ದೊಡ್ಡಬಳ್ಳಾಪುರ ತಾಲ್ಲೂಕಿನ ನದಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಅರ್ಕಾವತಿ ಹಾಗೂ ಸುಬ್ರಹ್ಮಣ್ಯ (ಬಂಡಿಹಳ್ಳ)ನದಿಗಳು ಹರಿಯುತ್ತವೆ.

  • ಅರ್ಕಾವತಿ ನದಿಯು ನಂದಿ ದುರ್ಗ ತಪ್ಪಲಿಸಲ್ಲಿ ಹುಟ್ಟಿ ದೊಡ್ಡಬಳ್ಳಾಪುರ ನಗರದಲ್ಲಿ ಹರಿದು ಮುಂದೆ ಸಾಗುತ್ತವೆ.
  • ಸುಬ್ರಹ್ಮಣ್ಯ(ಬಂಡಿಹಳ್ಳ) ನದಿಯು ಘಾಟಿ ಸುಬ್ರಹ್ಮಣ್ಯ ಬೆಟ್ಟ ಪ್ರದೇಶದ ತಪ್ಪಲಿನಲ್ಲಿ ಹುಟ್ಟಿ ಹರಿಯುತ್ತದೆ.

ಆದರೆ ಈ ಎರಡು ನದಿಗಳು ಈಗ ಹರಿಯುತ್ತಿಲ್ಲ. ಕಾರಣ ಅರ್ಕಾವತಿ ನದಿ ಪ್ರದೇಶವೆಲ್ಲ ನೀಲಗಿರಿ ಸಸ್ಯದ ಹಾವಳಿಯಿಂದ ಅಂತರ್ಜಲದ ಮಟ್ಟ ಕುಸಿದಿದೆ. ಸುಬ್ರಹ್ಮಣ್ಯ (ಬಂಡಿಹಳ್ಳ)ನದಿಗೆ ಘಾಟಿ ಸುಬ್ರಹ್ಮಣ್ಯದ ಬಳಿ ವಿಶ್ವೇಶ್ವರಯ್ಯ ಪಿಕಪ್ ಡ್ಯಾಂ ಹಾಗೂ ಗುಂಜೂರು ಬಳಿ ೫೦೦ ಹೇಕ್ಟೆರ್ ಪ್ರದೇಶದಲ್ಲಿ ಕೆರೆಯನ್ನು ನಿರ್ಮಿಸಿರುವ ಕಾರಣ ನದಿ ಜಾಡು ನಶಿಸಿಹೊಗಿದೆ