ವಿಷಯಕ್ಕೆ ಹೋಗು

ಬೆನಗಲ್ ರಾಮ ರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೆನಗಲ್ ರಾಮ ರಾವ್
Bornಜುಲೈ ೧, ೧೮೮೯
Diedಡಿಸೆಂಬರ್ ೧೩, ೧೯೬೯
NationalityIndian
Occupationರಿಸರ್ವ್ ಬ್ಯಾಂಕ್ ಗವರ್ನರ್
Signature

ಬೆನಗಲ್ ರಾಮ ರಾವ್ (ಜುಲೈ ೧, ೧೮೮೯ - ಡಿಸೆಂಬರ್ ೧೩, ೧೯೬೯) ಆರ್ಥಿಕ ತಜ್ಞರಾಗಿ, ಸ್ವತಂತ್ರ ಭಾರತದ ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿ ಪ್ರಖ್ಯಾತರು.

ಸ್ವತಂತ್ರ ಭಾರತದ ಪ್ರಥಮ ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿ ಪ್ರಖ್ಯಾತರಾದ ಸರ್ ಬೆನಗಲ್ ರಾಮ ರಾವ್ ಅವರು ಜುಲೈ ೧, ೧೮೮೯ರಲ್ಲಿ ಜನಿಸಿದರು. ಮೂಲತಃ ಚಿತ್ರಾಪುರ ಸಾರಸ್ವತ ಕುಟುಂಬಕ್ಕೆ ಸೇರಿದ್ದ ಬೆನಗಲ್ ರಾಮ ರಾವ್ ಅವರ ಮಾತೃ ಭಾಷೆ ಕೊಂಕಣಿ. ಅವರ ತಂದೆ ಬಿ. ರಾಘವೇಂದ್ರರಾವ್ ಅವರು ಮದರಾಸು ಪ್ರೆಸಿಡೆನ್ಸಿಯಲ್ಲಿ ಸರ್ಕಾರಿ ವೈದ್ಯರು. ತಾಯಿ ರಾಧಾಬಾಯಿ.

ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜು ಮತ್ತು ಕೆಂಬ್ರಿಡ್ಜ್ನಲ್ಲಿ ಉನ್ನತ ವ್ಯಾಸಂಗ ನಡೆಸಿದ ಬೆನಗಲ್ ರಾಮ ರಾವ್ ಅವರು ಇಂಡಿಯನ್ ಸಿವಿಲ್ ಸರ್ವಿಸ್ ಸದಸ್ಯರಾದರು. ರಿಸರ್ವ್ ಬ್ಯಾಂಕ್ ಗವರ್ನರ್ ಹುದ್ದೆಗೆ ಬರುವ ಮೊದಲು ವಿವಿಧ ಸ್ಥಾನಗಳನ್ನು ಅಲಂಕರಿಸಿದ್ದ ರಾಮ ರಾವ್ ಅವರು ಸ್ವಾತಂತ್ರ್ಯಾನಂತರದಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನ ಮತ್ತು ಜಪಾನ್ ದೇಶಗಳ ರಾಯಭಾರಿಗಳಾಗಿ ಸಹಾ ಕೆಲಸಮಾಡಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಲಂಡನ್, ಆಫ್ರಿಕಾ ಪ್ರದೇಶಗಳಲ್ಲಿ ಉನ್ನತ ಕಮಿಷನರ್ ಹುದ್ದೆಗಳಲ್ಲಿ ಸಹಾ ಕೆಲಸ ಮಾಡಿದ್ದರು.

ಪ್ರಸಿದ್ಧ ಕುಟುಂಬ

[ಬದಲಾಯಿಸಿ]

ರಾಮ ರಾವ್ ಅವರ ಸಹೋದರರೂ ಪ್ರಖ್ಯಾತರೇ. ಬೆನಗಲ್ ಸಂಜೀವರಾವ್ ಖ್ಯಾತ ಶಿಕ್ಷಣ ತಜ್ಞರು. ಬೆನಗಲ್ ನರಸಿಂಹ ರಾವ್ (ಬಿ.ಎನ್.ರಾವ್) ಅಂತರರಾಷ್ಟ್ರೀಯ ನ್ಯಾಯಾಲಯದವರೆಗೆ ನ್ಯಾಯಾಧೀಶ ಹುದ್ಧೆಗಳನ್ನು ಅಲಂಕರಿಸಿದವರು. ಬೆನಗಲ್ ಶಿವರಾಮ್ ಖ್ಯಾತ ಪತ್ರಿಕೋದ್ಯಮಿಗಳು, ಗ್ರಂಥಕರ್ತರು, ಇವರು, ಕನ್ನಡಿಗರ ಹೆಮ್ಮೆಯ ಪುತ್ರರಾದ ಬೆನಗಲ್ ನರಸಿಂಗರಾಯರ ಬರಹಗಳನ್ನೆಲ್ಲಾ INDIA’S CONSTITUTION IN THE MAKING ಎಂಬ ಹೆಸರಿನಡಿ ಸಂಪಾದಿಸಿ ಪ್ರಕಟಿಸಿದ್ದಾರೆ.

ರಿಸರ್ವ್ ಬ್ಯಾಂಕಿನ ಗವರ್ನರ್

[ಬದಲಾಯಿಸಿ]

ಬೆನಗಲ್ ರಾಮ ರಾವ್ ಅವರು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ೧೯೪೯ರಿಂದ ೧೯೫೭ರ ಅವಧಿಯವರೆಗೆ ಅತೀ ಹೆಚ್ಚು ಕಾಲ ಆಡಳಿತದಲ್ಲಿದ್ದವರು. ಅವರು ತಮ್ಮ ಎರಡನೆಯ ಅವಧಿಯ ಹಲವು ಕಾಲ ಬಾಕಿ ಇರುವಾಗಲೇ ಅಂದಿನ ಹಣಕಾಸು ಮಂತ್ರಿಗಳೊಡನೆ ಉಂಟಾದ ಭಿನ್ನಾಭಿಪ್ರಾಯದಿಂದ ಅಧಿಕಾರದಿಂದ ಹೊರಬಂದರು.

ವಿದಾಯ

[ಬದಲಾಯಿಸಿ]

ಬೆನಗಲ್ ರಾಮ ರಾವ್ ಅವರು ಡಿಸೆಂಬರ್ 13, 1969ರಲ್ಲಿ ನಿಧನರಾದರು. ಆಡಳಿತದಲ್ಲಿ ಅಪರಿಮಿತ ಹೆಸರು ಮಾಡಿದ್ದ ಅವರಿಗೆ 1936ರಲ್ಲಿ ಬ್ರಿಟಿಶ್ ಸರ್ಕಾರದ ನೈಟ್ ಹುಡ್ ಗೌರವ ಸಹಾ ಪ್ರಾಪ್ತವಾಗಿತ್ತು.