ಶ್ರೀ ಮೈಲಾರ್ ಮಲ್ಲಣ್ಣ
== ಶ್ರೀ ಮೈಲಾರ್ ಮಲ್ಲಣ್ಣ ದೇವಸ್ಥಾನ : ==
ಬೀದರ್-ಉದ್ಗಿರ್ ರಸ್ತೆಯಲ್ಲಿ ಸುಮಾರು ೧೫ ಕಿ ಮಿ ಬೀದರ್ ನಿಂದ ಶ್ರೀ ಕ್ಷೇತ್ರ ಮೈಲಾರ್ ಅಥವಾ ಖಾನಪುರ್ ಎಂಬ ಚಿಕ್ಕ ಹಳ್ಳಿಯಲ್ಲಿ ಶ್ರೀ ಮೈಲಾರ್ ಮಲ್ಲಣ್ಣ ದೇವಸ್ಥಾನ ಇದೆ.
ನಂಬಿಕೆ ಪ್ರಕಾರ ಮಲ್ಲಾಸುರ ಮತ್ತು ಮನ್ಕಾಸುರ್ ಎಂಬಯಿಬ್ಬ ದೈತ್ಯರು ತಮ್ಮ ಕಟ್ಹೊರ ತಪಸ್ಯದಿಂದ ಬ್ರಹ್ಮ ನನ್ನು ಮೆಚ್ಹಿಸಿ ಅವರಿಂದ ವರವನ್ನು ಪಡೆದುಕೊಳುತಾರೆ. ಬ್ರಹ್ಮ ಕೊಟ್ಟ ಶಕ್ತಿ ಇಂದ ಅವರು ಮೈಲಾರ್ ಅಕ್ಕ ಪಕ್ಕ ಕ್ಷೇತ್ರದ ಋಷಿ-ಮುನಿ, ತಪಸ್ವಿ ಮತ್ತು ಸಾಮಾನ್ಯ ಜನರಿಗೆ ಪದೇ ಪದೇ ಹಿಂಶಿಸುತಿದ್ದರು. ಈ ಹಿಂಸೆ ಮತ್ತು ಕಾಟ ತಾಳಲಾರದೆ ಋಷಿ-ಮುನಿ ಮತ್ತು ತಪಸ್ವಿಗಳು ಬ್ರಹ್ಮ ಮತ್ತು ವಿಷ್ಣುನವರನ್ನು ತಮ್ಮನ್ನು ರಕ್ಷಿಸಲು ಅಂಗಲಾಚುತಾರೆ, ಆದರೇ ಬ್ರಹ್ಮ ಮತ್ತು ವಿಷ್ಣು ತಮ್ಮ ಅಸಹಾಯಕತೆ ಹೇಳಿ ಶಿವನ ಬಳಿ ಖಲಿಸುತ್ತಾರೆ ಸಹಾಯಕ್ಕಾಗಿ. ಶಿವ ನವರು ಋಷಿ-ಮುನಿ ಮತ್ತು ತಪಸ್ವಿಗಳು ಕಷ್ಟ ಕೇಳಿ ತುಂಬಾ ಕೋಪಿತನಾಗಿ ಮಲ್ಲಾಸುರ ಮತ್ತು ಮನ್ಕಾಸುರ್ ಸಂಹಾರಕ್ಕಾಗಿ ಮೈಲಾರ್ ನಲ್ಲಿ ತಮ್ಮ ಉಗ್ರ ರೂಪ ಅವತಾರ ತಾಳಿ, ಯುಧದಲ್ಲಿ ಮನ್ಕಾಸುರನ ವಧ ಮಾಡುತ್ತಾನೆ, ಇದನ್ನು ಕಂಡು ಮಲ್ಲಾಸುರ ಅವರನ್ನು ಕ್ಷೆಮೆ ಕೇಳುತ್ತಾನೆ, ಶಿವನವರು ಅವನ್ನು ಕ್ಷಮಿಸಿ ಅವನ ಕೋರಿಕೆಯಂತೆ ಮೈಲಾರ್ ಎಂಬ ಹಳ್ಳಿಯಲ್ಲಿ ಮಲ್ಲಣ್ಣನ ಹೆಸರಿನಲ್ಲಿ ಜನ ಉದ್ದಾರಕ್ಕಾಗಿ ಸ್ತಾಪಿತಗೊಂಡ.
ಈ ದೇವಾಲಯದ ಮುಕ್ಯ ಪೂಜಾರಿಗಳು ಕುರುಬ ಜನಾಂಗದವರು. ಕುರುಬ ಮತ್ತು ಇತರೆ ತುಮ್ಬ ಜನಗದವರ ಮತ್ತೆ ದೇವರಾಗಿ ಮಲ್ಲಣ್ಣ ಆಶಿರ್ವದಿಸುತಿದ್ದಾರೆ. ಈ ದೇವಸ್ಥಾನ ಇಡಿ ಉತ್ತರ ಕರ್ನಾಟಕದಲ್ಲಿ ಪ್ರಸಿದ್ದ ದೇವಸ್ಥಾನ, ಪ್ರತಿ ವರ್ಷ ಲಕ್ಷ ಲಕ್ಷ ಭಕ್ತಾದಿಗಳು ಕರ್ನಾಟಕ, ಮಹಾರಾಷ್ಟ್ರ ಮತ್ತು ಅಂದ್ರ ಪ್ರದೇಶ ದಿಂದ ಬಂದು ಮಲ್ಲಣ್ಣ (ಶಿವನ ಉಗ್ರ ರೂಪ) ದರ್ಶನ ಪಡೆಯುತ್ತಾರೆ.
ಪ್ರತಿ ರವಿವಾರ ಮೈಲಾರ್ ಮಲ್ಲಣನ ವಾರ ಮತ್ತು ಅದೇ ದಿವಸ ದೇವಸ್ತಾನ ಹತ್ತಿರ ಕುರಿ, ಮೇಕೆ, ಹಸು, ಎತ್ತು ಮತ್ತು ಇತರೆಪ್ರಾಣಿ ಗಳ ವ್ಯಾಪಾರ ಜರುಗುತದೆ.