ಅಡೋಬ್ ಸಿಸ್ಟಮ್ಸ್
ಸಂಸ್ಥೆಯ ಪ್ರಕಾರ | Public (NASDAQ: ADBE) |
---|---|
ಸ್ಥಾಪನೆ | Mountain View, California (1982) |
ಸಂಸ್ಥಾಪಕ(ರು) | Charles Geschke John Warnock |
ಮುಖ್ಯ ಕಾರ್ಯಾಲಯ | San Jose, California, U.S. |
ವ್ಯಾಪ್ತಿ ಪ್ರದೇಶ | Worldwide |
ಪ್ರಮುಖ ವ್ಯಕ್ತಿ(ಗಳು) | Charles Geschke, Founder John Warnock, Founder Shantanu Narayen, President & CEO |
ಉದ್ಯಮ | Computer software[೧] |
ಉತ್ಪನ್ನ | See List of Adobe products |
ಆದಾಯ | $ 3.579 billion (2008)[೨] |
ಆದಾಯ(ಕರ/ತೆರಿಗೆಗೆ ಮುನ್ನ) | $ 1.028 billion (2008)[೨] |
ನಿವ್ವಳ ಆದಾಯ | $ 871.8 million (2008)[೨] |
ಒಟ್ಟು ಆಸ್ತಿ | $ 5.821 billion (2008)[೨] |
ಒಟ್ಟು ಪಾಲು ಬಂಡವಾಳ | $ 4.410 billion (2008)[೨] |
ಉದ್ಯೋಗಿಗಳು | 8,660 (December 2009)[೩] |
ಜಾಲತಾಣ | Adobe.com |
ಅಡೋಬ್ ಸಿಸ್ಟಮ್ಸ್ ಇನ್‌ಕಾರ್ಪೊರೇಟೆಡ್ (pronounced /əˈdoʊbiː/ ə-DOE-bee) (NASDAQ: ADBE) ಒಂದು ಅಮೆರಿಕನ್ ಕಂಪ್ಯೂಟರ್ ಸಾಫ್ಟ್‌ವೇರ್ ಕಂಪನಿ, ಇದರ ಪ್ರಧಾನ ಕಛೇರಿ USA ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌ನಲ್ಲಿದೆ. ಈ ಕಂಪನಿಯು ಮೊದಲಿನಿಂದಲೂ ತಯಾರಿಸುತ್ತಿರುವ ಮಲ್ಟಿಮೇಡಿಯಾ ಮತ್ತು ಕ್ರಿಯಾತ್ಮಕ ಸಾಫ್ಟ್‌ವೇರ್ ಉತ್ಪನ್ನಗಳ ಜೊತೆಯಲ್ಲಿ ಇತ್ತೀಚೆಗೆ ರಿಚ್ ಇಂಟರ್ನೆಟ್ ಅಪ್ಲಿಕೇಷನ್ ಸಾಫ್ಟ್‌ವೇರ್ ಡೆವಲಂಪ್‌ಮೆಂಟ್‌ನೆಡೆಗೆ ಲಗ್ಗೆ ಇಟ್ಟಿದೆ. ಡಿಸೆಂಬರ್ 1982[೩] ರಲ್ಲಿ ಜಾನ್ ವರ್ನೋಕ್ ಮತ್ತು ಚಾರ್ಲ್ಸ್ ಗೆಸ್‌ಚ್ಕೆ ಯವರು ಅಡೋಬ್ ಅನ್ನು ಸ್ಥಾಪಿಸಿದರು, ಜೆರಾಕ್ಸ್ PARC ಕಂಪನಿಯನ್ನು ಬಿಟ್ಟು ಇವರು ಪೋಸ್ಟ್‌ಸ್ಕ್ರಿಪ್ಟ್‌ನ ಪುಟ ವಿವರಣೆ ಭಾಷೆಯ ಅಭಿವೃದ್ಧಿ ಹಾಗೂ ಮಾರಾಟಮಾಡಲು ತಮ್ಮದೇ ಕಂಪನಿಯನ್ನು ಪ್ರಾರಂಭಿಸಿದರು. 1985ರಲ್ಲಿ, ಆಪಲ್ ಕಂಪ್ಯೂಟರ್ ಅದರ ಲೇಸರ್ ರೈಟರ್ ಪ್ರಿಂಟರ್‌ಗಳಲ್ಲಿ ಪೋಸ್ಟ್‌ಸ್ಕ್ರಿಪ್ಟ್ ಬಳಸಲು ಪರವಾನಗಿ ನೀಡಿತು, ಇದು ಡೆಸ್ಕ್‌ಟಾಪ್ ಪಬ್ಲಿಷಿಂಗ್ ಕ್ರಾಂತಿಗೆ ಹೊಳಪು ತಂದಿತು. ಲಾಸ್ ಆಲ್ಟೋಸ್, ಕ್ಯಾಲಿಫೋರ್ನಿಯಾದ ಅಡೋಬ್ ಕ್ರೀಕ್‌ನಿಂದ ಈ ಕಂಪನಿಗೆ ಅಡೋಬ್ ಹೆಸರು ಬಂದಿದೆ, ಇದು ಕಂಪನಿಯ ಸ್ಥಾಪಕರಲ್ಲೊಬ್ಬರ ಮನೆಯ ಹಿಂದೆ ನಡೆಯುತ್ತಿತ್ತು.[೩] ಅಡೋಬ್ ತನ್ನ ಹಿಂದಿನ ಪ್ರತಿಸ್ಪರ್ಧಿ ಮ್ಯಾಕ್ರೊಮೀಡಿಯಾವನ್ನು ಡಿಸೆಂಬರ್ 2005ರಲ್ಲಿ ತನ್ನ ವಶಕ್ಕೆ ತೆಗೆದುಕೊಂಡಿತು, ಇದರಿಂದಾಗಿ ಹೊಸ ಉತ್ಪನ್ನಗಳು ಮತ್ತು ಪ್ಲಾಟ್‌ಫಾರ್ಮ್‌ಗಳು ಅದರ ಉತ್ಪನ್ನಗಳ ಖಾತೆಗೆ ಸೇರಿಕೊಂಡವು ಅವೆಂದರೆ ಅಡೋಬ್ ಕೋಲ್ಡ್‌ಫ್ಯೂಶನ್, ಅಡೋಬ್ ಡ್ರೀಮ್‌ವೇವರ್, ಅಡೋಬ್ ಫ್ಲಾಷ್ ಮತ್ತು ಅಡೋಬ್ ಫ್ಲೆಕ್ಸ್. ಆಗಸ್ಟ್ 2009ರಂತೆ, ಅಡೋಬ್ ಸಿಸ್ಟಮ್ಸ್ 7,564 ಉದ್ಯೋಗಿಗಳನ್ನು ಹೊಂದಿದೆ,[೩] ಅದರಲ್ಲಿ ಸುಮಾರು 40%ರಷ್ಟು ಜನರು ಸ್ಯಾನ್ ಜೋಸ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಒರ್ಲ್ಯಾಂಡೊ, FL; ಸೀಟಲ್, WA; ಸ್ಯಾನ್ ಫ್ರಾನ್ಸಿಸ್ಕೊ, CA; ಒಟ್ಟಾವ, ಒಂಟಾರಿಯೊ; ಮಿನ್ನೆಯಪೋಲಿಸ್, MN; ನ್ಯೂಟೌನ್, MA; ಸ್ಯಾನ್ ಲೂಯಿಸ್ ಒಬಿಸ್ಪೊ, CA; ಹ್ಯಾಂಬರ್ಗ್, ಜರ್ಮನಿ; ನೋಯ್ಡಾ, ಭಾರತ; ಬೆಂಗಳೂರು, ಭಾರತ; ಬುಚಾರೆಸ್ಟ್, ರೊಮೇನಿಯಾ; ಬೀಜಿಂಗ್, ಚೈನಾ ನಗರಗಳಲ್ಲಿ ಅಡೋಬ್ ತನ್ನ ಪ್ರಧಾನ ಅಭಿವೃದ್ಧಿ ಕಾರ್ಯಚಟುವಟಿಕೆಗಳನ್ನು ಹೊಂದಿದೆ.
ಇತಿಹಾಸ
[ಬದಲಾಯಿಸಿ]ಪೋಸ್ಟ್‌ಸ್ಕ್ರಿಪ್ಟ್‌ನ ನಂತರ ಅಡೋಬ್‌ನ ಮೊದಲ ಉತ್ಪನ್ನ ಡಿಜಿಟಲ್ ಫಾಂಟ್ಸ್, ಅವರು ಅದನ್ನು ಟೈಪ್ 1ಎಂದು ಕರೆಯಲ್ಪಡುವ ಒಡೆತನದ ಶೈಲಿಯಲ್ಲಿ ಬಿಡುಗಡೆ ಮಾಡಿದರು. ಆಪಲ್ ನಂತರದಲ್ಲಿ ಸ್ಫರ್ಧಿಯಾಗಿ ಟ್ರೂಟೈಪ್ ಅನ್ನು ಅಭಿವೃದ್ಧಿಗೊಳಿಸಿತು, ಅದು ಸಂಪೂರ್ಣ ಆರೋಹ್ಯತೆ ಮತ್ತು ಫಾಂಟ್‌ಗಳ ಔಟ್‌ಲೈನ್‌ನಿಂದ ಸೃಷ್ಟಿಯಾದ ಪಿಕ್ಸೆಲ್ ಮಾದರಿಯ ನಿಖರವಾದ ನಿಯಂತ್ರಣವನ್ನು ಹೊಂದಿತ್ತು, ಹಾಗೂ ಅದರ ಪರವಾನಗಿಯನ್ನು ಮೈಕ್ರೋಸಾಫ್ಟ್‌ಗೆ ನೀಡಿತು. ಇದಕ್ಕೆ ಪತ್ಯುತ್ತರವಾಗಿ ಅಡೋಬ್ ಟೈಪ್ 1 ಅನ್ನು ನಿರ್ದಿಷ್ಟವಿವರಣೆಯೊಂದಿಗೆ ಘೋಷಿಸಿತು ಹಾಗೂ ಅಡೋಬ್ ಟೈಪ್ ಮ್ಯಾನೇಜರ್ ಅನ್ನು ಬಿಡುಗಡೆ ಮಾಡಿತು, ಟೈಪ್ 1 ಫಾಂಟ್‌ಗಳನ್ನು ಪರದೆಯ ಮೇಲೆ ಹೊಂದಿರುವ WYSIWYGನ್ನು ಒಪ್ಪುವ ಸಾಫ್ಟ್‌ವೇರ್‌ನಂತಹ ಟ್ರೂಟೈಪ್ , ಆದಾಗ್ಯೂ ಇದು ನಿಖರವಾದ ಪಿಕ್ಸೆಲ್-ಲೆವೆಲ್ ನಿಯಂತ್ರಣವನ್ನು ಹೊಂದಿಲ್ಲ. ಆದರೆ ಟ್ರೂಟೈಪ್‌ನ ಬೆಳವಣಿಗೆಯನ್ನು ತಡೆಯಲ್ಲು ಮಾಡಿದ ಪ್ರಯತ್ನಗಳು ಬಹಳ ತಡವಾಯಿತು. ಆದಾಗ್ಯೂ ಟೈಪ್ 1 ಗ್ರಾಫಿಕ್ಸ್/ಪಬ್ಲಿಷಿಂಗ್ ಮಾರುಕಟ್ಟೆಯಲ್ಲಿ ಉತ್ತಮ ಮಟ್ಟದ ಸ್ಥಾನಗಳಿಸಿತು, ಟ್ರೂಟೈಪ್ ವ್ಯಾಪಾರದಲ್ಲಿ ಮತ್ತು ವಿಂಡೋಸ್ ಬಳಸುವ ಸಾಮಾನ್ಯ ಬಳಕೆದಾರನಿಗೆ ಉಪಯೋಗವಾಯಿತು. 1996ರಲ್ಲಿ, ಅಡೋಬ್ ಮತ್ತು ಮೈಕ್ರೋಸಾಫ್ಟ್ ಓಪನ್‌ಟೈಪ್ ಫಾಂಟ್ ಶೈಲಿಯನ್ನು ಘೋಷಿಸಿದವು, ಹಾಗೂ 2003ರಲ್ಲಿ ಅಡೋಬ್ ತನ್ನ ಟೈಪ್ 1 ಫಾಂಟ್ ಲೈಬ್ರರಿಯನ್ನು ಓಪನ್‌ಟೈಪ್ ಆಗಿ ಪರಿವರ್ತಿಸುವುದು ಸಂಪೂರ್ಣವಾಯಿತು. 1980ರ ಮಧ್ಯದಲ್ಲಿ, ಅಡೋಬ್ ಗ್ರಾಹಕರ ಸಾಫ್ಟ್‌ವೇರ್ ಮಾರುಕಟ್ಟೆಯನ್ನು ಅಡೋಬ್ ಇಲ್ಲಸ್ಟ್ರೇಟರ್ ನೀಡುವುದರ ಮೂಲಕ ಪ್ರವೇಶಿಸಿತು, ಇದು ಒಂದು ವೆಕ್ಟರ್-ಆಧಾರಿತ ಆಪಲ್ ಮ್ಯಾಕಿಂತೋಶ್‌ಗಾಗಿ ಡ್ರಾಯಿಂಗ್ ಪ್ರೋಗ್ರಾಮ್ ಆಗಿದೆ. ಇಲ್ಲಸ್ಟ್ರೇಟರ್ ಇನ್-ಹೌಸ್ ಫಾಂಟ್ ಅಭಿವೃದ್ಧಿ ಸಾಫ್ಟ್‌ವೇರ್‌ನಿಂದ ಅಭಿವೃದ್ಧಿ ಹೊಂದಿ ಲೇಸರ್ ಪ್ರಿಂಟರ್‌ಗಳ ಪೋಸ್ಟ್‌ಸ್ಕ್ರಿಪ್ಟ್-ಎನೇಬಲ್ಡ್ ಅನ್ನು ಜನಪ್ರಿಯಗೊಳಿಸಲು ಸಹಕಾರಿಯಾಯಿತು. ಮ್ಯಾಕ್‌ಡ್ರಾನಂತಲ್ಲದೆ, ನಂತರದಲ್ಲಿ ಬಂದ ನಿರ್ಧಿಷ್ಟ ಮ್ಯಾಕಿಂತೋಶ್ ವೆಕ್ಟರ್ ಡ್ರಾಯಿಂಗ್ ಪ್ರೋಗ್ರಾಮ್, ಇಲ್ಲಸ್ಟ್ರೇಟರ್ ಸುಲಭವಾಗಿ ಆಕಾರಪಡೆಯಬಲ್ಲ ಬೆಝಿಯೆರ್ ಕರ್ವ್‌ಗಳಿಂದ ಅಭೂತಪೂರ್ವ ನಿಖರತೆಯನ್ನು ಹೊಂದಿದ ವಿವಿಧ ಆಕಾರಗಳನ್ನು ರಚಿಸುವ ಸಾಮರ್ಥವನ್ನು ಹೊಂದಿದೆ. ಇಲ್ಲಸ್ಟ್ರೇಟರ್‌ನ ಫಾಂಟ್ ರೂಪಿಸುವುದು, ಹೇಗಾದರೂ, ಅದನ್ನು ಮ್ಯಾಕಿಂತೋಷ್‌ನ ಕ್ವಿಕ್‌ಡ್ರಾ ಲೈಬ್ರರಿಗೆ ಒಪ್ಪಿಸಲಾಯಿತು ಹಾಗೂ ಅದು ಅಡೋಬ್ ಕಂಪನಿಯು ಅಡೋಬ್ ಟೈಪ್ ಮ್ಯಾನೇಜರ್ ಅನ್ನು ಬಿಡುಗಡೆ ಮಾಡುವತನಕ ಪೋಸ್ಟ್‌ಸ್ಕ್ರಿಪ್ಟ್‌ನ ಬದಲಾವಣೆ ಆಗಿರಲಿಲ್ಲ. 1989ರಲ್ಲಿ, ಮಾಕಿಂತೋಶ್‌ಗಾಗಿ ಒಂದು ಗ್ರಾಫಿಕ್ ಎಡಿಟಿಂಗ್ ಪ್ರೋಗ್ರಾಮ್ ಆದ ಫೋಟೋಶಾಪ್ ಅನ್ನು ಸೃಷ್ಟಿಸಿತು, ಅದು ಅಡೋಬ್‌ನ ಉತ್ಪನ್ನಗಳಲ್ಲಿ ಅತೀ ಪ್ರಮುಖವೆನಿಸಿತು. ಸ್ಥಿರವಾದ ಮತ್ತು ಪೂರ್ಣ-ವೈಶಿಷ್ಟ್ಯಗಳನ್ನುಳ್ಳ, ಫೋಟೋಶಾಪ್ 1.0 ಅನ್ನು ಅಡೋಬ್ ಮಾರುಕಟ್ಟೆಗೆ ಪರಿಚಯಿಸಿತು ಹಾಗೂ ಅದು ಬಹಳ ಬೇಗ ಮಾರುಕಟ್ಟೆಯಲ್ಲಿ ಪ್ರಭಾವ ಬೀರಿತು.[೪] ಬಹುಶಃ, ಮ್ಯಾಕಿಂತೋಶ್ ಪ್ಲಾಟ್‌ಫಾರ್ಮ್‌ನಲ್ಲಿ ಅಡೋಬ್ ಇಟ್ಟ ಕೆಲವು ತಪ್ಪು ಹೆಜ್ಜೆಗಳು ಮಾರುಕಟ್ಟೆಯಲ್ಲಿ ಡೆಸ್ಕ್‌ಟಾಪ್ ಪಬ್ಲಿಶಿಂಗ್ (DTP) ಪ್ರೋಗ್ರಾಮ್‌ನ ಬೆಳವಣಿಗೆಯಾಗದಿರುವುದಕ್ಕೆ ಕಾರಣವಾಯಿತು. 1985ರ ಪೇಜ್‌ಮೇಕರ್ ಜೊತೆಯ ಆಲ್ಡಸ್‌ಗಿಂತಲೂ 1987ರ ಕ್ವಾರ್ಕ್‌ಪ್ರೆಸ್ ಜೊತೆಯ ಕ್ವಾರ್ಕ್ DTP ಮಾರುಕಟ್ಟೆಯಲ್ಲಿ ಬೇಗ ಹೆಸರು ಮಾಡಿತು. ಹೊರಬರುತ್ತಿರುವ ವಿಂಡೋಸ್ DTP ಮಾರುಕಟ್ಟೆಗೆ ಉತ್ತರಿಸುವಲ್ಲಿ ಅಡೋಬ್ ನಿಧಾನವಾಗಿತ್ತು. ಆದಾಗ್ಯೂ, ಮಾರುಕಟ್ಟೆಗೆ ಇನ್‌ಡಿಸೈನ್ ಹಾಗೂ ಅದರ ಕ್ರಿಯೇಟಿವ್ ಸೂಟ್ ಕೊಡುಗೆಗಳ ಕಂತೆಯೊಂದಿಗೆ ಬಿಡುಗಡೆ ಮಾಡುವ ಮೂಲಕ ಅಡೋಬ್ ಮಹತ್ವದ ದಾಪುಗಾಲು ಹಾಕಿತು. ಲೆಕ್ಕಾಚಾರದ ಗುರಿಯನ್ನು ಹೇಳುವಲ್ಲಿ ವಿಫಲವಾದುದರಿಂದ, ಅಡೋಬ್ ಇಲ್ಲಸ್ಟ್ರೇಟರ್‌ನ ಸಂಪೂರ್ಣ ಆವೃತ್ತಿಯನ್ನು ಸ್ಟೀವ್ ಜಾಬ್ಸ್' ಇಲ್-ಫೇಟೆಡ್ NeXT ಸಿಸ್ಟಂಗಾಗಿ ಬಿಡುಗಡೆ ಮಾಡಿತು, ಆದರೆ ಇದು ವಿಂಡೋಸ್ ಆವೃತ್ತಿಗೆ ಕಳಪೆ ನಿರ್ಮಾಣವಾಗಿತ್ತು. ಈ ಎಲ್ಲಾ ತಪ್ಪು ಹೆಜ್ಜೆಗಳನ್ನಿಟ್ಟಾಗ್ಯೂ, ಪೋಸ್ಟ್‌ಸ್ಕ್ರಿಪ್ಟ್ ಇಂಟರ್‌ಪ್ರಿಟರ್‌ನ ಪರವಾನಗಿಯ ಶುಲ್ಕದಿಂದಾಗಿ ಅಡೋಬ್ ಹೆಚ್ಚು ಕಾಲ ನಿಲ್ಲುವಂತೆ ಮಾಡಿತು ಅಥವಾ ಅದರ 1980ರ ಕೊನೆಯಲ್ಲಿ ಹಾಗೂ 1990ರ ಪ್ರಾರಂಭದಲ್ಲಿ ಪ್ರತಿಸ್ಪರ್ಧಿ ಕಂಪನಿಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳುವುದು ಸಾಧ್ಯವಾಯಿತು. ಡಿಸೆಂಬರ್ 1991ರಲ್ಲಿ, ಅಡೋಬ್ ಕಂಪನಿಯು ಅಡೋಬ್ ಪ್ರೀಮಿಯರ್ ಅನ್ನು ಬಿಡುಗಡೆ ಮಾಡಿತು, ಅದು 2003ರಲ್ಲಿ ಅಡೋಬ್ ಪ್ರೀಮಿಯರ್ ಪ್ರೊ ಎಂದು ಹೊಸ ಹೆಸರು ಪಡೆಯಿತು. 1994ರಲ್ಲಿ, ಅಡೋಬ್ ಆಲ್ಡಸ್ ಕಂಪನಿಯನ್ನು ತನ್ನದಾಗಿಸಿಕೊಂಡಿತು ಮತ್ತು ತನ್ನ ಉತ್ಪನ್ನಗಳ ಸಾಲಿಗೆ ಅಡೋಬ್ ಪೇಜ್ ಮೇಕರ್ ಹಾಗೂ ಅಡೋಬ್ ಆಫ್ಟರ್ ಎಫೆಕ್ಟ್ಸ್‌ಗಳನ್ನು ಸೇರಿಸಿತು; ಇದು TIFF ಫೈಲ್ ಶೈಲಿಯನ್ನು ಕೂಡಾ ನಿಯಂತ್ರಿಸುತ್ತದೆ. 1995ರಲ್ಲಿ, ಅಡೋಬ್ ಕಂಪನಿಯು ಫ್ರೇಮ್ ಟೆಕ್ನಾಲಜಿ ಕಾರ್ಪೊರೇಶನ್ ಅನ್ನು 1999ರಲ್ಲಿ ತನ್ನದಾಗಿಸಿಕೊಂಡ ನಂತರ ತನ್ನ ಉತ್ಪನ್ನಗಳ ಸಾಲಿಗೆ ಅಡೋಬ್ ಫ್ರೇಮ್‌ಮೇಕರ್ ಅನ್ನು ಸೇರಿಸಿತು, ಇದು ಒಂದು ಉದ್ದನೆಯ-ಡಾಕ್ಯುಮೆಂಟ್ DTP ಅಪ್ಲಿಕೇಶನ್, ಅಡೋಬ್ ತನ್ನ ನೇರ ಪ್ರತಿಸ್ಪರ್ಧಿ ಕ್ವಾರ್ಕ್‌ಕಾಪಿಡೆಸ್ಕ್ ವಿರುದ್ಧವಾಗಿ ಅಡೋಬ್ ಇನ್ಕಾಪಿಯನ್ನು ಪರಿಚಯಿಸಿತು.[೫]
ಮೇಲಿನ ಪ್ರತಿಸ್ಪರ್ಧಿಗಳು
[ಬದಲಾಯಿಸಿ]ಹೂವರ್ಸ್[೬] ಪ್ರಕಾರ ಅಡೋಬ್‌ನ ಮೊದಲ ಪ್ರತಿಸ್ಪರ್ಧಿಗಳೆಂದರೆ:
ಕಂಪನಿ ಘಟನೆಗಳು
[ಬದಲಾಯಿಸಿ]1992
[ಬದಲಾಯಿಸಿ]- OCR ಸಿಸ್ಟಂ, Inc. ಅನ್ನು ಪಡೆದುಕೊಂಡಿದ್ದು.
1999
[ಬದಲಾಯಿಸಿ]- GoLive Systems, Inc. ಅನ್ನು ಪಡೆದುಕೊಂಡಿದ್ದು ಮತ್ತು ಅಡೋಬ್ ಗೋಲೈವ್ ಬಿಡುಗಡೆ ಮಾಡಿದ್ದು.
- ಕ್ವಾರ್ಕ್ಎಕ್ಸ್ಪ್ರೆಸ್ನ ಪ್ರತಿಸ್ಪರ್ಧಿಯಾಗಿ ಹಾಗೂ ಪೇಜ್ಮೇಕರ್ನ ಬದಲಾಗಿ ಅಡೋಬ್ ಇನ್‌ಡಿಸೈನ್ ಅನ್ನು ಬಿಡುಗಡೆ ಮಾಡಲಾಯಿತು.
2003
[ಬದಲಾಯಿಸಿ]- ಮೇ: ಸಿಂಟ್ರಿಲ್ಲಿಯಮ್ ಸಾಫ್ಟ್‌ವೇರ್ ಅನ್ನು ಪಡೆದುಕೊಂಡಿತು, ತನ್ನ ಉತ್ಪನ್ನಗಳ ಸಾಲಿಗೆ ಅಡೋಬ್ ಆಡಿಷನ್ ಅನ್ನು ಸೇರಿಸಿತು.
2004
[ಬದಲಾಯಿಸಿ]- ಡಿಸೆಂಬರ್: 3D ಕೊಲ್ಯಾಬರೇಷನ್ ಸಾಫ್ಟ್‌ವೇರ್ ತಯಾರಕರಾದ ಫ್ರೆಂಚ್ ಕಂಪನಿ OKYZ S.A. ಅನ್ನು ಪಡೆದುಕೊಂಡಿತು. ತಾನು ವಶಪಡಿಸಿಕೊಂಡ ಕಂಪನಿಗಳ ಪಟ್ಟಿಗೆ 3D ಟೆಕ್ನಾಲಜಿಯನ್ನೂ ಸೇರಿಸಿಕೊಂಡಿತು ಹಾಗೂ ಅಡೋಬ್ ಇಂಟಲಿಜೆನ್ಸ್ ಡಾಕ್ಯುಮೆಂಟ್ ಪ್ಲಾಟ್‌ಫಾರ್ಮ್‌ನ ನೈಪುಣ್ಯತೆಯನ್ನು ಹೆಚ್ಚಿಸಿತು.
2005
[ಬದಲಾಯಿಸಿ]- ಡಿಸೆಂಬರ್ 12, 2005: ಸ್ಟಾಕ್ ಸ್ವ್ಯಾಪ್ನಲ್ಲಿ $3.4 ಬಿಲಿಯನ್ಗೆ ತನ್ನ ಪ್ರಮುಖ ಪ್ರತಿಸ್ಪರ್ಧಿ ಮ್ಯಾಕ್ರೋಮೀಡಿಯಾವನ್ನು ತನ್ನದಾಗಿಸಿಕೊಂಡಿತು, ನಂತರ ತನ್ನ ಉತ್ಪನ್ನಗಳ ಸಾಲಿಗೆ ಅಡೋಬ್ ಸೇರಿಸಿದವೆಂದರೆ: ಅಡೋಬ್ ಕೋಲ್ಡ್‌ಫ್ಯೂಶನ್, ಅಡೋಬ್ ಕಾಂಟ್ರಿಬ್ಯೂಟ್, ಅಡೋಬ್ ಕ್ಯಾಪ್ಟಿವೇಟ್, ಅಡೋಬ್ ಆಕ್ರೊಬ್ಯಾಟ್ ಕನೆಕ್ಟ್ (ಮೊದಲಿಗೆ ಮ್ಯಾಕ್ರೊಮೀಡಿಯಾ ಬ್ರೀಝ್ ಆಗಿತ್ತು), ಅಡೋಬ್ ಡೈರೆಕ್ಟರ್, ಅಡೋಬ್ ಡ್ರೀಮ್‌ವೇವರ್, ಅಡೋಬ್ ಫೈರ್ವರ್ಕ್ಸ್, ಅಡೋಬ್ ಫ್ಲ್ಯಾಷ್, ಮ್ಯಾಕ್ರೊಮೀಡಿಯಾ ಫ್ಲ್ಯಾಶ್ಪೇಪr, ಅಡೋಬ್ ಫ್ಲೆಕ್ಸ್, ಮ್ಯಾಕ್ರೊಮೀಡಿಯಾ ಫ್ರೀಹ್ಯಾಂಡ್, ಮ್ಯಾಕ್ರೊಮೀಡಿಯಾ ಹೋಮ್ಸೈಟ್, ಮ್ಯಾಕ್ರೊಮೀಡಿಯಾ ಜೆರನ್, ಅಡೋಬ್ ಪ್ರೆಸೆಂಟರ್, ಮತ್ತು ಮ್ಯಾಕ್ರೊಮೀಡಿಯಾ ಆಥೊರ್ವೇರ್ .[೭][೮][೯]
2007
[ಬದಲಾಯಿಸಿ]- ಜನವರಿ: ಛಾಯಾಚಿತ್ರಗ್ರಾಹಕರ ಚಿತ್ರನಿರ್ಮಾಣದ ಮುಂದಿನ ಕೆಲಸಕ್ಕೆ ಹಾಗೂ ಡಿಜಿಟಲ್ ಚಿತ್ರಗಳ ನಿರ್ವಹಣೆಗೆ ಸಹಾಯವಾಗುವಂತೆ ಅಡೋಬ್ ಫೋಟೋಶಾಪ್ ಲೈಟ್‌ರೂಮ್ ಅನ್ನು ಬಿಡುಗಡೆ ಮಾಡಿದರು. ಈ ಉತ್ಪನ್ನವು ಆಪಲ್‌ನ ಅಪೆರ್ಚರ್‌ಗೆ ಪೈಪೋಟಿಯಾಗಿ RAW ಚಿತ್ರಗಳ ಸಂಪಾದನೆಯ ಮಾರುಕಟ್ಟೆಗೆ ಪರಿಚಯಿಸಲಾಯಿತು.
- ಮೇ 2007: Scene7 ಅನ್ನು ಪಡೆದುಕೊಳ್ಳಲಾಯಿತು, ಇದು ವೆಬ್‌ನ ರೀಟೇಲ್ ಸೈಟ್‌ಗಳಲ್ಲಿ ಬಳಕೆಯಾಗುವ ಇಮೇಜ್ ಪ್ರೊಸೆಸಿಂಗ್ ಮತ್ತು ಡಿಸ್‌ಪ್ಲೇ ಪ್ಲಾಟ್‌ಫಾರ್ಮ್ ಅನ್ನು ಮಾಡುತ್ತದೆ.
- ಜುಲೈ: ಅಡೋಬ್ ಕಂಪನಿಯು ಅಡೋಬ್ ಸೌಂಡ್‌ಬೂತ್ ಅನ್ನು ಬಿಡುಗಡೆ ಮಾಡಿತು. ಈ ಉತ್ಪನ್ನವು ಅಡೋಬ್ ಆಡಿಶನ್ ಅನ್ನು ಬದಲಾಯಿಸುವ ಉದ್ದೇಶದಿಂದಾಗಿ ಮಾಡಿದ್ದಲ್ಲ ಆದರೆ ಆಡಿಯೋದಲ್ಲಿ ಪ್ರಾವೀಣ್ಯತೆ ಹೊಂದಿಲ್ಲದ ವೃತಿನಿರತರಿಗೆ ಉತ್ತಮ ವಾತಾವರಣ ಕಲ್ಪಿಸುವುದಕ್ಕಾಗಿ ಮಾತ್ರ ಎಂದು ಹೇಳಿದೆ.
- ಆಗಸ್ಟ್ 3, 2007: ಆಥರ್‌ವೇರ್ ಅಭಿವೃದ್ಧಿಯನ್ನು ಸ್ಥಗಿತಗೊಳಿಸುವ ತನ್ನ ಯೋಜನೆಯನ್ನು ಅವರು ಘೋಷಿಸಿದರು. ಇದು ಒಂದು "ವೆಬ್, CD/DVD, ಹಾಗೂ ಕಾರ್ಪೊರೇಟ್ ನೆಟ್‌ವರ್ಕ್ಸ್‌ಗಳಿಗಾಗಿ ರಿಚ್-ಮೀಡಿಯಾ ಇಲರ್ನಿಂಗ್ ಅನ್ನು ಸೃಷ್ಟಿಸುವ ವಿಶುಯಲ್ ಆಥರಿಂಗ್ ಟೂಲ್". ಆಥರ್‌ವೇರ್ ಇದು ಮ್ಯಾಕ್ರೋಮೀಡಿಯಾ/ಅಡೋಬ್ ವಿಲೀನವಾದಾಗ ಪಡೆದುಕೊಂಡ ಟೂಲ್‌ಗಳಲ್ಲೊಂದು. ಇದರ ಬದಲಾಗಿ ಸೃಷ್ಟಿಯಾಗಿದ್ದು ಅಡೋಬ್ ಕ್ಯಾಪಿಟೇಟಿವ್.
- ಅಕ್ಟೋಬರ್ 2007: ಬುಝ್‌ವರ್ಡ್, ಆನ್‌ಲೈನ್ ವರ್ಡ್ ಪ್ರೊಸೆಸರ್‌ನೊಂದಿಗೆ ವರ್ಚುಯಲ್ ಉಬಿಕ್ವಿಟಿಯನ್ನು ತನ್ನದಾಗಿಸಿಕೊಂಡಿತು.
- ನವೆಂಬರ್ 12, 2007: CEO, ಬ್ರೂಸ್ ಚಿಜೆನ್ ರಾಜೀನಾಮೆ ನೀಡಿದರು. ಡಿಸೆಂಬರ್ 1ರಿಂದ ಪರಿಣಾಮಕಾರಿಯಾಗಿ, ಅವರ ಸ್ಥಾನ ತುಂಬಿದವರು ಶಂತನು ನಾರಾಯಣ್, ಅಡೋಬ್‌ನ ಈಗಿನ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ. ಬ್ರೂಸ್ ಚಿಜನ್ ಅವರು ಅಡೋಬ್‌ನ ಬೋರ್ಡ್ ಆಫ್ ಡೈರೆಕ್ಟರ್ಸ್‌ಗಳಲ್ಲೊಬ್ಬರಾಗಿ ಸೇವೆಸಲ್ಲಿಸಬೇಕೆಂಬ ಆಶಯ ಹೊಂದಿದ್ದರು. ಹಾಗೂ ಅವರು ಸಲಹೆಗಾರರಾಗಿ ತಮ್ಮ ಪಾತ್ರವನ್ನು ಅಡೋಬ್‌ನ 2008ರ ಹಣಕಾಸು ವರ್ಷದವರೆಗೂ ಮುಂದುವರೆಸಿದರು.
2008
[ಬದಲಾಯಿಸಿ]- ಏಪ್ರಿಲ್: ಅಡೋಬ್ ಮೀಡಿಯಾ ಪ್ಲೇಯರ್ ಅನ್ನು ಅಡೋಬ್ ಬಿಡುಗಡೆ ಮಾಡಿತು ಬಹಳಷ್ಟು ವೀಡಿಯೋಗಳು ಮತ್ತು ಟುಟೋರಿಯಲ್‌ಗಳು ಮನೋರಂಜನೆಗಾಗಿ ಅಥವಾ ತರಬೇತಿಗಾಗಿ ಲಭ್ಯವಿವೆ.
- 27 ಏಪ್ರಿಲ್: ಅಡೋಬ್ ಹಳೆಯ HTML/ವೆಬ್ ಡೆವೆಲಪ್‌ಮೆಂಟ್ ಸಾಫ್ಟ್‌ವೇರ್ ಗೋಲೈವ್‍ನ ಅಭಿವೃದ್ಧಿಯನ್ನು ಸ್ಥಗಿತಗೊಳಿಸಿ ಬದಲಾಗಿ ಡ್ರೀಮ್‌ವೇವರ್ ಬಿಡುಗಡೆ ಮಾಡಿತು. ಅಡೋಬ್ ತನ್ನ ಗೋಲೈವ್ ಬಳಕೆದಾರರಿಗೆ ಡ್ರೀಮ್‌ವೇವರ್ ಅನ್ನು ಕಡಿಮೆ ಬೆಲೆಯಲ್ಲಿ ಒದಗಿಸುವ ಅವಕಾಶ ನೀಡಿತು ಹಾಗೂ ಗೋಲೈವ್ ಅನ್ನು ಆನ್‌ಲೈನ್ ಟ್ಯುಟೋರಿಯಲ್ ಮತ್ತು ಮೈಗ್ರೇಶನ್ ಅಸಿಸ್ಟೆನ್ಸ್‌ಗಾಗಿ ಮುಂದುವರೆಸುವವರಿಗೆ ಉತ್ತೇಜಿಸುವುದಾಗಿ ಹೇಳಿತು
- 1 ಜೂನ್: ಅಡೋಬ್ Acrobat.com Archived 2012-09-28 ವೇಬ್ಯಾಕ್ ಮೆಷಿನ್ ನಲ್ಲಿ. ಅನ್ನು ಬಿಡುಗಡೆ ಮಾಡಿತು, ಇದು ಕೊಲ್ಯಾಬರೇಟಿವ್ ಕಾರ್ಯನಿರ್ವಹಣೆಗೆ ಸಜ್ಜಾದ ಒಂದು ವೆಬ್ ಅಪ್ಲಿಕೇಶನ್ ಶ್ರೇಣಿ.[೧೦]
- ಡಿಸೈನ್, ವೆಬ್, ಪ್ರೊಡಕ್ಷನ್ ಪ್ರೀಮಿಯಮ್ ಮತ್ತು ಮಾಸ್ಟರ್ ಕಲೆಕ್ಷನ್ ಒಳಗೊಂಡ ಕ್ರಿಯೇಟಿವ್ ಸೂಟ್ 4 ಅಕ್ಟೋಬರ್ 2008ರಲ್ಲಿ ಆರು ಕಾನ್ಫಿಗರೇಶನ್‌ನೊಂದಿಗೆ USD $1,700 ನಿಂದ $2,500[೧೧] ವರೆಗಿನ ಬೆಲೆಗೆ ಲಭ್ಯವಾಯಿತು ಅಥವಾ ವೈಯಕ್ತಿಕ ಅಪ್ಲಿಕೇಶನ್ ಸಹ.[೧೨] ಫೋಟೊಶಾಪ್‌ನ ವಿಂಡೋಸ್ ಆವೃತ್ತಿಯು 64-bit ಪ್ರೊಸೆಸಿಂಗ್ ಒಳಗೊಂಡಿದೆ.[೧೨]
- ಡಿಸೆಂಬರ್ 3, 2008: ಅಡೋಬ್ ದುರ್ಬಲವಾದ ಆರ್ಥಿಕ ವ್ಯವಸ್ಥೆಯ ಕಾರಣದಿಂದಾಗಿ 600 ಜನ ನೌಕರರನ್ನು ಕೆಲಸದಿಂದ ತೆಗೆದು ಹಾಕಿತು (ವಿಶ್ವದಾದ್ಯಂತ ಕಾರ್ಯನಿರ್ವಹಿಸುವ ನೌಕರವರ್ಗದಲ್ಲಿ 8%).
2009
[ಬದಲಾಯಿಸಿ]- ಕ್ರಿಯೇಟಿವ್ ಸೂಟ್ 4 ರ ಮಾರಾಟ ಕಡಿಮೆಯಾದಂತಿದೆ.[೧೩]
- ಆಗಸ್ಟ್ 29 - ಅಡೋಬ್ ತನ್ನ ಬಿಸಿನೆಸ್ ಕೆಟಲಿಸ್ಟ್‌ನ ಒಡೆತನವನ್ನು ಪ್ರಕಟಿಸಿತು.[೧೪]
- ಸೆಪ್ಟೆಂಬರ್ 15 -ಅಡೋಬ್ ತನ್ನ ಓಮ್ನೀಚರ್‌ನ ಒಡೆತನವನ್ನು ಪ್ರಕಟಿಸಿತು.[೧೫]
- ನವೆಂಬರ್ 10 - ಅಡೋಬ್ ತನ್ನ 680 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ್ದನ್ನು ಪ್ರಕಟಿಸಿತು.[೧೬]
2010
[ಬದಲಾಯಿಸಿ]- ಚೈನಾದ ಕಾರ್ಪೊರೇಟ್ ನೆಟ್‌ವರ್ಕ್ ಸಿಸ್ಟಮ್ಸ್‌ನ ಪ್ರತಿಸ್ಪರ್ಧಿಯಾಗಿ ಅಡೋಬ್ ತನ್ನದೇ ನಿರ್ವಹಣೆಯಲ್ಲಿ "ಕೋಆರ್ಡಿನೇಟೆಡ್ ಅಟ್ಯಾಕ್" ಅನ್ನು ಬಿಡುಗಡೆ ಮಾಡಲು ಸಂಶೋಧಿಸುತ್ತಿರುವುದಾಗಿ ಪ್ರಕಟಿಸಿದೆ.[೧೭] ಇದೇ ಅಟ್ಯಾಕ್ ಗೂಗಲ್ ಮತ್ತು ಸುಮಾರು ಇತರೆ 20 ಕಂಪನಿಗಳೊಡನೆ ಸ್ಪರ್ಧಿಸಿದೆ.
ಸಂಸ್ಥೆಯ ಮುಂದಾಳತ್ವ
[ಬದಲಾಯಿಸಿ]ನಿರ್ವಾಹಕ ಸಮಿತಿ [೧೮] | |
ಚಾರ್ಲ್ಸ್ ಎಮ್. ಜೆಸ್‌ಚ್ಕೆ | ಸಮಿತಿಯ ಸಹ-ಅಧ್ಯಕ್ಷ |
ಜಾನ್ ಇ.ವಾರ್ನಾಕ್ | ಸಮಿತಿಯ ಸಹ-ಅಧ್ಯಕ್ಷ |
ಶಂತನು ನಾರಾಯಣ್ | ಅಧ್ಯಕ್ಷ & ಮುಖ್ಯ ನಿರ್ವಹಣಾ ಅಧಿಕಾರಿ |
ಕರೇನ್ ಕೋಟ್ಲೆ | ಹಿರಿಯ ಉಪಾಧ್ಯಕ್ಷ, ಜನರಲ್ ಕೌನ್ಸಿಲ್, ಮತ್ತು ಕಾರ್ಪೊರೇಟ್ ಕಾರ್ಯದರ್ಶಿ |
ಮಾರ್ಕ್ ಗರ್ರೆಟ್ | ಇಕ್ಸಿಕ್ಯುಟಿವ್ ಉಪಾಧ್ಯಕ್ಷ ಮತ್ತು ಮುಖ್ಯ ಹಣಕಾಸು ಅಧಿಕಾರಿ |
ಡೊನ್ನಾ ಮೊರ್ರಿಸ್ | ಜಿರಿಯ ಉಪಾಧ್ಯಕ್ಷ, ಹ್ಯೂಮನ್ ರಿಸೋರ್ಸಸ್ |
ಕೆವಿನ್ ಲಿಂಚ್ | ಹಿರಿಯ ಉಪಾಧ್ಯಕ್ಷ: ಅನುಭವಿ & ತಂತ್ರಜ್ಞಾನ ಗುಂಪು, ಮುಖ್ಯ ತಂತ್ರಜ್ಞಾನ ಅಧಿಕಾರಿ |
ಉತ್ಪನ್ನಗಳು
[ಬದಲಾಯಿಸಿ]ಅಡೋಬ್‌ನ ಉತ್ಪನ್ನಗಳು ಕೆಳಕಂಡಂತಿವೆ:
- ಡೆಸ್ಕ್‌ಟಾಪ್ ಸಾಫ್ಟ್‌ವೇರ್, ಅವೆಂದರೆ ಅಡೋಬ್ ಫೋಟೋಶಾಪ್ (ಅಡೋಬ್ ಕ್ರಿಯೇಟೀವ್ ಸೂಟ್ನ ಒಂದು ಭಾಗ) ಮತ್ತು ಅಡೋಬ್ ಆಡಿಷನ್
- ಸರ್ವರ್ ಸಾಫ್ಟ್‌ವೇರ್, ಅವೆಂದರೆ ಅಡೋಬ್ ಕೋಲ್ಡ್‌ಫ್ಯೂಶನ್ ಮತ್ತು ಅಡೋಬ್ ಲೈವ್ಸೈಕಲ್
- ತಂತ್ರಜ್ಞಾನಗಳು, ಅವೆಂದರೆ ಪೋರ್ಟಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್ (PDF), PDF'ನ ಹಿಂದಿನ ಪೋಸ್ಟ್‌ಸ್ಕ್ರಿಪ್ಟ್, ಹಾಗೂ ಫ್ಲ್ಯಾಶ್
- ಅಡೋಬ್ ಕುಲರ್, ಫೋಟೋಶಾಪ್ ಎಕ್ಸ್ಪ್ರೆಸ್, ಹಾಗೂ Acrobat.com ನಂತಹ ವೆಬ್ ಹೋಸ್ಟೆಡ್ ಸೇವೆಗಳು
- ವೆಬ್ ಡಿಸೈನ್ ಪ್ರೋಗ್ರಾಮ್ಸ್: ಅಡೋಬ್ ಡ್ರೀಮ್‌ವೇವರ್ ಹಾಗೂ ಅಡೋಬ್ ಗೋಲೈವ್
- ವೀಡಿಯೋ ಸಂಪಾದನೆ ಹಾಗೂ ವಿಶುಯಲ್ ಎಫೆಕ್ಟ್ಸ್: ಅಡೋಬ್ ಪ್ರೀಮಿಯರ್ ಹಾಗೂ ಅಡೋಬ್ ಆಫ್ಟರ್ ಎಫೆಕ್ಟ್ಸ್
- ಇಲರ್ನಿಂಗ್ ಸಾಫ್ಟ್‌ವೇರ್, ಅದು ಅಡೋಬ್ ಕ್ಯಾಪ್ಟಿವೇಟ್
ವರಮಾನದ ಮಾಹಿತಿ
[ಬದಲಾಯಿಸಿ]1986ರಲ್ಲಿ ಅಡೋಬ್ ಸಿಸ್ಟಮ್ಸ್ NASDAQ ಪ್ರವೇಶಿಸಿತು. ಅಡೋಬ್‌ನ 2006ರ ಆದಾಯಗಳು $2.575 ಬಿಲಿಯನ್ USD ರಷ್ಟಿತ್ತು.[೧೯] ಫೆಬ್ರವರಿ 2007ರಂತೆ,ಅಡೋಬ್‌ನ ಮಾರುಕಟ್ಟೆಯ ಹೂಡಿಕೆ ಅಂದಾಜು $23 ಬಿಲಿಯನ್ USDಗಳಷ್ಟಿತ್ತು; ಆಗಸ್ಟ್ 2007ರಲ್ಲಿ, ಸುಮಾರು 49 P/E ಪ್ರಮಾಣದ ಮತ್ತು ಸುಮಾರು $0.82ರಷ್ಟು EPS ಜೊತೆಯಲ್ಲಿ ಅದರ ಶೇರುಗಳು ಸುಮಾರು $40 USDಗಳಿಗೆ NASDAQನಲ್ಲಿ ಮಾರಾಟವಾಗುತ್ತಿದ್ದವು.[೧೯] ಮಾರ್ಚ್ 2008ರಲ್ಲಿ, ಅಡೋಬ್ ಮಾರುಕಟ್ಟೆಯ ಹೂಡಿಕೆ ಅಂದಾಜು $18 ಬಿಲಿಯನ್ USDಗಳಷ್ಟಿತ್ತು; ಸುಮಾರು 27 P/E ಪ್ರಮಾಣದ ಮತ್ತು ಸುಮಾರು $1.21ರಷ್ಟು EPS ಜೊತೆಯಲ್ಲಿ ಅದರ ಶೇರುಗಳು ಸುಮಾರು $40 USDಗಳಿಗೆ NASDAQ ನಲ್ಲಿ ಮಾರಾಟವಾಗುತ್ತಿದ್ದವು.[೧೯]
ಆದಾಯ
[ಬದಲಾಯಿಸಿ]
2000s[ಬದಲಾಯಿಸಿ]
|
1990s[ಬದಲಾಯಿಸಿ]
|
ಅಡೋಬ್‌ನ ಹಣಕಾಸು ವರ್ಷ ಪ್ರಾರಂಭವಾಗುವುದು ಡಿಸೆಂಬರ್‌ನಿಂದ ನವೆಂಬರ್‌ವರೆಗೆ. ಉದಾಹರಣೆಗೆ, 2007ರ ಹಣಕಾಸು ವರ್ಷ ಅಂತ್ಯಗೊಂಡಿದ್ದು ನವೆಂಬರ್ 30, 2007.
ಪ್ರಶಸ್ತಿಗಳು
[ಬದಲಾಯಿಸಿ]1995ರಿಂದಲೂ, ಅಡೋಬ್ ಕಾರ್ಯನಿರ್ವಹಿಸಲು ಅತ್ಯಂತ ಉತ್ಕೃಷ್ಟವಾದ ಕಂಪನಿ ಎಂದು Fortune ಪ್ರಕಟಿಸಿದೆ.
ಕಾರ್ಯನಿರ್ವಹಿಸಲು ಅಮೆರಿಕನ್ ಕಂಪನಿಗಳಲ್ಲಿ ಅಡೋಬ್ ಕಂಪನಿಯನ್ನು 2003ರಲ್ಲಿ ಐದನೆಯ , 2004ರಲ್ಲಿ ಆರನೆಯ, 2007ರಲ್ಲಿ 31ನೆಯ ,2008ರಲ್ಲಿ 40ನೆಯ ಹಾಗೂ 2009ರಲ್ಲಿ ಹನ್ನೊಂದನೆಯ ಉತ್ತಮ ಕಂಪನಿಯೆಂದು ಆಯ್ಕೆಮಾಡಲಾಗಿದೆ.[೨೮]
ಮೇ 2008ರಲ್ಲಿ, ಅಡೋಬ್ ಸಿಸ್ಟಮ್ಸ್ ಇಂಡಿಯಾವು ಕೆಲಸ ಮಾಡಲು 19ನೆಯ ಮಹತ್ವದ ಸ್ಥಳ ಎಂಬ ದರ್ಜೆಪಡೆಯಿತು.[೨೯] ಅಕ್ಟೋಬರ್ 2008ರಲ್ಲಿ, ಅಡೋಬ್ ಸಿಸ್ಟಮ್ಸ್ ಕೆನಡಾ Inc. ಇದು "Canada's Top 100 Employers" ಎಂದು ಮೀಡಿಯಾ ಕಾರ್ಪ್ ಕೆನಡಾ Inc.ನಿಂದ ಹೆಗ್ಗಳಿಕೆಗೆ ಪಾತ್ರವಾಯಿತು, ಹಾಗೂ ಅದನ್ನು Maclean's ವಾರ್ತಾಪತ್ರಿಕೆಯಲ್ಲಿ ವರ್ಣಿಸಲಾಯಿತು.[೩೦]
ಟೀಕೆಗಳು
[ಬದಲಾಯಿಸಿ]ಅಡೋಬ್ ತನ್ನ ಉತ್ಪನ್ನಗಳಿಗೆ [೩೧][೩೨][೩೩] ವಿಧಿಸುವ ಬೆಲೆಯ ರೂಡಿಗಳಿಂದಾಗಿ ಟೀಕೆಗಳಿಗೆ ಗುರಿಯಾಗುತ್ತಲೇ ಇರುತ್ತದೆ, ದೇಶೀಯ ಮಾರುಕಟ್ಟೆಗಿಂತ ವಿದೇಶಗಳಲ್ಲಿ ಬೆಲೆಯು [೩೪] ಎರಡುಪಟ್ಟಿಗಿಂತ ಹೆಚ್ಚಾಗಿರುತ್ತದೆ. ಜೂನ್ 2009ರಲ್ಲಿ, ಅಡೋಬ್ ತನ್ನ ಬೆಲೆಗಳನ್ನು UK ಯಲ್ಲಿ 10%ಏರಿಸಿದೆ.[೩೫]
ಇವನ್ನೂ ಗಮನಿಸಿ
[ಬದಲಾಯಿಸಿ]- ಅಡೋಬ್ ಎಂಗೇಜ್ಮೆಂಟ್ ಪ್ಲಾಟ್‌ಫಾರ್ಮ್
- ಅಡೋಬ್ ಸಲ್ಯೂಷನ್ಸ್ ನೆಟ್‌ವರ್ಕ್
- ಅಡೋಬ್ MAX
- US v. ElcomSoft Sklyarov
- ಅಡೋಬ್ ಸಾಫ್ಟ್ವೇರ್ಗಳ ಪಟ್ಟಿ
ಟಿಪ್ಪಣಿಗಳು
[ಬದಲಾಯಿಸಿ]- ↑ Adobe - Company Overview - Hoover's
- ↑ ೨.೦ ೨.೧ ೨.೨ ೨.೩ ೨.೪ "Financial Tables". Adobe Systems Investor Relations. Retrieved 2009-01-23.
- ↑ ೩.೦ ೩.೧ ೩.೨ ೩.೩ "Adobe Fast Facts" (PDF). 2009-03-09. Archived from the original (PDF) on 2005-12-11. Retrieved 2009-04-04.
- ↑ Hormby, Thomas. "How Adobe's Photoshop Was Born". SiliconUser. Archived from the original on ಜೂನ್ 11, 2007. Retrieved June 12, 2007.
{{cite web}}
: Cite has empty unknown parameters:|month=
and|coauthors=
(help) - ↑ About Adobe - Press Room - For Immediate Release
- ↑ "Adobe - Company Overview - Hoover's". Archived from the original on 2009-04-18. Retrieved 2010-04-05.
- ↑ "Adobe to acquire Macromedia" (Press release). Adobe. April 18, 2005. Retrieved 2007-03-31.
- ↑ "ADOBE TO ACQUIRE MACROMEDIA" (Press release). Macromedia. April 18, 2005. Archived from the original on 2008-10-10. Retrieved 2007-03-31.
- ↑ Graham, Jefferson (2005-04-18). "Adobe buys Macromedia in $3.4B deal". USA Today. Retrieved 2007-03-31.
- ↑ Erik Larson (2008-06-01). "Welcome to Acrobat.com — Work. Together. Anywhere". Adobe. Archived from the original on 2008-06-03. Retrieved 2008-06-02.
- ↑ "Adobe launches Creative Suite 4; Likely to top low expectations". ZDNet. CBS. September 23, 2008. Archived from the original on 2008-09-24. Retrieved 2008-09-23.
- ↑ ೧೨.೦ ೧೨.೧ Carlson, Jeff (September 23, 2008). "Adobe Announces Vast Creative Suite 4". TidBITS. Retrieved 2008-09-23.
- ↑ "ಆರ್ಕೈವ್ ನಕಲು". Archived from the original on 2011-08-12. Retrieved 2020-09-18.
- ↑ http://www.adobe.com/special/businesscatalyst/
- ↑ http://www.businesswire.com/portal/site/google/?ndmViewId=news_view&newsId=20090915006569&newsLang=en
- ↑ http://online.wsj.com/article/SB10001424052748704402404574528174100385780.html
- ↑ "ಆರ್ಕೈವ್ ನಕಲು". Archived from the original on 2010-05-25. Retrieved 2010-04-05.
- ↑ https://web.archive.org/web/20051211105920/http://www.adobe.com/aboutadobe/pressroom/pdfs/fastfacts.pdf
- ↑ ೧೯.೦ ೧೯.೧ ೧೯.೨ "Adobe Systems Incorporated Company Profile". Google Finance.
- ↑ Q4 and FY2008 earnings press release
- ↑ Macsimum News - Adobe announces record revenue
- ↑ ೨೨.೦ ೨೨.೧ adobe.com
- ↑ adobe.com
- ↑ ೨೪.೦ ೨೪.೧ "Adobe Systems Reports Record Quarterly and Annual Revenue". Archived from the original on 2008-02-20. Retrieved 2010-04-05.
- ↑ adobe.com
- ↑ ೨೬.೦ ೨೬.೧ adobe.com
- ↑ ೨೭.೦ ೨೭.೧ ೨೭.೨ ೨೭.೩ ೨೭.೪ adobe.com
- ↑ "100 Best Companies to Work For 2009".
- ↑ "Best Places to work in India".
- ↑ "Reasons for Selection, 2009 Canada's Top 100 Employers Competition".
- ↑ "Photographers take stand against Adobe". Archived from the original on 2010-05-08. Retrieved 2010-04-05.
- ↑ "Adobe responds to CS4 pricing criticism". Archived from the original on 2019-09-19. Retrieved 2010-04-05.
- ↑ "Adobe defends CS4 pricing". Archived from the original on 2011-05-16. Retrieved 2010-04-05.
- ↑ "Adobe responds to customer protests against perceived unfair pricing".
- ↑ "ಆರ್ಕೈವ್ ನಕಲು". Archived from the original on 2009-08-07. Retrieved 2010-04-05.
ಆಕರಗಳು
[ಬದಲಾಯಿಸಿ]- "Adobe Logo History". Archived from the original on 2012-12-02. Retrieved 2010-04-05.
- "Adobe timeline" (PDF). Archived from the original on 2007-09-27. Retrieved 2010-04-05.
{{cite web}}
: CS1 maint: bot: original URL status unknown (link) - "Patents owned by Adobe Systems". US Patent & Trademark Office. Archived from the original on 3 ಸೆಪ್ಟೆಂಬರ್ 2015. Retrieved 8 December 2005.
- San Jose Semaphore on Adobe's building
- "Adobe Systems Incorporated Company Profile". Yahoo!.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Media related to ಅಡೋಬ್ ಸಿಸ್ಟಮ್ಸ್ at Wikimedia Commons
- Adobe Systems Video and Audio on MarketWatch
- Pages using the JsonConfig extension
- CS1 errors: empty unknown parameters
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles with hatnote templates targeting a nonexistent page
- CS1 maint: bot: original URL status unknown
- Companies in the NASDAQ-100 Index
- ಅಡೋಬ್ ಸಿಸ್ಟಮ್ಸ್
- ಕ್ಯಾಲಿಫೋರ್ನಿಯಾ, ಸ್ಯಾನ್ ಜೋಸ್ ಮೂಲದ ಕಂಪನಿಗಳು
- NASDAQ ಪಟ್ಟಿಯಲ್ಲಿನ ಕಂಪನಿಗಳು
- ಯುನೈಟೆಡ್ ಸ್ಟೇಟ್ಸ್ನ ಸಾಫ್ಟ್‌ವೇರ್ ಕಂಪನಿಗಳು
- ಟೈಪ್ ಫೌಂಡ್ರೀಸ್
- 1982ರಲ್ಲಿ ಸ್ಥಾಪನೆಯಾದ ಕಂಪನಿಗಳು
- ತಂತ್ರಜ್ಞಾನ
- ಉದ್ಯಮ