ವಿಕಿಪೀಡಿಯ:ವಿಕಿಪೀಡಿಯ ಕಾರ್ಯಾಗಾರ/೩

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾರ್ಯಕ್ರಮದ ವರದಿ[ಬದಲಾಯಿಸಿ]

ಭಾಗವಹಿಸಿದವರು

ಕಾರ್ಯಕ್ರಮದ ಅಹ್ವಾನ[ಬದಲಾಯಿಸಿ]

ವಿಕಿಪೀಡಿಯ ಕಾರ್ಯಾಗಾರ ಧಾರವಾಡದಲ್ಲಿ ೨೮, ಮೇ, ೨೦೧೧ರಂದು

ಬರುವ ಶನಿವಾರ ೨೮, ಮೇ, ೨೦೧೧ರಂದು (28 May 2011) ಧಾರವಾಡದಲ್ಲಿ 'ವಿಕಿಪೀಡಿಯ ಕಾರ್ಯಾಗಾರ' ಹಮ್ಮಿಕೊಳ್ಳಲಾಗಿದೆ. ಈ ಕಮ್ಮಟದಲ್ಲಿ ಕನ್ನಡ ವಿಕಿಪೀಡಿಯದಲ್ಲಿ ಬರೆಯುವ ಸ್ವಯಂ-ಸೇವಕರು ವಿಕಿಪೀಡಿಯ ಕುರಿತು ಪರಿಚಯ ಮಾಡಿಕೊಡುವರು. ಇದು ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಮೊಟ್ಟಮೊದಲ ಕಾರ್ಯಾಗಾರ. ಪ್ರತಿಷ್ಠಿತ ಕಾಮ್ ಸ್ಕೋರ್ ವರದಿಯ ಪ್ರಕಾರ ತಿಂಗಳಿಗೆ ಭೇಟಿ ಕೊಡುವವರ ಸಂಖ್ಯೆ ಒಟ್ಟು ೩೬.೫ಕೋಟಿಗಿಂತಲೂ ಹೆಚ್ಚಿರುವ ವಿಕಿಪೀಡಿಯ ವಿಶ್ವದ ಐದು ಅತಿದೊಡ್ಡ ಅಂತರ್ಜಾಲ ಯೋಜನೆಗಳಲ್ಲೊಂದು. ಅವುಗಳಲ್ಲಿ ಲಾಭದ ಉದ್ದೇಶವಿಲ್ಲದೆ ನಡೆಸಲಾಗುತ್ತಿರುವ ಏಕೈಕ ಯೋಜನೆ ಕೂಡ ಇದಾಗಿದೆ. ಪ್ರಪಂಚದ ಎಲ್ಲ ಜ್ಞಾನ ಎಲ್ಲರಿಗೂ ಲಭ್ಯವಾಗಬೇಕು ಎಂಬ ಮಹತ್ತರವಾದ ಉದ್ದೇಶ ಇಟ್ಟುಕೊಂಡು ನಡೆಯುತ್ತಿರುವ ವಿಕಿಮೀಡಿಯದ ಯೋಜನೆಗಳು ಕನ್ನಡದಲ್ಲೂ ಲಭ್ಯ. ಕಳೆದ ದಶಕದಲ್ಲಿ ಪ್ರಾರಂಭವಾದ ಇಂಗ್ಲಿಷಿನ ಯೋಜನೆಯಲ್ಲಿ ಸುಮಾರು ಮೂವತ್ತು ಲಕ್ಷಕ್ಕಿಂತಲೂ ಹೆಚ್ಚಿನ ವಿಷಯಗಳ ಪುಟಗಳಿವೆ. ೨೦೦೪ರಲ್ಲಿ ಪ್ರಾರಂಭವಾದ ಕನ್ನಡದ ಯೋಜನೆಯಲ್ಲಿ ಈಗ ೧೦,೦೦೦ಕ್ಕೂ ಹೆಚ್ಚಿನ ವಿಷಯಗಳ ಪುಟಗಳಿವೆ. ವಿಕಿಪೀಡಿಯದಲ್ಲಿ ಜ್ಞಾನ ಹಂಚಿಕೊಳ್ಳಲು ಎಲ್ಲರಿಗೂ ಮುಕ್ತ ಅವಕಾಶವಿರುವುದರಿಂದ ಇದರಲ್ಲಿ ಪ್ರತಿಯೊಬ್ಬರಿಗೂ ಪಾಲ್ಗೊಳ್ಳಲು ಆಸ್ಪದ ಉಂಟು. ವಿಕಿಪೀಡಿಯ ಇಷ್ಟು ದೊಡ್ಡ ಯೋಜನೆಯಾಗಿ, ಒಂದು ಚಳುವಳಿಯಷ್ಟೇ ರೂಪದಲ್ಲಿ ಬೆಳದದ್ದು ಹೇಗೆ? ವಿಕಿಪೀಡಿಯ ಜಗತ್ತಿನ ಅತಿ ದೊಡ್ಡ ಅಂತರ್ಜಾಲ ಯೋಜನೆಗಳಲ್ಲಿ ಒಂದಾಗಿದ್ದು ಹೇಗೆ ಎಂಬುದರಿಂದ ಪ್ರಾರಂಭಿಸಿ ವಿಕಿಪೀಡಿಯದಲ್ಲಿ ಭಾಗವಹಿಸುವುದರಿಂದ ಒದಗಿಬರುವ ಅವಕಾಶಗಳ ಕುರಿತು, ಕನ್ನಡ ಹಾಗು ಇತರೆ ಯೋಜನೆಗಳಲ್ಲಿರುವ ಸವಾಲುಗಳ ಕುರಿತು ಪುಟ್ಟದಾಗಿ ಪರಿಚಯ ನೀಡಲಾಗುವುದು. ವಿಕಿಪೀಡಿಯದಲ್ಲಿ ಅರ್ಥಪೂರ್ಣವಾಗಿ ಭಾಗವಹಿಸಿವುದರ ಕುರಿತು, ವಿಕಿಪೀಡಿಯ ಕಲ್ಪಿಸುವ ಅವಕಾಶಗಳ ಕುರಿತು ಹೆಚ್ಚಿನ ಒತ್ತು ನೀಡಲಾಗುವುದು. ಧಾರವಾಡದ ಸುತ್ತಮುತ್ತ ನೆಲೆಸಿರುವ ಆಸಕ್ತರು ಎಲ್ಲರೂ ಭಾಗವಹಿಸಬೇಕಾಗಿ ಕೋರಿಕೊಳ್ಳುತ್ತೇವೆ.

ದಿನಾಂಕ ಮತ್ತು ಸ್ಥಳ[ಬದಲಾಯಿಸಿ]

ದಿನಾಂಕ: : ಶನಿವಾರ, ೨೮-ಮೇ-೨೦೧೧ (28 May 2011)
ಸಮಯ: ಬೆಳಿಗ್ಗೆ ೧೦.೩೦ ರಿಂದ ೧.೩೦ರವರೆಗೆ.
ಸ್ಥಳ: ಸಭಾಂಗಣ, ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಉದ್ದೇಶಿತ ಸಭಿಕರು[ಬದಲಾಯಿಸಿ]

ಕನ್ನಡ ವಿಕಿ ಯೋಜನೆಗಳ ಎಲ್ಲ ಆಸಕ್ತರು (ಬಳಕೆದಾರರು, ಓದುಗರು, ಬರಹಗಾರರು ಅಥವಾ ಕೇವಲ ಆಸಕ್ತರು). ಎಲ್ಲರಿಗೂ ಸ್ವಾಗತ. ಅದರಲ್ಲೂ, ಹೊಸಬರ ಜೊತೆ ಅನುಭವಸ್ಥ ವಿಕಿಪೀಡಿಯ/ವಿಕಿಮೀಡಿಯ ಬಳಕೆದಾರರನ್ನು ಸೇರಿಸಲು ಉತ್ಸುಕರಾಗಿದ್ದೇವೆ. ನೀವು ಬರಲು ಆಸಕ್ತರಾಗಿದ್ದರೆ ದಯವಿಟ್ಟು ಕೆಳಗೆ ನಿಮ್ಮ ಹೆಸರನ್ನು ನಮೂದಿಸಿ.

ಕಾರ್ಯಸೂಚಿ[ಬದಲಾಯಿಸಿ]

  1. ಕನ್ನಡದ ವಿಕಿ ಯೋಜನೆಗಳ ಬಗ್ಗೆ ಕಿರುಪರಿಚಯ ಮತ್ತು ಸದ್ಯದ ಸ್ಥಿತಿಗಳ ವಿವರ
  2. ಕನ್ನಡ ವಿಕಿಪೀಡಿಯವನ್ನು ಸಂಪಾದಿಸುವ ಬಗ್ಗೆ ಪರಿಚಯ

ಸಂಘಟಕರು[ಬದಲಾಯಿಸಿ]

ಹಾಜರಿರುವವರು[ಬದಲಾಯಿಸಿ]

  1. Hari prasad Nadig
  2. ಷಿಜು ಅಲಕ್ಸ್
  3. Suma K A
  4. ಹರ್ಷವರ್ಧನ್ ವಿ. ಶೀಲವಂತ
  5. ಸುಪ್ರೀತ್.ಕೆ.ಎಸ್

ಹಾಜರಿರಲು ಇಚ್ಛಿಸುವವರು[ಬದಲಾಯಿಸಿ]

  1. ಹರೀಶ / ಚರ್ಚೆ / ಕಾಣಿಕೆಗಳು ೦೮:೪೮, ೨೧ ಮೇ ೨೦೧೧ (UTC)
  2. ತೇಜಸ್
  3. ಸಂಜೀವ ಹಿರೇಮಠ
  4. ಹರ್ಷವರ್ಧನ್ ವಿ. ಶೀಲವಂತ