ಅಂಗಾರ (ಪ್ರದೇಶ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಏಷಿಯಾ ಖಂಡದ ಈಗಿನ ಸ್ವರೂಪ

ಅಂಗಾರ ದಕ್ಷಿಣ ಮಧ್ಯ ಏಷ್ಯದಲ್ಲಿ (ಸೈಬೀರಿಯಾದಲ್ಲಿ) ಇರುವ ಒಂದು ಪ್ರದೇಶ. ಇಲ್ಲಿ ಅಂಗಾರ ಹೆಸರಿನ ನದಿ ಹರಿಯುವುದರಿಂದ ಈ ಪ್ರದೇಶಕ್ಕೆ ಈ ಹೆಸರು ಬಂದಿದೆ. ಭೂಮಿಯ ಪ್ರಮುಖ ಸ್ಥಿರಪ್ರದೇಶಗಳ ಪೈಕಿ ಇದೂ ಒಂದೆನಿಸಿದೆ. ಹೆಸರಿದೆ.ಆಲ್ಟ್ರೆಡ್ಫ್ರಿವೆಗನರ್ನು ತನ್ನ ಭೂಖಂಡಗಳ ಚಲನಾ ಸಿದ್ಧಾಂತದಲ್ಲಿ, ಪ್ಯಾಂಜಿಯ ಸಮಗ್ರ ಭೂಭಾಗವು ವಿಭಾಗಗೊಂಡ ಉತ್ತರದ ಭಾಗವನ್ನು ಅಂಗಾರ ಅಥವಾ ಲಾರೇಷಿಯ ಭೂ ಫಲಕವೆಂದು ಹೆಸರಿಸಿರುವನು. ಪೃಥ್ವಿಯ ಸ್ಥಿರ ಭಾಗಗಳಲ್ಲಿ ಪ್ರಮುಖವಾದುದು;

ಭೂಗರ್ಭ ಶಾಸ್ತ್ರದ ಅನ್ವಯ[ಬದಲಾಯಿಸಿ]

ಭೂಗರ್ಭ ಶಾಸ್ತ್ರದ ಪ್ರಕಾರ ಪುರಾತನಯುಗಕ್ಕೆ (ಆರ್ಕೇಯನ್) ಸೇರಿದ ಪ್ರಾಚೀನಶಿಲೆಗಳಿಂದ ಆವರಿಸಲ್ಪಟ್ಟಿದೆ. ಆ ಯುಗದಲ್ಲಿ ಪುರಾತನ ಪರ್ವತಗಳೂ ಉದ್ಭವಿಸಿದುವು. ಅನಂತರ ಉಂಟಾಗಿರುವ ಸಂಚಯನಕಾರ್ಯದಿಂದ ಈ ಭಾಗಗಳ ಪ್ರಾಚೀನಶಿಲೆಗಳು ಒಳಭಾಗದಲ್ಲಿ ಸೇರಿಕೊಂಡಿವೆ. ಅಂಗಾರ ಭೂಮಿಯ ದಕ್ಷಿಣ ಮತ್ತು ಪುರ್ವ ಭಾಗಗಳಲ್ಲಿ ಇತ್ತೀಚೆಗೆ ಉದ್ಭವಿಸಿರುವ ಪರ್ವತಶ್ರೇಣಿಗಳು ಕಂಡುಬರುತ್ತವೆ. ಈ ಪ್ರದೇಶದ ಉತ್ತರ ಭಾಗದಲ್ಲಿ ಆರ್ಕ್ಟಿಕ್ ಸಾಗರವಿದೆ. ಪಶ್ಚಿಮದಲ್ಲಿ ಇತ್ತೀಚಿನ ಪರ್ವತಶ್ರೇಣಿಗಳಲ್ಲಿ ಒಂದಾದ ಯೂರಲ್ ಪರ್ವತವಿದೆ. ಪ್ರಿಕೇಂಬ್ರಿಯನ್ ಕಾಲದಿಂದ ಈ ಭಾಗದಲ್ಲಿ ನಗ್ನೀಕರಣಕಾರ್ಯ ನಡೆದು ಸೈಬೀರಿಯದ ತಗ್ಗಾದ ಮೈದಾನ ಪ್ರದೇಶ ಏರ್ಪಟ್ಟಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: