ಅಂಬಾರ ಗುಡ್ಡ
ಗೋಚರ
ಅಂಬಾರ ಗುಡ್ಡವು ಕೊಲ್ಲೂರು-ನಿಟ್ಟೂರು-ಭಟ್ಕಳ ಮಾರ್ಗದಲ್ಲಿ ಸುಮಾರು ೪೦ ಕಿ.ಮೀಗಳ ನಂತರ ಸಿಗುತ್ತದೆ. ಇದು ಚಾರಣಾಸಕ್ತರಿಗೆ ಬಹು ಪ್ರಶಸ್ತವಾದ ಜಾಗ. ಕೊಲ್ಲೂರಿನಿಂದ ಭಟ್ಕಳಕ್ಕೆ ಹೋಗುವಾಗ ಎಡಬದಿಗೆ ಅಂಬಾರಗುಡ್ಡಕ್ಕೆ ಹೋಗುವ ದಾರಿ ಎಂಬ ನಾಮ ಫಲಕ ಕಾಣುತ್ತದೆ. ಇಲ್ಲಿಂದ ಅಂಬಾರ ಗುಡ್ಡಕ್ಕೆ ಹೋಗಬಹುದು. ಗುಡ್ಡದ ಮೇಲಿನಿಂದ ಮೂಕಾಂಬಿಕಾ ವನ್ಯಜೀವಿ ವಲಯ, ಕೊಡಚಾದ್ರಿ ಬೆಟ್ಟ ಹಾಗು ಕೋಗಾರ್ ಘಾಟಿ ದೃಶ್ಯಗಳು ಕಾಣಸಿಗುತ್ತವೆ.