ದ್ವೀಪವ ಬಯಸಿ
ಗೋಚರ
ಲೇಖಕರು | ಎಂ.ಆರ್.ದತ್ತಾತ್ರಿ |
---|---|
ದೇಶ | ಭಾರತ |
ಭಾಷೆ | ಕನ್ನಡ |
ಪ್ರಕಾರ | ಕಾದಂಬರಿ |
ಪ್ರಕಾಶಕರು | ಛಂದ ಪುಸ್ತಕ |
ದ್ವೀಪವ ಬಯಸಿ' ಕಾದಂಬರಿಯನ್ನು ಚಿಕ್ಕಮಗಳೂರಿನ ಲೇಖಕ ಎಂ.ಆರ್.ದತ್ತಾತ್ರಿಯವರು ಬರೆದಿದ್ದಾರೆ. ಚಿಕ್ಕಮಗಳೂರು ಸೀಮೆಯ ಗೊಲ್ಲರಹಳ್ಳಿಯಲ್ಲಿ ಹುಟ್ಟಿ ಬೆಳೆದು ದೊಡ್ಡವನಾಗಿ ಬೆಂಗಳೂರು, ನಂತರ ಅಮೆರಿಕ ಸೇರಿ ಬದುಕು ಕಂಡುಕೊಳ್ಳಲು ಹೆಣಗುವ ’ಜೋಯಿಸರ ಹುಡುಗ’ ಶ್ರೀಕಾಂತ್ ರಾವ್ ಕತೆಯನ್ನು ಈ ಕಾದಂಬರಿಯಲ್ಲಿ ಹೆಣೆಯಲಾಗಿದೆ. ಸಾಫ್ಟ್ವೇರ್ ಉದ್ಯೋಗಿಯೊಬ್ಬನ ಬದುಕಿನ ಹೆಣಗಾಟದ ಚಿತ್ರಣ ಇದರಲ್ಲಿ ಕಾಣಸಿಗುತ್ತದೆ. ದಿ.ಸೂರ್ಯ ನಾರಾಯಣ ಚಡಗ ಸ್ಮಾರಕ ಪ್ರಶಸ್ತಿ ಹಾಗೂ ಅಮ್ಮ ಪ್ರಶಸ್ತಿ ಗಳನ್ನು ಈ ಕಾದಂಬರಿ ತನ್ನ ಮುಡಿಲಿಗೇರಿಸಿಕೊಂಡಿದೆ.
ಈ ಪುಸ್ತಕಕ್ಕೆ ಬೆನ್ನುಡಿಯನ್ನು ಎಚ್.ಎಸ್.ವೆಂಕಟೇಶಮೂರ್ತಿ ಬರೆದಿದ್ದಾರೆ.
ಪ್ರಶಸ್ತಿಗಳು
[ಬದಲಾಯಿಸಿ]- ಕೋಟೇಶ್ವರ ಎನ್.ಆರ್.ಎ.ಎಂ.ಎಚ್. ಪ್ರಕಾಶನ ಪ್ರತಿ ವರ್ಷ ನೀಡುವ ದಿ.ಸೂರ್ಯ ನಾರಾಯಣ ಚಡಗ ಸ್ಮಾರಕ ಪ್ರಶಸ್ತಿ- 2012
- ಅಮ್ಮ ಪ್ರಶಸ್ತಿ