ಅಜಿತ್ ಕೆಂಭಾವಿ

ವಿಕಿಪೀಡಿಯ ಇಂದ
Jump to navigation Jump to search
ಅಜಿತ್ ಕೆಂಭಾವಿ
Ajit Kembhavi profile small.jpg
ಜನನ೧೬ ಆಗಸ್ಟ್ ೧೯೫೦
ಹುಬ್ಬಳ್ಳಿ, ಕರ್ನಾಟಕ
ವಾಸಸ್ಥಳಪುಣೆ, ಮಹಾರಾಷ್ಟ್ರ, ಭಾರತ
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರಭೌತಶಾಸ್ತ್ರ, ಖಗೋಳವಿಜ್ಞಾನ, ಕಂಪ್ಯೂಟರ್ ವಿಜ್ಞಾನ
ಸಂಸ್ಥೆಗಳುಖಗೋಳವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರದ ಅಂತರ-ವಿಶ್ವವಿದ್ಯಾಲಯ ಕೇಂದ್ರ
ಅಭ್ಯಸಿಸಿದ ವಿದ್ಯಾಪೀಠಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್
ಡಾಕ್ಟರೇಟ್ ಸಲಹೆಗಾರರುಜಯಂತ್ ನರ್ಲಿಕರ್

ಅಜಿತ್ ಕೆಂಭಾವಿ (ಜನನ ೧೬ ಆಗಸ್ಟ್ ೧೯೫೦)ರವರೊಬ್ಬ ಭಾರತೀಯ ಖಗೋಳ ಭೌತಶಾಸ್ತ್ರಜ್ಞ . ಅವರು ಪ್ರಸ್ತುತ ಭಾರತದ ಪುಣೆಯ ಖಗೋಳವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರದ ಅಂತರ-ವಿಶ್ವವಿದ್ಯಾಲಯ ಕೇಂದ್ರ ದಲ್ಲಿ (ಐಯುಸಿಎಎ)[೧] ಪ್ರೊಫೆಸರ್ ಎಮೆರಿಟಸ್ ಆಗಿದ್ದಾರೆ, ಅದರಲ್ಲಿ ಅವರು ಸಂಸ್ಥಾಪಕ ಸದಸ್ಯರೂ ಆಗಿದ್ದರು . ಅವರು ಅಂತರರಾಷ್ಟ್ರೀಯ ಖಗೋಳ ಒಕ್ಕೂಟದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಾರೆ.[೨]

ಜನನ ಮತ್ತು ಜೀವನ[ಬದಲಾಯಿಸಿ]

ಅಜಿತ್ ಕೆಂಭಾವಿ ಯವರು ೧೬ ಆಗಸ್ಟ್ ೧೯೫೦ ರಂದು ಕರ್ನಾಟಕದ ಹುಬ್ಬಳ್ಳಿ ಯಲ್ಲಿ ಜನಿಸಿದರು.[೩] ಇವರು ಬಯೋ - ಟೆಕ್ನಾಲಜಿಸ್ಟ್ ಆಶಾ ಕೆಂಭಾವಿ ಯವರನ್ನು ವಿವಾಹವಾದರು . ಅವರಿಗೆ ಅಲೆನ್ ಇನ್ಸ್ಟಿಟ್ಯೂಟ್ ಆಫ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಲ್ಲಿ ಕೆಲಸ ಮಾಡುವ ಅನಿರುಧ್ ಕೆಂಭಾವಿ ಎಂಬ ಮಗನಿದ್ದಾರೆ .[೪]

ಗೌರವಗಳು , ಪ್ರಶಸ್ತಿಗಳು ಮತ್ತು ಸದಸ್ಯತ್ವಗಳು[ಬದಲಾಯಿಸಿ]

ಭಾರತೀಯ ಖಗೋಳಶಾಸ್ತ್ರಕ್ಕೆ‌ ಕೆಂಭಾವಿಯವರ ಕೊಡುಗೆಗಳು[ಬದಲಾಯಿಸಿ]

ಭಾರತದಲ್ಲಿ ಸಂಶೋಧನಾ ಕ್ಷೇತ್ರವಾಗಿ ಖಗೋಳವಿಜ್ಞಾನದ ಅಭಿವೃದ್ಧಿಯಲ್ಲಿ ಕೆಂಭಾವಿ ಯವರು ಬಹಳ ಮಹತ್ವದ ಪಾತ್ರ ವಹಿಸಿದ್ದಾರೆ. ಐಯುಸಿಎಎ ನಲ್ಲಿ ವಿಸಿಟರ್ ಪ್ರೋಗ್ರಾಂಗಳ ಡೀನ್ ಆಗಿ , ಖಗೋಳ ಸಂಶೋಧನೆಯ ಉತ್ತೇಜನಕ್ಕಾಗಿ ಐಯುಸಿಎಎ ಮತ್ತು ಭಾರತದಾದ್ಯಂತ ನಡೆದ ಹಲವಾರು ಕಾರ್ಯಕ್ರಮಗಳ ಬೆಳವಣಿಗೆಗೆ ಮತ್ತು ಪೋಷಣೆಗೆ ಅವರು ಕಾರಣರಾಗಿದ್ದರು.[೧೧] ಐಯುಸಿಎಎ ನಿರ್ದೇಶಕರಾಗಿ, ಸಧರ್ನ್ ಆಫ್ರಿಕನ್ ಲಾರ್ಜ್ ಟೆಲಿಸ್ಕೋಪ್ (ಎಸ್ಎಎಲ್ಟಿ), ಥರ್ಟಿ ಮೀಟರ್ ಟೆಲಿಸ್ಕೋಪ್ (ಟಿ.ಎಮ್.ಟಿ), ಮತ್ತು ಲೇಸರ್ ಇಂಟರ್ಫೆರೋಮೀಟರ್ ಗ್ರಾವಿಟೇಶನಲ್ - ವೇವ್ ಅಬ್ಸರ್ವೇಟರಿ (ಎಲ್ಐಜಿಒ) ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಯೋಜನೆಗಳಲ್ಲಿ ಭಾರತದ ಪಾಲ್ಗೊಳ್ಳುವಿಕೆಯನ್ನು ಗಟ್ಟಿಗೊಳಿಸುವಲ್ಲಿ ಅವರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.ಅವರು ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಭಾರತ) ಅಡಿಯಲ್ಲಿ ಇನ್ಫೋನೆಟ್ ಯೋಜನೆಯನ್ನು ಕಲ್ಪಿಸಿಕೊಂಡು ಕಾರ್ಯಾಗತಗೊಳಿಸಿದರು , ಇದು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಪ್ರಯೋಜನಗಳನ್ನು ಭಾರತದ ಎಲ್ಲಾ ವಿಶ್ವವಿದ್ಯಾಲಯಗಳಿಗೆ ತಂದಿತು .[೧೨]ಕೆಂಭಾವಿ ಯವರು ಜನಸಾಮಾನ್ಯರಲ್ಲಿ ಖಗೋಳಶಾಸ್ತ್ರದ ಮಾಹಿತಿಯನ್ನು ಉತ್ತೇಜಿಸಲು ಹಲವಾರು ಸಾರ್ವಜನಿಕ ಮಾತುಕತೆ ಮತ್ತು ಪ್ರಸ್ತುತಿಗಳನ್ನು ನೀಡಿದ್ದಾರೆ. ಜಯಂತ್ ಮತ್ತು ಮಂಗಳಾ ನರ್ಲಿಕರ್ ಸಹ-ಲೇಖನದ 'ನಭಾತ್ ಹಸ್ರೆ ತಾರೆ' ಎಂಬ ಮರಾಠಿ ಪುಸ್ತಕವನ್ನೂ ಕೆಂಭಾವಿ ಯವರು ಬರೆದಿದ್ದಾರೆ.

ಸಂಶೋಧನಾ ಕ್ಷೇತ್ರಗಳು[ಬದಲಾಯಿಸಿ]

ಕೆಂಭಾವಿಯವರು ಪರಿಣತಿಯ ಕ್ಷೇತ್ರಗಳಲ್ಲಿ ಹೆಚ್ಚಾಗಿ ಗುರುತ್ವದ ಸಿದ್ಧಾಂತ ಎಕ್ಸ್‌ಟ್ರಾಗ್ಯಾಲಾಕ್ಟಿಕ್ ಆಸ್ಟ್ರೋನಮಿ ಮತ್ತು ಖಗೋಳವಿಜ್ಞಾನದ ದತ್ತಸಂಚಯ ನಿವರ್ಹಣೆ ಸೇರಿವೆ .[೧೩]

ಉಲ್ಲೇಖಗಳು[ಬದಲಾಯಿಸಿ]