ಅಗೂಟೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಅಗೂಟೀ

ರಾಡೆನ್ಷಿಯ ವರ್ಗದ ಕೇವಿಡೀ ಎಂಬ ಮೂಷಿಕ ಕುಟುಂಬಕ್ಕೆ ಸೇರಿದ ಸ್ತನಿ. ಗಾತ್ರದಲ್ಲಿ ಮೊಲದಷ್ಟು ದೊಡ್ಡದು. ಬಣ್ಣ ಕಂದು, ಕೂದಲು ಒರಟು, ಬಾಲ ಚಿಕ್ಕದು. ಅರಣ್ಯದಲ್ಲಿ ಹಗಲು ಹೊತ್ತು ಗಿಡಗಳ ಪೊದರು ಇಲ್ಲವೆ ಬೇರುಗಳ ಮಧ್ಯದಲ್ಲಿ ಕಟ್ಟಿದ ಗೂಡಿನಲ್ಲಿ ಅವಿತುಕೊಂಡಿದ್ದು, ರಾತ್ರಿ ಹೊತ್ತಿನಲ್ಲಿ ಹೊರಬಂದು ತನ್ನ ಚಟುವಟಿಕೆ ಆರಂಭಿಸುವುದು. ಆವಶ್ಯಕತೆ ಬಂದಾಗ ಚೆನ್ನಾಗಿ ಈಜಲೂ ಬಲ್ಲದು. ಬೇರು, ಎಲೆ, ಕಾಯಿ-ಮುಂತಾದ ಸಸ್ಯಜನ್ಯ ಪದಾರ್ಥವೇ ಇದರ ಆಹಾರ. ಈ ಇಲಿ ಟ್ರಿನಿಡಾಡ್ ಮತ್ತು ಗಿನಿ ಪ್ರದೇಶಗಳಲ್ಲಿ ಸರ್ವಸಾಮಾನ್ಯವಾಗಿದ್ದು ಅಲ್ಲಿಯ ಕಬ್ಬು, ಬಾಳೆ ತೋಟಗಳಿಗೆ ಬಹಳ ಉಪದ್ರವಕಾರಿಯೆನಿಸಿದೆ.

"https://kn.wikipedia.org/w/index.php?title=ಅಗೂಟೀ&oldid=1028443" ಇಂದ ಪಡೆಯಲ್ಪಟ್ಟಿದೆ