಡಿಸಬೇಕು. ಕಿಟಕಿ ಬಾಗಿಲುಗಳಿಗೆ ತಂತಿಯ ಬಲೆಗಳನ್ನು ಅಳವಡಿಸಿ ಕೋಣೆಗೆ ಇಲಿ ಮತ್ತು ನೊಣ ಪ್ರವೇಶಿಸದಂತೆ ಎಚ್ಚರ ವಹಿಸಬೇಕು. ಒಂದು ಬೆಳೆಯಿಂದ ಇನ್ನೊಂದಕ್ಕೆ ಕನಿಷ್ಟ ೩ ದಿನಗಳ ಅಂತರವಿಡುವುದರಿಂದ ಬೆಳೆ ಕಲುಷಿತಗೊಳ್ಳುವುದನ್ನು ತಡೆಯಬಹುದು.

ಭಾರತದಲ್ಲಿ ಅಣಬೆ ಕೃಷಿ[ಬದಲಾಯಿಸಿ]

ಇತ್ತಿÃಚಿನ ದಿನಗಳಲ್ಲಿ ಅಣಬೆ ಕೃಷಿ ಭಾರತದಲ್ಲಿ ಜನಪ್ರಿಯತೆ ಪಡೆಯುತ್ತಿದ್ದರೂ ಇತರೇ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಅಣಬೆ ಕೃಷಿಯ ಪ್ರಮಾಣ ತೀರಾ ಕಡಿಮೆ. ಇದಕ್ಕೆ ವಾಣಿಜ್ಯ ಬೆಳೆಯಾಗುವ ಎಲ್ಲಾ ಅವಾಕಾಶಗಳು ಇದ್ದರೂ ಇದರ ಕೃಷಿ ಹೆಚ್ಚುತ್ತಿಲ್ಲ. ಭಾರತದಲ್ಲಿ ಅಣಬೆ ಕೃಷಿಯ ಬಗ್ಗೆ ದೊರೆಯುತ್ತಿರುವ ಮಾಹಿತಿ ಕಡಿಮೆ. ಜೊತೆಗೆ ಬಿತ್ತನೆ ಬೀಜಗಳು ಹೇರಳವಾಗಿ ಸಿಗುವುದಿಲ್ಲ. ಅಣಬೆಗೆ ಮಾರುಕಟ್ಟೆಯಿಲ್ಲ ಎಂಬ ಆತಂಕವೂ ಜನರನ್ನು ಕಾಡುತ್ತಿದೆ. ಹಾಗಾಗಿ ಭಾರತದಲ್ಲಿ ಅಣಬೆ ಬೇಸಾಯದ ಬಗ್ಗೆ ಜಾಗೃತಿ ಮೂಡಬೇಕಿದೆ. ಅಣಬೆ ಕೃಷಿಗೆ ಪೂರಕವಾಗುವ ‘ರೆಡಿ ಟು ಫ್ರೂಟ್ ಬ್ಯಾಗ್’ಗಳು ಜನಸಾಮಾನ್ಯರಗೆ ಸಿಗುವಂತಾಗಬೇಕು.[೪] ಅಣಬೆಗೆ ವ್ಯವಸ್ಥಿತ ಮಾರುಕಟ್ಟೆ ದೊರಕಿದರೆ, ಇದರ ಕೃಷಿಯಲ್ಲಿಯೂ ಅಭಿವೃದ್ಧಿ ಕಾಣಬಹುದು.

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2015-09-14. Retrieved 2019-03-01.
  2. https://vijaykarnataka.indiatimes.com/district/chikkamagaluru/anabe-krushi/articleshow/61727118.cms
  3. http://kn.vikaspedia.in/agriculture/c95cc3cb7cbf-c89ca6ccdcafcaec97cb3cc1/c85ca3caccc6-c95cc3cb7cbf-caacb0cbfc9acaf
  4. https://vijaykarnataka.indiatimes.com/state/karnataka/-/articleshow/21654924.cms