ವಿಷಯಕ್ಕೆ ಹೋಗು

ಅಂಜಲಿ ಭಾಗವತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಂಜಲಿ ಭಾಗವತ್ (ಜನನ ಡಿಸಂಬರ್ ೫,೧೯೬೯) ಇವರು ವೃತ್ತಿಪರ ಭಾರತೀಯ ಶೂಟರ್. ಇವರು ೨೦೦೨ರಲ್ಲಿ ೧೦ಮೀಟರ್ ಏರ್ ರೈಫಲ್ ನಲ್ಲಿ ವಿಶ್ವಕ್ಕೆ ಮೊದಲಿಗರಾಗಿದ್ದಾರೆ.ಇವರು 2003 ರಲ್ಲಿ ಮಿಲನ್ ನಲ್ಲಿ ತಮ್ಮ ಮೊದಲ ವಿಶ್ವ ಕಪ್ ಫೈನಲ್ ಅನ್ನು 399/400 ಅಂಕದೊಂದಿಗೆ ಗೆದ್ದರು.ಅಂಜಲಿಯವರು ಐ.ಎಸ್.ಎಸ್.ಎಫ್ ಚಾಂಪಿಯನ್ ಆಫ್ ಚಾಂಪಿಯನ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ ಮತ್ತು 2002 ರಲ್ಲಿ ಮ್ಯೂನಿಚ್ ನಲ್ಲಿ ನಡೆದ ಏರ್ ರೈಫಲ್ ಪುರುಷ ಮತ್ತು ಮಹಿಳೆಯರ ಮಿಶ್ರ ಪಂದ್ಯದಲ್ಲಿ, "ISSF - International Shooting Sport Federation - issf-sports.org". Issf-sports.org. Retrieved 25 October 2017.ಐ.ಎಸ್.ಎಸ್.ಎಫ್ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ಏಕೈಕ ಭಾರತೀಯರಾಗಿದ್ದಾರೆ. ಅವರು ಸತತವಾಗಿ ಮೂರುಬಾರಿ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ ಮತ್ತು 2000 ಸಿಡ್ನಿ ಒಲಿಂಪಿಕ್ಸ್ ನ ಅಂತಿಮ ಸುತ್ತಿನ ಸ್ಪರ್ಧಿಯಾಗಿದ್ದರು, ಈ ಸಾಧನೆಯನ್ನು ಮಾಡಿದ ಭಾರತದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಯು ಇವರಿಗಿದೆ. ಕಾಮನ್ವೆಲ್ತ್ ಕ್ರೀಡಾಕೂಟ Archived 2018-02-05 ವೇಬ್ಯಾಕ್ ಮೆಷಿನ್ ನಲ್ಲಿ.ದಲ್ಲಿ ಅವರು 12 ಚಿನ್ನದ ಮತ್ತು 4 ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಇವರು 10ಮೀಟರ್ ಏರ್ ರೈಫಲ್ ಮತ್ತು ಸ್ಪೋರ್ಟ್ಸ್ ರೈಫಲ್ 3ಪಿನಲ್ಲಿ ಕಾಮನ್ವೆಲ್ತ್ ದಾಖಲೆಯನ್ನು ನಿರ್ಮಿಸಿದ್ದಾರೆ. 2003 ರ ಆಫ್ರೋ-ಏಷಿಯನ್ ಗೇಮ್ಸ್ ನಲ್ಲಿ ಕ್ರೀಡಾ 3ಪಿ ಮತ್ತು ಏರ್ ರೈಫಲ್ ಪಂದ್ಯಗಳಲ್ಲಿ ಅನುಕ್ರಮವಾಗಿ ಚಿನ್ನ ಮತ್ತು ಬೆಳ್ಳಿಯ ಪದಕವನ್ನು ಗಳಿಸಿ ಇತಿಹಾಸ ನಿರ್ಮಿಸಿದ ಮೊದಲ ಭಾರತೀಯ ಮಹಿಳಾ ಶೂಟರ್ ಭಾಗವತ್ ರವರು.ಇಲ್ಲಿಯವರೆಗೆ, ಇವರು 31 ಚಿನ್ನ, 23 ಬೆಳ್ಳಿ ಮತ್ತು 7 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಅವರು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ 13 ಹೊಸ ದಾಖಲೆಗಳನ್ನು ಹೊಂದಿದ್ದಾರೆ ಮತ್ತು 55 ಚಿನ್ನ, 35 ಬೆಳ್ಳಿ ಮತ್ತು 16 ಕಂಚಿನ ಪದಕಗಳನ್ನು ಗೆದ್ದಿದ್ದಾರೆ, ಜೊತೆಗೆ ಭಾರತದಲ್ಲಿ ನಡೆದ ರಾಷ್ಟ್ರೀಯ ಸ್ಪರ್ಧೆಗಳಲ್ಲಿ 8 ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ.

ಆರಂಭಿಕ ಜೀವನ

[ಬದಲಾಯಿಸಿ]

ಅಂಜಲಿ ರಾಮಕಾಂತ ವೇದಪಥಕ್ ಅವರು 5 ಡಿಸೆಂಬರ್ 1969 ರಂದು ಜನಿಸಿದರು,ಅವರು ಮುಂಬೈಯ ಕೊಂಕಣಿ ಕುಟುಂಬದವರು. ಪ್ರಸಿದ್ಧ ಕ್ರೀಡಾಪಟು ಕಾರ್ಲ್ ಲೆವಿಸ್ ನಿಂದ ಪ್ರೇರಣೆ ಪಡೆದು, ಭಾಗವತ್ ಕ್ರೀಡೆಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು.ಇವರು ಮೊದಲನೆ ಬಾರಿ ಶೂಟಿಂಗ್ ಕಲಿತದ್ದು ಹಾಗೂ ಬಳಸಿದ್ದು ಅವರು ನ್ಯಾಷನಲ್ ಕ್ಯಾಡೆಟ್ ಕಾರ್ಪ್ಸ್ (ಎನ್ಸಿಸಿ)ನಲ್ಲಿ ಇದ್ದಾಗ. ಜೂಡೋ ಕರಾಟೆ ಮತ್ತು ಮುಂದುವರಿದ ಪರ್ವತಾರೋಹಣಗಳ ವಿದ್ಯಾರ್ಥಿಯಾಗಿದ್ದ ಭಾಗವತ್ ಎನ್ಸಿಸಿ ಕಡೆಗೆ ಹೆಚ್ಚು ಆಕರ್ಷಿತರಾಗಿದ್ದರು.NCC ಯೊಂದಿಗಿನ ನಿಕಟ ಸಂಬಂಧದಿಂದಾಗಿ ಅವರು ಮುಂಬೈನ ಕೀರ್ತಿ ಕಾಲೇಜಿಗೆ ಸೇರಿದರು.ತನ್ನ ಪಠ್ಯಕ್ರಮದ ಒಂದು ಭಾಗವಾಗಿ ಅವರು ಎಮ್.ಆರ್.ಎ(ಮಹಾರಾಷ್ಟ್ರ ರೈಫಲ್ ಅಸೋಸಿಯೇಷನ್)ಗೆ ಪ್ರವೇಶಿಸಿದರು. ಅವರು 21 ನೇ ವಯಸ್ಸಿನಲ್ಲಿ ಶೂಟಿಂಗ್ ಅಭ್ಯಾಸ ಪ್ರಾರಂಭಿಸಿದರು ಮತ್ತು 7 ದಿನಗಳಲ್ಲಿ ಗನ್ ಹಿಡಿದುಕೊಂಡು ಅವರು 1988ರ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಂಡರು, ಮಹಾರಾಷ್ಟ್ರಕ್ಕೆ ಬೆಳ್ಳಿ ಪದಕವನ್ನು ತಂದುಕೊಟ್ಟರು.

ವೃತ್ತಿಜೀವನ

[ಬದಲಾಯಿಸಿ]

ಸಂಜಯ್ ಚಕ್ರವರ್ತಿ ಭಾಗವತ್ ರ ಮೊದಲ ತರಬೇತುದಾರರಾಗಿದ್ದರು. ಭಾಗವತ್ ರವರಿಗೆ ೫ ವರ್ಷಗಳ ಕಾಲ ತರಬೇತಿ ನೀಡಿ ,ಅವರಲ್ಲಿ ಮೂಲಭೂತ ಕೌಶಲ್ಯಗಳನ್ನು ವೃದ್ದಿಸಿದ ಸಂಪೂರ್ಣ ಕೀರ್ತಿ ಅವರ ಗುರುಗಳದ್ದು ಎನ್ನುತ್ತಾರೆ. 1988 ರಲ್ಲಿ ಅವರು ರಾಷ್ಟ್ರೀಯ ಚಾಂಪಿಯನ್ಶಿಪ್ ನಲ್ಲಿ ಮೊದಲ ಬಾರಿಗೆ ಭಾಗವಹಿಸಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಆಕೆಯ ರಾಜ್ಯಕ್ಕಾಗಿ ಆಕೆ ಬೆಳ್ಳಿಯನ್ನು ಗೆದ್ದರು ಮತ್ತು ಮಹಾರಾಷ್ಟ್ರ ತಂಡದ ಪರವಾಗಿ ಆಡುತ್ತಿದ್ದರು. ದೇಶೀಯ ಸ್ಪರ್ಧೆಗಳಲ್ಲಿ 55 ಚಿನ್ನ, 35 ಬೆಳ್ಳಿ ಮತ್ತು 16 ಕಂಚಿನ ಪದಕಗಳನ್ನು ಪಡೆದು ಮುರಿಯಲಾಗದ ದಾಖಲೆ ನಿರ್ಮಿಸಿದ್ದಾರೆ.

ಅವರು 1995 ರಲ್ಲಿ SAF ಆಟದಲ್ಲಿ ಪಾಲ್ಗೋಳ್ಳುವ ಮೂಲಕ ತಮ್ಮ ಮೊದಲ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಪಾಲ್ಗೊಂಡರು. 1999 ರಲ್ಲಿ ಆಕ್ಲೆಂಡ್ನಲ್ಲಿ ನಡೆದ ಕಾಮನ್ವೆಲ್ತ್ ಚಾಂಪಿಯನ್ಷಿಪ್ನಲ್ಲಿ ಆಕೆಯು ಮೊದಲ ಬಾರಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಪಡೆದರು, ಅಲ್ಲಿ ಅವರು 3 ಚಿನ್ನ ಪದಕಗಳನ್ನು ಮತ್ತು ಒಂದು ಬೆಳ್ಳಿ ಪದಕವನ್ನು ಏರ್ ರೈಫಲ್, 3ಪಿ ಏಕ ವ್ಯಕ್ತಿ ಮತ್ತು ತಂಡ ಪಂದ್ಯಗಳಲ್ಲಿ ಗೆದ್ದರು. ಭಾಗವತ್ ಭಾರತಕ್ಕಾಗಿ ವಿಶ್ವಕಪ್ ಗೆದ್ದ ಏಕೈಕ ಮಹಿಳೆ. ತನ್ನ ಪ್ರತಿಸ್ಪರ್ಧಿ ಗಾಲ್ಕಿನಾ ಲಿಯುಬೊವ್(ರಷ್ಯಾ) ಇವರನ್ನು ಒಬ್ಬ ಮಾದರಿ ಪ್ರತಿಸ್ಪರ್ಧಿಯಾಗಿ ಪರಿಗಣಿಸುತ್ತಾರೆ.

ಡಿಸೆಂಬರ್ 1999 ರಲ್ಲಿ ಅವರು ಇಂಡಿಯನ್ ಶೂಟಿಂಗ್ ತಂಡಕ್ಕೆ ತರಬೇತುದಾರರಾದ ಲಸ್ಲೊ ಸ್ಜುಕ್ಸಕ್ ಅವರ ಅಡಿಯಲ್ಲಿ ತರಬೇತಿಯನ್ನು ಪ್ರಾರಂಭಿಸಿದರು. ಮಲೇಶಿಯನ್ ಶೂಟಿಂಗ್ ತಂಡದಲ್ಲಿ ಲಸ್ಲೊರವರ ಕೆಲಸವನ್ನು ನೋಡಿದ ನಂತರ ಭಾಗವತ್ ಲಸ್ಜ್ಲೋಗೆ ವೈಯಕ್ತಿಕವಾಗಿ ಸಂಪರ್ಕಿಸಿದ. ಹಂಗೇರಿಯನ್ ತಂಡವು ಒಂದು ವರ್ಷದವರೆಗೆ ಉಳಿಯಿತು, ಈ ಅವಧಿಯಲ್ಲಿ 2000ದ ಸಿಡ್ನಿ ಒಲಿಂಪಿಕ್ಸ್ನಲ್ಲಿ ಭಾಗ್ವತ್ ವೈಲ್ಡ್ ಕಾರ್ಡ್ ಪ್ರವೇಶವನ್ನು ಪಡೆದರು, ಅಲ್ಲಿ ಅವರು ಅಂತಿಮ ಸುತ್ತಿನ ವರೆಗೂ ತಲುಪಿದರು. 2001 ರಿಂದ 2004 ರವರೆಗೆ, ಭಾಗವತ್ ತರಬೇತುದಾರರಹಿತ ತರಬೇತಿಯನ್ನು ಪಡೆದರೂ, 2002 ರಲ್ಲಿ ವಿಶ್ವದಲ್ಲೇ ನಂಬರ್ ಒನ್ ಆಗಲು ಯಶಸ್ವಿಯಾದರು.


2006ರಲ್ಲಿ, ಲಾಸ್ಜ್ಲೋ ರಾಷ್ಟ್ರೀಯ ಶೂಟಿಂಗ್ ತಂಡದ ಕೋಚ್ ಆಗಿ ಮರು-ಸೇರಿಕೊಂಡರು, ಮತ್ತು 2008 ರ ವರೆಗೆ ಭಾಗವತ್ ಅವರೊಂದಿಗೆ ತರಬೇತಿ ಪಡೆದರು. 2008 ರಲ್ಲಿ, ಭಾರತೀಯ ರಾಷ್ಟ್ರೀಯ ಸೇನೆಯು ಸ್ಟಾನಿಸ್ಲಾವ್ ಲ್ಯಾಪಿಡಸ್ ರವರನ್ನು ರಾಷ್ಟ್ರೀಯ ತಂಡಕ್ಕೆ ತರಬೇತುದಾರರಾಗಿ ನೇಮಕಮಾಡಿತು. 2002 ರಲ್ಲಿ ಚಾಂಪಿಯನ್ಸ್ ನ ಚಾಂಪಿಯನ್ಸ್ ಆಗಿ ಗೆದ್ದದ್ದು ತನ್ನ ವೃತ್ತಿಜೀವನದಲ್ಲಿ ಅತ್ಯುತ್ತಮ ಕ್ಷಣ ಎಂದು ಭಾಗವತ್ ಹೇಳುತ್ತಾರೆ.ಇವರು ಇಲ್ಲಿಯವರೆಗೂ ಈ ಪ್ರಶಸ್ತಿಯನ್ನು ಗೆದ್ದುಕೊಂಡ ಏಕೈಕ ಭಾರತೀಯರಾಗಿದ್ದಾರೆ.


ಸಲಕರಣೆಗಳು ಮತ್ತು ಪ್ರಾಯೋಜಕರು

[ಬದಲಾಯಿಸಿ]

ಭಾಗವತ್ ಅವರ ಏರ್ ರೈಫಲ್ ಘಟನೆಗಳಿಗಾಗಿ ಜರ್ಮನ್ ನಿರ್ಮಿತ ರೈಫಲ್ ಎಂಬ ಫಿನ್ವರ್ಕ್ಬಾವು ಬಳಸುತ್ತಾರೆ. 10 ಮೀಟರ್ ಗೆ ಅವಳು ಫಿನ್ವರ್ಕ್ಬಾವುಗೆ ಆದ್ಯತೆ ನೀಡುತ್ತಾಳೆ, ಆದರೆ 50 ಮಿ.ಗೆ ಅವಳು .22 ವಾಲ್ಥರ್ ಅನ್ನು ಬಳಸುತ್ತಿದ್ದಾಳೆ.

ಭಾಗವತ್ ಅವರಿಗೆ ಮೊದಲ ಬಾರಿಗೆ 1993 ರಲ್ಲಿ ಬಾಲಿವುಡ್ ನಟ ಮತ್ತು ಸಹವರ್ತಿ ಶೂಟರ್ ನಾನಾ ಪಾಟೇಕರ್ ಶೂಟಿಂಗ್ ಕಿಟ್ ಅನ್ನು ಉಡುಗೊರೆಯಾಗಿ ನೀಡಿದರು. 2000 ದಲ್ಲಿ ಹಿಂದೂಜಾ ಫೌಂಡೇಶನ್ ಅವರು ಹಾಗೂ 2008 ರಲ್ಲಿ ಮಿತ್ತಲ್ ಚಾಂಪಿಯನ್ಸ್ ಟ್ರಸ್ಟ್ ರವರು ಸಲಕರಣೆಗಳು ಪ್ರಾಯೋಜಿಸುತ್ತಿದ್ದರು. ಹ್ಯುಂಡೈ ಕಾರ್ಪೊರೇಷನ್ ಸಹ 2004 ರ ಮೊದಲಿನಿಂದಲೂ ಭಾಗವತ್ ರ ತರಬೇತಿಯನ್ನು ಬೆಂಬಲಿಸಿತು.


ಪ್ರಶಸ್ತಿಗಳು

[ಬದಲಾಯಿಸಿ]
 • ರಾಜೀವ್ ಗಾಂಧಿ ಖೇಲ್-ರತ್ನ (2003)
 • ಅರ್ಜುನ ಪ್ರಶಸ್ತಿ (2000)
 • 1992: ಶ್ರೀ ಶಿವ ಛತ್ರಪತಿ ಪ್ರಶಸ್ತಿ
 • 1993: ಮಹಾರಾಷ್ಟ್ರ ಗೌರವ್ ಪುರಸ್ಕಾರ
 • 1993: ವಸಂತ್ರಾವ್ ನಾಯಕ್ ಪ್ರತಿಷ್ಠಾನ್ ಪುರಸ್ಕಾರ
 • 2002: ಇಂಡೋ-ಅಮೆರಿಕನ್ ಸೊಸೈಟಿ ಯಂಗ್ ಅಚೀವರ್ ಪ್ರಶಸ್ತಿ
 • 2003: ಟೈಮ್ಸ್ ಗ್ರೂಪ್ ಮಹಾರಾಷ್ಟ್ರ ಶಾನ್
 • 2003: ಹೀರೋ ಇಂಡಿಯನ್ ಸ್ಪೋರ್ಟ್ಸ್ ಅವಾರ್ಡ್-ಬೆಸ್ಟ್ ಸ್ಪೋರ್ಟ್ಸ್ ವುಮನ್
 • 2003: ವರ್ಷದ ಎಚ್ಐಎಸ್ಎ ಕ್ರೀಡೆ ಮಹಿಳೆ
 • 2003: ವರ್ಷದ ಎಚ್ಐಎಸ್ಎ ಶೂಟರ್
 • 2004: ವರ್ಷದ ಎಚ್ಐಎಸ್ಎ ಶೂಟರ್
 • 2005: GR8 ಮಹಿಳಾ ಸಾಧಕರ ಪ್ರಶಸ್ತಿ
 • 2005: ಶಿಕ್ಷಕರ ಸಾಧನೆ ಪ್ರಶಸ್ತಿ
 • 2006: ಎಫ್ ಐ ಇ ಫೌಂಡೇಶನ್ ರಾಷ್ಟ್ರೀಯ ಪ್ರಶಸ್ತಿ


ಉಲ್ಲೇಖ

[ಬದಲಾಯಿಸಿ]
 1. "ಖೇಲ್ ರತ್ನವನ್ನು ಹಂಚಿಕೊಳ್ಳಲು ಅಂಜಲಿ, ಬೀನಾಮೋಲ್".
 2. ಅಂಜಲಿ ರಾಮಕಾಂತ ವೇದಪಥ್-ಭಗವತ್ Archived 2020-03-03 ವೇಬ್ಯಾಕ್ ಮೆಷಿನ್ ನಲ್ಲಿ.