ಚೇತನಾ ತೀರ್ಥಹಳ್ಳಿ
ಜನನ | ಗಾಯತ್ರಿ ತೀರ್ಥಹಳ್ಳಿ,ಶಿವಮೊಗ್ಗಜಿಲ್ಲೆ |
---|---|
ವೃತ್ತಿ | ಬರಹಗಾರರು ಮತ್ತು ಪತ್ರಿಕೋದ್ಯಮಿ |
ಭಾಷೆ | ಕನ್ನಡ |
ರಾಷ್ಟ್ರೀಯತೆ | ಭಾರತೀಯರು |
ಪ್ರಕಾರ/ಶೈಲಿ | ಬ್ಲಾಗ್, ಕವನ, ಲೇಖನ |
ಮಕ್ಕಳು | ಪ್ರಣವ ಚೈತನ್ಯ |
ಚೇತನಾ ತೀರ್ಥಹಳ್ಳಿ ಇವರು ಕನ್ನಡದ ಲೇಖಕಿ. ಬ್ಲಾಗ್, ಕವಿತೆ, ಸಣ್ಣ ಕಥೆ, ನಾಟಕ ಹೀಗೆ ಅನೇಕ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. ಪ್ರಸ್ತುತ ಫ್ರೀಲ್ಯಾನ್ಸ್ ಬರಹಗಾರ್ತಿಯಾಗಿದ್ದಾರೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ.
ಜೀವನ
[ಬದಲಾಯಿಸಿ]ಆಗಷ್ಟ್ ೧೫, ೧೯೭೯ ರಲ್ಲಿ ತೀರ್ಥಹಳ್ಳಿಯಲ್ಲಿ ಜನಿಸಿದರು. ಇವರ ಹುಟ್ಟು ಹೆಸರು ಗಾಯತ್ರಿ. ಮುಂದೆ ಲೇಖಕಿಯಾದಾಗ ಇವರು ತಮ್ಮ ಹೆಸರನ್ನು ಚೇತನಾ ತಿರ್ಥಹಳ್ಳಿ ಎಂದು ಬದಲಾಯಿಸಿಕೊಂಡರು. ಅಲಾವಿಕಾ ಇವರ ಮತ್ತೊಂದು ಹೆಸರು.[ಸೂಕ್ತ ಉಲ್ಲೇಖನ ಬೇಕು] ಈ ಹೆಸರಿನಲ್ಲಿ ಒಂದು 'ಇ - ಪುಸ್ತಕ'ವನ್ನೂ ಪ್ರಕಟಿಸಿದ್ದಾರೆ. ಶಿವಮೊಗ್ಗದ ಮೇರಿ ಇಮ್ಯಾಕ್ಯುಲೇಟ್ ಮತ್ತು ತೀರ್ಥಹಳ್ಳಿಯ ಸೇಂಟ್ ಮೇರೀಸ್ ಶಾಲೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ತೀರ್ಥಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಮತ್ತು ತುಂಗಾ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪದವಿಪೂರ್ವಶಿಕ್ಷಣ ಪಡೆದರು. ಮೊದಲನೇ ವರ್ಷದ ಬಿ.ಎಸ್ ಸಿ ಓದಬೇಕಾದರೆ, ಮದುವೆಯ ಕಾರಣಗಳಿಂದ ಓದು ನಿಲ್ಲಿಸಬೇಕಾಯಿತು. ಪ್ರಣವ ಚೈತನ್ಯ ಇವರ ಒಬ್ಬನೇ ಮಗ.
ವೃತ್ತಿ ಜೀವನ
[ಬದಲಾಯಿಸಿ]- ಪಾಟೀಲ್ ಪುಟ್ಟಪ್ಪನವರ "ಪ್ರಪಂಚ" ವಾರ ಪತ್ರಿಕೆಯಲ್ಲಿ ಉಪ ಸಂಪಾದಕಿಯಾಗಿ ತಮ್ಮ ವೃತ್ತಿ ಜೀವನವನ್ನ್ನ್ನು ಆರಂಬಿಸಿದರು. ಒಂದು ವರ್ಷ ಈ ಕೆಲಸ ಮಾಡಿದರು.
- ಟಿವಿ ೯ ವಾರ್ತಾ ವಾಹಿನಿಯಲ್ಲಿ ೩ ತಿಂಗಳು ಕೆಲಸ ಮಾಡಿದರು.
- ಇಸ್ಕಾನ್ ನಲ್ಲಿ ಅನುವಾದಕಿ ಹಾಗೂ ಆಧ್ಯಾತ್ಮಿಕ ಮಾಸಪತ್ರಿಕೆಯ ಉಪ ಸಂಪಾದಕಿಯಾಗಿ ೩ ವರ್ಷ ಕೆಲಸ ಮಾಡಿದರು.
- ಕನ್ನಡಪ್ರಭದ ಮ್ಯಾಗಝಿನ್ ವಿಭಾಗದಲ್ಲಿ ಸಖಿ ಪಾಕ್ಷಿಕದ ಹಿರಿಯ ಉಪಸಂಪಾದಕಿಯಾಗಿ ೧ ವರ್ಷ ೩ ತಿಂಗಳು.
- ಟೈಮ್ಸ್ ಸಮೂಹದ ವಿಜಯ ನೆಕ್ಸ್ಟ್ ಸಾಪ್ತಾಹಿಕ ಹಾಗೂ ಬೋಧಿವೃಕ್ಷ ವಾರಪತ್ರಿಕೆಯಲ್ಲಿ ಮುಖ್ಯ ಉಪ ಸಂಪಾದಕಿಯಾಗಿ (chief copy editor) ಕಾರ್ಯನಿರ್ವಹಣೆ.
- ಉಪ್ಪಿನ ಕಾಗದ ಚಲನಚಿತ್ರಕ್ಕೆ ಚಿತ್ರಕಥೆ (ಸಹಾಯಕಿ), ಸಂಭಾಷಣೆ ಮತ್ತು 2 ಹಾಡುಗಳ ರಚನೆ
- ಹಂಗಾಮ ಸಾಹಿತ್ಯ ಪತ್ರಿಕೆ, ಕನ್ನಡ ಟೈಮ್ಸ್ ವಾರ ಪತ್ರಿಕೆ, ಅಗ್ನಿ, ಪ್ರಜಾವಾಣಿ ಪತ್ರಿಕೆಗಳಲ್ಲಿ ಅಂಕಣ ಬರೆದಿದ್ದಾರೆ.
- ಪ್ರಸ್ತುತ ಫ್ರೀಲ್ಯಾನ್ಸ್ ಬರಹಗಾರ್ತಿ/ಅನುವಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಆಧ್ಯಾತ್ಮಿಕ ಜಾಲತಾಣವೊಂದರ ಸಹಸಂಪಾದಕಿಯಾಗಿದ್ದಾರೆ. [೧]
ಬರೆದ ಪುಸ್ತಕಗಳು
[ಬದಲಾಯಿಸಿ]- ಉಫೀಟ್ (ಕವನ ಸಂಕಲನ)
- ಭಾಮಿನಿ ಷಟ್ಪದಿ (ಅಂಕಣ ಕಾದಂಬರಿ)
- ಗುಟ್ಟು ಬಚ್ಚಿಡಲು ಬರುವುದಿಲ್ಲ (ಕವನ ಸಂಕಲನ)
- ಆನಂದಕ್ಕೊಂದು ಮಿಸ್ಟ್ ಕಾಲ್ (ಅನುವಾದಿತ ಕೃತಿ)
- ಬ್ಲಾಗಿಸು ಕನ್ನಡ ಡಿಂಡಿಮವ (ಬ್ಲಾಗ್ ಬರಹಗಳ ಸಂಪಾದನೆ)
- ಬಿಸಿಲ ಚೂರಿನ ಬೆನ್ನು (ಪ್ರಬಂಧ ಸಂಕಲನ)
- ಎ ಕಾಸ್ಮಿಕ್ ಜೋಕ್ (ಅನುವಾದಿತ ಕಾದಂಬರಿ)
- ಐ ಆಮ್ ಅನದರ‍್ ಯೂ (ಅನುವಾದಿತ ಕಾದಂಬರಿ)
- ಶಬರಿಯ ಅವಸರ
- ಭಾಮಿನಿ ಷಟ್ಪದಿ (ಪರೀಷ್ಕೃತ ಮುದ್ರಣ)
- ನೀಲಿಬಾನಿನಲ್ಲಿ ಕೆಂಪು ಸೂರ್ಯ (ಜೆ ಎನ್ ಯು ಭಾಷಣಗಳ ಅನುವಾದ)
- ಅಧ್ಯಾತ್ಮ ಡೈರಿ (ಆಧ್ಯಾತ್ಮಿಕ ಬರಹಗಳು)[೨]
- ಸೂರ್ಯನೆದೆಯ ನೀರ ಬೀಜ (ಕವನ ಸಂಕಲನ)
- ಅವಳವನು - ಅವನವಳು (ನಾಟಕ : ಅಪ್ರಕಟಿತ)
- ಲಜ್ಜೆ (ನಾಟಕ : ಅಪ್ರಕಟಿತ)[೩]
- ಕಾಕ್ ಟೇಲ್ : ಲೋಕೋ ಭಿನ್ನ ರುಚಿಃ (ಬರಹ ಸಂಗ್ರಹ)
ಆಸಕ್ತಿಗಳು
[ಬದಲಾಯಿಸಿ]ಅಧ್ಯಾತ್ಮ, ತತ್ತ್ವಶಾಸ್ತ್ರ, ಸಾಹಿತ್ಯ - ಸಂಸ್ಕೃತಿ ಅಧ್ಯಯನ, ಸಿನೆಮಾ, ಪ್ರಚಲಿತ ಸಂಗತಿಗಳ ಸಾಮಾಜಿಕ ಹಾಗೂ ರಾಜಕೀಯ ವಿಶ್ಲೇಷಣೆ. ಚಿತ್ರ ಕಲೆ, ಫೋಟೋಗ್ರಫಿ, ಶಿಲ್ಪಕಲೆ ವೀಕ್ಷಣೆ ಮತ್ತು ವಿಶ್ಲೇಷಣೆಗಳಲ್ಲಿ ಆಸಕ್ತಿ.
ಉಲ್ಲೇಖಗಳು
[ಬದಲಾಯಿಸಿ]- ↑ www.aralimara.com
- ↑ "ಆರ್ಕೈವ್ ನಕಲು". Archived from the original on 2019-05-27. Retrieved 2019-05-27.
- ↑ "ಆರ್ಕೈವ್ ನಕಲು". Archived from the original on 2020-10-27. Retrieved 2019-05-27.