ಅಖಿಲಭಾರತ ವಾಕ್ ಶ್ರವಣ ಸಂಸ್ಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಖಿಲಭಾರತ ವಾಕ್ಶ್ರವಣ ಸಂಸ್ಥೆ ಕರ್ನಾಟಕ ರಾಜ್ಯದ ಮೈಸೂರು ನಗರದಲ್ಲಿ ನೆಲೆಗೊಂಡಿರುವ ವಾಕ್ ಮತ್ತು ಶ್ರವಣ ದೋಷಗಳ ಅಖಿಲ ಭಾರತ ಮಟ್ಟದ ಚಿಕಿತ್ಸಾ ಕೇಂದ್ರ (ಆಯಿಶ್). ಮಾತಿನ ತೊಂದರೆ, ಕಿವುಡತನ ಇತ್ಯಾದಿ ನ್ಯೂನತೆಗಳನ್ನು ಸರಿಪಡಿಸುವುದು ಹಾಗೂ ಆ ಬಗ್ಗೆ ಶಿಕ್ಷಣ ನೀಡುವುದು, ಸಂಶೋಧನೆ ನಡೆಸುವುದು ಈ ಸಂಸ್ಥೆಯ ಮುಖ್ಯ ಕಾರ್ಯಗಳು. ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಈ ಸಂಸ್ಥೆ 1966ರ ಅಕ್ಟೋಬರ್ ತಿಂಗಳಿನಲ್ಲಿ ಒಂದು ಸ್ವಾಯತ್ತ ಸಂಸ್ಥೆಯಾಗಿ ರೂಪುಗೊಂಡಿತು. ಮೊದಲಿಗೆ ಮೈಸೂರು ನಗರದ ಝಾನ್ಸಿಲಕ್ಷೀಬಾಯಿ ರಸ್ತೆಯಲ್ಲಿರುವ ರಾಮಮಂದಿರ ಹಾಗೂ ಅನಂತರ ಮಹಾರಾಜಕಾಲೇಜು ಶತಮಾನೋತ್ಸವ ಭವನದಲ್ಲಿ ಕೆಲಸ ಮಾಡುತ್ತಿದ್ದ ಈ ಸಂಸ್ಥೆ 1970ರಲ್ಲಿ ಮಾನಸಗಂಗೋತ್ರಿ ಆವರಣಕ್ಕೆ ವರ್ಗಾವಣೆಗೊಂಡಿತು. ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಅಂದಿನ ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರು ಈ ಸಂಸ್ಥೆಗೆ ನೀಡಿದ್ದ 32 ಎಕರೆ ಜಮೀನಿಗೆ ಬದಲಾಗಿ ಮೈಸೂರು ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿಯಲ್ಲಿ 32 ಎಕರೆ ಜಮೀನು ನೀಡಿದ್ದರ ಫಲವಾಗಿ ಈ ಸಂಸ್ಥೆ ಇಲ್ಲಿ ರೂಪುಗೊಂಡಿತು. ವಾಕ್-ಶ್ರವಣ ದೋಷಗಳ ತಪಾಸಣೆ ಚಿಕಿತ್ಸೆಗಳ ಜೊತೆಗೆ ಈ ಸಂಸ್ಥೆ ಅಧ್ಯಯನ ಹಾಗೂ ಸಂಶೋಧನೆಗೆ ಸಹ ಹೆಚ್ಚಿನ ಒತ್ತು ನೀಡುತ್ತಿದೆ. ಹಾಗಾಗಿ ಈ ಸಂಸ್ಥೆಯಿಂದ ಇದುವರೆಗೆ ಎಂಟುನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಕ್-ಶ್ರವಣ ವಿe್ಞÁನದಲ್ಲಿ ಪದವಿ ಪಡೆದಿದ್ದಾರಲ್ಲದೆ ದೇಶ ವಿದೇಶಗಳಲ್ಲಿ ಸೇವೆಸಲ್ಲಿಸುತ್ತಿದ್ದಾರೆ (2003). ಭಾರತದಲ್ಲಿ ಬಹಳಷ್ಟು ಮಂದಿಯನ್ನು ಕಾಡುತ್ತಿರುವ ವಾಕ್-ಶ್ರವಣ ಸಮಸ್ಯೆಯ ಅಧ್ಯಯನ ಹಾಗೂ ಚಿಕಿತ್ಸೆ ನಡೆಸಲು ಅನುಕೂಲಿಸುವಂತಹ ಕೇಂದ್ರವೊಂದನ್ನು ಸ್ಥಾಪಿಸಲು 1963ರಲ್ಲಿ ಭಾರತ ಸರ್ಕಾರ ನಿರ್ಧರಿಸಿತು. ಸರ್ಕಾರದ ಕೋರಿಕೆಯ ಮೇರೆಗೆ ಅಮೆರಿಕದ ಪ್ರಖ್ಯಾತ ವಾಕ್ ಶ್ರವಣ ತಜ್ಞ ಡಾ.ಮಾರ್ಟಿನ್ ಎಫ್.ಪಾಮರ್ ಅವರು ಭಾರತಾದ್ಯಂತ ಪ್ರವಾಸ ಮಾಡಿ ವಾಕ್-ಶ್ರವಣ ಸಂಸ್ಥೆಯ ಸ್ಥಾಪನೆಗೆ ಮೈಸೂರು ನಗರ ಸೂಕ್ತವಾದ ಸ್ಥಳವೆಂದು ವರದಿ ಮಾಡಿದರು. ಹಾಗಾಗಿ ಈ ಸಂಸ್ಥೆ ಮೈಸೂರು ನಗರದಲ್ಲಿ ಸ್ಥಾಪನೆಯಾಗಲು ಕಾರಣವಾಯಿತು.

ಕಾರ್ಯವ್ಯಾಪ್ತಿ[ಬದಲಾಯಿಸಿ]

ಸಂಸ್ಥೆ ಈಗ ವಾಕ್-ಶ್ರವಣ ವಿe್ಞÁನದಲ್ಲಿ ಸ್ನಾತಕೋತ್ತರ ಪದವಿಯ ವರೆಗಿನ ಶಿಕ್ಷಣವನ್ನು ನೀಡುತ್ತಿದ್ದು ಇಲ್ಲಿ ಒಟ್ಟು ಆರು ವಿಭಾಗಗಳಿವೆ: ಶ್ರವಣ ವಿಜನ ವಿಭಾಗ (ಡಿಪಾರ್ಟ್ಮೆಂಟ್ ಆಫ್ ಆಡಿಯಾಲಜಿ), ಮನೋವಿe್ಞÁನ ವಿಭಾಗ (ಡಿಪಾರ್ಟ್ಮೆಂಟ್ ಆಫ್ ಸೈಕಾಲಜಿ), ವಿದ್ಯುನ್ಮಾನ ವಿಭಾಗ (ಡಿಪಾರ್ಟ್ಮೆಂಟ್ ಆಫ್ ಎಲೆಕ್ಟ್ರಾನಿಕ್ಸ್), ಕಿವಿ-ಮೂಗು-ಗಂಟಲು ವಿಭಾಗ (ಡಿಪಾರ್ಟ್ಮೆಂಟ್ ಆಫ್ ಇಎನ್ಟಿ), ವಾಕ್-ಭಾಷಾ ವಿಗಜ್ಞನವಿಭಾಗ (ಡಿಪಾರ್ಟ್ಮೆಂಟ್ ಆಫ್ ಸ್ಪೀಚ್ ಲಾಂಗ್ವೇಜ್ ಸೈನ್್ಸ), ವಾಕ್-ದೋಷನಿದಾನ ವಿಭಾಗ (ಡಿಪಾರ್ಟ್ಮೆಂಟ್ ಆಫ್ ಸ್ಪೀಚ್ ಪೆಥಾಲಜಿ) ಹಾಗೂ ಚಿಕಿತ್ಸಾ ಕೇಂದ್ರ (ಥೆರಪಿ ಕ್ಲಿನಿಕ್). ಸದ್ಯದಲ್ಲಿಯೇ ಸಲಕರಣೆ ಅಬಿsವೃದ್ಧಿ ವಿಭಾಗವನ್ನು (ಡಿಪಾರ್ಟ್ಮೆಂಟ್ ಆಫ್ ಮೆಟೀರಿಯಲ್ ಡೆವಲಪ್ಮೆಂಟ್) ತೆರೆಯಲಾಗುವುದು.

ಶ್ರವಣ ವಿಜ್ಞಾನ ವಿಭಾಗ[ಬದಲಾಯಿಸಿ]

ಈ ವಿಭಾಗದಲ್ಲಿ ವ್ಯಕ್ತಿಯೊಬ್ಬನ ಶ್ರವಣ ಶಕ್ತಿಯನ್ನೂ ಸಂಬಂದಿsಸಿದ ನ್ಯೂನತೆಯನ್ನೂ ಶಬ್ದರಹಿತ ಪರಿಸರದಲ್ಲಿ ಶ್ರವಣಶಕ್ತಿ ಮಾಪಕ ಯಂತ್ರದ ಸಹಾಯದಿಂದ ಅಳೆದು ಪತ್ತೆ ಹಚ್ಚಲಾಗುತ್ತದೆ. ಅನಂತರ ಸೂಕ್ತ ಚಿಕಿತ್ಸೆಯನ್ನು ಸೂಚಿಸಲಾಗುತ್ತದೆ. ಇತ್ತೀಚೆಗೆ 70ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ವಿಭಾಗ ಸಂಪೂರ್ಣ ಹವಾನಿಯಂತ್ರಿತ ಸೌಲಭ್ಯವುಳ್ಳ 16 ಕೊಠಡಿಗಳನ್ನೊಳಗೊಂಡಿದೆ. ಮಕ್ಕಳ ಪರೀಕ್ಷೆಗಾಗಿ ಪ್ರತ್ಯೇಕ ಕೊಠಡಿಗಳನ್ನು ಮೀಸಲಿಡಲಾಗಿದೆ. ಕಿವಿಯಚ್ಚು ವಿಭಾಗ: ಈ ವಿಭಾಗ ಶ್ರವಣವಿe್ಞÁನ ವಿಭಾಗದ ಒಂದು ಅಂಗ. ಶ್ರವಣೋಪಕರಣವನ್ನು ಪಡೆದ ವ್ಯಕ್ತಿ ಆ ಯಂತ್ರವನ್ನು ಬಳಸಬೇಕಾದರೆ, ಆ ವ್ಯಕ್ತಿಯ ಕಿವಿಗೆ ಸರಿಹೊಂದುವಂತಹ ಕಿವಿಯಚ್ಚು ಬೇಕೇಬೇಕು. ಎಲ್ಲರೂ ಬಳಸಬಹುದಾದ ಸಾಮಾನ್ಯ ಸಿದ್ಧ ಅಚ್ಚನ್ನು ತಯಾರಿಸಲು ಸಾಧ್ಯವಿಲ್ಲ. ಹಾಗಾಗಿ ಪ್ರತಿ ವ್ಯಕ್ತಿಯ ಕಿವಿಯ ಅಳತೆಯನ್ನು ತೆಗೆದುಕೊಂಡು ಆ ಅಳತೆಗೆ ತಕ್ಕಂತಹ ಅಚ್ಚನ್ನು ಈ ವಿಭಾಗದಲ್ಲಿ ತಯಾರಿಸಿಕೊಡಲಾಗುತ್ತದೆ. ಈಜುಗಾರರ ಕಿವಿಯೊಳಗೆ ನೀರು ಹೋಗದಂತೆ ತಡೆಯಲು ಕಿವಿಯ ಪ್ಲಗ್ಗಳನ್ನು ಇಲ್ಲಿ ತಯಾರಿಸಿಕೊಡಲಾಗುತ್ತದೆ. ಈ ಸಂಬಂಧವಾಗಿ ಕಿವಿಯಚ್ಚು ತಂತ್ರe್ಞÁನ (ಡಿಪೊïšಮಾ ಇನ್ ಹಿಯರಿಂಗ್ ಏಡ್ ಅಂಡ್ ಇಯರ್ಮೋಲ್್ಡ ಟೆಕ್ನಾಲಜಿ) ಎಂಬ ಒಂದು ವರ್ಷದ ಅವದಿsಯ ನೂತನ ಡಿಪ್ಲೊಮಾಶಿಕ್ಷಣವನ್ನು ಸಂಸ್ಥೆ ಪ್ರಾರಂಬಿsಸಿದೆ (2002).

ವಿದ್ಯುನ್ಮಾನ ವಿಭಾಗ[ಬದಲಾಯಿಸಿ]

ಈ ವಿಭಾಗ ವಿದ್ಯುತ್ ಹಾಗೂ ಎಲೆಕ್ಟ್ರಾನಿಕ್್ಸಗೆ ಸಂಬಂದಿsಸಿದ ವೈದ್ಯಕೀಯ ಚಿಕಿತ್ಸೋಪಕರಣಗಳ ದುರಸ್ತಿ ಹಾಗೂ ನಿರ್ವಹಣೆಯ ಕೆಲಸಗಳನ್ನು ನಿರ್ವಹಿಸುತ್ತವೆ. ಶ್ರವಣ ವಿe್ಞÁನ ವಿಭಾಗವು ನೀಡುವ ಮಾಹಿತಿಯನ್ನು ಅನುಸರಿಸಿ ಶ್ರವಣ ದೋಷವುಳ್ಳವರಿಗೆ ಶ್ರವಣೋಪಕರಣಗಳನ್ನು ಸಹ ಈ ವಿಭಾಗ ನೀಡುತ್ತದೆ. ಅಷ್ಟೇ ಅಲ್ಲ, ಅತ್ಯಂತ ಕಡಿಮೆ ವೆಚ್ಚದಲ್ಲಿ ಶ್ರವಣೋಪಕರಣಗಳ ದುರಸ್ತಿಯನ್ನೂ ಇಲ್ಲಿ ಮಾಡಲಾಗುತ್ತದೆ. ರೋಟರಿ, ಲಯನ್್ಸ ಇತ್ಯಾದಿ ಸ್ವಯಂ ಸೇವಾ ಸಂಸ್ಥೆಗಳ ನೆರವಿನೊಂದಿಗೆ ಶ್ರವಣೋಪಕರಣಗಳ ದುರಸ್ತಿಯ ಉಚಿತ ಶಿಬಿರ ಮತ್ತು ಶ್ರವಣೋಪಕರಣಗಳನ್ನು ಬಳಸುವವರಿಗಾಗಿ ಅದನ್ನು ಸಮರ್ಥವಾಗಿ ಬಳಸುವ ಹಾಗೂ ಸುಸ್ಥಿತಿಯಲ್ಲಿಟ್ಟುಕೊಳ್ಳಲು ಅನುಸರಿಸಬೇಕಾದ ಕ್ರಮಗಳ ಬಗೆಗೂ ಆಗಾಗ್ಗೆ ಶಿಬಿರಗಳನ್ನು ಏರ್ಪಡಿಸಲಾಗುತ್ತದೆ. ಸಂಸ್ಥೆಯ ಈ ವಿಭಾಗ ಕೆಳಕಂಡ ಉಪಕರಣಗಳನ್ನು ಸಂಪೂರ್ಣ ಸ್ವದೇಶಿ ವಸ್ತುಗಳನ್ನು ಬಳಸಿ ಅಬಿsವೃದ್ಧಿಪಡಿಸಿದೆ. (1) ಕಮ್ಯುನಿಕೇಟರ್ - ಮಾತೂ ಬಾರದ, ಕಿವಿಯೂ ಕೇಳದ ಹಾಗೂ ನಡೆದಾಡಲೂ ಆಗದಂತಹವರಿಗಾಗಿ ಈ ಉಪಕರಣಗಳನ್ನು ಸಿದ್ಧಪಡಿಸಲಾಗಿದೆ. ವ್ಯಕ್ತಿಯು ಈ ಯಂತ್ರದ ಸೂಚಿಗುಂಡಿಗಳನ್ನು ಒತ್ತುವುದರ ಮೂಲಕ ತನಗೆ ಏನು ಬೇಕು ಎಂಬುದನ್ನು ಇನ್ನೊಬ್ಬರಿಗೆ ತಿಳಿಸಬಹುದು. (2) ಕಂಪನ ತರಂಗೋಪಕರಣ - ಕಿವಿ ಕೇಳಿಸದವರಿಗಾಗಿ ರೂಪಿಸಿರುವ ಒಂದು ಅಲಾರಾಂ ವ್ಯವಸ್ಥೆ. ಮಲಗುವಾಗ ದಿಂಬಿನ ಅಡಿಯಲ್ಲಿ ಈ ಉಪಕರಣವನ್ನಿಟ್ಟು ಕೊಳ್ಳಬೇಕು. ಇದರ ಕಂಪನದ ಮೂಲಕÀ ವ್ಯಕ್ತಿಯು ನಿಗದಿತ ಸಮಯಕ್ಕೆ ಸರಿಯಾಗಿ ನಿದ್ದೆಯಿಂದ ಎದ್ದೇಳಲು ಸಾಧ್ಯವಾಗುತ್ತದೆ. (3) ಧ್ವನಿಸೂಚನಾ ದೀಪ -ಉಗ್ಗುವಿಕೆಯುಳ್ಳವರಿಗೆ ಚಿಕಿತ್ಸೆ ನೀಡುವ ಸಲುವಾಗಿ ಇದನ್ನು ಬಳಸಲಾಗುತ್ತದೆ. (4) ಅನುನಾಸಿಕ ಸೂಚಕ - ಒಬ್ಬ ವ್ಯಕ್ತಿ ಮೂಗಿನ ಸಹಾಯದಿಂದ ಉಚ್ಚರಿಸುವ ಅಕ್ಷರಗಳ ಪ್ರಮಾಣ ಎಷ್ಟು ಎಂಬುದನ್ನು ತೋರುವ ಉಪಕರಣವಿದು. (5) ಲೂಪ್ ಸಿಸ್ಟಂ - ಕಿವುಡು ದೋಷವುಳ್ಳ ಹಲವಾರು ಮಕ್ಕಳಿಗೆ ಒಮ್ಮೆಗೆ ಚಿಕಿತ್ಸಾತರಬೇತಿ ನೀಡಲು ಹಾಗೂ ಮಕ್ಕಳಿಗೆ ಶಾಲಾಪೂರ್ವ ತರಬೇತಿ ನೀಡಲು ಈ ಉಪಕರಣವನ್ನು ಬಳಸಲಾಗುತ್ತದೆ. (6) ಎಫ್.ಎಂ.ವ್ಯವಸ್ಥೆ - ಇದೊಂದು ಬಗೆಯ ಶ್ರವಣೋಪಕರಣ. ಶ್ರವಣ ದೋಷವಿರುವ ಮಕ್ಕಳ ತರಗತಿಗಳಲ್ಲಿ ಈ ಉಪಕರಣ ಬಹಳ ಉಪಯುಕ್ತ. ಈ ಶ್ರವಣೋಪಕರಣದ ವೈಶಿಷ್ಟ್ಯವೇನೆಂದರೆ ಹೊರಗಿನ ಅನಗತ್ಯ ಶಬ್ದಗಳು ಇದರಲ್ಲಿ ಕೇಳಿಸುವುದಿಲ್ಲ.

ವಾಕ್-ಭಾಷಾ ವಿಜ್ಞಾನ ವಿಭಾಗ[ಬದಲಾಯಿಸಿ]

ಈ ವಿಭಾಗದಲ್ಲಿ ನಿರರ್ಗಳ ಮಾತುಗಾರಿಕೆ, ಉಚ್ಚಾರಣೆ, ಧ್ವನಿಯ ಪ್ರಮಾಣ ಇತ್ಯಾದಿಗಳನ್ನು ಅಭ್ಯಸಿಸಲಾಗುತ್ತದೆ. ಭಾಷೆಯನ್ನು ಮಕ್ಕಳು ಹೇಗೆ ಕಲಿಯುತ್ತಾರೆ, ಸಾಮಾನ್ಯ ಮಕ್ಕಳು ಮಾತನಾಡಲು ಕಲಿಯುವ ರೀತಿ ನೀತಿಗಳೇನು ಎಂಬಿತ್ಯಾದಿಗಳಲ್ಲದೆ ಇತರ ಯಾವುದೇ ರೀತಿಯ ವಾಕ್-ಶ್ರವಣ ದೋಷಕ್ಕೆ ಒಳಗಾದ ಮಕ್ಕಳು ಮಾತು ಕಲಿಯುವ ಬಗೆಗೆ ಅಭ್ಯಸಿಸಿ ಅದಕ್ಕೆ ಪೂರಕ ಚಿಕಿತ್ಸೆ ನೀಡುವ ಮೂಲಕ ತೊಂದರೆಗಳನ್ನು ನಿವಾರಿಸಲಾಗುತ್ತದೆ. ಬಾಲ್ಯದಿಂದ ವೃದ್ಧಾಪ್ಯದವರೆಗೂ ಮನುಷ್ಯನೊಬ್ಬನಲ್ಲಿ ಉಂಟಾಗುವ ಧ್ವನಿಯ ಬದಲಾವಣೆಗಳ ಬಗೆಗೆ ಈ ವಿಭಾಗದಲ್ಲಿ ಸಂಶೋಧನೆ ನಡೆಸಲಾಗುತ್ತಿದೆ. ಸಂಗೀತಗಾರರು, ಭಾಷಣಕಾರರು, ನಟರು, ಪತ್ರಕರ್ತರು, ಉಪನ್ಯಾಸಕರು ಮೊದಲಾದವರು ಧ್ವನಿಯನ್ನು ಹೆಚ್ಚಾಗಿ ಬಳಸುವ ಜನ. ಇಂಥವರ ಧ್ವನಿಪೆಟ್ಟಿಗೆ ಹಾನಿಗೊಳಗಾಗುವ ಸಂಭವವಿರುತ್ತದೆ. ಇಂತಹ ದೋಷಗಳಿಗೂ ಈ ವಿಭಾಗದಲ್ಲಿ ಚಿಕಿತ್ಸೆ ಲಭ್ಯ. ವ್ಯಕ್ತಿಯೊಬ್ಬನ ಧ್ವನಿಯನ್ನು ವಿಶ್ಲೇಷಿಸಿ ಪತ್ತೆಹಚ್ಚುವ ಅಪರಾದsಪತ್ತೆ ಕೆಲಸದಲ್ಲಿಯೂ ಈ ವಿಭಾಗ ಪೊಲೀಸರಿಗೆ ನೆರವಾಗುತ್ತದೆ.

ವಾಕ್ದೋಷನಿದಾನ ವಿಭಾಗ[ಬದಲಾಯಿಸಿ]

ಇದು ಸಂಸ್ಥೆಯ ಮೊದಲ ಹಾಗೂ ಅತಿ ಮುಖ್ಯವಾದ ವಿಭಾಗವಾಗಿದೆ. ಶಿಕ್ಷಣ (ಪದವಿ ಹಾಗೂ ಸ್ನಾತಕೋತ್ತರ ಪದವಿ) ರೋಗತಪಾಸಣೆ ಹಾಗೂ ಚಿಕಿತ್ಸೆ, ವಾಕ್ ದೋಷಕ್ಕೆ ಸಂಬಂದಿsಸಿದ ಸಂಶೋಧನ ಕಾರ್ಯಗಳು, ಪೋಷಕರಿಗೆ ಸಲಹೆ ಸೂಚನೆಗಳು, ಸಾರ್ವಜನಿಕರಲ್ಲಿ ಅರಿವುಂಟುಮಾಡುವ ಕಾರ್ಯಕ್ರಮಗಳು ಇತ್ಯಾದಿಗಳನ್ನು ಈ ವಿಭಾಗ ಹಮ್ಮಿಕೊಂಡಿದೆ. ಜೊತೆಗೆ, ಮಕ್ಕಳಲ್ಲಿ ಮತ್ತು ವಂiÀÄಸ್ಕರಲ್ಲಿ ಬರುವ ಅನೇಕ ವಿಧದ ಮಾತಿನ ತೊಂದರೆಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡುತ್ತದೆ. ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡುಬರುವ ಕುಂಠಿತಗೊಂಡ ಮಾತಿನ ಬೆಳೆವಣಿಗೆ, ಬುದ್ಧಿಮಾಂದ್ಯತೆ, ಮೆದುಳಿನ ತೊಂದರೆಗಳು, ಹಗಲುಕನಸು ಕಾಣುವಿಕೆ (ಆಟಿಸಂ), ಶ್ರವಣ ದೋಷ, ಮಾತಿನ ಅಂಗಗಳಾದ ಅಂಗುಳು, ನಾಲಗೆ, ಹಲ್ಲು ಇತ್ಯಾದಿಗಳಲ್ಲಿನ ನ್ಯೂನತೆಯಿಂದ ಧ್ವನಿತೊಂದರೆಗಳುಂಟಾಗ ಬಹುದು. ಉಗ್ಗುವಿಕೆ, ಅರ್ಥಮಾಡಿಕೊಳ್ಳುವುದರಲ್ಲಿ ತೊಂದರೆ, ಶಾಲಾಮಕ್ಕಳಲ್ಲಿ ಕಲಿಕೆಯ ತೊಂದರೆ ಇತ್ಯಾದಿಗಳಿಗೆ ಈ ವಿಭಾಗದಲ್ಲಿ ಚಿಕಿತ್ಸೆ ದೊರೆಯುತ್ತದೆ. ವಂiÀÄಸ್ಕರಲ್ಲಿ ಪಾಶರ್್ವವಾಯುವಿನಿಂದ ಉಂಟಾಗುವ ವಾಕ್ ಸ್ತಂಭನ (ಮಾತು ನಿಲ್ಲುವಿಕೆ), ನರರೋಗ ಸಂಬಂಧದಿಂದುಂಟಾಗುವ ಧ್ವನಿ ಹಾಗೂ ಉಚ್ಚಾರಣಾ ದೋಷಗಳು, ಧ್ವನಿಯ ತೊಂದರೆ, ಉಗ್ಗು, (ತೊದಲು) ಇತ್ಯಾದಿಗಳಿಗೂ ಇಲ್ಲಿ ಚಿಕಿತ್ಸೆಯುಂಟು.

ಮನೋವಿಜ್ಞಾನ ವಿಭಾಗ[ಬದಲಾಯಿಸಿ]

ವಾಕ್-ಶ್ರವಣ ದೋಷಗಳಲ್ಲಿ ಮಾನಸಿಕ ತೊಂದರೆಯೂ ತಳುಕು ಹಾಕಿಕೊಂಡಿರುವ ಸಾಧ್ಯತೆ ಉಂಟು. ಉದಾ: ತೀವ್ರ ಮಾನಸಿಕ ಆಘಾತದಿಂದ ಮಾತು ನಿಲ್ಲುವುದು. ಇಂತಹ ಸಂದರ್ಭಗಳಲ್ಲಿ ವಾಕ್ ಶ್ರವಣ ದೋಷಗಳುಳ್ಳ ವ್ಯಕ್ತಿಗಳಲ್ಲಿರಬಹುದಾದ ಮಾನಸಿಕ ತೊದರೆಗಳನ್ನು ಪತ್ತೆ ಹಚ್ಚಿ ತಕ್ಕ ಚಿಕಿತ್ಸೆಯನ್ನು ಈ ವಿಭಾಗದಲ್ಲಿ ನೀಡಲಾಗುತ್ತದೆ. ತರಗತಿಯಲ್ಲಿ ಹಿಂದೆ ಬಿದ್ದಿರುವ ವಿದ್ಯಾರ್ಥಿ, ವಯಸ್ಸಿಗೆ ಮೀರಿದ ಬುದ್ಧಿಯಿಂದಾಗುವ ತೊಂದರೆ, ಒಂದು ವಯಸ್ಸಿನಲ್ಲಿ ಇರಬೇಕಾದ ಬುದ್ಧಿಮಟ್ಟ ಇಲ್ಲದಿರುವಿಕೆ, ಬುದ್ಧಿಮಾಂದ್ಯತೆ ಇಂತಹ ತೊಂದರೆಗಳನ್ನು ಪರೀಕ್ಷಿಸಿ ಇಲ್ಲಿ ಪರಿಹಾರವನ್ನು ಸೂಚಿಸಲಾಗುವುದು.

ಕಿವಿಮೂಗುಗಂಟಲು ವಿಭಾಗ[ಬದಲಾಯಿಸಿ]

ಈ ವಿಭಾಗದಲ್ಲಿ ಕಿವಿ-ಮೂಗು ಹಾಗೂ ಗಂಟಲುಗಳಿಗೆ ಸಂಬಂದಿsಸಿದ ರೋಗಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡಲಾಗುತ್ತದೆ. ಕಿವಿಯೊಳಗೆ ಗುಯ್ ಎಂದು ಸದ್ದಾಗುವುದು, ಕಿವಿನೋವು, ಗುಗ್ಗೆಕಟ್ಟುವುದು ಇತ್ಯಾದಿ ತೊಂದರೆಗಳನ್ನು ಇಲ್ಲಿ ನಿವಾರಿಸಲಾಗುವುದು. ಸಂಸ್ಥೆಯ ಈ ವಿಭಾಗ ನಗರದ ಕೃಷ್ಣರಾಜೇಂದ್ರ ಆಸ್ಪತ್ರೆಯಲ್ಲಿ ತನ್ನದೇ ಆದ ಹೊರರೋಗಿಗಳ ವಿಭಾಗವನ್ನು ಹೊಂದಿದ್ದು ಅಲ್ಲಿಯೂ ರೋಗಿಗಳನ್ನು ಪರೀಕ್ಷಿಸಲಾಗುತ್ತದೆ. ಕಿವಿಗೆ ಸಂಬಂದಿsಸಿದಂತೆ ಶಸ್ತ್ರ ಚಿಕಿತ್ಸೆಯ ಅಗತ್ಯ ಕಂಡುಬಂದಲ್ಲಿ ಅದನ್ನೂ ನೆರವೇರಿಸಲಾಗುತ್ತದೆ.

ಚಿಕಿತ್ಸಾ ಕೇಂದ್ರ[ಬದಲಾಯಿಸಿ]

ಸಂಸ್ಥೆಯ ಆವರಣದಲ್ಲಿ ವಿವಿಧೆದ್ದೇಶ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಿಲಾಗಿದೆ. ಇಲ್ಲಿ ಒಂದೇ ಸೂರಿನಡಿಯಲ್ಲಿ ರೋಗ ನಿರ್ಣಯ ಘಟಕ ಹಾಗೂ ಪುನರ್ವಸತಿ ಘಟಕಗಳ ಸೌಲಭ್ಯ ಲಭ್ಯವಿದೆ. ದಿನವೊಂದಕ್ಕೆ 600ಕ್ಕೂ ಹೆಚ್ಚು ರೋಗಿಗಳು ಬರುವ ಸಾಧ್ಯತೆಯಿದ್ದು ನರ ಸಂಬಂಧ ನ್ಯೂನತೆಗಳನ್ನು ಸರಿಪಡಿಸುವ ಘಟಕವನ್ನೂ ಇಲ್ಲಿ ಸ್ಥಾಪಿಸಿಲಾಗಿದೆ. ಇದುವರೆಗೆ ಸು.2 ಲಕ್ಷ ಜನರಿಗೆ ಚಿಕಿತ್ಸೆ ನೀಡಲಾಗಿದೆ. ಈ ಕಟ್ಟಡದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ 189 ಕೊಠಡಿಗಳಿವೆ. ವಾಕ್ ಧ್ವನಿ ಮತ್ತು ಭಾಷಾ ನ್ಯೂನತೆಗಳಿಗೆ ವಿವಿಧ ರೀತಿಯ ಪರೀಕ್ಷೆಗಳನ್ನು ನಡೆಸಿ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಲಾಗುತ್ತದೆ. ಅಗತ್ಯವಿದ್ದಾಗಲೆಲ್ಲ ಹೊರಗಿನ ತಜ್ಞವೈದ್ಯರ ನೆರವನ್ನು ಸಹ ಪಡೆಯಲಾಗುತ್ತದೆ. ಪಿಡಿಯಾಟ್ರಿಷಿಯನ್, ಪ್ಲಾಸ್ಟಿಕ್ಸರ್ಜನ್, ಪ್ರೋಸ್ತೋಡೆನ್ಟಿಸ್ಟ್, ನ್ಯೂರಾಲಜಿಸ್ಟ್, ಫೋನೋಸರ್ಜನ್, ಆಕ್ಯುಪೆಷನಲ್ ಥೆರಪಿಸ್ಟ್, ಪಿsಜಿಯೋಥೆರಪಿಸ್ಟ್ ಇತ್ಯಾದಿ ತಜ್ಞರು ನಿಯಮಿತ ದಿನಗಳ ನಿಗದಿತ ವೇಳೆಗಳಲ್ಲಿ ಸಂಸ್ಥೆಗೆ ಭೇಟಿ ನೀಡುತ್ತಾರೆ.

ಪಿಓಡಿ ಮತ್ತು ಸಿಡಿ[ಬದಲಾಯಿಸಿ]

ಶ್ರವಣ ದೋಷ ಹಾಗೂ ವಾಕ್ ಭಾಷಾ ದೋಷಗಳನ್ನು ತಡೆಗಟ್ಟುವ ಯೋಜನೆಯೊಂದು ಸಂಸ್ಥೆಯಲ್ಲಿದೆ. ಇದಕ್ಕೆ ಪ್ರಿವೆನ್ಷನ್ ಆಫ್ ಡೆಫ್ನೆಸ್ ಅಂಡ್ ಕಮ್ಯುನಿಕೇಷನ್ ಡಿಸಾರ್ಡರ್್ಸ ಎಂದು ಹೆಸರು. ಇದರಲ್ಲಿ ಮೂರು ಹಂತಗಳಿವೆ (1) ಹೆಚ್ಚು ಅಪಾಯಕರವಾದ ಆರೋಗ್ಯದ ತೊಂದರೆಯೊದಗುವ ಶ್ರವಣ ಹಾಗೂ ವಾಕ್ ಭಾಷಾ ದೋಷಗಳನ್ನು ತಡೆಗಟ್ಟುವುದು (2)ಆರಂಭದಲ್ಲಿಯೇ ದೋಷಗಳನ್ನು ಗುರುತಿಸಿ ಸಲಹೆ ಸೂಚನೆಗಳನ್ನು ಕೊಡುವುದು, (3) ಪುನರ್ವಸತಿ ಕಲ್ಪಿಸುವುದು. ಈ ಯೋಜನೆಯನ್ನು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಕೂಡ ಹಮ್ಮಿಕೊಳ್ಳಲಾಗಿದೆ.

ಆಲ್ಟರ್ನೇಟ್ ಅಂಡ್ ಆಗ್ಮಂಟೇಟಿವ್ ಕಮ್ಯುನಿಕೇಷನ್ ಡಿವೈಸಸ್ (ಎ.ಎ.ಸಿ.)[ಬದಲಾಯಿಸಿ]

ಕೆಲವೊಮ್ಮೆ ಕೆಲವರಿಗೆ ಕಾರಣಾಂತರಗಳಿಂದ ಮಾತು ಕಲಿಯಲು ಸಾಧ್ಯವಾಗುವುದಿಲ್ಲ. ಅಂತಹವರು ತಮ್ಮ ಅಬಿsಪ್ರಾಯವನ್ನು ಇತÀರರಿಗೆ ತಿಳಿಸುವುದು ಹೇಗೆ? ಅದಕ್ಕೆ ಹಲವಾರು ಬಗೆಯ ಉಪಕರಣಗಳಿವೆ. ಇವಕ್ಕೆ ಆಲ್ಟರ್ನೇಟ್ ಅಂಡ್ ಆಗ್ಮಂಟೇಟಿವ್ ಕಮ್ಯೂನಿಕೇಷನ್ ಡಿವೈಸಸ್ (ಸಂಕ್ಷಿಪ್ತವಾಗಿ ಎ.ಎ.ಸಿ) ಎಂದು ಕರೆಯಲಾಗುತ್ತದೆ. ಈ ಉಪಕರಣಗಳಲ್ಲಿ ಗುಂಡಿಯನ್ನೊತ್ತಿಯೋ ಅಥವಾ ಇನ್ನಾವುದೇ ವಿಧಾನದಿಂದಲೋ ವ್ಯಕ್ತಿಯೊಬ್ಬ ತನ್ನ ಅಬಿsಪ್ರಾಯವನ್ನು ವ್ಯಕ್ತಪಡಿಸಲು ಸಾಧ್ಯ.

ಡಿಜಿಟಲ್ ಗ್ರಂಥಾಲಯ[ಬದಲಾಯಿಸಿ]

12 ಸಾವಿರ ಗ್ರಂಥಗಳು, ಅಸಂಖ್ಯಾತ ಪತ್ರಿಕೆಗಳು, 78 ಸಾವಿರಕ್ಕೂ ಹೆಚ್ಚು ಪಠ್ಯಪುಸ್ತಕಗಳು, ಸಂಶೋಧನ ಪತ್ರಿಕೆಗಳು, ಸಿಡಿ ಮತ್ತು ವೀಡಿಯೋ ಕೆಸೆಟ್ಗಳನ್ನೂಳಗೊಂಡ ಪೂರ್ಣ ಪ್ರಮಾಣದಲ್ಲಿ ಗಣಕೀಕೃತಗೊಂಡಿರುವ ಅತ್ಯಮೂಲ್ಯ ಗ್ರಂಥಭಂಡಾರ ಸಂಸ್ಥೆಯ ಆವರಣದ ಸುಂದರ ಕಟ್ಟಡದಲ್ಲಿದೆ. ಕೇಂಬ್ರಿಜ್ ವಿಶ್ವ ವಿದ್ಯಾಲಯದ ಗ್ರಂಥಾಲಯದ ಮಾದರಿಯಲ್ಲಿ ನಿರ್ಮಿಸಲಾಗಿರುವ ಈ ಗ್ರಂಥಾಲಯದಲ್ಲಿ ಸೂಕ್ಷ್ಮತರಂಗ ಅಂತರ್ಜಾಲ ವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳು ವಿದ್ಯಾರ್ಥಿನಿಲಯದಲ್ಲಿ ಕುಳಿತೇ ಗ್ರಂಥಾಲಯದಿಂದ ಮಾಹಿತಿ ಪಡೆದುಕೊಳ್ಳುವ ವ್ಯವಸ್ಥೆಯಿದೆ.

ಮೌನವನ್ನು ಮಾತಾಗಿಸುವ ತರಬೇತಿ[ಬದಲಾಯಿಸಿ]

ಶಬ್ದ ಮಾಲಿನ್ಯದ ಹೆಚ್ಚಳದಿಂದಾಗಿ ನಗರ ಪ್ರದೇಶಗಳಲ್ಲಿ ಶ್ರವಣದೋಷವುಳ್ಳವರ ಸಂಖ್ಯೆ ಹೆಚ್ಚುತ್ತಿದೆ. ಅನಕ್ಷರತೆಯಿಂದಾಗಿ ಹಳ್ಳಿಗಳಲ್ಲಿ ವಾಕ್-ಶ್ರವಣ ದೋಷಗಳ ಬಗೆಗೆ ಅರಿವು ಕಡಿಮೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯು ಹಲವು ಸಂಸ್ಥೆಗಳ ಸಹಯೋಗದೊಡನೆ ಗ್ರಾಮೀಣ ಪ್ರದೇಶಗಳಲ್ಲಿ ಶಿಬಿರಗಳನ್ನೇರ್ಪಡಿಸಿ ಈ ವಿಚಾರದಲ್ಲಿ ಅರಿವು ಹಾಗೂ ಚಿಕಿತ್ಸೆ ನೀಡುತ್ತಿದೆ. ಭಾರತೀಯ ಪುನರ್ವಸತಿ ಮಂಡÀಲಿಯ ಸಹಕಾರದೊಂದಿಗೆ ಅರಿವು ಹಾಗೂ ತರಬೇತಿಯ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಮತ್ತು ಮುಖ್ಯೋಪಾಧ್ಯಾಯರು ಗಳಿಗೆ, ಅಲ್ಲದೆ ಪ್ರಾಥಮಿಕ ಆರೋಗ್ಯಕೇಂದ್ರಗಳ ವೈದ್ಯಾದಿsಕಾರಿಗಳಿಗೆ ಆಗಾಗ ಕಾರ್ಯಕ್ರಮ ಗಳನ್ನು ನಡೆಸಿ, ವಾಕ್ ದೋಷ, ಬುದ್ಧಿಮಾಂದ್ಯತೆಗಳನ್ನು ಪ್ರಾಥಮಿಕ ಹಂತದಲ್ಲೇ ಗುರುತಿಸುವಿಕೆ, ರಕ್ತಸಂಬಂಧದಲ್ಲಿ ಮದುವೆಯಾದಾಗ ಹುಟ್ಟುವ ಮಕ್ಕಳಲ್ಲಿ ಉಂಟಾಗುವ ಅಂಗವೈಕಲ್ಯ ಇತ್ಯಾದಿ ವಿಚಾರಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ವಾಕ್ ಶ್ರವಣಕ್ಕೆ ಸಂಬಂದಿsಸಿದಂತೆ ಯಾರು ಯಾವ ವಿಚಾರದಲ್ಲಿ ತಿಳಿಯಬೇಕೆಂದು ಅಪೇಕ್ಷಿಸುತ್ತಾರೋ ಆ ವಿಷಯದಲ್ಲಿ ಅವರಿಗೆ ತರಬೇತಿ ಕೊಡುವ ಕಾರ್ಯಕ್ರಮವನ್ನೂ ಸಂಸ್ಥೆ ಹಮ್ಮಿಕೊಂಡಿದೆ. ಈ ತರಬೇತಿ ಕಾರ್ಯಕ್ರಮಗಳಲ್ಲಿ ಕನಿಷ್ಠ 5 ಜನ, ಗರಿಷ್ಠ 15 ಜನ ಭಾಗವಹಿಸಬಹುದು. ಸಂಸ್ಥೆಯು ಆಗಿಂದಾಗ್ಗೆ ಅನೇಕ ಬಗೆಯ ಕಾರ್ಯಾಗಾರಗಳನ್ನು ನಡೆಸುತ್ತಿದೆ.

ಶೈಕ್ಷಣಿಕ ವಿಭಾಗ[ಬದಲಾಯಿಸಿ]

ಪದವಿ ಪರೀಕ್ಷೆಗಳನ್ನು ಮೈಸೂರು ವಿಶ್ವವಿದ್ಯಾನಿಲಯದ ಮಾನ್ಯತೆಯೊಂದಿಗೆ ನಡೆಸಲಾಗುತ್ತಿದೆ. ಉಳಿದಂತೆ ಈ ಸಂಸ್ಥೆ ಸ್ವಾಯತ್ತತೆ ಪಡೆದಿದೆ. ವಾಕ್-ಶ್ರವಣ ವಿe್ಞÁನದ ಅಧ್ಯಯನಕ್ಕಾಗಿ ಬಿ.ಎಸ್ಸಿ ಪದವಿ ಹಾಗೂ ಎಂ.ಎಸ್ಸಿ. ಸ್ನಾತಕೋತ್ತರ ಪದವಿ ಶಿಕ್ಷಣಗಳು ನಡೆಯುತ್ತಿದೆ. ಈ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪಡೆಯುವ ಅವಕಾಶವಿದೆ. ಪಿಎಚ್.ಡಿ. ಪದವಿಗೆ ಸಂಶೋಧನೆ ನಡೆಸುವವರಿಗೂ ವಿದ್ಯಾರ್ಥಿ ವೇತನ ಸೌಲಭ್ಯ ಕಲ್ಪಿಸಿದೆ. 2003ನೆಯ ವರ್ಷದಿಂದ ಶ್ರವಣದೋಷ ವಿಷಯದ ಬಗ್ಗೆ ಬಿ.ಎಸ್ಸಿ.ಇಡಿ. ಎಂಬ ಪದವಿ ಶಿಕ್ಷಣವನ್ನು ಸಂಸ್ಥೆ ಆರಂಬಿsಸಲಿದೆ. ಈಗ ಈ ಸಂಸ್ಥೆಯಲ್ಲಿ ದೇಶೀಯ ವಿದ್ಯಾರ್ಥಿಗಳ ಜೊತೆಗೆ ಮಲೇಷಿಯ, ಮಾರಿಷಸ್, ನೇಪಾಳ, ಮಯನ್ಮಾರ್, ಕುವೈತ್, ಯು.ಎ.ಇ. ಆಫ್ಘಾನಿಸ್ತಾನ ಮೊದಲಾದ ದೇಶಗಳ ವಿದೇಶೀಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಲಿಯುತ್ತಿದ್ದಾರೆ.

ಸಂಶೋಧನೆ[ಬದಲಾಯಿಸಿ]

ಇತ್ತೀಚಿನ ದಿನಗಳಲ್ಲಿ ಈ ಸಂಸ್ಥೆ ಸಂಶೋಧನೆಗೆ ಹೆಚ್ಚಿನ ಪ್ರಾಮುಖ್ಯ ನೀಡುತ್ತಿದೆ. ದಿನ ಕಳೆದಂತೆ ವಾಕ್-ಶ್ರವಣ ಚಿಕಿತ್ಸೆಯಲ್ಲಿ ಹೊಸ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಬೇಕೆಂಬ ಹೆಬ್ಬಯಕೆಯಿಂದ ಇತರ ಸಂಸ್ಥೆಗಳು ಮತ್ತು ಸರ್ಕಾರದ ನೆರವಿನಿಂದ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಶಬ್ದಮಾಲಿನ್ಯದಿಂದ ಹೆಚ್ಚುತ್ತಿರುವ ಶ್ರವಣ ದೋಷಗಳ ನಿವಾರಣೆಯೇ ಈ ಸಂಶೋಧನೆಗಳ ಗುರಿಯಾಗಿದೆ. ಸಂಶೋಧನೆ ಗಳಿಗಾಗಿಯೇ ಸಂಸ್ಥೆಯಲ್ಲಿ ಒಂದು ಸಂಶೋಧನ ಸಹಾಯ ನಿದಿsಯನ್ನು (ಆಯಿಷ್ ರಿಸರ್ಚ್ ಫಂಡ್) ಸ್ಥಾಪಿಸಿದೆ. ಸಂಸ್ಥೆಯು ಜರ್ನಲ್ ಆಫ್ ದಿ ಆಲ್ ಇಂಡಿಯ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ಎಂಬ ವಾರ್ಷಿಕವನ್ನು ಪ್ರಕಟಿಸುತ್ತಿದೆ. ಇದರಲ್ಲಿ ಮಾತು, ಭಾಷೆ ಹಾಗೂ ಶ್ರವಣ ವಿಚಾರಗಳಿಗೆ ಸಂಬಂದಿsಸಿದ ಸಂಶೋಧನಾತ್ಮಕ ಲೇಖನಗಳಿಗೆ ಆದ್ಯತೆ ನೀಡಲಾಗುತ್ತದೆ. ಜನ ಸಾಮಾನ್ಯರಿಗೆ ಈ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ತಿಳಿವಳಿಕೆ ನೀಡುವ ಸಲುವಾಗಿ ಅನೇಕ ಭಾರತೀಯ ಭಾಷೆಗಳಲ್ಲಿ ಹಲವಾರು ಕರಪತ್ರ, ಮಾಹಿತಿ ಪುಸ್ತಕಗಳನ್ನೂ ಪ್ರಕಟಿಸಲಾಗುತ್ತಿದೆ.

ಶಾಲಾಪುರ್ವ ತರಬೇತಿ[ಬದಲಾಯಿಸಿ]

ಮಗುವೊಂದರ ಬೌದ್ಧಿಕ ಬೆಳೆವಣಿಗೆ 2ರಿಂದ 6 ವರ್ಷಗಳೊಳಗೆ ಆರಂಭವಾಗುವುದೆಂದು ಸಂಶೋಧನ ವರದಿ ಹೇಳುತ್ತದೆ. ಈ ಕಾರಣದಿಂದ ಸಂವಹನ ಸಮಸ್ಯೆಯಿಂದ ಮಕ್ಕಳಿಗೆ ಪುನರ್ವಸತಿ ಕಲ್ಪಿಸುವ ಸಲುವಾಗಿ ಶಾಲಾ ಪೂರ್ವ ತರಬೇತಿ ಯೋಜನೆಯನ್ನು ಈ ಸಂಸ್ಥೆ ಆರಂಬಿsಸಿದೆ. ಇಂಗ್ಲಿಷ್, ಮಲೆಯಾಳಂ, ಹಿಂದಿಯೂ ಸೇರಿ ಒಟ್ಟು ಆರು ಭಾಷೆಗಳಲ್ಲಿ ಇಲ್ಲಿ ತರಬೇತಿ ನೀಡಲಾಗುತ್ತದೆ. ಭಾರತದಲ್ಲಿ ಪ್ರತಿಶತ ಮೂವರಿಗೆ ಮಾತಿನ ಅಥವಾ ಶ್ರವಣ ದೋಷವಿದೆ. ಇವರಲ್ಲಿ ಹೆಚ್ಚಿನ ಜನರು ಹಳ್ಳಿಗಳಲ್ಲಿ ವಾಸಮಾಡುತ್ತಾರೆ. ಅವರಿಗೆ ಹೊಸ ಜೀವನವನ್ನು ಕಲ್ಪಿಸಲು ಪಣತೊಟ್ಟಿರುವ ಈ ಸಂಸ್ಥೆ ರಾಜ್ಯದ ಹೊರಗೂ ಶಿಬಿರಗಳನ್ನು ಏರ್ಪಡಿಸಿ, ಗ್ರಾಮೀಣ ಜನರಿಗೂ ಈ ಸೌಲಭ್ಯ ಒದಗುವಂತೆ ಮಾಡಿದೆ. ಅಗತ್ಯವಿದ್ದವರಿಗೆ ಶಿಬಿರಗಳಲ್ಲಿ ಶ್ರವÀಣೋಪಕರಣಗಳನ್ನು ಉಚಿತವಾಗಿ ಸ್ಥಳದಲ್ಲೇ ವಿತರಿಸಲಾಗುತ್ತಿದೆ. ವಸತಿ ಸೌಕರ್ಯ: ಹೊರ ಊರು, ಹೊರ ರಾಜ್ಯಗಳಿಂದ ಚಿಕಿತ್ಸೆಗಾಗಿ ಬರುವ ರೋಗಿಗಳು ಉಳಿದುಕೊಳ್ಳಲು ಸೂಕ್ತ ವಸತಿ ಸೌಕರ್ಯವೂ ಸಂಸ್ಥೆಯಲ್ಲಿದೆ. ಇತ್ತೀಚೆಗೆ ದೇಶದ ಬೇರೆ ಬೇರೆ ಸ್ಥಳಗಳಲ್ಲಿ ಪ್ರಾದೇಶಿಕ ಕೇಂದ್ರಗಳನ್ನು ತೆರೆಯುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಸಂಸ್ಥೆಯ ಆಡಳಿತವು ನಿರ್ದೇಶಕರ ನೇರ ಉಸ್ತುವಾರಿಯಲ್ಲಿ ನಡೆಯುತ್ತಿದ್ದು ಅಧ್ಯಯನ ಮಂಡಳಿ ಹಾಗೂ ವಿವಿಧ ಸಮಿತಿಗಳು ಈ ಆಡಳಿತಕ್ಕೆ ಸಹಕಾರಿಯಾಗಿ ಸ್ಥಾಪಿತವಾಗಿವೆ.