ಚಿಕ್ಕಲಕಿ
ಚಿಕ್ಕಲಕಿ
ಚಿಕ್ಕಲಕಿ | |
---|---|
village | |
Population (೨೦೧೨) | |
• Total | ೨೦೦೦ |
ಚಿಕ್ಕಲಕಿ ಒಂದು ಗ್ರಾಮ ಹಾಗೂ ಪುಣ್ಯಕ್ಷೇತ್ರ.ಇದು ಕರ್ನಾಟಕ ರಾಜ್ಯದ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನಲ್ಲಿದೆ. ಚಿಕ್ಕಲಕಿ ಗ್ರಾಮವು ಜಮಖಂಡಿ - ಬಿಜಾಪೂರ ರಾಜ್ಯ ಹೆದ್ದಾರಿಯಲ್ಲಿ ಇದೆ. ಜಿಲ್ಲಾ ಕೇಂದ್ರ ಬಾಗಲಕೋಟ ಯಿಂದ ಸುಮಾರು ೧೦೦ ಕಿ. ಮಿ. ಇದ್ದು ಸಾವಳಗಿ ಹೋಬಳಿ ವ್ಯಾಪ್ತಿಯಲ್ಲಿ ಬರುತ್ತದೆ. ಗ್ರಾಮದಲ್ಲಿ ಸರಕಾರಿ ಉಪ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯತ ಮತ್ತು ಅಂಚೆ ಕಚೇರಿ ಇದೆ.
ದೇವಾಲಯಗಳು
[ಬದಲಾಯಿಸಿ]ಶ್ರೀ ಪಾಂಡುರಂಗ ದೇವಾಲಯ, ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಹಾಗೂ ಶ್ರೀ ಹಣಮಂತ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಪ್ರಸಿದ್ದ ಮಾಳಿಂಗೇಶ್ವರ ದೇವಾಲಯ ಇದೆ. ಮತ್ತು ಅಮೋಘಸಿದ್ದೇಶ್ವರ ದೇವಾಲಯಗಳಿವೆ.
ಮಸೀದಿಗಳು
[ಬದಲಾಯಿಸಿ]ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.
ಸಂಘಟನೆಗಳು
[ಬದಲಾಯಿಸಿ]ಛತ್ರಪತಿ ಶಿವಾಜಿ ಯುವಕ ಮಂಡಳಿ, ಶ್ರೀ ಬಸವೇಶ್ವರ ಯುವಕ ಮಂಡಳಿ ಹಾಗೂ ಕನಕ ಸೇನೆ ಇದೆ.
ನೀರಾವರಿ
[ಬದಲಾಯಿಸಿ]ಗ್ರಾಮದ ಪ್ರತಿಶತ ೬೫ ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
ಹಬ್ಬಗಳು
[ಬದಲಾಯಿಸಿ]ಪ್ರತಿವರ್ಷ ಶ್ರೀ ಹನುಮಾನ ಉತ್ಸವ, ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
ಶಿಕ್ಷಣ
[ಬದಲಾಯಿಸಿ]ಗ್ರಾಮದಲ್ಲಿರುವ ಶಿಕ್ಷಣ ಸಂಸ್ಥೆಗಳು
- ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
- ನೇತಾಜಿ ಸುಭಾಸ್ ಚಂದ್ರ ಬೋಸ್ ಕಿರಿಯ ಪ್ರಾಥಮಿಕ ಶಾಲೆ
- ಸರಕಾರಿ ಪ್ರೌಢಶಾಲೆ
- Pages with non-numeric formatnum arguments
- Orphaned articles from ಡಿಸೆಂಬರ್ ೨೦೧೫
- All orphaned articles
- Short description with empty Wikidata description
- Pages using infobox settlement with unknown parameters
- Pages using infobox settlement with missing country
- Pages using infobox settlement with no map
- Pages using infobox settlement with no coordinates
- ಬಾಗಲಕೋಟ ಜಿಲ್ಲೆ
- ಜಮಖಂಡಿ ತಾಲ್ಲೂಕು