ಅಖಿಲ ಭಾರತ ಕ್ಯಾಥೊಲಿಕ್ ಯೂನಿವರ್ಸಿಟಿ ಫೆಡರೇಷನ್
ಗೋಚರ
ಅಖಿಲ ಭಾರತ ಕ್ಯಾಥೊಲಿಕ್ ಯೂನಿವರ್ಸಿಟಿ ಫೆಡರೇಷನ್
[ಬದಲಾಯಿಸಿ]- ಅಖಿಲ ಭಾರತ ಕ್ಯಾಥೊಲಿಕ್ ಯೂನಿವರ್ಸಿಟಿ ಫೆಡರೇಷನ್(AICUF) ಕ್ಯಾಥೊಲಿಕ್ ಯೂನಿವರ್ಸಿಟಿ ವಿದ್ಯಾರ್ಥಿಗಳ ಒಂದು ಸಂಸ್ಥೆ. ಈ ಚಳುವಳಿಯನ್ನು 1924 ರಲ್ಲಿ ತಿರುಚಿರಾಪಳ್ಳಿ ಸೇಂಟ್ ಜೋಸೆಫ್ಸ್ ಕಾಲೇಜಿನ ಫಾ. ಕರ್ಥಿ ಎಸ್ಜೆಯವರು ಆರಂಭಿಸಿದರು. ಪ್ರಸ್ತುತ ಇದು ಭಾರತದ 15 ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಸಂಸ್ಥೆ ಯು ಪ್ಯಾಕ್ಸ್ ರೋಮಾನ-ಎನ್ನುವ ಕ್ಯಾಥೊಲಿಕ್ ವೃತ್ತಿಪರರ ಅಂತಾರಾಷ್ಟ್ರೀಯ ಸಂಘದ ಮಾನ್ಯತೆಯನ್ನು ಹೊಂದಿದೆ.
ಇತಿಹಾಸ
[ಬದಲಾಯಿಸಿ]- ಫಾ|| ಪಿ ಕರ್ಥಿ ಎಸ್ಜೆಯವರ ಮಾರ್ಗದರ್ಶನದೊಂದಿಗೆ, ತ್ರಿಚಿಯ ಸೇಂಟ್ ಜೋಸೆಫ್ಸ್ ಕಾಲೇಜಿನ ವಿದ್ಯಾರ್ಥಿಗಳ ಒಂದು ಗುಂಪು ಆರಂಭಿಸಿದ ಕ್ಯಾಥೊಲಿಕ್ ಯಂಗ್ ಮೆನ್ಸ್ ಗಿಲ್ಡ್ ( CYMG ), ಕ್ಯಾಥೊಲಿಕ್ ಆಕ್ಷನ್' ಸಂಪ್ರದಾಯದ ಒಂದು ಸಂಸ್ಥೆ. ಈ ಸಂಘ ಕೆಳಗಿನ ಪ್ರಮುಖ ಗುರಿಗಳನ್ನು ಹೊಂದಿದೆ. ಅ) ಕ್ರಿಶ್ಚಿಯನ್ ಸಹೋದರತ್ವದ ಸ್ಪೂರ್ತಿ. ಬಿ) ಕ್ಯಾಥೊಲಿಕ್ ತತ್ವಗಳ ತಿಳುವಳಿಕೆ. ಸಿ) ಸಾಮಾಜಿಕ ಸಮಸ್ಯೆಗಳಿಗೆ ಕ್ಯಾಥೊಲಿಕ್ ತತ್ವಗಳ ಅನುವಹಿಸುವಿಕೆ ಕಲಿಕಾ ಕೇಂದ್ರಗಳು ಕಾರ್ಯವಾಹಿನಿಯ ಮುಖ್ಯ ಘಟಕಗಳಾಗಿದ್ದವು. ವಿದ್ಯಾರ್ಥಿ ಪತ್ರಿಕೆ ‘ರಾಲಿ’ ಪ್ರಾರಂಭದ ದಿನದಿಂದ ಸಂಘದ ಜೊತೆಗೂಡಿ ಕಾರ್ಯ ನಿರ್ವಹಿಸುತ್ತಿದೆ. ತರುವಾಯ ಸಂಸ್ಥೆ ಯು ಈ ಹೊನೊರ್ ಎಸ್ಜೆಯವರು 1915 ರಲ್ಲಿ ಫಾ|| ಸ್ಥಾಪಿಸಿದ MCYL (ಮಲಬಾರ್ ಕ್ಯಾಥೊಲಿಕ್ ಯೂತ್ ಲೀಗ್) ದೊಂದಿಗೆ ವಿಲೀನವಾಯಿತು. CYMG ಯು CYMF ( ಕ್ಯಾಥೊಲಿಕ್ ಯಂಗ್ ಮೆನ್ಸ್ ಫೆಡರೇಷನ್) ಎಂದು ಮರುನಾಮಕರಣ ಹೊಂದಿತು. 1937 ರಲ್ಲಿ CYMF ಭಾರತದ ದಕ್ಷಿಣದಲ್ಲಿ ವ್ಯಾಪಕವಾಗಿ ಬೆಳೆದು SICUF ಎಂದು ಮರುನಾಮಕರಣ ಪಡೆಯಿತು. 1949 ರಲ್ಲಿ SICUF AICUFಎಂಬ ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿ ಚಳುವಳಿ ಆಗಿ CBCI (ಭಾರತದ ಕ್ಯಾಥೊಲಿಕ್ ಬಿಶಪ್ ಕಾನ್ಫರೆನ್ಸ್) ಮೂಲಕ ಮಾನ್ಯತೆಯನ್ನು ಪಡೆಯಿತು. AICUF ಇಂಗ್ಲೀಷ್ ಪರ್ಯಾಯ ವಿದ್ಯಾರ್ಥಿ ಮಾಸಿಕ 'ರಾಲಿ' ಪ್ರಕಟಿಸುತ್ತದೆ. ಇದು ದೇಶದ ವಿವಿಧ ವಿಷಯಗಳ ಮೇಲೆ.ಪ್ರಸಕ್ತ ಶೈಕ್ಷಣಿಕ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸನ್ನಿವೇಶದಲ್ಲಿ ವ್ಯವಹರಿಸುತ್ತದೆ.
ಸದಸ್ಯರು
[ಬದಲಾಯಿಸಿ]- AICUF ಸದಸ್ಯತ್ವ ನಮ್ಮ ಸಂವಿಧಾನದಲ್ಲಿರುವ ಚಳವಳಿಯ ಆದರ್ಶಗಳನ್ನು ಹೊಂದಿರುವ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆತೆರೆದಿರುತ್ತದೆ . ಆದರೆ ಪ್ರತಿ ಸದಸ್ಯ ರಾಜ್ಯ ಸದಸ್ಯತ್ವದ ಬಗ್ಗೆ ತನ್ನದೇ ಆದ ನೀತಿಯನ್ನು ನಿರ್ಧರಿಸುವ ಸ್ವಾಯತ್ತ ಹೊಂದಿದೆ.
ಪ್ರತಿ ಸದಸ್ಯ ಘಟಕ ಎಲ್ಲಾ ನಿರ್ಧಾರ ಮಾಡುವ ಚಟುವಟಿಕೆಗಳಲ್ಲಿ ಭಾಗವಹಿಸಲು ಅರ್ಹತೆ ಇದೆ. ಆದರೆ ಹೊಸದಾಗಿ ರೂಪುಗೊಂಡ ಘಟಕಗಳನ್ನು ಹೊರತುಪಡಿಸಿ AICUF ರಲ್ಲಿ ಕೇವಲ ಒಂದು ವರ್ಷ ಮೇಲೆ ಸದಸ್ಯತ್ವ ಹೊಂದಿರುವವರನ್ನು ಕಚೇರಿ ಕೆಲಸಕ್ಕೆ ಆಯ್ಕೆ ಮಾಡಬಹುದು .
ರಚನೆ
[ಬದಲಾಯಿಸಿ]- AICUF ರಚನೆಯು ಸಾಮೂಹಿಕ ವಿದ್ಯಾರ್ಥಿಗಳ ಚಳುವಳಿ ಪಾತ್ರ ಖಚಿತಪಡಿಸಿಕೊಳ್ಳಲು ಸಜ್ಜಾಗಿ ಇರುತ್ತದೆ. ರಾಷ್ಟ್ರೀಯ, ರಾಜ್ಯ, ಪ್ರಾದೇಶಿಕ ಮತ್ತು ಘಟಕ ಮಟ್ಟದಲ್ಲಿ AICUF ಕಾರ್ಯ ನಿರ್ವಹಿಸುತ್ತಿದೆ. ರಾಜ್ಯವು AICUFನ ಪ್ರಾಥಮಿಕ ನಿರ್ಧಾರ ಮಾಡುವ ಸಂಸ್ಥೆಯಾಗಿರುತ್ತದೆ. ವಿವಿಧ ರಾಜ್ಯಗಳ ಸದಸ್ಯರು ರಾಷ್ಟ್ರೀಯ ಮಟ್ಟದಲ್ಲಿ ಒಕ್ಕೂಟದ ಸದಸ್ಯರು ಸೇರಿರುತ್ತಾರೆ.