ಅಟಲ್ ಬಿಹಾರಿ ವಾಜಪೇಯಿ ಪ್ರಾದೇಶಿಕ ಉದ್ಯಾನವನ
ರೀಜನಲ್ ಪಾರ್ಕ್ ಇಂದೋರ್ (ಅಧಿಕೃತವಾಗಿ ಅಟಲ್ ಬಿಹಾರಿ ವಾಜಪೇಯಿ ಪ್ರಾದೇಶಿಕ ಉದ್ಯಾನವನ ) - ಇದು ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಒಂದು ಉದ್ಯಾನವನವಾಗಿದೆ. ಈ ಉದ್ಯಾನವನವನ್ನು ಇಂದೋರ್ ಅಭಿವೃದ್ಧಿ ಪ್ರಾಧಿಕಾರವು ಅಭಿವೃದ್ಧಿಪಡಿಸಿದೆ ಮತ್ತು ಇದನ್ನು ೨೦೦೩ ರಲ್ಲಿ ಆರಂಭಿಸಲಾಯಿತು. ಉದ್ಯಾನವನವು ಒಟ್ಟು ೮೦ ಎಕರೆ ವಿಸ್ತಾರವಾಗಿದೆ. ಇದರಲ್ಲಿ ೪೨ ಎಕರೆ ಜಾಗದಲ್ಲಿ ಸರೋವರ ನಿರ್ಮಾಣವನ್ನು ಮಾಡಲಾಗಿದೆ. ಉಳಿದ ೩೮ ಎಕರೆಗಲಲ್ಲಿ ಜನರ ವಿಹಾರಕ್ಕೆ ಅವಶ್ಯವಾದ ಆಕರ್ಷಣೆಗಳನ್ನು ನಿರ್ಮಿಸಲಾಗಿದೆ. ಈ ಉದ್ಯಾನವನಕ್ಕೆ ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಇಡಲಾಗಿದೆ. [೧] [೨] ಈ ಸರೋವರದ ಜೊತೆಗೆ ಕಾಲುವೆಯೂ ಇದೆ, ಇದು ಇಡೀ ಉದ್ಯಾನವನವನ್ನು ಕೊಳದ ಒಂದು ಬದಿಯಿಂದ ಪ್ರಾರಂಭಿಸಿ ಇನ್ನೊಂದು ಭಾಗದಲ್ಲಿ ಕೊನೆಗೊಳ್ಳುತ್ತದೆ. ಮಂಜು ಕಾರಂಜಿಯೊಂದಿಗೆ ಕಾಲುವೆಯ ಮೇಲೆ ಸೇತುವೆಗಳಿವೆ.
ಇಲ್ಲಿ ವಿವಿಧ ಪ್ಯಾಡಲ್ ದೋಣಿಗಳು (ಪೆಡಾಲೋಸ್), ಸ್ಪೀಡ್‌ಬೋಟ್‌ಗಳು (ಅಥವಾ ಮೋಟಾರ್‌ಬೋಟ್‌ಗಳು/ ಪವರ್‌ಬೋಟ್‌ಗಳು), ಮತ್ತು ಸಣ್ಣ ಕ್ರೂಸರ್‌ಗಳೂ ಇವೆ. ಈ ದೋಣಿಗಳ ಸವಾರಿ ಶುಲ್ಕಗಳಲ್ಲಿ ಒಂದಕ್ಕೊಂದು ವ್ಯತ್ಯಾಸವಿದೆ. ಪ್ರಾದೇಶಿಕ ಉದ್ಯಾನವನದಲ್ಲಿ ಇತ್ತೀಚೆಗೆ ಮಿನಿ ಕ್ರೂಸರ್ ಮಾಲ್ವಾ ಕ್ವೀನ್ ಅನ್ನು ಇಲ್ಲಿ ಸೇರಿಸಲಾಗಿದೆ ಮತ್ತು ಇದು ಇಡೀ ರಾಜ್ಯದಲ್ಲಿ ಮೊದಲನೆಯದು. ಇದು ಎರಡು ಡೆಕ್‌ಗಳನ್ನು ಹೊಂದಿದೆ, ಸುಮಾರು ೮೦ ಜನರಿಗೆ ಅವಕಾಶ ಕಲ್ಪಿಸುತ್ತದೆ ಮತ್ತು ರೆಸ್ಟೋರೆಂಟ್ ಮತ್ತು ಖಾಸಗಿ ಪಾರ್ಟಿ ಕೊಠಡಿಗಳನ್ನು ಹೊಂದಿದೆ.
ಆಕರ್ಷಣೆಗಳು
[ಬದಲಾಯಿಸಿ]- ಆಂಫಿಥಿಯೇಟರ್
- ಕಲಾವಿದರ ಗ್ರಾಮ
- ಜೈವಿಕ ವೈವಿಧ್ಯ ಉದ್ಯಾನ
- ಬೋಟಿಂಗ್
- ತ್ವರಿತ ಆಹಾರ ವಲಯ
- ಫ್ರೆಂಚ್ ಉದ್ಯಾನಗಳು
- ಜಂಪಿಂಗ್ ಜೆಟ್ ಕಾರಂಜಿ
- ಲೇಕ್-ವ್ಯೂ ಪಾಯಿಂಟ್
- ಮಾಲ್ವಾ ಕ್ವೀನ್ - ೮೦ ವ್ಯಕ್ತಿಗಳಿಗೆ ಸಾಮರ್ಥ್ಯವಿರುವ ರಾಜ್ಯದಲ್ಲಿ ಮಾತ್ರ ಮಿನಿ ಕ್ರೂಸ್ ರೆಸ್ಟೋರೆಂಟ್.
- ಮಂಜು ಕಾರಂಜಿ
- ಸಂಗೀತ ಕಾರಂಜಿ
ಉಲ್ಲೇಖಗಳು
[ಬದಲಾಯಿಸಿ]- ↑ "District Collector Indore District Administration Indore". Archived from the original on 28 December 2016. Retrieved 8 December 2015.
- ↑ "Atal Bihari Vajpeyi Regional Park, Pipliyapala Park". Archived from the original on 8 ಡಿಸೆಂಬರ್ 2015. Retrieved 1 ಜೂನ್ 2022.
{{cite web}}
: CS1 maint: bot: original URL status unknown (link)