ಅಡೂರು ಗೋಪಾಲಕೃಷ್ಣನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಾ. ಅಡೂರ್ ಗೋಪಾಲಕೃಷ್ಣನ್
ಅಡೂರ್ ಗೋಪಾಲಕೃಷ್ಣನ್
ಜನನ
ಮೌತತ್ತ್ ಗೋಪಾಲಕೃಷ್ಣನ್ ಉಣ್ಣಿತ್ತಾನ್

(೧೯೪೧-೦೭-೦೩)೩ ಜುಲೈ ೧೯೪೧
ಇತರೆ ಹೆಸರುಗಳುAdoor
ಉದ್ಯೋಗನಿರ್ದೇಶಕ, ಚಿತ್ರಕಥಾ ಲೇಖಕ, ನಿರ್ಮಾಪಕ
ಸಕ್ರಿಯ ವರ್ಷಗಳು1965 – present
ಪೋಷಕರುಮಾಧವನ್ ಉಣ್ಣಿತ್ತಾನ್, ಗೌರಿ ಕುಞ್ಞಮ್ಮ
ಜಾಲತಾಣhttp://www.adoorgopalakrishnan.com

ಅಡೂರು ಗೋಪಾಲಕೃಷ್ಣನ್ ಭಾರತೀಯ ಚಿತ್ರರಂಗದ ಪ್ರಸಿದ್ಧ ಚಿತ್ರ ನಿರ್ದೇಶಕ. ಮಲೆಯಾಳ ಭಾಷೆಯಲ್ಲಿ ಉತ್ತಮ ಚಿತ್ರಗಳನ್ನು ನಿರ್ದೇಶಿಸಿ ಭಾರತದ ಅತ್ಯುತ್ತಮ ಚಿತ್ರ ನಿರ್ದೇಶಕರಲ್ಲಿ ಒಬ್ಬರು ಎಂಬ ಹೆಸರು ಪಡೆದವರು. ಹದಿನಾರು ಬಾರಿ ಉತ್ತಮ ನಿರ್ದೇಶಕ ಎಂಬ ರಾಷ್ಟ್ರೀಯ ಪ್ರಶಸ್ತಿ, ಹದಿನೇಳು ಬಾರಿ ಕೇರಳ ರಾಜ್ಯದ ಉತ್ತಮ ನಿರ್ದೇಶಕ ಪ್ರಶಸ್ತಿಗಳಲ್ಲದೆ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರಿಗೆ ೧೯೮೪ರಲ್ಲಿ ಪದ್ಮಶ್ರೀ, ೨೦೦೬ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ಲಭಿಸಿದೆ. ೨೦೦೪ರಲ್ಲಿ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಕೂಡಾ ಇವರಿಗೆ ಸಿಕ್ಕಿದೆ.