ಅಡಾಲ್ಫ್ ಬಾಸ್ಟಿಯನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಡಾಲ್ಫ್ ಬಾಸ್ಟಿಯನ್
ಅಡಾಲ್ಫ್ ಬಾಸ್ಟಿಯನ್
ಜನನ
ಅಡಾಲ್ಫ್ ಬಾಸ್ಟಿಯನ್

೨೬ ಜೂನ್ ೧೮೨೬
ಆರ್ಮನಿ
ರಾಷ್ಟ್ರೀಯತೆಆರ್ಮನಿ

ಆರ್ಮನಿಯ ಜನಾಂಗೀಯ ವಿಜ್ಞಾನಿಯಾಗಿದ್ದ ಅಡಾಲ್ಫ್ ಬಾಸ್ಟಿಯನ್‌ರವರು ೧೮೨೬ರ ಜೂನ್ ೨೬ರಂದು ಬ್ರೆಮೆನ್‌ನಲ್ಲಿ ಜನಿಸಿದರು. ಮಾನವನ ನಾಗರಿಕತೆಯ ಅಭಿವೃದ್ಧಿಯ ವಿಕಾಸದ ಬಗ್ಗೆ ಅಧ್ಯಯನ ನಡೆಸಿದ ಬಾಸ್ಟಿಯನ್‌ರವರು ೧೮೫೦ರ ನಂತರ ಏಷಿಯಾ, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಉತ್ತರ ಮತ್ತು ದಕ್ಷಿಣ ಅಮೇರಿಕದ ಪ್ರವಾಸ ಕೈಗೊಂಡರು. ನಂತರ ೧೮೬೦ರಲ್ಲಿ ಜರ್ಮನಿಯ ಭಾಷೆಯಲ್ಲಿ ’ಇತಿಹಾಸದಲ್ಲಿ ಮಾನವ’ ಎಂಬ ಪುಸ್ತಕವನ್ನು ಬರೆದರು. ಅಲ್ಲದೆ ಸಂಸ್ಕೃತಿಯ ಇತಿಹಾಸದಲ್ಲಿ ಮನೋವಿಜ್ಞಾನದ ಮಹತ್ವ ಮತ್ತು ಅನೇಕ ಸಂಸ್ಕೃತಿಗಳ ಹೋಲಿಕೆಗಳ ಅಧ್ಯಯನಗಳನ್ನು ಕುರಿತಂತೆ ಸುಮಾರು ೬೦ಪುಸ್ತಕಗಳನ್ನು ಅವರು ಬರೆದಿದ್ದಾರೆ. ಅವರ ಪುಸ್ತಕಗಳಲ್ಲಿರುವ ಆಲೋಚನೆಗಳು ಮುಂದೆ ಸ್ವಿಟ್ಝರ್‌ಲೆಂಡಿನ ಮನೋವಿಜ್ಞಾನಿ ಕಾರ್ಲ್ ಜಂಗ್‌ರವರ (೧೮೭೫-೧೯೬೧) ’ಸಂಗ್ರಾಹ್ಯ ಅಜಾಗೃತಿ’ಯ (collective unconsciousness) ಬಗ್ಗೆಯ ಆಲೋಚನೆಗಳಿಗೆ ಸ್ಪೂರ್ತಿದಾಯಕವಾಯಿತು.[೧] ಒಟ್ಟಿನಲ್ಲಿ ಅವರು ಜನಾಂಗೀಯ ವಿಜ್ಞಾನದ (ethnology) ಪ್ರವರ್ತಕರಾಗಿದ್ದರು. ಬಾಸ್ಟಿಯನ್‌ರವರು ೧೯೦೫ರ ಫೆಬ್ರವರಿ ೨ರಂದು ಟ್ರಿನಿಡಾಡ್‌ನ ಪೋರ್ಟ್ ಅಫ್ ಸ್ಪೈನ್‌ನಲ್ಲಿ ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]