ವಿಷಯಕ್ಕೆ ಹೋಗು

ಅಂತರಜಾಲ ಆಧಾರಿತ ಕರೆ ಪ್ರೋಟೋಕಾಲ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
1140E VoIP Phone

ಅಂತರಜಾಲ ಆಧಾರಿತ ಕರೆ ಪ್ರೋಟೋಕಾಲ್‌ (VoIP ) ಎಂಬುದು ಅಂತರಜಾಲ ಅಥವಾ ಇನ್ನಿತರ ಅಂಶ-ವ್ಯವಸ್ಥಿತ ಜಾಲಗಳಂತಹಾ IP ಜಾಲಗಳ ಮೂಲಕ ಕರೆ ಸಂವಹನದ ಬಟವಾಡೆಗಾಗಿ ಬಳಸುವ ಸಂವಹನ ತಂತ್ರಜ್ಞಾನಗಳಿಗೆ ಬಳಸುವ ಸಾಮಾನ್ಯೀಕರಿಸಿದ ಪದವಾಗಿದೆ. ಆಗಾಗ್ಗೆ ಬಳಸಲಾಗುವ ಇನ್ನಿತರ ಪದಗಳೆಂದರೆ VoIPಗೆ ಸಮಾನವಾದ ಹಾಗೂ IP ದೂರವಾಣಿ ವ್ಯವಸ್ಥೆ , ಅಂತರಜಾಲ ದೂರವಾಣಿ ವ್ಯವಸ್ಥೆ , ಬ್ರಾಡ್‌ಬ್ಯಾಂಡ್‌ (VoBB) ಆಧಾರಿತ ಕರೆ , ಬ್ರಾಡ್‌ಬ್ಯಾಂಡ್‌ ದೂರವಾಣಿ ವ್ಯವಸ್ಥೆ , ಮತ್ತು ಬ್ರಾಡ್‌ಬ್ಯಾಂಡ್‌ ದೂರವಾಣಿ .

ಅಂತರಜಾಲ ದೂರವಾಣಿ ವ್ಯವಸ್ಥೆಯೆಂದರೆ — ಕರೆ, ಫ್ಯಾಸಿಮಿಲಿ/ಫ್ಯಾಕ್ಸ್‌, ಮತ್ತು/ಅಥವಾ ಧ್ವನಿ-ಸಂದೇಶ ಅನ್ವಯಗಳಂತಹಾ ಸಂವಹನಾ ಸೇವೆಗಳನ್ನು ಸಾರ್ವಜನಿಕ ಅಂಶವ್ಯವಸ್ಥಿತ ದೂರವಾಣಿ ಜಾಲ (PSTN)ದ ಬದಲಿಗೆ ಅಂತರಜಾಲದ ಮೂಲಕ ರವಾನಿಸುವುದು. ಅಂತರಜಾಲ ದೂರವಾಣಿ ಕರೆಯನ್ನು ಆರಂಭಿಸಲು ಕೈಗೊಳ್ಳಬೇಕಾದ ಮೂಲಭೂತ ಹೆಜ್ಜೆಗಳೆಂದರೆ ಅನಲಾಗ್‌ ಕರೆ ಸಂಜ್ಞೆಗಳನ್ನು ಅಂತರಜಾಲದ ಮೂಲಕ ಸಂವಹನವಾಗಲು ಅನುವಾಗುವಂತೆ ಅಂಕಿಕ/ಅಂಕೀಯ/ಸಾಂಖ್ಯಿಕ ಸ್ವರೂಪಕ್ಕೆ ಪರಿವರ್ತಿಸಿ, ನಂತರ ಸಂಜ್ಞೆಯನ್ನು ಅಂತರಜಾಲ ಪ್ರೋಟೋಕಾಲ್ (IP) ದತ್ತಾಂಶಗಳಾಗಿ ಸಂಕೋ/ಸಂಕು)ಚಿಸಿ/ಪರಿವರ್ತಿಸಿರಬೇಕು; ಸ್ವೀಕರಿಸುವ ತುದಿಯಲ್ಲಿ ಇದರ ವಿರುದ್ಧ ಪ್ರಕ್ರಿಯೆಯನ್ನು ಮಾಡಲಾಗುತ್ತದೆ.[] VoIP ವ್ಯವಸ್ಥೆಗಳು ಕರೆಗಳನ್ನು ಸ್ಥಾಪಿಸಲು ಹಾಗೂ ಕೊನೆಗೊಳಿಸಲು ಜೊತೆಗೆ ಮಾತುಗಳನ್ನು ಶ್ರವ್ಯ ಸಂಕೇತಕಗಳನ್ನಾಗಿ ಮಾರ್ಪಡಿಸಿ IP ಜಾಲದ ಮೂಲಕ ಸಾಂಖ್ಯಿಕ ಧ್ವನಿಸಂಕೇತವನ್ನು ಧ್ವನಿವಾಹಿನಿಯ ಮೂಲಕ ಪ್ರವಹಿಸಲು ಅನುವಾಗುವಂತೆ ಅವಧಿ ನಿಯಂತ್ರಣ ಪ್ರೋಟೋಕಾಲ್‌ಗಳನ್ನು ಬಳಸುತ್ತವೆ. ಸಂಕೇತಕಗಳ ಬಳಕೆಯು VoIPಯ ವಿವಿಧ ಸಜ್ಜುಗೊಳಿಕೆಗಳಲ್ಲಿ ವ್ಯತ್ಯಾಸವಾಗಿರುತ್ತದೆ (ಹಾಗೂ ಅನೇಕ ರೀತಿಯ ಸಂಕೇತಕಗಳನ್ನು ಬಳಸಲಾಗುತ್ತದೆ); ಕೆಲ ಸಜ್ಜುಗೊಳಿಕೆಗಳು ನ್ಯಾರೋಬ್ಯಾಂಡ್‌ನ ಮೇಲೆ ಆಧಾರಿತವಾಗಿದ್ದು ಸಂಕುಚಿತ ಧ್ವನಿಗಳನ್ನು ಬಳಸಿದರೆ ಉಳಿದವು, ಹೆಚ್ಚಿನ ಯಥಾರ್ಥ ಗುಣಮಟ್ಟದ ಸ್ಟೀರಿಯೋ ಸಂಕೇತಕಗಳನ್ನು ಬೆಂಬಲಿಸುತ್ತವೆ.

Cisco VoIP ದೂರವಾಣಿ

ಇತಿಹಾಸ

[ಬದಲಾಯಿಸಿ]
  • ೧೯೭೪ — ಇನ್‌ಸ್ಟಿಟ್ಯೂಟ್‌ ಆಫ್‌ ಎಲೆಕ್ಟ್ರಿಕಲ್‌ ಅಂಡ್‌ ಎಲೆಕ್ಟ್ರಾನಿಕ್‌‌ ಎಂಜಿನೀರ್ಸ್‌ (IEEE) ಸಂಸ್ಥೆಯು "ಎ ಪ್ರೋಟೋಕಾಲ್ ಫಾರ್‌ ಪ್ಯಾಕೆಟ್‌ ನೆಟ್‌ವರ್ಕ್‌ ಇಂಟರ್‌ಕನೆಕ್ಷನ್‌" ಎಂಬ ಶೀರ್ಷಿಕೆಯುಳ್ಳ ಲೇಖನ/ನಿಬಂಧವನ್ನು ಪ್ರಕಟಿಸಿತು[]
  • 1981 — RFC 791ರಲ್ಲಿ IPv4ನ ಗುಣಲಕ್ಷಣಗಳನ್ನು ವಿವರಿಸಲಾಯಿತು.
  • 1985 — ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನವು NSFNETನ ರಚನೆಯನ್ನು ಆರಂಭಿಸಿತು.[]
  • 1995 — VocalTec ಪ್ರಥಮ ವಾಣಿಜ್ಯ ಅಂತರಜಾಲ ದೂರವಾಣಿ ತಂತ್ರಾಂಶವನ್ನು ಬಿಡುಗಡೆ ಮಾಡಿತು.[][]
  • 1996 —
    • ITU-T ಸಂಸ್ಥೆಯು H.323 ಮಾನಕ[] ದ ಅಂತರಜಾಲೀಯ ಪ್ರೋಟೋಕಾಲ್ ಜಾಲಗಳ ಮೂಲಕ ಕರೆ ಸಂವಹನದ ಪ್ರಸಾರ ಮತ್ತು ಸಂಕೇತೀಕರಣ ವ್ಯವಸ್ಥೆಯ ಮಾನಕಗಳ ಅಭಿವೃದ್ಧಿಯನ್ನು ಆರಂಭಿಸಿತು.
    • U.S. ದೂರಸಂಪರ್ಕ ಕಂಪೆನಿಗಳು ಅಂತರಜಾಲ ದೂರವಾಣಿ ತಂತ್ರಜ್ಞಾನವನ್ನು ನಿಷೇಧಿಸಲು U.S. ಶಾಸನಸಭೆಯಲ್ಲಿ ಅಹವಾಲು ಸಲ್ಲಿಸಿದವು.[]
  • 1997 — 1998ರಲ್ಲಿ[] ತಾವೇ ಟಂಕಿಸಿದ ಸಾಫ್ಟ್‌ಸ್ವಿಚ್ ಎಂಬ ಹೆಸರಿನ ಮೊದಲ ಸ್ವನಿರ್ಮಾಣದ ಸಾಧನ ನಿರ್ಮಾಣವನ್ನು ಹಂತ ೩ ಆರಂಭಿಸಿತು.
  • 1999 —
    • ಸೆಷನ್‌ ಇನಿಷಿಯೇಷನ್‌ ಪ್ರೋಟೋಕಾಲ್ (SIP) ಶಿಷ್ಟತೆಗಳನ್ನು RFC 2543 ಮೂಲಕ ಬಿಡುಗಡೆ ಮಾಡಲಾಯಿತು.[]
    • ಡಿಜಿಯಂನ ಮಾರ್ಕ್‌ ಸ್ಪೆನ್ಸರ್‌ರು ಮೊದಲ ಖಾಸಗಿ ಶಾಖೆ ವಿನಿಮಯ ಕೇಂದ್ರ (PBX)ದ ಮುಕ್ತ ಮೂಲ ತಂತ್ರಾಂಶ(ಆಸ್ಟೆರಿಸ್ಕ್‌‌)ವನ್ನು ಅಭಿವೃದ್ಧಿಪಡಿಸಿದರು.[೧೦]
  • 2004 — ವಾಣಿಜ್ಯ VoIP ಸೇವಾ ಪೂರೈಕೆದಾರರು ತ್ವರಿತ ವೃದ್ಧಿ ಹೊಂದಿದರು.[೧೧]
  • 2005 — OpenSER (ನಂತರ ಕಮೈಲಿಯೋ ಮತ್ತು OpenSIPS) SIP ಪ್ರಾಕ್ಸಿ ಪರಿಚಾರಕ ತಂತ್ರಾಂಶವು SIP ಎಕ್ಸ್‌ಪ್ರೆಸ್‌ ರೌಟರ್‌ನಿಂದ ಕವಲೊಡೆಯಿತು.
  • 2006 — FreeSWITCH ಮುಕ್ತ ಮೂಲ ತಂತ್ರಾಂಶವು ಬಿಡುಗಡೆಯಾಯಿತು.

VoIP ತಂತ್ರಜ್ಞಾನಗಳು ಮತ್ತು ಅಳವಡಿಕೆಗಳು

[ಬದಲಾಯಿಸಿ]

IP ಆಧಾರಿತ ಕರೆ ಸಂವಹನವನ್ನು ಖಾಸಗಿ ಸ್ವಾಮ್ಯದ ಹಾಗೂ ಮುಕ್ತ ಪ್ರೋಟೋಕಾಲ್‌ಗಳು ಮತ್ತು ಮಾನಕಗಳೆರಡರಲ್ಲೂ ಅನೇಕ ರೀತಿಯಲ್ಲಿ ಕಾರ್ಯಗತಗೊಳಿಸಲಾಗಿದೆ. ಅಂತರಜಾಲ ಆಧಾರಿತ ಕರೆ ಪ್ರೋಟೋಕಾಲ್ಅನ್ನು ಕಾರ್ಯಗತಗೊಳಿಸಲು ಬಳಸುವ ತಂತ್ರಜ್ಞಾನಗಳ ಉದಾಹರಣೆಯಲ್ಲಿ ಈ ಕೆಳಗಿನವು ಸೇರಿವೆ :

  • H.323
  • IP ಬಹುಮಾಧ್ಯಮ ಉಪವ್ಯವಸ್ಥೆ (IMS)
  • ಸೆಷನ್‌/ಅವಧಿ ಉಪಕ್ರಮ ಪ್ರೋಟೋಕಾಲ್ (SIP)
  • ರಿಯಲ್‌-ಟೈಂ ರವಾನೆ ಪ್ರೋಟೋಕಾಲ್ (RTP)

ಪ್ರಮುಖ ಖಾಸಗಿ ಸ್ವಾಮ್ಯದ ಕಾರ್ಯಗತಗೊಳಿಸುವಿಕೆಯೆಂದರೆ Skype ಜಾಲವಾಗಿದೆ. ನಿರ್ದಿಷ್ಟ ಕಾರ್ಯಗತಗೊಳಿಸುವಿಕೆಗಳ ಇನ್ನಿತರ ಉದಾಹರಣೆಗಳು ಹಾಗೂ ಅವುಗಳ ನಡುವಿನ ಹೋಲಿಕೆಯನ್ನು VoIP ತಂತ್ರಾಂಶಗಳ ಹೋಲಿಕೆ ವಿಭಾಗದಲ್ಲಿ ನೋಡಬಹುದು.

ಅನುಸರಣೆ/ಅಳವಡಿಕೆ

[ಬದಲಾಯಿಸಿ]

ಗ್ರಾಹಕ ಮಾರುಕಟ್ಟೆ

[ಬದಲಾಯಿಸಿ]
ಗೃಹ ಜಾಲದಲ್ಲಿ VoIP ಸಂಯೋಜಕದ ಹೊಂದಿಸುವಿಕೆಯ ಉದಾಹರಣೆ

2004[೧೧] ರಲ್ಲಿ ಆರಂಭವಾದ ಪ್ರಮುಖ ಬೆಳವಣಿಗೆಯೆಂದರೆ ಬ್ರಾಡ್‌ಬ್ಯಾಂಡ್‌ ಅಂತರಜಾಲ ಸೇವಾ ಲಭ್ಯತೆಗಳ ಮೂಲಕ, PSTN ಮೂಲಕ ಮಾಡುವಂತೆಯೇ ಚಂದಾದಾರರು ಕರೆಗಳನ್ನು ಮಾಡಬಹುದಾದ ಹಾಗೂ ಸ್ವೀಕರಿಸಬಹುದಾದಂತಹಾ ಬೃಹತ್-ಮಾರುಕಟ್ಟೆ VoIP ಸೇವೆಗಳ ಪರಿಚಯ. ಸಂಪೂರ್ಣ ದೂರವಾಣಿ ಸೇವೆ ನೀಡುವ VoIP ದೂರವಾಣಿ ಕಂಪೆನಿಗಳು ಒಳಬರುವ ಹಾಗೂ ಹೊರಹೋಗುವ ಕರೆಗಳ ಸೌಲಭ್ಯವನ್ನು ನೇರ ಸ್ಥಳೀಯ ಡಯಲಿಂಗ್‌ ಮೂಲಕ ನೀಡುತ್ತವೆ. ಅನೇಕ ಕಂಪೆನಿಗಳು ಸ್ಥಳೀಯ ಕರೆಗಳನ್ನು ಮತ್ತು ಕೆಲ ಇತರ ರಾಷ್ಟ್ರಗಳಿಗೂ ಸಹಾ ಅಪರಿಮಿತ ಕರೆಗಳನ್ನು ನೀಡುವುದರೊಂದಿಗೆ ಸೇವಾಪೂರೈಕೆದಾರರ ಯಾವುದೇ ಚಂದಾದಾರರೊಂದಿಗೆ ಉಚಿತ ಕರೆಗಳನ್ನು ಸಗಟು ಮಾಸಿಕ ಶುಲ್ಕ ವಿಧಿಸಿ ನೀಡುತ್ತವೆ.[೧೨] ಈ ಸೇವೆಗಳು ಸಾಂಪ್ರದಾಯಿಕ POTSಗೆ ಹೆಚ್ಚು ಕಡಿಮೆ ಸಮಾನವಾದ ವಿಶಾಲ ಶ್ರೇಣಿಯ ಸೌಲಭ್ಯಗಳನ್ನು ನೀಡುತ್ತವೆ. VoIP ಸೇವಾ ಪೂರೈಕೆದಾರರೊಂದಿಗೆ ಸಂಪರ್ಕ ಹೊಂದಲು ಬಳಸುವ ಮೂರು ಸಾಮಾನ್ಯ ವಿಧಾನಗಳೆಂದರೆ :

VoIP ಸೇವಾದಾರರಿಗೆ ಅನಲಾಗ್‌ ದೂರವಾಣಿಯನ್ನು ಸಂಪರ್ಕಿಸಲು ಬಳಸುವ ಸಾಮಾನ್ಯ ಅನಲಾಗ್‌ ದೂರವಾಣಿ ಸಂಯೋಜಕ (ATA)
  • ಅನಲಾಗ್‌ ದೂರವಾಣಿ ಸಂಯೋಜಕವೊಂದನ್ನು (ATA) IP ಜಾಲ (ಬ್ರಾಡ್‌ಬ್ಯಾಂಡ್‌ ಸಂಪರ್ಕದಂತಹಾ) ಮತ್ತು ಬಳಕೆಯಲ್ಲಿರುವ ದೂರವಾಣಿ ಕೊಂಡಿಗಳ ನಡುವೆ ಜೋಡಿಸಿ ಮನೆಯ ಇತರೆಡೆಯಲ್ಲಿನ ದೂರವಾಣಿ ಕೊಂಡಿಗಳಲ್ಲಿ ಸಂಪರ್ಕಿಸಿದಾಗ PSTN ಪೂರೈಕೆದಾರರ ಸೇವೆಯಲ್ಲವೆಂದು ಗುರುತಿಸಲಾಗದಂತೆ ಮಾಡಬಹುದಾಗಿದೆ. ಒಂದು ಪ್ರದೇಶಕ್ಕೆ ಸೀಮಿತವಾದಂತಹ ಈ ಸೇವೆಗಳನ್ನು ಬ್ರಾಡ್‌ಬ್ಯಾಂಡ್‌ ಅಂತರಜಾಲ ಪೂರೈಕೆದಾರರಾದ ಕೇಬಲ್‌ ಕಂಪೆನಿಗಳು ಮತ್ತು ದೂರವಾಣಿ ಕಂಪೆನಿಗಳು ಅಗ್ಗದ ಸಗಟು-ದರ ಸಾಂಪ್ರದಾಯಿಕ ದೂರವಾಣಿ ಸೇವೆಯಂತೆ ನೀಡುತ್ತವೆ.
  • ಮೀಸಲು VoIP ದೂರವಾಣಿಗಳಲ್ಲಿ ಗಣಕದ ಸಹಾಯವಿಲ್ಲದೆಯೇ VoIP ಕರೆಗಳ ಬಳಕೆ ವ್ಯವಸ್ಥೆಯಿರುತ್ತದೆ. ಗಣಕದ ಅಗತ್ಯವಿಲ್ಲದೆಯೇ ಅವು ನೇರವಾಗಿ IP ಜಾಲಕ್ಕೆ (Wi-Fi ಅಥವಾ Ethernetನಂತಹಾ ತಂತ್ರಜ್ಞಾನಗಳನ್ನು ಬಳಸಿಕೊಂಡು) ಸಂಪರ್ಕಿತಗೊಳ್ಳುತ್ತವೆ. PSTNಗೆ ಸಂಪರ್ಕಗೊಳ್ಳಲು ಅವುಗಳಿಗೆ VoIP ಸೇವಾದಾರರಿಂದ ಪ್ರತ್ಯೇಕ ಸೇವೆಯ ಅಗತ್ಯವಿರುತ್ತದೆ; ಹಾಗಾಗಿಯೇ ಬಹಳಷ್ಟು ಮಂದಿ ಅವುಗಳನ್ನು ಪೂರ್ವಪಾವತಿ ಸೇವಾ ಯೋಜನೆಗಳೊಂದಿಗೆ ಬಳಸುತ್ತಾರೆ.
  • ಸಾಫ್ಟ್‌ಫೋನ್‌ ಎಂಬುದು (ಅಂತರಜಾಲ ದೂರವಾಣಿ ಅಥವಾ ಸಾಂಖ್ಯಿಕ ದೂರವಾಣಿ ಎಂದೂ ಹೆಸರಾದ) ನಿಗದಿತ ಯಂತ್ರಾಂಶದ ಸಹಾಯವಿಲ್ಲದೆಯೇ ಗಣಕದ ಮೂಲಕ VoIP ಕರೆ ಮಾಡಲು ಅನುವು ಮಾಡಿಕೊಡುವ ತಂತ್ರಾಂಶವಾಗಿದೆ.

PSTN ಮತ್ತು ಸಂಚಾರಿ ದೂರವಾಣಿ ಜಾಲ ಸೇವಾದಾರರು

[ಬದಲಾಯಿಸಿ]

ದೂರಸಂಪರ್ಕ ಸೇವಾದಾರರು ಸಂಪರ್ಕ ಕೇಂದ್ರಗಳಿಗೆ ಸಂಪರ್ಕಿಸಲು ಹಾಗೂ ಇತರೆ ದೂರವಾಣಿ ವ್ಯವಸ್ಥೆ ಜಾಲ ಸೇವಾದಾರರುಗಳ ನಡುವೆ ಪರಸ್ಪರ ಸಂಪರ್ಕ ಏರ್ಪಡಿಸಲು ಮೀಸಲು ಮತ್ತು ಸಾರ್ವಜನಿಕ IP ಜಾಲಗಳ ಮೂಲಕ VoIP ದೂರವಾಣಿ ವ್ಯವಸ್ಥೆಯನ್ನು ಹೊಂದುವುದು ಅತ್ಯಂತ ಸಾಮಾನ್ಯವಾಗುತ್ತಿದೆ; ಇದನ್ನು ಕೆಲವು ಬಾರಿ "IP ಮರುಸೆಳೆತ/ಬ್ಯಾಕ್‌ಹಾಲ್‌" ಎಂದು ಕರೆಯಲಾಗುತ್ತದೆ.[೧೩][೧೪] ಅನೇಕ ದೂರಸಂಪರ್ಕ ಕಂಪೆನಿಗಳು ಶುದ್ಧ VoIP ಆಧಾರವ್ಯವಸ್ಥೆಯನ್ನು ಬಳಸಿಕೊಂಡು ಅಂತರಜಾಲ ತಂತ್ರಜ್ಞಾನಗಳನ್ನು ಸಂಚಾರಿ ದೂರವಾಣಿ ಲೋಕದೊಂದಿಗೆ ಬೆಸೆಯುವ, IP ಬಹುಮಾಧ್ಯಮ ಉಪವ್ಯವಸ್ಥೆ (IMS)ಗಳ ಬಗ್ಗೆ ಗಮನ ಹರಿಸುತ್ತಿವೆ. ವೆಬ್‌, ಮಿಂಚಂಚೆ, ತ್ವರಿತ ಸಂದೇಶ, ಸಮಕ್ಷಮ/ಲಭ್ಯತೆ, ಮತ್ತು ವಿಡಿಯೋ ಕಾನ್‌ಫರೆನ್ಸಿಂಗ್‌ಗಳಂತಹಾ ಅಂತರಜಾಲ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಪ್ರಸ್ತುತ ವ್ಯವಸ್ಥೆಗಳನ್ನು ಸುಧಾರಿಸಲು ಅವಕಾಶ ನೀಡುತ್ತದೆ. ಈ ವ್ಯವಸ್ಥೆಯು ಪ್ರಸ್ತುತ VoIP ವ್ಯವಸ್ಥೆಗಳನ್ನು ಸಾಂಪ್ರದಾಯಿಕ PSTN ಮತ್ತು ಸಂಚಾರಿ ದೂರವಾಣಿ ಜಾಲಗಳೊಂದಿಗೆ ಸಂವಹನ ಹೊಂದಲು ಅವಕಾಶ ನೀಡುತ್ತದೆ. ಸಂಚಾರಿ ದೂರವಾಣಿ ಜಾಲ ಮತ್ತು Wi-Fi ಜಾಲಗಳ ನಡುವೆ ಸರಳ ಹಸ್ತಾಂತರಕ್ಕೆ ಅನುವು ಮಾಡಿಕೊಡುವ, "ದ್ವಿ ವಿಧಾನದ" ದೂರವಾಣಿ ಸಾಧನಗಳು VoIPಯನ್ನು ಮತ್ತಷ್ಟು ಜನಪ್ರಿಯಗೊಳ್ಳಲು ಸಹಾಯ ಮಾಡಲಿವೆ.[೧೫] NEC N900iLನಂತಹಾ, Nokia Eಸರಣಿಯ ಮತ್ತು ಇನ್ನೂ ಅನೇಕ Wi-Fi ಸಶಕ್ತ ಸಂಚಾರಿ ದೂರವಾಣಿಗಳು ಸಾಧನತಂತ್ರಾಂಶದಲ್ಲಿ ಅಂತರ್ಗತವಾದ SIP ಗ್ರಾಹಕಾಂಶಗಳನ್ನು ಹೊಂದಿವೆ. ಅಂತಹಾ ಗ್ರಾಹಕಾಂಶಗಳು ಸಂಚಾರಿ ದೂರವಾಣಿ ಜಾಲಗಳಿಂದ ಪ್ರತ್ಯೇಕವಾಗಿ ಕಾರ್ಯಾಚರಿಸುತ್ತವೆ (ಕೆಲ ಪೂರೈಕೆದಾರರು ಅನುದಾನಿತ ಸಾಧನಗಳಿಂದ ಗ್ರಾಹಕಾಂಶವನ್ನು ಪ್ರತ್ಯೇಕಿಸಿರುತ್ತವೆ). Vodafoneನಂತಹಾ ಪೂರೈಕೆದಾರರು ಸಕ್ರಿಯವಾಗಿ ತಮ್ಮ ಜಾಲದಲ್ಲಿ VoIP ದಟ್ಟಣೆಯನ್ನು ನಿಯಂತ್ರಿಸುತ್ತಾರೆ.[೧೬] ಅಂತಿಮವಾಗಿ UK ಉಚ್ಚನ್ಯಾಯಾಲಯದಲ್ಲಿ VoIP ವಾಹಕ ಸಂಸ್ಥೆಯ ಪರವಾಗಿ ತೀರ್ಪಿತ್ತ T-Mobile ಮತ್ತು Truphone ಸಂಸ್ಥೆಗಳ ನಡುವಿನ ಮೊಕದ್ದಮೆಯಲ್ಲಿನಂತೆ T-Mobileನಂತಹಾ ಇತರೆ ಸಂಸ್ಥೆಗಳು VoIP-ಸಶಕ್ತ ಜಾಲಗಳೊಂದಿಗೆ ಪರಸ್ಪರ ಸಂಪರ್ಕ ಸಾಧಿಸಲು ನಿರಾಕರಿಸುವುದೂ ಇದೆ.[೧೭]

ಸಾಂಸ್ಥಿಕ ಬಳಕೆ

[ಬದಲಾಯಿಸಿ]

VoIP ತಂತ್ರಜ್ಞಾನ ನೀಡಬಲ್ಲ ಬ್ಯಾಂಡ್‌ವಿಡ್ತ್‌ ದಕ್ಷತೆ ಹಾಗೂ ಅಲ್ಪ ವೆಚ್ಚದಿಂದಾಗಿ, ಉದ್ಯಮಗಳು ತಮ್ಮ ಮಾಸಿಕ ದೂರವಾಣಿ ವೆಚ್ಚವನ್ನು ಕಡಿಮೆ ಮಾಡಲು ಸಾಂಪ್ರದಾಯಿಕ ತಾಮ್ರದ-ತಂತಿಯ ದೂರವಾಣಿ ವ್ಯವಸ್ಥೆಗಳಿಂದ VoIP ವ್ಯವಸ್ಥೆಗಳಿಗೆ ಬದಲಿಸಿಕೊಳ್ಳಲು ಆರಂಭಿಸಿವೆ.ಉಲ್ಲೇಖ ದೋಷ: Closing </ref> missing for <ref> tag VoIP ಕರೆ ಮತ್ತು ದತ್ತ ಸಂವಹನಗಳೆರಡನ್ನೂ ಏಕೈಕ ಜಾಲದ ಮೂಲಕ ಚಾಲನೆಗೊಳಿಸುವುದರಿಂದಾಗಿ ಗಮನಾರ್ಹ ಪ್ರಮಾಣದ ಆಧಾರವ್ಯವಸ್ಥೆ ವೆಚ್ಚಗಳನ್ನು ಕಡಿಮೆಗೊಳಿಸುತ್ತವೆ.[೧೮] VoIPಯ ವಿಸ್ತರಣಾ ಉಪಕರಣಗಳು PBXಗಳು ಮತ್ತು ಕೀಲಿ ವ್ಯವಸ್ಥೆಗಳಿಗಿಂತ ಅಗ್ಗವಾಗಿರುತ್ತವೆ. VoIP ಸ್ವಿಚ್‌ಗಳು PCಗಳು ಅಥವಾ Linux ಗಣಕಗಳಂತಹಾ ಉತ್ಪನ್ನ ಯಂತ್ರಾಂಶಗಳಲ್ಲಿ ಕಾರ್ಯನಿರ್ವಹಿಸುತ್ತವೆಯಾದ್ದರಿಂದ ಅವುಗಳನ್ನು ಹೊಂದಿಸಲು ಮತ್ತು ಸರಿಪಡಿಸಲು ಸಹಾ ಸುಲಭ. ಸೀಮಿತ ಆಧಾರವ್ಯವಸ್ಥೆಗಳ ಬದಲಿಗೆ, ಈ ಸಾಧನಗಳು ಮಾನಕ ಅಂತವರ್ತನಗಳ ಮೇಲೆ ಅವಲಂಬಿತವಾಗಿರುತ್ತವೆ.[೧೮] VoIP ಸಾಧನಗಳು ಸರಳ, ಸಹಜಲಬ್ಧ ಬಳಕೆದಾರ ಅಂತವರ್ತನಗಳನ್ನು ಹೊಂದಿದ್ದು, ಬಳಕೆದಾರರು ಸರಳ ವ್ಯವಸ್ಥಾ ಹೊಂದಾಣಿಕೆಗಳನ್ನು ಕಾಲದಿಂದ ಕಾಲಕ್ಕೆ ಮಾಡಿಕೊಳ್ಳುವ ಹಾಗಿರುತ್ತದೆ. ದ್ವಿ-ವಿಧಾನ ಸಂಚಾರಿ ದೂರವಾಣಿಗಳು ಬಾಹ್ಯ ಸಂಚಾರಿ ದೂರವಾಣಿ ಸೇವೆಯಿಂದ ಆಂತರಿಕ Wi-Fi ಜಾಲಗಳ ನಡುವೆ ಓಡಾಡುತ್ತಿದ್ದಾಗ ಬಳಕೆದಾರರಿಗೆ ತಮ್ಮ ಮಾತುಕತೆಗಳನ್ನು ಮುಂದುವರೆಸಲು ಅವಕಾಶ ನೀಡುವುದರಿಂದ, ಮೇಜು ದೂರವಾಣಿ ಮತ್ತು ಸಂಚಾರಿ ದೂರವಾಣಿಗಳೆರಡನ್ನೂ ಹೊತ್ತೊಯ್ಯಬೇಕಾದ ಅವಶ್ಯಕತೆ ಇರುವುದಿಲ್ಲ. ಕೆಲವೇ ಸಾಧನಗಳಿರುವುದರಿಂದ ನಿರ್ವಹಣೆ ಸುಲಭ.[೧೮] Skype, ಮೂಲತಃ ಸ್ನೇಹಿತರ ನಡುವಿನ ಸಂವಹನಕ್ಕಾಗೆಂದು ಪ್ರಚಾರಗೊಂಡಿದ್ದು, ನಂತರ ವ್ಯವಹಾರಗಳಿಗೂ ಸೇವೆ ನೀಡಲು ಆರಂಭಿಸಿತು, Skype ಜಾಲದ ಯಾವುದೇ ಬಳಕೆದಾರರ ನಡುವೆ ಉಚಿತ ಸಂಪರ್ಕ ಹಾಗೂ ಸಾಧಾರಣ PSTN ದೂರವಾಣಿಗಳಿಂದ ಶುಲ್ಕ ವಿಧಿಸಿ ಸಂಪರ್ಕ ನೀಡುತ್ತದೆ.[೧೯] ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಸಾಮಾಜಿಕ ಸುರಕ್ಷತಾ ನಿರ್ವಹಣೆ ಸಂಸ್ಥೆಯು (SSA) ತನ್ನ 63,000 ಸಿಬ್ಬಂದಿಗಳಿರುವ ಕ್ಷೇತ್ರ ಕಛೇರಿಗಳನ್ನು ಪ್ರಸ್ತುತ ದತ್ತ ಜಾಲವನ್ನು ಬಳಸಿಕೊಂಡು ಸಾಂಪ್ರದಾಯಿಕ ದೂರವಾಣಿ ವ್ಯವಸ್ಥೆಯಿಂದ VoIP ಆಧಾರರಚನೆಗೆ ಪರಿವರ್ತಿತಗೊಳ್ಳುತ್ತಿದೆ.[೨೦][೨೧]

ಅನುಕೂಲಗಳು

[ಬದಲಾಯಿಸಿ]

ಪ್ರಕ್ರಿಯಾ ವೆಚ್ಚ

[ಬದಲಾಯಿಸಿ]

VoIP ಸಂವಹನ ಹಾಗೂ ಆಧಾರರಚನೆ ವೆಚ್ಚಗಳ ಕಡಿತದಿಂದ ಅನುಕೂಲ ಪಡೆಯುತ್ತದೆ. ಉದಾಹರಣೆಗಳಲ್ಲಿ ಈ ಕೆಳಗಿನವು ಸೇರಿವೆ:

  • ಅಸ್ತಿತ್ವದಲ್ಲಿರುವ ದತ್ತ ಜಾಲಗಳ ಮೂಲಕವೇ ದೂರವಾಣಿ ಕರೆಗಳನ್ನು ಸಂವಹಿಸಿ ಪ್ರತ್ಯೇಕ ಕರೆ ಮತ್ತು ದತ್ತ ಜಾಲಗಳ ಅವಶ್ಯಕತೆಯಿರದಂತೆ ಮಾಡುತ್ತದೆ.[೨೨]
  • ಕಾನ್‌ಫರೆನ್ಸ್‌ ಕರೆಗಳು, IVR, ಕರೆ ರವಾನೆ, ಸ್ವಯಂಚಾಲಿತ ಮರುಡಯಲ್‌, ಮತ್ತು ಕಾಲರ್‌ ID ಸೌಲಭ್ಯಗಳಂತಹಾ ಸಾಂಪ್ರದಾಯಿಕ ದೂರಸಂಪರ್ಕ ಕಂಪೆನಿಗಳು(ಟೆಲ್ಕೊಗಳು) ನೀಡುವ ಪ್ರತ್ಯೇಕ ಪಾವತಿ ಸೇವೆಗಳು ಆಸ್ಟೆರಿಸ್ಕ್‌ ಅಥವಾ FreeSWITCHನಂತಹಾ ಮುಕ್ತ ಮೂಲ VoIP ಸಜ್ಜುಗೊಳಿಕೆಗಳ ಮೂಲಕ ಉಚಿತವಾಗಿ ಲಭ್ಯವಿವೆ.
  • ಅಂತರಜಾಲ ಬಳಕೆಯ ದರವಿಧಿಸುವಿಕೆಯು ಸಾಧಾರಣ ದೂರವಾಣಿ ಕರೆಗಳಿಗಿಂತ ಭಿನ್ನವಾಗಿರುವುದರಿಂದ ವೆಚ್ಚಗಳೂ ಕಡಿಮೆ. ಸಾಮಾನ್ಯ ದೂರವಾಣಿ ಕರೆಗಳು ಪ್ರತಿ ನಿಮಿಷ ಅಥವಾ ಸೆಕೆಂಡಿಗೆ ವಿಧಿಸುತ್ತಿದ್ದರೆ, VoIP ಕರೆಗಳಲ್ಲಿ ಪ್ರತಿ ಮೆಗಾಬೈಟ್‌(MB)ಗೆ ವಿಧಿಸಲಾಗುತ್ತದೆ. ಮತ್ತೊಂದು ರೀತಿಯಲ್ಲಿ ಹೇಳಬೇಕೆಂದರೆ ದೂರವಾಣಿ ಜಾಲಕ್ಕೆ ಸಂಪರ್ಕಗೊಂಡ ಅವಧಿ ಯ ಬದಲಾಗಿ VoIP ಕರೆಗಳು ಅಂತರಜಾಲ ದ ಮೂಲಕ ಕಳಿಸಿದ ಮಾಹಿತಿ ಯ(ದತ್ತದ) ಪ್ರಮಾಣದ ಮೇಲೆ ವೆಚ್ಚ ವಿಧಿಸುತ್ತವೆ. ಕಾರ್ಯತಃ ನಿಗದಿತ ಸಮಯದಲ್ಲಿ ನಡೆವ ದತ್ತಾಂಶ ರವಾನೆಗೆ ವಿಧಿಸುವ ವೆಚ್ಚವು ಅಷ್ಟೇ ಸಮಯದ ಸಾಮಾನ್ಯ ದೂರವಾಣಿ ಸಂಪರ್ಕಕ್ಕೆ ವಿಧಿಸುವ ವೆಚ್ಚಕ್ಕಿಂತಲೂ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗಿದೆ.

ನಮ್ಯತೆ/ಹೊಂದಿಕೊಳ್ಳುವಿಕೆ

[ಬದಲಾಯಿಸಿ]

PSTN ಮೂಲಕ ಸಜ್ಜುಗೊಳಿಸಲು ಕಷ್ಟಸಾಧ್ಯವಾದ ಸೇವೆಗಳನ್ನು ಹಾಗೂ ಕಾರ್ಯಗಳನ್ನು VoIP ಕೈಗೊಳ್ಳಬಹುದಾಗಿದೆ. ಕೆಳಗಿನವು ಇದಕ್ಕೆ ಉದಾಹರಣೆಗಳು:

  • ಒಂದಕ್ಕಿಂತ ಹೆಚ್ಚು ದೂರವಾಣಿ ಕರೆಗಳನ್ನು ಏಕೈಕ ಬ್ರಾಡ್‌ಬ್ಯಾಂಡ್‌ ಸಂಪರ್ಕ[೨೩] ದ ಮೂಲಕ ಪ್ರತ್ಯೇಕ ಸಂಪರ್ಕ ಪಥದ ಅಗತ್ಯವಿಲ್ಲದೇ ಪ್ರಸರಿಸಬಲ್ಲ ಸಾಮರ್ಥ್ಯ.
  • (ಸುರಕ್ಷಿತ ರಿಯಲ್‌ಟೈಂ ಸಂವಹನ ಪ್ರೋಟೋಕಾಲ್‌ದಂತಹಾ) ಮಾನಕೀಕರಿಸಿದ ಪ್ರೋಟೋಕಾಲ್‌ಗಳನ್ನು ಬಳಸಿಕೊಂಡು ಸುರಕ್ಷಿತ ಕರೆಗಳನ್ನು ಮಾಡಬಹುದು. ಸಾಂಪ್ರದಾಯಿಕ ದೂರವಾಣಿ ಪಥಗಳಲ್ಲಿ ಸುರಕ್ಷಿತ ದೂರವಾಣಿ ಸಂಪರ್ಕಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳು, ಸಾಂಖ್ಯೀಕರಿಸುವಿಕೆ ಮತ್ತು ಸಾಂಖ್ಯಿಕ ಪ್ರಸಾರಗಳು VoIPಯಲ್ಲಿ ಮೊದಲೇ ಇವೆ. ಕೇವಲ ಲಭ್ಯವಿರುವ ದತ್ತ ವಾಹಿನಿಯನ್ನು ಗೂಢಲಿಪೀಕರಣ ಹಾಗೂ ಪ್ರಮಾಣೀಕರಣ ಮಾತ್ರ ಅಳವಡಿಸಿದರೆ ಸುರಕ್ಷತೆ ಲಭ್ಯ.[೨೪]
  • ಪ್ರಾದೇಶಿಕ ನಿಯಂತ್ರಣ ಇರುವುದಿಲ್ಲ. VoIP ಸೇವಾದಾರರೊಂದಿಗೆ ಸಂಪರ್ಕ ಸಾಧಿಸಲು ಅಗತ್ಯ ವೇಗದ ಹಾಗೂ ಸ್ಥಾಯಿ ಅಂತರಜಾಲ ಸಂಪರ್ಕವಿದ್ದರೆ ಸಾಕು.
  • ವಿಡಿಯೋ ಸಂಭಾಷಣೆ, ಸಂಭಾಷಣಾ ಸಮಯದಲ್ಲಿ ಸಂದೇಶ ಅಥವಾ ದತ್ತ ಕಡತ ವಿನಿಮಯ, ಕರೆ ಕಾನ್‌ಫರೆನ್ಸ್‌, ವಿಳಾಸ ಪುಸ್ತಕ ಸೌಲಭ್ಯ ಹಾಗೂ ಕರೆಗೆ ಇಲ್ಲವೇ ಸಂಪರ್ಕಕ್ಕೆ ಇತರರು ಲಭ್ಯವಿದ್ದಾರೆಯೇ ಇಲ್ಲವೇ ಎಂಬ ಮಾಹಿತಿ ಇತ್ಯಾದಿ ಅಂತರಜಾಲದಲ್ಲಿ ಲಭ್ಯವಿರುವ ಇತರೆ ಸೇವೆಗಳೊಂದಿಗೆ ಕಾರ್ಯಕ್ಷಮತೆಯ ಲಭ್ಯತೆ.

ಸವಾಲುಗಳು

[ಬದಲಾಯಿಸಿ]

ಸೇವೆಯ ಗುಣಮಟ್ಟ

[ಬದಲಾಯಿಸಿ]

ಸರ್ಕ್ಯೂಟ್‌-ವ್ಯವಸ್ಥಿತ ಸಾರ್ವಜನಿಕ ದೂರವಾಣಿ ಜಾಲಕ್ಕೆ ಹೋಲಿಸಿದರೆ ಮೂಲಾಧಾರವಾಗಿರುವ IP ಜಾಲವು ಸ್ವಭಾವಸಹಜವಾಗಿ ಕಡಿಮೆ ಅವಲಂಬನೀಯವಾಗಿರುವುದರಿಂದ ದತ್ತಾಂಶಗಳು ಅನುಕ್ರಮವಾಗಿ ರವಾನೆಯಾಗುತ್ತವೆ ಎಂಬ ಖಾತ್ರಿ ನೀಡದ ಕಾರಣ ಅಥವಾ ಸೇವಾ ಗುಣಮಟ್ಟದ (QoS) ಖಾತ್ರಿಯನ್ನು ನೀಡದ ಕಾರಣ, VoIP ಸಜ್ಜುಗೊಳಿಕೆಗಳು ಅಲಭ್ಯತೆಹಾಗೂ ಕುಂದಿದ ಸಾಮರ್ಥ್ಯಗಳಂತಹಾ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕರೆ ಹಾಗೂ ಎಲ್ಲಾ ಇನ್ನಿತರ ದತ್ತಗಳು, ಸ್ಥಿರ ಗರಿಷ್ಟ ಸಾಮರ್ಥ್ಯ ಹೊಂದಿದ IP ಜಾಲಗಳ ಮೂಲಕ ದತ್ತಾಂಶಗಳ ರೂಪದಲ್ಲಿ ಸಂಚರಿಸುತ್ತವೆ. ಈ ವ್ಯವಸ್ಥೆಯು ದಟ್ಟಣೆ[ಸೂಕ್ತ ಉಲ್ಲೇಖನ ಬೇಕು] ಮತ್ತು DoS/ಡಿಓಎಸ್‌/ಸೇವಾದುರ್ಲಭತೆ ದಾಳಿಗಳಿಗೆ[೨೫] ಸಾಂಪ್ರದಾಯಿಕ ಸರ್ಕ್ಯೂಟ್‌ ವ್ಯವಸ್ಥಿತ ವ್ಯವಸ್ಥೆಗಳಿಗಿಂತ ಸುಲಭಗುರಿಯಾಗಿರುತ್ತದೆ; ಸರ್ಕ್ಯೂಟ್‌-ವ್ಯವಸ್ಥಿತ ವ್ಯವಸ್ಥೆಯು ಸಾಮರ್ಥ್ಯಕ್ಕಿಂತ ಹೆಚ್ಚಿನ ಅಗತ್ಯದ ಸಂದರ್ಭದಲ್ಲಿ ಹೊಸ ಸಂಪರ್ಕಗಳನ್ನು ನಿರಾಕರಿಸಿದರೂ, ಉಳಿದವನ್ನು ಯಾವುದೇ ಅರೆಕೊರೆಯಿಲ್ಲದಂತೆ ಸಾಗಿಸಿದರೆ, ದತ್ತಾಂಶ-ವ್ಯವಸ್ಥಿತ ಜಾಲಗಳಲ್ಲಿನ ದೂರವಾಣಿ ಸಂಭಾಷಣೆಗಳಂತಹಾ ರಿಯಲ್‌ಟೈಂ ದತ್ತಗಳ ಗುಣಮಟ್ಟವು ಗಮನಾರ್ಹವಾಗಿ ಕಡಿಮೆಯಾಗುತ್ತದೆ. (ದತ್ತಾಂಶಗಳು ಚಲಿಸುವ ದೂರದಿಂದಾಗಿ ವಿಳಂಬವಾಗುವ ಕಾರಣ)ಸ್ಥಿರ ವಿಳಂಬಗಳನ್ನು ನಿಯಂತ್ರಿಸಲಾಗುವುದಿಲ್ಲ, ಆದಾಗ್ಯೂ ಕೆಲ ವಿಳಂಬಗಳನ್ನುಕರೆ ದತ್ತಾಂಶಗಳನ್ನು ವಿಳಂಬ-ಸೂಕ್ಷ್ಮ ಎಂದು ಗುರುತಿಸುವುದರ ಮೂಲಕ ಕಡಿಮೆ ಮಾಡಬಹುದು (ಉದಾಹರಣೆಗೆ ಡಿಫ್‌ಸರ್ವ್‌/‌DiffServ ನೋಡಿ). ಸ್ಥಿರ ವಿಳಂಬಗಳು ಉಪಗ್ರಹ ವ್ಯವಸ್ಥೆಗಳು ಭಾಗವಾದಾಗ ವಿಶೇಷವಾಗಿ ದೀರ್ಘ ಪ್ರದಕ್ಷಿಣೆ(ಭೂಸ್ಥಿರ ಉಪಗ್ರಹಗಳ ಮೂಲಕದ ಸಂಪರ್ಕಗಳಿಗೆ 400–600 ಮಿಲಿಸೆಕೆಂಡ್‌ಗಳು)ಯ ಪ್ರಸರಣ ವಿಳಂಬದಿಂದಾಗಿ ಸಮಸ್ಯಾತ್ಮಕವಾಗುತ್ತವೆ. ದತ್ತಾಂಶ ನಷ್ಟ ಮತ್ತು ವಿಳಂಬಗಳ ಕಾರಣವು ದಟ್ಟಣೆಯಾಗಿರುತ್ತದೆ, ಸಂಪರ್ಕದಟ್ಟಣೆ ಯಂತ್ರಶಾಸ್ತ್ರದ ಬಳಕೆ ಮೂಲಕ ತಪ್ಪಿಸಬಹುದಾಗಿರುತ್ತದೆ. ಸ್ವೀಕರಣಾ ವಿಭಾಗವು ಅಸ್ತವ್ಯಸ್ತಗೊಂಡಿರಬಹುದಾದ, ವಿಳಂಬಗೊಂಡಿರಬಹುದಾದ ಅಥವಾ ಬಿಟ್ಟುಹೋಗಿರಬಹುದಾದ IP ದತ್ತಾಂಶಗಳನ್ನು ಮರುಹೊಂದಿಸುತ್ತಾ, ಧ್ವನಿ ವಾಹಿನಿಯು ಉತ್ತಮ ಸಾಮರಸ್ಯ ಕಾದುಕೊಂಡಿರುವ ಬಗ್ಗೆ ಎಚ್ಚರಿಕೆಯಿಂದಿರಬೇಕಾಗುತ್ತದೆ. ವಿಳಂಬದಲ್ಲಿನ ವ್ಯತ್ಯಾಸಗಳನ್ನು ಕುಂದಿದ ಸಾಮರ್ಥ್ಯ ಎನ್ನಲಾಗುತ್ತದೆ. ಕುಂದಿದ ಸಾಮರ್ಥ್ಯದ ಪ್ರಭಾವಗಳನ್ನು ಬಂದ ಕರೆ ದತ್ತಾಂಶಗಳನ್ನು ಧ್ವನಿಯನ್ನಾಗಿ ಮಾರ್ಪಡಿಸುವ ಮುಂಚೆಯೇ ಕುಂದಿದ ಸಾಮರ್ಥ್ಯ ದತ್ತಕೋಶದಲ್ಲಿ ಉಳಿಸಿಕೊಳ್ಳುವ ಮೂಲಕ ಕಡಿಮೆ ಮಾಡಬಹುದಾದರೂ, ಇದು ಮತ್ತಷ್ಟು ವಿಳಂಬಗೊಳಿಸುತ್ತದೆ. ಈ ವ್ಯವಸ್ಥೆಯು ಬಫರ್‌ ಅಂಡರ್‌ರನ್‌/ದತ್ತಕೋಶ ಸಮಾಪ್ತಿ ಎಂಬ ಧ್ವನಿ ಎಂಜಿನ್‌ಗೆ ಕರೆ ದತ್ತಾಂಶಗಳು ಲಭ್ಯವಿಲ್ಲದೇ ಮುಂದಿನ ದತ್ತಾಂಶವು ಬರುವವರೆಗೆ ವಿಳಂಬಿಸುವ ಸಮಸ್ಯೆಯನ್ನು ತಪ್ಪಿಸುತ್ತದೆ. ಯಾವುದೇ ಸಮಯದಲ್ಲಿ IP ದತ್ತಾಂಶಗಳು ತಪ್ಪಿಹೋದಾಗ ಇಲ್ಲವೇ ವಿಳಂಬಗೊಂಡಾಗ ದತ್ತಾಂಶ ವಿಳಂಬ ಹಾಗೂ ನಷ್ಟ ಪೂರಣ ವ್ಯವಸ್ಥೆಯು ಸರಿಪಡಿಸಲಾಗದಿದ್ದಾಗ VoIP ಬಳಕೆದಾರರ ನಡುವಿನ ಜಾಲದಲ್ಲಿ ಕ್ಷಣಿಕ ನಿಶ್ಶಬ್ದವು ಆವರಿಸಿರುತ್ತದೆ. VoIP ಸಂವಹನಗಳಲ್ಲಿ ಮೂಲ ದೂರವಾಣಿಯಿಂದ ಗಮ್ಯ ದೂರವಾಣಿಗಳ ನಡುವೆ ದತ್ತಾಂಶಗಳ ಹರಿವನ್ನು ವಿವಿಧ ಪಥ(ಬಹು-ಪಥ ಸಾಗಣೆ)ಗಳಲ್ಲಿ ಏಕಕಾಲಿಕವಾಗಿ ಕಳಿಸಬೇಕಾದರೆ ದತ್ತಾಂಶ ಮಾದರಿಯ ಮಾಧ್ಯಮಗಳ ಅವಲಂಬನೆ ಉತ್ತಮವೆಂದು ಹೇಳಲಾಗುತ್ತದೆ.[೨೬] ಹೀಗೆ ಮಾಡಿದರೆ ತಾತ್ಕಾಲಿಕ ವೈಫಲ್ಯಗಳು ಸಂವಹನದ ಗುಣಮಟ್ಟದ ಮೇಲೆ ಹೆಚ್ಚು ಪ್ರಭಾವ ಬೀರುವುದಿಲ್ಲ. ಕಿರುಗಾತ್ರದ/ಸೂಕ್ಷ್ಮ ಸಾಗಣೆಗಳಲ್ಲಿ ದತ್ತಾಂಶ ಹಂತದಲ್ಲಿ ಹೆಚ್ಚುವರಿ ದತ್ತಾಂಶಗಳನ್ನು ಪ್ರಸರಿಸಬೇಕಾದರೆ ಸಂವಹನವನ್ನು ಹೆಚ್ಚು ವಿಶ್ವಸನೀಯವನ್ನಾಗಿಸಲು ಫೌಂಟೆನ್‌ ಸಂಕೇತಗಳು ಅಥವಾ ನಿರ್ದಿಷ್ಟವಾಗಿ ರ್ಯಾಪ್ಟರ್‌ ಸಂಕೇತಗಳನ್ನು ಬಳಸಬೇಕೆಂದು ಸೂಚಿಸಲಾಗಿದೆ.[ಸೂಕ್ತ ಉಲ್ಲೇಖನ ಬೇಕು] VoIP ಕರೆಗಳಲ್ಲಿ QoS/QoEಗಳ ವರದಿಗಳನ್ನು ಬೆಂಬಲಿಸುವಂತೆ ಅನೇಕ ಪ್ರೋಟೋಕಾಲ್‌ಗಳನ್ನು ನಿರೂಪಿಸಲಾಗಿದೆ. ಇವುಗಳಲ್ಲಿ RTCP ವಿಸ್ತೃತ ವರದಿ (RFC 3611), SIP RTCP ಸಾರಾಂಶ ವರದಿಗಳು, H.460.9 ಅನುಬಂಧ B ( H.323), H.248.30 ಮತ್ತು MGCP ವಿಸ್ತರಣಗಳೂ ಸೇರಿವೆ. RFC 3611 VoIP ಕರೆ ಚಾಲಿತವಾಗಿರುವಾಗ IP ದೂರವಾಣಿ ಅಥವಾ ಗೇಟ್‌ವೇಗಳು ದತ್ತಾಂಶ ನಷ್ಟ ದರ, ತಿರಸ್ಕೃತ ದತ್ತಾಂಶ ದರ(ಸಾಮರ್ಥ್ಯ ಕುಂದುವಿಕೆಯಿಂದಾಗಿ), ದತ್ತಾಂಶ ನಷ್ಟ/ತಿರಸ್ಕೃತ ರಭಸದ ದರ (ರಭಸದ ಅವಧಿ/ಸಾಂದ್ರತೆ, ಅಂತರ ಅವಧಿ/ಸಾಂದ್ರತೆ) ಜಾಲ ವಿಳಂಬ, ಗಮ್ಯ ವ್ಯವಸ್ಥೆ ವಿಳಂಬ, ಸಂಜ್ಞೆ/ಗದ್ದಲ/ ಪ್ರತಿಧ್ವನಿ ಮಟ್ಟ, ಮೀನ್‌ ಒಪೀನಿಯನ್‌ ಸ್ಕೋರ್‌ (MOS) ಮತ್ತು R ಅಂಶಗಳು ಮತ್ತು ಕುಂದಿದ ಸಾಮರ್ಥ್ಯ ದತ್ತಕೋಶಕ್ಕೆ ಸಂಬಂಧಿಸಿದ ವ್ಯವಸ್ಥಾ ಮಾಹಿತಿಗಳನ್ನೊಳಗೊಂಡ ಮಾನಕ ವಿಭಾಗವನ್ನು ಸಂರಚಿಸುತ್ತವೆ. RFC 3611 VoIP ಮಾನಕ ವರದಿಗಳು IP ತುದಿಗಳ ನಡುವೆ ಕರೆಯ ನಡುವೆ ಆಗ್ಗಾಗ್ಗೆ ವಿನಿಮಯವಾಗುವುದಲ್ಲದೇ ಕರೆಯ ಅಂತ್ಯದಲ್ಲಿ SIP RTCP ಸಾರಾಂಶ ವರದಿ ಅಥವಾ ಇತರೆ ಸಂಜ್ಞಾತ್ಮಕ ಪ್ರೋಟೋಕಾಲ್ ವಿಸ್ತರಣಗಳಲ್ಲಿ ಒಂದರ ಮೂಲಕ ಸಂದೇಶವಾಗಿ ಕಳಿಸುತ್ತದೆ. RFC 3611 VoIP ಮಾನಕ ವರದಿಗಳು QoS ಸಮಸ್ಯೆಗಳಿಗೆ ಸಂಬಂಧಿಸಿದ ರಿಯಲ್‌ಟೈಂ ಪ್ರತ್ಯಾದಾನ, ಎರಡೂ ತುದಿಗಳ ನಡುವಿನ ಸುಧಾರಿಸಿದ ಕರೆ ಗುಣಮಟ್ಟ ಪರಿಗಣನೆ ಹಾಗೂ ಇನ್ನೂ ಅನೇಕ ರೀತಿಯ ಅನ್ವಯಗಳನ್ನು ಬೆಂಬಲಿಸುವ ಉದ್ದೇಶದಿಂದ ರೂಪಿಸಲಾಗಿವೆ.

ಸ್ತರ-2ರ ಸೇವೆಯ ಗುಣಮಟ್ಟ

[ಬದಲಾಯಿಸಿ]

ದತ್ತ ಸಂಪರ್ಕ ಸ್ತರ ಮತ್ತು ಭೌತಿಕ ಸ್ತರಗಳೊಂದಿಗೆ ಕಾರ್ಯಾಚರಿಸುವ ಅನೇಕ ಪ್ರೋಟೋಕಾಲ್‌ಗಳು VoIPನಂತಹಾ ಅನ್ವಯಗಳು ದಟ್ಟಣೆಯ ಸಂದರ್ಭದಲ್ಲಿ ಸಹಾ ಉತ್ತಮವಾಗಿ ಕಾರ್ಯನಿರ್ವಹಿಸುವ ಹಾಗೆ ಗಮನಿಸಲು ಸಾಧ್ಯವಾಗುವ ಸೇವಾ ಗುಣಮಟ್ಟ ಮಾಪನೆಯ ಸೌಲಭ್ಯವನ್ನು ಹೊಂದಿವೆ. ಕೆಲ ಉದಾಹರಣೆಗಳೆಂದರೆ:

  • IEEE 802.11eಯು IEEE 802.11 ಮಾನಕದ ಅಂಗೀಕೃತ ತಿದ್ದುಪಡಿಯಾಗಿದ್ದು ಮಾಧ್ಯಮ ಪ್ರವೇಶ/ಲಭ್ಯತೆ ನಿಯಂತ್ರಣ (MAC) ಸ್ತರದಲ್ಲಿ ಬದಲಾವಣೆಗಳನ್ನು ಮಾಡಿ ನಿಸ್ತಂತು LAN ಅನ್ವಯಗಳಿಗೆ ಸೇವಾ ಗುಣಮಟ್ಟ ವೃದ್ಧಿಕೆಗಳ ಸಂಗ್ರಹವನ್ನು ಹೊಂದಿದೆ. ಈ ಮಾನಕವು ನಿಸ್ತಂತು IP ಆಧಾರಿತ ಕರೆ ವ್ಯವಸ್ಥೆಯಂತಹಾ ವಿಳಂಬ-ಸೂಕ್ಷ್ಮ ಅನ್ವಯಗಳಿಗೆ ಬಹಳ ಮಹತ್ವದ್ದಾಗಿದೆ.
  • IEEE 802.1pಯು 8 ವಿವಿಧ ಸೇವಾ ಶ್ರೇಣಿಗಳನ್ನು (ಕರೆಗೆ ಮೀಸಲಿಟ್ಟ ಶ್ರೇಣಿಯೂ ಸೇರಿದಂತೆ) ಸ್ತರ-2 ತಂತಿ ಸಹಿತ Ethernet ದಟ್ಟಣೆಯಲ್ಲಿ ನಿರೂಪಿಸಿದೆ.
  • ITU-T G.hn ಮಾನಕವು, ಲಭ್ಯವಿರುವ ಗೃಹ ತಂತಿ ವ್ಯವಸ್ಥೆಯನ್ನು ಬಳಸಿಕೊಂಡು (ವಿದ್ಯುತ್‌ ಸಂಪರ್ಕ, ದೂರವಾಣಿ ಸಂಪರ್ಕ ಮತ್ತು ಏಕಾಕ್ಷ ಕೇಬಲ್‌ಗಳೊಂದಿಗೆ) ಅತಿ-ವೇಗದ (1 ಗಿಗಾಬಿಟ್‌/ಸೆಕೆಂಡ್‌ಗಳವರೆಗೆ) ಸ್ಥಳೀಯ ಪ್ರದೇಶ ಜಾಲವನ್ನು ರಚಿಸಲು ಸಾಧ್ಯವಾಗಿಸುತ್ತದೆ. G.hn "ವಿವಾದ-ಮುಕ್ತ/ಸ್ಪರ್ಧೆ-ಮುಕ್ತ/ಕಲಹ-ಮುಕ್ತ ಪ್ರಸಾರ ಅವಕಾಶಗಳ" (CFTXOPಗಳು) ಮೂಲಕ QoS ನೀಡುತ್ತವೆ. QoS ಅಗತ್ಯವಿರುವ ಹಾಗೂ ಜಾಲ ನಿಯಂತ್ರಕದೊಂದಿಗೆ "ಒಪ್ಪಂದ" ಮಾಡಿಕೊಂಡಿರುವ ಇವುಗಳನ್ನು (VoIP ಕರೆಯಂತಹಾ) ಸಂವಹನಗಳಿಗೆ ಹಂಚಿರಲಾಗಿರುತ್ತದೆ.

ವಿದ್ಯುತ್‌ ವೈಫಲ್ಯಕ್ಕೆ ಒಳಗಾಗುವಿಕೆ

[ಬದಲಾಯಿಸಿ]

ಸಾಂಪ್ರದಾಯಿಕ ಗೃಹಬಳಕೆ ಅನಲಾಗ್‌ ಸೇವೆಯ ದೂರವಾಣಿಗಳು ಸಾಮಾನ್ಯವಾಗಿ ನೇರವಾಗಿ ದೂರವಾಣಿ ಕಂಪೆನಿಯ ದೂರವಾಣಿ ಸಂಪರ್ಕಗಳಿಗೆ ಜೋಡಣೆಯಾಗಿದ್ದು ಸಾಮಾನ್ಯ ಅನಲಾಗ್‌ ದೂರವಾಣಿ ಸಾಧನಗಳಿಗೆ ಸಾಕಾಗುವಷ್ಟು ಸ್ಥಳೀಯ ವಿದ್ಯುತ್‌ ಲಭ್ಯತೆಯ ಅವಲಂಬನೆಯಿಲ್ಲದೇ ವಿದ್ಯುತ್‌ ಪಡೆದಿರುತ್ತವೆ. IP ದೂರವಾಣಿಗಳು ಮತ್ತು VoIP ದೂರವಾಣಿ ಸಂಯೋಜಕಗಳು ರೌಟರ್‌ಗಳು‌ ಅಥವಾ ಕೇಬಲ್‌ ಮೋಡೆಮ್‌ಗಳಿಗೆ ಸಂಪರ್ಕ ಹೊಂದಿರುತ್ತವೆ. ಆದರೆ ಇವು ಸ್ಥಳೀಯವಾಗಿ ಲಭ್ಯವಿರುವ ಮುಖ್ಯ ವಿದ್ಯುಚ್ಛಕ್ತಿ ಅಥವಾ ಸ್ಥಳೀಯವಾಗಿ ಉತ್ಪಾದಿತ ವಿದ್ಯುತ್‌ನ ಮೇಲೆ ಅವಲಂಬಿತವಾಗಿರುತ್ತವೆ.[೨೭] ಕೆಲ VoIP ಸೇವಾದಾರರು ಬ್ಯಾಟರಿ -ಬೆಂಬಲಿತ ವಿದ್ಯುತ್‌ ಪೂರೈಕೆ ಹೊಂದಿರುವ ಬಳಕೆದಾರ ಗೃಹ ಉಪಕರಣ/ಕಸ್ಟಮರ್‌ ಪ್ರಿಮೈಸ್‌ ಈಕ್ವಿಪ್‌ಮೆಂಟ್‌ (e.g., ಕೇಬಲ್‌ಮೋಡೆಮ್‌ಗಳು)ಗಳನ್ನು ಬಳಸಿ ಸ್ಥಳೀಯ ವಿದ್ಯುತ್‌ ವೈಫಲ್ಯದ ಸಂದರ್ಭದಲ್ಲಿ ಅನೇಕ ತಾಸುಗಳವರೆಗೆ ನಿರಂತರ ಸೇವೆಯನ್ನು ನೀಡುತ್ತವೆ. ಆ ತರಹದ ಬ್ಯಾಟರಿ-ಬೆಂಬಲಿತ ಸಾಧನಗಳು ಸಾಮಾನ್ಯವಾಗಿ ಅನಲಾಗ್‌ ಸಾಧನಗಳಿಗೆಂದು ವಿನ್ಯಾಸಗೊಳಿಸಿದ್ದಾಗಿರುತ್ತವೆ. ವಿದ್ಯುತ್‌ ವೈಫಲ್ಯಕ್ಕೆ ತುತ್ತಾಗುವ ದೂರವಾಣಿ ಸೇವೆಯು ಅನೇಕ ಗ್ರಾಹಕರು ಮೂಲ ಕೇಂದ್ರದೊಂದಿಗೆ ಕಾರ್ಯಾಚರಿಸುವ ನಿಸ್ತಂತು ಘಟಕಗಳಿರುವಂತಹಾ ಅಥವಾ ಕರೆಮೇಲ್‌ ಸಿದ್ಧ ಅಥವಾ ವಿಳಾಸಪುಸ್ತಕಸಿದ್ಧ ಸೌಲಭ್ಯಗಳಿರುವ ಆಧುನಿಕ ಸಾಧನಗಳನ್ನು ಬಳಸುತ್ತಿರುವ ಪ್ರದೇಶದಲ್ಲಿ ಸಾಂಪ್ರದಾಯಿಕ ಅನಲಾಗ್‌ ಸೇವೆಗಳಲ್ಲಿಯೂ ಇದೆ.

ತುರ್ತು ಕರೆಗಳು

[ಬದಲಾಯಿಸಿ]

IPಯ ಲಕ್ಷಣವು ಭೌಗೋಳಿಕವಾಗಿ ಜಾಲದ ಬಳಕೆದಾರರ ನೆಲೆ ಪತ್ತೆಹಚ್ಚಲು ಕಷ್ಟವಾಗಿಸುತ್ತದೆ. ಹಾಗಾಗಿಯೇ ತುರ್ತು ಕರೆಗಳನ್ನು ಸುಲಭವಾಗಿ ಹತ್ತಿರದ ಕರೆಕೇಂದ್ರಕ್ಕೆ ರವಾನಿಸಲು ಸಾಧ್ಯವಿಲ್ಲ. ಕೆಲವೊಮ್ಮೆ, VoIP ವ್ಯವಸ್ಥೆಗಳು ತುರ್ತು ಕರೆಗಳನ್ನು ಉದ್ದೇಶಿತ ವಿಭಾಗದ ತುರ್ತುಸೇವೆ ಲಭ್ಯವಿಲ್ಲದ ದೂರವಾಣಿ ಸಂಪರ್ಕಕ್ಕೆ ರವಾನಿಸಿರುತ್ತವೆ. ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಕನಿಷ್ಟ ಒಂದು ಪ್ರಮುಖ ಪೊಲೀಸ್‌ ಇಲಾಖೆ ಈ ಪದ್ಧತಿಯನ್ನು ಸಾರ್ವಜನಿಕರಿಗೆ ಅಪಾಯವಾಗುವ ಸಾಧ್ಯತೆ ಇರುವಂತಹಾ ಪದ್ಧತಿಯೆಂದು ಬಲವಾಗಿ ಆಕ್ಷೇಪ ವ್ಯಕ್ತಪಡಿಸಿದೆ.[೨೮] ಸ್ಥಿರ ದೂರವಾಣಿಯು ದೂರವಾಣಿ ಸಂಖ್ಯೆ ಹಾಗೂ ಭೌತಿಕ ನೆಲೆಯೊಂದಿಗೆ ನೇರ ಸಂಬಂಧ ಹೊಂದಿರುತ್ತದೆ. ದೂರವಾಣಿ ಸಂಖ್ಯೆಯು ದೂರವಾಣಿ ಕಂಪೆನಿಯ ವಿನಿಮಯ ಕೇಂದ್ರದ ಒಂದು ಘಟಕಕ್ಕೆ ಸಂಪರ್ಕಿತವಾಗಿರುವ ಜೋಡಿತಂತಿಗಳನ್ನು ಪ್ರತಿನಿಧಿಸುತ್ತದೆ. ಒಮ್ಮೆ ಸಂಪರ್ಕ ಸಾಧಿಸಿದ ನಂತರ, ದೂರವಾಣಿ ಕಂಪೆನಿಯು ಜೋಡಿ ತಂತಿಗೆ ಸಂಬಂಧಿಸಿದ ಗೃಹ ವಿಳಾಸವನ್ನು ಶೇಖರಿಸುತ್ತದೆ, ಈ ಸಂಬಂಧವು ತುಂಬ ಕಡಿಮೆ ಬಾರಿಗಳಷ್ಟೇ ಬದಲಾಗುತ್ತದೆ. ಆ ಸಂಖ್ಯೆಯಿಂದ ತುರ್ತು ಕರೆ ಬಂದರೆ ಭೌಗೋಳಿಕ ನೆಲೆ ಗೊತ್ತಿರುತ್ತದೆ. IP ವಿಶ್ವದಲ್ಲಿ ಇದು ಅಷ್ಟು ಸುಲಭವಲ್ಲ. ಬ್ರಾಡ್‌ಬ್ಯಾಂಡ್‌ ಸೇವಾದಾರ ಸಂಸ್ಥೆಗೆ ತಂತಿಗಳು ಎಲ್ಲಿ ಕೊನೆಗೊಳ್ಳುತ್ತವೆ ಎಂದು ಗೊತ್ತಿರಬಹುದಾದರೂ IP ವಿಳಾಸವನ್ನು ಆ ನೆಲೆಗೆ ಸಂಬಂಧಿಸಲು ಸಾಧ್ಯವಿರಬೇಕೆಂದೇನೂ ಇಲ್ಲ. IP ವಿಳಾಸಗಳನ್ನು ಆಗ್ಗಾಗ್ಗೆ ತತ್ಕಾಲೀನವಾಗಿ ನೀಡಲಾಗುತ್ತಿದ್ದು ISPಯು ಆನ್‌ಲೈನ್‌ ಬಳಕೆಗಾಗಿ ಒಂದು ವಿಳಾಸವನ್ನು ನೀಡಬಹುದು ಅಥವಾ ಅದೇ ಸಮಯದಲ್ಲಿ ಬ್ರಾಡ್‌ಬ್ಯಾಂಡ್‌ ರೌಟರ್‌ ಅದನ್ನು ಬಳಸುತ್ತಿರಬಹುದು. ISPಯು ಪ್ರತ್ಯೇಕ IP ವಿಳಾಸಗಳನ್ನು ಗುರುತಿಸಬಹುದಾದರೂ, ಯಾವ ವಿಳಾಸ ಯಾವ ಭೌತಿಕ ನೆಲೆಗೆ ಸಂಬಂಧಪಟ್ಟಿದ್ದು ಎಂದು ಗೊತ್ತಿರಲೇಬೇಕೆಂದೇನೂ ಇಲ್ಲ. ಬ್ರಾಡ್‌ಬ್ಯಾಂಡ್‌ ಸೇವಾದಾರ ಸಂಸ್ಥೆಯು ಭೌತಿಕ ನೆಲೆಯನ್ನು ಬಲ್ಲದಾದರೂ ಬಳಕೆಯಲ್ಲಿರುವ IP ವಿಳಾಸಗಳ ಮೇಲ್ವಿಚಾರಣೆ ನೋಡುತ್ತಿರಲೇಬೇಕೆಂದೇನಿಲ್ಲ. IPಯು ಬಹಳಷ್ಟು ಮಟ್ಟಿಗೆ ಸಂಚಾರವನ್ನು ಅನುಮತಿಸುವುದರಿಂದ ಇನ್ನೂ ಬಹಳಷ್ಟು ಜಟಿಲತೆಗಳಿವೆ. ಉದಾಹರಣೆಗೆ, ಬ್ರಾಡ್‌ಬ್ಯಾಂಡ್‌ ಸಂಪರ್ಕವೊಂದನ್ನು ಉದ್ಯೋಗದಾತ-ಮಾಲೀಕತ್ವದ ವಾಸ್ತವಿಕ ಖಾಸಗಿ ಜಾಲವೊಂದಕ್ಕೆ ಡಯಲ್‌ ಮಾಡಲು ಬಳಸಬಹುದು. ಹೀಗೆ ಮಾಡಿದಾಗ ಬಳಸಿದ IP ವಿಳಾಸವು ಉದ್ಯೋಗದಾತರ ವ್ಯಾಪ್ತಿಗೆ ಒಳಪಡುತ್ತದೆಯೇ ಹೊರತು ISPಯ ವಿಳಾಸಕ್ಕೆ ಸಂಬಂಧಪಟ್ಟಿರುವುದಿಲ್ಲ, ಆದ್ದರಿಂದ ಇದು ಅನೇಕ ಕಿಲೋಮೀಟರ್‌ಗಳವರೆಗಿನ ದೂರದಲ್ಲಿರಬಹುದು ಅಥವಾ ಮತ್ತೊಂದು ರಾಷ್ಟ್ರದಲ್ಲಿರಬಹುದು. ಮತ್ತೊಂದು ಉದಾಹರಣೆ ನೀಡಬೇಕೆಂದರೆ: ಸಂಚಾರಿ ದೂರವಾಣಿ ದತ್ತವನ್ನು ಬಳಸಿದರೆ, e.g. , 3G ಸಂಚಾರಿ ದೂರವಾಣಿ ಸಾಧನ ಅಥವಾ USB ನಿಸ್ತಂತು ಬ್ರಾಡ್‌ಬ್ಯಾಂಡ್‌ ಸಂಯೋಜಕಗಳನ್ನು ಬಳಸಿದರೆ, ಆಗ IP ವಿಳಾಸವು ಯಾವುದೇ ಭೌತಿಕ ನೆಲೆಯೊಂದಿಗೆ ಸಂಬಂಧ ಹೊಂದಿರುವುದಿಲ್ಲ, ಏಕೆಂದರೆ ಸಂಚಾರಿ ದೂರವಾಣಿ ಬಳಕೆದಾರ ಸಂಚಾರಿ ದೂರವಾಣಿ ಜಾಲ ವ್ಯಾಪ್ತಿಯ ಯಾವುದೇ ಪ್ರದೇಶದಲ್ಲಿರಬಹುದು, ಇಷ್ಟೇ ಅಲ್ಲದೇ ಮತ್ತೊಂದು ಸಂಚಾರಿ ದೂರವಾಣಿ ಕಂಪೆನಿಯ ಮೂಲಕ ರೋಮಿಂಗ್‌ನಲ್ಲಿ ಸಹಾ ಇರಬಹುದು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, IP ವಿಳಾಸ ಹಾಗೂ ಭೌತಿಕ ನೆಲೆಗಳ ನಡುವೆ ಯಾವುದೇ ಸಂಬಂಧವಿರುವುದಿಲ್ಲ, ಆದ್ದರಿಂದ ವಿಳಾಸವೊಂದೇ ತುರ್ತು ಸೇವೆಗಳಿಗೆ ಯಾವುದೇ ಉಪಯುಕ್ತ ಮಾಹಿತಿ ನೀಡಲಾಗುವುದಿಲ್ಲ . VoIP ಹಂತದಲ್ಲಿ, ದೂರವಾಣಿ ಅಥವಾ ಗೇಟ್‌ವೇಯು SIP ರೆಜಿಸ್ಟ್ರಾರ್‌ನೊಂದಿಗೆ ತನ್ನನ್ನು ಬಳಕೆದಾರರ ಹೆಸರು ಹಾಗೂ ಸಂಕೇತಪದದೊಂದಿಗೆ ಗುರುತಿಸಿಕೊಳ್ಳಬಹುದು. ಆದ್ದರಿಂದ ಈ ಸಂದರ್ಭದಲ್ಲಿ, ಅಂತರಜಾಲ ದೂರವಾಣಿ ಸೇವಾದಾರ ಸಂಸ್ಥೆಯು (ITSP) ನಿರ್ದಿಷ್ಟ ಬಳಕೆದಾರರು ಆನ್‌ಲೈನ್‌ ಇದ್ದಾರೆ ಎಂದು ಗೊತ್ತಿರುವುದರಿಂದ ನಿರ್ದಿಷ್ಟ ದೂರವಾಣಿ ಸಂಖ್ಯೆಯನ್ನು ಬಳಕೆದಾರರೊಂದಿಗೆ ಸಂಬಂಧಿಸಲು ಬಳಸಬಹುದು. ಆದಾಗ್ಯೂ, ಇದು IP ದಟ್ಟಣೆಯು ಯಾವ ರೀತಿಯಲ್ಲಿ ಬಳಸಲ್ಪಟ್ಟಿದೆ ಎಂದು ಗುರುತಿಸಲು ಸಾಧ್ಯವಿಲ್ಲ. IP ವಿಳಾಸವೊಂದೇ ನೆಲೆಯ ಮಾಹಿತಿಯನ್ನು ನೀಡಲು ಪ್ರಸಕ್ತ ಸಾಧ್ಯವಿಲ್ಲವಾದುದರಿಂದ, ಇಂದು ಬಳಸುತ್ತಿರುವ "ಉತ್ತಮ ಪ್ರಯತ್ನ" ವಿಧಾನವೆಂದರೆ ಲಭ್ಯವಿರುವ ದತ್ತಸಂಚಯದ ಮೂಲಕ ಬಳಕೆದಾರ ಹಾಗೂ ಸಂಖ್ಯೆಯೊಂದಿಗೆ ಸಂಬಂಧಿಸಲು ಆತ ಸೂಚಿಸಿದ್ದ ವಿಳಾಸವನ್ನು ಪತ್ತೆಹಚ್ಚಲಾಗುತ್ತಿದೆ, ಸ್ಪಷ್ಟವಾಗಿಯೇ ಒಂದು ಸೂಕ್ತವಲ್ಲದ ವಿಧಾನ. VoIP ಎನ್‌ಹ್ಯಾನ್‌ಸ್ಡ್‌‌ 911 (E911) ಎಂಬುದು ಯುನೈಟೆಡ್‌ ಸ್ಟೇಟ್ಸ್‌ನಲ್ಲಿಯ VoIP ಸೇವಾದಾರರು ತುರ್ತು ಸೇವೆಗಳನ್ನು ಬೆಂಬಲಿಸಲು ಸಾಧ್ಯವಾಗುತ್ತಿರುವ ಮತ್ತೊಂದು ವಿಧಾನ. VoIP E911 ತುರ್ತು-ಕರೆ ವ್ಯವಸ್ಥೆಯು 1999ರ ನಿಸ್ತಂತು ಸಂವಹನ ಮತ್ತು ಸಾರ್ವಜನಿಕ ಸುರಕ್ಷತೆ ಕಾಯಿದೆಯ ಅಗತ್ಯದಂತೆ ಕರೆ ಮಾಡುತ್ತಿರುವ ವ್ಯಕ್ತಿಯ ದೂರವಾಣಿ ಸಂಖ್ಯೆಯೊಂದಿಗೆ ಭೌತಿಕ ವಿಳಾಸವೊಂದನ್ನು ಜೊತೆಗೂಡಿಸುತ್ತದೆ. ಎಲ್ಲಾ "ಅಂತರ್‌ಸಂಪರ್ಕಿತ" VoIP ಸೇವಾದಾರರು (PSTN ವ್ಯವಸ್ಥೆಗೆ ಲಭ್ಯತೆ ನೀಡುವ ಸೇವಾದಾರರು) ತಮ್ಮ ಗ್ರಾಹಕರಿಗೆ E911 ಸೌಲಭ್ಯವನ್ನು ನೀಡಲೇಬೇಕಿರುತ್ತದೆ.[೨೯] VoIP E911 ಸೇವೆಯು ಸಾಮಾನ್ಯವಾಗಿ ಗ್ರಾಹಕರ ಪ್ರತಿ ಸೇವೆಯ ಪ್ರತಿ ಸಂಪರ್ಕಕ್ಕೆ ಹೆಚ್ಚುವರಿ ಮಾಸಿಕ ಶುಲ್ಕವನ್ನು ಅನಲಾಗ್‌ ದೂರವಾಣಿ ಸೇವೆಯಂತೆ ಹೆಚ್ಚುವರಿ ಮಾಸಿಕ ಶುಲ್ಕವನ್ನು ವಿಧಿಸುತ್ತದೆ. E911 ಸೇವೆಯಲ್ಲಿ ಭಾಗವಹಿಸುವಿಕೆಯು ಕಡ್ಡಾಯವೇನಲ್ಲ ಹಾಗೂ ಇಚ್ಛೆಯಿದ್ದಲ್ಲಿ ತಮ್ಮ ಗ್ರಾಹಕರು ಭಾಗವಹಿಸದಿರಬಹುದು ಅಥವಾ VoIP ಸಂಪರ್ಕಗಳಲ್ಲಿ E911 ಸೇವೆಯನ್ನು ನಿಷ್ಕ್ರಿಯಗೊಳಿಸಬಹುದು. ಅನೇಕ VoIP ಸೇವಾದಾರರು VoIP E911 ಸೇವೆಯನ್ನು ಬಳಸಿಕೊಂಡು ತುರ್ತು ಸೇವಾದಾರರಿಗೆ ಭೌತಿಕ ನೆಲೆಯ ವಿವರಗಳನ್ನು ಯಶಸ್ವಿಯಾಗಿ ನೀಡಿದ್ದಾರೆ. VoIP E911 ಸೇವೆಯಲ್ಲಿನ ಒಂದು ನ್ಯೂನತೆಯೆಂದರೆ ತುರ್ತು ವ್ಯವಸ್ಥೆಯು ಸ್ಥಿರ ಕೋಷ್ಟಕ ಪರಿಶೀಲನೆಯ ಮೇಲೆ ಆಧಾರಿತವಾಗಿರುವುದು. E911 ಕರೆಯ ನೆಲೆಯನ್ನು GPS ನೆರವು ಅಥವಾ ಇತರೆ ವಿಧಾನಗಳೊಂದಿಗೆ ಪತ್ತೆಹಚ್ಚಬಹುದಾಗಿರುವ ಸಂಚಾರಿ ದೂರವಾಣಿಗಳಂತಲ್ಲದೇ, VoIP E911 ಮಾಹಿತಿಯು ಗ್ರಾಹಕರು ತಮ್ಮ ತುರ್ತು ವಿಳಾಸ ಮಾಹಿತಿಯನ್ನು ಆಸಕ್ತಿಯಿಂದ ಸದ್ಯೋಚಿತ ಮಾಹಿತಿಯನ್ನು ತಾಜಾ ಆಗಿಟ್ಟಿರುವವರೆಗೆ ನಿಖರವಾಗಿರುತ್ತದೆ. ಯುನೈಟೆಡ್‌ ಸ್ಟೇಟ್ಸ್‌ನಲ್ಲಿ, 1999ರ ನಿಸ್ತಂತು ಸಂವಹನ ಮತ್ತು ಸಾರ್ವಜನಿಕ ಸುರಕ್ಷತೆ ಕಾಯಿದೆಯು ತಮ್ಮ ತುರ್ತು ಮಾಹಿತಿಯನ್ನು ಸದ್ಯೋಚಿತವಾಗಿಡುವುದರ ಜವಾಬ್ದಾರಿಯನ್ನು ಸೇವಾದಾರರ ಬದಲಿಗೆ ಗ್ರಾಹಕರಿಗೇ ವಹಿಸಿದೆ.

ಅತಿರಿಕ್ತತೆಯ ಕೊರತೆ

[ಬದಲಾಯಿಸಿ]

ಪ್ರಸಕ್ತ ಅಂತರಜಾಲ ಮತ್ತು PSTN ನಡುವಿನ ಪ್ರತ್ಯೇಕತೆಯಿಂದಾಗಿ ನಿರ್ದಿಷ್ಟ ಮೊತ್ತದ ಅತಿರಿಕ್ತತೆ ಸೃಷ್ಟಿಯಾಗುತ್ತಿದೆ. ಅಂತರಜಾಲ ನಿಲುಗಡೆಯೆಂದರೆ ಅದೇ ಸಮಯದಲ್ಲಿ ಕರೆ ಸಂವಹನವೂ ನಿಲುಗಡೆಯಾಗಲೇ ಬೇಕೆಂದೇನಿಲ್ಲ, ವ್ಯಕ್ತಿಗಳು ತುರ್ತು ಸೇವೆಗಳಿಗೆ ಕರೆ ಮಾಡಲು ಸಾಧ್ಯವಿರುತ್ತದೆ ಹಾಗೂ ಕೆಲ ಉದ್ಯಮಗಳು ಸಾಮಾನ್ಯವಾಗಿಯೇ ತಮ್ಮ ಕಾರ್ಯವನ್ನು ಮುಂದುವರೆಸುತ್ತವೆ. ದೂರವಾಣಿ ಸೇವೆಗಳು ಸಂಪೂರ್ಣವಾಗಿ ಅಂತರಜಾಲ ಆಧಾರರಚನೆಯ ಮೇಲೆಯೇ ಅವಲಂಬಿತವಾಗಿರುವ ಸಂದರ್ಭಗಳಲ್ಲಿ, ಏಕ-ಸ್ಥಳದ ವಿಫಲತೆಯು ಸಮುದಾಯಗಳನ್ನು ಬೇರೆಡೆಗೆ ಎನ್‌ಹ್ಯಾನ್ಸ್‌ಡ್‌ 911 ಮತ್ತು ಸಮಾನ ಸೇವೆಗಳೂ ಸೇರಿದಂತೆ ಎಲ್ಲಾ ಸಂವಹನ ವ್ಯವಸ್ಥೆಗಳಿಂದ ಬೇರ್ಪಡಿಸಬಹುದು.[೩೦]

ಸಂಖ್ಯಾ ಹೊಂದಿಕೆ ಸೌಲಭ್ಯ

[ಬದಲಾಯಿಸಿ]

ಸ್ಥಳೀಯ ಸಂಖ್ಯೆ ಹೊಂದಿಕೆ (LNP) ಮತ್ತು ಸಂಚಾರಿ ದೂರವಾಣಿ ಸಂಖ್ಯೆ ಹೊಂದಿಕೆಗಳು (MNP) VoIP ಉದ್ಯಮವನ್ನು ಬಾಧಿಸಬಹುದು. ನವೆಂಬರ್‌ 2007ರಲ್ಲಿ, ಯುನೈಟೆಡ್‌ ಸ್ಟೇಟ್ಸ್‌ನಲ್ಲಿನ ಫೆಡೆರಲ್‌ ಕಮ್ಯುನಿಕೇಷನ್ಸ್‌‌ ಕಮಿಷನ್‌ ಸಂಸ್ಥೆಯು ಅಂತರ್‌ಸಂಪರ್ಕಿತ VoIP ಸೇವಾದಾರರು ಮತ್ತು VoIP ಸೇವಾದಾರರನ್ನು ಬೆಂಬಲಿಸುವ ವಾಹಕಸಂಸ್ಥೆಗಳಿಗೆ ಸಂಖ್ಯಾ ಹೊಂದಿಕೆ ಜವಾಬ್ದಾರಿಯನ್ನು ವಿಧಿಸಿ ಆದೇಶ ಹೊರಡಿಸಿದೆ.[೩೧] ಸಂಖ್ಯಾ ಹೊಂದಿಕೆ ಸೌಲಭ್ಯವೆಂದರೆ ಚಂದಾದಾರರು ಹೊಸ ದೂರವಾಣಿ ವಾಹಕ ಸಂಸ್ಥೆಯನ್ನು ಹೊಸ ಸಂಖ್ಯೆ ನೀಡಿಕೆಯ ಅಗತ್ಯವಿಲ್ಲದೇ ಆಯ್ಕೆ ಮಾಡಿಕೊಳ್ಳುವ ಸೇವೆಯಾಗಿದೆ. ಸಾಧಾರಣವಾಗಿ, ಇದು ಹಳೆಯ ಸಂಖ್ಯೆಯನ್ನು ಹೊಸ ವಾಹಕದಿಂದ ನೀಡಲ್ಪಟ್ಟ ಅಪ್ರಕಟಿತ ಸಂಖ್ಯೆಗೆ "ಸಂಬಂಧಿಸುವ/ಸಂಬಂಧ ಕಲ್ಪಿಸುವ" ಪೂರ್ವ/ಮಾಜಿ ವಾಹಕ ಸಂಸ್ಥೆಯ ಜವಾಬ್ದಾರಿಯಾಗಿರುತ್ತದೆ. ಇದನ್ನು ಸಂಖ್ಯೆಗಳ ದತ್ತಸಂಚಯವನ್ನು ನಿರ್ವಹಿಸಿಕೊಂಡು ಬರುವ ಮೂಲಕ ಸಾಧಿಸಬಹುದು. ಡಯಲ್‌ ಮಾಡಿದ ಸಂಖ್ಯೆಯ ಕರೆಯು ಮೊದಲಿಗೆ ಮೂಲ ವಾಹಕಕ್ಕೆ ಹೋಗಿ ತ್ವರಿತವಾಗಿ ಹೊಸ ವಾಹಕಕ್ಕೆ ನಿರ್ದೇಶಿಸುತ್ತದೆ. ಚಂದಾದಾರರು ಮೂಲ ವಾಹಕಕ್ಕೆ ಮರಳಿ ಬಂದರೂ ಒಂದಕ್ಕಿಂತ ಹೆಚ್ಚು ಸಂಖ್ಯಾ ಹೊಂದಿಕೆಯ ಉಲ್ಲೇಖಗಳನ್ನು ನಿರ್ವಹಿಸಲೇಬೇಕಾಗುತ್ತದೆ. FCCಯು ವಾಹಕ ಸಂಸ್ಥೆಗಳು ಇಂತಹಾ ಬಳಕೆದಾರ-ಸುರಕ್ಷತಾ ಕರಾರುಗಳನ್ನು ಪಾಲಿಸುವುದು ಕಡ್ಡಾಯ ಮಾಡಿದೆ. VoIP ವ್ಯವಸ್ಥೆಯಿಂದ ಮಾಡಲಾದ ಧ್ವನಿ ಕರೆಯು ತನ್ನ ಗಮ್ಯವನ್ನು ಸೇರಲು ಸಾಂಪ್ರದಾಯಿಕ ಸಂಚಾರಿ ದೂರವಾಣಿ ವಾಹಕದ ಸಂಚಾರಿ ದೂರವಾಣಿ ಸಂಖ್ಯೆಗೆ ನಿರ್ದೇಶನ ಪಡೆದಿದ್ದಲ್ಲಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹಿಂದಿನಿಂದಲೇ VoIP ಪ್ರತಿ ದೂರವಾಣಿ ಕರೆ ಮಾಡಿದ ತಕ್ಷಣವೇ ಗಮ್ಯವನ್ನು ಗಮನಿಸಿ ಆ ಕರೆಯನ್ನು ಗ್ರಾಹಕರಿಗೆ ಕನಿಷ್ಟ ವೆಚ್ಚ ತಗಲುವಂತೆ ಜಾಲದ ಮೂಲಕ ಕಳಿಸುವ ವ್ಯವಸ್ಥೆಯಿಂದಾಗಿ ಕನಿಷ್ಟ ವೆಚ್ಚದ ಸಾಗಣಾ/ನಿರ್ದೇಶನಾ (LCR) ವ್ಯವಸ್ಥೆ ಎಂಬುದಾಗಿ ಗುರುತಿಸಲ್ಪಟ್ಟಿದೆ.[೩೨] ಕರೆ ನಿರ್ದೇಶನದಲ್ಲಿ ಸಂಖ್ಯಾ ಹೊಂದಿಕೆಯಿಂದಾಗುವ ಸಂಕೀರ್ಣತೆಯನ್ನು ಗಮನದಲ್ಲಿಟ್ಟುಕೊಂಡು ಈ ಗೌರವದ ಬಗ್ಗೆ ಚರ್ಚೆಯಾಗುತ್ತಿದೆ. GSM ಸಂಖ್ಯಾ ಹೊಂದಿಕೆಯು ಚಾಲ್ತಿಯಲ್ಲಿರುವಾಗ, LCR ಸೇವಾದಾರರು ಕರೆ ನಿರ್ದೇಶಿಸಲು ಜಾಲ ಮೂಲ ಪೂರ್ವಪ್ರತ್ಯಯದ ಮೇಲೆ ಅವಲಂಬಿತರಾಗಬೇಕಿಲ್ಲ. ಬದಲಿಗೆ, ಅವರು ಕರೆ ನಿರ್ದೇಶನಕ್ಕೆ ಮುನ್ನ ಪ್ರತಿ ಸಂಖ್ಯೆಯ ವಾಸ್ತವಿಕ ಜಾಲವನ್ನು ಗೊತ್ತುಪಡಿಸಿಕೊಳ್ಳಬೇಕಾಗಿರುತ್ತದೆ. ಆದ್ದರಿಂದ, VoIP ವ್ಯವಸ್ಥೆಗಳು ಧ್ವನಿ ಕರೆಯನ್ನು ನಿರ್ದೇಶಿಸುವಾಗ MNPಯನ್ನು ಕೂಡಾ ನಿರ್ವಹಿಸಬೇಕಾಗುತ್ತದೆ. UKಯಂತಹಾ ಕೇಂದ್ರಿತ ದತ್ತಸಂಚಯವಿಲ್ಲದಿರುವ ರಾಷ್ಟ್ರಗಳಲ್ಲಿ ಸಂಚಾರಿ ದೂರವಾಣಿ ಸಂಖ್ಯೆಯು ಯಾವ ಸ್ಥಳೀಯ ಜಾಲಕ್ಕೆ ಸೇರಿದ್ದೆಂದು GSM ಜಾಲದ ಮೂಲಕವೇ ಪತ್ತೆಹಚ್ಚಬೇಕಾಗುತ್ತದೆ. ಉದ್ಯಮ ಮಾರುಕಟ್ಟೆಯಲ್ಲಿ ಕನಿಷ್ಟ ವೆಚ್ಚದ ನಿರ್ದೇಶನಾ ಸೌಲಭ್ಯದಿಂದಾಗಿ VoIPಯ ಜನಪ್ರಿಯತೆ ಹೆಚ್ಚಿದ ಹಾಗೆ ಕರೆಗಳನ್ನು ನಿರ್ವಹಿಸಬೇಕಾದರೆ ನಿರ್ದಿಷ್ಟ ಮಟ್ಟದ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕಾಗುತ್ತದೆ. MNP ಪರಿಶೀಲನೆಗಳು ಸೇವೆಯ ಗುಣಮಟ್ಟ ಖಾತರಿಪಡಿಸಿಕೊಳ್ಳಲು ಮುಖ್ಯ. MNP ಅರಸುವಿಕೆ/ಹುಡುಕುವಿಕೆಯನ್ನು ಕರೆ ನಿರ್ದೇಶನಕ್ಕೆ ಮುನ್ನ ನಿರ್ವಹಿಸಿ, ತನ್ಮೂಲಕ ಧ್ವನಿ ಕರೆಯು ವಾಸ್ತವಿಕವಾಗಿ ಕಾರ್ಯಸಾಧ್ಯ ಎಂದು ಖಾತ್ರಿಪಡಿಸಿ, VoIP ಸೇವಾದಾರರು ಉದ್ಯಮ ಗ್ರಾಹಕರಿಗೆ ಅವರಿಗೆ ಬೇಕಾದ ಮಟ್ಟದ ವಿಶ್ವಾಸಾರ್ಹತೆ ನೀಡಬಹುದು. ಸಿಂಗಪೂರ್‌ನಂತಹಾ ರಾಷ್ಟ್ರಗಳಲ್ಲಿ, ಇತ್ತೀಚಿನ ಸಂಚಾರಿ ದೂರವಾಣಿ ಸಂಖ್ಯಾ ಹೊಂದಿಕೆ ವ್ಯವಸ್ಥೆಯು ನಿಸ್ತಂತು ಬ್ರಾಡ್‌ಬ್ಯಾಂಡ್‌ ಸೇವಾದಾರರು ಮತ್ತು IP ಆಧಾರಿತ ಕರೆ (VoIP) ಸೇವಾದಾರರುಗಳಂತಹಾ ಅಸಾಂಪ್ರದಾಯಿಕ ದೂರಸಂಪರ್ಕ ಸೇವಾದಾರರಿಗೆ ಹೊಸ ವ್ಯಾವಹಾರಿಕ ಅವಕಾಶಗಳ ಬಾಗಿಲು ತೆರೆಯುವುದೆಂದು ಆಶಿಸಲಾಗಿದೆ.[ಸೂಕ್ತ ಉಲ್ಲೇಖನ ಬೇಕು].

PSTN ಏಕೀಕರಣ

[ಬದಲಾಯಿಸಿ]

E.164 ಎಂಬುದು PSTN ಮತ್ತು PLMNಗಳಿಗೆ ವಿಶ್ವವ್ಯಾಪಿ ಸಂಖ್ಯೆ ನೀಡಿಕೆಯ ಮಾನಕವಾಗಿದೆ. ಬಹಳಷ್ಟು VoIP ಸಜ್ಜುಗೊಳಿಕೆಗಳು E.164ಯ ಮೂಲಕ PSTN/PLMN ಮತ್ತು VoIP ಚಂದಾದಾರರ ನಡುವಿನ ಕರೆಗಳನ್ನು ನಿರ್ದೇಶಿಸುವುದನ್ನು ಬೆಂಬಲಿಸುತ್ತವೆ.[೩೩] VoIP ಸಜ್ಜುಗೊಳಿಕೆಗಳು ಇತರೆ ಗುರುತಿಸುವಿಕೆಯ ವಿಧಾನಗಳನ್ನು ಬಳಸಲು ಅವಕಾಶ ನೀಡುತ್ತದೆ. ಉದಾಹರಣೆಗೆ, Skype ಚಂದಾದಾರರಿಗೆ "Skype ಹೆಸರುಗಳನ್ನು"[೩೪] (ಬಳಕೆದಾರ ಹೆಸರುಗಳು) ಆಯ್ಕೆ ಮಾಡಲು ಅವಕಾಶ ಕಲ್ಪಿಸಿದರೆ SIP ಸಜ್ಜುಗೊಳಿಕೆಗಳು ಮಿಂಚಂಚೆ ವಿಳಾಸಗಳನ್ನು ಹೋಲುವ URIಗಳನ್ನು[೩೫] ಬಳಸಬಹುದಾಗಿದೆ. VoIP ಸಜ್ಜುಗೊಳಿಕೆಗಳು ಆಗ್ಗಾಗ್ಗೆ E.164ಅಲ್ಲದ ಐಡೆಂಟಿಫೈಯರ್‌ಗಳನ್ನು E.164 ಸಂಖ್ಯೆಗಳಿಗೆ ಮತ್ತು ವಿರುದ್ಧಾತ್ಮಕವಾಗಿಯೂ IMS ಮತ್ತು SIPನಲ್ಲಿ ENUM ಸೇವೆ ಹಾಗೂ Skype[೩೬] ನಿಂದ ನೀಡಲಾಗುವ ಸ್ಕೈಪ್‌-ಇನ್‌ ಸೇವೆಯಂತಹಾ ಪರಿವರ್ತಿಸುವ ವಿಧಾನಗಳನ್ನು ಬಳಸುತ್ತವೆ.[೩೭] PSTN ಏಕೀಕರಣಕ್ಕೆ ಪ್ರತಿಧ್ವನಿಯೂ ಸಹಾ ಒಂದು ಸಮಸ್ಯೆಯಾಗಿರಬಹುದಾಗಿದೆ.[೩೮] ಪ್ರತಿಧ್ವನಿಗೆ ಅನಲಾಗ್‌ ವಿದ್ಯುನ್ಮಂಡಲದಲ್ಲಿ ಹಾಗೂ ಸ್ವೀಕರಣಾ ತುದಿಯಲ್ಲಿ ರವಾನೆ ಮತ್ತು ಸ್ವೀಕರಣೆಯ ಸಂಜ್ಞೆಯ ಸಂಯೋಜನೆಗಳಲ್ಲಿ ರೋಧತ್ವ ಹೊಂದಾಣಿಕೆಯಿಲ್ಲದಿರುವುದೂ ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ.

ಭದ್ರತೆ

[ಬದಲಾಯಿಸಿ]

Expression error: Unexpected < operator. ಅಂತರಜಾಲ ಪ್ರೋಟೋಕಾಲ್ ಆಧಾರಿತ ಕರೆ ದೂರವಾಣಿ ವ್ಯವಸ್ಥೆಗಳು (VoIP) ಇತರೆ ಯಾವುದೇ ಅಂತರಜಾಲ-ಸಂಪರ್ಕಿತ ಸಾಧನಗಳಷ್ಟೇ ಅಪಾಯಕ್ಕೀಡಾಗುವ ಸಾಧ್ಯತೆ ಹೊಂದಿರುತ್ತವೆ. ಹೀಗೆಂದರೆ ಈ ದೌರ್ಬಲ್ಯಗಳ ಅರಿವಿರುವ ಹ್ಯಾಕರ್‌ಗಳು ಸೇವಾ-ನಿರಾಕರಣೆ ಆಕ್ರಮಣ ನಡೆಸಿ, ಗ್ರಾಹಕ ದತ್ತವನ್ನು ಶೇಖರಿಸಿಟ್ಟುಕೊಳ್ಳಬಹುದು, ಸಂಭಾಷಣೆಗಳನ್ನು ದಾಖಲಿಸಿಕೊಂಡಿರಬಹುದು ಮತ್ತು ಕರೆಅಂಚೆಗಳನ್ನು ತೆರೆದು ನೋಡಬಹುದು.[೩೯] VoIP ದಟ್ಟಣೆಯನ್ನು ಫೈರ್‌ವಾಲ್‌ಗಳು ಹಾಗೂ ಜಾಲ ವಿಳಾಸ ಪರಿವರ್ತಕಗಳ ಮೂಲಕ ಸಾಗಿಸುವುದು ಮತ್ತೊಂದು ಸವಾಲು. ಫೈರ್‌ವಾಲ್‌ಗಳ ಜೊತೆಗೆ ಸುರಕ್ಷಿತ ಜಾಲಗಳಿಗೆ ಹಾಗೂ ಅವುಗಳಿಂದ VoIP ಕರೆಗಳನ್ನು ಕಾರ್ಯಗತಗೊಳಿಸಲು ಖಾಸಗಿ ಸೆಷನ್‌ ಮಿತಿ ನಿಯಂತ್ರಕಗಳನ್ನು ಬಳಸಲಾಗುತ್ತದೆ. Skype ಕರೆಗಳನ್ನು ಸಾಗಿಸಲು ಜಾಲದಲ್ಲಿರುವ ಇತರೆ Skype ಕೇಂದ್ರಗಳ ಮೂಲಕ, ಸಮ್ಮಿತೀಯ NATಗಳು ಮತ್ತು ಫೈರ್‌ವಾಲ್‌ಗಳನ್ನು ಹಾದುಹೋಗಲು ಅನುವಾಗುವಂತೆ ಖಾಸಗಿ ಸ್ವಾಮ್ಯದ ಪ್ರೋಟೋಕಾಲ್ಅನ್ನು ಬಳಸುತ್ತದೆ. STUN ಅಥವಾ ICEನಂತಹಾ ಪ್ರೋಟೋಕಾಲ್‌ಗಳ ಬಳಸುವಿಕೆಯು NATಗಳನ್ನು ಹಾದುಹೋಗುವ ಇನ್ನಿತರ ವಿಧಾನಗಳು. ಸುರಕ್ಷಿತ ದೂರವಾಣಿ ವ್ಯವಸ್ಥೆಯನ್ನು ಸಾಂಪ್ರದಾಯಿಕ ದೂರವಾಣಿ ಸಂಪರ್ಕಕ್ಕಿಂತ VoIPಯಲ್ಲಿ ಸುಲಭವಾಗಿ ಸಜ್ಜುಗೊಳಿಸಬಹುದಾಗಿದ್ದರೂ ಅನೇಕ ಬಳಕೆದಾರ VoIP ವ್ಯವಸ್ಥೆಗಳು ಗೂಢಲಿಪೀಕರಣವನ್ನು ಬೆಂಬಲಿಸುವುದಿಲ್ಲ. ಇದರಿಂದಾಗಿ VoIP ಕರೆಗಳ ಕದ್ದಾಲಿಕೆ ಹಾಗೂ ಅವುಗಳನ್ನು ಬದಲಾಯಿಸುವುದು ಬಹಳಷ್ಟು ಸುಲಭವಾಗಿದೆ.[೪೦] ನೀವು ಸುರಕ್ಷಿತ VLANನಲ್ಲಿರದಿದ್ದರೆ ದತ್ತಾಂಶ ಪತ್ತೆ ತಂತ್ರಾಂಶವನ್ನು ಹೊಂದಿರುವ ದಾಳಿಕೋರರು ನಿಮ್ಮ VoIP ಕರೆಗಳನ್ನು ತಡೆಹಿಡಿಯಬಲ್ಲರು. VoIP ಸಂಭಾಷಣೆಗಳನ್ನು ಕದ್ದಾಲಿಸಲು Wiresharkನಂತಹಾ ಮುಕ್ತ ಕ್ರಮವಿಧಿ ತಂತ್ರಾಂಶಗಳಿವೆ. ಖಾಸಗಿ ಸ್ವಾಮ್ಯದ ಸಜ್ಜುಗೊಳಿಕೆಗಳಲ್ಲಿ ಹಕ್ಕುಸ್ವಾಮ್ಯತೆ ಹೊಂದಿರುವ ಧ್ವನಿ ಸಂಕೇತಕಗಳನ್ನು ಬಳಸುವ ಮೂಲಕ ಅಲ್ಪಮಟ್ಟದ ಸುರಕ್ಷತೆಯನ್ನು ಕಾಯ್ದುಕೊಳ್ಳಲಾಗುತ್ತಿದ್ದರೂ, ಮುಕ್ತಕ್ರಮವಿಧಿ ಅನ್ವಯಗಳಿಗೆ ಇದು ಸುಲಭವಾಗಿ ಲಭ್ಯವಿಲ್ಲ[ಸೂಕ್ತ ಉಲ್ಲೇಖನ ಬೇಕು], ಆದಾಗ್ಯೂ ಇತರೆ ಕ್ಷೇತ್ರಗಳಲ್ಲಿ ಅಸ್ಪಷ್ಟವಾದ ಸುರಕ್ಷಿತತೆಯು ಉಪಯುಕ್ತ ಎಂಬ ಅಭಿಪ್ರಾಯ ಹೊರಹೊಮ್ಮಿಲ್ಲ.[ಸೂಕ್ತ ಉಲ್ಲೇಖನ ಬೇಕು] ಕೆಲ ವಿಕ್ರಯಿದಾರರು ಕದ್ದಾಲಿಕೆಯನ್ನು ದುಃಸ್ಸಾಧ್ಯವಾಗಿಸಲು ಸಂಕೋಚನವನ್ನು ಕೂಡ ಬಳಸುತ್ತಾರೆ.[ಸೂಕ್ತ ಉಲ್ಲೇಖನ ಬೇಕು] ಆದಾಗ್ಯೂ, ನಿಜವಾದ ಸುರಕ್ಷತೆಗೆ ಗ್ರಾಹಕ ಸೌಲಭ್ಯವಾಗಿ ವ್ಯಾಪಕ ಲಭ್ಯತೆಯಿಲ್ಲದ ಗೂಢಲಿಪೀಕರಣ ಹಾಗೂ ಗೂಢಲಿಪೀಕೃತ ಪ್ರಮಾಣೀಕರಣಗಳು ಅಗತ್ಯವಾಗಿವೆ. ಪ್ರಸ್ತುತ ಲಭ್ಯವಿರುವ ಸುರಕ್ಷತಾ ಮಾನಕವಾದ ಸೆಕ್ಯೂರ್‌ ರಿಯಲ್‌ಟೈಂ ಟ್ರಾನ್ಸ್‌ಪೋರ್ಟ್ ಪ್ರೋಟೋಕಾಲ್ (SRTP) ಮತ್ತು ನವೀನ ZRTP ಪ್ರೋಟೋಕಾಲ್‌ಗಳು ಅನಲಾಗ್‌ ದೂರವಾಣಿ ಸಂಯೋಜಕಗಳು(ATAಗಳು) ಹಾಗೂ ಅನೇಕ ಸಾಫ್ಟ್‌ಫೋನ್‌ಗಳಲ್ಲಿ ಲಭ್ಯವಿವೆ. IPsecಅನ್ನು ಬಳಸಿಕೊಂಡು ಸಮಯಾನುವರ್ತಿ ಗೂಢಲಿಪೀಕರಣದ ಮೂಲಕ P2P VoIPಯನ್ನು ಸುರಕ್ಷಿತಗೊಳಿಸಲು ಸಾಧ್ಯವಿದೆ. Skype SRTPಯನ್ನು ಬಳಸದೇ, ಬದಲಿಗೆ Skype ಸೇವಾದಾರ ಸಂಸ್ಥೆಗೆ ಪಾರದರ್ಶಕವಾದ ಗೂಢಲಿಪೀಕರಣವನ್ನು ಬಳಸುತ್ತದೆ[ಸೂಕ್ತ ಉಲ್ಲೇಖನ ಬೇಕು]. Skype ಸಂಸ್ಥೆಯು 2005ರಲ್ಲಿ, Skype ತಂತ್ರಾಂಶದ ಸುರಕ್ಷತೆಯನ್ನು ವಿಮರ್ಶಿಸಲು Dr ಟಾಂ ಬರ್ಸನ್‌, ಎಂಬ ಸಂಶೋಧಕರನ್ನು ಆಮಂತ್ರಿಸಿತ್ತು, ಅವರ ನಿರ್ಣಯಗಳು ಪ್ರಕಟಿತ ವರದಿಯಲ್ಲಿವೆ.[೪೧] ವಾಯ್ಸ್‌ VPN ತಂತ್ರಾಂಶವು ಅಂಕೀಕೃತ ಕರೆವಾಹಿನಿಗೆ IPSec ಗೂಢಲಿಪೀಕರಣವನ್ನು ಅನ್ವಯಿಸಿ ಔದ್ಯಮಿಕ VoIP ಜಾಲಗಳಿಗೆ ಸುರಕ್ಷಿತ ಕರೆ ವ್ಯವಸ್ಥೆ ನೀಡುತ್ತದೆ.

VoIPಯ ಸಂರಕ್ಷಣೆ

[ಬದಲಾಯಿಸಿ]

ಮೇಲ್ಕಂಡ ಸುರಕ್ಷತಾ ಲೋಪಗಳನ್ನು ತಡೆಯಲು ಸರ್ಕಾರೀ ಹಾಗೂ ಸೇನಾ ಸಂಸ್ಥೆಗಳು ಗೌಪ್ಯ, ಮತ್ತು/ಅಥವಾ ವರ್ಗೀಕೃತ VoIP ಸಂವಹನಗಳನ್ನು ಸಂರಕ್ಷಿಸಲು ಸುರಕ್ಷಿತ IP ಆಧಾರಿತ ಕರೆ (VoSIP), IP ಆಧಾರಿತ ಸುರಕ್ಷಿತ ಕರೆ(SVoIP), ಮತ್ತು ಸುರಕ್ಷಿತ IP ಆಧಾರಿತ ಸುರಕ್ಷಿತ ಕರೆ (SVoSIP)ಗಳನ್ನು ಬಳಸುತ್ತಿವೆ.[೪೨] IP ಆಧಾರಿತ ಸುರಕ್ಷಿತ ಕರೆಯನ್ನು VoIP ಟೈಪ್‌ 1 ಮಾದರಿಯ ಗೂಢಲಿಪೀಕರಣದ ಮೂಲಕ ಅನ್ವಯಿಸಬಹುದು. ಸುರಕ್ಷಿತ IP ಆಧಾರಿತ ಸುರಕ್ಷಿತ ಕರೆಯನ್ನು SIPRNetನಂತೆ [೪೩][೪೪][೪೫][೪೬][೪೭] ವರ್ಗೀಕೃತ ಜಾಲದಲ್ಲಿ ಟೈಪ್‌ 1 ಮಾದರಿಯ ಗೂಢಲಿಪೀಕರಣದ ಮೂಲಕ ಅನ್ವಯಿಸಬಹುದು. ಸಾರ್ವಜನಿಕ ಸುರಕ್ಷಿತ VoIPಯು ಉಚಿತ GNU ತಂತ್ರಾಂಶಗಳಲ್ಲಿ ಸಹಾ ಲಭ್ಯವಿದೆ.[೪೮]

ಕರೆದಾತ ID

[ಬದಲಾಯಿಸಿ]

ಬಹಳಷ್ಟು VoIP ಸೇವಾದಾರರು ಹೊರಹೋಗುವ ಕರೆಗಳ ಮೇಲೆ ಹೆಸರಿನೊಂದಿಗೆ ಪೂರ್ಣ ಕರೆದಾತ ID ಬೆಂಬಲವನ್ನು ನೀಡುತ್ತಿದ್ದರೂ VoIP ಸೇವಾದಾರರಲ್ಲಿ ಕರೆದಾತ ID ಬೆಂಬಲವು ಸಮಾನವಾಗಿ ಲಭ್ಯವಿಲ್ಲ. ಕೆಲ ಸಂದರ್ಭಗಳಲ್ಲಿ, ಕರೆದಾತ ID ಮಾಹಿತಿ ನೀಡುವಲ್ಲಿ ನಕಲಿ ಮಾಹಿತಿ ನೀಡಿಕೆಗೆ VoIP ಸೇವಾದಾರರು ಕರೆದಾತರಿಗೆ ಅವಕಾಶ ನೀಡುವುದರ ಮೂಲಕ ಕರೆದಾತನಿಗೆ ಸಂಬಂಧಿಸಿಲ್ಲದ ಕರೆಗಳನ್ನು ಅವರು ಮಾಡಿದಂತೆ ಬಿಂಬಿಸುವ ಸಂಭಾವ್ಯತೆಗೆ ದಾರಿ ಮಾಡಿದೆ.[೪೯] ಔದ್ಯಮಿಕ ಮಟ್ಟದ VoIP ಉಪಕರಣ ಮತ್ತು ತಂತ್ರಾಂಶಗಳು ಕರೆದಾತ ID ಮಾಹಿತಿಯನ್ನು ಬದಲಿಸುವುದನ್ನು ಸುಲಭಗೊಳಿಸಿವೆ. ಇದರಿಂದ ಉದ್ಯಮಗಳಿಗೆ ಉತ್ತಮ ಸೌಕರ್ಯವಾದರೂ, ಇದು ದುರ್ಬಳಕೆಗೆ ಅಷ್ಟೇ ಮುಕ್ತವಾಗಿದೆ. "ಕರೆದಾತ IDಯಲ್ಲಿನ ಸತ್ಯತೆಯ ಕಾಯಿದೆ"ಯು U.S. ಶಾಸನಸಭೆಯಲ್ಲಿ 2006ರಿಂದ, ತಯಾರಿಯಲ್ಲಿದ್ದರೂ ಜನವರಿ 2009ರವರೆಗೂ ಇದನ್ನು ಕಾರ್ಯಗತಗೊಳಿಸಲಾಗಿಲ್ಲ. ಈ ಕಾಯ್ದೆಯು ಯುನೈಟೆಡ್‌ ಸ್ಟೇಟ್ಸ್‌ನಲ್ಲಿ "ತಪ್ಪು ಮಾಹಿತಿ ಅಥವಾ ಅಸ್ಪಷ್ಟ ಕರೆದಾತ ಮಾಹಿತಿಯನ್ನು ವಂಚಿಸುವ, ಹಾನಿ ಮಾಡುವ ಅಥವಾ ಯಾವುದೇ ಮೌಲ್ಯಯುಕ್ತ ಮಾಹಿತಿಯನ್ನು ಪಡೆಯುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ರವಾನಿಸುವುದನ್ನು ..." [೫೦] ಅಪರಾಧವೆಂದು ಘೋಷಿಸಲು ಪ್ರಸ್ತಾಪಿಸುತ್ತದೆ.

ಸಾಂಪ್ರದಾಯಿಕ ಅನಲಾಗ್‌ ದೂರವಾಣಿ ಸಾಧನಗಳೊಂದಿಗೆ ಸಹವರ್ತನ

[ಬದಲಾಯಿಸಿ]

ಕೆಲ ಅನಲಾಗ್‌ ದೂರವಾಣಿ ಸಂಯೋಜಕಗಳು ಹಳೆಯ ದೂರವಾಣಿಗಳಿಂದ ಮಾಡಿದ ಪಲ್ಸ್‌ ಡಯಲಿಂಗ್‌ ಅನ್ನು ವಿಸಂಕೇತಿಸುವುದಿಲ್ಲ. VoIP ಬಳಕೆದಾರರು ಆಗ ಪಲ್ಸ್‌ನಿಂದ ಟೋನ್‌ ಪರಿವರ್ತಕವನ್ನು ಅಗತ್ಯವಿದ್ದರೆ ಬಳಸಬೇಕಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಫ್ಯಾಕ್ಸ್‌ ನಿರ್ವಹಣೆ

[ಬದಲಾಯಿಸಿ]

VoIP ಸಜ್ಜುಗೊಳಿಕೆಗಳ ಮೂಲಕ ಫ್ಯಾಕ್ಸ್‌/ಫ್ಯಾಸಿಮಿಲಿ ಕಳಿಸುವಿಕೆಗೆ ಬೆಂಬಲವು ಈಗಲೂ ಮಿತಿಗೆ ಒಳಪಟ್ಟಿದೆ. ಬಳಕೆಯಲ್ಲಿರುವ ಧ್ವನಿ ಸಂಕೇತಕಗಳನ್ನು ಫ್ಯಾಕ್ಸ್‌ ರವಾನೆಗೆಂದು ವಿನ್ಯಾಸಗೊಳಿಸಲಾಗಿರಲಿಲ್ಲ ; ಅವುಗಳನ್ನು ಮಾನವ ಧ್ವನಿಯ ಅನಲಾಗ್‌ ನಿರೂಪಣೆಯನ್ನು ಸಮರ್ಥವಾಗಿ ಅಂಕೀಕರಿಸಲು ವಿನ್ಯಾಸಗೊಳಿಸಲಾಗಿತ್ತು. ಆದಾಗ್ಯೂ, ಅನಲಾಗ್‌ ದತ್ತದ(ಮೂಲ ದಾಖಲೆ) ಸಾಂಖ್ಯಿಕ ನಿರೂಪಣೆಯ (ದಾಖಲೆಯ ಪ್ರತಿರೂಪ) ಅನಲಾಗ್‌ ನಿರೂಪಣೆ(ಮೋಡೆಮ್‌ ಸಂಜ್ಞೆ) ಯನ್ನು ಸಾಂಖ್ಯೀಕರಿಸುವುದರ ಅಸಮರ್ಥತೆಯು VoIPಯ ಯಾವುದೇ ರೀತಿಯ ಬ್ಯಾಂಡ್‌ವಿಡ್ತ್‌ ಅನುಕೂಲಗಳಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ನಕಾರಾತ್ಮಕವಾಗಿದೆ. ಬೇರೆ ರೀತಿಯಲ್ಲಿ ಹೇಳಬೇಕೆಂದರೆ ಫ್ಯಾಕ್ಸ್‌ನ "ದನಿಗಳು" VoIP ವಾಹಿನಿಯಲ್ಲಿ ಸರಿಯಾಗಿ ಹೊಂದಿಕೊಳ್ಳುವುದಿಲ್ಲ. T.38 ಎಂದು ಕರೆಯಲ್ಪಡುವ IP-ಆಧಾರಿತವಾಗಿ-ಫ್ಯಾಕ್ಸ್‌ ರವಾನೆಯ IP-ಆಧಾರಿತ ಬದಲಿ ತಂತ್ರಾಂಶವು ಲಭ್ಯವಿದೆ. T.38 ಪ್ರೋಟೋಕಾಲ್ ಅನ್ನು ಸಾಂಪ್ರದಾಯಿಕ ಫ್ಯಾಕ್ಸ್‌‌/ಪಡಿಯಚ್ಚು/ಯಥಾಪ್ರತಿ ಯಂತ್ರದಂತೆ ಹಾಗೂ ವಿವಿಧ ವಿನ್ಯಾಸರಚನೆಗಳೊಂದಿಗೆ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಫ್ಯಾಕ್ಸ್‌‌/ಪಡಿಯಚ್ಚು/ಯಥಾಪ್ರತಿ ಯಂತ್ರವು PSTNಗೆ ಸಂಪರ್ಕ ಹೊಂದಿರುವ ಒಂದು ಸಾಂಪ್ರದಾಯಿಕ ಫ್ಯಾಕ್ಸ್‌‌/ಪಡಿಯಚ್ಚು/ಯಥಾಪ್ರತಿ ಯಂತ್ರವಾಗಿರಬಹುದು, ಅಥವಾ ಒಂದು (ಅಥವಾ ಸಮಾನವಾದ)ATA ಯಂತ್ರವಾಗಿರಬಹುದು. RJ-45 ಸಂಪರ್ಕಕದ ಮೂಲಕ IP ಜಾಲಕ್ಕೆ ನೇರವಾಗಿ ಸಂಪರ್ಕ ಹೊಂದಿರುವ ಫ್ಯಾಕ್ಸ್‌‌/ಪಡಿಯಚ್ಚು/ಯಥಾಪ್ರತಿ ಯಂತ್ರವಾಗಿರಬಹುದು, ಅಥವಾ ಫ್ಯಾಕ್ಸ್‌‌/ಪಡಿಯಚ್ಚು/ಯಥಾಪ್ರತಿ ಯಂತ್ರದಂತೆ ತೋರ್ಪಡಿಸಿಕೊಳ್ಳುತ್ತಿರುವ ಗಣಕವಾಗಿರಬಹುದು.[೫೧] ಮೂಲತಃ, T.38ಯನ್ನು IP ಜಾಲದ ಮೂಲಕ UDP ಮತ್ತು TCP ರವಾನೆ ವಿಧಾನವನ್ನಾಗಿ ವಿನ್ಯಾಸಗೊಳಿಸಲಾಗಿತ್ತು. ಫ್ಯಾಕ್ಸ್‌‌/ಪಡಿಯಚ್ಚು/ಯಥಾಪ್ರತಿಗೆಂದು UDP ಮತ್ತು TCP ವಿಧಾನಗಳನ್ನು ಬಳಸುವಲ್ಲಿರುವ ಪ್ರಮುಖ ವ್ಯತ್ಯಾಸವೆಂದರೆ ಕಾರ್ಯಸಮಯದಲ್ಲಿನ ವಾಹಿನಿ ಲಕ್ಷಣಗಳು. ಎರಡು IP ಸಾಧನಗಳ ನಡುವಿನ ಬಳಕೆಗೆ TCP ಸೂಕ್ತವಾದದ್ದು. ಆದಾಗ್ಯೂ, ಅನಲಾಗ್‌ ವ್ಯವಸ್ಥೆಗೆ ಸಂಪರ್ಕಿತಗೊಂಡ ಹಳೆಯ ಫ್ಯಾಕ್ಸ್‌‌/ಪಡಿಯಚ್ಚು/ಯಥಾಪ್ರತಿ ಯಂತ್ರಗಳು, ಕಾರ್ಯಸಮಯದಲ್ಲಿನ ಲಕ್ಷಣಗಳಲ್ಲಿ UDPಗೆ ಹೆಚ್ಚು ಹೊಂದುತ್ತವೆ[ಸೂಕ್ತ ಉಲ್ಲೇಖನ ಬೇಕು]. IP ಆಧಾರಿತ ಫ್ಯಾಕ್ಸ್‌‌/ಪಡಿಯಚ್ಚು/ಯಥಾಪ್ರತಿ ಸಮಸ್ಯೆಗಳನ್ನು ನಿವಾರಿಸುವ ಮೂಲ ಫ್ಯಾಕ್ಸ್‌‌/ಪಡಿಯಚ್ಚು/ಯಥಾಪ್ರತಿ ಪ್ರೋಟೋಕಾಲ್ ಆದ T.30ಯ ನವೀಕೃತ ಆವೃತ್ತಿಗಳಿವೆ. ಕೆಲ ಹೊಸ ಫ್ಯಾಕ್ಸ್‌‌/ಪಡಿಯಚ್ಚು/ಯಥಾಪ್ರತಿ ಯಂತ್ರಗಳು ಕನಿಷ್ಟ ವಿನ್ಯಾಸರಚನೆ ಬದಲಾವಣೆಗಳೊಂದಿಗೆ ನೇರವಾಗಿ ಜಾಲಕ್ಕೆ ಸಂಪರ್ಕಿತಗೊಳ್ಳಬಲ್ಲ T.38 ಸಿದ್ಧ ಸಾಮರ್ಥ್ಯಗಳೊಂದಿಗೆ ಬಂದಿವೆ[ಸೂಕ್ತ ಉಲ್ಲೇಖನ ಬೇಕು]. T.38ಯ ಅದ್ವಿತೀಯ ಸೌಲಭ್ಯವೆಂದರೆ ಪ್ರತಿ ದತ್ತಾಂಶವು ಹಿಂದಿನ ದತ್ತಾಂಶದ ಮುಖ್ಯ ದತ್ತದ ಒಂದು ಪ್ರತಿಯನ್ನು ಹೊಂದಿರುತ್ತದೆ. ಇದು ಐಚ್ಛಿಕವಾಗಿದ್ದು ಬಹಳಷ್ಟು ಸಜ್ಜಿಕೆಗಳು ಇದನ್ನು ಬೆಂಬಲಿಸುವ ಸಾಧ್ಯತೆ ಇದೆ. ಪ್ರೇಷಕ ಸರಿಪಡಿಕೆ ವ್ಯವಸ್ಥೆಯು T.38ಗೆ VoIP[ಸೂಕ್ತ ಉಲ್ಲೇಖನ ಬೇಕು]ಗಿಂತ ಹೆಚ್ಚಿಗೆ ತಪ್ಪಿಹೋದ ದತ್ತಾಂಶಗಳ ನಿಭಾವಣೆಯ ಅವಕಾಶವನ್ನು ನೀಡುತ್ತದೆ. T.38ಯೊಂದಿಗೆ,ಎರಡು ಅನುಕ್ರಮವಾದ ದತ್ತಾಂಶಗಳು ತಪ್ಪಿಹೋದರೆ ಮಾತ್ರ ಯಾವುದೇ ದತ್ತವು ತಪ್ಪಿಹೋಗಲು ಸಾಧ್ಯ. ನೀವು ಕಳೆದುಕೊಳ್ಳುವ ದತ್ತವು ಅಲ್ಪಪ್ರಮಾಣದ್ದಾಗಿರುತ್ತದೆ, ಆದರೆ ಸರಿಯಾದ ಸಜ್ಜಿಕೆಗಳು ಹಾಗೂ ಸರಿಪಡಿಕೆಯ ವಿಧಾನಗಳೊಂದಿಗೆ ಸಂಪೂರ್ಣ ಪರಿಮಾಣದ ದತ್ತವನ್ನು ಪಡೆದುಕೊಳ್ಳಬಲ್ಲ ಸಾಧ್ಯತೆ ಹೆಚ್ಚು. T.30 ಮತ್ತು T.38 ಪ್ರೋಟೋಕಾಲ್‌ಗಳ ಸಜ್ಜಿಕೆಗಳನ್ನು ಸೂಕ್ಷ್ಮ ಹೊಂದಾಣಿಕೆಗಳನ್ನು ಮಾಡುವ ಮೂಲಕ ವಿಶ್ವಾಸಾರ್ಹವಲ್ಲದ ಫ್ಯಾಕ್ಸ್‌‌/ಪಡಿಯಚ್ಚು/ಯಥಾಪ್ರತಿಯನ್ನು ಸದೃಢ ಯಂತ್ರವನ್ನಾಗಿಸಬಹುದು[ಸೂಕ್ತ ಉಲ್ಲೇಖನ ಬೇಕು]. ಕೆಲ ಫ್ಯಾಕ್ಸ್‌‌/ಪಡಿಯಚ್ಚು/ಯಥಾಪ್ರತಿ ಯಂತ್ರಗಳು ಮುಂದಿನ ಹಾಳೆ ಸ್ವಯಂಚಾಲಿತವಾಗಿ ಸಿದ್ಧಗೊಳ್ಳುವ ಸಮಯಾವಕಾಶಕ್ಕಾಗಿ ಸಾಲಿನ ಕೊನೆಯಲ್ಲಿ ತಾತ್ಕಾಲಿಕ ವಿರಾಮ ನೀಡುವುದುಂಟು. ಇದು ತಪ್ಪಿಹೋದ ಅಥವಾ ತಡವಾಗಿ ತಲುಪಿದ ದತ್ತಾಂಶಗಳನ್ನು ಹೊಂದಿಸಿಕೊಳ್ಳಲು ಸಿಗುವ ಸದವಕಾಶವಾಗಿರುತ್ತದೆ. ಆದರೆ, ಇದು ಪ್ರತಿ ಸಾಲಿಗೂ ಆಗುವುದಾದರೆ ನಿಮ್ಮ ಫ್ಯಾಕ್ಸ್‌‌/ಪಡಿಯಚ್ಚು/ಯಥಾಪ್ರತಿ ರವಾನೆಯು ದೀರ್ಘಕಾಲ ತೆಗೆದುಕೊಳ್ಳುವುದು ಖಚಿತ. ಮತ್ತೊಂದು ಸಾಧ್ಯತೆಯೆಂದರೆ ಫ್ಯಾಕ್ಸ್‌‌/ಪಡಿಯಚ್ಚು/ಯಥಾಪ್ರತಿ ವ್ಯವಸ್ಥೆಯನ್ನು ರಿಯಲ್‌ಟೈಂ ದತ್ತ ರವಾನೆಯ ಅಗತ್ಯವಿಲ್ಲದ (ವಿಅಂಚೆ ಲಗತ್ತಾಗಿ ಫ್ಯಾಕ್ಸ್‌‌/ಪಡಿಯಚ್ಚು/ಯಥಾಪ್ರತಿಯನ್ನು ರವಾನಿಸುವಿಕೆ (ಫ್ಯಾಕ್ಸ್‌ ನೋಡಿ) ಅಥವಾ ದೂರ ಮುದ್ರಣ (ಅಂತರಜಾಲ ಮುದ್ರಣ ಪ್ರೋಟೋಕಾಲ್ ನೋಡಿ)) ಸಂದೇಶ ಸ್ವಿಚಿಂಗ್‌ ವ್ಯವಸ್ಥೆಯಾಗಿ ಪರಿಗಣಿಸುವುದು. ವ್ಯವಸ್ಥೆಯ ಅಂತಿಮ ತುದಿಯಲ್ಲಿ ಒಳಬರುವ ಫ್ಯಾಕ್ಸ್‌‌/ಪಡಿಯಚ್ಚು/ಯಥಾಪ್ರತಿ ದತ್ತವನ್ನು ಸಂಪೂರ್ಣವಾಗಿ ಶೇಖರಿಸಿಟ್ಟುಕೊಂಡು ನಂತರವೇ ಪ್ರದರ್ಶಿಸುವುದು ಅಥವಾ ಮುದ್ರಿಸುವುದು.

ಇತರೆ ದೂರವಾಣಿ ವ್ಯವಸ್ಥೆ ಸಾಧನಗಳಿಗೆ ಬೆಂಬಲ

[ಬದಲಾಯಿಸಿ]

VoIP ಸಜ್ಜುಗೊಳಿಕೆಗಳ ಮತ್ತೊಂದು ಸವಾಲೆಂದರೆ ಕೆಲ ಇಲ್ಲವೇ ಸಂಪೂರ್ಣ ಚಟುವಟಿಕೆಗಳಿಗೆ PSTN ದೂರವಾಣಿ ಸಂಪರ್ಕದ ಮೇಲೆ ಅವಲಂಬಿತವಾಗಿರುವ DVR ಸಾಧನಗಳು, ಉಪಗ್ರಹ ಕಿರುತೆರೆ ಗ್ರಾಹಕಗಳು, ಎಚ್ಚರಿಕೆ ವ್ಯವಸ್ಥೆಗಳು, ಸಾಂಪ್ರದಾಯಿಕ ಮೋಡೆಮ್‌ಗಳು ಮತ್ತು ಇನ್ನಿತರ ಸಮಾನ ಸಾಧನಗಳಂತಹಾ ಇತರೆ ದೂರವಾಣಿ ವ್ಯವಸ್ಥಾ ಸಾಧನಗಳಿಂದ ಹೊರ ಹೋಗುವ ಕರೆಗಳ ಸರಿಯಾದ ನಿರ್ವಹಣೆ. ಈ ಮಾದರಿಯ ಕರೆಗಳು ಕೆಲವು ಬಾರಿ ತೊಂದೆರೆಗಳಿಲ್ಲದೇ ಪೂರ್ಣಗೊಳ್ಳುತ್ತವೆ, ಇನ್ನಿತರ ಸಂದರ್ಭಗಳಲ್ಲಿ ವಿಫಲಗೊಳ್ಳುತ್ತವೆ. VoIP ಮತ್ತು ಸಂಚಾರಿ ದೂರವಾಣಿ ಪರ್ಯಾಯತ್ವಗಳು ಜನಪ್ರಿಯಗೊಂಡರೆ, ಕೆಲ ಪೂರಕ ಸಾಧನ ನಿರ್ಮಾಣ ಸಂಸ್ಥೆಗಳು ತಮ್ಮ ಸಾಧನಗಳನ್ನು ಮರುವಿನ್ಯಾಸಗೊಳಿಸಲೇಬೇಕಾದ ಅನಿವಾರ್ಯತೆ ಎದುರಿಸಬೇಕಾಗಬಹುದು, ಏಕೆಂದರೆ ಸಾಂಪ್ರದಾಯಿಕ PSTN ದೂರವಾಣಿ ಸಂಪರ್ಕವು ಗ್ರಾಹಕರ ಮನೆಯಲ್ಲಿರುವುದೆಂಬ ಅವರ ಊಹೆ ನಿಷ್ಫಲಗೊಳ್ಳುವುದು.

ಕಾಯಿದೆಯಲ್ಲಿನ ವಿವಾದಾಂಶಗಳು [ಕಾನೂನುಬದ್ಧ ಸಮಸ್ಯೆಗಳು]

[ಬದಲಾಯಿಸಿ]

VoIPಯ ಜನಪ್ರಿಯತೆ ಹೆಚ್ಚಾದಂತೆ, ಹಾಗೂ PSTN ಬಳಕೆದಾರರು VoIP ವ್ಯವಸ್ಥೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬದಲಾಯಿಸಿಕೊಂಡರೆ ಸರ್ಕಾರಗಳು VoIPಯನ್ನು ಸಹಾ ನಿಯಂತ್ರಣಕ್ಕೊಳಪಡಿಸಲು ಉತ್ಸುಕತೆ ತೋರಿವೆ.[೫೨] U.S. ಶಾಸನಸಭೆಯಲ್ಲಿ ಚರ್ಚೆಯಲ್ಲಿರುವ ಮತ್ತೊಂದು ಶಾಸನಾತ್ಮಕ ವಿಷಯವೆಂದರೆ ವಿದೇಶೀ ಬೌದ್ಧಿಕತೆಯ ಮೇಲ್ವಿಚಾರಣೆ ಕಾಯ್ದೆಯಲ್ಲಿನ ಬದಲಾವಣೆಗಳು. ಅಮೇರಿಕನ್ನರು ಹಾಗೂ ವಿದೇಶೀಯರ ನಡುವಿನ ಕರೆಗಳು ಈ ಚರ್ಚೆಯ ಕೇಂದ್ರಬಿಂದು. ನ್ಯಾಷನಲ್‌ ಸೆಕ್ಯೂರಿಟಿ ಏಜೆನ್ಸಿಯು (NSA) ಅಮೆರಿಕನ್ನರ ಸಂಭಾಷಣೆಗಳನ್ನು ವಾರಂಟ್‌ ಇಲ್ಲದೇ ಕದ್ದಾಲಿಸಲು ಅನುಮತಿ ನೀಡಿಲ್ಲ — ಆದರೆ ಅಂತರಜಾಲ ಮತ್ತು ನಿರ್ದಿಷ್ಟವಾಗಿ ಅಂತರಜಾಲ ಆಧಾರಿತ ಕರೆ ಪ್ರೋಟೋಕಾಲ್, ಅಥವಾ VoIPಯು, ಸಾಂಪ್ರದಾಯಿಕ ದೂರವಾಣಿ ವ್ಯವಸ್ಥೆಯು ನೀಡುವ ಹಾಗೆ ಕರೆದಾತರ ನೆಲೆಗೆ ಅಥವಾ ಕರೆ ಸ್ವೀಕರಿಸುವವರ ನೆಲೆಗೆ ಸ್ಪಷ್ಟ ಸಂಪರ್ಕ ನೀಡಿರುವುದಿಲ್ಲ.[೫೩] VoIPಯ ಅಲ್ಪವೆಚ್ಚ ಮತ್ತು ನಮ್ಯತೆಯು ಬಹಳಷ್ಟು ಸಂಸ್ಥೆಗಳನ್ನು ಆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಆಕರ್ಷಿಸಿದಂತೆ NSAಯ ದೂರವಾಣಿ ಕರೆಗಳ ರಹಸ್ಯಾನ್ವೇಷಣೆಯ ಸಾಮರ್ಥ್ಯ ಕುಗ್ಗುತ್ತಾ ಹೋಗುತ್ತದೆ.[೫೩] VoIP ಮತ್ತಿತರ ತಂತ್ರಜ್ಞಾನಗಳು ಸಂಭಾಷಣೆಗಳನ್ನು ಕದ್ದಾಲಿಸುವಾಗ ಅದಕ್ಕೆ ಗುರಿಯಾದ ವ್ಯಕ್ತಿಯ ನೆಲೆಯನ್ನು ಪತ್ತೆಹಚ್ಚುವುದನ್ನು ಕಷ್ಟಸಾಧ್ಯವನ್ನಾಗಿ ಮಾಡಿ, ಹೊಸ ಕಾನೂನಾತ್ಮಕ ಸವಾಲುಗಳನ್ನು ಮುಂದಿರಿಸಿವೆಯಾದ್ದರಿಂದ VoIP ತಂತ್ರಜ್ಞಾನದಿಂದಾಗಿ ಸುರಕ್ಷತೆಯ ಬಗ್ಗೆ ಆತಂಕವನ್ನು ಹೆಚ್ಚಿಸಿದೆ.[೫೪] U.S.ನಲ್ಲಿ, ಫೆಡರಲ್‌ ಕಮ್ಯುನಿಕೇಷನ್ಸ್‌‌ ಕಮಿಷನ್‌ ಅಂತರ್‌ ಸಂಪರ್ಕಿತ VoIP ಸೇವಾದಾರರುಗಳು ಸಾಂಪ್ರದಾಯಿಕ ದೂರಸಂಪರ್ಕ ಸೇವಾದಾರರುಗಳು ಒಳಪಡುವ ನಿಯಮಗಳಿಗೆ ಬದ್ಧರಾಗಿರಬೇಕೆಂದು ಸೂಚಿಸಿದೆ. U.S.ನಲ್ಲಿನ VoIP ಸೇವಾಕರ್ತೃಗಳು ಸ್ಥಳೀಯ ಸಂಖ್ಯಾ ಹೊಂದಾಣಿಕೆ ; ಅಂಗವಿಕಲರಿಗೆ/ವಿಕಲಾಂಗರಿಗೆ ಸೇವೆ ಲಭ್ಯವಾಗುವಂತೆ ನೋಡಿಕೊಳ್ಳುವುದು; ನಿಯಂತ್ರಣಾ ಶುಲ್ಕಗಳನ್ನು ಸಾರ್ವತ್ರಿಕ ಸೇವಾ ತೆರಿಗೆ/ಕೊಡುಗೆಗಳನ್ನು ಹಾಗೂ ಮತ್ತಿತರ ಕಡ್ಡಾಯ ಪಾವತಿಗಳನ್ನು ಮಾಡುವುದು, ಕಮ್ಯುನಿಕೇಷನ್ಸ್‌ ಅಸಿಸ್ಟೆನ್ಸ್‌ ಫಾರ್‌ ಲಾ ಎನ್‌ಫೋರ್ಸ್‌ಮೆಂಟ್‌ ಆಕ್ಟ್‌ (CALEA) ಕಾಯ್ದೆಯ ಪ್ರಕಾರ ಕಾನೂನುಬದ್ಧ ಶಕ್ತಿಗಳಿಗೆ ಮೇಲ್ವಿಚಾರಣೆಗೆ ಬೇಕಾದ ಬೆಂಬಲಗಳನ್ನು ಕೊಡಬೇಕು. "ಅಂತರ-ಸಂಪರ್ಕಿತ" VoIP ಸೇವಾಕರ್ತೃಗಳು ಎನ್‌ಹ್ಯಾನ್ಸ್‌ಡ್‌ 911 ಸೇವೆಯನ್ನು ಕಡ್ಡಾಯವಾಗಿ ನೀಡಬೇಕು, ತಮ್ಮ E-911 ಸಾಮರ್ಥ್ಯದಲ್ಲಿನ ಕೊರತೆ/ಮಿತಿಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಿರಬೇಕು, ಮತ್ತು ಈ ಮಾಹಿತಿಗಳ ಸ್ವೀಕೃತಿಯ ಬ್ಗಗೆ ಎಲ್ಲಾ ಗ್ರಾಹಕರಿಂದ ಸ್ವೀಕೃತಿ ಪತ್ರವನ್ನು ಪಡೆದಿರಬೇಕು.[೫೫] VoIP ಸೇವಾಕರ್ತೃಗಳು ನಿರ್ದಿಷ್ಟ U.S. ದೂರಸಂಪರ್ಕ ನಿಯಮಗಳ, ಸಗಟು ವಾಹಕಸಂಸ್ಥೆಗಳ ಮೂಲಕ ಸ್ಥಳೀಯ ವಿನಿಮಯ ಕೇಂದ್ರದ ವಾಹಕಗಳ ಒಳಬರುವ ಕರೆ ದಟ್ಟಣೆಯ ಅಂತರ್‌-ಸಂಪರ್ಕ ಹಾಗೂ ವಿನಿಮಯಕ್ಕೆ ಅರ್ಹವಾಗುವಂತಹಾ ಸೌಲಭ್ಯವೂ ಸೇರಿದಂತೆ ಅನೇಕ ಅನುಕೂಲಗಳನ್ನು ಪಡೆದಿರುತ್ತವೆ. "ಭ್ರಮಣಶೀಲ" VoIP ಸೇವಾದಾರರು — ಎಂದರೆ ತಮ್ಮ ಬಳಕೆದಾರರ ನೆಲೆಯನ್ನು ಗುರುತಿಸಲು ಸಾಧ್ಯವಾಗದಂತಹಾ ಸೇವಾದಾರರು — ಸರ್ಕಾರದ ದೂರಸಂಪರ್ಕ ನಿಯಮಗಳಿಂದ ವಿನಾಯಿತಿ ಪಡೆದಿರುತ್ತಾರೆ.[೫೬] VoIPಯನ್ನ ನಿಷೇಧಿಸಿರುವ ಗಯಾನಾ, ಅದರ ಚಿಲ್ಲರೆ ವಾಣಿಜ್ಯ ಮಾರಾಟವನ್ನು ಕೇವಲ ದೂರದ ಕರೆಸೇವೆಗಳಿಗೆ ಮಾತ್ರವೇ ಅನುಮತಿಸಿರುವ ಭಾರತ ಮತ್ತು VoIPಗೆ ತೆರಿಗೆ ವಿಧಿಸಿರುವ ಪನಾಮಾ ಸೇರಿದಂತೆ ದುರ್ಬಲ ನಿಯಮಗಳಿರುವ ಇಲ್ಲವೇ ಪ್ರಬಲ ಸೇವಾಕರ್ತೃಗಳ ವಶದಲ್ಲಿರುವ ರಾಷ್ಟ್ರಗಳಲ್ಲಿ ಎಂದರೆ ಅಭಿವೃದ್ಧಿ ಹೊಂದುತ್ತಿರುವ ವಿಶ್ವದಾದ್ಯಂತ VoIPಯ ಬಳಕೆಯ ಮೇಲೆ ಮಿತಿಗಳನ್ನು ಹೇರಲಾಗಿದೆ.[೫೭] ದೂರಸಂಪರ್ಕ ಸೇವೆಯು ಸರ್ಕಾರದ ಏಕಸ್ವಾಮ್ಯದಲ್ಲಿರುವ ಇಥಿಯೋಪಿಯಾದಲ್ಲಿ, VoIPಯ ಸೇವೆಗಳನ್ನು ನೀಡುವುದು ಶಿಕ್ಷಾರ್ಹ ಅಪರಾಧ. VoIPಯನ್ನು ಬಳಸಿ ಅಂತರರಾಷ್ಟ್ರೀಯ ಕರೆಗಳನ್ನು ಮಾಡುವುದನ್ನು ತಡೆಯಲು ಫೈರ್‌ವಾಲ್‌ಗಳನ್ನು ರಾಷ್ಟ್ರದಲ್ಲಿ ಸ್ಥಾಪಿಸಲಾಗಿದೆ. VoIPಯ ಜನಪ್ರಿಯತೆಯಿಂದಾಗಿ ಸರ್ಕಾರದ ಒಡೆತನದ ದೂರಸಂಪರ್ಕ ಕಂಪೆನಿಯ ಆದಾಯ ಇಳಿಕೆಯಾದ ಕಾರಣ ಈ ನಿಯಮಗಳನ್ನು ರೂಪಿಸಲಾಯಿತು. ಐರೋಪ್ಯ ಒಕ್ಕೂಟದಲ್ಲಿ, VoIP ಸೇವಾದಾರರುಗಳ ಮೇಲಿನ ನಿಯಂತ್ರಣವು ಪ್ರತಿ ಸದಸ್ಯ ರಾಷ್ಟ್ರದ ರಾಷ್ಟ್ರೀಯ ದೂರಸಂಪರ್ಕ ನಿಯಂತ್ರಕದ ನಿರ್ಧಾರವಾಗಿದ್ದು, ಸ್ಪರ್ಧಾ ನಿಯಮವನ್ನು ಕಡ್ಡಾಯವಾಗಿ ಪಾಲಿಸಿ ಸಂಬಂಧಿತ ರಾಷ್ಟ್ರೀಯ ಮಾರುಕಟ್ಟೆಯನ್ನು ನಿರೂಪಿಸಬೇಕು ಮತ್ತು ಆಯಾ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯಾವುದೇ ಸೇವಾದಾರ ಸಂಸ್ಥೆಯು "ಗಮನಾರ್ಹ ಮಾರುಕಟ್ಟೆ ಪ್ರಭಾವ" ಹೊಂದಿದೆಯೇ ಎಂದು ಗಮನಿಸಬೇಕು (ಹಾಗಿದ್ದರೆ ಅವರು ನಿರ್ದಿಷ್ಟ ನಿಯಮಗಳಿಗೆ ಬದ್ಧರಾಗಿರಬೇಕು). ಸಾಮಾನ್ಯವಾಗಿ ನಿರ್ವಹಿತ ಜಾಲಗಳ(ಬ್ರಾಡ್‌ಬ್ಯಾಂಡ್‌ ಸಂಪರ್ಕಗಳ ಮೂಲಕ) ಮೂಲಕ ಕಾರ್ಯನಿರ್ವಹಿಸುವ VoIP ಸೇವೆಗಳು ಮತ್ತು ನಿರ್ವಹಿತವಲ್ಲದ ಜಾಲಗಳ (ನಿಸ್ಸಂದೇಹವಾಗಿ ಅಂತರಜಾಲ) ಮೂಲಕ ಕಾರ್ಯನಿರ್ವಹಿಸುವ VoIP ಸೇವೆಗಳ ನಡುವೆ ಸಾಧಾರಣ ಪ್ರತ್ಯೇಕತೆಯನ್ನು ಕಾಪಿಟ್ಟುಕೊಳ್ಳಲಾಗುತ್ತದೆ. ನಿರ್ವಹಿತ ಜಾಲಗಳ ಮೂಲಕ ಕಾರ್ಯನಿರ್ವಹಿಸುವ VoIP ಸೇವೆಗಳನ್ನು PSTN ದೂರವಾಣಿ ಸೇವೆಗಳ ಕಾರ್ಯಸಾಧ್ಯ ಬದಲಿಯಾಗಿ (ವಿದ್ಯುತ್‌ ಅಲಭ್ಯತೆ ಹಾಗೂ ನೆಲೆಗಳ ಮಾಹಿತಿಯ ಕೊರತೆಯ ನಡುವೆಯೂ) ಪರಿಗಣಿಸಲಾಗಿದೆ. ಇದರ ಪರಿಣಾಮವಾಗಿ, ಈ ಸೇವೆಗಳನ್ನು ನೀಡುವ ಪ್ರಮುಖ ಸೇವಾಕರ್ತೃಗಳು (ಕಾರ್ಯತಃ, ಸ್ಥಳೀಯ/ಸ್ಥಾನಿಕ ಸೇವಾಕರ್ತೃಗಳು) ದರ ನಿಯಂತ್ರಣ ಅಥವಾ ಅಕೌಂಟಿಂಗ್‌/ಖಾತಾವ್ಯವಸ್ಥೆ ಪ್ರತ್ಯೇಕತೆಯ ನಿರ್ಬಂಧಕ್ಕೊಳಪಡಬೇಕಾಗುತ್ತದೆ. ನಿರ್ವಹಿತವಲ್ಲದ ಜಾಲಗಳ ಮೂಲಕ ಕಾರ್ಯನಿರ್ವಹಿಸುವ VoIP ಸೇವೆಗಳನ್ನು PSTN ಸೇವೆಗಳ ಕಾರ್ಯತಃ ಬದಲಿಯಾಗಲು ಅಗತ್ಯವಿರುವಷ್ಟು ಉತ್ತಮ ಗುಣಮಟ್ಟದ್ದಾಗಿರುವುದಿಲ್ಲ ಎಂಬ ಗ್ರಹಿಕೆ ಇದೆ; ಇದರ ಪರಿಣಾಮವಾಗಿ, ಆ ಸೇವೆಗಳನ್ನು ಸೇವಾದಾರ ಸಂಸ್ಥೆಯು "ಗಮನಾರ್ಹ ಮಾರುಕಟ್ಟೆ ಪ್ರಭಾವ" ಹೊಂದಿದ್ದರೂ ಯಾವುದೇ ನಿರ್ದಿಷ್ಟ ನಿರ್ಬಂಧಗಳಿಲ್ಲದೇ ನೀಡಬಹುದಾಗಿದೆ. ನಿರ್ಬಂಧಗಳ ಬಗ್ಗೆ ಸಂಬಂಧಿತ EU ನಿರ್ದೇಶನದಲ್ಲಿ, ಮಾರುಕಟ್ಟೆ ಪ್ರಭಾವದ ಮೇಲೆ ಅವಲಂಬಿತವಾಗದ ಇತರೆ (e.g., ತುರ್ತು ಕರೆಗಳ ಸೌಲಭ್ಯ ನೀಡುವ ಬದ್ಧತೆ), ಬದ್ಧತೆಗಳ ಬಗ್ಗೆ ಸ್ಪಷ್ಟತೆಯಿಲ್ಲದ ಕಾರಣ ನಿರ್ಧಾರಕವಾಗಿ ಎರಡರಲ್ಲಿ ಯಾವ ರೀತಿಯ VoIP ಸೇವಾದಾರರು ಬದ್ಧತೆಗಳಿಗೊಳಪಡುತ್ತಾರೆ ಎಂದು ಹೇಳಲು ಅಸಾಧ್ಯವಾಗಿದೆ. EU ನಿರ್ದೇಶನದ ವಿಮರ್ಶೆಯು ನಡೆಯುತ್ತಿದೆ ಹಾಗೂ 2007ರ ಹೊತ್ತಿಗೆ ಮುಕ್ತಾಯವಾಗುವ ಸಾಧ್ಯತೆ ಇದೆ. ಭಾರತದಲ್ಲಿ VoIPಯ ಬಳಕೆಯು ಕಾನೂನು ಸಮ್ಮತ, ಆದರೆ VoIP ಗೇಟ್‌ವೇಗಳನ್ನು ಭಾರತದೊಳಗೆ ಹೊಂದಿರುವುದು ಅಪರಾಧ. ಇದರ ಕಾರ್ಯತಃ ಅರ್ಥವೇನೆಂದರೆ PCಗಳನ್ನು ಹೊಂದಿರುವವರು ಯಾವುದೇ ಸಂಖ್ಯೆಗೆ ಅದರ ಮೂಲಕ VoIP ಕರೆ ಮಾಡಬಹುದು, ಆದರೆ ಅಸನ್ನಿಹಿತ ಭಾಗವು ಸಾಮಾನ್ಯ ದೂರವಾಣಿಯಾಗಿದ್ದರೆ VoIP ಕರೆಯನ್ನು POTS ಕರೆಯನ್ನಾಗಿ ಪರಿವರ್ತಿಸುವ ಗೇಟ್‌ವೇ ಭಾರತದಲ್ಲಿರಬಾರದು. UAEಯಲ್ಲಿ, ಯಾವುದೇ ರೀತಿಯಲ್ಲಿ VoIPಯ ಬಳಕೆ ಕಾನೂನುಬಾಹಿರ, ಇದು ಎಷ್ಟರಮಟ್ಟಿಗೆ ಎಂದರೆ Skype ಮತ್ತು Gizmo5 ಜಾಲತಾಣಗಳ ಸೇವೆಯನ್ನು ನಿರ್ಬಂಧಿಸಲಾಗಿದೆ. ರಿಪಬ್ಲಿಕ್‌ ಆಫ್‌ ಕೊರಿಯಾದಲ್ಲಿ, ಸರ್ಕಾರದಲ್ಲಿ ನೋಂದಣಿ ಮಾಡಿಸಿದ ಸೇವಾದಾರರು ಮಾತ್ರವೇ VoIP ಸೇವೆಗಳನ್ನು ನೀಡಲು ಅರ್ಹತೆಯುಳ್ಳವರು. ಸಗಟು ದರ ವಿಧಿಸುವ ಇನ್ನಿತರ VoIP ಸೇವಾದಾರರ ಹಾಗಲ್ಲದೇ, ಕೊರಿಯನ್‌ VoIP ಸೇವೆಗಳನ್ನು ಮಾಪನ ಮಾಡಿ ಅಂತರರಾಷ್ಟ್ರೀಯ ಕರೆಗಳಿಗೆ ಸಮಾನವಾಗಿ ಶುಲ್ಕ ವಿಧಿಸಲಾಗುತ್ತದೆ. ವೋನೇಜ್‌ನಂತಹಾ ವಿದೇಶೀ VoIP ಸೇವಾದಾರರು ಸರ್ಕಾರದಲ್ಲಿ ನೋಂದಣಿ ಮಾಡಿಸಿಕೊಳ್ಳಲು ಬಹಳ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. 2006ರಲ್ಲಿ ಯುನೈಟೆಡ್‌ ಸ್ಟೇಟ್ಸ್‌ ಫೋರ್ಸ್‌ ಕೊರಿಯಾ ಸದಸ್ಯರಿಗೆ ಒಪ್ಪಂದ/ಕರಾರು/ಗುತ್ತಿಗೆಯ ಮೂಲಕ ವೈಯಕ್ತಿಕ/ಖಾಸಗಿ ಅಂತರಜಾಲ ಸೇವೆಗಳನ್ನು ನೀಡುತ್ತಿದ್ದ ಅಂತರಜಾಲ ಸೇವಾದಾರರು USFK ನೆಲೆಗಳಲ್ಲಿ ವಾಸವಾಗಿದ್ದ USFK ಸದಸ್ಯರು ಯುನೈಟೆಡ್‌ ಸ್ಟೇಟ್ಸ್‌ನಲ್ಲಿನ ತಮ್ಮ ಕುಟುಂಬಗಳೊಂದಿಗೆ ಮಿತವ್ಯಯಕಾರಿಯಾಗಿ ಸಂಪರ್ಕದಲ್ಲಿರಲೆಂದು ಬಳಸುತ್ತಿದ್ದ VoIP ಸೇವೆಗಳನ್ನು ಅವರ VoIP ಸೇವಾದಾರರು ನೋಂದಣಿ ಮಾಡಿಸಿಕೊಂಡಿಲ್ಲದ ಆಧಾರದ ಮೇಲೆ ಸ್ಥಗಿತಗೊಳಿಸುತ್ತೇವೆಂದು ಬೆದರಿಸಿದಾಗ ಓರ್ವ ಮುಖ್ಯಸ್ಥರ ಮುಂದೆ ಈ ಸಮಸ್ಯೆಯು ಬಂದಿತು. USFK ಮತ್ತು ಕೊರಿಯನ್‌ ದೂರಸಂಪರ್ಕ ಅಧಿಕಾರಿಗಳ ನಡುವೆ ಜನವರಿ 2007ರಲ್ಲಿ ಹೊಂದಾಣಿಕೆಯಾಗಿ, ISP ಸೇವೆಗಳಿಗೆ ಚಂದಾದಾರರಾಗಿದ್ದ ಹಾಗೂ ಸೇನಾನೆಲೆಯಲ್ಲಿ ನೀಡಿದ್ದ ಜೂನ್‌ 1, 2007ಕ್ಕೆ ಮುನ್ನ ಕೊರಿಯಾವನ್ನು ಪ್ರವೇಶಿಸಿದ್ದ USFK ಸೇವಾ ಸದಸ್ಯರು ತಮ್ಮ U.S.-ಮೂಲದ VoIP ಸೇವೆಯನ್ನು ಬಳಸುವುದನ್ನು ಮುಂದುವರೆಸಬಹುದು, ಆದರೆ ನಂತರ ಪ್ರವೇಶಿಸಿದವರು U.S. VoIP ಸೇವಾದಾರರು ನೀಡುವ ಸಗಟು ದರಕ್ಕೆ ಸಮಾನವಾದ ದರವನ್ನೇ ಗುತ್ತಿಗೆಯ ಪ್ರಕಾರ ವಿಧಿಸಲು ತಯಾರಿರುವ ಕೊರಿಯನ್‌-ಮೂಲದ VoIP ಸೇವಾದಾರ ಸಂಸ್ಥೆಯನ್ನೇ ಕಡ್ಡಾಯವಾಗಿ ಬಳಸಬೇಕು.[೫೮]

ಅಂತರಾಷ್ಟ್ರೀಯ VoIP ಸಜ್ಜುಗೊಳಿಕೆಗಳು

[ಬದಲಾಯಿಸಿ]

ಜಪಾನ್‌ನಲ್ಲಿ IP ದೂರವಾಣಿ ವ್ಯವಸ್ಥೆ

[ಬದಲಾಯಿಸಿ]

ಜಪಾನ್‌ನಲ್ಲಿ, IP telephony (IP電話 IP Denwa ?) ಅನ್ನು VoIP ತಂತ್ರಜ್ಞಾನವನ್ನು ದೂರವಾಣಿ ಸಂಪರ್ಕಕ್ಕೆ ಪೂರ್ಣವಾಗಿ ಅಥವಾ ಭಾಗಶಃ ಅಳವಡಿಸಿದ ಸೇವೆ ಎಂಬ ಭಾವನೆ ಇದೆ. 2003ರ ಹಾಗೆ, IP ದೂರವಾಣಿ ವ್ಯವಸ್ಥೆ ಸೇವೆಗಳಿಗೆ ದೂರವಾಣಿ ಸಂಖ್ಯೆಗಳನ್ನು ನೀಡಲಾಗಿದೆ. IP ದೂರವಾಣಿ ವ್ಯವಸ್ಥೆ ಸೇವೆಗಳಲ್ಲಿ ಅನೇಕ ವೇಳೆ ವಿಡಿಯೋ ದೂರವಾಣಿ /ವಿಡಿಯೋ ಕಾನ್‌ಫರೆನ್ಸಿಂಗ್‌ ಸೇವೆಗಳನ್ನೂ ನೀಡಲಾಗುತ್ತದೆ. ದೂರಸಂಪರ್ಕ ವಾಣಿಜ್ಯ ಕಾನೂನಿನ ಪ್ರಕಾರ, IP ದೂರವಾಣಿ ವ್ಯವಸ್ಥೆಯ ಸೇವಾ ವರ್ಗದಲ್ಲಿ ಯಾವುದೇ ದೂರವಾಣಿ ಸಂಖ್ಯೆ ಹೊಂದಿರದಿದ್ದರೂ ಅಂತರಜಾಲದ ಮೂಲಕ ನೀಡಿದ ಸೇವೆಯೂ ಸೇರುತ್ತದೆ. IP ದೂರವಾಣಿ ವ್ಯವಸ್ಥೆಯು ಆಂತರಿಕ ವ್ಯವಹಾರಗಳು ಮತ್ತು ಸಂಪರ್ಕ ಖಾತೆಯ (MIC) ಸಚಿವಾಲಯದಿಂದ ದೂರಸಂಪರ್ಕ ಸೇವೆಯಾಗಿ ನಿಯಂತ್ರಣಕ್ಕೊಳಪಡುತ್ತದೆ. ಸೇವಾಕರ್ತೃಗಳು ಸೇವೆಯ ಗುಣಮಟ್ಟ, etc., ವಿವರಗಳ ಬಗ್ಗೆ ಅಗತ್ಯ ಮಾಹಿತಿಯನ್ನು ಗ್ರಾಹಕರೊಡನೆ ಒಪ್ಪಂದ ಮಾಡಿಕೊಳ್ಳುವ ಮುಂಚೆ ಪ್ರಕಟಿಸಿರಬೇಕು ಹಾಗೂ ಅವರ ದೂರುಗಳಿಗೆ ಸೌಜನ್ಯಯುತವಾಗಿ ಪ್ರತಿಕ್ರಿಯೆ ನೀಡುವ ಜವಾಬ್ದಾರಿ ಅವರ ಮೇಲಿರುತ್ತದೆ. ಅನೇಕ ಜಪಾನೀ ಅಂತರಜಾಲ ಸೇವಾದಾರರು (ISP) IP ದೂರವಾಣಿ ವ್ಯವಸ್ಥೆ ಸೇವೆಗಳನ್ನು ನೀಡುತ್ತಿದ್ದಾರೆ. IP ದೂರವಾಣಿ ವ್ಯವಸ್ಥಾ ಸೇವೆಯನ್ನು ಕೂಡಾ ನೀಡುವ ISP ಸಂಸ್ಥೆಗೆ "ITSP (ಅಂತರಜಾಲ ದೂರವಾಣಿ ವ್ಯವಸ್ಥೆ ಸೇವಾದಾರ ಸಂಸ್ಥೆ )" ಎನ್ನುತ್ತಾರೆ. ಇತ್ತೀಚೆಗೆ, ITSPಗಳ ನಡುವೆ ADSL ಅಥವಾ FTTH ಸೇವೆಗಳಿಗೆ ಸಂಬಂಧಿಸಿದಂತೆ ಆಯ್ಕೆ ಅಥವಾ ಗುಂಪು ಮಾರಾಟದಿಂದಾಗಿ ಸ್ಪರ್ಧೆಯು ಏರ್ಪಟ್ಟಿದೆ. ಜಪಾನೀ IP ದೂರವಾಣಿ ವ್ಯವಸ್ಥೆಗೆ ಸಾಮಾನ್ಯವಾಗಿ ಅನ್ವಯವಾಗುವ ದರಪಟ್ಟಿ ವ್ಯವಸ್ಥೆಯು ಕೆಳಗಿನಂತಿದೆ;

  • ಒಂದೇ ಗುಂಪಿಗೆ ಸೀಮಿತವಾಗಿ IP ದೂರವಾಣಿ ವ್ಯವಸ್ಥೆ ಚಂದಾದಾರರುಗಳ ನಡುವಿನ ಕರೆಯು ಸಾಮಾನ್ಯವಾಗಿ ಉಚಿತ.
  • IP ದೂರವಾಣಿ ವ್ಯವಸ್ಥೆ ಚಂದಾದಾರರಿಂದ ಸ್ಥಿರ ದೂರವಾಣಿಗೆ ಅಥವಾ PHSಗೆ ಮಾಡುವ ಕರೆಗೆ ರಾಷ್ಟ್ರಾದ್ಯಂತ ಏಕರೂಪವಾದ ಸ್ಥಿರ ದರವಿರುತ್ತದೆ.

ITSPಗಳ ನಡುವಿನ ಅಂತರ್‌ಸಂಪರ್ಕವನ್ನು ಬಹ್ವಂಶ VoIP ಹಂತದಲ್ಲಿ ನಿರ್ವಹಿಸಲಾಗುತ್ತದೆ.

  • IP ದೂರವಾಣಿ ವ್ಯವಸ್ಥೆಗೆ ಸಾಮಾನ್ಯ ದೂರವಾಣಿ ಸಂಖ್ಯೆ(0AB-J)ಯನ್ನು ನೀಡಲಾಗಿರುವ ಕಡೆಗಳಲ್ಲಿ, ಅಂತರ್‌ಸಂಪರ್ಕಕ್ಕೆ ವಿಧಿಸಲಾಗುವ ನಿಬಂಧನೆಗಳು ಸಾಮಾನ್ಯ ದೂರವಾಣಿ ವ್ಯವಸ್ಥೆಯಷ್ಟೇ ಇರುತ್ತವೆ.
  • IP ದೂರವಾಣಿ ವ್ಯವಸ್ಥೆಗೆ ನಿರ್ದಿಷ್ಟ ದೂರವಾಣಿ ಸಂಖ್ಯೆಯನ್ನು (050), ನೀಡಲಾಗಿರುವ ಕಡೆಗಳಲ್ಲಿ, ಅಂತರ್‌ಸಂಪರ್ಕಕ್ಕೆ ವಿಧಿಸಲಾಗುವ ನಿಬಂಧನೆಗಳು ಕೆಳಗಿನಂತಿವೆ;
    • ಅಂತರ್‌ಸಂಪರ್ಕಕ್ಕೆ ಕೆಲವು ಬಾರಿ ಶುಲ್ಕ ವಿಧಿಸಲಾಗುತ್ತದೆ. (ಕೆಲಬಾರಿ ಉಚಿತವಾಗಿರುತ್ತದೆ ಸಹಾ.) ಉಚಿತವಾಗಿರುವಾಗ ಬಹ್ವಂಶ , ಸಮಾನ VoIP ಮಾನಕಗಳ ಮೂಲಕವೇ P2P ಸಂಪರ್ಕದ ಮೂಲಕ ಸಂವಹನದ ದಟ್ಟಣೆಯನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ. ಇಲ್ಲವಾದಲ್ಲಿ VoIP ಗೇಟ್‌ವೇಯಲ್ಲಿ ಕೆಲ ಹೊಂದಾಣಿಕೆಗಳು ಅಗತ್ಯವಾದಾಗ ಪ್ರಕ್ರಿಯಾ ವೆಚ್ಚ ತಗಲುತ್ತದೆ.

ಸೆಪ್ಟೆಂಬರ್‌ 2002ರಿಂದ, MICಯು IP ದೂರವಾಣಿ ವ್ಯವಸ್ಥೆಗೆ ದೂರವಾಣಿ ಸಂಖ್ಯೆಗಳನ್ನು ನಿರ್ದಿಷ್ಟ ಅಗತ್ಯ ಗುಣಮಟ್ಟವನ್ನು ಪಾಲಿಸಬೇಕೆನ್ನುವ ನಿಬಂಧನೆಯ ಮೇಲೆ ನೀಡಿದೆ. ಸಾಮಾನ್ಯವಾಗಿ 050ರಿಂದ ಆರಂಭವಾಗುವ ದೂರವಾಣಿ ಸಂಖ್ಯೆಯೊಂದನ್ನು ಉನ್ನತ-ಗುಣಮಟ್ಟದ IP ದೂರವಾಣಿ ವ್ಯವಸ್ಥೆಗೆ ನೀಡಲಾಗುತ್ತದೆ. VoIP ಗುಣಮಟ್ಟವು ಸಾಮಾನ್ಯ ದೂರವಾಣಿ ಹಾಗೂ VoIP ಸೇವೆಯ ನಡುವಿನ ವ್ಯತ್ಯಾಸವನ್ನು ಗ್ರಾಹಕರು ಗುರುತಿಸಲಾಗದ ಮಟ್ಟ ತಲುಪಿದಲ್ಲಿ ಹಾಗೂ ಸಂಸ್ಥೆಯು ತನ್ನ ಸಂಖ್ಯೆಯನ್ನು ನೆಲೆಯೊಂದಕ್ಕೆ ಸಂಬಂಧಪಡಿಸಿದ್ದಲ್ಲಿ ಹಾಗೂ ತುರ್ತು ಕರೆ ಸೌಲಭ್ಯಗಳನ್ನು ಆ ಸಂಪರ್ಕಕ್ಕೆ ನೀಡಿದ್ದಲ್ಲಿ "0AB-J" ಸಂಖ್ಯೆ ಎಂದು ಕರೆಯಲಾಗುವ ಸಾಮಾನ್ಯ ದೂರವಾಣಿ ಸಂಖ್ಯೆಯನ್ನು ನೀಡಲು ಸೇವಾದಾರ ಸಂಸ್ಥೆಗೆ ಅವಕಾಶ ನೀಡಲಾಗುತ್ತದೆ.

ಇದನ್ನೂ ನೋಡಿರಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Voice over Internet Protocol. Definition and Overview". International Engineering Consortium. 2007. Retrieved 2009-04-27.
  2. ವಿಂಟನ್‌ G. ಸರ್ಫ್‌, ರಾಬರ್ಟ್‌ E. ಕಹ್ನ್‌, "ಎ ಪ್ರೋಟೋಕಾಲ್ ಫಾರ್‌ ಪ್ಯಾಕೆಟ್‌ ನೆಟ್‌ವರ್ಕ್‌ ಇಂಟರ್ ಕಮ್ಯುನಿಕೇಷನ್", IEEE ಟ್ರಾನ್ಸಾಕ್ಷನ್ಸ್‌ ಆನ್‌ ಕಮ್ಯುನಿಕೇಷನ್ಸ್‌, Vol. 22, No. 5, ಮೇ 1974 pp. 637-648
  3. "The Launch of NSFNET". The National Science Foundation. Archived from the original on 2006-05-07. Retrieved 2009-01-21.
  4. Keating, Tom. "Internet Phone Release 4" (PDF). Computer Telephony Interaction Magazine. Retrieved 2007-11-07.
  5. "The 10 that Established VoIP (Part 1: VocalTec)". iLocus. Retrieved 2009-01-21.
  6. "H.323 Visual telephone systems and equipment for local area networks which provide a non-guaranteed quality of service". ITU-T. Retrieved 2009-01-21.
  7. "RFC 2235". R. Zakon. Retrieved 2009-01-21.
  8. "The 10 that Established VoIP (Part 2: Level 3)". iLocus. July 13, 2007. Retrieved 2007-11-07.
  9. "RFC 2543, SIP: Session Initiation Protocol". Handley,Schulzrinne,Schooler,Rosenberg. Retrieved 2009-01-21.
  10. "What is Asterisk". Asterisk.org. Archived from the original on 2009-01-23. Retrieved 2009-01-21.
  11. ೧೧.೦ ೧೧.೧ "VoIP on the Verge". Telecommuncations Online. November 1, 2004. Archived from the original on 2009-02-07. Retrieved 2009-01-21.
  12. "VoIP: An end to international tariffs?". Telecommunications Online. Archived from the original on 2009-02-07. Retrieved 2009-01-21.
  13. "Carriers look to IP for backhaul". Telecommunications Online. January 21, 2009. Retrieved 2009-01-21.
  14. "Mobile's IP challenge". Total Telecom. December 08, 2005. Retrieved 2009-01-21. {{cite web}}: Check date values in: |date= (help)
  15. "Dual-mode cellular/WiFi handset adoption". TMCnet. Retrieved 2006-05-26. {{cite web}}: External link in |publisher= (help)
  16. ಫೋನ್ಸ್‌ 4uನಿಂದ ವೊಡಾಫೋನ್‌ ನಿಯಮಗಳು ಮತ್ತು ನಿಬಂಧನೆಗಳು & ಸಂಚಾರಿ ದೂರವಾಣಿಗಳು
  17. "Truphone ಸಂಪರ್ಕಗಳನ್ನು ಮುಕ್ತಗೊಳಿಸಲೇಬೇಕಾದ T-Mobile" — BBC
  18. ೧೮.೦ ೧೮.೧ ೧೮.೨ Korzeniowski, Peter (January 8, 2009). "Three Technologies You Need In 2009". [೧]. Retrieved 2009-03-02. {{cite web}}: External link in |publisher= (help)
  19. "Skype For Business". [೨]. Retrieved 2009-03-16. {{cite web}}: External link in |publisher= (help)
  20. William Jackson (2009-05-27). "SSA goes big on VOIP". Government Computer News. Archived from the original on 2011-07-28. Retrieved 2009-05-28.
  21. "Social Security to Build "World's Largest VoIP"". Government Technology. Archived from the original on 2009-06-02. Retrieved 2009-05-29.
  22. VoIPಯ ಕೆಲ ಅನುಕೂಲತೆಗಳೇನು? — FCC ಜಾಲತಾಣ
  23. ನಾನು VoIP ಸೇವೆಯನ್ನು ಹೊಂದಿದ್ದರೆ ಯಾರಿಗೆ ಕರೆ ಮಾಡಬಹುದು? — FCC ಜಾಲತಾಣ
  24. ಕ್ರಿಯೇಟಿಂಗ್‌ ಎ ಸೆಕ್ಯೂರ್‌ ಅಂಡ್‌ ರಿಲಯಬಲ್‌ VoIP ಸೊಲ್ಯೂಷನ್‌‌ (ವಿಭಾಗ: ಪ್ರೊಟೆಕ್ಟಿಂಗ್‌ VoIP ಅಟ್‌ ದ ಅಪ್ಲಿಕೇಷನ್‌ ಲೇಯರ್‌) — ZDnet ಏಷ್ಯಾ
  25. VoIP — ಅಂತರಜಾಲ ಪ್ರೋಟೋಕಾಲ್ ಆಧಾರಿತ ದುರ್ಬಲತೆ
  26. ಸೇವಾ ವರ್ಗಾವಣೆ ಜಾಲಗಳಲ್ಲಿ (ಅಮೂರ್ತ) ಹೊಂದಿಕೊಳ್ಳಬಲ್ಲ ಧ್ವನಿ ಪುನರಾವರ್ತನೆಯ ವೇಳಾಪಟ್ಟಿ/ಕಾರ್ಯಯೋಜನೆಯೊಂದಿಗೆ IP ಆಧಾರಿತ ಕರೆ ಸೇವೆಗೆ IEEE ಬಹುಪಥ ಸಾಗಣೆ/ನಿರ್ದೇಶಿಸುವಿಕೆ
  27. "ICT ನಿಯಮಗಳ ತಂತ್ರಾಂಶ — 4.4 VoIP — ನಿಯಂತ್ರಣ ಸಮಸ್ಯೆಗಳು — ಸಾರ್ವತ್ರಿಕ ಸೇವೆ". Archived from the original on 2009-06-04. Retrieved 2009-12-17.
  28. ನ್ಯೂಯಾರ್ಕ್‌ ಮಹಾನಗರದಿಂದ ಫೆಡರಲ್‌ ಕಮ್ಯುನಿಕೇಷನ್ಸ್‌ ಕಮಿಷನ್‌ಗೆ ಬರೆದ ಪತ್ರ
  29. "FCC ಗ್ರಾಹಕ ಸಲಹಾ ಸಮಿತಿ: "VoIP ಮತ್ತು 911 ಸೇವೆ"". Archived from the original on 2009-12-15. Retrieved 2009-12-17.
  30. ಯುದ್ಧ ಇಲ್ಲವೇ ದೊಡ್ಡ ಪ್ರಮಾಣದ ನೈಸರ್ಗಿಕ ಅನಾಹುತವಾದಾಗ ದತ್ತ ಸಂವಹನದಲ್ಲಿನ ಅತಿರಿಕ್ತತೆಯನ್ನು ತಡೆಹಿಡಯುವುದಕ್ಕಾಗಿ ಅಂತರಜಾಲವನ್ನು ವಿನ್ಯಸಿಸಲಾಯಿತು ಎಂಬುದೊಂದು ಸಾಮಾನ್ಯ ತಪ್ಪುಗ್ರಹಿಕೆಯಿದೆ. ವಸ್ತುತಃ, ಅದರ ಪೂರ್ವವರ್ತಿ, ಅರ್ಪಾನೆಟ್‌ಅನ್ನು ವಿಶ್ವವಿದ್ಯಾಲಯಗಳು U.S. ರಕ್ಷಣಾ ವಿಭಾಗದಲ್ಲಿನ ಗಣಕಸಂಪನ್ಮೂಲಗಳನ್ನು ಹಂಚಿಕೊಂಡು ವೆಚ್ಚಕ್ಕೆ ಕಡಿವಾಣ ಹಾಕಲೆಂದು ವಿನ್ಯಾಸಗೊಳಿಸಲಾಗಿತ್ತು.
  31. "ಸೇವಾದಾರರನ್ನು ಬದಲಾಯಿಸಿದರೂ ನಿಮ್ಮ ದೂರವಾಣಿ ಸಂಖ್ಯೆಯನ್ನು ಕಾಪಿಟ್ಟುಕೊಳ್ಳುವುದು — FCC". Archived from the original on 2009-12-12. Retrieved 2009-12-17. {{cite web}}: no-break space character in |title= at position 70 (help)
  32. "ಆರ್ಕೈವ್ ನಕಲು". Archived from the original on 2009-08-30. Retrieved 2009-12-17.
  33. "RFC 3824 — Using E.164 numbers with the Session Initiation Protocol (SIP)". The Internet Society. June 1, 2004. Retrieved 2009-01-21.
  34. "Create a Skype Name". Skype. Retrieved 2009-01-21.
  35. "RFC 3969 — The Internet Assigned Number Authority (IANA) Uniform Resource Identifier (URI) Parameter Registry for the Session Initiation Protocol (SIP)". The Internet Society. December 1, 2004. Retrieved 2009-01-21.
  36. "Your personal online number". Skype. Retrieved 2009-01-21.
  37. "Application-level Network Interoperability and the Evolution of IMS". TMCnet.com. May 24, 2006. Retrieved 2009-01-21.
  38. ಪ್ಯಾಕೆಟ್‌ಕೇಬಲ್‌ ಇಂಪ್ಲಿಮೆಂಟೇಷನ್‌ P557 — ಜೆಫ್‌ ರಿಡೆಲ್‌ — ISBN 1-58705-181-8 Google Books ಮುನ್ನೋಟ
  39. Taub, Eric (April 2, 2008). "VoIP System Security: Time to Worry, or Maybe Not". [೩]. Archived from the original on 2009-06-03. Retrieved 2009-03-02. {{cite web}}: External link in |publisher= (help)
  40. "Examining Two Well-Known Attacks on VoIP". CircleID. Retrieved 2006-04-05.
  41. SKYPE SECURITY EVALUATION, ಟಾಂ ಬರ್ಸನ್‌/ಅನಗ್ರಾಂ ಲ್ಯಾಬೋರೇಟರೀಸ್‌
  42. "INTERNET PROTOCOL TELEPHONY & VOICE OVER INTERNET PROTOCOL SECURITY TECHNICAL IMPLEMENTATION GUIDE" (PDF). Archived from the original (PDF) on 2009-08-25. Retrieved 2009-12-17.
  43. "ಸುರಕ್ಷಿತ IP ಆಧಾರಿತ ಕರೆ" (PDF). Archived from the original (PDF) on 2023-04-19. Retrieved 2009-12-17.
  44. SANS ಸಂಸ್ಥೆಯ InfoSec ಓದುವ ಕೋಣೆ
  45. IP ಆಧಾರಿತ ಸುರಕ್ಷಿತ ಕರೆ ಪರಿಸರದಲ್ಲಿ ದತ್ತಾಂಶ ನಷ್ಟ ಗುಪ್ತತೆ
  46. IP ಆಧಾರಿತ ಕರೆಯ ಆಧುನಿಕ ಗೂಢಲಿಪಿಕ
  47. "Cellcrypt ಸುರಕ್ಷಿತ VoIPಯು BlackBerry ಸೌಲಭ್ಯದೆಡೆಗೆ". Archived from the original on 2009-04-24. Retrieved 2009-12-17.
  48. "ಸುರಕ್ಷಿತ VoIP ಕರೆಗಳು, ಉಚಿತ ತಂತ್ರಾಂಶ, ಮತ್ತು ಖಾಸಗೀತನದ ಹಕ್ಕುಗಳು". Archived from the original on 2009-08-11. Retrieved 2009-12-17.
  49. VoIPSA ಬ್ಲಾಗ್‌: "ಹಲೋ ಮಾಮ್‌, ಐ ಯಾಮ್‌ ಎ ಫೇಕ್‌!" (ನಕಲಿಕರೆಗಾರ ಮತ್ತು ಸೋಗಿನ ಕರೆದಾತ).
  50. ""ಕರೆದಾತ IDಯಲ್ಲಿನ ಸತ್ಯತೆ ಕಾಯ್ದೆ"". Archived from the original on 2010-12-24. Retrieved 2009-12-17.
  51. "IP ಜಾಲಗಳಲ್ಲಿ ಫ್ಯಾಕ್ಸ್‌ ಕಳುಹಿಸುವಿಕೆ". Archived from the original on 2010-01-06. Retrieved 2009-12-17.
  52. "Global VoIP Policy Status Matrix". Global IP Alliance. Retrieved 2006-11-23. {{cite web}}: External link in |publisher= (help)
  53. ೫೩.೦ ೫೩.೧ Greenberg, Andy (May 15, 2008). "The State Of Cybersecurity Wiretapping's Fuzzy Future". [೪]. Archived from the original on 2013-01-03. Retrieved 2009-03-02. {{cite web}}: External link in |publisher= (help)
  54. Greenberg, Andy (May 15, 2008). "The State Of Cybersecurity — Wiretapping's Fuzzy Future". [೫]. Archived from the original on 2013-01-03. Retrieved 2009-03-02. {{cite web}}: External link in |publisher= (help)
  55. 47 C.F.R. pt. Archived 2010-06-08 ವೇಬ್ಯಾಕ್ ಮೆಷಿನ್ ನಲ್ಲಿ.9 Archived 2010-06-08 ವೇಬ್ಯಾಕ್ ಮೆಷಿನ್ ನಲ್ಲಿ. (2007)
  56. ನೋಡಿ http://www.fcc.gov/voip/.
  57. Proenza, Francisco J. "The Road to Broadband Development in Developing Countries is through Competition Driven by Wireless and VoIP" (PDF). Retrieved 2008-04-07.
  58. "ಸ್ಟಾರ್ಸ್‌ ಅಂಡ್‌ ಸ್ಟ್ರೈಪ್ಸ್‌ : USFK ವ್ಯವಹಾರದಿಂದ ಸೈನಿಕರಿಗೆ ಮರುಕಳಿಸಿದ VoIP ಲಭ್ಯತೆ". Archived from the original on 2010-01-13. Retrieved 2021-08-24.


ಬಾಹ್ಯ ಕೊಂಡಿಗಳು

[ಬದಲಾಯಿಸಿ]