ಪಾವ್ ಭಾಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಾವ್ ಭಾಜಿ

ಪಾವ್ ಭಾಜಿ ಮುಂಬಯಿ ಪಾಕಪದ್ಧತಿಯಲ್ಲಿ ಹುಟ್ಟಿದ ಒಂದು ಮಹಾರಾಷ್ಟ್ರತ್ವರಿತ ಆಹಾರ ಖಾದ್ಯ. ಪಾವ್ ಭಾಜಿ ಇಡಿಯಾದ ಅಥವಾ ಅರೆದ ತರಕಾರಿಗಳು, ತಾಜಾ ಟೊಮೆಟೊಗಳ ಧಾರಾಳ ಪ್ರಮಾಣ, ಬೆಣ್ಣೆಯ ಒಂದು ಮುದ್ದೆ, ಚೀಸ್ ಹಾಗು ಒಣಹಣ್ಣುಗಳು ಹಾಗು ತಾಜಾ ಹಣ್ಣುಗಳ ಐಚ್ಛಿಕ ಮೇಲೋಗರಗಳ ಮಿಶ್ರಣವಿರುವ, ನಿಧಾನವಾಗಿ ಅಥವಾ ಕ್ಷಿಪ್ರಗತಿಯಲ್ಲಿ ಬೆಣ್ಣೆಯಲ್ಲಿ ಹುರಿಯಲಾದ ಬೆಚ್ಚಗಿನ ಬ್ರೆಡ್‍ನೊಂದಿಗೆ ಸೇವಿಸಲಾಗುವ ಒಂದು ಮಸಾಲೆಭರಿತ ತಯಾರಿಕೆ. ಅದು ಮುಂಬಯಿಗೆ ಸ್ಥಳೀಯವಾಗಿದೆ ಮತ್ತು ಈಗ ಭಾರತದ ಬಹುತೇಕ ಮಹಾನಗರ ಪ್ರದೇಶಗಳಲ್ಲಿ, ಗುಜರಾತ್ ಹಾಗು ಕರ್ನಾಟಕದಂತಹ ವಿಶೇಷವಾಗಿ ಮಧ್ಯ ಹಾಗು ಪಶ್ಚಿಮ ಭಾರತೀಯ ರಾಜ್ಯಗಳಲ್ಲಿ ಜನಪ್ರಿಯವಾಗಿದೆ.

ಇತಿಹಾಸ[ಬದಲಾಯಿಸಿ]

ಈ ಖಾದ್ಯ ೧೮೫೦ ಹುಟ್ಟಿಕೊಂಡಿತು.ಈ ಖಾದ್ಯವು ಮುಂಬಯಿ ಜವಳಿ ಗಿರಣಿ ಕಾರ್ಮಿಕರ ವೇಗದ ಊಟದ ಭಕ್ಷ್ಯಕ್ಕಾಗಿ ಹುಟ್ಟಿಕೊಂಡಿತು.ನಂತರ ಈ ಖಾದ್ಯವನ್ನು ನಗರದಾದ್ಯಂತ ರೆಸ್ಟೊರೆಂಟ್ಗಳಲ್ಲಿ ಬಡಿಸಲಾಗುತ್ತದೆ.ಇತ್ತೀಚಿನ ದಿನಗಳಲ್ಲಿ ಈ ಖಾದ್ಯವನ್ನು ಭಾರತ ಮತ್ತು ವಿದೇಶಗಳಲ್ಲೂ,ರೆಸ್ಟೋರೆಂಟ್ ಅಥವಾ ಸರಳ ಕೈ ಬಂಡಿಗಳಲ್ಲಿ ತಯಾರಿಸುತ್ತಾರೆ.