ಇಂದುಮತಿ ಸಾಲಿಮಠ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಂದುಮತಿ ಸಾಲಿಮಠರವರು ವಿಜಯಪುರ ಜಿಲ್ಲೆಯ ಸಿಂದಗಿಯವರಾಗಿದ್ದು ಕನ್ನಡದ ಹಾಸ್ಯಗಾರರು, ವಚನ ವಾಚಕಿ ಹಾಗೂ ಖ್ಯಾತ ವಾಗ್ಮಿಗಳು. ೨೦೦೦ಕ್ಕೂ ಹೆಚ್ಚಿನ ಕಾರ್ಯಕ್ರಮಗಳನ್ನು ಪ್ರಪಂಚದಾದ್ಯಂತ ನೀಡಿದ್ದಾರೆ.

ಜನನ ಮತ್ತು ವಿದ್ಯಾಭ್ಯಾಸ[ಬದಲಾಯಿಸಿ]

೧, ಜೂನ್ ೧೯೬೦ರಂದು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಪ್ರಾಚಾರ್ಯರಾದ ಶಿವಶಂಕರ ಜಿ. ಸಾಲಿಮಠ ಮತ್ತು ಪಾರ್ವತಿ ಸಾಲಿಮಠ ದಂಪತಿಯ ಎಂಟು ಮಕ್ಕಳ ತುಂಬು ಕುಟುಂಬದಲ್ಲಿ ಜನಿಸಿದರು. ಸಿಂದಗಿಯಲ್ಲಿಯೇ ಪ್ರಾಥಮಿಕ ವಿದ್ಯಾಭ್ಯಾಸದಿಂದ ಬಿ. ಎ. ಪದವಿ(ಜಿ. ಪಿ. ಪೋರವಾಲ್ ಕಾಲೇಜು)ಯವರೆಗೆ ಪ್ಯಾಸಂಗ ಮಾಡಿದರು. ನಂತರ, ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಎಂ. ಎ. (ಸಮಾಜಶಾಸ್ತ್ರ) ಪದವಿ ಪಡೆದರು.

ಪದವಿ ಪೂರ್ವದ ಪ್ರಥಮ ವರ್ಷದ (೧೭ ವರ್ಷ) ಓದು ನಡೆಯುತ್ತಿದ್ದಾಗಲೇ ವಿವಾಹವಾಯಿತು. ಇವರಿಗೆ ಇಬ್ಬರು ಪುತ್ರಿಯರು (ಕವಿತಾ ಮತ್ತು ಶ್ವೇತಾ) ಮತ್ತೊಬ್ಬ ಪುತ್ರ.

ವೃತ್ತಿರಂಗ[ಬದಲಾಯಿಸಿ]

ಉಪನ್ಯಾಸ[ಬದಲಾಯಿಸಿ]

ಬಿ. ಎಲ್. ಡಿ. ಇ. ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ೧೯೮೭ರಿಂದ ೨೦೦೧ ರವರೆಗೆ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದರು.

ಪ್ರವಚನ[ಬದಲಾಯಿಸಿ]

ವಚನ ಸಾಹಿತ್ಯದ ಕುರಿತು ಬೀದರ್, ಭಾಲ್ಕಿ, ಜೇವರ್ಗಿ, ಬೆಳಗಾವಿ, ಬಾಗಲಕೋಟೆ, ಇಲಕಲ್, ಮುಧೋಳ್, ಲಿಂಗಸೂರು, ಕಿತ್ತೂರು, ಅಥಣಿ, ಮೋರಟಗಿ, ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ ನಾಡಿನ ಮೂಲೆ ಮೂಲೆಗಳಲ್ಲಿ ಪ್ರವಚನ ನೀಡಿದ್ದಾರೆ

ಹಾಸ್ಯ ಮತ್ತು ವಿಚಾರ ಮಂಥನಗಳು[ಬದಲಾಯಿಸಿ]

  • ನವರಸಪುರ ಉತ್ಸವ, ವಿಜಯಪುರ
  • ಧಾರವಾಡ ಉತ್ಸವ
  • ಲಕ್ಕುಂಡಿ ಉತ್ಸವ
  • ಆಳ್ವಾಸ್ ನುಡಿಸಿರಿ, ಮೂಡುಬಿದಿರೆ
  • ಪ್ರೊ. ಎಂ. ಕೃಷ್ಣೇಗೌಡರ ತಂಡ
  • ಬಿ. ಪ್ರಾಣೇಶರ ತಂಡ
  • ಪೂಣೆ
  • ಸೂರತ್
  • ಔರಂಗಾಬಾದ್
  • ದುಬೈ
  • ಬೆಹ್ರೇನ್
  • ಅಬುದಾಬಿ

ದೂರದರ್ಶನ ಮತ್ತು ಆಕಾಶವಾಣಿ ಕಾರ್ಯಕ್ರಮಗಳು[ಬದಲಾಯಿಸಿ]

  • ಹರಟೆ, ಉದಯ ವಾಹಿನಿ
  • ನಗೆ ಸಖತ್ ಸವಾಲ್, ಉದಯ ವಾಹಿನಿ
  • ಜಾಣರ ಜಗಲಿ, ಕಸ್ತೂರಿ ವಾಹಿನಿ
  • ಸಖತ್ ಕಾಮಿಡಿ, ಕಸ್ತೂರಿ ವಾಹಿನಿ
  • ಮುತ್ತಿನಂಥ ಮಾತು, ಸುವರ್ಣ ವಾಹಿನಿ
  • ಕಾಮಿಡಿ ಕಿಲಾಡಿಗಳು, ‍‍‌ಝೀ ಕನ್ನಡ ವಾಹಿನಿ
  • ಆಕಾಶವಾಣಿ ಧಾರವಾಡ ಕೇಂದ್ರ

ಪ್ರಶಸ್ತಿಗಳು[ಬದಲಾಯಿಸಿ]

  • ಕಲಾಜ್ಯೋತಿ, ಮಹಾಂತ ಜ್ಯೋತಿ ಪ್ರತಿಷ್ಠಾನ, ಗುಲ್ಬರ್ಗ
  • ಡಾ. ರಾಜ್‌ಕುಮಾರ್ ಸದ್ಭಾವನಾ ಪ್ರಶಸ್ತಿ, ಉತ್ತರ ಕರ್ನಾಟಕ ನಾಗರೀಕರ ವೇದಿಕೆ
  • ಪ್ರವಚನ ಹಾಸ್ಯ ಪ್ರವೀಣೆ, ಹಾವನೂರ ಪ್ರತಿಷ್ಠಾನ, ಹಾವೇರಿ
  • ಅನುಭವ ಮಂಟಪ, ಬಸವ ಕಲ್ಯಾಣ