ಅಗ್ನಿಮಿತ್ರ
- ವಾಯು ದೇವತೆ ಬಗ್ಗೆ ಲೇಖನಕ್ಕಾಗಿ ಇಲ್ಲಿ ನೋಡಿ.
ಅಗ್ನಿಮಿತ್ರ | |
---|---|
ಶುಂಗ ಸಾಮ್ರಾಟ | |
ರಾಜ್ಯಭಾರ | 149–141 BCE |
ಪೂರ್ವಾಧಿಕಾರಿ | ಪುಷ್ಯಮಿತ್ರ ಶುಂಗ |
ಉತ್ತರಾಧಿಕಾರಿ | ವಸುಜೇಷ್ಠ |
ಮಕ್ಕಳು | |
ತಂದೆ | ಪುಷ್ಯಮಿತ್ರ ಶುಂಗ |
ತಾಯಿ | ರಾಣಿ ದೇವಮಾಲಾ |
ಅಗ್ನಿಮಿತ್ರ ಮೌರ್ಯರಿಂದ ಮಗಧರಾಜ್ಯವನ್ನು ಕ್ರಿ.ಪೂ. ಸುಮಾರು 187ರಲ್ಲಿ ಕಸಿದುಕೊಂಡು ಶುಂಗ ರಾಜಸಂತತಿಯನ್ನು ಸ್ಥಾಪಿಸಿ ಸುಮಾರು 150ರವರೆಗೆ ಆಳಿದ ಪುಷ್ಯಮಿತ್ರನ ಮಗ. ತಂದೆಯ ಕಾಲದಲ್ಲಿ ಸಾಮ್ರಾಜ್ಯಕ್ಕೆ ಉಪರಾಜಧಾನಿಯಾಗಿದ್ದ ವಿದೀಶದಲ್ಲಿ ನಿಂತು ಪ್ರಾಂತಾಡಳಿತ ನಡೆಸುತ್ತಿದ್ದ. ನೆರೆರಾಜ್ಯವಾಗಿದ್ದ ವಿದರ್ಭದ ದೊರೆ ದಂಡೆತ್ತಿ ಬಂದಾಗ ಅವನನ್ನು ಸೋಲಿಸಿದ. ತಂದೆಯ ಮರಣಾನಂತರ ಸಿಂಹಾಸನಕ್ಕೆ ಬಂದ. ಇವನ ವಿಷಯವಾಗಿ ಹೆಚ್ಚು ವಿವರಗಳು ತಿಳಿದುಬಂದಿಲ್ಲ. ಕಾಳಿದಾಸನ ಮಾಳವಿಕಾಗ್ನಿಮಿತ್ರ ನಾಟಕದ ಕಥಾನಾಯಕ ಇವನೇ.
ವಂಶ ಮತ್ತು ಆರಂಭಿಕ ಜೇವನ
[ಬದಲಾಯಿಸಿ]ಪುಷ್ಯಮಿತ್ರನ ಮಗನಾದ ಇವನ ಅವಧಿ ವಾಯು ಪುರಾಣ ಮತ್ತು ಬ್ರಹ್ಮಾಂಡ ಪುರಾಣಗಳಲ್ಲಿ ಎಂಟು ವರ್ಷಗಳೆಂದು ಉಲ್ಲೇಖವಾಗಿದೆ.[೧] ಕಾಳಿದಾಸನ ಮಾಳವಿಕಾಗ್ನಿಮಿತ್ರದಲ್ಲಿ ಇವನನ್ನು ಬೈಂಬಿಕ ಕುಲದವನು ಎಂದು ಉಲ್ಲೇಖಿಸಿದ್ದರೆ,ಪುರಾಣಗಳಲ್ಲಿ ಇವನನ್ನು ಶುಂಗ ಕುಲದವನೆಂದು ಉಲ್ಲೇಖಿಸಲಾಗಿದೆ.[೨] ಮಾಳವಿಕಾಗ್ನಿಮಿತ್ರ ಇವನು ರಾಜಪ್ರತಿನಿಧಿಯಾಗಿ ವಿದಿಶದಲ್ಲಿದ್ದುದನ್ನು ತಿಳಿಸುತ್ತದೆ.[೩]
ಉತ್ತರಾಧಿಕಾರಿ
[ಬದಲಾಯಿಸಿ]ಇವನ ರಾಜ್ಯಾಧಿಕಾರ ಕ್ರಿ.ಪೂ.೧೪೧ರಲ್ಲಿ ಕೊನೆಗೊಂಡು ಇವನ ನಂತರ ಇವನ ಮಗನಾದ ವಸುಜೇಷ್ಠ ಅಥವಾ ಸುದೇಷ್ಠ ಎಂಬವನು ಅಧಿಕಾರಕ್ಕೇರಿದ.
ಉಲ್ಲೇಖಗಳು
[ಬದಲಾಯಿಸಿ]- ↑ Lahiri, Bela (1974). Indigenous States of Northern India (Circa 200 B.C. to 320 A.D.) Calcutta: University of Calcutta, pp.47-50
- ↑ Raychaudhuri, Hemchandra (1972). Political History of Ancient India: From the Accession of Parikshit to the Extinction of the Gupta Dynasty, Calcutta: University of Calcutta,1972, p.328
- ↑ Raychaudhuri, Hemchandra (1972). Political History of Ancient India: From the Accession of Parikshit to the Extinction of the Gupta Dynasty, Calcutta: University of Calcutta,1972, p.330
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- List of rulers of Magadha Archived 2007-10-09 ವೇಬ್ಯಾಕ್ ಮೆಷಿನ್ ನಲ್ಲಿ. on Bruce Gordon's *"Regnal Chronologies Archived 2007-11-14 ವೇಬ್ಯಾಕ್ ಮೆಷಿನ್ ನಲ್ಲಿ.".