ಆತ್ಮ (ಹಿಂದೂ ಧರ್ಮ)
ಗೋಚರ
ಆತ್ಮ ಆಂತರಿಕ ವ್ಯಕ್ತಿತ್ವ ಎಂಬ ಅರ್ಥದ ಒಂದು ಸಂಸ್ಕೃತ ಶಬ್ದ. ಹಿಂದೂ ತತ್ವಶಾಸ್ತ್ರದಲ್ಲಿ, ವಿಶೇಷವಾಗಿ ಹಿಂದೂ ಧರ್ಮದ ವೇದಾಂತ ಪರಂಪರೆಯಲ್ಲಿ, ಆತ್ಮವು ಮೊದಲ ತತ್ವ, ವಿದ್ಯಮಾನಗಳಿಂದ ಗುರುತಿಸುವಿಕೆಯನ್ನು ಮೀರಿದ ಒಬ್ಬ ವ್ಯಕ್ತಿಯ "ನೈಜ" ವ್ಯಕ್ತಿತ್ವ, ಒಬ್ಬ ವ್ಯಕ್ತಿಯ ಪರಮಸತ್ತ್ವ. ಮೋಕ್ಷವನ್ನು ಪಡೆಯಲು, ಒಬ್ಬ ಮನುಷ್ಯನು ಆತ್ಮಜ್ಞಾನವನ್ನು ಪಡೆಯಬೇಕಾಗುತ್ತದೆ, ಅಂದರೆ ಒಬ್ಬರ ಆತ್ಮವು ಅತೀಂದ್ರಿಯ ಬ್ರಹ್ಮನ್ಗೆ ತದ್ರೂಪವಾಗಿದೆ ಎಂದು ಅರಿಯುವುದು.