ಪರುಪಳ್ಳಿ ಕಶ್ಯಪ್
ಪರುಪಳ್ಳಿ ಕಶ್ಯಪ್ | |
---|---|
— ಬ್ಯಾಡ್ಮಿಂಟನ್ ಆಟಗಾರ — | |
ವೈಯುಕ್ತಿಕ ಮಾಹಿತಿ | |
ಹುಟ್ಟು ಹೆಸರು | ಪರುಪಳ್ಳಿ ಕಶ್ಯಪ್ |
ಹುಟ್ಟು | ೮ ಸೆಪ್ಟೆಂಬರ್ ೧೯೮೬ |
ವಾಸಸ್ಥಾನ | ಹೈದರಾಬಾದ್,ಭಾರತ |
ಎತ್ತರ | 5 ft 8 in (1.73 m) |
ದೇಶ | ಭಾರತ |
ಆಡುವ ಕೈ | ಬಲಗೈ |
ಪುರುಷರ ಸಿಂಗಲ್ಸ್ | |
ಅತಿಹೆಚ್ಚಿನ ಸ್ಥಾನ | ೬ (೧೪ ಮಾರ್ಛ್ ೨೦೧೩) |
ಸದ್ಯದ ಸ್ಥಾನ | ೧೪ (೧೫ ಆಗಸ್ಟ್ ೨೦೧೩) |
BWF profile |
ಪರುಪಳ್ಳಿ ಕಶ್ಯಪ್(ಪಿ. ಕಶ್ಯಪ್) ಹುಟ್ಟಿದ್ದು ಸೆಪ್ಟೆಂಬರ್ ೮ ೧೯೮೬ ನೆಯ ಇಸವಿಯಲ್ಲಿ. ಈತ ಹೈದರಾಬಾದ್ ಮೂಲದ ಭಾರತದ ಬ್ಯಾಡ್ಮಿಂಟನ್ ಆಟಗಾರ. ಇವರು ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಆಟಗಾರನಾಗಿದ್ದು, ಆದಾಯವಿಲ್ಲದ ಸ್ವಸಹಾಯ ಸಂಸ್ಥೆಯಾದ ಒಲಿಂಪಿಕ್ ಗೋಲ್ಡ್ ಕ್ವೆಸ್ಟ್ ನ ಭಾಗವಾಗಿದ್ದಾರೆ.
ಕ್ರೀಡಾ ವೃತ್ತಿಜೀವನ
[ಬದಲಾಯಿಸಿ]ಆರಂಭಿಕ ವೃತ್ತಿಜೀವನ (೧೯೯೭-೨೦೦೪)
[ಬದಲಾಯಿಸಿ]ಪರುಪಳ್ಳಿ ಕಶ್ಯಪ್ ಮೊದಲು ಹೈದರಾಬಾದಿನಲ್ಲಿ ಎಸ್.ಎಂ. ಆರಿಫ್ ನಡೆಸುತ್ತಿದ್ದ ಬ್ಯಾಡ್ಮಿಂಟನ್ ತರಬೇತಿ ಕ್ಯಾಂಪ್ ಸೇರಿಕೊಂಡರು. ತಂದೆಯವರು ಆಗಾಗ್ಗೆ ವರ್ಗಾವಣೆಗೊಂಡು ಬೇರೆ ಊರುಗಳಲ್ಲಿ ಕೆಲಸ ಮಾಡುತ್ತಿದ್ದರು. ಹೀಗೆ ಬೆಂಗಳೂರಿನಲ್ಲಿಯೂ ಅವರ ಕುಟುಂಬ ನೆಲೆಸಿದ್ದಾಗ , ಪ್ರಕಾಶ್ ಪಡುಕೋಣೆ ಯವರು ಆರಂಭಿಸಿದ್ದ ಬ್ಯಾಡ್ಮಿಂಟನ್ ಅಕಾಡೆಮಿ ಸೇರಿ ಹೆಚ್ಚಿನ ತರಬೇತಿ ಪಡೆದರು. . ೨೦೦೪ ರಲ್ಲಿ ಕಶ್ಯಪ್ ಮತ್ತೆ ಹೈದರಾಬಾದಿಗೆ ತೆರಳಿದರು. ತರಬೇತಿಯ ಸಮಯದಲ್ಲಿ ಮತ್ತು ಆಟದ ಸಮಯದಲ್ಲಿ ಅಸ್ವಸ್ಥತೆಯು ಅವರನ್ನು ಕಾಡಿತು. ಕೆಲವು ವೈದ್ಯಕೀಯ ಪರೀಕ್ಷೆಗಳ ನಂತರ ಕಶ್ಯಪ್ ಅವರಿಗೆ ಆಸ್ತಮಾ ಇರುವುದನ್ನು ಗುರುತಿಸಲಾಯಿತು [೧] . 2000-03 ರ ಸಮಯದಲ್ಲಿ ಬೆಂಗಳೂರಿನಲ್ಲಿ ಅವರು ವಾಸ್ತವ್ಯ ಹೂಡಿದರು. ಬೆಂಗಳೂರಿನ ಹವಾಮಾನಕ್ಕೆ ಒಗ್ಗಿಕೊಂಡು ರೋಗ ನಿವಾರಿಕೊಳ್ಳಲು ಯತ್ನಿಸಿಸಿದರು. ಆಸ್ತಮಾ ರೋಗವು ಅವರಿಗೆ ಆಘಾತವನ್ನುಂಟುಮಾಡಿತು ಮತ್ತು ತನ್ನ ಕ್ರೀಡಾ ವೃತ್ತಿಯೇ ಪೂರ್ಣಗೊಂಡಿತು ಎಂದೂ ಭಾವಿಸಿದರು. ಆದರೂ , ಅವರು ಸಮಸ್ಯೆಯನ್ನು ಜಯಿಸಲು ನಿಶ್ಚಿಯಿದರು. ಸೂಕ್ತ ಔಷಧಿಗಳನ್ನು ಬಳಸಲು ಆರಂಭಿಸಿದರು . ಅವರ ಪರಿಸ್ಥಿತಿ ನಿಧಾನವಾಗಿ ಸುಧಾರಿಸಲು ಶುರುವಾಯಿತು [೨] . ಸುಧಾರಣೆ ಕಾಣುತ್ತಿದ್ದ ಹಂತದಲ್ಲಿ ಅವರು ಪುಲ್ಲೇಲ ಗೋಪಿಚಂದ್ ಅವರ ಮಾರ್ಗದರ್ಶನವನ್ನು ಪಡೆದು ಗುಣಮುಖರಾದರು,ನಂತರ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ ಯಲ್ಲಿ ತಮ್ಮ ತರಬೇತಿಯನ್ನು ಮುಂದುವರಿಸಿದರು.
ವೃತ್ತಿಜೀವನ ( ೨೦೦೫ ರಿಂದ ಇಂದಿನವರೆಗೆ )
[ಬದಲಾಯಿಸಿ]೨೦೦೫ ರಲ್ಲಿ ಕಶ್ಯಪ್, ಆಂಧ್ರಪ್ರದೇಶ ದಲ್ಲಿ ನೆಡೆದ ರಾಷ್ಟ್ರೀಯ ಜೂನಿಯರ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಬಾಲಕರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದರು [೩] . 2006 ನಂತರ , ಅವರು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದರು. ಇದೇ ವರ್ಷದಲ್ಲಿ ನೆಡೆದ ಹಾಂಗ್ ಕಾಂಗ್ ಓಪನ್ ನಲ್ಲಿ ಅವರು ಪೂರ್ವ ಕ್ವಾರ್ಟರ್ಫೈನಲ್ಸ್ ನಂತರ ವಿಶ್ವದ 19 ನೆಯ ಶ್ರೇಯಾಂಕದ Przemysław Wacha ಅವರನ್ನು ಎದುರಿಸಿ ಗೆದ್ದರೂ , ಮುಂದಿನ ಸುತ್ತಿನಲ್ಲಿ ಸೋತರು[೪] . ಕೆಲವು ತಿಂಗಳ ನಂತರ , ಅವರು Bitburger ಓಪನ ಸೀರಿಸ್ ನಲ್ಲಿ Wacha ಅವರನ್ನು ಸೋಲಿಸಿ ಸೆಮಿಫೈನಲ್ಸ್ ತಲುಪಿದರು . 2006 ರಲ್ಲಿ , ತನ್ನ ವಿಶ್ವ ಶ್ರೇಯಾಂಕವನ್ನು ೧೦೦ ರ ಒಳಗೆ ಅಂದರೆ, 64 ಕ್ಕೆ ಹೆಚ್ಚಿಸಿ ಕೊಂಡರು. ಕೋಚ್ ಗೋಪಿಚಂದ್ ಕಶ್ಯಪ್ ರ ಗೆಲುವಿಗೆ ಸಂತೋಷ ವ್ಯಕ್ತಪಡಿಸಿ ಉನ್ನತ ಶ್ರೇಣಿಯಲ್ಲಿರುವ ಆಟಗಾರರ ವಿರುದ್ಧ ಪ್ರಮುಖ ಪಂದ್ಯಗಳನ್ನು ಗೆಲ್ಲುವ ಉತ್ತಮ ಸೂಚನೆ ಇದು ಎಂದು ಭಾವಿಸಿದರು . ಅದೇ ವರ್ಷದಲ್ಲಿ , ಕಶ್ಯಪ್ ರನ್ನು 2006 ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆ ಮಾಡಲಾಯಿತು . 33 ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿಅಂದಿನ ರಾಷ್ಟ್ರೀಯ ಚಾಂಪಿಯನ್ ಚೇತನ್ ಆನಂದ್ ರನ್ನು ಸೋಲಿಸಿ ಆಂಧ್ರ ಪ್ರದೇಶಕ್ಕೆ ಒಂದು ಚಿನ್ನದ ಪದಕ ಗೆದ್ದು ತಂದರು. 2006-07 ರ ನಡುವೆ , ಕಶ್ಯಪ್ ಕೆಲವು ರಾಷ್ಟ್ರೀಯ ಪಂದ್ಯಾವಳಿಗಳನ್ನು ಗೆದ್ದುಕೊಂಡರು.
೨೦೦೯ ರ ಡಚ್ ಓಪನ್ನಲ್ಲಿ , ಕಶ್ಯಪ್ ಉಪಾಂತವನ್ನು ತಲುಪಿದರು ಮತ್ತು 2009 ರ ಸೀನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಆದರು . ಅದೇ ವರ್ಷದಲ್ಲಿ , ಅವರು ಥೈಲ್ಯಾಂಡ್ ಇಂಟರ್ನ್ಯಾಷನಲ್ ಚಾಂಪಿಯನ್ಶಿಪ್ , ಸ್ಪ್ಯಾನಿಶ್ ಓಪನ್ ಮತ್ತು ಟೌಲೌಸ್ ಓಪನ್ ನಲ್ಲಿ ರನ್ನರ್ ಅಪ್ ಆದರು . 2009 ರ ಸಿಂಗಪುರ್ ಸೂಪರ್ ಸೀರೀಸ್ ನಲ್ಲಿ , ಕಶ್ಯಪ್ ಉಪಾಂತವನ್ನು ತಲುಪಿದರು . 2010 ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅವರು ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟರು. ಭಾರತೀಯ ಓಪನ್ ಗ್ರ್ಯಾಂಡ್ ಪ್ರಿಕ್ಸ್ , 2010 ನಲ್ಲಿ ಸೆಮಿಫೈನಲ್ ತಲುಪಿದರು . 2011 ರಲ್ಲಿ ರೋಹ್ಟಕ್ ನಲ್ಲಿ ನಡೆದ 75 ನೇ ಸೀನಿಯರ್ ನ್ಯಾಷನಲ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಪುರುಷರ ಸಿಂಗಲ್ಸ್ ಸ್ಪರ್ಧೆಯ ಫೈನಲ್ನಲ್ಲಿ ಅರವಿಂದ್ ಭಟ್ ವಿರುದ್ಧ ಸೋತು ರನ್ನರ್ ಅಪ್ ಆದರು [೫]. 2012 ರಲ್ಲಿ ಇಂಡೋನೇಷ್ಯಾ ಓಪನ್ ಸೆಮಿಫೈನಲ್ ಹಂತವನ್ನು ತಲುಪಿದರು. ಸೆಮಿಫೈನಲ್ಸ್ ತೆರಳುವ ಹಂತದಲ್ಲಿ ಅವರು ವಿಶ್ವದ ನಂ 3 ಶ್ರೇಯಾಂಕದ ಚೆನ್ ಲಾಂಗ್ ಮತ್ತು ವಿಶ್ವದ ನಂ 16ನೆಯ ಶ್ರೇಯಾಂಕದ ಹ್ಯಾನ್ಸ್ ಕ್ರಿಸ್ಟಿಯನ್ ಅವರು ಸೋಲಿಸಿ ನಿರಾಶೆಗೊಳ್ಳುವಂತೆ ಮಾಡಿದರು[೬]. 2012 ರಲ್ಲಿ ನೆಡೆದ ಬೇಸಿಗೆ ಒಲಿಂಪಿಕ್ಸ್ ನಲ್ಲಿ ಕಶ್ಯಪ್ ಅವರು ಕ್ವಾರ್ಟರ್ ಪೈನಲ್ ನಲ್ಲಿ ವಿಶ್ವದ ಅಗ್ರ ಶ್ರೇಯಾಂಕದ ಲೀ ಚೊಂಗ್ ವೆಯಿ ವಿರುಧ್ಧ ಸೋತರು. ಒಲಿಂಪಿಕ್ಸ್ನಲ್ಲಿ ಈ ಹಂತವನ್ನು ತಲುಪಿ ಅಗ್ರ ಶ್ರೇಣಿಯ ಆಟಗಾರನನ್ನು ಎದುರಿಸಿದ ಮೊದಲ ಭಾರತೀಯ ಎಂಬ ಇತಿಹಾಸವನ್ನು ನಿರ್ಮಿಸಿರು[೭] . ಈ ಸಾಧನೆ ಮೂಲಕ ಕಶ್ಯಪ್ 19 ನೆಯ ಶ್ರೇಯಾಂಕಕ್ಕೆ ಜಿಗಿದರು .2012 ರ ಸೈಯದ್ ಮೋದಿ ಇಂಟರ್ನ್ಯಾಷನಲ್ ಭಾರತ ಗ್ರ್ಯಾಂಡ್ ಪ್ರಿಕ್ಸ್ನಲ್ಲಿ ಚಿನ್ನ ಗೆಲ್ಲುವ ಮೂಲಕ ವೃತ್ತಿಜೀವನದ ಅತ್ಯುತ್ತಮ ಶ್ರೇಣಿಯಾದ 14 ನೆಯ ರ್‍ಯಾಂಕ್ ಅನ್ನು ತಲುಪಿದರು. 2013 ರಲ್ಲಿ ಕೊರಿಯಾದಲ್ಲಿ ಸಿಕ್ಕ ಯಶಸ್ಸಿನಿಂದ ಅವರು 9 ನೆಯ ರ್‍ಯಾಂಕ್ ಪಡೆದರು. ಸ್ವಿಸ್ ಓಪನ್ ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ನಂತರ, ಬಿಡಬ್ಲ್ಯೂಎಫ್ ಒದಗಿಸಿದ ಶ್ರೇಯಾಂಕದಂತೆ 7 ನೆಯ ಶ್ರೇಯಾಂಕ ಪಡೆದರು. ೨೦೧೩ ರ ಇಂಡಿಯನ್ ಓಪನ್ ಚಾಂಪಿಯನ್ ಶಿಪ್ ನಲ್ಲಿ ಇಂಡೋನೇಷ್ಯಾದ ತೌಫಿಕ್ ಹಿದಾಯತ್ ವಿರುದ್ಧ ಸೆಣೆಸಿದರು [೮]. ತಮ್ಮ ಮೊದಲ ಸುತ್ತಿನ ಪಂದ್ಯದ ನಂತರ ವೃತ್ತಿಜೀವನದ ಅತ್ಯುತ್ತಮ ಶ್ರೇಣಿಯಾದ ೬ ನೆಯ ಶ್ರೇಯಾಂಕಕ್ಕೆ ಗೆ ಜಿಗಿದರು[೯] .
ಉಲ್ಲೇಖನಗಳು
[ಬದಲಾಯಿಸಿ]- ↑ Sukumar, Dev S (3 August 2009). "Impossible is nothing". Daily News and Analysis. Retrieved 13 October 2010.
- ↑ M, Ratnakar (4 October 2010). "Despite asthma, Kashyap emerges best medal bet". ದಿ ಟೈಮ್ಸ್ ಆಫ್ ಇಂಡಿಯಾ. Retrieved 13 October 2010.
- ↑ "Kashyap, Saina emerge best". Rediff.com. 2 December 2005. Retrieved 13 October 2010.
- ↑ "Kashyap pulls off a major upset". ದಿ ಹಿಂದೂ. 31 August 2006. Archived from the original on 11 ನವೆಂಬರ್ 2007. Retrieved 13 October 2010.
- ↑ "Indore: Arvind Bhat Claims National Badminton Title". Daijiworld. 19 February 2009. Archived from the original on 21 ಫೆಬ್ರವರಿ 2009. Retrieved 13 October 2010.
- ↑ "Olympic-bound Saina Nehwal, P Kashyap reach semifinals of Indonesian Open". 15 June 2012. Archived from the original on 2013-01-26. Retrieved 2013-08-29.
- ↑ "Parupalli Kashyap creates history by reaching quarters at London Olympics - The Times of India". The Times of India. Retrieved 2012-08-01.
- ↑ ತೌಫಿಕ್ ಹಿದಾಯತ್ ವಿರುಧ್ಧ ಕಶ್ಯಪ್ ಗೆ ಸೋಲು
- ↑ "Kashyap becomes world No.6". The Hindu. 25 April 2013.
{{cite news}}
: Italic or bold markup not allowed in:|publisher=
(help)
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Parupalli Kashyap Archived 2011-07-21 ವೇಬ್ಯಾಕ್ ಮೆಷಿನ್ ನಲ್ಲಿ. at Olympic Gold Quest
- Olympics London 2012