ಆರ್.ಪಿ.ಗೋಯೆಂಕಾ
(೧, ಮಾರ್ಚ್, ೧೯೩೦ - ೧೪, ಎಪ್ರಿಲ್, ೨೦೧೩)
ಪಶ್ಚಿಮ ಬಂಗಾಳದ ಯಶಸ್ವಿ ಭಾರತೀಯ ಬಹು-ಕೈಗಾರಿಕಾಸಂಸ್ಥೆಗಳಲ್ಲೊಂದಾದ,'ಆರ್.ಪಿ.ಜ಼ಿ.ಸಮೂಹ ಸಂಸ್ಥೆಗಳ ಸ್ಥಾಪಕ ಚೇರ್ಮನ್ ಎಮಿರಿಟಸ್,' ಕೈಗಾರಿಕೋದ್ಯಮಿ, ಆರ್.ಪಿ.ಗೋಯೆಂಕಾ', 'ಕೇಶವ್ ಪ್ರಸಾದ್ ಗೋಯೆಂಕಾ'ರವರ ಹಿರಿಯ ಮಗನಾಗಿ 'ಸನ್.೧೯೩೦ ರಲ್ಲಿಜನಿಸಿದರು.ಗೋಯೆಂಕಾರವರ ವಿಶೇಷತೆಯೆಂದರೆ, ಉದ್ಯಮಗಳನ್ನು ಖರೀದಿಸುವುದು. ಈ ನೈಪುಣ್ಯತೆಯಿಂದಾಗಿ ಅವರನ್ನು ಜನ, 'ಉದ್ಯಮ ಖರೀದಿ ನಿಪುಣ' ಎಂದು ಕರೆದರು. 'ಆರ್.ಪಿ.ಗೋಯೆಂಕಾ', ಕೊಲ್ಕೊತ್ತಾ ನಗರದ ಅತ್ಯಂತ ಹಳೆಯ ಸುಮಾರು ೩೦೦ ವರ್ಷ ಹಿಂದಿನ ವ್ಯಾಪಾರಿ ಕುಟುಂಬಕ್ಕೆ ಸೇರಿದವರಾಗಿದ್ದರು.ಅವರ ಅಜ್ಜ,'ಸರ್.ಬದರಿ ಪ್ರಸಾದ್ ಗೋಯೆಂಕಾ', ಬ್ರಿಟಿಷರ ಕಾಲದ 'ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯ' ಎಂದು ಪ್ರಸಿದ್ಧಿಯಾಗಿದ್ದ,(ಇಂದಿನ'ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ'ದ) 'ಮೊಟ್ಟಮೊದಲ ಛೇರ್ಮನ್' ಆಗಿ ನಿಯುಕ್ತರಾಗಿದ್ದರು. ಅವರ ಇಬ್ಬರು ತಮ್ಮಂದಿರು, 'ಜಗದೀಶ್ ಪ್ರಸಾದ್' ಮತ್ತು 'ಗೌರಿ ಪ್ರಸಾದ್ ಗೋಯೆಂಕಾ','ಕೇಶವ್ ಪ್ರಸಾದ್ ಗೋಯೆಂಕಾ' ರವರ ಮರಣಾನಂತರ ಅವರ ಕಂಪೆನಿಗಳ 'ಕಾರೋಭಾರ್' ಗಳನ್ನು ತಮ್ಮ ಮೂರು ಮಕ್ಕಳಿಗೆ ಒಪ್ಪಿಸಲಾಯಿತು.'ಆರ್.ಪಿ.ಗೋಯೆಂಕಾ 'ಎಂದು ಗೆಳೆಯರಿಗೆ ಪರಿಚಿತರಾಗಿದ್ದ 'ರಾಮ್ ಪ್ರಸಾದ್ ಗೋಯೆಂಕಾ',ಸನ್.೧೯೭೯ ರಲ್ಲಿ 'ಆರ್.ಪಿ.ಜ಼ಿ.ಎಂಟರ್ ಪ್ರೈಸೆಸ್' ಸ್ಥಾಪಿಸಿದರು.
ವಿದ್ಯಾಭ್ಯಾಸ ಮತ್ತು ವೃತ್ತಿಜೀವನ
[ಬದಲಾಯಿಸಿ]ಕೊಲ್ಕತ್ತಾದ ಅತಿ ಪುರಾತನ 'ಪ್ರೆಸಿಡೆನ್ಸಿ ಕಾಲೇಜ್' ನಲ್ಲಿ 'ಇತಿಹಾಸ ವಿಷಯ' ತೆಗೆದುಕೊಂಡು ಅದರಲ್ಲಿ ಪದವಿಗಳಿಸಿದ ಬಳಿಕ, ಅಮೇರಿಕಾದ 'ಹಾರ್ವರ್ಡ್ ವಿ.ವಿ' ಯಲ್ಲಿ 'ಮ್ಯಾನೆಜ್ಮೆಂಟ್ ಪದವಿ' ಗಳಿಸಿದರು. 'ಫಿಕ್ಕಿಯ ಅಧ್ಯಕ್ಷ'ರಾಗಿ ಸೇವೆ ಸಲ್ಲಿಸಿದ ಆರ್.ಪಿ.ಗೋಯೆಂಕಾರವರು, ಹಿಂದಿನ ಮುಖ್ಯ ಮಂತ್ರಿ, 'ಜ್ಯೋತಿ ಬಸು'ರವರ ನಿಕಟವರ್ತಿಯಾಗಿದ್ದರು. ಸನ್. ೧೯೭೯ ರಲ್ಲಿ 'ಆರ್.ಪಿ.ಜಿ.ಎಂಟರ್ ಪ್ರೈಸೆಸ್' ಸ್ಥಾಪಿಸಿದರು. ಇದರಲ್ಲಿ ಫಿಲಿಪ್ಸ್ ಕಾರ್ಬನ್ ಬ್ಲ್ಯಾಕ್, ಏಶಿಯನ್ ಕೇಬಲ್ಸ್ 'ಅಗರ್ ಪಾರಾ ಜ್ಯೂಟ್ ಮಿಲ್ಸ್', ಮತ್ತು 'ಮರ್ಫಿ-ಇಂಡಿಯಾ' ಸೇರಿವೆ. ಈ ಉದ್ಯಮಗಳ ವ್ಯವಹಾರ ಧನ, ಸುಮಾರು ೧೦೦ ಕೋಟಿಗೂ ಹೆಚ್ಚಿನದಾಗಿದೆ. ಇದರ ಜೊತೆ ಇರುವ ಮತ್ತಿತರ ಕಂಪೆನಿಗಳು, 'ವಿದ್ಯುತ್ ಉಪಕರಣಗಳ ಸಿ.ಇ.ಎಸ್.ಸಿ', 'ಸಂಗೀತ ನಿರ್ಮಾಣ ಸಂಸ್ಥೆ-ಸಾರೆಗಮ', ಮತ್ತು 'ಸಿಯೆಟ್ ಟೈರ್ಸ್' ಮೊದಲಾದವುಗಳು.
೧೯೭೦-೮೦ ರಲ್ಲಿ
[ಬದಲಾಯಿಸಿ]ಪಶ್ಚಿಮ ಬಂಗಾಳದ ಉದ್ಯಮಿಯಾದ ಗೋಯೆಂಕಾ, ೧೯೭೦-೮೦ ರ ದಶಕಗಳಲ್ಲಿ ಅಲ್ಲಿನ ಕೈಗಾರಿಕಾ ಘಟಕಗಳು ಉತ್ತಮವಾಗಿ ಕೆಲಸ ಮಾಡದಿದ್ದರೂ ಅಲ್ಲಿಂದ ಕದಲಲಿಲ್ಲ. ಆ ಸಮಯದಲ್ಲಿ ಅವರು ಮಾಡಿದ ಮತ್ತೊಂದು ಮಹತ್ ಕೆಲಸವೆಂದರೆ ಹಲವಾರು ಕೈಗಾರಿಕೆಗಳನ್ನು ಖರೀದಿ ಮಾಡುತ್ತಾ ಸಾಗಿದರು. ಟ್ರಾನ್ಸ್ ಮಿಶನ್, ಔಷಧಿ ತಯಾರಿಕೆ, ಮಾಹಿತಿ ತಂತ್ರಜ್ಞಾನ, ವಿದ್ಯುತ್ ಉತ್ಪಾದನೆ, ಮತ್ತು ಸಂಗೀತ ಕ್ಷೇತ್ರ ಸೇರಿದಂತೆ ಹಲವಾರು ವಲಯಗಳಲ್ಲಿ ಕೈಯಾಡಿದಿಸಿ ತಮ್ಮಛಾಪನ್ನು ಸೇರಿಸಿದರು. ರಾಜಕೀಯದಲ್ಲಿ ಹೆಚ್ಚು ಆಸಕ್ತಿಯಿತ್ತು. ಸನ್. ೨೦೦೦-೨೦೦೬ ವರೆಗೆ ರಾಜ್ಯಸಭಾ ಸದಸ್ಯರಾಗಿದ್ದರು. ಬಂಗಾಳದ ಒಬ್ಬ ನಿಪುಣ ಉದ್ಯಮಿಯೆಂದು ಅವರ ಶೋಕಸಂದೇಶದಲ್ಲಿ ಕೋಲ್ಕತ್ತಾದ ಜನತೆ, ಅವರನ್ನು ಸಂಬೋಧಿಸಿದೆ.
ನಿಧನ
[ಬದಲಾಯಿಸಿ]೮೩ ವರ್ಷದ ಕೈಗಾರಿಕೋದ್ಯಮಿ. 'ರಾಮ್ ಪ್ರಸಾದ್ ಗೋಯೆಂಕಾ', ಕೆಲಕಾಲ ಅನಾರೋಗ್ಯದಿಂದ ನರಳಿದರು. ಸನ್.೨೦೧೩ ರ, ಏಪ್ರಿಲ್, ೧೪ ರ,ರವಿವಾರ ಬೆಳಗಿನ ಜಾವದಲ್ಲಿ ಕೊಲ್ಕತ್ತಾದ ತಮ್ಮ ನಿವಾಸದಲ್ಲಿ ನಿಧನರಾದರು. ಆರ್.ಪಿ.ಗೋಯೆಂಕಾ, 'ಹರ್ಷವರ್ಧನ್', 'ಸಂಜೀವ್' ಎಂಬ ಇಬ್ಬರು ಗಂಡುಮಕ್ಕಳು, ಮತ್ತು 'ಪತ್ನಿ ಸುಶೀಲಾ'ರವರನ್ನು ಅಗಲಿ ತೆರಳಿದ್ದಾರೆ.