ಅಗ್ಗಿಜರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Flying and glowing firefly, Photinus pyralis
Female Glowworm, Lampyris noctiluca

ರಾತ್ರಿ ವೇಳೆ ಪ್ರಕಾಶಮಾನ ಬೆಳಕು ಹೊರಸೂಸುವ ಒಂದು ಜೀವಿ ಅಗ್ಗಿಜರಿ. ಬೆಟ್ಟಗುಡ್ಡಗಳಲ್ಲಿ ಪುಟ್ಟ ಪೊದೆಗಳಲ್ಲಿ ಸ್ವಚ್ಚಂದವಾಗಿ ಬದುಕು ನಡೆಸುವ ಈ ಜೀವಿಯದು ಜರಿಯಂತೆ ಕಾಣುವ ದೇಹ. ನಿಸರ್ಗದಲ್ಲಿರುವ ವೈಚಿತ್ರಗಳನ್ನು ಗಮನಿಸುತ್ತ ಬಂದರೆ ತಮ್ಮ ದೇಹದ ವಿವಿಧ ಭಾಗಗಳಿಂದ ಬೆಳಕಿನ ಸಿರಿ ಹರಿಸುವ ಅಸಂಖ್ಯಾತ ಜೀವಿಗಳಿರುವುದು ಬೆರಗು ಹುಟ್ಟಿಸುತ್ತದೆ. ಇದನ್ನು ವಿಜ್ಞಾನದಲ್ಲಿ 'ಜೀವಪ್ರಭೆ' ( Bioluminescence ) ಅಥವಾ 'ಶೀತಲ ದೀಪ' (Cold light) ಎಂದು ಕರೆಯುತ್ತಾರೆ. ಇದನ್ನು ಕನ್ನಡದಲ್ಲಿ ಕ್ರಮವಾಗಿ ವಿಕಿರಣ ಪ್ರಭೆ, ವಿದ್ಯುತ್ ಪ್ರಭೆ, ಮಣಿ ಪ್ರಭೆ, ಘರ್ಷಣೆ ಪ್ರಭೆ, ರಸ ಪ್ರಭೆ ಎನ್ನಬಹುದು. ಇದುವರೆಗೆ ಕನಿಷ್ಟ ೪೦ ವಿವಿಧ ವರ್ಗದ ಪ್ರಾಣಿಗಳಲ್ಲಿ ಹಾಗು ೨ ಗುಂಪಿನ ಸಸ್ಯಗಳಲ್ಲಿ ಜೀವಪ್ರಭೆಯ ತಳಿಗಳನ್ನು ಗುರುತಿಸಲಾಗಿದೆ. ಇವುಗಳ ದೀಹಭಾಗದಲ್ಲಿ ಜೀವಕೋಶಗಳು ಉತ್ಪಾದಿಸುವ ಕಾಂತಿಜನಕ ಕಣಗಳು ನಿಧಾನವಾಗಿ ಆಮ್ಲಜನಕದೊಡನೆ ಸಂಯೋಗಗೊಳ್ಳುವುದರ ಪರಿಣಾಮವಾಗಿ ಇಂತಹ ಬೆಳಕು ಪ್ರಕಟಗೊಳ್ಳುತ್ತದೆ. ಕೆಲವೊಮ್ಮೆ ಕಾಂತಿಯುಕ್ತ ಬ್ಯಾಕ್ಟೀರಿಯ ಮತ್ತು ಶಿಲ್ಲೀಂದ್ರಗಳೇ ಜೀವಪ್ರಭೆಗೆ ಕಾರಣವಾಗಬಹುದು. ಇದನ್ನು ಜೀವ ಪ್ರಭೆಯ ಜೊತೆ ಸಮೀಕರಿಸಿಕೊಳ್ಳಬಾರದು. ಜೀವಪ್ರಭೆ ಸೂಸುವ ಜೀವಿಯ ದೇಹಭಗಗಳೊಂದಿಗೆ ಕಾಂತಿಯುಕ್ತ ಬ್ಯಾಕ್ಟೀರಿಯ ಮತ್ತು ಶಿಲೀಂದ್ರಗಳು ಬೆರೆತು ಸಹಜೀವನ ನಡೆಸುವುದರಿಂದಾಗಿ ಇಂತಹ ಭ್ರಮೆಗೆ ಅವಕಾಶವಾಗಿತ್ತಷ್ಟೇ. ನಿಜಾಂಶವೇನೆಂದರೆ ಯಾವುದೇ ಚೋದನೆಗೆ ಒಳಗಾಗದೆ ಸ್ವತಂತ್ರವಾಗಿ ಹಗಲಿರುಳು ಪ್ರಕಾಶಿಸುವ ವ್ಯವಸ್ಥೆಯು ಕಾಂತಿಯುಕ್ತ ಬ್ಯಾಕ್ಟೀರಿಯ ಮತ್ತು ಶಿಲೀಂದ್ರಗಳಲ್ಲಿ ಕಂಡುಬರುತ್ತದೆ. ಆದರೆ ಜೀವ ಪ್ರಭೆಯು ಚೋದನೆಗೆ ಒಳಗಾದಾಗ ಅಥವ ಗಾಭರಿಗೊಂಡಾಗ ಮಾತ್ರ ಪ್ರಕಟಗೊಳ್ಳುತ್ತದೆ. ಕೋಲಾರಅಂತರಗಂಗೆಯ ಬೆಟ್ಟಗುಡ್ಡಗಳ ನಡುವೆ ಪುಟ್ಟ ಪೊದೆಗಳಲ್ಲಿ ಮೊದಲ ನೋಟಕ್ಕೆ, ಜರಿಯಂತೆ ಕಾಣುವ ಜೀವಿಯೊಂದು ತನ್ನ ಬಾಲದ ತುದಿಯಲ್ಲಿ ಬೆಳಕಿನ ಸಿರಿ ಹರಸುವುದನ್ನು ನೋಡಬಹುದು. ಕೋಲಾರದ ಕಡೆ ತೆಲುಗು ಮಾತನಾಡುವವರು ಇದನ್ನು 'ಅಗ್ಗಿಜರಿ' ಎಂದು ಕರೆಯುತ್ತಾರೆ. ತೇಜಸ್ವಿಯವರ ಕರ್ವಾಲೋ ಕಾದಂಬರಿಯಲ್ಲಿ ಇದರ ಪ್ರಸ್ತಾಪವಿದೆ. ನಾಲ್ಕೈದು ಇಂಚುಗಳಿಂದ ಆರೇಳು ಇಂಚುಗಳವರೆಗೆ ಉದ್ದವಾಗಿದ್ದು ಬರಿಗಣ್ಣಿಗೆ ಸ್ಪಷ್ಟವಾಗಿ ಕಾಣುವ ಈ ಹುಳುವಿನ ಮೈಮೇಲೆಲ್ಲಾ ಕವಚದಂತೆ ಹುರುಪೆಗಳಿದ್ದು, ಇದರ ಬಾಲದಲ್ಲಿ ಎರಡು ದೀಪಗಳಿರುತ್ತದೆ. ಇದರ ಸಹಾಯದಿಂದ ರಾತ್ರಿಯಲ್ಲಿ ಬೆಳಕು ಬೀರಿ ಶಂಕದ ಹುಳುಗಳನ್ನು ಆಕರ್ಷಿಸಿ ಹಿದಿದು ಅದರ ಚಿಪ್ಪಿನಿಂದ ಎಳೆದೆಳೆದು ತಿನ್ನುತ್ತದೆ ಎಂಬ ವಿವರಗಳು ಕರ್ವಾಲೋ ಕಾದಂಬರಿಯಲ್ಲಿ ಉಲ್ಲೇಖವಾಗಿದೆ.

ಕಂಡುಬರುವ ಸ್ಥಳಗಳು[ಬದಲಾಯಿಸಿ]

  • ಕೋಲಾರದ ಅಂತರಗಂಗೆ ಬೆಟ್ಟಗಳು

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

[೧] [೨] [೩]

  1. http://ocean.si.edu/ocean-life/fish/bioluminescence
  2. https://oceanexplorer.noaa.gov/facts/bioluminescence.html
  3. http://photobiology.info/LeeBasicBiolum.html