ಹಿಂದುತ್ವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಮ್ಮ ೧೯೨೩ರ ಕರಪತ್ರದಲ್ಲಿ ವಿನಾಯಕ ದಾಮೋದರ ಸಾವರ್ಕರ್‌ರಿಂದ ಸೃಷ್ಟಿಸಲ್ಪಟ್ಟ ಶಬ್ದವಾದ ಹಿಂದುತ್ವವು ಹಿಂದೂ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ಚಳುವಳಿಗಳ ಸಮೂಹ. ಈ ಚಳುವಳಿಯ ಸದಸ್ಯರನ್ನು ಹಿಂದುತ್ವವಾದಿಗಳೆಂದು ಕರೆಯಲಾಗುತ್ತದೆ. ಒಂದು ೧೯೯೫ರ ಭಾರತದ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ ಹಿಂದುತ್ವ ಶಬ್ದವನ್ನು ಭಾರತದ ಜನರ ಜೀವನದ ರೀತಿ ಮತ್ತು ಭಾರತೀಯ ಸಂಸ್ಕೃತಿ ಅಥವಾ ವಿಶಿಷ್ಟ ಲಕ್ಷಣವನ್ನು ಅರ್ಥೈಸಲು ಬಳಸಬಹುದು.