ವಿನಯ ಕುಮಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
{{{playername}}}
ಚಿತ್ರ:Viinaykumar.jpg
ಭಾರತ
ವೈಯಕ್ತಿಕ ಮಾಹಿತಿ
ಪೂರ್ಣಹೆಸರು Ranganath Vinay Kumar
ಹುಟ್ಟು 2 12 1984
Davangere, Karnataka, India
ಬ್ಯಾಟಿಂಗ್ ಶೈಲಿ Right-handed
ಬೌಲಿಂಗ್ ಶೈಲಿ Right-arm medium
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ
ODI ಪಾದಾರ್ಪಣೆ (cap 183) 28 May 2010: v Zimbabwe
ಕೊನೆಯ ODI ಪಂದ್ಯ 20 October 2011: v England
ಪ್ರಾದೇಶಿಕ ತಂಡದ ಮಾಹಿತಿ
ವರ್ಷಗಳು ತಂಡ
2007/08–2010/11 Royal Challengers Bangalore
2011– Kochi Tuskers Kerala
ವೃತ್ತಿಜೀವನದ ಅಂಕಿಅಂಶಗಳು
ODIT20IFCLA
ಪಂದ್ಯಗಳು 15 3 60 46
ಒಟ್ಟು ರನ್ನುಗಳು 24 1,004 468
ಬ್ಯಾಟಿಂಗ್ ಸರಾಸರಿ 8.00 15.68 23.40
೧೦೦/೫೦ –/– –/– –/4 –/2
ಅತೀ ಹೆಚ್ಚು ರನ್ನುಗಳು 18 51* 82
ಬೌಲ್ ಮಾಡಿದ ಚೆಂಡುಗಳು 605 66 11,120 2,350
ವಿಕೆಟ್ಗಳು 16 5 221 75
ಬೌಲಿಂಗ್ ಸರಾಸರಿ 36.31 16.40 24.00 25.18
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ 11
೧೦ ವಿಕೆಟುಗಳು ಪಂದ್ಯದಲ್ಲಿ 2
ಶ್ರೇಷ್ಠ ಬೌಲಿಂಗ್ 4/30 3/24 8/32 4/24
ಕ್ಯಾಚುಗಳು /ಸ್ಟಂಪಿಂಗ್‍ಗಳು 1/– –/– 20/– 13/–

ದಿನಾಂಕ 12 december, 2011 ವರೆಗೆ.
ಮೂಲ: [೧]

ವಿನಯ್ ಕುಮಾರ್ ಭಾರತೀಯ ತಂಡದ ಪ್ರತಿಭಾನ್ವಿತ ಕ್ರಿಕೆಟ್ ಆಟಗಾರ. ರಣಜಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಾರೆ. ಐಪಿಎಲ್ ನಲ್ಲಿ( ೨೦೦೯-೨೦೧೧) ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಕ್ಕಾಗಿ ಆಡಿದ್ದಾರೆ. ( ಕಳೆದ ಬಾರಿ ಕೊಚ್ಚಿ ಟಸ್ಕರ್ಸ್ ತಂಡಕ್ಕಾಗಿ ಆಡಿದ್ದಾರೆ.) ಇವರು ಬಲಗೈ ಮಧ್ಯಮ ವೇಗದ ಬೌಲರ್ ಆಗಿದ್ದು, ಹಾರ್ಡ್ ಹಿಟ್ಟರ್ ಎಂದೂ ಕೂಡ ಪ್ರಸಿದ್ದಿ ಪಡೆದಿದ್ದಾರೆ. ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ ಬೆಳಗಾವಿ ಪ್ಯಾಂತರ್ಸ್ ತಂಡಕ್ಕಾಗಿ ಆಡಿದ್ದಾರೆ. ಇವರು ದಾವಣಗೆರೆ ಎ‌‌‌ಕ್ಸ್ ಪ್ರೆಸ್ಸ್ ಎಂದೂ ಪ್ರಸಿದ್ದಿಯಾಗಿದ್ದಾರೆ.

ಖಾಸಗಿ ಬದುಕು[ಬದಲಾಯಿಸಿ]

ಇವರು ದಾವಣಗೆರೆಯ ವೀರಪ್ಪ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಡ Viinaykumar ಶಿಕ್ಷಣವನ್ನು ಮುಗಿಸಿದ್ದಾರೆ. ಎಆರ್ ಜಿ ಕಾಲೇಜ್ ಆಫ್ ಆರ್ಟ್ಸ ಅಂಡ್ ಕಾಮರ್ಸ್, ದಾವಣಗೆರೆ ಯಿಂದ ಬಿ.ಕಾಮ್ ಪದವಿ Viinaykumarಪದೆದಿದ್ದಾರೆ. ದಾವಣಗೆರೆಯಲ್ಲಿ ಪ್ರಸಿದ್ದ ಕ್ರಿಕೆಟ್ ತರಬೇತುದಾರರಾದ ಪ್ರಕಾಶ್ ಪವಾರ್ ಅವರಲ್ಲಿ ತರಬೇತಿಯನ್ನು ಪಡೆದವರಾಗಿರುತ್ತಾರೆ.

ವೃತ್ತಿ ಜೀವನ[ಬದಲಾಯಿಸಿ]

  • ೨೦೦೪-೦೫ ರ ಸಾಲಿನ ರಣಜಿ ಪಂದ್ಯಾವಳಿಯಲ್ಲಿ ಪ್ರಥಮ ಬಾರಿ ಕರ್ನಾಟಕ ತಂಡಕ್ಕಾಗಿ ಆಯ್ಕೆಯಾದರು. ಪ್ರಥಮ ಋತುವಿನಲ್ಲೆ ೨೦ ಕ್ಕೂ ಹೆಚ್ಚು ವಿಕೆಟ್ ಕಬಳಿಸುವುದರ ಮೂಲಕ ಎಲ್ಲರ ಗಮನ ಸೆಳೆದರು. ಔಟ್ ಸ್ವಿಂಗರ್, ಲೆಗ್ ಕಟ್ಟರ್ ಹಾಗೂ ನಿಖರ ಎಸೆತಗಳು ಇವರ ಶಕ್ತಿ. ಇತ್ತೀಚಿಗೆ ಇನ್ ಸ್ವಿಂಗರ್ (ಬ್ಯಾಟುಗಾರನ ಕಡೆಗೆ - ಅಂದರೆ ಆಫ್ ಸೈಡಿನಿಂದ ಲಾಂಗ್ ಸೈಟಿಗೆ ತಿರುಗುವಂತೆ ಬೋಲ್ ಮಾಡಿದ ಚೆಂಡು) ಕೂಡ ರೂಡಿಸಿಕೊಂಡು, ೨೦೦೭-೦೮ ನೆಯ ಸಾಲಿನ ರಣಜಿ ಪಂದ್ಯಾವಳಿಗಳಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಕಬಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.
  • ಇದನ್ನು ಗಮನಿಸಿದ ರಾಯಲ್ ಚಾಲೆಂಜೆರ್ಸ್ ಬೆಂಗಳೂರು ತಂಡ, ಇವರಿಗೆ ತಮ್ಮ ತಂಡದಲ್ಲಿ ಸ್ಥಾನವನ್ನು ಕಲ್ಪಿಸಿ ಕೊಟ್ಟರು ಹಾಗು ಇವರು ಈ ಅವಕಾಶವನ್ನು ಪರಿಣಾಮಕಾರಿಯಾಗಿ ಉಪಯೊಗಿಸಿಕೊಂಡಿದ್ದಾರೆ.

ಸಾಧನೆಗಳು[ಬದಲಾಯಿಸಿ]

೨೦೦೭-೦೮ ನೆಯ ಸಾಲಿನ ರಣಜಿ ಪಂದ್ಯಾವಳಿಗಳಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್(೪೦) ಕಬಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. "ಡೊಮೆಸ್ಟಿಕ್ ಬೌಲರ್ ಆಫ್ ದ ಇಯರ್ " ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಟಿ೨೦ ವಿಶ್ವ ಕಪ್ ಪಂದ್ಯಾವಳಿಯಲ್ಲಿ ಭಾರತ ತಂಡಕ್ಕಾಗಿ ಆಯ್ಕೆ ಯಾದರು. ಜಿಂಬಾಬ್ವೆ ವಿರುದ್ದ ನಡೆದ ಪಂದ್ಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ಕಾಲಿರಿಸಿದ್ದಾರೆ.

ಐಪಿಎಲ್[ಬದಲಾಯಿಸಿ]

ಮೊದಲ ಮೂರು ಐಪಿಎಲ್ ಆವೃತ್ತಿಗಳಲ್ಲಿ ವಿನಯ್ ಕುಮಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡಿದರು. ೪ನೇ ಆವೃತ್ತಿಯಲ್ಲಿ ಕೊಚ್ಚಿ ಟಸ್ಕರ್ಸ್ ಪರವಾಗಿ ಆಡಿದರು. ೫ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮರಳಿದ್ದಾರೆ.