ವಿಷಯಕ್ಕೆ ಹೋಗು

ಅಕ್ಕಲಕರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಕ್ಕಲಕರೆ, ಸ್ಪ್ಯಾನಿಷ್ ಕ್ಯಾಮೊಮೈಲ್, ಮೌಂಟ್ ಅಟ್ಲಾಸ್ ಡೈಸಿ ಡೆಯ್ಸಿ ಕುಟುಂಬವಾದ ಆಸ್ಟೆರೇಸಿಯಲ್ಲಿನ ಒಂದು ಜಾತಿಯ ಹೂಬಿಡುವ ಸಸ್ಯ.[೧] ಇದು ಮೆಡಿಟರೇನಿಯನ್ ಯುರೋಪ್ ಮತ್ತು ಉತ್ತರ ಆಫ್ರಿಕಾದ ಕೆಲವು ಭಾಗಗಳಿಗೆ ಸ್ಥಳೀಯವಾಗಿದೆ, ಆದರೆ ಯುರೋಪ್, ಭಾರತ ಮತ್ತು ಪಾಕಿಸ್ತಾನದ ಇತರ ಭಾಗಗಳಲ್ಲಿಯೂ ಸಹ ದೇಶೀಕರಿಸಲಾಗಿದೆ.[೨] ಈ ಮೂಲಿಕೆಯಂಥ ದೀರ್ಘಕಾಲಿಕ ಸಸ್ಯವು ಆವಾಸಸ್ಥಾನ ಮತ್ತು ನೋಟದಲ್ಲಿ ಕ್ಯಾಮೊಮೈಲ್ ಪ್ರಭೇದಗಳನ್ನು ಹೋಲುತ್ತದೆ.

ಭಾರತೀಯ ಸಾಂಪ್ರದಾಯಿಕ ಔಷಧ[ಬದಲಾಯಿಸಿ]

ಆಯುರ್ವೇದ (ಪ್ರಾಚೀನ ಭಾರತೀಯ ಔಷಧ ಪದ್ಧತಿ) ಮತ್ತು ಸಿದ್ಧ (ಭಾರತದ ದಕ್ಷಿಣ ರಾಜ್ಯವಾದ ತಮಿಳುನಾಡಿನ ವೈದ್ಯಕೀಯ ಪದ್ಧತಿ) ಈ ಸಸ್ಯದ ಬೇರಿಗೆ ಉಪಯೋಗಗಳನ್ನು ಹೊಂದಿವೆ ಮತ್ತು ಇದನ್ನು ಶತಮಾನಗಳಿಂದ ಔಷಧಿಯಾಗಿ ಬಳಸಲಾಗುತ್ತಿದೆ.  ಇದನ್ನು ಹಿಂದಿಯಲ್ಲಿ ಅಕ್ಕಲ್‍ಕಾರಾ, ಮರಾಠಿಯಲ್ಲಿ ಅಕ್ಕಲ್‍ಕಾಢಾ, ಮತ್ತು ಅಕ್ಕರಕಾರಂ (ತಮಿಳು : அக்கரகாரம்) ಎಂದು ಕರೆಯಲಾಗುತ್ತದೆ. ಗುಣಿ ಹೊರತೆಗೆಯುವಿಕೆ (ತಮಿಳು : குழி எண்ணெய்) ಎಂಬ ವಿಧಾನದಿಂದ ಒಂದು ರೀತಿಯ ಎಣ್ಣೆಯನ್ನು ತಯಾರಿಸಲಾಗುತ್ತದೆ. 

ಅನಾಸೈಕ್ಲಸ್ ಪೈರೆಥ್ರಮ್‍ನ ಸಾರಗಳು ಇಲಿಗಳಲ್ಲಿ ಸಂವರ್ಧಕ ಚಟುವಟಿಕೆಯನ್ನು ಹೊಂದಿವೆ ಮತ್ತು ಪ್ರಾಣಿಗಳ ಮಾದರಿಯಲ್ಲಿ ಟೆಸ್ಟೋಸ್ಟೆರಾನ್ ಅನ್ನು ಹೆಚ್ಚಿಸುತ್ತವೆ.[೩][೪]

ಉಲ್ಲೇಖಗಳು[ಬದಲಾಯಿಸಿ]

  1. Brickell, Christopher, ed. (2008). The Royal Horticultural Society A-Z Encyclopedia of Garden Plants. United Kingdom: Dorling Kindersley. ISBN 9781405332965.
  2. "Anacyclus pyrethrum". Germplasm Resources Information Network (GRIN). Agricultural Research Service (ARS), United States Department of Agriculture (USDA).
  3. "Scientia Pharmaceutica". Archived from the original on 2011-10-03. Retrieved 2011-07-31.
  4. Sharma, Vikas; Boonen, Jente; Spiegeleer, Bart De; Dixit, V. K. (January 2013). "Androgenic and Spermatogenic Activity of Alkylamide-Rich Ethanol Solution Extract of DC". Phytotherapy Research. 27 (1): 99–106. doi:10.1002/ptr.4697. PMID 22473789.

ಹೊರಗಿನ ಕೊಂಡಿಗಳು[ಬದಲಾಯಿಸಿ]