ಅಂಜಲಿ ಬನ್ಸಾಲ್
ಅಂಜಲಿ ಬನ್ಸಾಲ್ ಅವನಾ ಕ್ಯಾಪಿಟಲ್ನ ಸ್ಥಾಪಕರಾಗಿದ್ದು ಇದು ಬೆಳವಣಿಗೆಯ ಹಂತದ ವ್ಯವಹಾರಗಳನ್ನು ಹೆಚ್ಚಿಸಲು ಹೂಡಿಕೆ ಮಾಡುತ್ತದೆ.ಅವರನ್ನು ದೇನಾ ಬ್ಯಾಂಕಿನ ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.ಅವರು ಎನ್ಐಟಿಐ ಆಯೋಗ್ ಮಹಿಳಾ ಉದ್ಯಮಶೀಲತೆ ವೇದಿಕೆ ಹೂಡಿಕೆ ಮಂಡಳಿಯ ಅಧ್ಯಕ್ಷರಾಗಿದ್ದಾರೆ.ವಿವಿಧ ಆರಂಭಿಕ ಮತ್ತು ಬೆಳವಣಿಗೆಯ ಹಂತದ ಗ್ರಾಹಕ ಕಂಪೆನಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಅವರು ಭಾರತದಲ್ಲಿ ಸಕ್ರಿಯ ಏಂಜಲ್ ಹೂಡಿಕೆದಾರರಾಗಿದ್ದಾರೆ.ಅವರು ಇಂಜಿನಿಯರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
ವೃತ್ತಿ
[ಬದಲಾಯಿಸಿ]ಗ್ಲಾಕ್ಲೊಸ್ಮಿತ್ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಇಂಡಿಯಾ,ಬಾಟಾ ಇಂಡಿಯಾ ಲಿಮಿಟೆಡ್,ಟಾಟಾ ಪವರ್ ಮತ್ತು ದೆಹಲಿಯ ಸಾರ್ವಜನಿಕ ನಿರ್ದೆಶಕರಾಗಿ ಇವರು ಸೇವೆ ಸಲ್ಲಿಸುತ್ತಿದ್ದಾರೆ.[೧] ಈ ಹಿಂದೆ, ಅವರು ಜಾಗತಿಕ ಜೀವನೋಪಾಯವನ್ನು ಉತ್ತೇಜಿಸುವ ಪ್ರಮುಖ ಸಂಸ್ಥೆಯಾದ ಮಹಿಳಾ ವಿಶ್ವ ಬ್ಯಾಂಕಿಂಗಿನ ಭಾರತ ಮಂಡಳಿಯ ಅಧ್ಯಕ್ಷರಾಗಿದ್ದರು ಹಾಗೂ ಸೆವಾಕ್ಕೆ ಸಲಹೆಗಾರರಾಗಿ ಮುಂದುವರಿದಿದ್ದಾರೆ.[೨] ಅವರು ಯುವ ಅಧ್ಯಕ್ಷರ ಸಂಘಟನೆಯ ಸದಸ್ಯರಾಗಿದ್ದಾರೆ. ಕಾರ್ಪೊರೇಟ್ ಆಡಳಿತ ಮತ್ತು ವೈವಿಧ್ಯತೆಯ ಸಂವಾದಕ್ಕೆ ಸಕ್ರಿಯ ಕೊಡುಗೆ ನೀಡಿದ ಅಂಜಲಿ ,ಕಾರ್ಪೊರೇಟ್ ಮಂಡಳಿಗಳಲ್ಲಿನ ಮಹಿಳೆಯರಿಗಾಗಿ ಕಾರ್ಪೊರೇಟ್ ಆಡಳಿತದ ಎಫ಼್ಐಸಿಸಿಐ ಸೆಂಟರ್ ಅನ್ನು ಸಹ ಸ್ಥಾಪಿಸಿದರು ಮತ್ತು ಅಧ್ಯಕ್ಷತೆ ವಹಿಸಿದ್ದರು. ಭಾರತದ ಪ್ರಮುಖ ಪ್ರಕಟಣೆಯಾದ ಬ್ಯುಸಿನೆಸ್ ಟುಡೇ ಅವರನ್ನು "ಭಾರತೀಯ ವ್ಯವಹಾರದಲ್ಲಿ ಮಹಿಳೆ"ಹಾಗೂ ಫ಼ಾರ್ಚೂನ್ ಇಂಡಿಯಾ "ವ್ಯವಹಾರದಲ್ಲಿ ಅತ್ಯಂತ ಶಕ್ತಿಯುತ ಮಹಿಳೆ"ಎಂಬ ಸಾಲಿನಲ್ಲಿ ಅವರನ್ನು ಸೇರಿಸಿದೆ.[೩]
ಶಿಕ್ಷಣ
[ಬದಲಾಯಿಸಿ]ಗುಜರಾತ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಇಂಜಿನಿಯರಿಂಗ್ ಪದವಿ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಅಂತರಾಷ್ಟ್ರೀಯ ಹಣಕಾಸು ಮತ್ತು ವ್ಯವಹಾರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡದಿದ್ದಾರೆ.[೪]
ಉಲ್ಲೇಖಗಳು
[ಬದಲಾಯಿಸಿ]- ↑ https://economictimes.indiatimes.com/industry/energy/power/tata-power-appoints-3-independent-directors/articleshow/54916450.cms
- ↑ https://archive.is/20141001091720/http://www.indiaretailing.com/7/23/24/10809/Bata-India-Appoints-Anjali-Bansal-as-Independent-Director--Nitesh-Kumar-as-MD-Retail-
- ↑ https://www.indiatoday.in/supplements/woman/story/the-frontrunners-130126-2011-03-11
- ↑ https://timesofindia.indiatimes.com/business/india-business/Ive-never-stopped-and-I-dont-know-how-to-Anjali-Bansal/articleshow/28450146.cms