ಧುಮುಕುಕೊಡೆ ಜಿಗಿತ
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (September 2009) |
ಧುಮುಕುಕೊಡೆ ಜಿಗಿತ ವು ಆಕಾಶ ನೆಗೆತ ಎಂಬ ಹೆಸರಿನಿಂದಲೂ ಸುಪರಿಚಿತವಾಗಿದ್ದು, ಇದು ವಿಮಾನ ಅಥವಾ ವಾಯುನೌಕೆಯೊಂದರಿಂದ ನಿರ್ಗಮಿಸಿ ಧುಮುಕುಕೊಡೆಯೊಂದರ (ಪ್ಯಾರಾಷೂಟ್ ಒಂದರ) ನೆರವಿನಿಂದ ಭೂಮಿಗೆ ಹಿಂದಿರುಗುವ ಒಂದು ಸಾಹಸಕಾರ್ಯವಾಗಿದೆ. ಧುಮುಕುಕೊಡೆಯು ಇನ್ನೂ ಸಜ್ಜುಗೊಳಿಸಲ್ಪಡದಿರುವಿಕೆಯ ಅವಧಿಯಾದ, ಒಂದು ನಿಶ್ಚಿತ ಪ್ರಮಾಣದಲ್ಲಿನ ಸ್ವತಂತ್ರ ಪತನವನ್ನು ಹಾಗೂ ದೇಹವು ಕ್ರಮೇಣವಾಗಿ ಅಂತಿಮ ವೇಗಕ್ಕೆ ಹೆಚ್ಚಿಸಿಕೊಳ್ಳುವುದನ್ನು ಇದು ಒಳಗೊಂಡಿರಬಹುದು ಅಥವಾ ಒಳಗೊಳ್ಳದಿರಬಹುದು.
ಆಕಾಶ ನೆಗೆತದ ಇತಿಹಾಸವು ಆಂಡ್ರೆ-ಜಾಕ್ವೆಸ್ ಗಾರ್ನರಿನ್ ಎಂಬಾತನೊಂದಿಗೆ ಆರಂಭವಾಗುತ್ತದೆ. ಈತ ೧೭೯೭ರಲ್ಲಿ ಒಂದು ಬಿಸಿ-ಗಾಳಿಯ ಆಕಾಶಬುಟ್ಟಿಯಿಂದ ಧುಮುಕುಕೊಡೆ ಜಿಗಿತಗಳನ್ನು ಯಶಸ್ವಿಯಾಗಿ ಕೈಗೊಂಡಿದ್ದ. ಆಕಾಶಬುಟ್ಟಿಗಳ ಒಳಗಿರುವ ಮತ್ತು ಹಾರಾಟದಲ್ಲಿರುವ ವಿಮಾನದಲ್ಲಿರುವ ವಿಮಾನದ ಸಿಬ್ಬಂದಿವರ್ಗವನ್ನು ತುರ್ತುಸ್ಥಿತಿಗಳಿಂದ ಕಾಪಾಡುವ ಒಂದು ವಿಧಾನವಾಗಿ, ನಂತರದಲ್ಲಿ ಯುದ್ಧಭೂಮಿಗೆ ಯೋಧರನ್ನು ತಲುಪಿಸುವ ಒಂದು ವಿಧಾನವಾಗಿ ಧುಮುಕುಕೊಡೆ ಜಿಗಿತದ ತಂತ್ರಜ್ಞಾನವನ್ನು ಸೇನೆಯು ಅಭಿವೃದ್ಧಿಪಡಿಸಿತು. ಆರಂಭಿಕ ಅವಧಿಯಲ್ಲಿ ನಡೆದ ಸ್ಪರ್ಧೆಗಳು ೧೯೩೦ರ ದಶಕದಷ್ಟು ಹಿಂದಕ್ಕೆ ನಮ್ಮನ್ನು ಕರೆದೊಯ್ಯುತ್ತವೆ, ಮತ್ತು ಇದು ೧೯೫೨ರಲ್ಲಿ ಒಂದು ಅಂತರರಾಷ್ಟ್ರೀಯ ಕ್ರೀಡೆ ಎನಿಸಿಕೊಂಡಿತು.
ಒಂದು ವಿನೋದ-ವಿಹಾರದ ಚಟುವಟಿಕೆಯಾಗಿ ಮತ್ತು ಒಂದು ಸ್ಪರ್ಧಾತ್ಮಕ ಕ್ರೀಡೆಯಾಗಿ ಧುಮುಕುಕೊಡೆ ಜಿಗಿತವು ಪ್ರದರ್ಶಿಸಲ್ಪಡುತ್ತದೆ; ಅಷ್ಟೇ ಅಲ್ಲ, ವಾಯುಗಾಮಿ ಪಡೆಗಳಿಗೆ ಸೇರಿದ ಸೇನೆ ಸಿಬ್ಬಂದಿ ಮತ್ತು ಸಂದರ್ಭಾನುಸಾರ ಬಳಕೆಯಾಗುವ ಅರಣ್ಯ ಅಗ್ನಿಶಾಮಕ ಪಡೆಗಳ ನಿಯೋಜಿಸುವಿಕೆ ಅಥವಾ ವ್ಯೂಹರಚನೆಗಾಗಿಯೂ ಧುಮುಕುಕೊಡೆ ಜಿಗಿತವು ಬಳಸಲ್ಪಡುತ್ತದೆ.
ಆಕಾಶ ನೆಗೆತ ವಿಮಾನ ನಿಲ್ದಾಣದಲ್ಲಿರುವ ಇಳಿಬೀಳುವ ವಲಯದ ಓರ್ವ ಕಾರ್ಯನಿರ್ವಾಹಕನು ಒಂದು ಅಥವಾ ಒಂದಕ್ಕಿಂತ ಹೆಚ್ಚು ವಿಮಾನ ಅಥವಾ ವಾಯುನೌಕೆಯ ಕಾರ್ಯನಿರ್ವಹಣೆಯನ್ನು ನೋಡಿಕೊಳ್ಳುತ್ತಾನೆ ಮತ್ತು ಇಂಥ ವಾಯುನೌಕೆಗಳು ಒಂದು ಶುಲ್ಕವನ್ನು ವಿಧಿಸುವ ಮೂಲಕ ಆಕಾಶ-ನೆಗೆತಗಾರರ ಗುಂಪುಗಳನ್ನು ಮೇಲಕ್ಕೆ ಕೊಂಡೊಯ್ಯುತ್ತವೆ. ಓರ್ವ ಪ್ರತ್ಯೇಕ ಅಥವಾ ಏಕೋದ್ದಿಷ್ಟ ಜಿಗಿತಗಾರನು ಸೆಸ್ನಾ C-೧೭೨ ಅಥವಾ C-೧೮೨ಯಂಥ ಒಂದು ಹಗುರ ವಿಮಾನದಲ್ಲಿ ಮೇಲಕ್ಕೆ ಹೋಗಬಹುದು. ನಿಬಿಡವಾಗಿರುವ ಇಳಿಬೀಳುವ ವಲಯಗಳಲ್ಲಿ (ಡ್ರಾಪ್ ಜೋನ್ಸ್-DZ) ಸೆಸ್ನಾ ಕ್ಯಾರವಾನ್ C೨೦೮, ಡೆ ಹ್ಯಾವಿಲ್ಲಾಂಡ್ ಟ್ವಿನ್ ಆಟರ್ DHC೬ ಅಥವಾ ಷಾರ್ಟ್ ಸ್ಕೈವ್ಯಾನ್ ರೀತಿಯ ದೊಡ್ಡ ಗಾತ್ರದ ವಿಮಾನಗಳನ್ನು ಬಳಸಬಹುದು.
೧,೦೦೦ದಿಂದ ೪,೦೦೦ ಮೀಟರುಗಳಷ್ಟು (೩,೦೦೦ದಿಂದ ೧೩,೦೦೦ ಅಡಿಗಳು) ಉನ್ನತಿಯಿಂದ ವಿಮಾನವೊಂದರಿಂದ (ಸಾಮಾನ್ಯವಾಗಿ ಇದು ಒಂದು ವಿಮಾನವಾಗಿರುತ್ತದೆಯಾದರೂ ಕೆಲವೊಮ್ಮೆ ಒಂದು ಹೆಲಿಕಾಪ್ಟರ್ ಅಥವಾ ಕೆಲವೊಮ್ಮೆ ಆಕಾಶಬುಟ್ಟಿಯೊಂದರ ತೂಗುತೊಟ್ಟಿಲುಯೂ ಆಗಿರಬಹುದು) ವ್ಯಕ್ತಿಗಳು ನಿರ್ಗಮಿಸುವುದನ್ನು ಒಂದು ವಿಶಿಷ್ಟ ಜಿಗಿತವು ಒಳಗೊಳ್ಳುತ್ತದೆ. ಆದಾಗ್ಯೂ, ಒಂದು ವೇಳೆ ಕಡಿಮೆ ಉನ್ನತಿಯೊಂದರಿಂದ ಜಿಗಿಯುವುದಾದಲ್ಲಿ, ಧುಮುಕುಕೊಡೆಯು ತತ್ಕ್ಷಣದಲ್ಲಿ ಸಜ್ಜುಗೊಳಿಸಲ್ಪಡುತ್ತದೆ; ಅತಿ ಎತ್ತರದ ಉನ್ನತಿಗಳಲ್ಲಾದರೆ, ಇಳಿಯುವಿಕೆಯನ್ನು ಸುರಕ್ಷಿತ ವೇಗಗಳಿಗೆ (ಸುಮಾರು ೫ರಿಂದ ೭ ನಿಮಿಷಗಳು) ತಗ್ಗಿಸುವ ದೃಷ್ಟಿಯಿಂದ ಆಕಾಶ-ನೆಗೆತಗಾರನು ಧುಮುಕುಕೊಡೆಯೊಂದನ್ನು ಸಕ್ರಿಯಗೊಳಿಸುವುದಕ್ಕೆ ಮುಂಚಿತವಾಗಿ ಒಂದು ಅಲ್ಪಾವಧಿಯ ಕಾಲದವರೆಗೆ (ಸುಮಾರು ಒಂದು ನಿಮಿಷದವರೆಗೆ)[೧] ಸ್ವತಂತ್ರ ಪತನಕ್ಕೆ ಒಳಗಾಗಬಹುದು.
ಧುಮುಕುಕೊಡೆಯು ತೆರೆದುಕೊಂಡಾಗ (ಸಾಮಾನ್ಯವಾಗಿ ೮೦೦ ಮೀಟರುಗಳು ಅಥವಾ ೨,೬೦೦ ಅಡಿಗಳನ್ನು ತಲುಪುವುದರೊಳಗೆ ಧುಮುಕುಕೊಡೆಯು ಸಂಪೂರ್ಣವಾಗಿ ಉಬ್ಬಿಕೊಳ್ಳುತ್ತದೆ) ಜಿಗಿತಗಾರನು ದಿಕ್ಕು ಮತ್ತು ವೇಗವನ್ನು ನಿಯಂತ್ರಣ ಮಾಡಲು ಸಾಧ್ಯವಿರುತ್ತದೆ. ಧುಮುಕುಕೊಡೆಯ ಹಿಂಭಾಗದ ಅಂಚಿಗೆ ಜೋಡಿಸಲಾದ ಚಾಲನ-ನಿರ್ದೇಶನದ ರೂಪರೇಖೆಯ ತುದಿಯಲ್ಲಿರುವ ಅಡ್ಡಕಡ್ಡಿಗಳನ್ನು ಬಳಸಿಕೊಂಡು ಆತ ಈ ನಿಯಂತ್ರಣವನ್ನು ಮಾಡಬಹುದಾಗಿರುತ್ತದೆ; ಅಷ್ಟೇ ಅಲ್ಲ, ಇಳಿದಾಣದೆಡೆಗೆ ಸರಿಯಾಗಿ ಗುರಿಯಿರಿಸಲು ಹಾಗೂ ತುಲನಾತ್ಮಕವಾಗಿ ನವಿರಾದ ಒಂದು ನಿಲುಗಡೆಯನ್ನು ಕಂಡುಕೊಳ್ಳಲು ಅವನು ಈ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದಾಗಿರುತ್ತದೆ. ಆಧುನಿಕವಾಗಿರುವ ಎಲ್ಲಾ ಕ್ರೀಡಾ ಧುಮುಕುಕೊಡೆಗಳು ಸ್ವಯಂ-ಉಬ್ಬಿಕೊಳ್ಳುವ "ರ್ಯಾಂ-ಗಾಳಿ" ರೆಕ್ಕೆಗಳಾಗಿದ್ದು, ಸಂಬಂಧಿತ ಪ್ಯಾರಾಗ್ಲೈಡರ್ಗಳ ರೀತಿಯಲ್ಲಿಯೇ ವೇಗ ಮತ್ತು ದಿಕ್ಕಿನ ನಿಯಂತ್ರಣವನ್ನು ಒದಗಿಸುತ್ತವೆ. ಪ್ಯಾರಾಗ್ಲೈಡರ್ಗಳು ಹೆಚ್ಚು ಮಹತ್ತರವಾದ ಮೇಲ್ಮುಖ ಒತ್ತಡ ಮತ್ತು ವ್ಯಾಪ್ತಿಯನ್ನು ಹೊಂದಿರುತ್ತವೆಯಾದರೂ, ಅಂತಿಮ ವೇಗದಲ್ಲಿ ವ್ಯೂಹರಚನೆಯ ಒತ್ತಡಗಳನ್ನು ಹೀರಿಕೊಳ್ಳುವಂತೆ ಧುಮುಕುಕೊಡೆಗಳನ್ನು ವಿನ್ಯಾಸಗೊಳಿಸಲಾಗಿರುತ್ತದೆ ಎಂಬುದನ್ನು ಎರಡೂ ಕ್ರೀಡೆಯಲ್ಲಿನ ಪರಿಶುದ್ಧತಾವಾದಿಗಳು ಗಮನಿಸುತ್ತಾರೆ.
ಸ್ವತಂತ್ರ ಪತನದಲ್ಲಿ ದೇಹದ ಆಕಾರವನ್ನು ಕುಶಲವಾದ ರೀತಿಯಲ್ಲಿ ಬಳಸಿಕೊಳ್ಳುವ ಮೂಲಕ, ಓರ್ವ ಆಕಾಶ-ನೆಗೆತಗಾರನು ತಿರುವುಗಳು, ಮುಮ್ಮೊಗ ಚಲನೆ, ಹಿಮ್ಮೊಗ ಚಲನೆ, ಮತ್ತು ಅಷ್ಟೇ ಏಕೆ ಮೇಲ್ಮುಖ ಒತ್ತಡವನ್ನು ಸೃಷ್ಟಿಸಬಲ್ಲವನಾಗಿರುತ್ತಾನೆ.
ಒಂದು ವಾಯುನೌಕೆ ಅಥವಾ ವಿಮಾನವನ್ನು ಬಿಡುವಾಗ, ಓರ್ವ ಆಕಾಶ-ನೆಗೆತಗಾರನು ಕೆಲ ಸೆಕೆಂಡುಗಳವರೆಗೆ ಮುಮ್ಮೊಗ ದಿಕ್ಕಿಗೆ ಮತ್ತು ಕೆಳದಿಕ್ಕಿಗೆ ಪ್ರಯಾಣಿಸುವುದನ್ನು ಮುಂದುವರಿಸುತ್ತಾನೆ; ಇದು ವಿಮಾನದ ವೇಗದಿಂದ (ಇದಕ್ಕೆ "ಮುಮ್ಮೊಗ ಎಸೆತ" ಎಂದು ಹೆಸರು) ಸೃಷ್ಟಿಸಲ್ಪಟ್ಟ ಆವೇಗ ಕಾರಣವಾಗಿರುತ್ತದೆ. ಸಮತಲ ಹಾರಾಟದಿಂದ ಲಂಬವಾಗಿರುವ ಹಾರಾಟಕ್ಕೆ ಮಾಡುವ ಒಂದು ಬದಲಾವಣೆಯ ಪ್ರತ್ಯಕ್ಷಾನುಭವವನ್ನು "ಸಾಪೇಕ್ಷ ಮಾರುತ" ಎಂಬುದಾಗಿ ಅಥವಾ ಅನೌಪಚಾರಿಕವಾಗಿ "ಬೆಟ್ಟದ ಮೇಲಿರುವ ಸ್ಥಿತಿ" ಎಂಬುದಾಗಿ ಹೇಳಲಾಗುತ್ತದೆ. ಸ್ವತಂತ್ರ ಪತನದಲ್ಲಿ, ಆಕಾಶ-ನೆಗೆತಗಾರರು ಒಂದು "ಬೀಳುವಿಕೆ" ಸಂವೇದನೆಯನ್ನು ಸಾಮಾನ್ಯವಾಗಿ ಅನುಭವಿಸುವುದಿಲ್ಲ; ಏಕೆಂದರೆ, ಸುಮಾರು 50 mph (80 km/h)ಕ್ಕಿಂತಲೂ ಹೆಚ್ಚಿನ ವೇಗಗಳಲ್ಲಿ ಅವರ ದೇಹಕ್ಕೆ ಒಡ್ಡಲ್ಪಡುವ ಗಾಳಿಯ ಪ್ರತಿರೋಧವು ತೂಕ ಮತ್ತು ದಿಕ್ಕಿನ ಒಂದಷ್ಟು ಅನುಭೂತಿಯನ್ನು ಒದಗಿಸುತ್ತದೆ. ವಿಮಾನಕ್ಕೆ ಸಂಬಂಧಿಸಿದ ಸಾಮಾನ್ಯ ನಿರ್ಗಮನ ವೇಗಗಳಲ್ಲಿ (ಸರಿಸುಮಾರಾಗಿ 90 mph (140 km/h)), ನಿರ್ಗಮನದ ಕೆಲವೇ ಕ್ಷಣದ ನಂತರ ಬೀಳುವಿಕೆಯ ಅಲ್ಪ ಅನುಭೂತಿ ಕಂಡುಬರುತ್ತದೆಯಾದರೂ, ಒಂದು ಆಕಾಶಬುಟ್ಟಿ ಅಥವಾ ಹೆಲಿಕಾಪ್ಟರ್ನಿಂದ ಮಾಡಲಾಗುವ ಜಿಗಿಯುವಿಕೆಯು ಈ ಸಂವೇದನೆಯನ್ನು ಸೃಷ್ಟಿಸಬಲ್ಲದಾಗಿರುತ್ತದೆ. ಆಕಾಶ-ನೆಗೆತಗಾರರು ಅಂತಿಮ ವೇಗವನ್ನು [ಹೊಟ್ಟೆಯಿಂದ ಭೂಮಿಯೆಡೆಗಿನ ಅಭಿಮುಖತೆಗಳಿಗಾದರೆ ಸುಮಾರು 120 mph (190 km/h)ನಷ್ಟು, ತಲೆಯು ಕೆಳಗಾಗಿರುವ ಅಭಿಮುಖತೆಗಳಿಗಾದರೆ ಗಂಟೆಗೆ 150-200 ಮೈಲಿಗಳಷ್ಟು (ಗಂಟೆಗೆ 240–320 ಕಿ.ಮೀ.) ಪ್ರಮಾಣದಲ್ಲಿ] ತಲುಪುತ್ತಾರೆ ಹಾಗೂ ನೆಲದೆಡೆಗೆ ವೇಗ ಹೆಚ್ಚಿಸಿಕೊಳ್ಳುವ ಪ್ರವೃತ್ತಿಯು ಅಲ್ಲಿ ಕಂಡುಬರುವುದಿಲ್ಲ. ಈ ಘಟ್ಟದಲ್ಲಿ ಸಂವೇದನೆಯು ಒಂದು ಜೋರಾದ ಮಾರುತದ ಸ್ವರೂಪದಲ್ಲಿರುತ್ತದೆ.
ಅನೇಕ ಜನರು ಓರ್ವ ಅನುಭವಸ್ಥ ಮತ್ತು ತರಬೇತಿಪಡೆದ ಬೋಧಕನೊಂದಿಗೆ ತಮ್ಮ ಮೊದಲ ಜಿಗಿತವನ್ನು ಕೈಗೊಳ್ಳುತ್ತಾರೆ. ಈ ಬಗೆಯ ಆಕಾಶನೆಗೆತವು ಒಂದು ಬೆನ್ನುಸಾಲು ಆಕಾಶನೆಗೆತದ ಸ್ವರೂಪದಲ್ಲಿರಬಹುದು. ಬೆನ್ನುಸಾಲು ಜಿಗಿತದ ಸಂದರ್ಭದಲ್ಲಿ, ಅಸಂಭವವಾದ ಘಟನೆಯಲ್ಲಿ ಅವರಿಗೆ ಅಗತ್ಯಕಂಡುಬರುವ ತುರ್ತುಸ್ಥಿತಿ ಕಾರ್ಯವಿಧಾನಗಳಿಗೆ ಸಂಬಂಧಿಸಿದಂತೆ ಬೋಧಕನು ಹೊಣೆಗಾರನಾಗಿರುತ್ತಾನೆ. ಆದ್ದರಿಂದ ಆಕಾಶನೆಗೆತಕ್ಕೆ ಸಂಬಂಧಿಸಿದ ಕಲಿಕೆಯ ಕುರಿತು ಗಮನಹರಿಸಲು ಆತ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶವನ್ನು ನೀಡುತ್ತಾನೆ. ಇತರ ತರಬೇತಿ ವಿಧಾನಗಳಲ್ಲಿ ಇವು ಸೇರಿವೆ: ಸ್ಥಾಯಿ ರಜ್ಜು, IAD (ಇನ್ಸ್ಟ್ರಕ್ಟರ್ ಅಸಿಸ್ಟೆಡ್ ಡಿಪ್ಲಾಯ್ಮೆಂಟ್ ಅಥವಾ ಬೋಧಕರ ನೆರವಿನ ವ್ಯೂಹರಚನೆ), ಮತ್ತು AFF (ಆಕ್ಸಿಲರೇಟೆಡ್ ಫ್ರೀ ಫಾಲ್ ಅಥವಾ ವೇಗ ಹೆಚ್ಚಿಸಿಕೊಂಡ ಸ್ವತಂತ್ರ ಪತನ); ಇದಕ್ಕೆ ಕೆನಡಾದಲ್ಲಿ ಪ್ರಗತಿಶೀಲ ಸ್ವತಂತ್ರ ಪತನ (ಪ್ರೋಗ್ರೆಸಿವ್ ಫ್ರೀ ಫಾಲ್-PFF) ಎಂದೂ ಕರೆಯುತ್ತಾರೆ.
ಸುರಕ್ಷತೆ
[ಬದಲಾಯಿಸಿ]ಅಪಾಯ, ಅಪಮೃತ್ಯುಗಳ ಪ್ರತ್ಯಕ್ಷಾನುಭವಗಳು ಅಪರೂಪವಾಗಿವೆಯಾದರೂ, ಪ್ರತಿ ವರ್ಷವೂ ವಿಶ್ವಾದ್ಯಂತ ಕೈಗೊಳ್ಳಲಾಗುವ ಧುಮುಕುಕೊಡೆ ಜಿಗಿತದ ಸಂದರ್ಭದಲ್ಲಿ ಹಲವು ಜನರು ಗಾಯಗೊಳ್ಳುತ್ತಾರೆ ಅಥವಾ ಸಾಯಿಸಲ್ಪಡುತ್ತಾರೆ.[೨][೩] USನಲ್ಲಿ ಪ್ರತಿ ವರ್ಷವೂ ಸುಮಾರು ೩೦ ಮಂದಿ ಆಕಾಶ-ನೆಗೆತಗಾರರು ಅಸುನೀಗುತ್ತಾರೆ; ಅಂದರೆ ಪ್ರತಿ ೧೦೦,೦೦೦ ಜಿಗಿತಗಳಿಗೆ ಸರಿಸುಮಾರಾಗಿ ಒಂದು ಮರಣವು (ಸುಮಾರು ೦.೦೦೧%) ಸಂಭವಿಸುತ್ತದೆ.[೪]
USನಲ್ಲಿ ಮತ್ತು ಪಾಶ್ಚಾತ್ಯ ಪ್ರಪಂಚದ ಬಹುತೇಕ ಭಾಗಗಳಲ್ಲಿ, ಆಕಾಶ-ನೆಗೆತಗಾರರು ಎರಡು ಧುಮುಕುಕೊಡೆಗಳನ್ನು ಜೊತೆಗೆ ಒಯ್ಯುವುದು ಅಗತ್ಯವಾಗಿದೆ. ಮೀಸಲು ಧುಮುಕುಕೊಡೆಗಳನ್ನು ಪ್ರಮಾಣಪತ್ರ ಪಡೆದ ಓರ್ವ ಧುಮುಕುಕೊಡೆ ನೌಕಾಸಜ್ಜುಗಾರನು (USನಲ್ಲಾದರೆ FAA ಪ್ರಮಾಣಪತ್ರವನ್ನು ಪಡೆದ ಓರ್ವ ಧುಮುಕುಕೊಡೆ ನೌಕಾಸಜ್ಜುಗಾರನು) ನಿಯತಕಾಲಿಕವಾಗಿ ಪರಿಶೀಲಿಸಬೇಕಾಗುತ್ತದೆ ಹಾಗೂ ಅದನ್ನು (ಬಳಕೆಯಲ್ಲಿರಲಿ ಅಥವಾ ಇಲ್ಲದಿರಲಿ) ಸೂಕ್ತ ರೀತಿಯಲ್ಲಿ ಮತ್ತೆ-ಕಟ್ಟಿಡಬೇಕಾಗುತ್ತದೆ. ಅನೇಕ ಆಕಾಶ-ನೆಗೆತಗಾರರು ಒಂದು ಸ್ವಯಂಚಾಲಿತ ಸಕ್ರಿಯಕರಣ ಸಾಧನವನ್ನು (ಆಟೋಮ್ಯಾಟಿಕ್ ಆಕ್ಟಿವೇಷನ್ ಡಿವೈಸ್-AAD) ಬಳಸುತ್ತಾರೆ. ಮುಖ್ಯ ಧುಮುಕುಕೊಡೆಯ ಛತ್ರಿಯನ್ನು ಸ್ವತಃ ಸಕ್ರಿಯಗೊಳಿಸಲು ವಿಫಲವಾದ ಸಂದರ್ಭದಲ್ಲಿ, ಈ ಸಾಧನವು ಒಂದು ಸುರಕ್ಷಿತ ಉನ್ನತಿಯಲ್ಲಿ ಮೀಸಲು ಧುಮುಕುಕೊಡೆಯನ್ನು ತೆರೆಯುತ್ತದೆ. ಬಹುತೇಕ ಆಕಾಶ-ನೆಗೆತಗಾರರು ವೀಕ್ಷಣಾ-ಉದ್ದೇಶದ ಒಂದು ಉನ್ನತಿ ಮಾಪಕವನ್ನು ಧರಿಸುತ್ತಾರಾದರೂ, ಹೆಚ್ಚಿನ ಸಂಖ್ಯೆಯ ಆಕಾಶ-ನೆಗೆತಗಾರರು ತಮ್ಮ ಶಿರಸ್ತ್ರಾಣಗಳಿಗೆ ಅಳವಡಿಸಲಾದ ಶ್ರವ್ಯ ಉನ್ನತಿ ಮಾಪಕಗಳನ್ನೂ ಬಳಸುತ್ತಾರೆ.
ಆಕಾಶ-ನೆಗೆತಗಾರನು ಸುರಕ್ಷಿತವಲ್ಲದ ಕುಶಲ ಚಲನೆಗಳನ್ನು ನಿರ್ವಹಿಸುವುದರಿಂದ ಅಥವಾ ತಮ್ಮ ಧುಮುಕುಕೊಡೆಯ ಛತ್ರಿಯನ್ನು ಹಾರಿಸುವಾಗ ಒಂದು ತಪ್ಪಾದ ತೀರ್ಮಾನವನ್ನು ಕೈಗೊಳ್ಳುವುದರಿಂದ, ಸಂಪೂರ್ಣವಾಗಿ ಕಾರ್ಯಾತ್ಮಕವಾಗಿರುವ ಒಂದು ಧುಮುಕುಕೊಡೆಯ ಅಡಿಯಲ್ಲಿ ಗಾಯಗಳು ಮತ್ತು ಅಪಮೃತ್ಯುಗಳು ಸಂಭವಿಸುತ್ತವೆ; ಇದು ನೆಲದೊಂದಿಗೆ ಆಗುವ ಒಂದು ಉನ್ನತ ವೇಗದ ಬಡಿತಕ್ಕೆ ಕಾರಣವಾಗಬಹುದು ಅಥವಾ ನೆಲದ ಮೇಲೆ ಇತರ ಅಪಾಯಗಳನ್ನು ವಿಶಿಷ್ಟವಾದ ರೀತಿಯಲ್ಲಿ ಉಂಟುಮಾಡಬಹುದು.[೫] ಉನ್ನತ-ಕಾರ್ಯಕ್ಷಮತೆಯ ಒಂದು ಧುಮುಕುಕೊಡೆಯ ಛತ್ರಿಯ ಅಡಿಯಲ್ಲಿ ಮತ್ತು ರಭಸದಿಂದ ಎರಗುವ ಸಂದರ್ಭದಲ್ಲಿ ಕಂಡುಬರುವ ಒಂದು ಕಡಿಮೆ ಮಟ್ಟದ ತಿರುಗುವಿಕೆಯು ಗಾಯದ ಅತ್ಯಂತ ಸಾಮಾನ್ಯ ಮೂಲಗಳ ಪೈಕಿ ಒಂದಾಗಿರುತ್ತದೆ. ರಭಸದಿಂದ ಎರಗುವಿಕೆಯು ಹಾರುವಿಕೆಯ ಮುಂದುವರಿದ ಶಿಷ್ಟಾಚಾರವಾಗಿದ್ದು, ಇದು ಇಳಿಯುವಿಕೆಯ ಸಂದರ್ಭದಲ್ಲಿ ನೆಲಕ್ಕೆ ಸಮಾನಾಂತರವಾಗಿರುತ್ತದೆ.
ಬದಲಾಗುವ ಗಾಳಿಯ ಪರಿಸ್ಥಿತಿಗಳು ಮತ್ತೊಂದು ಅಪಾಯಕಾರಿ ಅಂಶವೆನಿಸಿಕೊಂಡಿದೆ. ಬಲವಾದ ಮಾರುತಗಳ ಪರಿಸ್ಥಿತಿಗಳಲ್ಲಿ ಮತ್ತು ಸುಡುವ ದಿನಗಳು ಅಥವಾ ಬೇಸಿಗೆ ಕಾಲದ ಅವಧಿಯಲ್ಲಿನ ಪ್ರಕ್ಷುಬ್ಧ ಸ್ಥಿತಿಯಲ್ಲಿ, ಧುಮುಕುಕೊಡೆಯಲ್ಲಿ ಕೆಳಕ್ಕಿಳಿಯುವವನು ನೆಲಕ್ಕೆ ನಿಕಟವಾಗಿರುವಂತೆ ಕೆಳ-ಎಳೆತಗಳಲ್ಲಿ ಸಿಲುಕಿಹೋಗಬಹುದು. ವರ್ಗಾಯಿಸುವ ಮಾರುತಗಳು ಒಂದು ಪ್ರತಿ-ಮಾರುತ ಅಥವಾ ಕೆಳ-ಮಾರುತದೊಂದಿಗಿನ ಇಳಿಯುವಿಕೆಯನ್ನು ಉಂಟುಮಾಡಬಲ್ಲವಾಗಿರುತ್ತವೆ; ಇಳಿಯುವಿಕೆ ವೇಗಕ್ಕೆ ಜೊತೆಯಾಗಿ ಬಂದು ಸೇರಿಕೊಳ್ಳುವ ಮಾರುತ ವೇಗದ ಕಾರಣದಿಂದಾಗಿ ಇವು ಗಾಯದ ಅತಿ ಹೆಚ್ಚಿನ ಸಂಭಾವ್ಯತೆಯನ್ನು ಹೊಂದಿರುತ್ತವೆ.
"ಧುಮುಕುಕೊಡೆ ಛತ್ರಿಯ ಸಂಘರ್ಷಣೆಗಳು", ಅಥವಾ ಸಂಪೂರ್ಣವಾಗಿ-ಉಬ್ಬಿಕೊಂಡಿರುವ ಧುಮುಕುಕೊಡೆಗಳ ಅಡಿಯಲ್ಲಿನ ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಆಕಾಶ-ನೆಗೆತಗಾರರ ನಡುವೆ ಕಂಡುಬರುವ ಸಂಘರ್ಷಣೆಗಳು ಮತ್ತೊಂದು ಅಪಾಯಕರ ಅಂಶವಾಗಿರುತ್ತದೆ. ಜಿಗಿತಗಾರರ ಉಬ್ಬಿಕೊಂಡಿರುವ ಧುಮುಕುಕೊಡೆಗಳು ಪರಸ್ಪರರ ಧುಮುಕುಕೊಡೆಗಳೊಂದಿಗೆ ಹೆಣೆದುಕೊಂಡು ಗೋಜಲಾಗುವುದಕ್ಕೆ ಧುಮುಕುಕೊಡೆ ಛತ್ರಿಯ ಸಂಘರ್ಷಣೆಗಳು ಕಾರಣವಾಗುತ್ತವೆ; ಇದರಿಂದಾಗಿ, ಈ ಪ್ರಕ್ರಿಯೆಯಲ್ಲಿ ಸಿಲುಕಿಕೊಂಡ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಧುಮುಕುಕೊಡೆಗಳು ಅನೇಕವೇಳೆ ಒಂದು ಹಠಾತ್ ಕುಸಿತಕ್ಕೆ (ನಿಷ್ಕಾಸಕ್ಕೆ) ಈಡಾಗಬಹುದು. ಇಂಥದೊಂದು ಸನ್ನಿವೇಶವು ನಿರ್ಮಾಣವಾದಾಗ, ಜಿಗಿತಗಾರರು ತಮ್ಮ ಮುಖ್ಯ ಧುಮುಕುಕೊಡೆಯ ಛತ್ರಿಗಳನ್ನು "ತೆಗೆದುಹಾಕುವುದಕ್ಕಾಗಿ" (ಹೊರಗೆಸೆತ) ಹಾಗೂ ತಮ್ಮ ಮೀಸಲು ಧುಮುಕುಕೊಡೆಯ ಛತ್ರಿಗಳನ್ನು ಸಜ್ಜುಗೊಳಿಸುವುದಕ್ಕಾಗಿ ತುರ್ತುಸ್ಥಿತಿಯ ಕಾರ್ಯವಿಧಾನಗಳನ್ನು (ಒಂದು ವೇಳೆ ಅವನ್ನು ಕೈಗೊಳ್ಳಲು ಸಾಕಷ್ಟಿರುವ ಉನ್ನತಿಯ ಸ್ಥಿತಿಯು ಲಭ್ಯವಿದ್ದರೆ) ಕ್ಷಿಪ್ರವಾಗಿ ನಿರ್ವಹಿಸಬೇಕಾಗುತ್ತದೆ. ಜಿಗಿತಗಾರರು ತಮ್ಮ ಮುಖ್ಯ ಧುಮುಕುಕೊಡೆಗಳನ್ನು ಸುರಕ್ಷಿತವಾಗಿ ಹೊರಗೆಸೆಯಲು ಹಾಗೂ ತಮ್ಮ ಮೀಸಲು ಧುಮುಕುಕೊಡೆಗಳನ್ನು ಸಂಪೂರ್ಣವಾಗಿ ಸಜ್ಜುಗೊಳಿಸಲು ಸಾಕಷ್ಟು ಕಾಲಾವಕಾಶ ನೀಡಲಾಗದಂಥ ಕಡಿಮೆ ಮಟ್ಟದ ಉನ್ನತಿಗಳಲ್ಲಿ ಧುಮುಕುಕೊಡೆ ಛತ್ರಿಯ ಸಂಘರ್ಷಣೆಗಳು ಸಂಭವಿಸಿದಾಗ ಅವು ನಿರ್ದಿಷ್ಟವಾಗಿ ಅಪಾಯಕಾರಿಯಾಗಿರುತ್ತವೆ.
ಸಲಕರಣೆಗಳ ವೈಫಲ್ಯವು ಅಪರೂಪವಾಗಿ ಅಪಮೃತ್ಯುಗಳು ಮತ್ತು ಗಾಯಗಳನ್ನು ಉಂಟುಮಾಡುತ್ತದೆ. ಮುಖ್ಯ ಧುಮುಕುಕೊಡೆಯೊಂದರ ಒಂದು ಸಾವಿರ ವ್ಯೂಹರಚನೆಗಳ ಪೈಕಿ ಸರಿಸುಮಾರಾಗಿ ಒಂದು ರಚನೆಯು ಅಸಮರ್ಪಕ ಕಾರ್ಯಾಚರಣೆಗೆ[ಸೂಕ್ತ ಉಲ್ಲೇಖನ ಬೇಕು] ಕಾರಣವಾಗುತ್ತದೆ. ರ್ಯಾಂ-ಗಾಳಿಯ ಧುಮುಕುಕೊಡೆಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ ಸಂದರ್ಭಗಳಲ್ಲಿ ಅನಿಯಂತ್ರಿತವಾಗಿ ವಿಶಿಷ್ಟವಾಗಿ ಗಿರಕಿ ಹೊಡೆಯುತ್ತವೆ, ಮತ್ತು ಮೀಸಲು ಧುಮುಕುಕೊಡೆಯನ್ನು ಸಜ್ಜುಗೊಳಿಸುವುದಕ್ಕೆ ಮುಂಚಿತವಾಗಿ ಇವನ್ನು ಹೊರಗೆಸೆಯುವುದು ಅತ್ಯಗತ್ಯವಾಗಿರುತ್ತದೆ. ಮೀಸಲು ಧುಮುಕುಕೊಡೆಗಳನ್ನು ವಿಭಿನ್ನವಾಗಿ ಪ್ಯಾಕ್ ಮಾಡಲಾಗಿರುತ್ತದೆ ಮತ್ತು ಸಜ್ಜುಗೊಳಿಸಲಾಗಿರುತ್ತದೆ. ಮುಖ್ಯ ಧುಮುಕುಕೊಡೆಗಳಿಗಿಂತ ಅವು ಹೆಚ್ಚು ವಿಶ್ವಾಸಾರ್ಹವಾಗಿರಬೇಕೆಂಬ ದೃಷ್ಟಿಯಿಂದ, ಅತ್ಯಂತ ನಿಷ್ಕೃಷ್ಟ ಮಾನದಂಡಗಳಿಗೆ ಅನುಸಾರವಾಗಿ ಅವನ್ನು ಪರೀಕ್ಷಿಸಲಾಗಿರುತ್ತದೆ ಮತ್ತು ನಿರ್ಮಿಸಲಾಗಿರುತ್ತದೆ. ಅಷ್ಟೇ ಅಲ್ಲ, ಈ ನಿಟ್ಟಿನಲ್ಲಿ ಅವನ್ನು ಹೆಚ್ಚು ಸಂಪ್ರದಾಯಾನುಸಾರಿಯಾಗಿ ವಿನ್ಯಾಸಗೊಳಿಸಲಾಗಿರುತ್ತದೆ; ಆದರೆ ಒಂದು ಮೀಸಲು ಧುಮುಕುಕೊಡೆಯ ಅಸಮರ್ಪಕ ಕಾರ್ಯಾಚರಣೆಯ ಸಂಭವನೀಯತೆ ಕಡಿಮೆಯಿರುವುದರಿಂದ ವರ್ಧಿಸಲ್ಪಟ್ಟ ಒಂದು ಅಸಂಭವವಾದ ಮುಖ್ಯ ಧುಮುಕುಕೊಡೆಯ ಅಸಮರ್ಪಕ ಕಾರ್ಯಾಚರಣೆಯ ಸಂಭವನೀಯತೆಯಿಂದ ನಿಜವಾದ ಸುರಕ್ಷತಾ ಪ್ರಯೋಜನವು ಬರುತ್ತದೆ. ಇದು ಇನ್ನೂ ಸಣ್ಣದಾಗಿರುವ ಜೋಡಿ ಅಸಮರ್ಪಕ ಕಾರ್ಯಾಚರಣೆಯ ಒಂದು ಸಂಭವನೀಯತೆಯನ್ನು ಮುಂದುಮಾಡುತ್ತದೆಯಾದರೂ, ಒಂದು ಮೀಸಲು ಧುಮುಕುಕೊಡೆಯ ಅಸಮರ್ಪಕ ಕಾರ್ಯಾಚರಣೆಯನ್ನು ಉಂಟುಮಾಡುವಂಥ ಮುಖ್ಯ ಧುಮುಕುಕೊಡೆಯ ಅಸಮರ್ಪಕ ಕಾರ್ಯಾಚರಣೆಯನ್ನು ತೆಗೆದುಹಾಕಲಾಗದಿರುವ ಒಂದು ಸಾಧ್ಯತೆಯು ಒಂದು ಅತ್ಯಂತ ನಿಜವಾದ ಅಪಾಯವಾಗಿದೆ.
BASE ಜಿಗಿತದಂಥ ಧುಮುಕುಕೊಡೆ ಜಿಗಿತದ ಶಿಷ್ಟಾಚಾರಗಳು, ಅಥವಾ ರೆಕ್ಕೆ ದಿರಿಸು ಹಾರಾಟ ಮತ್ತು ಆಕಾಶದಲ್ಲಿನ ಸವಾರಿಯಂಥ ಸಲಕರಣೆಯನ್ನು ಒಳಗೊಂಡಿರುವ ಶಿಷ್ಟಾಚಾರಗಳು, ಜಿಗಿತಗಾರನ ಕೆಳಮಟ್ಟದ ಚಲನಶೀಲತೆ ಹಾಗೂ ಗೋಜಲುಗೊಳ್ಳುವ ಮಹತ್ತರವಾದ ಅಪಾಯದ ಕಾರಣದಿಂದಾಗಿ ಒಂದು ಅತಿಹೆಚ್ಚಿನ ಅಪಾಯಕರ ಅಂಶವನ್ನು ಹೊಂದಿವೆ. ಈ ಕಾರಣದಿಂದಾಗಿಯೇ ಈ ಶಿಷ್ಟಾಚಾರಗಳು ಅನುಭವಸ್ಥ ಜಿಗಿತಗಾರರಿಂದ ಸಾಮಾನ್ಯವಾಗಿ ಆಚರಿಸಲ್ಪಡುತ್ತವೆ.
ವ್ಯಾಪಾರಿ ಚಲನಚಿತ್ರಗಳಲ್ಲಿ, ಅದರಲ್ಲೂ ಗಮನಾರ್ಹವಾಗಿ ಹಾಲಿವುಡ್ ಸಾಹಸ ಚಲನಚಿತ್ರಗಳಲ್ಲಿರುವ ವರ್ಣನೆಗಳು ಅಥವಾ ನಿರೂಪಣೆಗಳು, ಸದರಿ ಕ್ರೀಡೆಯು ಹೊಂದಿರುವ ಅಪಾಯಗಳನ್ನು ಸಾಮಾನ್ಯವಾಗಿ ಉತ್ಪ್ರೇಕ್ಷಿಸುತ್ತವೆ ಎನ್ನಬಹುದು. ವಿಶೇಷ ಪರಿಣಾಮಗಳ ನೆರವಿಲ್ಲದೆಯೇ ನಿರ್ವಹಿಸುವುದು ವಾಸ್ತವವಾಗಿ ಅಸಾಧ್ಯವಾಗಿರುವ ಸಾಹಸಕಾರ್ಯಗಳನ್ನು ಇಂಥ ಚಲನಚಿತ್ರಗಳಲ್ಲಿನ ಪಾತ್ರಗಳು ನಿರ್ವಹಿಸುತ್ತಿರುವಂತೆ ಅನೇಕವೇಳೆ ತೋರಿಸಲಾಗುತ್ತದೆ. ಇತರ ನಿದರ್ಶನಗಳಲ್ಲಿ, ಸುರಕ್ಷತಾ-ಪ್ರಜ್ಞೆಯನ್ನು ಹೊಂದಿರುವ ಯಾವುದೇ ಇಳಿಬೀಳುವ ವಲಯ ಅಥವಾ ಕ್ಲಬ್ನಲ್ಲಿ ಅವರು ನೆಲೆಗೊಳ್ಳಲ್ಪಡುವಂತೆ ಅಥವಾ ದೂರವಿಡಲ್ಪಡುವಂತೆ ಅವರ ಅಭ್ಯಾಸಕ್ರಮಗಳು ಅವರ ಮೇಲೆ ಪರಿಣಾಮವನ್ನುಂಟುಮಾಡುತ್ತವೆ. US ಮತ್ತು ಕೆನಡಾಗಳಲ್ಲಿ, USPA ಸದಸ್ಯರ ಇಳಿಬೀಳುವ ವಲಯಗಳ ಓರ್ವ ಅನುಭವಸ್ಥ ಜಿಗಿತಗಾರನು ಓರ್ವ "ಸುರಕ್ಷತಾ ಅಧಿಕಾರಿ"ಯಾಗಿ ವರ್ತಿಸಬೇಕಾಗಿ ಬರುತ್ತದೆ (ಕೆನಡಾದಲ್ಲಿ ಈತ DSO, ಅಂದರೆ ಡ್ರಾಪ್ ಜೋನ್ ಸೇಫ್ಟಿ ಆಫೀಸರ್ ಅಥವಾ ಇಳಿಬೀಳುವ ವಲಯದ ಸುರಕ್ಷತಾ ಅಧಿಕಾರಿ ಆಗಿರುತ್ತಾನೆ; U.S.ನಲ್ಲಿ ಈತ S&TA ಅಂದರೆ ಸೇಫ್ಟಿ ಅಂಡ್ ಟ್ರೇನಿಂಗ್ ಅಡ್ವೈಸರ್ ಅಥವಾ ಸುರಕ್ಷತೆ ಮತ್ತು ತರಬೇತಿಯ ಸಲಹೆಗಾರ ಆಗಿರುತ್ತಾನೆ). ಈ ಸುರಕ್ಷತಾ ಅಧಿಕಾರಿಯು ಜಿಗಿತಗಾರರೊಂದಿಗೆ ವ್ಯವಹರಿಸುವುದಕ್ಕೆ ಸಂಬಂಧಿಸಿದಂತೆ ಹೊಣೆಗಾರನಾಗಿರುತ್ತಾನೆ, ಅಂದರೆ, ನಿಯಮಗಳು, ಕಟ್ಟುಪಾಡುಗಳನ್ನು ಉಲ್ಲಂಘಿಸುವ ಅಥವಾ ಸುರಕ್ಷಿತವಲ್ಲದ ಶೈಲಿ ಎಂಬುದಾಗಿ ನೇಮಿಸಲ್ಪಟ್ಟ ವ್ಯಕ್ತಿಯಿಂದ ಪರಿಗಣಿಸಲ್ಪಟ್ಟಿರುವ ಶೈಲಿಯಲ್ಲಿ ಅನ್ಯಥಾ ವರ್ತಿಸುವ ಜಿಗಿತಗಾರರೊಂದಿಗೆ ಈ ವ್ಯವಹರಿಸಬೇಕಾಗುತ್ತದೆ.
ಅನೇಕ ದೇಶಗಳಲ್ಲಿ, ಸ್ಥಳೀಯ ಕಟ್ಟುಪಾಡುಗಳು ಅಥವಾ ಇಳಿಬೀಳುವ ವಲಯದ ಮಾಲೀಕರ ಹೊಣೆಗಾರಿಕಾ-ಪ್ರಜ್ಞೆಯ ಯುಕ್ತಾಯುಕ್ತ ವಿವೇಚನೆಯ ಅನುಸಾರ, ಧುಮುಕುಕೊಡೆಯಲ್ಲಿ ಕೆಳಕ್ಕಿಳಿಯುವವರು ಸದರಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಮುಂಚಿತವಾಗಿ ಪ್ರಾಪ್ತವಯಸ್ಸನ್ನು ಮುಟ್ಟಿರಬೇಕಾಗುತ್ತದೆ.
ಧುಮುಕುಕೊಡೆ ಜಿಗಿತ ಮತ್ತು ಹವಾಮಾನ
[ಬದಲಾಯಿಸಿ]ಕಳಪೆ ಹವಾಮಾನದಲ್ಲಿ, ಅದರಲ್ಲೂ ವಿಶೇಷವಾಗಿ ಚಂಡಮಾರುತಗಳು, ಉನ್ನತ ಮಾರುತಗಳು, ಮತ್ತು ಧೂಳೆಬ್ಬಿಸುವ ಬಿರುಗಾಳಿಗಳನ್ನು ಹೊಂದಿರುವ ಹವಾಮಾನದಲ್ಲಿ ನಡೆಸುವ ಧುಮುಕುಕೊಡೆ ಜಿಗಿತವು ಒಂದು ಅಪಾಯಕಾರಿ ಚಟುವಟಿಕೆಯಾಗಿ ಹೊರಹೊಮ್ಮಬಲ್ಲದು. ಕಟುವಾದ ಹವಾಮಾನದ ಸಂದರ್ಭಗಳಲ್ಲಿ ಹೆಸರುವಾಸಿಯಾದ ಇಳಿಬೀಳುವ ವಲಯಗಳು ಸಾಮಾನ್ಯ ಕಾರ್ಯಾಚರಣೆಗಳನ್ನು ರದ್ದುಪಡಿಸುತ್ತವೆ.
ಧುಮುಕುಕೊಡೆ ಛತ್ರಿಯ ಸಂಘರ್ಷಣೆಗಳು
[ಬದಲಾಯಿಸಿ]ಮತ್ತೊಂದು ಧುಮುಕುಕೊಡೆಯ ಛತ್ರಿಯೊಂದಿಗೆ ಸಂಭವಿಸುವ ಒಂದು ಸಂಘರ್ಷಣೆಯು ಒಂದು ಸಂಖ್ಯಾಶಾಸ್ತ್ರೀಯವಾದ ಅಪಾಯವಾಗಿದ್ದು, ಸರಳ ಮೂಲತತ್ತ್ವಗಳನ್ನು ಆಚರಿಸುವ ಮೂಲಕ ಇದನ್ನು ತಪ್ಪಿಸಬಹುದಾಗಿದೆ.
ತರಬೇತಿ
[ಬದಲಾಯಿಸಿ]ಜಿಗಿಯುವಿಕೆಯನ್ನು ಕೈಗೊಳ್ಳದೆಯೇ ಆಕಾಶ ನೆಗೆತವನ್ನು ಅಭ್ಯಾಸ ಮಾಡಲು ಸಾಧ್ಯವಿದೆ. ಸ್ವತಂತ್ರ ಪತನದ ("ಒಳಾಂಗಣ ಆಕಾಶ ನೆಗೆತ" ಅಥವಾ "ದೇಹದ ಹಾರಾಟ") ಅಭ್ಯಾಸಕ್ಕೆ ಸಂಬಂಧಿಸಿದಂತೆ ಲಂಬವಾಗಿರುವ ಮಾರುತ ಸುರಂಗಗಳನ್ನು ಬಳಸಲಾಗುತ್ತದೆ; ಧುಮುಕುಕೊಡೆ ನಿಯಂತ್ರಣವನ್ನು ಅಭ್ಯಾಸ ಮಾಡುವುದಕ್ಕಾಗಿ ವಾಸ್ತವಾಭಾಸದ ಯಥಾರ್ಥತೆಯನ್ನು ನೀಡುವ ಧುಮುಕುಕೊಡೆಯ ಅನುಕರಣಕಾರಕಗಳನ್ನು ಬಳಸಲಾಗುತ್ತದೆ.
ತರಬೇತಿಯನ್ನು ಬಯಸುತ್ತಿರುವ ಆರಂಭಿಕ ಆಕಾಶ-ನೆಗೆತಗಾರರು ಈ ಕೆಳಕಂಡ ಆಯ್ಕೆಗಳನ್ನು ಹೊಂದಿರುತ್ತಾರೆ:
- ಸ್ಥಾಯಿ ರಜ್ಜು
- ಬೋಧಕರ ನೆರವಿನ ವ್ಯೂಹರಚನೆ
- ವೇಗ ಹೆಚ್ಚಿಸಿಕೊಂಡ ಸ್ವತಂತ್ರ ಪತನ
- ಬೆನ್ನುಸಾಲಿನ ಆಕಾಶ ನೆಗೆತ
ಧುಮುಕುಕೊಡೆಯ ವ್ಯೂಹರಚನೆ
[ಬದಲಾಯಿಸಿ]ಓರ್ವ ಆಕಾಶ-ನೆಗೆತಗಾರನ ವ್ಯೂಹರಚನಾ ಉನ್ನತಿಯಲ್ಲಿ, ಸದರಿ ವ್ಯಕ್ತಿಯು ಒಂದು ಸಣ್ಣದಾದ ಪೂರಕ-ಇಳಿಕೊಡೆಯನ್ನು ಸಜ್ಜುಗೊಳಿಸುತ್ತಾನೆ. ಒಂದು ವಸ್ತ್ರಶಂಕು ಅಥವಾ ಗಾಳಿಚೀಲದ ರೀತಿಯಲ್ಲಿ ವರ್ತಿಸುವ ಇದು ಗಾಳಿಯನ್ನು ಸೆರೆಹಿಡಿಯುತ್ತದೆ ಮತ್ತು ಮುಖ್ಯ ಧುಮುಕುಕೊಡೆ ಅಥವಾ ಮುಖ್ಯ ಧುಮುಕುಕೊಡೆಯ ಛತ್ರಿಯನ್ನು ಹೊರಸೆಳೆಯುತ್ತದೆ. ಇಲ್ಲಿ "ಹೊರಗೆಸೆತ" ಮತ್ತು "ಹೊರಗೆಳೆತ" ಎಂಬ ಎರಡು ಪ್ರಧಾನ ವ್ಯವಸ್ಥೆಗಳು ಬಳಕೆಯಲ್ಲಿವೆ. "ಹೊರಗೆಸೆತ"ದ ವ್ಯವಸ್ಥೆಯಲ್ಲಿ, ಮುಖ್ಯ ಧಾರಕದ ಹೊರಭಾಗದಲ್ಲಿನ ಒಂದು ಸಣ್ಣದಾದ ಕಿಸೆಯಲ್ಲಿ ಅಡಕವಾಗಿ ತುಂಬಲ್ಪಟ್ಟ ಪೂರಕ-ಇಳಿಕೊಡೆಯ ಮೇಲುತುದಿಗೆ ಜೋಡಿಸಲಾದ ಒಂದ ಅಡ್ಡಕಡ್ಡಿ ಯನ್ನು ಆಕಾಶ-ನೆಗೆತಗಾರನು ಎಳೆಯುತ್ತಾನೆ. "ಹೊರಗೆಳೆತ"ದ ವ್ಯವಸ್ಥೆಯಲ್ಲಿ, ಧಾರಕದ ಒಳಭಾಗದಲ್ಲಿ ಅಡಕವಾಗಿ ತುಂಬಲ್ಪಟ್ಟ ಪೂರಕ-ಇಳಿಕೊಡೆಗೆ ಜೋಡಿಸಲಾದ ಒಂದು ಸಣ್ಣದಾದ ಫಲಕವನ್ನು ಆಕಾಶ-ನೆಗೆತಗಾರನು ಎಳೆಯುತ್ತಾನೆ.
ಹೊರಗೆಸೆತದ ಪೂರಕ-ಇಳಿಕೊಡೆಯ ಸಣ್ಣಚೀಲಗಳನ್ನು ಧಾರಕದ ಕೆಳತುದಿಯಲ್ಲಿ ಸಾಮಾನ್ಯವಾಗಿ ಇರಿಸಲಾಗಿರುತ್ತದೆ ಮತ್ತು ಇದನ್ನು B.O.C. ವ್ಯೂಹರಚನೆ ವ್ಯವಸ್ಥೆ ಎಂದು ಕರೆಯಲಾಗುತ್ತದೆ. ಆದರೆ ಹಳೆಯ ಸಲಕರಣೆಗಳು ಕಾಲಿಗೆ-ಅಳವಡಿಸಲಾದ ಸಣ್ಣಚೀಲಗಳನ್ನು ಬಹುತೇಕವಾಗಿ ಹೊಂದಿರುತ್ತವೆ. ಹಳೆಯ ಸಲಕರಣೆಗಳ ನಿದರ್ಶನದಲ್ಲಿನ ವ್ಯವಸ್ಥೆಯು ಮಟ್ಟಸವಾದ ಹಾರುವಿಕೆಗೆ ಸಂಬಂಧಿಸಿದಂತೆ ಸುರಕ್ಷಿತವಾಗಿರುತ್ತದೆಯಾದರೂ, ಮುಕ್ತಶೈಲಿಯ ಹಾರುವಿಕೆ ಅಥವಾ ತಲೆಕೆಳಗಾಗಿ ಮಾಡುವ ಹಾರುವಿಕೆಗೆ ಅದು ಬಹುತೇಕವಾಗಿ ಹೊಂದಿಕೊಳ್ಳುವುದಿಲ್ಲ.
ಹೊರಗೆಸೆತದಂಥ ವಿಶಿಷ್ಟವಾಗಿರುವ ಸೇನೆಯದ್ದಲ್ಲದ ಧುಮುಕುಕೊಡೆ ವ್ಯವಸ್ಥೆಯೊಂದರಲ್ಲಿ, ಪೂರಕ-ಇಳಿಕೊಡೆಯನ್ನು "ಕಡಿವಾಣ" ಎಂದು ಕರೆಯಲಾಗುವ ಒಂದು ರೂಪರೇಖೆಗೆ ಸಂಪರ್ಕಿಸಲಾಗಿರುತ್ತದೆ ಮತ್ತು ಈ ಕಡಿವಾಣವು ಪ್ರತಿಯಾಗಿ ಒಂದು ಸಣ್ಣದಾದ ವ್ಯೂಹರಚನಾ ಚೀಲಕ್ಕೆ ಜೋಡಿಸಲ್ಪಟ್ಟಿರುತ್ತದೆ. ರಬ್ಬರ್ ಪಟ್ಟಿಗಳಲ್ಲಿ ಅಡಕವಾಗಿ ತುಂಬಲ್ಪಟ್ಟ ಅಕ್ಷಾಧಾರದ ರೂಪರೇಖೆಗಳನ್ನು ಹೊಂದಿರುವ ಮಡಿಸಲಾದ ಧುಮುಕುಕೊಡೆಯನ್ನು ಈ ಚೀಲವು ಒಳಗೊಂಡಿರುತ್ತದೆ. ವ್ಯೂಹರಚನಾ ಚೀಲವನ್ನು ಹಿಡಿದಿಟ್ಟುಕೊಂಡಿರುವ ಧಾರಕದ ಕೆಳತುದಿಯಲ್ಲಿ ಒಂದು ಮುಚ್ಚುವ ಕುಣಿಕೆಯಿದ್ದು, ಅದಕ್ಕೆ ಪ್ಯಾಕ್ ಮಾಡುವ ಸಂದರ್ಭದಲ್ಲಿ ಧಾರಕವನ್ನು ಮುಚ್ಚಲು ಬಳಸಲಾಗುವ ನಾಲ್ಕು ಬೀಳುಮುಚ್ಚಳಗಳ ಉಂಗುರ ಬಿಲ್ಲೆಗಳ ಮೂಲಕ ಪೂರಣ ಮಾಡಲಾಗುತ್ತದೆ. ಈ ಘಟ್ಟದಲ್ಲಿ, ಕಡಿವಾಣಕ್ಕೆ ಜೋಡಿಸಲಾದ ಒಂದು ಡೊಂಕಾದ ಸೂಜಿಯನ್ನು ಮುಚ್ಚುವ ಕುಣಿಕೆಯ ಮೂಲಕ ತೂರಿಸಲಾಗಿರುತ್ತದೆ. ಪೂರಕ-ಇಳಿಕೊಡೆಯನ್ನು ಮಡಿಸುವ ಮತ್ತು ಅದನ್ನು ಒಂದು ಸಣ್ಣಚೀಲದಲ್ಲಿ (ಉದಾಹರಣೆಗೆ B.O.C ಸಣ್ಣಚೀಲ) ಇರಿಸುವ ಪ್ರಕ್ರಿಯೆಯನ್ನು ಮುಂದಿನ ಹಂತವು ಒಳಗೊಳ್ಳುತ್ತದೆ.
ಪೂರಕ-ಇಳಿಕೊಡೆಯು ಎಸೆಯಲ್ಪಟ್ಟಾಗ ಸಕ್ರಿಯಕರಣವು ಆರಂಭವಾಗುತ್ತದೆ. ಇದು ಉಬ್ಬಿಕೊಳ್ಳುತ್ತದೆ ಮತ್ತು ಸೆಳೆತವನ್ನು ಸೃಷ್ಟಿಸುತ್ತದೆ, ಮುಚ್ಚುವ ಕುಣಿಕೆಯಿಂದ ಆಚೆಗೆ ಸೂಜಿಯನ್ನು ಎಳೆಯುತ್ತದೆ ಹಾಗೂ ಧಾರಕದಿಂದ ವ್ಯೂಹರಚನಾ ಚೀಲವನ್ನು ಎಳೆಯುವುದಕ್ಕಾಗಿ ಪೂರಕ-ಇಳಿಕೊಡೆಗೆ ಅವಕಾಶ ನೀಡುತ್ತದೆ. ಧುಮುಕುಕೊಡೆಯ ರೂಪರೇಖೆಗಳು ರಬ್ಬರ್ ಪಟ್ಟಿಗಳಿಂದ ಸಡಿಲವಾಗಿ ಎಳೆಯಲ್ಪಡುತ್ತವೆ ಮತ್ತು ಧುಮುಕುಕೊಡೆಯ ಛತ್ರಿಯು ತೆರೆದುಕೊಳ್ಳಲು ಆರಂಭವಾಗುತ್ತಿದ್ದಂತೆ ಅವು ವಿಸ್ತರಿಸುತ್ತವೆ. "ಜಾರುವ ಫಲಕ" (ಇದು ಜಾರುವ ಫಲಕದ ನಾಲ್ಕು ಸಂಬಂಧಿತ ಮೂಲೆಗಳಲ್ಲಿರುವ ಉಂಗುರ ಬಿಲ್ಲೆಗಳ ಮೂಲಕ ಪೂರಣ ಮಾಡಲಾಗುವ ನಾಲ್ಕು ಮುಖ್ಯ ಗುಂಪುಗಳಾಗಿ ಧುಮುಕುಕೊಡೆಯ ರೂಪರೇಖೆಗಳನ್ನು ಪ್ರತ್ಯೇಕಿಸುತ್ತದೆ) ಎಂದು ಕರೆಯಲ್ಪಡುವ ನೆಯ್ದ ಬಟ್ಟೆಯ ಒಂದು ಆಯತಾಕಾರದ ತುಣುಕು ಧುಮುಕುಕೊಡೆಯ ತೆರೆದುಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ ಹಾಗೂ ಧುಮುಕುಕೊಡೆಯ ಛತ್ರಿಯು ಸಂಪೂರ್ಣವಾಗಿ ತೆರೆದುಕೊಳ್ಳುವವರೆಗೆ ಮತ್ತು ಜಾರುವ ಫಲಕವು ಆಕಾಶ-ನೆಗೆತಗಾರನ ತಲೆಗೆ ಸ್ವಲ್ಪವೇ ಮೇಲ್ಭಾಗದಲ್ಲಿ ನೆಲೆಗೊಳ್ಳುವವರೆಗೆ ಅದರ ಹಾದಿಯು ಕೆಳಗಿರುವಂತೆ ನೋಡಿಕೊಳ್ಳುತ್ತದೆ. ಧುಮುಕುಕೊಡೆಯ ವ್ಯೂಹರಚನೆಯನ್ನು ಜಾರುವ ಫಲಕವು ನಿಧಾನಗೊಳಿಸುತ್ತದೆ ಮತ್ತು ನಿಯಂತ್ರಿಸುತ್ತದೆ. ಒಂದು ಜಾರುವ ಫಲಕವಿಲ್ಲದೆಯೇ ಧುಮುಕುಕೊಡೆಯು ವೇಗವಾಗಿ ಉಬ್ಬಿಕೊಳ್ಳುತ್ತದೆ ಮತ್ತು ಇದರಿಂದ ಧುಮುಕುಕೊಡೆಯ ನೆಯ್ದ ಬಟ್ಟೆ ಮತ್ತು/ಅಥವಾ ಅಕ್ಷಾಧಾರದ ರೂಪರೇಖೆಗಳು ಹಾನಿಗೊಳಗಾಗುವ ಸಂಭಾವ್ಯತೆಯಿರುತ್ತದೆ. ಒಂದು ಸಾಮಾನ್ಯ ವ್ಯೂಹರಚನೆಯ ಅವಧಿಯಲ್ಲಿ, ಓರ್ವ ಆಕಾಶ-ನೆಗೆತಗಾರನು ಕೆಲ ಸೆಕೆಂಡುಗಳವರೆಗೆ ೩ರಿಂದ ೪ Gವರೆಗಿನ ಕ್ಷೇತ್ರದಲ್ಲಿ ತೀವ್ರವಾದ ವೇಗಕುಂದಿಕೆಯನ್ನು ಅನುಭವಿಸುತ್ತಾನೆ; ಅದೇ ವೇಳೆಗೆ ಧುಮುಕುಕೊಡೆಯು 120 mph (190 km/h)ನಿಂದ ಸರಿಸುಮಾರಾಗಿ ಗಂಟೆಗೆ ೧೮ ಮೈಲಿಗಳಷ್ಟಿರುವ ವೇಗದಲ್ಲಿ ಇಳಿಕೆಯನ್ನು ನಿಧಾನಗೊಳಿಸುತ್ತದೆ.
ಒಂದು ವೇಳೆ ಓರ್ವ ಆಕಾಶ-ನೆಗೆತಗಾರನಿಗೆ ತನ್ನ ಮುಖ್ಯ ಧುಮುಕುಕೊಡೆಯಲ್ಲಿ ತಾನು ಸರಿಪಡಿಸಲಾಗದಂಥ ಒಂದು ಅಸಮರ್ಪಕ ಕಾರ್ಯಾಚರಣೆಯು ಅನುಭವಕ್ಕೆ ಬಂದಲ್ಲಿ, ತನ್ನ (ಎದೆಯ ಮೇಲಿರುವ) ಸಲಕರಣೆಯ ಮುಂಭಾಗದ ಬಲಭಾಗದಲ್ಲಿರುವ ಒಂದು "ತೆಗೆದುಹಾಕುವಿಕೆಯ" ಹಿಡಿಕೆಯನ್ನು ಆತ ಎಳೆಯುತ್ತಾನೆ. ಇದು ಸಲಕರಣೆ/ಧಾರಕದಿಂದ ಮುಖ್ಯ ಧುಮುಕುಕೊಡೆಯ ಛತ್ರಿಯನ್ನು ಬಿಡುಗಡೆ ಮಾಡುತ್ತದೆ. ಅಸಮರ್ಪಕವಾಗಿ ಕಾರ್ಯನಡೆಸುತ್ತಿರುವ ಮುಖ್ಯ ಧುಮುಕುಕೊಡೆಯ ಛತ್ರಿಯಿಂದ ಒಮ್ಮೆಗೆ ಬಿಡುಗಡೆಯಾಗುತ್ತಿದ್ದಂತೆ, ಮುಂಭಾಗದಲ್ಲಿ ಎಡಗಡೆಯ ಸಲಕರಣೆಯ ಮೇಲಿರುವ ಎರಡನೇ ಹಿಡಿಕೆಯೊಂದನ್ನು ಎಳೆಯುವ ಮೂಲಕ ಮೀಸಲು ಧುಮುಕುಕೊಡೆಯ ಛತ್ರಿಯನ್ನು ಕೈಯಿಂದ ಸಕ್ರಿಯಗೊಳಿಸಬಹುದು. ಮುಖ್ಯ ಧುಮುಕುಕೊಡೆಗಳಿಂದ ಮೀಸಲು ಧುಮುಕುಕೊಡೆಗಳನ್ನು ಸಂಪರ್ಕಿಸುವ ಒಂದು ಸಂಪರ್ಕಮಾರ್ಗವನ್ನು ಕೆಲವೊಂದು ಧಾರಕಗಳಿಗೆ ಅಳವಡಿಸಲಾಗಿರುತ್ತದೆ. ಮೀಸಲು ಸ್ಥಾಯಿ ರಜ್ಜು (ರಿಸರ್ವ್ ಸ್ಟಾಟಿಕ್ ಲೈನ್-RSL) ಎಂದು ಕರೆಯಲ್ಪಡುವ ಇವು, ಕೈಯಿಂದ ಬಿಡುಗಡೆ ಮಾಡುವುದಕ್ಕಿಂತ ವೇಗವಾಗಿ ಮೀಸಲು ಧಾರಕವನ್ನು ಎಳೆದು ತೆರೆಯುತ್ತವೆ. ಯಾವುದೇ ವಿಧಾನವನ್ನು ಬಳಸಿದರೂ, ಸುರುಳಿ ತುಂಬಿಸಲಾದ ಒಂದು ಪೂರಕ ಇಳಿಕೊಡೆಯು ಆಗ ಧಾರಕದ ಮೇಲಿನ ಅರ್ಧಭಾಗದಿಂದ ಮೀಸಲು ಧುಮುಕುಕೊಡೆಯನ್ನು ಎತ್ತಿ ತೆಗೆಯುತ್ತದೆ.
ಭಿನ್ನ ಆವೃತ್ತಿಗಳು
[ಬದಲಾಯಿಸಿ]ಜನರು ತರಬೇತಿಯನ್ನು ಪಡೆಯುವ, ಸಲಕರಣೆಗಳನ್ನು ಖರೀದಿಸುವ ಮತ್ತು ವೈಯಕ್ತಿಕ ತರಬೇತಿ/ಪಾಠಗಳನ್ನು ಪಡೆಯುವುದಕ್ಕೆ ಸಂಬಂಧಿಸಿದ ಶಿಷ್ಟಾಚಾರಗಳ ಜೊತೆಗೆ, ವಿನೋದ-ವಿಹಾರದ ಆಕಾಶ-ನೆಗೆತಗಾರನು ಕೇವಲ ತಮಾಷೆಯನ್ನು ಹೊಂದುವುದಕ್ಕಾಗಿರುವ ವಿಧಾನಗಳನ್ನು ಕಂಡುಕೊಳ್ಳುತ್ತಾನೆ.
ಹಿಟ್ ಅಂಡ್ ರಾಕ್
[ಬದಲಾಯಿಸಿ]"ಹಿಟ್ ಅಂಡ್ ರಾಕ್" ಎಂಬುದು ಇದರ ಒಂದು ಉದಾಹರಣೆಯಾಗಿದ್ದು, ಇದು ತಮಾಷೆಗಾಗಿ ಸ್ಪರ್ಧಿಸುವ ವೈವಿಧ್ಯಮಯ ಪರಿಣತಿ ಮಟ್ಟಗಳನ್ನು ಹೊಂದಿರುವ ಜನರಿಗೆ ಅವಕಾಶ ನೀಡಲು ಯೋಜಿಸಲ್ಪಟ್ಟ ನಿಖರತೆಯ ಇಳಿಯುವಿಕೆಯ ಒಂದು ರೂಪಾಂತರವಾಗಿದೆ. "ಹಿಟ್ ಅಂಡ್ ರಾಕ್" ಎಂಬುದು ಮೂಲತಃ POPSಗೆ (ಪ್ಯಾರಾಷೂಟಿಸ್ಟ್ಸ್ ಓವರ್ ಫಾರ್ಟಿ ಸೊಸೈಟಿ) ಸೇರಿದ ಒಂದು ರೂಪಾಂತರವಾಗಿದೆ. ನೋಡಿ: POPS ಮುಖ್ಯ ತಾಣ
ಕುರ್ಚಿಗೆ ಎಷ್ಟು ಸಾಧ್ಯವೋ ಅಷ್ಟು ನಿಕಟವಾಗಿ ಇಳಿಯುವುದು, ಧುಮುಕುಕೊಡೆ ಸಲಕರಣೆಯನ್ನು ತೆಗೆದುಹಾಕುವುದು, ಕುರ್ಚಿಯೆಡೆಗೆ ಪೂರ್ಣ ವೇಗದಲ್ಲಿ ಓಡುವುದು, ಕುರ್ಚಿಯಲ್ಲಿ ಸಂಪೂರ್ಣವಾಗಿ ಕುಳಿತುಕೊಳ್ಳುವುದು ಹಾಗೂ ಕನಿಷ್ಟಪಕ್ಷ ಒಂದು ಬಾರಿ ಹಿಂದಕ್ಕೂ ಮುಂದಕ್ಕೂ ತೂಗಾಡುವುದು ಇದರ ಹಿಂದಿರುವ ಉದ್ದೇಶವಾಗಿದೆ. ಸ್ಪರ್ಧಿಯ ಪಾದಗಳು ನೆಲವನ್ನು ಸ್ಪರ್ಶಿಸುವ ಕ್ಷಣದಿಂದ ಮೊದಲ್ಗೊಂಡು ಮೊದಲು ತೂಗಾಟವು ಸಂಪೂರ್ಣಗೊಳ್ಳುವವರೆಗೆ ಸ್ಪರ್ಧಿಯ ಸಮಯವನ್ನು ನಿರ್ಧರಿಸಲಾಗುತ್ತದೆ ಅಥವಾ ಲೆಕ್ಕಹಾಕಲಾಗುತ್ತದೆ. ಈ ಸ್ಪರ್ಧೆಯನ್ನು ಒಂದು ಓಟದ ಪಂದ್ಯವಾಗಿ ಪರಿಗಣಿಸಲಾಗುತ್ತದೆ.
ಕೊಳದ ಮೇಲೆ ರಭಸದಿಂದ ಎರಗುವಿಕೆ
[ಬದಲಾಯಿಸಿ]ಕೊಳದ ಮೇಲೆ ರಭಸದಿಂದ ಎರಗುವಿಕೆಯು ಸ್ಪರ್ಧಾತ್ಮಕವಾದ ಧುಮುಕುಕೊಡೆ ಜಿಗಿತದ ಒಂದು ಸ್ವರೂಪವಾಗಿದ್ದು, ಇದರಲ್ಲಿ ಧುಮುಕುಕೊಡೆ ಛತ್ರಿಯ ಚಾಲಕರು ಒಂದು ಸಣ್ಣದಾದ ಜಲರಾಶಿಗೆ ಅಡ್ಡಲಾಗಿ, ಮತ್ತು ಕಡಲತೀರದ ಮೇಲ್ಭಾಗದಲ್ಲಿನ ಒಂದು ಹಾರಾಟದಲ್ಲಿ ಮೇಲ್ಮೈಯನ್ನು ಸ್ಪರ್ಶಿಸಲು ಪ್ರಯತ್ನಿಸುತ್ತಾರೆ. ಖುಷಿಯಾದ ಸ್ಪರ್ಧೆ, ನಿಖರತೆ, ವೇಗ, ಅಂತರ ಮತ್ತು ಶೈಲಿಗೆ ಶ್ರೇಯಾಂಕ ನೀಡುವಿಕೆ ಇವೆಲ್ಲವನ್ನೂ ಸದರಿ ಪಂದ್ಯಗಳು ಒದಗಿಸುತ್ತವೆ. ಓರ್ವ ಸಹಭಾಗಿಯು ಕಡಲತೀರವನ್ನು ತಲುಪಲು ವಿಫಲಗೊಂಡಾಗ ಮತ್ತು ನೀರಿನೊಳಗೆ ಮುಳುಗಿದಾಗ, ಅಂಕಗಳು ಹಾಗೂ ಸಹಪಾಠಿಗಳ ಅನುಮೋದನೆ ಇವುಗಳು ತಗ್ಗಿಸಲ್ಪಡುತ್ತವೆ.
ಆದ್ಯಂತದ ಜಿಗಿತ
[ಬದಲಾಯಿಸಿ]ಆದ್ಯಂತದ ಜಿಗಿತವು ಒಂದು ಆಕಾಶನೆಗೆತವಾಗಿದ್ದು, ಇದರಲ್ಲಿ ಸಹಭಾಗಿಗಳು ಜಿಗಿತದ ನಂತರ ತತ್ಕ್ಷಣದಲ್ಲಿಯೇ ತಮ್ಮ ಧುಮುಕುಕೊಡೆಗಳನ್ನು ತೆರೆಯುತ್ತಾರೆ; ಧುಮುಕುಕೊಡೆ ಛತ್ರಿಯ ಅಡಿಯಲ್ಲಿ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ನೆಲಭಾಗವನ್ನು ಆವರಿಸಿಕೊಳ್ಳುತ್ತಾ ಹೋಗುವ ಆಶಯ ಇದರ ಹಿಂದೆ ಅಡಗಿರುತ್ತದೆ. ಜಿಗಿತದ ಓಟದಿಂದ ಇಳಿಬೀಳುವ-ವಲಯದವರೆಗಿನ ಸಾಮಾನ್ಯ ಅಂತರವು ಹಲವಾರು ಮೈಲಿಗಳಷ್ಟು ಪ್ರಮಾಣದಲ್ಲಿ ಇರಬಹುದು.
ಕ್ಯಾಮರದೊಂದಿಗೆ ಹಾರುವಿಕೆ
[ಬದಲಾಯಿಸಿ]ಕ್ಯಾಮರದೊಂದಿಗೆ ಹಾರುವಿಕೆಯಲ್ಲಿ, ಕ್ಯಾಮರವನ್ನು ಹೊಂದಿರುವ ಓರ್ವ ವ್ಯಕ್ತಿಯು ಇತರ ಆಕಾಶ-ನೆಗೆತಗಾರರೊಂದಿಗೆ ಜಿಗಿಯುತ್ತಾನೆ ಮತ್ತು ಅವರ ಚಲನೆಗಳನ್ನು ಚಿತ್ರೀಕರಿಸುತ್ತಾನೆ. ಪತನದ ಗತಿಗಳ ಒಂದು ಮಹತ್ತರವಾದ ವ್ಯಾಪ್ತಿಯನ್ನು ಒದಗಿಸುವ ಸಲುವಾಗಿ ರೆಕ್ಕೆಯಿರುವ ಜಿಗಿತದ ದಿರಿಸಿನಂಥ ವಿಶೇಷೀಕರಿಸಿದ ಸಲಕರಣೆಯನ್ನು ಕ್ಯಾಮರದೊಂದಿಗಿನ ಹಾರಾಟಗಾರನು ಅನೇಕವೇಳೆ ಧರಿಸುತ್ತಾನೆ. ಅಷ್ಟೇ ಅಲ್ಲ, ಶಿರಸ್ತ್ರಾಣಕ್ಕೆ-ಅಳವಡಿಸಲಾದ ವಿಡಿಯೋ ಮತ್ತು ಸ್ಥಿರಚಿತ್ರಣದ ಕ್ಯಾಮರಗಳು, ಬಾಯಿಯಿಂದ ನಿರ್ವಹಿಸಲ್ಪಡುವ ಕ್ಯಾಮರ ಸ್ವಿಚ್ಚುಗಳು, ಮತ್ತು ದ್ಯುತಿ ಲಕ್ಷ್ಯಕಗಳನ್ನೂ ಅವನು ಹೊಂದಿರುತ್ತಾನೆ. ಕೆಲವೊಂದು ಆಕಾಶ-ನೆಗೆತಗಾರರು ಕ್ಯಾಮರದೊಂದಿಗೆ ಹಾರುವಿಕೆಯಲ್ಲಿ ವಿಶೇಷಜ್ಞತೆಯನ್ನು ಪಡೆದಿರುತ್ತಾರೆ. ಅಷ್ಟೇ ಅಲ್ಲ, ತರಬೇತಿ ನೀಡಲ್ಪಟ್ಟ ಜಿಗಿತಗಳಲ್ಲಿ ತೊಡಗಿಕೊಂಡಿರುವ ವಿದ್ಯಾರ್ಥಿಗಳ ಚಲನೆಗಳನ್ನು ಮತ್ತು ಬೆನ್ನುಸಾಲು-ಜಿಗಿತಗಾರರನ್ನು ಚಿತ್ರೀಕರಿಸುವುದಕ್ಕಾಗಿ ಕೆಲವರು ಶುಲ್ಕಗಳನ್ನು ವಿಧಿಸುತ್ತಾರೆ, ಅಥವಾ ಮಾಧ್ಯಮಗಳಲ್ಲಿ ಬಳಕೆಗಾಗಿ ಕಸುಬುದಾರ ಚಿತ್ರತುಣುಕು ಮತ್ತು ಛಾಯಾಚಿತ್ರಗಳನ್ನು ಚಿತ್ರೀಕರಿಸುವುದಕ್ಕಾಗಿ ಶುಲ್ಕಗಳನ್ನು ವಿಧಿಸುತ್ತಾರೆ.
ಆಕಾಶ ನೆಗೆತದ ಸಮುದಾಯದಲ್ಲಿ ಒಳ್ಳೆಯ ಕ್ಯಾಮರಯುಕ್ತ ಹಾರಾಟಗಾರರಿಗೆ ಯಾವಾಗಲೂ ಒಂದು ಬೇಡಿಕೆ ಇದ್ದೇ ಇದೆ. ಏಕೆಂದರೆ, ಸ್ಪರ್ಧಾತ್ಮಕವಾದ ಆಕಾಶ ನೆಗೆತದ ಶಿಷ್ಟಾಚಾರಗಳ ಪೈಕಿ ಅನೇಕವನ್ನು ಒಂದು ವಿಡಿಯೋ ದಾಖಲೆಯ ಆಧಾರದಿಂದ ತೀರ್ಮಾನಿಸಲಾಗುತ್ತದೆ.
ರಾತ್ರಿಯಲ್ಲಿನ ಜಿಗಿತಗಳು
[ಬದಲಾಯಿಸಿ]ಧುಮುಕುಕೊಡೆ ಜಿಗಿತವನ್ನು ದಿನದ ಅವಧಿಯಲ್ಲಿ ಮಾತ್ರವೇ ಕೈಗೊಳ್ಳಬೇಕೆಂದು ಯಾವಾಗಲೂ ನಿರ್ಬಂಧಿಸಲಾಗುವುದಿಲ್ಲ; ಅನುಭವಸ್ಥ ಆಕಾಶ-ನೆಗೆತಗಾರರು ಕೆಲವೊಮ್ಮೆ ರಾತ್ರಿಯಲ್ಲಿ ಜಿಗಿತಗಳನ್ನು ನಿರ್ವಹಿಸುತ್ತಾರೆ. ಸುಸ್ಪಷ್ಟವಾದ ಸುರಕ್ಷತಾ ಕಾರಣಗಳ ದೃಷ್ಟಿಯಿಂದಾಗಿ, ಈ ಪ್ರಕಾರಕ್ಕೆ ಒಂದು ಸಾಮಾನ್ಯ ಹಗಲುವೇಳೆಯ ಜಿಗಿತಕ್ಕಿಂತ ಹೆಚ್ಚಿನ ಸಲಕರಣೆಯು ಬೇಕಾಗುತ್ತದೆ ಮತ್ತು ಬಹುತೇಕ ಅಧಿಕಾರ ವ್ಯಾಪ್ತಿಗಳಲ್ಲಿ ಈ ಪ್ರಕಾರಕ್ಕೆ ಒಂದು ಮುಂದುವರಿದ ಆಕಾಶ ನೆಗೆತದ ಪರವಾನಗಿ (U.S.ನಲ್ಲಾದರೆ ಕನಿಷ್ಟಪಕ್ಷ ಒಂದು B-ಪರವಾನಗಿ) ಹಾಗೂ ಹೊರೆಯನ್ನು ಹೊತ್ತುಕೊಂಡಿರುವ ಯಾವ ವ್ಯಕ್ತಿಯು ಏನನ್ನು ಮಾಡಲಿದ್ದಾನೆ ಎಂಬುದಕ್ಕೆ ರಕ್ಷಣೆಯನ್ನು ಒದಗಿಸುವ ಓರ್ವ ಸ್ಥಳೀಯ ಸುರಕ್ಷತಾ ಅಧಿಕಾರಿಯ ಜೊತೆಗಿನ ಭೇಟಿ ಇವೆರಡೂ ಸಹ ಅಗತ್ಯವಾಗಿರುತ್ತವೆ. ಬೆಳಕಿನ ವ್ಯವಸ್ಥೆಯಿರುವ ಒಂದು ಉನ್ನತಿ ಮಾಪಕವನ್ನು (ಒಂದು ಶ್ರವ್ಯ ಉನ್ನತಿ ಮಾಪಕವನ್ನು ಜೊತೆಯಲ್ಲಿ ಹೊಂದಿರುವ ಸಾಧನಕ್ಕೆ ಆದ್ಯತೆ ನೀಡಲಾಗುತ್ತದೆ) ಹೊಂದಿರುವುದು ಅತ್ಯಗತ್ಯವಾಗಿರುತ್ತದೆ. ರಾತ್ರಿಯಲ್ಲಿನ ಜಿಗಿತಗಳನ್ನು ನಿರ್ವಹಿಸುವ ಆಕಾಶ-ನೆಗೆತಗಾರರು ಅನೇಕವೇಳೆ ತಮ್ಮೊಂದಿಗೆ ಝಳಕು ಬೆಳಕಿನ ಸಾಧನಗಳನ್ನು ಕೊಂಡೊಯ್ಯುತ್ತಾರೆ. ತಮ್ಮ ಧುಮುಕುಕೊಡೆಯ ಛತ್ರಿಗಳು ಸೂಕ್ತವಾಗಿ ಸಜ್ಜುಗೊಳಿಸಲ್ಪಟ್ಟಿವೆಯೇ ಎಂಬುದನ್ನು ಅವರು ಪರಿಶೀಲಿಸುವುದಕ್ಕೆ ಇದು ಸಹಾಯಕವಾಗುತ್ತದೆ.
ಇತರ ಆಕಾಶ-ನೆಗೆತಗಾರರು ಮತ್ತು ಇತರ ವಿಮಾನ ಅಥವಾ ವಾಯುನೌಕೆಗಳಿಗೆ ಸಂಬಂಧಿಸಿದ ಗೋಚರತ್ವವೂ ಒಂದು ಪರಿಗಣನೆಯಾಗಿರುತ್ತದೆ; FAA ಕಟ್ಟುಪಾಡುಗಳ ಅನುಸಾರ, ರಾತ್ರಿಯಲ್ಲಿ ಜಿಗಿಯುವ ಆಕಾಶ-ನೆಗೆತಗಾರರು ಪ್ರತಿ ದಿಕ್ಕಿನಲ್ಲೂ ಮೂರು ಮೈಲಿಗಳವರೆಗೆ (೫ ಕಿ.ಮೀ.) ಗೋಚರಿಸುವ ಒಂದು ದೀಪವನ್ನು ಧರಿಸಿರಬೇಕು, ಹಾಗೂ ಅವರು ಧುಮುಕುಕೊಡೆ ಛತ್ರಿಯ ಅಡಿಗೆ ಅವರು ಒಮ್ಮೆ ಬರುತ್ತಿದ್ದಂತೆ ಅದನ್ನು ತಿರುಗಿಸಬೇಕು. ಒಂದು ರಾಸಾಯನಿಕ-ದೀಪವು (ಜ್ವಲನದೀಪ) ರಾತ್ರಿಯಲ್ಲಿನ ಒಂದು ಜಿಗಿತದಲ್ಲಿ ಒಂದು ಒಳ್ಳೆಯ ಉಪಾಯವೆನಿಸಿಕೊಂಡಿದೆ.
ರಾತ್ರಿಯ ವೇಳೆಯಲ್ಲಿ ಇಳಿಯುವ ಸಂದರ್ಭ ಬಂದಾಗ, ರಾತ್ರಿ ಜಿಗಿತಗಾರರಿಗೆ ಗಾಢಕತ್ತಲೆಯ ವಲಯದ ಕುರಿತಾಗಿ ಅರಿವುಂಟುಮಾಡಬೇಕಾಗುತ್ತದೆ. ೧೦೦ ಅಡಿಗಳಿಗಿಂತ ಹೆಚ್ಚಿನ ಎತ್ತರದಲ್ಲಿ ತಮ್ಮ ಧುಮುಕುಕೊಡೆಯ ಛತ್ರಿಯನ್ನು ಹಾರಿಸುತ್ತಿರುವ ಜಿಗಿತಗಾರರು ಇಳಿದಾಣದ ವಲಯದ ಒಂದು ಒಳ್ಳೆಯ ನೋಟವನ್ನು ಕಾಣುತ್ತಾರೆ; ಇದು ಸಾಮಾನ್ಯವಾಗಿ ಪ್ರತಿಫಲಿತ ಆಕಾಶದ ಬೆಳಕು/ಚಂದ್ರನ ಬೆಳಕಿನ ಕಾರಣದಿಂದ ಸಾಧ್ಯವಾಗುತ್ತದೆ. ಅವರು ನೆಲದೆಡೆಗೆ ಒಮ್ಮೆಗೆ ನಿಕಟವಾಗುತ್ತಿದ್ದಂತೆ, ಕಡಿಮೆಯಿರುವ ಪ್ರತಿಫಲನದ ಕೋನದ ಕಾರಣದಿಂದಾಗಿ ಈ ಆಕಾಶ ಬೆಳಕಿನ ಮೂಲವು ಇಲ್ಲವಾಗುತ್ತದೆ. ಅವರು ಕೆಳಗೆ ಇಳಿದಷ್ಟೂ ನೆಲವು ಅತಿ ಗಾಢವಾಗಿ ಕಾಣಿಸುತ್ತದೆ. ಸುಮಾರು ೧೦೦ ಅಡಿಗಳಷ್ಟು ಮತ್ತು ಅದಕ್ಕಿಂತ ಕಡಿಮೆಯ ಎತ್ತರದಲ್ಲಿ, ಅವರು ಒಂದು ಕಪ್ಪು ರಂಧ್ರದಲ್ಲಿ ಇಳಿಯುತ್ತಿರುವಂತೆ ಕಾಣಬಹುದು. ಹಠಾತ್ತಾಗಿ ಅಲ್ಲಿ ಅತ್ಯಂತ ಗಾಢಕತ್ತಲೆಯು ತಲೆದೋರುತ್ತದೆ ಮತ್ತು ಇದಾದ ಕೂಡಲೇ ಜಿಗಿತಗಾರನು ನೆಲವನ್ನು ಮುಟ್ಟುತ್ತಾನೆ. ಮೊದಲ ಬಾರಿಗೆ ರಾತ್ರಿವೇಳೆಯ ಜಿಗಿತವನ್ನು ಕೈಗೊಳ್ಳುತ್ತಿರುವ ಜಿಗಿತಗಾರರಿಗೆ ಈ ಸನ್ನಿವೇಶವನ್ನು ವಿವರಿಸಬೇಕಾಗುತ್ತದೆ ಮತ್ತು ಅವರೊಂದಿಗೆ ಇದನ್ನು ಚರ್ಚಿಸಬೇಕಾಗುತ್ತದೆ.
ಸಾಮಗ್ರಿಯೊಂದಿಗಿನ ಜಿಗಿತಗಳು
[ಬದಲಾಯಿಸಿ]ಹಿಂಭಾಗದ ಬಾಗಿಲನ್ನು ಹೊಂದಿರುವ ಒಂದು ವಿಮಾನ ಹಾಗೂ ಜಿಗಿತವನ್ನು ಕೈಗೊಳ್ಳಲೆಂದು ಒಂದು ಬೃಹತ್ತಾದ, ಜನವಸತಿಯಿಲ್ಲದ ಸ್ಥಳಾವಕಾಶದ ಲಭ್ಯತೆಯೊಂದಿಗೆ, 'ಸಾಮಗ್ರಿ'ಯೊಂದಿಗಿನ ಜಿಗಿತಗಳು ಸಾಧ್ಯವಾಗುತ್ತವೆ. ಈ ಜಿಗಿತಗಳಲ್ಲಿ ಆಕಾಶ-ನೆಗೆತಗಾರರು ಒಂದಷ್ಟು ಉದ್ದೇಶದೊಂದಿಗೆ ಜಿಗಿಯುತ್ತಾರೆ. ಈ ನಿಟ್ಟಿನಲ್ಲಿ ರಬ್ಬರ್ ತೆಪ್ಪದ ಜಿಗಿತಗಳು ಜನಪ್ರಿಯವಾಗಿವೆ. ಇದರಲ್ಲಿ ಜಿಗಿತಗಾರರು ರಬ್ಬರ್ ತೆಪ್ಪವೊಂದರಲ್ಲಿ ಕುಳಿತುಕೊಳ್ಳುತ್ತಾರೆ. ವಿಮಾನವೊಂದರ ಹಿಂಭಾಗದಿಂದ ಎಸೆಯಲ್ಪಡುವ ಉದ್ದೇಶಕ್ಕೆ ಕಾರುಗಳು, ಬೈಸಿಕಲ್ಗಳು, ಮೋಟರ್ ಸೈಕಲ್ಗಳು, ನಿರ್ವಾಯು ಮಾರ್ಜಕಗಳು, ನೀರಿನ ತೊಟ್ಟಿಗಳು ಮತ್ತು ಗಾಳಿ ತುಂಬಿ ಉಬ್ಬಿಸಬಹುದಾದ ಸಲಕರಣೆಗಳು ಕೂಡಾ ಬಳಸಲ್ಪಡುತ್ತವೆ. ಒಂದು ನಿಶ್ಚಿತ ಎತ್ತರದಲ್ಲಿ, ಜಿಗಿತಗಾರರು ವಸ್ತುವಿನಿಂದ ಬೇರ್ಪಡುತ್ತಾರೆ ಮತ್ತು ತಮ್ಮ ಧುಮುಕುಕೊಡೆಗಳನ್ನು ಸಜ್ಜುಗೊಳಿಸಿಕೊಂಡು, ಅಂತಿಮ ವೇಗದಲ್ಲಿ ನೆಲಕ್ಕೆ ರಭಸವಾಗಿ ಬಡಿಯುವಂತೆ ಅದನ್ನು ಬಿಡುತ್ತಾರೆ.
ಧುಮುಕುಕೊಡೆ ಜಿಗಿತದ ಸಂಘಟನೆಗಳು
[ಬದಲಾಯಿಸಿ]ರಾಷ್ಟ್ರೀಯ ಧುಮುಕುಕೊಡೆ ಜಿಗಿತದ ಸಂಘಗಳು ಅನೇಕ ದೇಶಗಳಲ್ಲಿ ಅಸ್ತಿತ್ವದಲ್ಲಿವೆ. ತಮ್ಮ ಕ್ರೀಡೆಯನ್ನು ಉತ್ತೇಜಿಸುವ ಸಲುವಾಗಿ ಇವುಗಳ ಪೈಕಿ ಅನೇಕ ಸಂಘಗಳು ಫೆಡೆರೇಷನ್ ಏರೋನಾಟಿಕ್ ಇಂಟರ್ನ್ಯಾಷನೇಲ್ (FAI) ಸಂಘಟನೆಯೊಂದಿಗೆ ಅಂಗೀಭೂತವಾಗಿವೆ. ಬಹುತೇಕ ನಿದರ್ಶನಗಳಲ್ಲಿ, ರಾಷ್ಟ್ರೀಯ ಪ್ರತಿನಿಧಿ ಘಟಕಗಳಷ್ಟೇ ಅಲ್ಲದೇ ಇಳಿಬೀಳುವ-ವಲಯದ ಸ್ಥಳೀಯ ಕಾರ್ಯನಿರ್ವಾಹಕರು ಬಯಸುವ ಪ್ರಕಾರ, ಇದರಲ್ಲಿನ ಸಹಭಾಗಿಗಳು ತಮ್ಮ ತರಬೇತಿಗೆ, ಕ್ರೀಡೆಯಲ್ಲಿ ತಾವು ಹೊಂದಿರುವ ಅನುಭವದ ಮಟ್ಟ ಹಾಗೂ ತಮ್ಮ ಸಾಬೀತಾಗಿರುವ ಸಾಮರ್ಥ್ಯವನ್ನು ದೃಢೀಕರಿಸುವ ಪ್ರಮಾಣೀಕರಣವನ್ನು ಒಯ್ಯಬೇಕಾಗುತ್ತದೆ. ಇಂಥ ಸಾಚಾ-ಉದ್ದೇಶಗಳನ್ನು ಪ್ರಸ್ತುತ ಪಡಿಸದ ಯಾರನ್ನೇ ಆದರೂ ನಿಕಟ ಮೇಲ್ವಿಚಾರಣೆಯ ಅಗತ್ಯವಿರುವ ಓರ್ವ ವಿದ್ಯಾರ್ಥಿ ಎಂಬುದಾಗಿ ಪರಿಗಣಿಸಲಾಗುತ್ತದೆ.
ಯುನೈಟೆಡ್ ಸ್ಟೇಟ್ಸ್ ಪ್ಯಾರಷೂಟ್ ಅಸೋಸಿಯೇಷನ್ (USPA)[೧] ಎಂಬುದು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿರುವ ಪ್ರಧಾನ ಸಂಘಟನೆಯಾಗಿದೆ. ಸುರಕ್ಷತಾ ಅರ್ಹತೆಗಳ ಆಧಾರದ ಮೇಲೆ ಈ ಸಂಘಟನೆಯು ಅಮೆರಿಕಾದ ಎಲ್ಲಾ ಆಕಾಶ ನೆಗೆತದ ಚಟುವಟಿಕೆಗಳಿಗೆ ಪರವಾನಗಿಗಳು ಮತ್ತು ಶ್ರೇಯಾಂಕಗಳನ್ನು ನೀಡುತ್ತದೆ. ಆಕಾಶ ನೆಗೆತದ ಕ್ರೀಡೆಯಲ್ಲಿನ ಸುರಕ್ಷತೆಯು ಸದರಿ ಸಂಘಟನೆಯ ಸಂಪೂರ್ಣ ಹೊಣೆಗಾರಿಕೆಯಾಗಿರುವುದರಿಂದ ಅದನ್ನು USPA ನಿರ್ವಹಿಸುತ್ತದೆ ಮತ್ತು ಆಕಾಶ-ನೆಗೆತಗಾರರ ಮಾಹಿತಿ ಕೈಪಿಡಿ (ಸ್ಕೈಡೈವರ್ಸ್ ಇನ್ಫರ್ಮೇಷನ್ ಮ್ಯಾನ್ಯುಯೆಲ್-SIM) ಮತ್ತು ಇತರ ಅನೇಕ ಸಾಧನ-ಸಂಪತ್ತುಗಳನ್ನು ಕೂಡಾ ಅದು ಪ್ರಕಟಿಸುತ್ತದೆ. ಕೆನಡಾದಲ್ಲಿ ಕೆನಡಿಯನ್ ಸ್ಪೋಟ್ ಪ್ಯಾರಾಷೂಟಿಂಗ್ ಅಸೋಸಿಯೇಷನ್ ಎಂಬುದು ಅಗ್ರಗಣ್ಯ ಸಂಘಟನೆಯಾಗಿದೆ. ಸದರಿ ಕ್ರೀಡೆಯು ದಕ್ಷಿಣ ಆಫ್ರಿಕಾದಲ್ಲಿ ಪ್ಯಾರಾಷೂಟ್ ಅಸೋಸಿಯೇಷನ್ ಆಫ್ ಸೌತ್ ಆಫ್ರಿಕಾ ಸಂಘಟನೆಯಿಂದಲೂ, ಮತ್ತು ಯುನೈಟೆಡ್ ಕಿಂಗ್ಡಂನಲ್ಲಿ ಬ್ರಿಟಿಷ್ ಪ್ಯಾರಾಷೂಟ್ ಅಸೋಸಿಯೇಷನ್ ಸಂಘಟನೆಯಿಂದಲೂ ನಿರ್ವಹಿಸಲ್ಪಡುತ್ತದೆ.
ಕ್ರೀಡೆಯ ವ್ಯಾಪ್ತಿಯೊಳಗೆ ಸುರಕ್ಷತೆ, ತಾಂತ್ರಿಕ ಪ್ರಗತಿಗಳು, ತರಬೇತಿ-ಹಾಗೂ-ಪ್ರಮಾಣೀಕರಣ, ಸ್ಪರ್ಧೆ ಮತ್ತು ತಮ್ಮ ಸದಸ್ಯರ ಇತರ ಹಿತಾಸಕ್ತಿಗಳನ್ನು ಸಂಘಗಳು ಉತ್ತೇಜಿಸುತ್ತವೆ. ತಮ್ಮ ಸಂಬಂಧಿತ ಸಮುದಾಯಗಳ ಆಚೆಗೆ, ಅವು ತಮ್ಮ ಕ್ರೀಡೆಯನ್ನು ಸಾರ್ವಜನಿಕರೆಡೆಗೆ ಪ್ರವರ್ತಿಸುತ್ತವೆ, ಮತ್ತು ಸರ್ಕಾರಿ ನಿಯಂತ್ರಕರೊಂದಿಗೆ ಅನೇಕವೇಳೆ ಮಧ್ಯಸ್ಥಿಕೆ ವಹಿಸುತ್ತವೆ.
ಇವುಗಳ ಪೈಕಿಯ ಬಹುತೇಕ ಬೋಧನಾ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟಗಳಲ್ಲಿ ಸ್ಪರ್ಧೆಗಳು ಸಂಘಟಿಸಲ್ಪಡುತ್ತವೆ. ಅವುಗಳಲ್ಲಿ ಕೆಲವು ಹವ್ಯಾಸಿ ಸ್ಪರ್ಧೆಯನ್ನೂ ಆಯೋಜಿಸುತ್ತವೆ.
ಹೆಚ್ಚಿನ ರೀತಿಯಲ್ಲಿ ಛಾಯಾಚಿತ್ರೀಕರಣಕ್ಕೆ ಯೋಗ್ಯವಾದ/ವಿಡಿಯೋ ಚಿತ್ರೀಕರಣಕ್ಕೆ ಯೋಗ್ಯವಾದ ರೂಪಾಂತರಗಳ ಪೈಕಿ ಅನೇಕವು ಪ್ರಾಯೋಜಿತ ಪಂದ್ಯಗಳ ಸವಲತ್ತುಗಳನ್ನು ಅನುಭವಿಸುತ್ತವೆ ಹಾಗೂ ವಿಜೇತರಿಗೆ ಬಹುಮಾನದ ಹಣವನ್ನು ನೀಡಲಾಗುತ್ತದೆ.
ಬಹುತೇಕ ಜಿಗಿತಗಾರರು ಸ್ಪರ್ಧಾತ್ಮಕವಾಗಿರದ ಆಯ್ಕೆಯ ಕಡೆಗೆ ಒಲವು ತೋರುತ್ತಾರೆ ಮತ್ತು ವಾರಾಂತ್ಯಗಳು ಹಾಗೂ ರಜಾದಿನಗಳಲ್ಲಿ ತಮ್ಮ ಸ್ನೇಹಿತರೊಂದಿಗೆ "ಒಂದಷ್ಟು ಹವಾಸೇವನೆ ಮಾಡುವ" ಅವಕಾಶವನ್ನು ಅನುಭವಿಸಿ-ಆನಂದಿಸುವುದು ಅವರ ಉದ್ದೇಶವಾಗಿರುತ್ತದೆ. ಅವರ ಕೂಟಗಳ ವಾತಾವರಣವು ಹೊಸಬರನ್ನು ಸ್ವಾಗತಿಸುವ, ಆರಾಮವಾಗಿರುವ, ಮತ್ತು ಸ್ನೇಹಶೀಲವಾಗಿರುವ ರೀತಿಯಲ್ಲಿರುತ್ತದೆ. "ಬೂಗೀಸ್" ಎಂದು ಕರೆಯಲ್ಪಡುವ ಸಂತೋಷಕೂಟದ ಕಾರ್ಯಕ್ರಮಗಳನ್ನು ಪ್ರತಿ ವರ್ಷವೂ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟಗಳಲ್ಲಿ ವ್ಯವಸ್ಥೆಗೊಳಿಸಲಾಗುತ್ತದೆ ಮತ್ತು ಇವು ಯುವ ಜಿಗಿತಗಾರರು ಮತ್ತು ಅವರ ಹಿರಿಯರನ್ನು ಆಕರ್ಷಿಸುತ್ತವೆ; ಪ್ಯಾರಾಷೂಟಿಸ್ಟ್ ಓವರ್ ಫಾರ್ಟಿ (POPಗಳು), ಸ್ಕೈಡೈವರ್ಸ್ ಓವರ್ ಸಿಕ್ಸ್ಟಿ (SOS) ಮತ್ತು ಇನ್ನೂ ಹಳೆಯದಾದ ಗುಂಪುಗಳು ಇದರಲ್ಲಿ ಪಾಲ್ಗೊಳ್ಳುತ್ತವೆ.
ಈ ಕ್ರೀಡೆಯೊಂದಿಗೆ ಗುರುತಿಸಿಕೊಂಡಿರುವ ಪ್ರಸಿದ್ಧ ಜನರಲ್ಲಿ ವ್ಯಾಲರಿ ರೊಝೊವ್ ಎಂಬಾತನೂ ಸೇರಿದ್ದಾನೆ. ೧೯೯೮ರ X ಗೇಮ್ಸ್ ಪಂದ್ಯಾವಳಿಯ ಓರ್ವ ಬಂಗಾರ ಪದಕ ವಿಜೇತನಾಗಿರುವ ಈತ ೧,೫೦೦ಕ್ಕೂ ಹೆಚ್ಚಿನ ಜಿಗಿತಗಳನ್ನು ಕೈಗೊಂಡಿದ್ದ. ಜಾರ್ಜಿಯಾ ಥಾಮ್ಸನ್ ("ಟೈನಿ") ಬ್ರಾಡ್ವಿಕ್ ಎಂಬಾಕೆಯು ಅಮೆರಿಕಾದ ಮೊದಲ ಆಕಾಶ-ನೆಗೆತಗಾರರ ಪೈಕಿ ಒಬ್ಬಳಾಗಿದ್ದು, ಅವಳು ಮೊದಲ ಸ್ವತಂತ್ರ ಪತನವನ್ನು ಕೈಗೊಂಡಿದ್ದಳು.
ಇಳಿಬೀಳುವ ವಲಯಗಳು
[ಬದಲಾಯಿಸಿ]ಧುಮುಕುಕೊಡೆ ಜಿಗಿತದಲ್ಲಿ, ಒಂದು ಇಳಿಬೀಳುವ ವಲಯ ಅಥವಾ DZ ಎಂಬುದು ಒಂದು ತಾಣದ ಮೇಲ್ಭಾಗ ಹಾಗೂ ಸುತ್ತಮುತ್ತಲಿನ ಪ್ರದೇಶವಾಗಿದ್ದು, ಅಲ್ಲಿ ಧುಮುಕುಕೊಡೆಯ ಜಿಗಿತಗಾರನು ಸ್ವತಂತ್ರ ಪತನಗಳನ್ನು ಕೈಗೊಳ್ಳುತ್ತಾನೆ ಹಾಗೂ ಅಲ್ಲಿ ಅವನ ಇಳಿಯುವಿಕೆಯನ್ನು ನಿರೀಕ್ಷಿಸಬಹುದಾಗಿರುತ್ತದೆ. ಇದು ಸಾಮಾನ್ಯವಾಗಿ ಒಂದು ಸಣ್ಣದಾದ ವಿಮಾನ ನಿಲ್ದಾಣದ ಪಕ್ಕದಲ್ಲಿ ನೆಲೆಗೊಂಡಿದ್ದು, ಇತರ ಸಾಮಾನ್ಯ ವಾಯುಯಾನ ಚಟುವಟಿಕೆಗಳೊಂದಿಗೆ ಸೌಕರ್ಯವನ್ನು ಅನೇಕವೇಳೆ ಹಂಚಿಕೊಳ್ಳುತ್ತದೆ. ಧುಮುಕುಕೊಡೆಯ ಇಳಿಯುವಿಕೆಗಳಿಗಾಗಿ ಸಾಮಾನ್ಯವಾಗಿ ಒಂದು ಇಳಿದಾಣದ ಪ್ರದೇಶವನ್ನು ನಿಯೋಜಿಸಲಾಗಿರುತ್ತದೆ. ಇಳಿಬೀಳುವ ವಲಯದ ಸಿಬ್ಬಂದಿಗಳಲ್ಲಿ ಇವರು ಸೇರಿರುತ್ತಾರೆ: DZO (ಇಳಿಬೀಳುವ ವಲಯದ ಕಾರ್ಯನಿರ್ವಾಹಕ ಅಥವಾ ಮಾಲೀಕ), ಅಭಿವ್ಯಕ್ತಪಡಿಸುವವರು, ಚಾಲಕರು, ಬೋಧಕರು, ತರಬೇತುದಾರರು, ಛಾಯಾಗ್ರಾಹಕರು, ಪ್ಯಾಕ್ ಮಾಡುವವರು, ನೌಕಾಸಜ್ಜುಗಾರರು ಮತ್ತು ಇತರ ಸಾಮಾನ್ಯ ಸಿಬ್ಬಂದಿವರ್ಗ.
ಸಲಕರಣೆಗಳು
[ಬದಲಾಯಿಸಿ]ಈ ಕ್ರೀಡೆಯಲ್ಲಿನ ವೆಚ್ಚಗಳು ಅಲ್ಪ ಪ್ರಮಾಣದ್ದೇನೂ ಅಲ್ಲ. ಹೊಸ ತಾಂತ್ರಿಕ ಪ್ರಗತಿಗಳು ಅಥವಾ ಕಾರ್ಯಕ್ಷಮತೆಯ ವರ್ಧನೆಗಳು ಪರಿಚಯಿಸಲ್ಪಡುತ್ತಿದ್ದಂತೆ, ಸಲಕರಣೆ ಬೆಲೆಗಳನ್ನು ಮತ್ತಷ್ಟು ಏರಿಸುವುದರ ಕಡೆಗೆ ಅವು ಒಲವು ತೋರುತ್ತವೆ. ಅದೇ ರೀತಿಯಲ್ಲಿ, ಸಾಧಾರಣ ಮಟ್ಟದ ಆಕಾಶ-ನೆಗೆತಗಾರನು ಹಿಂದಿನ ವರ್ಷಗಳಲ್ಲಿ ಇದ್ದುದಕ್ಕಿಂತ ಹೆಚ್ಚಿನ ಸಲಕರಣೆಗಳನ್ನು ಜೊತೆಗೆ ಒಯ್ಯುತ್ತಾನೆ ಮತ್ತು ಸುರಕ್ಷತಾ ಸಾಧನಗಳು (ಒಂದು AADಯಂಥದು) ವೆಚ್ಚದ ಒಂದು ಗಣನೀಯ ಭಾಗ ಎನಿಸಿಕೊಳ್ಳುತ್ತವೆ.
ಹೊಚ್ಚ-ಹೊಸ ಸಲಕರಣೆಯ ಒಂದು ಸಂಪೂರ್ಣ ಸಜ್ಜಿಕೆಯು, ಒಂದು ಹೊಸ ಮೋಟರ್ ಸೈಕಲ್ನ ವೆಚ್ಚ ಅಥವಾ ಸಣ್ಣ ಕಾರಿನ ವೆಚ್ಚದ ಅರ್ಧದಷ್ಟು ಹಣವನ್ನು ಖರ್ಚುಮಾಡಿಸುತ್ತದೆ. ಗಣಕಯಂತ್ರಗಳಂಥ ಇತರ ಕೆಲವೊಂದು ಸಲಕರಣೆಗಳ ವಿಷಯದಲ್ಲಿ ಕಂಡುಬರುವಂತೆ, ಬೆಲೆಗಳ ಸ್ಥಿರವಾದ ಕುಸಿತಕ್ಕೆ ಅನುಮತಿಸುವಷ್ಟು ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಯು ಬೆಳೆದಿಲ್ಲ.
ಅನೇಕ ದೇಶಗಳಲ್ಲಿ, ಬಳಸಿದ-ಸಲಕರಣೆಗಳ ಒಂದು ಮಾರುಕಟ್ಟೆಯನ್ನು ಈ ಕ್ರೀಡೆಯು ಬೆಂಬಲಿಸುತ್ತದೆ. ಆರಂಭಿಕರಿಗೆ ಸಂಬಂಧಿಸಿ ಹೇಳುವುದಾದರೆ ಇದು "ಸಜ್ಜು ಸಾಮಗ್ರಿ"ಯನ್ನು ಗಳಿಸುವುದಕ್ಕೆ ಇರುವ ಆದ್ಯತಾಪೂರ್ವಕ ವಿಧಾನವಾಗಿದೆ ಮತ್ತು ಬಳಕೆದಾರರ ಬಳಕೆಗೆ ಸಂಬಂಧಿಸಿದಂತೆ ಇದು ಎರಡು ಪ್ರಯೋಜನಗಳನ್ನು ಹೊಂದಿದೆ. ಅವೆಂದರೆ:
- ಹೊಸ ಸಲಕರಣೆಗಾಗಿ ಹಣವನ್ನು ಪಾವತಿಸುವುದಕ್ಕೆ ಮುಂಚಿತವಾಗಿ ಬಳಕೆದಾರರು ತಾವು ಆದ್ಯತೆ ನೀಡುವ ಶೈಲಿಯನ್ನು ಕಲಿಯುವುದಕ್ಕಾಗಿ ಧುಮುಕುಕೊಡೆಗಳ ಬಗೆಗಳನ್ನು (ಅನೇಕ ಬಗೆಗಳು ಲಭ್ಯವಿವೆ) ಪ್ರಯತ್ನಿಸಬಹುದಾಗಿದೆ.
- ಬಳಕೆದಾರರು ಒಂದು ಅಲ್ಪಕಾಲದಲ್ಲಿ ಸಂಪೂರ್ಣ ವ್ಯವಸ್ಥೆಯೊಂದನ್ನು ಪಡೆದುಕೊಳ್ಳಬಹುದಾಗಿದೆ ಮತ್ತು ಇವು ತಗ್ಗಿಸಲ್ಪಟ್ಟ ವೆಚ್ಚದಲ್ಲಿ ದೊರೆಯುತ್ತವೆ.
ದೊಡ್ಡ ಗಾತ್ರದಲ್ಲಿರುವ ಹಾಗೂ ಜಿಗಿತಗಾರನ ದೇಹ-ತೂಕಕ್ಕೆ ತುಲನಾತ್ಮಕವಾಗಿದ್ದು ಸುಲಭವಾಗಿ ಹತೋಟಿಯಲ್ಲಿಡಬಹುದಾದ ಧುಮುಕುಕೊಡೆಗಳೊಂದಿಗೆ ನವಶಿಷ್ಯರು ಸಾಮಾನ್ಯವಾಗಿ ತಮ್ಮ ಪ್ರಯತ್ನವನ್ನು ಆರಂಭಿಸುತ್ತಾರೆ. ಅವರ ಪರಿಣತಿ ಮತ್ತು ಆತ್ಮವಿಶ್ವಾಸಗಳು ಸುಧಾರಿಸುತ್ತಾ ಹೋದಂತೆ, ಸಣ್ಣದಾಗಿರುವ, ವೇಗವಾಗಿರುವ, ಹೆಚ್ಚು ಪ್ರತಿಕ್ರಿಯಾಶೀಲವಾಗಿರುವ ಧುಮುಕುಕೊಡೆಗಳಿಗೆ ಅವರು ಬಡತಿ ಹೊಂದಬಹುದಾಗಿದೆ. ಕೆಲವೇ ವರ್ಷಗಳ ಕಾಲಾವಧಿಯಲ್ಲಿ ಓರ್ವ ಸಕ್ರಿಯ ಜಿಗಿತಗಾರನು ಧುಮುಕುಕೊಡೆಯ ಛತ್ರಿಗಳನ್ನು ಹಲವಾರು ಬಾರಿ ಬದಲಾಯಿಸಬಹುದು ಮತ್ತು ತನ್ನ ಮೊದಲ ಸಲಕರಣೆ/ಧಾರಕ ಮತ್ತು ಬಾಹ್ಯ ಸಲಕರಣೆಯನ್ನು ಉಳಿಸಿಕೊಳ್ಳಬಹುದು.
ವಯಸ್ಸಾಗಿರುವ ಜಿಗಿತಗಾರರು, ಅದರಲ್ಲೂ ವಿಶೇಷವಾಗಿ ಬೇಸಿಗೆಯಲ್ಲಿನ ವಾರಾಂತ್ಯಗಳಲ್ಲಿ ಮಾತ್ರವೇ ಜಿಗಿತವನ್ನು ಕೈಗೊಳ್ಳುವಂಥವರು, ಮತ್ತೊಂದು ದಿಕ್ಕಿನೆಡೆಗೆ ಕೆಲವೊಮ್ಮೆ ಒಲವು ತೋರುತ್ತಾರೆ; ಅಂದರೆ, ಕೊಂಚಮಟ್ಟಿಗೆ ದೊಡ್ಡ ಗಾತ್ರದ, ಹೆಚ್ಚು ನವಿರಾಗಿರುವ, ಪ್ರತಿ ಜಿಗಿತದಲ್ಲೂ ಹರೆಯದ ತೀವ್ರತೆ ಮತ್ತು ಪ್ರತಿವರ್ತನಗಳನ್ನು ಬಯಸದ ಧುಮುಕುಕೊಡೆಗಳನ್ನು ಅವರು ಆರಿಸುತ್ತಾರೆ. "ಈ ವಲಯದಲ್ಲಿ ವಯಸ್ಸಾದ ಜಿಗಿತಗಾರರಿದ್ದಾರೆ ಮತ್ತು ದಿಟ್ಟ ಜಿಗಿತಗಾರರಿದ್ದಾರೆ, ಆದರೆ ವಯಸ್ಸಾಗಿರುವ, ದಿಟ್ಟ ಜಿಗಿತಗಾರರು ಇಲ್ಲಿ ಕಂಡುಬರುವುದಿಲ್ಲ" ಎಂಬ ನೀತಿಸೂತ್ರಕ್ಕೆ ಅವರು ನಿಷ್ಠರಾಗಿರಬಹುದು ಎನಿಸುತ್ತದೆ.
ಧುಮುಕುಕೊಡೆ ಜಿಗಿತದ ಬಹುತೇಕ ಸಲಕರಣೆಯು ಒಡ್ಡೊಡ್ಡಾಗಿ ವಿನ್ಯಾಸಗೊಳಿಸಲ್ಪಟ್ಟಿರುತ್ತದೆ ಮತ್ತು ನಿವೃತ್ತಿಗೊಳ್ಳಲ್ಪಡುವುದಕ್ಕೆ ಮುಂಚಿತವಾಗಿ ಹಲವಾರು ಮಾಲೀಕರಿಂದ ಬಳಸಲ್ಪಟ್ಟಿರುತ್ತದೆ. ಆದ್ದರಿಂದ, ಖರೀದಿದಾರರು ತಾವು ಮಾಡುವ ಯಾವುದೇ ಸಂಭಾವ್ಯ ಖರೀದಿಗಳನ್ನು ಧುಮುಕುಕೊಡೆಗೆ ಸಂಬಂಧಿಸಿದ ಓರ್ವ ವಿಶೇಷಜ್ಞ- ನೌಕಾಸಜ್ಜುಗಾರನ ಅವಗಾಹನೆಗೆ ತರುವುದು ಅಗತ್ಯ ಎಂಬ ಸಲಹೆಯನ್ನು ನೀಡಲಾಗುತ್ತದೆ. ಓರ್ವ ನೌಕಾಸಜ್ಜುಗಾರನು ಹಾನಿ ಅಥವಾ ತಪ್ಪು ಬಳಕೆಯ ಚಿಹ್ನೆಗಳನ್ನು ಗುರುತಿಸುವಲ್ಲಿ ತರಬೇತಿಯನ್ನು ಪಡೆದವನಾಗಿರುತ್ತಾನೆ. ನೌಕಾಸಜ್ಜುಗಾರರು ಉದ್ಯಮದ ಉತ್ಪನ್ನ ಮತ್ತು ಸುರಕ್ಷತೆಯ ಕುರಿತಾದ ಸಂಕ್ಷಿಪ್ತ ಪ್ರಕಟಣೆಗಳ ಜಾಡು ಅನುಸರಿಸಿ ನಡೆಯುತ್ತಾರೆ. ಆದ್ದರಿಂದ ಒಂದು ಸಲಕರಣೆಯು ಸದ್ಯೋಚಿತವಾಗಿದೆಯೇ ಮತ್ತು ಉಪಯುಕ್ತವಾಗಿದೆಯೇ ಎಂಬುದನ್ನು ನಿರ್ಣಯಿಸುವಲ್ಲಿ ಅವರು ಸಮರ್ಥರಾಗಿರುತ್ತಾರೆ.
ದಾಖಲೆಗಳು
[ಬದಲಾಯಿಸಿ]- ವಿಶ್ವದ ನಾಗರಿಕ ಬೆನ್ನುಸಾಲು ಆಕಾಶನೆಗೆತದ ಅತ್ಯುನ್ನತ ಜಿಗಿತವು ಡೆನ್ಮಾರ್ಕ್ ಮೇಲ್ಭಾಗದಲ್ಲಿ ಜರುಗಿತು.
- ಸ್ವತಂತ್ರ ಪತನದಲ್ಲಿನ ವಿಶ್ವದ ಅತಿದೊಡ್ಡ ವ್ಯೂಹರಚನೆಯು ೨೦೦೬ರ ಫೆಬ್ರುವರಿ ೮ರಂದು ಥೈಲೆಂಡ್ನ ಉಡಾನ್ ಥಾನಿಯಲ್ಲಿ ಜರುಗಿತು (ಸ್ವತಂತ್ರ ಪತನದಲ್ಲಿ ೪೦೦ ಪರಸ್ಪರ ವ್ಯಕ್ತಿಗಳು ಸಂಪರ್ಕಿಸಲ್ಪಟ್ಟಿದ್ದರು).
- ಅತಿದೊಡ್ಡ ತಲೆಕೆಳಗಾಗಿರುವ ವ್ಯೂಹರಚನೆಯು (ಲಂಬವಾಗಿರುವ ವ್ಯೂಹರಚನೆ) ೨೦೦೯ರ ಜುಲೈ ೩೧ರಂದು USAಯ ಇಲಿನಾಯ್ಸ್ನ ಒಟ್ಟಾವಾದಲ್ಲಿರುವ ಸ್ಕೈಡೈವ್ ಚಿಕಾಗೊ ಎಂಬಲ್ಲಿ ಕಂಡುಬಂದಿತು (ತಲೆಯಿಂದ ಭೂಮಿಯೆಡೆಗಿನ ದೇಹಭಂಗಿಯಲ್ಲಿ ೧೦೮ ಮಂದಿ ಆಕಾಶ-ನೆಗೆತಗಾರರು ಪರಸ್ಪರ ಸಂಪರ್ಕಿಸಲ್ಪಟ್ಟಿದ್ದರು).
- ಐರೋಪ್ಯ ದಾಖಲೆಯು ೨೦೧೦ರ ಆಗಸ್ಟ್ ೧೩ರಂದು ಪೋಲೆಂಡ್ನ ವ್ಲೊಕ್ಲಾವೆಕ್ ಎಂಬಲ್ಲಿ ಕಂಡುಬಂದಿತು. ೨೦೧೦ರ ಬಿಗ್ ವೇ ಕ್ಯಾಂಪ್ ಯುರೋ ಸಂದರ್ಭದಲ್ಲಿ ೧೦೪ ಜನರು ಗಾಳಿಯಲ್ಲಿ ಒಂದು ವ್ಯೂಹವನ್ನು ಸೃಷ್ಟಿಸಿದಾಗ, ಪೋಲಿಷ್ ಆಕಾಶ-ನೆಗೆತಗಾರರು ದಾಖಲೆಯೊಂದನ್ನು ಮುರಿದಂತಾಯಿತು. ಸದರಿ ಆಕಾಶನೆಗೆತವು ದಾಖಲೆಯನ್ನು ಮುರಿಯುವಲ್ಲಿನ ಅವರ ಹದಿನೈದನೇ ಪ್ರಯತ್ನವಾಗಿತ್ತು.
- ವಿಶ್ವದ ಅತಿದೊಡ್ಡ ಧುಮುಕುಕೊಡೆ ಛತ್ರಿಯ ವ್ಯೂಹ ರಚನೆನೆಯು ೧೦೦ ಮಂದಿಯನ್ನು ಒಳಗೊಂಡಿದ್ದು, ಇದು USAಯ ಫ್ಲೋರಿಡಾದ ಲೇಕ್ ವೇಲ್ಸ್ನಲ್ಲಿ ೨೦೦೭ರ ನವೆಂಬರ್ ೨೧ರಂದು ಸ್ಥಾಪಿಸಲ್ಪಟ್ಟಿತು. [೨] Archived 2007-09-30 ವೇಬ್ಯಾಕ್ ಮೆಷಿನ್ ನಲ್ಲಿ.[೩] Archived 2007-09-30 ವೇಬ್ಯಾಕ್ ಮೆಷಿನ್ ನಲ್ಲಿ.
- ಅತಿದೊಡ್ಡ ರೆಕ್ಕೆದಿರಿಸು ವ್ಯೂಹರಚನೆಯು USAಯ ಕ್ಯಾಲಿಫೋರ್ನಿಯಾದ ಲೇಕ್ ಎಲ್ಸಿನೋರ್ನಲ್ಲಿ ೨೦೦೮ರ ನವೆಂಬರ್ ೧೨ರಂದು ಕಂಡುಬಂದಿತು (೭೧ ರೆಕ್ಕೆದಿರಿಸು ಜಿಗಿತಗಾರರು).
- ಒಟ್ಟು ೪೦,೦೦೦ಕ್ಕೂ ಹೆಚ್ಚಿನ ಜಿಗಿತಗಳನ್ನು ಮಾಡುವುದರೊಂದಿಗೆ ಡಾನ್ ಕೆಲ್ನರ್ ಎಂಬಾತ ಅತಿಹೆಚ್ಚಿನ ಧುಮುಕುಕೊಡೆ ಜಿಗಿತಗಳಿಗೆ ಸಂಬಂಧಿಸಿದ ದಾಖಲೆಯನ್ನು ಹೊಂದಿದ್ದಾನೆ.[೬]
- ೪೨೦ ಗಂಟೆಗಳಿಗೂ ಹೆಚ್ಚಿನ ಸ್ವತಂತ್ರ ಪತನದ ಅವಧಿಯನ್ನು (೩೦,೦೦೦+ ಜಿಗಿತಗಳು) ಸಾಧಿಸುವುದರೊಂದಿಗೆ ಬಿಲ್ ಡೌಸ್ ಎಂಬಾತ ಅತಿಹೆಚ್ಚು ಸಂಚಯಿತ ಸ್ವತಂತ್ರ ಪತನದ ಅವಧಿಗೆ ಸಂಬಂಧಿಸಿದ ದಾಖಲೆಯನ್ನು ಹೊಂದಿದ್ದಾನೆ.
- ೨೦೦೩ರ ಆಗಸ್ಟ್ನಲ್ಲಿ ಒಟ್ಟು ೧೫,೫೬೦ ಇಳಿಕೆಗಳನ್ನು ಮಾಡುವ ಮೂಲಕ ಚೆರಿಲ್ ಸ್ಟೀರ್ನ್ಸ್ (USA) ಎಂಬಾಕೆಯು ಓರ್ವ ಮಹಿಳೆಯಿಂದ ಮಾಡಲ್ಪಟ್ಟ ಅತಿಹೆಚ್ಚಿನ ಧುಮುಕುಕೊಡೆ ಇಳಿಕೆಗಳಿಗೆ ಸಂಬಂಧಿಸಿದ ದಾಖಲೆಯನ್ನು ಹೊಂದಿದ್ದಾಳೆ.
- ಕ್ಯಾಪ್ಟನ್ ಜೋ W. ಕಿಟಿಂಜರ್ ಎಂಬಾತ ೧೯೬೦ರ ಆಗಸ್ಟ್ ೧೬ರಂದು ಇತಿಹಾಸದಲ್ಲಿನ ಅತ್ಯುನ್ನತವಾದ ಮತ್ತು ಸುದೀರ್ಘವಾದ (೧೪ ನಿಮಿಷ) ಧುಮುಕುಕೊಡೆ ಜಿಗಿತವನ್ನು ಸಾಧಿಸಿದ. ಇದು ಹೆಚ್ಚಿನ-ಉನ್ನತಿಯಲ್ಲಿನ ಪಲಾಯನ ವ್ಯವಸ್ಥೆಗಳನ್ನು ಪರೀಕ್ಷಿಸುವ ಸಲುವಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ವಾಯುಪಡೆಯು ಹಮ್ಮಿಕೊಂಡಿದ್ದ ಒಂದು ಕಾರ್ಯಸೂಚಿಯ ಭಾಗವಾಗಿತ್ತು. ಒಂದು ಒತ್ತಡದ ಉಡುಪನ್ನು ಧರಿಸಿಕೊಂಡಿದ್ದ ಕ್ಯಾಪ್ಟನ್ ಕಿಟಿಂಜರ್, ಆಕಾಶಬುಟ್ಟಿಯೊಂದಕ್ಕೆ ಜೋಡಿಸಲಾಗಿದ್ದ ಒಂದು ತೆರೆದ ತೂಗುತೊಟ್ಟಿಲಿನಲ್ಲಿ ಒಂದೂವರೆ ಗಂಟೆಯ ಅವಧಿಯವರೆಗೆ ಮೇಲೇರಿ 102,800 feet (31,330 m)ನಷ್ಟಿದ್ದ ಒಂದು ಉನ್ನತಿಯನ್ನು ತಲುಪಿ, ನಂತರ ಅಲ್ಲಿಂದ ಜಿಗಿದ. ಈ ಪತನವು ೪ ನಿಮಿಷಗಳು ಮತ್ತು ೩೬ ಸೆಕೆಂಡುಗಳವರೆಗೆ ನಡೆಯಿತು. ಈ ಅವಧಿಯಲ್ಲಿ ಕ್ಯಾಪ್ಟನ್ ಕಿಟಿಂಜರ್ ಗಂಟೆಗೆ ೯೮೮ ಕಿ.ಮೀ.ಯಷ್ಟು (ಗಂಟೆಗೆ ೬೧೪ ಮೈಲಿಗಳು) ವೇಗಗಳನ್ನು ತಲುಪಿದ್ದ.[೭][೮]
- ಸುದೀರ್ಘವಾದ ಸ್ವತಂತ್ರ ಪತನಕ್ಕೆ ಸಂಬಂಧಿಸಿದ ದಾಖಲೆಯನ್ನು ಆಡ್ರಿಯನ್ ನಿಕೋಲಸ್ ಎಂಬಾತ ಹೊಂದಿದ್ದಾನೆ. ಇದು ೧೯೯೯ರ ಮಾರ್ಚ್ ೧೨ರಂದು ನಡೆಸಲಾದ ೪ ನಿಮಿಷಗಳು ಮತ್ತು ೫೫ ಸೆಕೆಂಡುಗಳ ಅವಧಿಯ ಒಂದು ರೆಕ್ಕೆದಿರಿಸು ಜಿಗಿತವಾಗಿತ್ತು.[೪]
- ೬೪೦ ಇಳಿಕೆಗಳನ್ನು ಕೈಗೊಳ್ಳುವ ಮೂಲಕ ಜೇ ಸ್ಟೋಕ್ಸ್ ಎಂಬಾತ ಒಂದೇ ದಿನದಲ್ಲಿ ಮಾಡಲಾದ ಅತಿಹೆಚ್ಚಿನ ಧುಮುಕುಕೊಡೆ ಇಳಿಕೆಗಳಿಗೆ ಸಂಬಂಧಿಸಿದ ದಾಖಲೆಯನ್ನು ಹೊಂದಿದ್ದಾನೆ. [೫] Archived 2011-07-14 ವೇಬ್ಯಾಕ್ ಮೆಷಿನ್ ನಲ್ಲಿ.
- ೧೦೧ ವರ್ಷ ವಯಸ್ಸಿನ ಫ್ರಾಂಕ್ ಮೂಡಿ ಎಂಬ ಓರ್ವ ಅತಿ ವಯಸ್ಸಾದ ಆಕಾಶ-ನೆಗೆತಗಾರನು ಕೈರ್ನ್ಸ್ನ ಸ್ಕೈಡೈವ್ನಲ್ಲಿ ೨೦೦೪ರ ಜೂನ್ ೬ರಂದು ಒಂದು ಬೆನ್ನುಸಾಲು ಜಿಗಿತವನ್ನು ನಿರ್ವಹಿಸಿದ. ಕಾರ್ಲ್ ಐಟ್ರಿಕ್ ಎಂಬಾತ ಬೆನ್ನುಸಾಲು ಪರಿಣತನಾಗಿದ್ದ.
ಇವನ್ನೂ ಗಮನಿಸಿ
[ಬದಲಾಯಿಸಿ]- ನೆಲೆಯ ಜಿಗಿತ
- ಇಳಿಬೀಳುವ ವಲಯ
- ಧುಮುಕುಕೊಡೆ
- ಧುಮುಕುಕೊಡೆ ಇಳಿಕೆಯ ಪತನ
- ಇಳಿಕೊಡೆ ಸೈನಿಕ
- ಸ್ವತಂತ್ರ ಪತನ
- ಬೆನ್ನುಸಾಲು ಆಕಾಶ ನೆಗೆತ
- ರೆಕ್ಕೆದಿರಿಸು
- ಸ್ವಯಂಚಾಲಿತ ಸಕ್ರಿಯಕರಣ ಸಾಧನ
ಟಿಪ್ಪಣಿಗಳು
[ಬದಲಾಯಿಸಿ]- ಮ್ಯಾಲೋನ್, ಜೋ (ಜೂನ್, ೨೦೦೦). ಬರ್ತ್ ಆಫ್ ಫ್ರೀಫ್ಲೈ Archived 2010-10-14 ವೇಬ್ಯಾಕ್ ಮೆಷಿನ್ ನಲ್ಲಿ.. ಸ್ಕೈಡೈವ್ ದಿ ಮ್ಯಾಗ್ .
- ↑ http://www.skydiveoregon.com/skydiving_faq.php# Archived 2010-04-13 ವೇಬ್ಯಾಕ್ ಮೆಷಿನ್ ನಲ್ಲಿ.#೮
- ↑ "Fatality statistics". Archived from the original on 2011-07-20. Retrieved 2011-06-11.
- ↑ "dropzone.com statistics".
- ↑ "How skydiving works".
- ↑ "ಆರ್ಕೈವ್ ನಕಲು". Archived from the original on 2011-07-20. Retrieved 2011-06-11.
- ↑ "Skydiver Breaks His Record With 40,000 Jumps". KPTV Oregon. 24 May 2011. Archived from the original on 1 ಜೂನ್ 2011. Retrieved 30 May 2011.
- ↑ "Fact Sheets : Excelsior Gondola". National Museum of the USAF. Retrieved 2011-01-18.
- ↑ "Fantastic catch in the sky, record leap toward earth". Life. August 29, 1960. Archived from the original on ಡಿಸೆಂಬರ್ 1, 2008. Retrieved ಜೂನ್ 11, 2011.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Skydiving ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles needing additional references from September 2009
- All articles needing additional references
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles with unsourced statements from September 2009
- Articles with hatnote templates targeting a nonexistent page
- Commons link is locally defined
- Articles with Open Directory Project links
- ಧುಮುಕುಕೊಡೆ ಜಿಗಿತ
- ಸೇನಾ ಕ್ರೀಡೆಗಳು