ವಿಷಯಕ್ಕೆ ಹೋಗು

ಅಗತ್ಯ ಸೇವೆ ನಿರ್ವಹಣೆ ಕಾಯಿದೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಗತ್ಯ ಸೇವೆ ನಿರ್ವಹಣೆ ಕಾಯಿದೆ
An Act to provide for the maintenance of certain essential services and the normal life of the community.
ಉಲ್ಲೇಖAct No. 59 of 1968
ಭೌಗೋಳಿಕ ವ್ಯಾಪ್ತಿWhole of India except Jammu and Kashmir
ಮಂಡನೆParliament of India
Billಮೂಲ
Keywords
essential service, strike
ಸ್ಥಿತಿ: ಜಾರಿಗೆ ಬಂದಿದೆ

ಅಗತ್ಯ ಸೇವೆ ನಿರ್ವಹಣೆ ಕಾಯಿದೆ (Essential Services Maintenance Act) (ESMA) ಎನ್ನುವುದು ಕೆಲವು ಸೇವೆಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಸ್ಥಾಪಿಸಲಾದ ಭಾರತದ ಸಂಸತ್ತಿನ ಒಂದು ಕಾರ್ಯವಾಗಿದೆ, ಸರ್ಕಾರಿ ನೌಕರರ ಮೇಲೆ ಅಂಕುಶ ಹಾಕುವ ಕಾಯಿದೆ 1968 ರಿಂದ ಜಾರಿಯಲ್ಲಿದೆ. ಜಮ್ಮು ಕಾಶ್ಮೀರದ ಕೆಲ ಭಾಗಕ್ಕೆ ವಿನಾಯಿತಿ ನೀಡಲಾಗಿದೆ. ಕರ್ನಾಟಕದಲ್ಲಿ 1994ರಲ್ಲಿ ಈ ಕಾನೂನಿನ ಮೊದಲ ಉಲ್ಲೇಖ ಆಯಿತು.

ಇತಿವೃತ್ತ

[ಬದಲಾಯಿಸಿ]

ಜೂನ್ 2013 ರಿಂದ ಕರ್ನಾಟಕ ರಾಜ್ಯದಲ್ಲಿ ಕಾನೂನು ಬಳಕೆಗೆ ಅವಕಾಶ ಸಿಕ್ಕಿತು. 2015 ರಲ್ಲಿ ಕೆಲ ತಿದ್ದುಪಡಿ ಮಾಡಲಾಯಿತು. ಇದು ಸಾರ್ವಜನಿಕ ಸಾರಿಗೆ (ಬಸ್ ಸೇವೆಗಳು), ಆರೋಗ್ಯ ಸೇವೆಗಳು (ವೈದ್ಯರು ಮತ್ತು ಆಸ್ಪತ್ರೆಗಳು) ಅಂತಹ ಸೇವೆಗಳನ್ನು ಒಳಗೊಂಡಿದೆ. ಎಸ್ಮಾ ಎಂಬುದು ಕೇಂದ್ರ ಕಾನೂನು, ಭಾರತದ ಸಂಸತ್ತು ಮಾಡಿದ ಕಾನೂನು; ಆದರೆ ಅದರ ಕಾರ್ಯಗತಗೊಳಿಸುವ ವಿವೇಚನೆಯು ಹೆಚ್ಚಾಗಿ ರಾಜ್ಯ ಸರ್ಕಾರಗಳಿಗೆ ಇರುತ್ತದೆ. ಭಾರತದ ಒಕ್ಕೂಟದಲ್ಲಿ ಪ್ರತಿಯೊಂದು ರಾಜ್ಯವು ಕೇಂದ್ರ ಕಾನೂನಿನಿಂದ ಅದರ ನಿಬಂಧನೆಗಳಲ್ಲಿ ಸ್ವಲ್ಪ ವ್ಯತ್ಯಾಸಗಳನ್ನು ಹೊಂದಿರುವ ಪ್ರತ್ಯೇಕ ರಾಜ್ಯ ಎಸೆನ್ಷಿಯಲ್ ಸರ್ವೀಸಸ್ ಮ್ಯಾನೇಜ್ಮೆಂಟ್ ಆಕ್ಟ್ ಅನ್ನು ಹೊಂದಿದೆ.[][][]

ಯಾವಾಗ ಜಾರಿ ಮಾಡಲಾಗುತ್ತದೆ

[ಬದಲಾಯಿಸಿ]

ಸರ್ಕಾರಿ ನೌಕರರು ಸಾಮೂಹಿಕ ಪ್ರತಿಭಟನೆಗೆ ಮುಂದಾಗಿ ಪರಿಸ್ಥಿತಿ ಸಂಪೂರ್ಣ ಕೈ ಮೀರಿ ಹೋಗುತ್ತಿದೆ ಎಂಬ ಸಂದರ್ಭದಲ್ಲಿ ಸರ್ಕಾರ ಎಸ್ಮಾ ಜಾರಿ ಮಾಡಲು ಮುಂದಾಗುತ್ತದೆ. ಮೂಲ ಸೌಕರ್ಯಗಳಾದ ಆಹಾರ, ಭದ್ರತೆ, ಶಿಕ್ಷಣ, ಆರೋಗ್ಯ, ಪೊಲೀಸ್ ವ್ಯವಸ್ಥೆಗೆ ಭಂಗ ಬರುವ ಸಂಭವ ಹೆಚ್ಚಿದೆ ಎಂದಾಗ ಸರ್ಕಾರ ಎಸ್ಮಾ ಜಾರಿಗೆ ಮುಂದಾಗುತ್ತದೆ.[]

ಎಸ್ಮಾ ಜಾರಿ ಪರಿಣಾಮ ಏನು

[ಬದಲಾಯಿಸಿ]

ಎಸ್ಮಾ ಎಂದರೆ 'ಕಡ್ಡಾಯ ಕೆಲಸ' ಎಂಬ ಅರ್ಥ ಬರುತ್ತದೆ. ಸಂವಿಧಾನ ಅನುಸೂಚಿ 7ರಲ್ಲಿನ 2ನೇ ಪಟ್ಟಿಯಲ್ಲಿರುವ 'ಸಾರ್ವಜನಿಕ ಸುವ್ಯವಸ್ಥೆ' ಮತ್ತು 'ಪೊಲೀಸ್' ಸಂಬಂಧಿಸಿದ ಎಲ್ಲಾ ಸೇವೆಗಳ ಕುರಿತು ರಾಜ್ಯ ಶಾಸಕಾಂಗವು ಕಾನೂನು ರೂಪಿಸುವ ಅಧಿಕಾರ ಹೊಂದಿರುತ್ತದೆ. ಎಸ್ಮಾ ಕಾಯ್ದೆ ಉಲ್ಲಂಘನೆ ಮಾಡಿದರೆ ವಾರಂಟ್ ಇಲ್ಲದೇ ಬಂಧನ ಮಾಡಬಹುದು. ಅಲ್ಲದೆ ಆರು ತಿಂಗಳು ಜೈಲು ವಾಸ ಸಾಧ್ಯತೆಯೂ ಇರುತ್ತದೆ. ಎಸ್ಮಾ ಜಾರಿಯಾದ ಮೇಲೂ ಉದ್ಯೋಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡರೆ ಆತನ ವೇತನ, ಭತ್ಯೆ, ಬಡ್ತಿ ಮತ್ತು ಇತರ ಸವಲತ್ತುಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಸರ್ಕಾರ ಎಸ್ಮಾ ಜಾರಿ ಮಾಡಿದೆ ಒಂದು ರೀತಿಯಲ್ಲಿ ಕಟ್ಟಪ್ಪಣೆ ಮಾಡಿದೆ ಎಂದೇ ಅರ್ಥ.

ಉಲ್ಲೇಖಗಳು

[ಬದಲಾಯಿಸಿ]
  1. Indian Kanoon. 'The Essential Services Maintenance Act, 1968.'
  2. The Hindu. 'RTC staff strike from midnight.'
  3. "The Hindu. 'Telangana: Chief Secretary told to engage JAC in talks.'". Archived from the original on 2012-05-01. Retrieved 2017-07-07.
  4. [http: //kannada.oneindia.com/news/karnataka/oneindia-explainer-what-is-the-essential-services-maintenance-act-esma-103911.html "ಎಸ್ಮಾ ಎಂದರೇನು? ಜಾರಿಯಾದರೆ ಪರಿಣಾಮ ಏನಾಗುತ್ತೆ? ,7 July 2017"]. kannada.oneindia.com. {{cite news}}: Check |url= value (help)


ಇದನ್ನೂ ನೋಡಿ

[ಬದಲಾಯಿಸಿ]