ದೈತ್ಯಾಕಾರದ ಟ್ರಕ್ಕು
This article relies largely or entirely upon a single source. (December 2009) |
ದೈತ್ಯಾಕಾರದ ಟ್ರಕ್ಕು ಎಂಬುದೊಂದು ಸಾಗಣೆಯ ಟ್ರಕ್ಕು ಆಗಿದ್ದು, ಸಾಗಿಸುವ ಟ್ರಕ್ಕುಗಳ ಹೊರ-ಕಾಯಗಳನ್ನು ಮಾದರಿಯಾಗಿಟ್ಟುಕೊಂಡು ಇದನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಅಷ್ಟೇ ಅಲ್ಲ, ಅತೀವವಾಗಿ ದೊಡ್ಡದಾಗಿರುವ ಚಕ್ರಗಳು ಮತ್ತು ಅಕ್ಷಾಧಾರದೊಂದಿಗೆ ಇದನ್ನು ಮಾರ್ಪಡಿಸಲಾಗಿದೆ ಅಥವಾ ಉದ್ದೇಶಪೂರ್ವಕವಾಗಿ ನಿರ್ಮಿಸಲಾಗಿದೆ. ಸ್ಪರ್ಧೆಗಾಗಿ ಮತ್ತು ಜನಪ್ರಿಯ ಕ್ರೀಡಾ ಮನರಂಜನೆಗಾಗಿ ಅವು ಬಳಸಲ್ಪಡುತ್ತವೆ. ಕೆಲವೊಂದು ನಿದರ್ಶನಗಳಲ್ಲಿ ಮೋಟೋಕ್ರಾಸ್ ಓಟದ ಪಂದ್ಯಗಳು, ಕೆಸರಿನಲ್ಲಿ ಹೂತುಹೋಗುವ ಪಂದ್ಯ, ಟ್ರಾಕ್ಟರ್ ಎಳೆತಗಳು ಮತ್ತು ಕಾರು-ತಿನ್ನುವ ಯಂತ್ರಮಾನವರ ಪಂದ್ಯಗಳ ಜೊತೆಜೊತೆಗೆ ಅವು ಕಾಣಿಸಿಕೊಳ್ಳುತ್ತವೆ.
ದೈತ್ಯಾಕಾರದ ಒಂದು ಟ್ರಕ್ಕು ತನ್ನ ಬೃಹತ್ ಟೈರುಗಳ ಅಡಿಯಲ್ಲಿ ಸಣ್ಣ ಗಾತ್ರದ ವಾಹನಗಳನ್ನು ನುಜ್ಜುಗುಜ್ಜು ಮಾಡುವಂಥ ಸಂಗತಿಗಳನ್ನು ದೈತ್ಯಾಕಾರದ ಟ್ರಕ್ಕಿನ ಪ್ರದರ್ಶನವೊಂದು ಕೆಲವೊಮ್ಮೆ ಒಳಗೊಳ್ಳುತ್ತದೆ. ಈ ಟ್ರಕ್ಕುಗಳು ಬಹುತೇಕ ಮನುಷ್ಯ-ನಿರ್ಮಿತ ತಡೆಗೋಡೆಗಳ ಮೇಲೆ ಹತ್ತಿ ಓಡಬಲ್ಲವು. ಆದ್ದರಿಂದ ರಿಮೋಟ್ ಇಗ್ನಿಷನ್ ಇಂಟರಪ್ಟರ್ (RII) ಎಂದು ಕರೆಯಲ್ಪಡುವ ದೂರದ ನಿಲುಗಡೆ ಸ್ವಿಚ್ಚುಗಳೊಂದಿಗೆ ಅವು ಸಜ್ಜುಗೊಂಡಿರುತ್ತವೆ. ಒಂದು ವೇಳೆ ಯಾವುದೇ ಹಂತದಲ್ಲಿ ಚಾಲಕನು ನಿಯಂತ್ರಣವನ್ನು ಕಳೆದುಕೊಂಡಿದ್ದೇ ಆದಲ್ಲಿ, ಅಪಘಾತವೊಂದನ್ನು ತಡೆಗಟ್ಟಲು ಇವು ನೆರವು ನೀಡುತ್ತವೆ. ಕೆಲವೊಂದು ಸ್ಪರ್ಧೆಗಳಲ್ಲಿ, ಏಕಕಾಲಕ್ಕೆ ಕೇವಲ ಒಂದೇ ಒಂದು ಟ್ರಕ್ಕು ಓಟದ ಬಯಲಿನಲ್ಲಿರುತ್ತದೆ. ಉಳಿದಂತೆ ಬಹುತೇಕ ಸ್ಪರ್ಧೆಗಳಲ್ಲಿ ಇಬ್ಬರು ಚಾಲಕರು ಸಮ್ಮಿತೀಯ ಪಥಗಳ ಮೇಲೆ ಪರಸ್ಪರ ಓಟದ ಪೈಪೋಟಿಯಲ್ಲಿ ತೊಡಗಿರುತ್ತಾರೆ; ಸೋತ ಚಾಲಕನನ್ನು ಏಕ-ಹೊರಹಾಕುವಿಕೆ ಪಂದ್ಯಾವಳಿ ಶೈಲಿಯಲ್ಲಿ ತೆಗೆದುಹಾಕಲಾಗುತ್ತದೆ.
ಇತ್ತೀಚಿನ ವರ್ಷಗಳಲ್ಲಿ, ದೈತ್ಯಾಕಾರದ ಟ್ರಕ್ಕಿನ ಅನೇಕ ಸ್ಪರ್ಧೆಗಳು ಒಂದು "ಮುಕ್ತಶೈಲಿಯ" ಸ್ಪರ್ಧೆಯೊಂದಿಗೆ ಕೊನೆಗೊಂಡಿವೆ. ದೈತ್ಯ ಟ್ರಕ್ಕುಗಳ ಜೊತೆಗಿನ ಫಿಗರ್ ಸ್ಕೇಟಿಂಗ್ಗೆ (ಕೇಂದ್ರದಿಂದ ಪ್ರಾರಂಭವಾಗಿ ಅಲ್ಲೇ ಕೊನೆಮುಟ್ಟುವ ಬಗೆಬಗೆಯ ಚಲನವಲನಗಳು) ಕೊಂಚಮಟ್ಟಿಗೆ ಸಮಾನವಾಗಿರುವಂತೆ, ಪಥ ಮತ್ತು ಅದರ ಅಡೆತಡೆಗಳ ಸುತ್ತಲಿನ ತಮ್ಮದೇ ಆದ ಓಟದ ಬಯಲನ್ನು ಆರಿಸಿಕೊಳ್ಳಲು ಚಾಲಕರು ಸ್ವತಂತ್ರರಾಗಿರುತ್ತಾರೆ. ಈ ವಿಭಾಗದಲ್ಲಿ ತೊಡಗಿಕೊಂಡಿರುವ ಸಂದರ್ಭದಲ್ಲಿ, ಚಾಲಕರು ಅನೇಕ ವೇಳೆ "ಡೋನಟ್ಸ್", ಚಕ್ರದ ನಿಲುವುಗಳು ಮತ್ತು ಜಿಗಿತಗಳಂಥ ಭಂಗಿಗಳನ್ನು ಪ್ರಯತ್ನಿಸುತ್ತಾರೆ. ಸಾಮಾನ್ಯವಾಗಿ ಒಂದು ಮೋಟಾರು ನೆಲೆಯನ್ನು ಒಳಗೊಂಡಂತೆ, ಚಾಲಕರು ನುಜ್ಜುಗುಜ್ಜು ಮಾಡುವುದಕ್ಕೆ ಸಂಬಂಧಿಸಿದ ಹೆಚ್ಚುವರಿ ವಸ್ತುಗಳನ್ನು ಪಥದ ಮೇಲೆ ಆಗಾಗ ಇರಿಸಲಾಗುತ್ತದೆ; ಮುಕ್ತಶೈಲಿಯ ಸ್ಪರ್ಧೆಗಳಿಗೆ ಸಂಬಂಧಿಸಿದಂತೆ ಇದು ನಿರ್ದಿಷ್ಟವಾಗಿ ಕಂಡುಬರುತ್ತದೆ. ಪಥದ ಮೇಲೆ ಕೆಲವೊಮ್ಮೆ ಇರಿಸಲಾಗುವ ಇತರ ಅಡೆತಡೆಗಳಲ್ಲಿ ಶಾಲಾ ಬಸ್ಸುಗಳು ಮತ್ತು ಸಣ್ಣದಾದ ವಿಮಾನಗಳು ಸೇರಿರುತ್ತವೆ.
ಇತಿಹಾಸ
[ಬದಲಾಯಿಸಿ]೧೯೭೦ರ ದಶಕದ ಅಂತ್ಯಭಾಗದಲ್ಲಿ, ಮಾರ್ಪಡಿಸಲಾದ ಸಾಗಣೆಯ ಟ್ರಕ್ಕುಗಳು ಜನಪ್ರಿಯವಾಗುತ್ತಿದ್ದವು ಮತ್ತು ಕೆಸರಿನಲ್ಲಿ ಹೂತುಹೋಗುವ ಮತ್ತು ಟ್ರಕ್ಕನ್ನು ಎಳೆಯುವ ಕ್ರೀಡೆಗಳು ಜನಪ್ರಿಯತೆಯನ್ನು ಗಳಿಸುತ್ತಿದ್ದವು. ಇಂಥ ಸ್ಪರ್ಧೆಗಳಲ್ಲಿ ಸ್ಪರ್ಧಿಸಲೆಂದು ಹಲವಾರು ಟ್ರಕ್ಕಿನ ಮಾಲೀಕರು ಮೇಲಕ್ಕೆತ್ತಲ್ಪಟ್ಟ ಟ್ರಕ್ಕುಗಳನ್ನು ಸೃಷ್ಟಿಸಿದ್ದರು. ಅಷ್ಟೇ ಅಲ್ಲ, ಅಭಿವೃದ್ಧಿಪಡಿಸಲ್ಪಟ್ಟ "ಅತಿದೊಡ್ಡ ಟ್ರಕ್ಕು" ಎಂಬ ಪಟ್ಟವನ್ನು ಪಡೆದುಕೊಳ್ಳಲು ಸ್ಪರ್ಧೆಯು ಕೆಲವೇ ದಿನಗಳಲ್ಲಿ ಹುಟ್ಟಿಕೊಂಡಿತು. ಅತೀವವಾಗಿ ರಾಷ್ಟ್ರೀಯ ಗಮನವನ್ನು ಸೆಳೆದುಕೊಂಡ ಟ್ರಕ್ಕುಗಳಲ್ಲಿ ಬಾಬ್ ಚಾಂಡ್ಲರ್ನ ಬಿಗ್ಫೂಟ್, ಎವರೆಟ್ ಜಾಸ್ಮರ್ನ USA-೧, ಫ್ರೆಡ್ ಶಾಫರ್ ಮತ್ತು ಜ್ಯಾಕ್ ವಿಲ್ಮನ್ ಸೀನಿಯರ್ರವರ ಬೇರ್ ಫೂಟ್, ಮತ್ತು ಜೆಫ್ ಡೇನ್ನ ಕಿಂಗ್ ಕಾಂಗ್ ಸೇರಿದ್ದವು. ಆ ಸಮಯದಲ್ಲಿ, ಟ್ರಕ್ಕುಗಳು ಓಡಿಸುತ್ತಿದ್ದ ಅತಿದೊಡ್ಡ ಟೈರುಗಳು ೪೮ ಇಂಚುಗಳಷ್ಟು ವ್ಯಾಸವನ್ನು ಹೊಂದಿರುತ್ತಿದ್ದವು.
ಕಾರುಗಳನ್ನು ನುಜ್ಜುಗುಜ್ಜು ಮಾಡುವಂಥ ಮೊದಲ ದೈತ್ಯಾಕಾರದ ಟ್ರಕ್ಕು ಎಂಬುದಾಗಿ ಬಹುತೇಕವಾಗಿ ನಂಬಲ್ಪಟ್ಟ ಕಾರುಗಳನ್ನು ೧೯೮೧ರ ಏಪ್ರಿಲ್ನಲ್ಲಿ ಮೈದಾನವೊಂದರಲ್ಲಿ ಬಾಬ್ ಚಾಂಡ್ಲರ್ ಚಾಲನೆ ಮಾಡಿದ. ಟ್ರಕ್ಕಿನ ಸಾಮರ್ಥ್ಯವನ್ನು ಪರೀಕ್ಷಿಸುವ ಒಂದು ಕ್ರಮವಾಗಿ ಚಾಂಡ್ಲರ್ ಮೈದಾನವೊಂದರಲ್ಲಿನ ಒಂದು ಜೋಡಿ ಕಾರುಗಳ ಮೇಲೆ ಬಿಗ್ಫೂಟ್ ಟ್ರಕ್ಕನ್ನು ಚಲಾಯಿಸಿದ, ಮತ್ತು ತಾನು ಹೊಂದಿದ್ದ ನಾಲ್ಕು ಚಕ್ರ ಚಾಲನೆಯ ಕಾರ್ಯಸಾಧನೆ ಮಳಿಗೆಯಲ್ಲಿ ಒಂದು ಪ್ರಚಾರದ ಸಾಧನವಾಗಿ ಬಳಸುವುದಕ್ಕಾಗಿ ಈ ಸಾಹಸವನ್ನು ಚಿತ್ರೀಕರಿಸಿದ. ಕಾರು ನುಜ್ಜುಗುಜ್ಜಾಗುವುದರ ವಿಡಿಯೋವನ್ನು ಸ್ಪರ್ಧೆಯ ಪ್ರವರ್ತಕನೊಬ್ಬ ನೋಡಿದ ಮತ್ತು ಜನಸಂದಣಿಯ ಸಮ್ಮುಖದಲ್ಲಿ ಇದನ್ನು ಕೈಗೊಳ್ಳುವಂತೆ ಚಾಂಡ್ಲರ್ನನ್ನು ಕೇಳಿಕೊಂಡ. ಬಿಗ್ಫೂಟ್ ಟ್ರಕ್ಕಿನೊಂದಿಗೆ ತಳುಕುಹಾಕಿಕೊಳ್ಳಬಹುದಾದ "ವಿಧ್ವಂಸಕ" ಕಲ್ಪನೆಯ ಕಾರಣದಿಂದ ಆರಂಭದಲ್ಲಿ ಅರೆ-ಮನಸ್ಸನ್ನು ತೋರಿಸಿದ ಚಾಂಡ್ಲರ್ ಅಂತಿಮವಾಗಿ ಮಣಿದ. ಸಣ್ಣ ಗಾತ್ರದ ಒಂದಷ್ಟು ಪ್ರದರ್ಶನಗಳ ನಂತರ, ೧೯೮೨ರಲ್ಲಿ ಪಾಂಟಿಯಾಕ್ ಸಿಲ್ವರ್ಡೋಮ್ನಲ್ಲಿ ಚಾಂಡ್ಲರ್ ಸದರಿ ಸಾಹಸಕಾರ್ಯದ ಪ್ರದರ್ಶನ ನೀಡಿದ. ಈ ಪ್ರದರ್ಶನದಲ್ಲಿ, ೬೬ ಇಂಚು (೧.೭ ಮೀ) ವ್ಯಾಸದ ಟೈರುಗಳನ್ನು ಹೊಂದಿದ್ದ ಬಿಗ್ಫೂಟ್ ಟ್ರಕ್ಕಿನ ಹೊಸ ಆವೃತ್ತಿಯೊಂದನ್ನೂ ಚಾಂಡ್ಲರ್ ಪರಿಚಯಿಸಿದ. ಬಿಗ್ಫೂಟ್ ದೈತ್ಯ ಟ್ರಕ್ಕು ಇನ್ನೂ ೪೮″ ಟೆರ ಟೈರುಗಳನ್ನು ಓಡಿಸುತ್ತಿದ್ದಂಥ ೮೦ರ ದಶಕದ ಆರಂಭಿಕ ಭಾಗದಲ್ಲಿನ ಪೂರ್ವಭಾವಿ ಸ್ಪರ್ಧೆಯೊಂದರಲ್ಲಿ, ಟ್ರಕ್-ಎ-ರಾಮಾ ಎಂಬ ಹೆಸರಿನ (ಈಗ ಆ ಹೆಸರು USHRA ಎಂದಾಗಿದೆ) ಮೋಟಾರುಕ್ರೀಡೆಯ ಪ್ರವರ್ತನಾ ಕಂಪನಿಯೊಂದರ ಮಾಲೀಕರಲ್ಲಿ ಒಬ್ಬನಾದ ಬಾಬ್ ಜಾರ್ಜ್ ಎಂಬಾತ, ಬಿಗ್ಫೂಟ್ ಟ್ರಕ್ಕಿಗೆ ಉಲ್ಲೇಖಿಸುವಾಗ "ದೈತ್ಯಾಕಾರದ ಟ್ರಕ್ಕು" (ಮಾನ್ಸ್ಟರ್ ಟ್ರಕ್) ಎಂಬ ಪದಗುಚ್ಛವನ್ನು ರೂಪಿಸಿದ ಎಂದು ಹೇಳಲಾಗುತ್ತದೆ. ಅಂದಿನಿಂದ "ದೈತ್ಯಾಕಾರದ ಟ್ರಕ್ಕು" ಎಂಬ ಪರಿಭಾಷೆಯು ಅತಿಗಾತ್ರದ ಟೆರ ಟೈರುಗಳನ್ನು ಹೊಂದಿರುವ ಎಲ್ಲಾ ಟ್ರಕ್ಕುಗಳಿಗೆ ಮೀಸಲಾದ ಸಾರ್ವತ್ರಿಕ ಹೆಸರಾಗಿ ಹೋಯಿತು.
ಮೊದಲ ಬಾರಿಗೆ ಕಾರನ್ನು ನುಜ್ಜುಗುಜ್ಜಾಗಿಸಿದ್ದು ಯಾರು ಎಂಬುದರ ಕುರಿತಾಗಿ ಹಲವು ಬಾರಿ ಚರ್ಚೆಗಳು ನಡೆದವು. ೧೯೭೦ರ ದಶಕದ ಅಂತ್ಯಭಾಗದಲ್ಲಿ, ಜೆಫ್ ಡೇನ್ನ (ಈತ ತನ್ನ ಟ್ರಕ್ಕಿಗೆ "ಬಿಗ್ಗರ್ ಫೂಟ್" ಎಂಬುದಾಗಿ ಉಲ್ಲೇಖಿಸಿದ್ದ) ಕಿಂಗ್ ಕಾಂಗ್ ಎಂಬ ದೈತ್ಯ ಟ್ರಕ್ಕು, ವಿಸ್ಕಾನ್ಸಿನ್ನ ಯೂನಿಯನ್ ಗ್ರೂವ್ನಲ್ಲಿನ ಗ್ರೇಟ್ ಲೇಕ್ಸ್ ಡ್ರಾಗ್ವೇಯಲ್ಲಿ ಕಾರುಗಳನ್ನು ನುಜ್ಜುಗುಜ್ಜಾಗಿಸಿತ್ತು ಎಂಬುದರ ಕುರಿತಾದ ಸಮರ್ಥನೆಗಳಿವೆ. ಹೈ ರೋಲರ್ ಎಂದು ಹೆಸರಾಗಿದ್ದ ಮತ್ತೊಂದು ಟ್ರಕ್ಕು ಕೂಡಾ ಬಿಗ್ಫೂಟ್ಗಿಂತ ಮುಂಚಿತವಾಗಿ ವಾಷಿಂಗ್ಟನ್ ಸಂಸ್ಥಾನದಲ್ಲಿ ಕಾರಿನ ನುಜ್ಜುಗುಜ್ಜುಗಳನ್ನು ದಾಖಲಿಸಿದೆ ಎಂದು ಸಮರ್ಥಿಸಲಾಗುತ್ತದೆಯಾದರೂ, ಸದರಿ ಸಾಕ್ಷ್ಯ ಸಂಗ್ರಹವು ಎಂದಿಗೂ ಬಹಿರಂಗವಾಗಲಿಲ್ಲ. ಆ ಕಾಲದಲ್ಲಿ ಡೈಕ್ಮನ್ ಬ್ರದರ್ಸ್ ಸ್ವಾಮ್ಯದಲ್ಲಿದ್ದ ಸೈಕ್ಲಾಪ್ಸ್ ಎಂಬ ದೈತ್ಯ ಟ್ರಕ್ಕೂ ಸಹ ಬಿಗ್ಫೂಟ್ಗಿಂತ ಮುಂಚಿತವಾಗಿ ದಹಿಸುತ್ತಿರುವ ಕಾರುಗಳನ್ನು ನುಜ್ಜುಗುಜ್ಜಾಗಿಸಿತ್ತು ಎಂಬ ಸಮರ್ಥನೆಗಳನ್ನು ನೀಡಲಾಗುತ್ತದೆ. ಆದಾಗ್ಯೂ, ಕಾರುಗಳನ್ನು ನುಜ್ಜುಗುಜ್ಜು ಮಾಡುತ್ತಿರುವ ಒಂದು ದೈತ್ಯಾಕಾರದ ಟ್ರಕ್ಕನ್ನು ಪ್ರದರ್ಶಿಸುತ್ತಿರುವ ಅತಿಮುಂಚಿನ, ವ್ಯಾಪಕವಾಗಿ-ಲಭ್ಯವಿರುವ ಮತ್ತು ಪ್ರಮಾಣೀಕೃತ ವಿಡಿಯೋ ತುಣುಕೊಂದು ಲಭ್ಯವಿದ್ದು, ಬಿಗ್ಫೂಟ್ ದೈತ್ಯ ಟ್ರಕ್ಕನ್ನು ಬಾಬ್ ಚಾಂಡ್ಲರ್ ಚಾಲಿಸುತ್ತಿರುವುದನ್ನು ಅದು ತೋರಿಸುತ್ತದೆ; ೧೯೮೧ರ ಏಪ್ರಿಲ್ನಲ್ಲಿ, ಎಪ್ಪತ್ತರ ದಶಕದ-ಮಧ್ಯಭಾಗಕ್ಕೆ ಸೇರಿದ ಎರಡು ಮೋಟಾರು ವಾಹನಗಳನ್ನು ಸದರಿ ಟ್ರಕ್ಕು ನುಜ್ಜುಗುಜ್ಜು ಮಾಡುತ್ತಿರುವುದು ಇದರಲ್ಲಿ ದಾಖಲಾಗಿದೆ. ಜನಸಂದಣಿಯ ಸಮ್ಮುಖದಲ್ಲಿ ಕಾರನ್ನು ನುಜ್ಜುಗುಜ್ಜಾಗಿಸುವ ಪ್ರದರ್ಶನವನ್ನು ನೀಡುವಂತೆ ಚಾಂಡ್ಲರ್ನನ್ನು ಸ್ಪರ್ಧೆಯ ಪ್ರವರ್ತಕನು ಕೇಳಿಕೊಳ್ಳಲು ಪ್ರಚೋದಿಸಿದ್ದು ಇದೇ ವಿಡಿಯೋ ಎಂಬುದು ಗಮನಾರ್ಹ ಸಂಗತಿ.
ಬಿಗ್ಫೂಟ್ ಹೊಂದಿದ್ದ 66-inch-diameter (1,700 mm) ಟೈರುಗಳನ್ನು ಕಿಂಗ್ ಕಾಂಗ್ ಮತ್ತು ಬೇರ್ ಫೂಟ್ ಟ್ರಕ್ಕುಗಳೆರಡೂ ಅನುಸರಿಸಿದವು. ಕೆಲವೇ ದಿನಗಳಲ್ಲಿ ಕಿಂಗ್ ಕ್ರಂಚ್, ಮ್ಯಾಡ್ಡಾಗ್, ಮತ್ತು ವರ್ಜೀನಿಯಾ ಜೈಂಟ್ನಂಥ ದೈತ್ಯಾಕಾರದ ಟ್ರಕ್ಕುಗಳು ನಿರ್ಮಾಣಗೊಳ್ಳಲು ಶುರುವಾದವು. ಈ ಆರಂಭಿಕ ಟ್ರಕ್ಕುಗಳನ್ನು ಪೀಠದ ಅಡಿಗಟ್ಟಿನಿಂದ ನಿರ್ಮಿಸಲಾಗಿದ್ದು, ಈ ಅಡಿಗಟ್ಟುಗಳು ಅತೀವವಾಗಿ ಬಲವರ್ಧಿಸಲ್ಪಟ್ಟಿದ್ದವು; ಎಲೆ ಸ್ಪ್ರಿಂಗಿನ ಅಕ್ಷಾಧಾರ, ಒಂದು ಆಧಾರಪೀಠದ ಕಾಯ, ಹಾಗೂ ಟೈರುಗಳಿಗೆ ಆಧಾರವಾಗಿರಲೆಂದು ಬಳಸಿದ ಭಾರೀ ಸೇನಾ ಅಚ್ಚುಗಳನ್ನು ಇದು ಒಳಗೊಂಡಿತ್ತು. ಇದರ ಪರಿಣಾಮವಾಗಿ, ಟ್ರಕ್ಕುಗಳು ನಂಬಲಸಾಧ್ಯವೆಂಬಂತೆ ಭಾರೀ (ಸಾಮಾನ್ಯವಾಗಿ ೧೩,೦೦೦ರಿಂದ ೨೦,೦೦೦ ಪೌಂಡು) ಸ್ವರೂಪವನ್ನು ಪಡೆದುಕೊಂಡಿದ್ದವು ಕಾರುಗಳೆಡೆಗೆ ಸಾಗಬೇಕಾಗಿ ಬಂದಾಗ ಬಹುತೇಕ ವೇಳೆ ಅವು ಮಂದಗತಿಯಲ್ಲಿ ಸಾಗಬೇಕಾಗಿ ಬರುತ್ತಿತ್ತು.
೧೯೮೦ರ ದಶಕದ ಆರಂಭದ ಬಹುತೇಕ ಅವಧಿಯವರೆಗೆ, ಟ್ರಕ್ಕು ಎಳೆಯುವಿಕೆಯ ಅಥವಾ ಕೆಸರಿನಲ್ಲಿ ಹೂತುಹೋಗುವಿಕೆಯ ಸ್ಪರ್ಧೆಗಳಲ್ಲಿನ ಒಂದು ಪಾರ್ಶ್ವ ಪ್ರದರ್ಶನವಾಗಿ ದೈತ್ಯಾಕಾರದ ಟ್ರಕ್ಕುಗಳು ಸಾರ್ವಜನಿಕ ಪ್ರದರ್ಶನಗಳಲ್ಲಿ ಪ್ರಧಾನವಾಗಿ ಪ್ರದರ್ಶನ ನೀಡಿದವು. ೧೯೮೫ರಲ್ಲಿ, USHRA ಮತ್ತು TNT ಮೋಟಾರ್ಸ್ಪೋರ್ಟ್ಸ್ನಂಥ ಪ್ರಮುಖ ಪ್ರವರ್ತಕರು ಒಂದು ನಿಯತವಾದ ಆಧಾರದ ಮೇಲೆ ದೈತ್ಯಾಕಾರದ ಟ್ರಕ್ಕುಗಳನ್ನು ಓಟದ ಪಂದ್ಯದಲ್ಲಿ ಬಳಸಲು ಶುರುಮಾಡಿದರು. ಸದರಿ ಓಟದ ಪಂದ್ಯಗಳು, ಅವು ಇಂದು ಇರುವ ರೀತಿಯಲ್ಲಿ ಏಕ ಹೊರಹಾಕುವಿಕೆಯ ವೇಗಸ್ಪರ್ಧೆಯ ಓಟದ ಪಂದ್ಯಗಳ ಸ್ವರೂಪದಲ್ಲಿದ್ದವು ಮತ್ತು ಅಡೆತಡೆಗಳನ್ನು ಸಿಕ್ಕಾಪಟ್ಟೆ ಹರಡಲಾದ ಒಂದು ಪಥದ ಮೇಲೆ ಅವನ್ನು ಆಯೋಜಿಸಲಾಗುತ್ತಿತ್ತು. ಓಟದ ಪಂದ್ಯಕ್ಕೆ ತರಲಾದ ಬದಲಾವಣೆಯು ಅಂತಿಮವಾಗಿ, ಹೆಚ್ಚು ಶಕ್ತಿಯೊಂದಿಗಿನ ಹಗುರವಾದ ಟ್ರಕ್ಕುಗಳನ್ನು ಟ್ರಕ್ಕು ಮಾಲೀಕರು ನಿರ್ಮಿಸುವುದಕ್ಕೆ ಮುಂದಾಗಲು ಕಾರಣವಾಯಿತು. ೧೯೮೮ರಲ್ಲಿ TNT ವತಿಯಿಂದ ಸ್ಥಾಪಿಸಲ್ಪಟ್ಟ ದೈತ್ಯಾಕಾರದ ಟ್ರಕ್ಕುಗಳ ಅಂಕಗಳ ಮೊಟ್ಟಮೊದಲ ಚಾಂಪಿಯನ್ಗಿರಿಯು ಈ ಪ್ರಕ್ರಿಯೆಯನ್ನು ಚುರುಕುಗೊಳಿಸಿತು. ಅಷ್ಟೇ ಅಲ್ಲ, ನೇರ-ಪಟ್ಟಿಯ ಚೌಕಟ್ಟುಗಳು, ಫೈಬರ್ಗ್ಲಾಸ್ ಕಾಯಗಳು, ಮತ್ತು ತೂಕವನ್ನು ತೆಗೆದುಹಾಕಿ ವೇಗವನ್ನು ಗಳಿಸಲು ನೆರವಾಗುವ ಹಗುರವಾದ ಅಚ್ಚಿನ ಬಿಡಿಭಾಗಗಳನ್ನು ತಂಡಗಳು ಬಳಸುವುದಕ್ಕೆ ಆರಂಭಿಸಿದ್ದೂ ಈ ಸಂದರ್ಭದಲ್ಲಿ ಕಂಡುಬಂದಿತು.
೧೯೮೮ರಲ್ಲಿ, ಟ್ರಕ್ಕಿನ ನಿರ್ಮಾಣ ಮತ್ತು ಸುರಕ್ಷತೆಗೆ ಸಂಬಂಧಿಸಿದ ನಿಯಮಗಳನ್ನು ಪ್ರಮಾಣಕವಾಗಿಸುವ ದೃಷ್ಟಿಯಿಂದ ಮಾನ್ಸ್ಟರ್ ಟ್ರಕ್ ರೇಸಿಂಗ್ ಅಸೋಸಿಯೇಷನ್ (MTRA) ಎಂಬ ಸಂಸ್ಥೆಯನ್ನು ಬಾಬ್ ಚಾಂಡ್ಲರ್, ಬ್ರೇಡನ್, ಮತ್ತು ಜಾರ್ಜ್ ಕಾರ್ಪೆಂಟರ್ ರೂಪಿಸಿದರು. ದೈತ್ಯಾಕಾರದ ಟ್ರಕ್ಕುಗಳನ್ನು ನಿರ್ವಹಿಸುವ ಸಲುವಾಗಿರುವ ಪ್ರಮಾಣಕ ಸುರಕ್ಷತಾ ನಿಯಮಗಳನ್ನು MTRA ಸೃಷ್ಟಿಸಿತು. USA ಮತ್ತು EU ವಲಯಗಳಲ್ಲಿನ ಕ್ರೀಡೆಯ ಅಭಿವೃದ್ಧಿಯಲ್ಲಿ ಈ ಸಂಘಟನೆಯು ಈಗಲೂ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಓಟದ ಪಂದ್ಯವು ಆದ್ಯತೆಯನ್ನು ಪಡೆಯುವುದರೊಂದಿಗೆ, ಟ್ರಕ್ಕುಗಳನ್ನು ಹೇಗೆ ನಿರ್ಮಿಸಬಹುದು ಎಂಬುದರ ಕುರಿತಾದ ಹೊಸ ಮಾರ್ಗಗಳನ್ನು ಆಲೋಚಿಸುವುದಕ್ಕೆ ಹಲವಾರು ತಂಡಗಳು ಶುರುಮಾಡಿದವು. ೧೯೮೮ರ ಅಂತ್ಯದ ವೇಳೆಗೆ, ಈಕ್ವಲೈಜರ್ ಎಂಬ ಟ್ರಕ್ಕನ್ನು ಗ್ಯಾರಿ ಕುಕ್ ಮತ್ತು ಡೇವಿಡ್ ಮೋರಿಸ್ ಪರಿಚಯಿಸಿದರು. ಇದು ಅಕ್ಷಾಧಾರದ ಮುಖ್ಯ ಮೂಲವಾಗಿ ಎಲೆ ಸ್ಪ್ರಿಂಗುಗಳು ಮತ್ತು ಆಘಾತ ಗ್ರಾಹಕಗಳ ಪ್ರಮಾಣಕದ ಬದಲಿಗೆ ಸುರುಳಿ ಸ್ಪ್ರಿಂಗುಗಳು ಮತ್ತು ಆಘಾತ ಗ್ರಾಹಕಗಳ ಒಂದು ಸಂಯೋಜನೆಯನ್ನು ಒಳಗೊಂಡಿತ್ತು. ೧೯೮೯ರಲ್ಲಿ, ಜ್ಯಾಕ್ ವಿಲ್ಮನ್ ಸೀನಿಯರ್ ಎಂಬಾತ ಟಾರಸ್ ಎಂಬ ತನ್ನದೇ ಟ್ರಕ್ಕಿನೊಂದಿಗೆ ಒಂದು ಹೊಸ ಟ್ರಕ್ಕನ್ನು ಪರಿಚಯಿಸಿದ. ಇದು ನಾಲ್ಕು-ಕೊಂಡಿಯ ಒಂದು ಅಕ್ಷಾಧಾರ ವ್ಯವಸ್ಥೆ ಮತ್ತು ಸುರುಳಿ ಸುತ್ತಿದ ದೊಡ್ಡ ಆಘಾತ ಗ್ರಾಹಕಗಳನ್ನು ಬಳಸಿಕೊಂಡಿತ್ತು ಹಾಗೂ ಸರಿಸುಮಾರು ೯,೦೦೦ ಪೌಂಡುಗಳಷ್ಟು ತೂಗುತ್ತಿತ್ತು. ಆದಾಗ್ಯೂ, ಅಂತಿಮವಾದ ಕೊನೆಯ ಹೊಡೆತವು ೧೯೮೯ರಲ್ಲಿಯೇ ಚಾಂಡ್ಲರ್ನಿಂದ ಬಂದಿತು. ಈತನ ಬಿಗ್ಫೂಟ್ VIII ಎಂಬ ಟ್ರಕ್ಕು ಸಂಪೂರ್ಣ ಕೊಳವೆಯಾಕಾರದ ಒಂದು ಅಡಿಗಟ್ಟು ಮತ್ತು ದೀರ್ಘ-ಪ್ರಯಾಣದ ಒಂದು ಅಕ್ಷಾಧಾರವನ್ನು ಒಳಗೊಂಡಿತ್ತು; ಹಾಗೂ ಅಕ್ಷಾಧಾರವನ್ನು ನಿಯಂತ್ರಿಸಲು ಚಾಚುತೊಲೆಗಳು ಮತ್ತು ಸಾರಜನಕದ ಆಘಾತ ಗ್ರಾಹಕಗಳನ್ನು ಇದರಲ್ಲಿ ಬಳಸಲಾಗಿತ್ತು. ದೈತ್ಯಾಕಾರದ ಟ್ರಕ್ಕುಗಳು ಹೇಗೆ ನಿರ್ಮಿಸಲ್ಪಡಬೇಕು ಎಂಬುದರ ಕುರಿತಾಗಿ ಈ ಟ್ರಕ್ಕು ಕ್ರಾಂತಿಕಾರ ಬದಲಾವಣೆಯನ್ನು ಮಾಡಿತು ಹಾಗೂ ಕೆಲವೇ ವರ್ಷಗಳ ಒಳಗಾಗಿ ಅತ್ಯಂತ ಉನ್ನತ ಮಟ್ಟದ ತಂಡಗಳು ಇದೇ ರೀತಿಯ ವಾಹನಗಳನ್ನು ನಿರ್ಮಿಸಿದವು.
೧೯೯೧ರಲ್ಲಿ TNT ಕಂಪನಿಯನ್ನು USHRA ಖರೀದಿಸಿತು ಹಾಗೂ ಅವುಗಳ ಅಂಕಗಳ ಸರಣಿಗಳು ವಿಲೀನಗೊಂಡವು. ಸ್ಪೆಷಲ್ ಇವೆಂಟ್ಸ್ ಚಾಂಪಿಯನ್ಗಿರಿಯು ತಂಡಗಳ ವಲಯದಲ್ಲಿ ಜನಪ್ರಿಯತೆಯನ್ನು ಬೆಳೆಸಿಕೊಳ್ಳುತ್ತಾ ಹೋಯಿತು; ಆಹ್ವಾನಿತರಿಗೆ-ಮಾತ್ರವೇ ಇದ್ದ USHRA ಚಾಂಪಿಯನ್ಗಿರಿಯು ಹೊಂದಿರದ ಮುಕ್ತ ಅರ್ಹತಾ ಸ್ಥಾನಗಳನ್ನು ಈ ಚಾಂಪಿಯನ್ಗಿರಿಯು ಹೊಂದಿದ್ದೇ ಇದಕ್ಕೆ ಕಾರಣವಾಗಿತ್ತು. ೧೯೯೬ರಲ್ಲಿ ಸ್ಪೆಷಲ್ ಇವೆಂಟ್ಸ್ ಸರಣಿಯು ತನ್ನ ಪೆಂಡಲೈನರ್ ಪ್ರಾಯೋಜಕತ್ವವನ್ನು ಕಳೆದುಕೊಂಡಿತಾದರೂ, ಈ ಸರಣಿಯು ಈಗಲೂ ಚಾಲ್ತಿಯಲ್ಲಿದೆ. ಅಲ್ಪಕಾಲಿಕ ಪ್ರೋMT ಸರಣಿಯು ೨೦೦೦ನೇ ಇಸವಿಯಲ್ಲಿ ಆರಂಭವಾಯಿತು.
ಓಟದ ಪಂದ್ಯವು ಒಂದು ಸ್ಪರ್ಧೆಯಾಗಿ ಪ್ರಬಲವಾಗಿತ್ತಾದರೂ, USHRA ಸ್ಪರ್ಧೆಗಳು ೧೯೯೩ರಷ್ಟು ಮುಂಚೆಯೇ ಮುಕ್ತಶೈಲಿಯ ಸಾರ್ವಜನಿಕ ಪ್ರದರ್ಶನಗಳನ್ನು ಶುರುಮಾಡಿದ್ದವು. ಚಾಲಕರು, ಅದರಲ್ಲೂ ಗಮನಾರ್ಹವಾಗಿ ಅತೀವವಾಗಿ ಜನಪ್ರಿಯವಾಗಿದ್ದ ಗ್ರೇವ್ ಡಿಗ್ಗರ್ನ ಚಾಲಕನಾಗಿದ್ದ ಡೆನಿಸ್ ಆಂಡರ್ಸನ್ನಂಥವರು, ಓಟದ ಪಂದ್ಯದ ಆರಂಭಿಕ ಸುತ್ತುಗಳಲ್ಲಿ ಒಂದುವೇಳೆ ತಾವು ಸೋತದ್ದೇ ಆದಲ್ಲಿ ಅದರಿಂದ ಹೊರಗೆಬಂದು ಪ್ರದರ್ಶನ ನೀಡುವುದಕ್ಕೆ ಕಾಲಾವಕಾಶ ಬೇಕೆಂದು ಕೇಳುವುದಕ್ಕೆ ಶುರುಮಾಡಿದ ಕಾರಣದಿಂದ ಈ ಸಾರ್ವಜನಿಕ ಪ್ರದರ್ಶನಗಳು ಅಭಿವೃದ್ಧಿಪಡಿಸಲ್ಪಟ್ಟವು. ಅಭಿಮಾನಿಗಳ ವಲಯದಲ್ಲಿ ಮುಕ್ತಶೈಲಿಯ ಪ್ರದರ್ಶನಗಳ ಪಡೆದ ಜನಪ್ರಿಯತೆಯನ್ನು ಪ್ರವರ್ತಕರು ಗಮನಿಸಲು ಶುರುಮಾಡಿದರು, ಮತ್ತು ೨೦೦೦ನೇ ಇಸವಿಯಲ್ಲಿ ಮುಕ್ತಶೈಲಿಯ ಪ್ರದರ್ಶನಗಳನ್ನು ಪಂದ್ಯಗಳಲ್ಲಿನ ಒಂದು ನಿರ್ಣಯಿತ ಸ್ಪರ್ಧೆಯಾಗಿ ಪರಿಗಣಿಸಲು USHRA ಶುರುಮಾಡಿತು ಹಾಗೂ ಈಗ ಅದು ಮುಕ್ತಶೈಲಿಯ ಪ್ರದರ್ಶನದ ಒಂದು ಚಾಂಪಿಯನ್ಗಿರಿಯನ್ನೂ ನೀಡುತ್ತದೆ.
ಮಾನ್ಸ್ಟರ್ ಜ್ಯಾಮ್ ಪ್ರಸಕ್ತವಾಗಿ ದೈತ್ಯಾಕಾರದ ಟ್ರಕ್ಕುಗಳ ಪಂದ್ಯದ ಅತಿದೊಡ್ಡ ಮತ್ತು ಪ್ರಧಾನ ಪ್ರವರ್ತಕನಾಗಿದ್ದು, ಇದು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಮಾತ್ರವೇ ಅಲ್ಲದೇ ಕೆನಡಾದ ಮತ್ತು ಯುರೋಪ್ನ ಆಯ್ದ ಪ್ರದೇಶಗಳ ಮೂಲಕ ಪ್ರವಾಸ ಮಾಡುತ್ತಿದೆ. ದೈತ್ಯಾಕಾರದ ಟ್ರಕ್ಕಿನ ಪಂದ್ಯಗಳ ಇತರ ಪ್ರವರ್ತಕರಲ್ಲಿ ಚೆಕರ್ಡ್ ಫ್ಲ್ಯಾಗ್ ಪ್ರೊಡಕ್ಷನ್ಸ್, AMP ಟೂರ್, ಸ್ಪೆಷಲ್ ಇವೆಂಟ್ಸ್ ೪ ವೀಲ್ & ಆಫ್ ರೋಡ್ ಜ್ಯಾಂಬೊರೀ, ಮೇಜರ್ ಲೀಗ್ ಆಫ್ ಮಾನ್ಸ್ಟರ್ ಟ್ರಕ್ಸ್, ಎಕ್ಸ್ಟ್ರೀಮ್ ಮಾನ್ಸ್ಟರ್ ಟ್ರಕ್ ನ್ಯಾಷನಲ್ಸ್, MTRSS, ಮಾನ್ಸ್ಟರ್ ಟ್ರಕ್ ಚಾಲೆಂಜ್ ಮತ್ತು ಮಾನ್ಸ್ಟರ್ ನ್ಯಾಷನಲ್ಸ್ ಮೊದಲಾದವು ಸೇರಿವೆ.
ಟ್ರಕ್ಕಿನ ವಿನ್ಯಾಸ
[ಬದಲಾಯಿಸಿ]ಆಧುನಿಕವಾದ ಒಂದು ದೈತ್ಯಾಕಾರದ ಟ್ರಕ್ಕು ಪ್ರಮಾಣಾನುಸಾರ ವರ್ಧಿಸಿದ, ನಾಲ್ಕು ಚಕ್ರದ ಚಾಲನೆಯ ಡ್ಯೂನ್ ಬಗಿಯನ್ನು ಹೆಚ್ಚು ಹೋಲುತ್ತದೆ. ಅಂತೆಯೇ, ಸಾಮಾನ್ಯವಾಗಿ ಅವು ವಾಸ್ತವಿಕ "ಟ್ರಕ್ಕುಗಳಲ್ಲ" ಮತ್ತು ವಾಹನಗಳ ಮೇಲೆ ಬಳಸಲಾದ ಫೈಬರ್ಗ್ಲಾಸ್ ಕಾಯಗಳ ಸಾಮಾನ್ಯ ಶೈಲಿಯ ಕಾರಣದಿಂದಾಗಿ ಮಾತ್ರವೇ ಅವು ತಮ್ಮ ಹೆಸರನ್ನು ಕಾಯ್ದುಕೊಂಡು ಹೋಗುತ್ತವೆ. ಟ್ರಕ್ಕುಗಳು ಈಗ ಅಗತ್ಯಾನುಸಾರ ರೂಪಿಸಲಾದ ಕೊಳವೆಯಾಕಾರದ ಅಡಿಗಟ್ಟನ್ನು ಹೊಂದಿದ್ದು, ನಾಲ್ಕು ಅಡಿಗಳಷ್ಟರವರೆಗಿನ ಯಂತ್ರಾವಕಾಶವನ್ನು ಒದಗಿಸುವುದಕ್ಕಾಗಿ ಇದು ನಾಲ್ಕು-ಕೊಂಡಿಯ ಅಕ್ಷಾಧಾರಗಳನ್ನು ಒಳಗೊಂಡಿದೆ. ಬಹುತೇಕ ಟ್ರಕ್ಕುಗಳಲ್ಲಿ ಚಾಲಕನ ಸ್ವಲ್ಪವೇ ಹಿಂಭಾಗದಲ್ಲಿ ಎಂಜಿನುಗಳನ್ನು ಅಳವಡಿಸಲಾಗಿದ್ದು, ಇವು ವಿಶಿಷ್ಟವಾಗಿ ಅತಿಯಾಗಿ ಪರ್ಯಾಪ್ತಗೊಳಿಸಲ್ಪಟ್ಟಿವೆ ಮತ್ತು ಮದ್ಯಸಾರವನ್ನು (ಆಲ್ಕಹಾಲ್) ಆಧರಿಸಿ ಚಾಲನೆಗೊಳಗಾಗುತ್ತವೆ; ಇವು ೫೭೫ ಘನ ಇಂಚುಗಳಷ್ಟರವರೆಗಿನ (೯.೪೨ ಲೀ) ಪಲ್ಲಟನವನ್ನು ಹೊಂದಿವೆ. ಇದರ ಅಚ್ಚುಗಳು ಭಾರೀ-ಸಹಿಷ್ಣು ಸೇನಾ ಟ್ರಕ್ಕುಗಳಿಗಿಂತ ಅಥವಾ ಶಾಲೆ ಬಸ್ಸುಗಳಂಥ ರಸ್ತೆ ವಾಹನಗಳಿಂದ ಪ್ರತ್ಯೇಕವಾಗಿದ್ದು ವಿಶಿಷ್ಟತೆಯನ್ನು ಕಾಯ್ದುಕೊಂಡಿವೆ, ಹಾಗೂ ಟೈರುಗಳನ್ನು ತಿರುಗಿಸುವುದಕ್ಕೆ ನೆರವಾಗಲೆಂದು ಗಾಲಿಯ ನಡುಭಾಗದಲ್ಲಿ ಒಂದು ಅಲೆದಾಡುವ ಗೇರು ಹ್ರಾಸನವನ್ನು ಹೊಂದಲೆಂದು ಮಾರ್ಪಡಿಸಲ್ಪಟ್ಟಿವೆ. ಎಲ್ಲಾ ಟ್ರಕ್ಕುಗಳು ಮುಂಭಾಗ ಮತ್ತು ಹಿಂಭಾಗಗಳೆರಡರಲ್ಲೂ ಜಲಚಾಲಿತ ಚಾಲನ ನಿರ್ದೇಶನವನ್ನು (ನಾಲ್ಕು ಚಕ್ರದ ಚಾಲನ ನಿರ್ದೇಶನ) ಹೊಂದಿದ್ದು, ಮುಂಭಾಗದ ಚಕ್ರಗಳು ಚಾಲನ ನಿರ್ದೇಶನ ಚಕ್ರದಿಂದ (ಸ್ಟೀರಿಂಗ್ ವೀಲ್) ನಿಯಂತ್ರಿಸಲ್ಪಟ್ಟರೆ, ಹಿಂಭಾಗ ಚಕ್ರಗಳು ಒಂದು ಕಂಬಿ ಸ್ವಿಚ್ಚಿನಿಂದ ನಿಯಂತ್ರಿಸಲ್ಪಡುತ್ತವೆ. ಇದರಲ್ಲಿನ ಟೈರುಗಳು ವಿಶಿಷ್ಟವೆಂಬಂತೆ ರಸಗೊಬ್ಬರ ಹರಡುವ ಸಾಧನಗಳಲ್ಲಿ ಬಳಸಲಾಗುವ "ಟೆರ" ಟೈರುಗಳಾಗಿದ್ದು, ೬೬″×೪೩″×೨೫″ (೧.೭×೧.೧×೦.೬ ಮೀ) ಅಳತೆಗಳನ್ನು ಹೊಂದಿವೆ. ಬಹುತೇಕ ಟ್ರಕ್ಕುಗಳು ಮಾರ್ಪಡಿಸಲಾದ ಮತ್ತು/ಅಥವಾ ಅಗತ್ಯಾನುಸಾರ ವಿನ್ಯಾಸಗೊಳಿಸಲ್ಪಟ್ಟ ಒಂದು ಸ್ವಯಂಚಾಲಿತ ಶಕ್ತಿ ಸಂವಹನವನ್ನು ಹೊಂದಿವೆ; ಒಂದು ಟರ್ಬೋ ೪೦೦, ಪವರ್ಗ್ಲೈಡ್, ಫೋರ್ಡ್ C೬ ಶಕ್ತಿ ಸಂವಹನ, ಅಥವಾ ಒಂದು ಭ್ರಾಮಕ-ಬಡಿತದ ೭೨೭ ಶಕ್ತಿ ಸಂವಹನಗಳು ಇದರಲ್ಲಿ ಸೇರಿವೆ. ಸೀಮಿತ ಸಂಖ್ಯೆಯ ಟ್ರಕ್ಕುಗಳು ಒಂದು ಲೆಂಕೊ ಶಕ್ತಿ ಸಂವಹನವನ್ನು ಬಳಸಿಕೊಳ್ಳುತ್ತವೆ. ಇದು ವೇಗಸ್ಪರ್ಧೆಯ ಓಟದ ಪಂದ್ಯದಲ್ಲಿ ತನ್ನ ಮೂಲಗಳನ್ನು ಹೊಂದಿದೆ. ಟ್ರಾನ್ಸ್ಬ್ರೇಕುಗಳು, ಕೈಯಿಂದ ನಡೆಸುವ ಕವಾಟ ಕಾಯಗಳು, ಮತ್ತು ಭಾರೀ ಸಹಿಷ್ಣು ಗೇರು ಸಜ್ಜಿಕೆಗಳ ನೆರವಿನೊಂದಿಗೆ ಬಹುತೇಕ ಸ್ವಯಂಚಾಲಿತ ಶಕ್ತಿ ಸಂವಹನಗಳನ್ನು ಅತೀವವಾಗಿ ಮಾರ್ಪಡಿಸಲಾಗಿದೆ. ಒಂದು ಲೆಂಕೊವನ್ನು ಬಳಸುತ್ತಿರುವ ಟ್ರಕ್ಕುಗಳು ಒಂದು ಭ್ರಾಮಕ ಪರಿವರ್ತಕಕ್ಕೆ ಪ್ರತಿಯಾಗಿ, ಸ್ವಯಂಚಾಲಿತ ಶಕ್ತಿ ಸಂವಹನಗಳಲ್ಲಿ ಬಳಸಲ್ಪಡುವ ಒಂದು ಕೇಂದ್ರಾಪಗಾಮಿ ಕ್ಲಚ್ಚನ್ನು ಬಳಸುತ್ತವೆ. ಎರಡು-ವೇಗದ ಅಥವಾ ಮೂರು ವೇಗದ ರೂಪರೇಖೆಗಳಲ್ಲಿ ಲೆಂಕೊ ಶಕ್ತಿ ಸಂವಹನಗಳು ಸಾಮಾನ್ಯವಾಗಿ ಕಂಡುಬರುತ್ತವೆ, ಮತ್ತು ಸಂಕ್ಷೇಪಿಸಲ್ಪಟ್ಟ CO೨ನ್ನು ಬಳಸಿಕೊಂಡು ಸಾಮಾನ್ಯವಾಗಿ ವರ್ಗಾಯಿಸಲ್ಪಡುತ್ತವೆ.
ಅನೇಕ ಸುರಕ್ಷತಾ ವೈಶಿಷ್ಟ್ಯತೆಗಳನ್ನು ಟ್ರಕ್ಕುಗಳು ಹೊಂದಿದ್ದು, ಅವುಗಳಲ್ಲಿ ಹಲವು ಲಕ್ಷಣಗಳು ಟ್ರಕ್ಕುಗಳು ಆಗಿಂದಾಗ್ಗೆ ಹೋಗುತ್ತಿರುವಂಥ ಸಣ್ಣದಾದ ಅಖಾಡಗಳಲ್ಲಿ ಕೇವಲ ಅವನ್ನು ಓಡಿಸುವುದಕ್ಕೆ ಅಗತ್ಯವಾಗಿರುವಂಥವಾಗಿವೆ. ಟ್ರಕ್ಕುಗಳು ಮೂರು ಕಿಲ್ ಸ್ವಿಚ್ಚುಗಳಿಂದ ಸಜ್ಜುಗೊಂಡಿವೆ. ಅವುಗಳೆಂದರೆ: RII (ರಿಮೋಟ್ ಇಗ್ನಿಷನ್ ಇಂಟರಪ್ಟ್), ಚಾಲಕನ ಅಂಕಣದಲ್ಲಿ ಚಾಲಕನಿಗೆ ಎಟುಕುವಂತಿರುವ ಒಂದು ಸ್ವಿಚ್ಚು, ಹಾಗೂ ಟ್ರಕ್ಕಿನ ಹಿಂಭಾಗದಲ್ಲಿರುವ ಮತ್ತೊಂದು ಸ್ವಿಚ್ಚು; ಇದರಿಂದಾಗಿ ಟ್ರಕ್ಕು ತಲೆ ಕೆಳಗಾದ ಒಂದು ಸಂದರ್ಭದಲ್ಲಿ ಎಲ್ಲಾ ವಿದ್ಯುಚ್ಛಕ್ತಿ ಸರಬರಾಜನ್ನು ನಿಲ್ಲಿಸಲು ಸಾಧ್ಯವಾಗುತ್ತದೆ. ಗೋಚರತ್ವದ ಉದ್ದೇಶಕ್ಕಾಗಿ ಚಾಲಕನ ಅಂಕಣದ ಮಧ್ಯಭಾಗದಲ್ಲಿ ಚಾಲಕ ಕುಳಿತುಕೊಳ್ಳುವಂಥ ವ್ಯವಸ್ಥೆಯನ್ನು ಒಳಗೊಂಡಂತೆ ಅನೇಕ ಟ್ರಕ್ಕುಗಳು ನಿರ್ಮಿಸಲ್ಪಡುತ್ತಿವೆ. ಬಹುತೇಕ ಚಾಲಕನ ಅಂಕಣಗಳಿಗೆ ಲೆಕ್ಸಾನ್ (ಅಥವಾ ಹೋಲಿಸಬಹುದಾದ ಪಾಲಿಕಾರ್ಬೊನೇಟ್) ಬಳಸಿಕೊಂಡು ರಕ್ಷಣೆ ಒದಗಿಸಲಾಗಿರುತ್ತದೆ. ಇದು ಪಥದಲ್ಲಿ ಚೆದುರಿಬಿದ್ದ ಚೂರುಗಳಿಂದ ಚಾಲಕನನ್ನು ಸಂರಕ್ಷಿಸುವುದು ಮಾತ್ರವಲ್ಲದೇ, ಹೆಚ್ಚಿಸಲ್ಪಟ್ಟ ಗೋಚರತ್ವಕ್ಕೂ ಅವಕಾಶ ನೀಡುತ್ತದೆ. ಬೆಂಕಿ ನಿರೋಧಕ ದಿರಿಸುಗಳು, ಸುರಕ್ಷತೆಯ ರಕ್ಷಾಕವಚಗಳು, ಶಿರಸ್ತ್ರಾಣಗಳು, ಮತ್ತು ತಲೆ ಹಾಗೂ ಕುತ್ತಿಗೆಯ ಪ್ರತಿಬಂಧಕಗಳನ್ನು ಚಾಲಕರು ಧರಿಸುವುದು ಅಗತ್ಯವಾಗಿರುತ್ತದೆ. ಟ್ರಕ್ಕಿನಲ್ಲಿನ ಬಹುತೇಕ ಚಲಿಸುವ ಭಾಗಗಳಿಗೂ ರಕ್ಷಣೆ ಒದಗಿಸಲಾಗಿರುತ್ತದೆ, ಮತ್ತು ಉನ್ನತ ಒತ್ತಡದ ಬಿಡಿಭಾಗಗಳು ನಿರ್ಬಂಧಿಸುವ ಪಟ್ಟಿಗಳನ್ನು ಹೊಂದಿರುತ್ತವೆ; ಈ ಎರಡೂ ವಿಶಿಷ್ಟತೆಗಳು ಸ್ಫೋಟವೊಂದರ ಸಂದರ್ಭದಲ್ಲಿ ನೆರವಿಗೆ ಬರುತ್ತವೆ.
ಈ ಮುನ್ನೆಚ್ಚರಿಕೆಗಳ ಹೊರತಾಗಿಯೂ, ೨೦೦೯ರ ಜನವರಿ ೧೬ರಂದು ವಾಷಿಂಗ್ಟನ್ನ ಟಾಕೋಮಾದಲ್ಲಿ ನಡೆದ ಮಾನ್ಸ್ಟರ್ ಜ್ಯಾಮ್ ಸ್ಪರ್ಧೆಯೊಂದರ ಸಂದರ್ಭದಲ್ಲಿ, ಚಾಲನಾದಂಡ ಕುಣಿಕೆಗಳ ಪೈಕಿ ಒಂದು ಅಪ್ಪಳಿಸಿದ ಕಾರಣದಿಂದ ೬-ವರ್ಷ-ವಯಸ್ಸಿನ ಓರ್ವ ವೀಕ್ಷಕನು ಅಸುನೀಗಿದ; ಈ ಕುಣಿಕೆಗಳು ಚಾಲನಾದಂಡವನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳಲು ಮಾಡಿದ್ದ ಒಂದು ಸುರಕ್ಷತಾ ಲಕ್ಷಣವಾಗಿದ್ದು, ಹಿಂದಿನ ಜಿಗಿತವೊಂದರಲ್ಲಿ ಅದು ನುಜ್ಜುಗುಜ್ಜಾಗಿ ಪ್ರೇಕ್ಷಕಾಂಗಣದೊಳಗೆ ಎಸೆಯಲ್ಪಟ್ಟಿತ್ತು.[೧]
ಜನಪ್ರಿಯ ಸಂಸ್ಕೃತಿ
[ಬದಲಾಯಿಸಿ]This section possibly contains original research. (December 2010) |
ಮೋಟಾರು ಜೋಡಿಸಲ್ಪಟ್ಟ ವೃತ್ತಿಪರ ಕುಸ್ತಿಯ ಒಂದು ಸ್ವರೂಪವಾಗಿ ದೈತ್ಯಾಕಾರದ ಟ್ರಕ್ಕುಗಳು ಪ್ರಾಯಶಃ ಅನೇಕವೇಳೆ ನಿರೂಪಿಸಲ್ಪಟ್ಟಿವೆ. ಸಂಖ್ಯೆಗಳು ಮತ್ತು ಪ್ರಾಯೋಜಕರಿಗಿಂತ ಹೆಚ್ಚಾಗಿ ಟ್ರಕ್ಕುಗಳಿಗೆ ಮೀಸಲಾದ ಹೆಸರುಗಳನ್ನು ಬಳಕೆ ಮಾಡಿರುವುದು ಸಾಮಾನ್ಯವಾಗಿ ಉಲ್ಲೇಖಿಸಲ್ಪಟ್ಟ ಪುರಾವೆಯಾಗಿದೆ (ಕೆಲವೊಂದು ಟ್ರಕ್ಕುಗಳಿಗೆ ಅವುಗಳ ಪ್ರಾಯೋಜಕರಿಗೆ ಸಂಬಂಧಿಸಿದಂತೆ ಹೆಸರಿಸಲಾಗಿದೆ, ಮತ್ತು ೨೦೦೮ರಲ್ಲಿ ಮೇಜರ್ ಲೀಗ್ ಆಫ್ ಮಾನ್ಸ್ಟರ್ ಟ್ರಕ್ಸ್ ತನ್ನ ಸಂಭಾವ್ಯ ಕುಸಿತಕ್ಕೆ ಮುಂಚಿತವಾಗಿ, ಟ್ರಕ್ಕಿನ ಸಂಖ್ಯೆಗಳನ್ನು ನಿರ್ದೇಶಿಸಲು ಯೋಜಿಸಿತ್ತು); ಅಷ್ಟೇ ಅಲ್ಲ, ಜನಸಂದಣಿಯನ್ನು ಮೆಚ್ಚಿಸುವ ಸಲುವಾಗಿ ಕೆಲವೊಂದು ಟ್ರಕ್ಕುಗಳು (ಬಿಗ್ಫೂಟ್ ಮತ್ತು ಗ್ರೇವ್ ಡಿಗ್ಗರ್ನ್ನು ಒಳಗೊಂಡಂತೆ) ಪದೇಪದೇ ಜಯಿಸುತ್ತಿದ್ದುದು ಕಂಡುಬಂದುದರಿಂದ, ಓಟದ ಪಂದ್ಯಗಳಲ್ಲಿ ವಂಚನೆಯಿಂದ ಜಯಸಾಧಿಸಿದ ಆರೋಪಣೆಗಳು ಅನೇಕವೇಳೆ ಕೇಳಿಬಂದಿರುವುದೂ ಇಲ್ಲಿ ಉಲ್ಲೇಖಿಸಲ್ಪಟ್ಟಿದೆ. ಆದಾಗ್ಯೂ, ಓಟದ ಪಂದ್ಯಗಳಲ್ಲಿ ವಂಚನೆಯಿಂದ ಜಯ ಸಾಧಿಸಿರುವ ಆಪಾದನೆಯನ್ನು ಪ್ರವರ್ತಕರು ವ್ಯಾಪಕವಾಗಿ ನಿರಾಕರಿಸಿದ್ದಾರೆ, ಮತ್ತು ಇದಕ್ಕೆ ಪ್ರತಿಯಾಗಿ ಊಹಿಸಿ ಹೇಳಲಾಗದ್ದು ಸಂಭವಿಸಿದ ಸಂದರ್ಭದಲ್ಲಿ ಅನೇಕ ಪ್ರದರ್ಶನಗಳು ಪುರಾವೆಗಳನ್ನು ಅನೇಕವೇಳೆ ಒಳಗೊಂಡಿರುತ್ತವೆ. ಪ್ರಾಯಶಃ ಸಂಪ್ರದಾಯವಾದಿ ರೂಢಮಾದರಿಗಿಂತ ಹೆಚ್ಚಾಗಿ ಕುಸ್ತಿ-ಪರ ರೂಢಮಾದರಿಯನ್ನು ಚಾಲಕರು ಮತ್ತು ತಂಡಗಳ ಸದಸ್ಯರು ದ್ವೇಷಿಸುತ್ತಾರೆ; ಒಂದು ಉನ್ನತ ಮಟ್ಟದಲ್ಲಿ ಸ್ಪರ್ಧಿಸುವುದಕ್ಕೆಂದು ತಾವು ನಿರ್ವಹಿಸುವ ಕಾರ್ಯದ ಹೊರತಾಗಿಯೂ ತಾವು ಅಗೌರವದೊಂದಿಗೆ ಪರಿಗಣಿಸಲ್ಪಡುತ್ತಿದ್ದೇವೆ ಎಂಬ ಭಾವನೆಯನ್ನು ಅವರು ಹೊಂದಿರುವುದೇ ಈ ದ್ವೇಷಕ್ಕೆ ಕಾರಣ. ಅದೇ ರೀತಿಯಲ್ಲಿ, ಪ್ರಸಕ್ತವಾಗಿ ಸದರಿ ಕ್ರೀಡೆಯು ಮಾಧ್ಯಮಗಳ ವತಿಯಿಂದ NASCAR ರೀತಿಯಲ್ಲಿ ಪರಿಗಣಿಸಲ್ಪಡುವುದನ್ನು ಅನೇಕ ಅಭಿಮಾನಿಗಳು ನೋಡಲು ಬಯಸುತ್ತಾರೆ. ಆದಾಗ್ಯೂ, ಇತರ ಬಹುತೇಕ ಮೋಟಾರುಕ್ರೀಡೆಗಳಿಗಿಂತ ಮಿಗಿಲಾದ, ಪರಿಗಣನೀಯವಾಗಿ ಹೆಚ್ಚಿನ ಪ್ರದರ್ಶನದ-ರೀತಿಯ ವಾತಾವರಣವೊಂದನ್ನು ದೈತ್ಯಾಕಾರದ ಟ್ರಕ್ಕಿನ ಸ್ಪರ್ಧೆಗಳು ಒಳಗೊಳ್ಳುವುದರಿಂದ, ಸದರಿ ಸ್ಪರ್ಧೆಗಳು "ಕ್ರೀಡಾ ಮನರಂಜನೆ"ಯ ಒಂದು ಸ್ವರೂಪವಾಗಿ ಅನೇಕವೇಳೆ ಪರಿಗಣಿಸಲ್ಪಡುತ್ತವೆ.
ದೈತ್ಯಾಕಾರದ ಟ್ರಕ್ಕಿನ ಪಂದ್ಯಗಳ ಕುರಿತಾಗಿ ಜಾಹೀರಾತು ನೀಡುವಿಕೆಯೂ ಸಹ ಜನಪ್ರಿಯ ಸಂಸ್ಕೃತಿಯ ಒಂದು ಭಾಗವಾಗಿಬಿಟ್ಟಿದೆ. ದೈತ್ಯಾಕಾರದ ಟ್ರಕ್ಕಿನ ಹಲವಾರು ಓಟದ ಪಂದ್ಯಗಳಿಗೆ ಸಂಬಂಧಿಸಿದಂತೆ ೧೯೮೦ರ ದಶಕದಲ್ಲಿ ಬಂದ ರೇಡಿಯೋ ಜಾಹೀರಾತುಗಳ ಒಂದು ಸುಪರಿಚಿತ ಸರಣಿಯು, ಉತ್ಸಾಹದಿಂದ ಕಿರಿಚುವ ಓರ್ವ ಉದ್ಘೋಷಕನ ಧ್ವನಿ (ಇದರಲ್ಲಿ ಅತಿ ಭರ್ಜರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದವನು ಜ್ಯಾನ್ ಗೇಬ್ರಿಯಲ್), ಗಟ್ಟಿಯಾಗಿ ಮೊಳಗುವ ರಾಕ್ ಹಿನ್ನೆಲೆ ಸಂಗೀತ, ಮತ್ತು ನಾದ ಪ್ರತಿಫಲನದ ಭಾರೀ ಬಳಕೆಯನ್ನು ಒಳಗೊಂಡಿತ್ತು. ಈ ತುಣುಕುಗಳು "ಸಂಡೆ!!! ಸಂಡೆ!!! ಸಂಡೆ!!!" ಎಂಬ ಘೋಷದೊಂದಿಗೆ ಶುರುವಾಗುತ್ತಿದ್ದವು, ಮತ್ತು "BE THERE!!!!!!" ಎಂದು ಒತ್ತಿಹೇಳುವ ಮೂಲಕ ಕೊನೆಗೊಳ್ಳುತ್ತಿದ್ದವು. ಈ ಜಾಹೀರಾತುಗಳು ದೈತ್ಯಾಕಾರದ ಟ್ರಕ್ಕುಗಳೊಂದಿಗೆ ಸಾಮಾನ್ಯವಾಗಿ ತಮ್ಮನ್ನು ಗುರುತಿಸಿಕೊಂಡವಾದರೂ, ಇವು ವೇಗಸ್ಪರ್ಧೆಯ ಪಟ್ಟಿಗಳಲ್ಲಿ ನಡೆಯುವ ತಮಾಷೆಯ ಕಾರಿನ ಓಟದ ಪಂದ್ಯಗಳಿಗಾಗಿ ೧೯೬೦ರ ದಶಕದಲ್ಲಿ ನಿರೂಪಿಸಲ್ಪಟ್ಟವು. ಚಿಕಾಗೊ-ಪ್ರದೇಶದ ವೇಗಸ್ಪರ್ಧೆ ಓಟದ ಪಂದ್ಯದ ಪ್ರವರ್ತಕನಾದ ಜ್ಯಾನ್ ಗೇಬ್ರಿಯಲ್ ಎಂಬಾತ ೧೯೮೫ ಮತ್ತು ೧೯೮೬ರಲ್ಲಿ ದೈತ್ಯಾಕಾರದ ಟ್ರಕ್ಕುಗಳ ಕುರಿತಾಗಿ ದೂರದರ್ಶನಕ್ಕೆಂದು ಮೂರು ವಿಶೇಷ ಜಾಹೀರಾತುಗಳನ್ನು ನಿರ್ಮಿಸಿದ. ಸದರಿ ಸಂಡೆ! ಸಂಡೆ! ಸಂಡೆ! ಆಕರ್ಷಕ ನುಡಿಯನ್ನು ರೂಪಿಸಿದ ಕೀರ್ತಿಯನ್ನು ಸಾಮಾನ್ಯವಾಗಿ ಇವನಿಗೆ ನೀಡಲಾಗುತ್ತದೆ. ಆ ಸ್ಪರ್ಧೆಗಳ ಕೆಲವೊಂದು ಪ್ರವರ್ತಕರು ದೈತ್ಯಾಕಾರದ ಟ್ರಕ್ಕಿನ ಸ್ಪರ್ಧೆಗಳಿಗೆ ಸಂಬಂಧಿಸಿದ ಪ್ರವರ್ತಕರಾಗಿಯೂ ಹೊರಹೊಮ್ಮಿದ್ದರಿಂದ, ದೈತ್ಯಾಕಾರದ ಟ್ರಕ್ಕುಗಳಿಗೆ ಹೊಂದಿಕೊಳ್ಳುವಂತೆ ಸದರಿ ಜಾಹೀರಾತುಗಳು ಹೊಸದಾಗಿ ಪುನಃ ಸಜ್ಜುಗೊಳಿಸಲ್ಪಟ್ಟವು. ಸದರಿ ಜಾಹೀರಾತುಗಳು ಇತರ ಜಾಹೀರಾತುಗಳಲ್ಲಿ ಆಗಾಗ ಹಾಸ್ಯಾಸ್ಪದವಾಗಿ ಅನುಕರಿಸಲ್ಪಟ್ಟಿವೆ.
ಟೇಕ್ ದಿಸ್ ಜಾಬ್ ಅಂಡ್ ಷೋವ್ ಇಟ್ ಎಂಬ ಚಲನಚಿತ್ರದಲ್ಲಿನ ಒಂದು ಟ್ರಕ್ಕಿನ ಸ್ಪರ್ಧೆಯು ಬಿಗ್ಫೂಟ್ ಮತ್ತು USA-೧ ಟ್ರಕ್ಕುಗಳನ್ನು ಒಳಗೊಂಡಿದ್ದು, ಪ್ರಾಯಶಃ ಇದು ಪ್ರಮುಖ ಚಲನಚಿತ್ರವೊಂದರಲ್ಲಿ ದೈತ್ಯಾಕಾರದ ಟ್ರಕ್ಕುಗಳು ಕಾಣಿಸಿಕೊಂಡ ಅತಿಮುಂಚಿನ ನಿದರ್ಶನವಾಗಿದೆ.[ಸೂಕ್ತ ಉಲ್ಲೇಖನ ಬೇಕು]
ಇವನ್ನೂ ಗಮನಿಸಿ
[ಬದಲಾಯಿಸಿ]- ಮಾನ್ಸ್ಟರ್ ಮ್ಯಾಡ್ನೆಸ್ ವಿಡಿಯೋ ಆಟ
- ಅಖಾಡ-ಪರವಾದ ಟ್ರಕ್ಕುಗಳು
- ಸ್ಲ್ಯಾಪ್ ವೀಲೀ ಕುಶಲ ಚಲನೆ
- ದೈತ್ಯಾಕಾರದ ಟ್ರಕ್ಕುಗಳ ಪಟ್ಟಿ
- ರೇಡಿಯೋ-ನಿಯಂತ್ರಣದ ದೈತ್ಯಾಕಾರದ ಟ್ರಕ್ಕುಗಳು
- ಫೈರ್ಸ್ಟಾರ್ಟರ್ ಮಿನಿ ದೈತ್ಯಾಕಾರದ ಟ್ರಕ್ಕು
- ಮಿನಿ ದೈತ್ಯಾಕಾರದ ಟ್ರಕ್ಕು
ಉಲ್ಲೇಖಗಳು
[ಬದಲಾಯಿಸಿ]
- Articles needing additional references from December 2009
- All articles needing additional references
- Articles that may contain original research from December 2010
- All articles that may contain original research
- Articles with unsourced statements from October 2009
- Spoken articles
- Articles with hAudio microformats
- Commons link is on Wikidata
- ದೈತ್ಯಾಕಾರದ ಟ್ರಕ್ಕುಗಳು
- ಕ್ರೀಡಾ ಮನೋರಂಜನೆ