ಕೀಟ (ಪಿಡುಗು)ನಿಯಂತ್ರಣ
ಕೀಟ ನಿಯಂತ್ರಣ ವೆಂದರೆ ಕೀಟ ಬಾಧೆ ತಡೆಯುವಿಕೆ ಅಥವಾ ಕೀಟ ನಿರ್ವಹಣಾ ವಿಧಾನ ಅಥವಾ ಜೀವವರ್ಗಗಳ ನಿಯಂತ್ರಣ ಎಂದು ವ್ಯಾಖ್ಯಾನಿಸಬಹುದಾಗಿದೆ.ಯಾಕೆಂದರೆ ಇಂತಹ ಕೀಟವು ಸಾಮಾನ್ಯವಾಗಿ ವ್ಯಕ್ತಿಯ ಆರೋಗ್ಯ,ಸುತ್ತಲಿನ ಪರಿಸರ ಅಥವಾ ಆರ್ಥಿಕತೆಗೆ ತೊಡಕನ್ನುಂಟು ಮಾಡಬಹುದಾಗಿದೆ.
ಕೀಟ ನಿಯಂತ್ರಣ ಪ್ರಕ್ರಿಯೆಯು ಕೃಷಿಯಷ್ಟೇ ಪುರಾತನವಾದುದು.ಬೆಳೆಗಳನ್ನು ಕೀಟಗಳ ಬಾಧೆಯಿಂದ ದೂರ ಮತ್ತು ಮುಕ್ತವಾಗಿ ಇಡಬೇಕಾದುದು ಅಗತ್ಯ ಕಾರ್ಯವಿಧಾನವೆನಿಸಿದೆ. ಕೃಷಿ ಉತ್ಪಾದನೆ ಗರಿಷ್ಠಗೊಳಿಸಲು,ಆಹಾರ ಬೆಳೆಗಳ ಸಂರಕ್ಷಣೆ ಹಾಗು ಇತರ ಬೆಳೆಗಳ ಸ್ಪರ್ಧೆ ತಡೆಯಬೇಕಾದುದು ಅವಶ್ಯಕವಾಗಿದೆ.ಅಷ್ಟೇ ಅಲ್ಲದೇ ಮಾನವರೊಂದಿಗೆ ಸ್ಪರ್ಧಿಸುವ ಸಸ್ಯಾಹಾರಿಗಳಿಂದ ಸಹ ನಾವು ಆಹಾರ ಬೆಳೆಗಳನ್ನು ರಕ್ಷಿಸಲೇಬೇಕಾಗುತ್ತದೆ.
ಮೊದಲ ಬಾರಿಗೆ ಸಾಂಪ್ರದಾಯಿಕ ಪದ್ದತಿಯನ್ನು ಬಹುತೇಕವಾಗಿ ಅಳವಡಿಸಿ ಆಹಾರ ಬೆಳೆಗಳ ರಕ್ಷಣೆಗೆ ಈ ಮೊದಲು ಮುಂದಾಗುತ್ತಿದ್ದರು.ಸಾಮಾನ್ಯವಾಗಿ ಬೆಳೆದ ಕಸವನ್ನು ದಹಿಸುವ ಅಥವಾ ಅವನ್ನು ಉಳುಮೆ ಮಾಡುವ ಮೂಲಕ ಬೇರು ಸಮೇತ ಕಿತ್ತಿ ಹಾಕಲಾಗುತ್ತಿತ್ತು.ಇದರಿಂದ ದೊಡ್ಡ ಪ್ರಮಾಣದ ಸಸ್ಯಾಹಾರಿಗಳನ್ನು ಇಲ್ಲವಾಗಿಸಿ ಕಡಿವಾಣ ಹಾಕಿದಂತಾಗುತ್ತದೆ.ಉದಾಹರಣೆಗೆ ಕಾಗೆಗಳು ಮತ್ತು ಇನ್ನಿತರ ಪಕ್ಷಿಗಳು ಆಹಾರದ ಕಾಳುಗಳನ್ನು ಭಕ್ಷಿಸುವುದನ್ನು ಹೀಗೆ ತಡೆಯಬಹುದಾಗಿದೆ. ಇಳುವರಿ ಹೆಚ್ಚಿಸುವ ವಿವಿಧ ತಂತ್ರಗಳೆಂದರೆ ಪರ್ಯಾಯ ಬೆಳೆ,ಸಹ ಬಿತ್ತನೆ (ಇದನ್ನು ಅಂತರ್ ಬೆಳೆ ಅಥವಾ ಮಿಶ್ರ ಬೆಳೆ ವಿಧಾನ ಎನ್ನಲಾಗುತ್ತದೆ.)ಅದಲ್ಲದೇ ಕೀಟಗಳಿಂದ ರಕ್ಷಿತ ಆಯ್ದ ಬೀಜ ಬಿತ್ತನೆಯ ಕೃಷಿ ಪದ್ದತಿಗಳು ಬಹುಕಾಲದ ಇತಿಹಾಸ ಹೊಂದಿವೆ.
ಕೆಲವು ಕೀಟಗಳು ಮಾನವರ ನೇರ ಪ್ರವೇಶದ ಕ್ರಿಯೆಗಳಿಂದಾಗಿ ಸಮಸ್ಯೆಗಳಾಗಿ ಪರಿಣಮಿಸಿವೆ. ಇಂತಹ ಮಾನವ ನಿರ್ಮಿತ ಕ್ರಿಯೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ದೃಢವಾಗಿ ಕಡಿಮೆಗೊಳಿಸುವುದರಿಂದ, ಕೀಟ ಭಾದೆಯನ್ನು ನಿಯಂತ್ರಿಸಬಹುದಾಗಿದೆ. ಸಾಮಾನ್ಯವಾಗಿ USA ದಲ್ಲಿ ಬೆಳೆಗಳು ಫಲ ಬಿಡುವ ಮುಂಚೆಯೇ ಸಸ್ಯಗಳನ್ನು ಕಿತ್ತಿ ರಗಳೆ ಮಾಡುವುದು ಕೆಲವು ಸಸ್ತನಿಗಳ ಸಹಜವಾದ ಲೂಟಿಯಾಗಿದೆ. ಕೆಲವು ಮನೆಗಳವರು ಮುಚ್ಚಳವಿರುವ ತೊಟ್ಟಿಗಳ ಬಿರಡೆಗೆ ಬೀಗ ಹಾಕುವುದರಿಂದಾಗಿ ಈ ಸಸ್ತನಿಗಳು ಅಲ್ಲಿಗೆ ಬರಲಾರವು.ಬಿರಡೆಯಂತಹದನ್ನು ಬಳಸಿ ತೊಟ್ಟಿ ತುಕ್ಕು ಹಿಡಿಯದಂತೆಯೂ ಮಾಡಲಾಗುತ್ತದೆ. ನೊಣಗಳು ಮಾನವನ ಚಟುವಟಿಕೆಯ ಎಲ್ಲಾ ಸ್ಥಳಗಳಲ್ಲಿ ಗುಂಪು ಸೇರುತ್ತವೆ.ಇದು ವಿಶ್ವಾದ್ಯಂತ ಕಂಡು ಬರುವ ವಿದ್ಯಮಾನ,'ಸಾಮಾನ್ಯವಾಗಿ ಆಹಾರ ಅಥವಾ ವ್ಯರ್ಥ ಆಹಾರ ಇರುವ ಕಡೆ ಇವುಗಳ ಸಾಮ್ರಾಜ್ಯ ಕಾಣಿಸುತ್ತದೆ. ಅದೇ ತೆರನಾಗಿ ಸಮುದ್ರ ಕಿನಾರೆಗಳಲ್ಲಿ ಕಾಣಸಿಗುವ ಮೃದ್ವಂಗಿಗಳು ಕೂಡ ಸಮುದ್ರ ದಂಡೆಯಲ್ಲಿನ ವಿಹಾರ ತಾಣಗಳಲ್ಲಿ ಕೀಟಬಾಧೆಗಳಾಗಿ (ಪಿಡುಗಾಗಿ)ಕಾಡುತ್ತಿವೆ. ಪ್ರವಾಸಿಗರು ತಿಂದು ಉಳಿದ ಮೀನು ಮತ್ತು ಚಿಪ್ಸ್ ಗಳನ್ನು ಪಕ್ಷಿಗಳಿಗೆ ಆಹಾರವಾಗಿ ನೀಡುತ್ತಾರೆ,ಹೀಗಾಗಿ ಅಲ್ಲಿನ ಪಕ್ಷಿ ಸಂಕುಲವು ಇಂತಹದೇ ಆಹಾರದ ಮೂಲವನ್ನು ಅವಲಂಬಿಸುವುದರಿಂದ ಅವುಗಳ ಸ್ವಾವಲಂಬನೆ ಕಡಿಮೆಯಾಗುತ್ತದೆ.ಈ ಕಾರಣದಿಂದಾಗಿ ಹಲವು ವೇಳೆ ಅವು ಮಾನವರೆಡೆಗೆ ತಮ್ಮ ಕೆರಳಿದ ಸ್ವಭಾವ ತೋರುತ್ತವೆ.
ಸದ್ಯ UK ನಲ್ಲಿ ಪ್ರಾಣಿಗಳ ಸುರಕ್ಷತೆ ಬಗ್ಗೆ ಹೆಚ್ಚು ಕಳಕಳಿ ವ್ಯಕ್ತವಾಗುತ್ತಿದೆ.ಮಾನವ ನಿರ್ಮಿತದಿಂದಾಗಿ ಉಂಟಾಗುವ ಕೀಟಗಳು ಮತ್ತು ಅವುಗಳ ನಾಶಕ್ಕಿಂತ ಅದರ ನಿರೋಧಕದ ಬಗ್ಗೆ ವ್ಯಾಪಕ ಪ್ರಚಾರ ದೊರೆಯುತ್ತದೆ.ಕೀಟ ನಾಶಕ್ಕಿಂತ ಪ್ರಾಣಿಗಳ ಮನೋಧರ್ಮ ಬಳಸಿ ಅವುಗಳ ನಿಗ್ರಹಕ್ಕೆ ಒತ್ತು ನೀಡಲಾಗುತ್ತದೆ. ಉದಾಹರಣೆಗೆ ನಗರದ ರೆಡ್ ಫಾಕ್ಸ್ ಅಂದರೆ ಕೆಂಪು ನರಿ ಜಾತಿಯ ಸಸ್ತನಿಯನ್ನು ಆಯಾ ಪ್ರಾದೇಶಿಕತೆ ಮೇಲೆ ಬಳಸಿಕೊಳ್ಳಲಾಗುತ್ತದೆ.ಅಪಾಯಕಾರಿ ರಾಸಾಯನಿಕಗಳ ನಿವಾರಕಗಳ ಬಳಕೆ ಮೇಲೆ ಪ್ರಾಣಿಗಳ ಜೊತೆ ಸಂಬಂಧದ ನೆರವನ್ನು ಕೀಟ ನಿವಾರಣೆಗಾಗಿ ಬಳಸಲಾಗುತ್ತದೆ. ಬ್ರಿಟನ್ ನ ಗ್ರಾಮೀಣ ಭಾಗಗಳಲ್ಲಿ ಪಿಡುಗು ನಿಯಂತ್ರಣಕ್ಕಾಗಿ ಫಿರಂಗಿಗಳ ಬಳಕೆಯು ಸಾಮಾನ್ಯವಾಗಿದೆ. ಸಾಮಾನ್ಯವಾಗಿ ಗಾಳಿಗೋವಿಗಳನ್ನು ಬಳಸಿ ಸರ್ವೆ ಸಾಮಾನ್ಯ ಸಣ್ಣ ಪಿಡುಗುಗಳಾದ ಇಲಿಗಳು,ಮೊಲಗಳು ಮತ್ತು ಕಂದು ಅಳಿಲುಗಳನ್ನು ಆಹಾರ ಧಾನ್ಯದ ಬೆಳೆಗಳಿಂದ ದೂರ ಇಡಲಾಗುತ್ತದೆ;ಸಣ್ಣ ತೋಟಗಳು,ಗದ್ದೆಗಳು ಮತ್ತು ನಿರ್ಬಂಧಿತ ಜಾಗೆಗಳಲ್ಲಿ ಈ ಸುರಕ್ಷಿತ ಗಾಳಿಗೋವಿಗಳನ್ನು ಬಳಸಿ ಗುಂಡು ಹಾರಿಸುವ ಅಪಾಯಗಳನ್ನು ತಪ್ಪಿಸಲಾಗುತ್ತದೆ.
ರಾಸಾಯನಿಕ ಕೀಟನಾಶಕಗಳನ್ನು ಸುಮಾರು ೪,೫೦೦ ವರ್ಷಗಳಿಂದ ಬಳಸಲಾಗುತ್ತದೆ.ಸುಮೆರಿಯನ್ ರು ಆಗ ಗಂಧಕ ಸಂಯುಕ್ತಗಳನ್ನು ಬಳಸಿ ಕೀಟದ ಪಿಡುಗಗಳನ್ನು ನಿಗ್ರಹಿಸುತ್ತಿದ್ದರು. ಋಗ್ವೇದದಲ್ಲಿಯೂ ಸಹ ೪,೦೦೦ ವರ್ಷಗಳ ಹಿಂದೆ ತಿಳಿಸಿದಂತೆ ವಿಷಕಾರಿ ಸಸ್ಯಗಳನ್ನು ಬೆಳೆಸುವ ಮೂಲಕ ಕೀಟಗಳನ್ನು ನಾಶಗೊಳಿಸಬಹುದಾಗಿದೆ.ಈ ಪುರಾತನ ಕಾಲದ ವಿಧಾನವು ಇಂದೂ ಆಚರಣೆಯಲ್ಲಿದೆ. ದೊಡ್ಡ ಪ್ರಮಾಣದಲ್ಲಿ ಕೃಷಿಯ ಕೈಗಾರಿಕರಣ ಮತ್ತು ಯಾಂತ್ರೀಕರಣದಿಂದಾಗಿ ೧೮ನೆಯ ಮತ್ತು ೧೯ನೆಯ ಶತಮಾನದಲ್ಲಿ ಕೀಟ ನಿಯಂತ್ರಣಕ್ಕಾಗಿ ರಾಸಾಯನಿಕಗಳ ಬಳಕೆ ವ್ಯಾಪಕವಾಯಿತು.ಆಗ ಒಣಗಿದ ಪುಷ್ಪಗಳಿಂದ ಮಾಡಿದ ಕೀಟನಾಶಕ ಮತ್ತು ಒಣಗಿದ ಗೆಡ್ಡೆ,ಸಸ್ಯಗಳಿಂದ ಮಾಡಿದ ಕೀಟ ನಾಶಕಗಳೂ ಅನುಸರಣೆಗೆ ಬಂದವು. ನಂತರ ೨೦ನೆಯ ಶತಮಾನದಲ್ಲಿ ಹಲವಾರು ರಾಸಾಯನಿಕ ಸಂಶ್ಲೇಷಣಗಳನ್ನು ಬಳಸಿ ಕೀಟನಾಶಕಗಳ ಆವಿಷ್ಕಾರವಾಯಿತು.ಉದಾಹರಣೆಗೆ DDT ಹಾಗು ಕಳೆ ಸಸ್ಯಗಳನ್ನು ತೆಗೆದು ಹಾಕುವ ರಾಸಾಯನಿಕಗಳು ಅಭಿವೃದ್ಧಿಗೆ ಪೂರಕವಾದವು. ರಾಸಾಯನಿಕ ಕೀಟ ನಿಯಂತ್ರಣವು ಇಂದೂ ಕೂಡ ಪ್ರಮುಖ ವಿಧಾನವಾಗಿದೆ.ಆದಾಗ್ಯೂ ಅವುಗಳ ದೀರ್ಘ ಕಾಲದ ಬಳಕೆಯು ಮತ್ತೆ ಸಾಂಪ್ರದಾಯಿಕ ಪದ್ದತಿಗೆ ಆಸಕ್ತಿ ಕೆರಳಿಸಿದ್ದನ್ನು ನಾವು ಕಾಣಬಹುದಾಗಿದೆ.ಈ ೨೦ನೆಯ ಶತಮಾನದ ಅಂತ್ಯದಲ್ಲಿ ಜೈವಿಕ ಕೀಟ ನಿಯಂತ್ರಣಗಳತ್ತ ಮತ್ತೆ ನಾವು ವಾಲುವಂತಾಗಿದೆ.
ಜೀವಿಗಳು ತಮ್ಮ ಕಾಲಚಕ್ರದಲ್ಲಿ ಜೈವಿಕ,ರಾಸಾಯನಿಕ,ಭೌತಿಕ ಅಥವಾ ಯಾವುದೇ ಇಂತಹ ರೀತಿಯ ನಿಯಂತ್ರಣಗಳಿಗೆ ನಿರೋಧಕ ಶಕ್ತಿ ಬೆಳಸಿಕೊಂಡಿವೆ. ಇಂತಹ ಕೀಟವರ್ಗದ ಸಂಖ್ಯೆಯನ್ನು ಸಂಪೂರ್ಣವಾಗಿ ಹೊಡೆದು ಹಾಕಲಾಗಿದ್ದರೂ ಇನ್ನುಳಿದ ವರ್ಗ ರಾಸಾಯನಿಕಗಳಿಗೆ ನಿರೋಧಕತೆ ಬೆಳೆಸಿಕೊಳ್ಳುತ್ತದೆ.ಹೀಗಾಗಿ ಈ ಶೇಷ ಪ್ರಮಾಣವು ಸುಧಾರಿತ ಶಸ್ತ್ರಾಸ್ತ್ರ ಸ್ಪರ್ಧೆಯಂತೆ ಉಳಿದುಕೊಳ್ಳುತ್ತದೆ.
ಕೀಟ ನಿಯಂತ್ರಣದ ವಿಧಗಳು
[ಬದಲಾಯಿಸಿ]ಜೀವ ವಿಜ್ಞಾನದ ಹಾನಿಕಾರಕ ಕೀಟ ನಿರ್ವಹಣೆ
[ಬದಲಾಯಿಸಿ]ಜೈವಿಕ ಕೀಟ ನಿಯಂತ್ರಣವೆಂದರೆ ಎರಡೂ ನಿಯಂತ್ರಣ ಮತ್ತು ಆಡಳಿತ ನಿರ್ವಹಣೆ; ಇದರಲ್ಲಿ ನೈಸರ್ಗಿಕ ಪರಭಕ್ಷಕಗಳು ಮತ್ತು ಪರೋಪಜೀವಿಗಳು ಎನ್ನಬಹುದು. ಉದಾಹರಣೆಗಾಗಿ: ಸೊಳ್ಳೆಗಳನ್ನು Bt ಬ್ಯಾಸಿಲಸ್ ಥುರಿಂಜೆನ್ಸಿಸ್ ssp israelensis ,ಗಳನ್ನು ಬಳಸಿ ನಿಯಂತ್ರಿಸಲಾಗುತ್ತದೆ.ಇಲ್ಲಿ ಇಸ್ರೆಲಿನಿಸಿಸ್ ಎಂಬುದು ಸ್ಥಳೀಯ ನೀರಿನ ಮೂಲಗಳಲ್ಲಿನ ಸೊಳ್ಳೆಗಳ ಲಾರ್ವಾಗಳನ್ನು ಕೊಲ್ಲುತ್ತದೆ. ಈ ತೆರನಾದ ಉಪಾಯವು ಉಳಿದ ಪರಿಸರದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮಗಳನ್ನು ಬೀರಲಾರದು.ಅದಲ್ಲದೇ ಮನುಷ್ಯರಿಗೆ ಕುಡಿಯಲು ಸಹ ಯೋಗ್ಯವಾಗಿರುತ್ತದೆ. ಜೈವಿಕ ಕೀಟ ನಿಯಂತ್ರಕ ಅಥವಾ ಯಾವುದೇ ನೈಸರ್ಗಿಕ ಕೀಟ ನಿಯಂತ್ರಕವು ತನ್ನ ಅಸ್ತಿತ್ವದ ಆಧಾರದಲ್ಲಿ ತನ್ನ ಸುತ್ತಮುತ್ತಲಿನ ಪರಿಸರದ ಸಮತೋಲನಕ್ಕೆ ಯಾವುದೇ ಹಾನಿ ಮಾಡದೇ, ಕನಿಷ್ಟ ಅಪಾಯಗಳನ್ನು ಮಾತ್ರ ಮಾಡುವಂತಿರಬೇಕು.[೧]
ಇವುಗಳ ಬೆಳವಣಿಗೆಗೆ ಕಾರಣವಾಗುವ ಜಾಗೆಗಳನ್ನು ನಾಶಪಡಿಸಬೇಕು
[ಬದಲಾಯಿಸಿ]ಸೂಕ್ತ ತ್ಯಾಜ್ಯ ನಿರ್ವಹಣೆ ಮತ್ತು ನಿಂತ ನೀರನ್ನು ಸರಾಗವಾಗಿ ಹರಿಯುವಂತೆ ಮಾಡುವುದರಿಂದ ಅಲ್ಲಿ ಬೆಳೆವ ಹಲವು ಕೀಟಗಳನ್ನು ಹೊರಹಾಕಬಹುದಾಗಿದೆ.
ಕಸದ ತೊಟ್ಟಿ ಅಥವಾ ಕಸ ಸಂಗ್ರಹಣೆಯು ಕೆಲವು ಅನಗತ್ಯ ಜೀವಿಗಳಿಗೆ ಆಹಾರ ಮತ್ತು ಆಶ್ರಯ ನೀಡುತ್ತದೆ.ನೀರು ನಿಲ್ಲಲು ಅಥವಾ ಸಂಗ್ರಹವಾಗಲು ಅವಕಾಶ ಮಾಡಿಕೊಡಬಾರದು.ಇದು ಸೊಳ್ಳೆಗಳಿಗೆ ಆಶ್ರಯ ತಾಣವಾಗುತ್ತದೆ. ತ್ಯಾಜ್ಯ ನಿರ್ವಹಣೆ ಮತ್ತು ಸಂಗ್ರಹಕ್ಕೆ ಉತ್ತಮ ಸೌಕರ್ಯಯುಳ್ಳ ಸಮುದಾಯಗಳಲ್ಲಿ ಸೂಕ್ತ ನಿರ್ವಹಣೆ ಇರದ ಜಾಗೆಗಿಂತ ಇಲಿ,ಜಿರಳೆ,ಸೊಳ್ಳೆ,ನೊಣಗಳ ಹಾಗು ಇನ್ನಿತರ ಅಪಾಯಕಾರಿ ಕೀಟಗಳ ಸಮಸ್ಯೆ ಕಡಿಮೆ ಮಟ್ಟದಲ್ಲಿರುತ್ತದೆ.
ತೆರೆದ ಒಳಚರಂಡಿಗಳು ವಿವಿಧ ರೀತಿಯ ಅಪಾಯಕಾರಿ ಕೀಟಗಳಿಗೆ ವಿಫುಲ ಅವಕಾಶ ಒದಗಿಸುತ್ತವೆ. ಉತ್ತಮ ಒಳಚರಂಡಿ ನಿರ್ಮಾಣ ಮತ್ತು ಅದರ ಸೂಕ್ತ ಉಸ್ತುವಾರಿ ಪದ್ದತಿಯು ಇಂತಹ ಸಮಸ್ಯೆಯನ್ನು ನಿವಾರಿಸುತ್ತದೆ.
ವಿಷ ಹಾಕುವ ಮೂಲಕ ಆಕರ್ಷಣೆ
[ಬದಲಾಯಿಸಿ]ಇಲಿಯಂತಹುಗಳ ನಿಗ್ರಹಕ್ಕೆ ಸಾಮಾನ್ಯವಾಗಿ ಆಹಾರದಲ್ಲಿ ವಿಷ ಬೆರಸಿ ಅವುಗಳನ್ನು ಆಕರ್ಷಿಸಬಹುದು.ಆದರೆ ಸುತ್ತಲೂ ಕಸದ ರಾಶಿ ಇದ್ದು ಅವುಗಳಿಗೆ ಪರ್ಯಾಯ ಆಹಾರದ ಮೂಲಗಳಿದ್ದರೆ ಈ ವಿಧಾನವೂ ಕೆಲವೊಮ್ಮೆ ಪರಿಣಾಮಕಾರಿಯಾಗಲಾರದು. ವಿಷ ಬೆರೆಸಿದ ಮಾಂಸವನ್ನು ತೋಳಗಳು ಮತ್ತು ಪಕ್ಷಿಗಳನ್ನು ನಿಗ್ರಹಿಸಲು ಶತಮಾನದ ಕಾಲದಿಂದಲೂ ಬಳಸಲಾಗುತ್ತದೆ.ಇವು ಇನ್ನಿತರ ಜೀವಿಗಳಂತೆ ಆಹಾರ ಬೆಳೆಗಳಿಗೆ ಅಪಾಯಕಾರಿ ಎನಿಸಿವೆ.
ಜಾಗೆಯ ದಹಿಸುವಿಕೆ
[ಬದಲಾಯಿಸಿ]ಸಾಂಪ್ರದಾಯಿಕವಾಗಿ ಕಬ್ಬು ಬೆಳೆ ಕಟಾವು ಮಾಡಿದ ನಂತರ ಆ ಗದ್ದೆಯನ್ನು ಬೆಂಕಿ ಹಚ್ಚಿ ಸುಡಲಾಗುತ್ತದೆ.ಯಾವುದೇ ಕೀಟಗಳ ಮೊಟ್ಟೆ,ಸಂತತಿ ಅಲ್ಲಿದ್ದರೂ ಆಗ ಅದು ನಾಶವಾಗುತ್ತದೆ.
ಬೇಟೆ
[ಬದಲಾಯಿಸಿ]ಐತಿಹಾಸಿಕವಾಗಿ ಕೆಲವು ಯುರೊಪಿಯನ್ ದೇಶಗಳಲ್ಲಿ ಬೀದಿನಾಯಿಗಳು ಮತ್ತು ಬೆಕ್ಕುಗಳ ಸಂಖ್ಯೆ ಮಿತಿ ಮೀರಿದಾಗ,ಅಲ್ಲಿನ ಸ್ಥಳೀಯರು ಒಟ್ಟಾಗಿ ಸೇರಿ ಇವುಗಳಿಗೆ ಯಾರೇ ಮಾಲಿಕರಿಲ್ಲ ಎಂಬುದನ್ನು ಖಾತರಿಪಡಿಸಿಕೊಂಡು ಅವುಗಳನ್ನು ಒಂದೆಡೆ ಸೇರಿಸಿ ಕೊಂದು ಹಾಕುತ್ತಾರೆ. ಇನ್ನು ಕೆಲವು ದೇಶಗಳಲ್ಲಿ ಹೊಲ-ಗದ್ದೆಗಳಿಂದ ಇಲಿಗಳನ್ನು ಓಡಿಸಲು ಇಲಿ ಹಿಡಿಯುವ ತಂಡಗಳೇ ಇದ್ದು, ಅವುಗಳನ್ನು ಬೆನ್ನಟ್ಟಿ ಸಾಧಾರಣವಾಗಿ ನಾಯಿಗಳ ಮೂಲಕ ಇಲ್ಲವೇ ಸರಳ ಕೈ ಆಯುಧಗಳ ಮೂಲಕ ಕೊಂದು ಹಾಕುತ್ತಾರೆ. ಇನ್ನೂ ಕೆಲವು ಸಮುದಾಯಗಳಲ್ಲಿ ಪುರಾವೆಯಾಗಿ ಕೊಂದ ಇಲಿಯೊಂದರ ತಲೆ ತಂದುದನ್ನು ಅದಕ್ಕಾಗಿ ನೇಮಕವಾದ ಗುಮಾಸ್ತನೊಬ್ಬ ಸೂಕ್ತವಾಗಿ ಅದಕ್ಕಾಗಿ ನಿಗದಿಯಾದ ಶುಲ್ಕ ಸಂದಾಯ ಮಾಡುತ್ತಾನೆ.ಇಲಿ ಕೊಂದುದಕ್ಕಾಗಿ ಪುರಾವೆಯೆಂಬಂತೆ ಅದರ ತಲೆ ಒಪ್ಪಿಸಿದಾಗ ಅದು ಎಣಿಕೆಗೆ ಬರುವ ಸತ್ತ ಇಲಿಯಾಗುತ್ತದೆ.
ಬೋನುಗಳು
[ಬದಲಾಯಿಸಿ]ಮನೆಗಳಲ್ಲಿರುವ ಇಲಿಗಳನ್ನು ಕೊಲ್ಲಲು ಬೋನುಗಳನ್ನು ಬಳಸಲಾಗುತ್ತದೆ.ಆದರೆ ತೋಳಗಳು,ದೊಡ್ಡ ದಂಶಕಗಳು ಹಾಗು ಬೀದಿ ಬೆಕ್ಕು ಮತ್ತು ನಾಯಿಗಳನ್ನು ಸ್ಥಳೀಯ ನಗರಸಭೆ ಸಿಬ್ಬಂದಿ ಇವುಗಳನ್ನು ಬೇರೆಡೆಗೆ ಸಾಗಿಸಲು ಕ್ರಮ ಕೈಗೊಳ್ಳುತ್ತದೆ.
ವಿಷ ಸಿಂಪಡಿಸುವಿಕೆ
[ಬದಲಾಯಿಸಿ]ರಾಸಾಯನಿಕ ವಿಷಗಳನ್ನು ವಿಮಾನಗಳ ಮೂಲಕ ಸಿಂಪಡಿಸುವುದು,ಕೈಯಿಂದ ಉಪಕರಣಗಳ ಮೂಲಕ ಚಿಮುಕಿಸುವುದು ಅಥವಾ ಲಾರಿಗಳಲ್ಲಿ ಸಿಂಪಡನೆ ಉಪಕರಣಗಳ ಮುಖಾಂತರ ವಿಷಯುಕ್ತಗಳನ್ನು ಹಾಕುವುದು, ಇತ್ಯಾದಿ ಕೀಟ ನಿಯಂತ್ರಣಕ್ಕೆ ಬಹುತೇಕ ಸಾಮಾನ್ಯ ವಿಧಾನಗಳಾಗಿವೆ. ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ಪಟ್ಟಣಗಳಲ್ಲಿ ಲಾರಿಗಳು ವಿಷಯುಕ್ತ ರಾಸಾಯನಿಕಗಳನ್ನು ಆಯಾ ಬೀದಿಗಳಲ್ಲಿ ಸಿಂಪಡಿಸಿ ಅಲ್ಲಿನ ಸೊಳ್ಳೆಗಳ ನಿಯಂತ್ರಣ ಮಾಡಲು ನೆರವಾಗುತ್ತವೆ.ಆಯಾ ಪಟ್ಟಣಗಳ ಸುತ್ತಮುತ್ತಲೂ ವಾರದಲ್ಲಿ ಒಂದೆರೆಡು ಬಾರಿ ಸಿಂಪಡಿಸಿ ಇವುಗಳ ನಿಗ್ರಹಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಬೆಳೆಗಳ ಮೇಲೆ ಸಿಂಪಡಿಸುವ ಸಂಯುಕ್ತಗಳು ಆಯಾ ಹೊಲ ಗದ್ದೆಗಳ ಮೇಲೆ ತಮ್ಮ ಪ್ರಭಾವಬೀರಿ ಅಲ್ಲಿನ ಯಾವುದೇ ಉಪದ್ರವಕಾರಿ ಕೀಟಗಳನ್ನು ನಾಶಪಡಿಸುತ್ತವೆ. ಹಲವರು ತಮ್ಮ ಸುತ್ತಲಿನ ವಾಸದ ಪರಿಸರದಲ್ಲಿ,ಮನೆಗಳಲ್ಲಿ ಅಥವಾ ವಹಿವಾಟಿನ ಸ್ಥಳಗಳಲ್ಲಿ ಹಲವು ವಿಧದ ರಾಸಾಯನಿಕಗಳನ್ನು ಚಿಮುಕಿಸಿ ಈ ಅಪಾಯಕಾರಿ ಕ್ರಿಮಿಗಳು ಅಲ್ಲಿ ಬೆಳೆಯದಂತೆ ನೋಡಿಕೊಳ್ಳುತ್ತಾರೆ.
ಹೊಗೆ ಹಾಕಿ ಆಯಾ ಜಾಗೆಗಳನ್ನು ಕೀಟಮುಕ್ತಗೊಳಿಸುವಿಕೆ
[ಬದಲಾಯಿಸಿ]ಸೂಕ್ಷ್ಮ ದೃಷ್ಟಿಯಿಂದ ಈ ರೋಗಾಣುಗಳ ಹೊರಹಾಕಲು ನಿರ್ವಾತ ಪ್ರದೇಶದಲ್ಲಿ ಒಂದು ನಿರ್ಧಿಷ್ಟ ರಾಸಾಯನಿಕವನ್ನು ಸಿಂಪಡಿಸಲಾಗುತ್ತದೆ.ಮಾರಣಾಂತಿಕ ವಿಷ ವಾಯುವನ್ನು ಸಹ ಆ ಪ್ರದೇಶದಲ್ಲಿ (೨೪-೭೨ಗಂಟೆಗಳು.)ವರೆಗೆ ಬಿಟ್ಟು ಕ್ರಿಮಿನಾಶಕ ಮಾಡುತ್ತಾರೆ. ದುಬಾರಿ ವೆಚ್ಚದ ವಿಷಯುಕ್ತ ರಾಸಾಯನಿಕಗಳನ್ನು ಆಯಾ ಜಾಗೆಗಳಲ್ಲಿ ಧೂಮಯಾನದ ಮೂಲಕ ಸಿಂಪಡಿಸಿದಾಗ ಕೀಟಗಳ ಬದುಕಿನ ಎಲ್ಲಾ ಹಂತಗಳಲ್ಲಿ ಅವುಗಳನ್ನು ನಿರ್ಮೂಲನೆಗೊಳಿಸುತ್ತವೆ.[೨]
ಆಯಾ ಜಾಗೆಗಳಲ್ಲಿ ಸಂಸ್ಕರಣ
[ಬದಲಾಯಿಸಿ]ದೀರ್ಘಕಾಲಿಕ ಯೋಜನೆ ಎಂದರೆ ಆವಿ ಅಥವಾ ಮಂಜಿನಂತಹದನ್ನು ಆವರಿಸಿಕೊಳ್ಳುವಂತೆ ಮಾಡುವುದು ಕೂಡ ಈ ಔಷಧೋಪಚಾರದ ಕ್ರಮದಲ್ಲಿದೆ. ಕೆಲವೊಂದು ದ್ರವ ರೂಪದ ಕೀಟನಾಶಕಗಳನ್ನು ಅಲ್ಲಲ್ಲಿ ಹರಡಿ ಆಯಾ ವಾತಾವರಣಕ್ಕೆ ಅನುಗುಣವಾಗಿ ಸಿಂಪಡಣೆ ಮಾಡುವ ವಿಧಾನವೂ ಬಳಕೆಯಲ್ಲಿದೆ. ಇಂತಹ ಔಷಧೋಪಚಾರಗಳು ಯಾವುದೇ ರೀತಿಯಲ್ಲಿ ಹೊರ ಹಾಕುವಿಕೆಯನ್ನು ಹೊಂದಿರಲಾರವು,ಅಥವಾ ಕಟ್ಟಡವನ್ನು ನಿರ್ವಾತಗೊಳಿಸುವಿಕೆ ಇಲ್ಲವೆ ಮುಚ್ಚುವಿಕೆ ಇಲ್ಲದೇ ಅಲ್ಲಿ ಕೆಲಸ-ಕಾರ್ಯಗಳನ್ನು ಮಾಡಬಹುದಾಗಿದೆ.ಆದರೆ ಕೆಲವು ಸೂಕ್ಷ್ಮ ಪರಿಣಾಮಗಳನ್ನು ಈ ಸಂದರ್ಭದಲ್ಲಿ ಅನಿವಾರ್ಯವಾಗಿ ಎದುರಿಸಬೇಕಾಗುತ್ತದೆ. ಸಾಮಾನ್ಯವಾಗಿ ಸೋಂಕುವಾಹಕ ಕೀಟನಾಶಕಗಳನ್ನು ಬಳಕೆ ಮಾಡುವುದು ರೂಢಿಯಲ್ಲಿದೆ.ದೀರ್ಘಕಾಲದ ವರೆಗೆ ಇದರ ಪರಿಣಾಮ ಉಳಿದುಕೊಳ್ಳುವ ಸಂದರ್ಭವನ್ನು ಕನಿಷ್ಟಗೊಳಿಸಲಾಗುತ್ತದೆ. ಆಗ ೧೦ಆಗಷ್ಟ್,೧೯೭೩ ನಲ್ಲಿ ಫೆಡರಲ್ ರಜಿಸ್ಟರ್ ನಲ್ಲಿ ಮುದ್ರಣವಾದಂತೆ ಜಾಗೆಗಳಲ್ಲಿನ ಔಷಧೋಪಚಾರದ ಬಗ್ಗೆ U.S. ಎನ್ವಿರಾನ್ಮೆಂಟ್ ಪ್ರೊಟೆಕ್ಷನ್ ಎಜೆನ್ಸಿ (EPA)[೨] ವ್ಯಾಖ್ಯಾನ ಮಾಡಿದೆ.
“ | the dispersal of insecticides into the air by foggers, misters, aerosol devices or vapor dispensers for control of flying insects and exposed crawling insects | ” |
ಕ್ರಿಮಿಶುದ್ಧೀಕರಣ
[ಬದಲಾಯಿಸಿ]U-೫೮೯೭ (೩-ಕ್ಲೊರೊ-೧,೨-ಪ್ರೊಪೊಂದಿಯಲ್) ಪ್ರಯೋಗಶಾಲೆಯ ಅಧ್ಯಯನಗಳು ೧೯೭೦ ರಲ್ಲಿ ನಡೆದಿವೆಯಾದರೂ ಅವು ಯಶಸ್ವಿಯಾಗಲಿಲ್ಲ.[೩] ಕ್ರಿಮಿಶುದ್ಧೀಕರಣದ ಸಂಶೋಧನಾ ಕಾರ್ಯ ಪ್ರಗತಿಯಲ್ಲಿದೆ.
ಮಣ್ಣು ಕ್ರಿಮಿಶುದ್ಧೀಕರಣದ ಇನ್ನೊಂದು ಪರಿಣಾಮಕಾರಿ ವಿಧಾನವೆಂದರೆ ಮಣ್ಣು ಬಾಷ್ಪಿಕರಣದ ಪದ್ದತಿಯಾಗಿದೆ. ಮಣ್ಣಿನಲ್ಲಿ ಬಿಸಿಯಾದ ಹಬೆ ಹಾಯಿಸುವ ಮೂಲಕ ಕೀಟನಾಶ ಮಾಡಬಹುದು.
ನಂಜುಕಾರಕ ಸಸ್ಯಗಳ ನಾಶಪಡಿಸುವಿಕೆ
[ಬದಲಾಯಿಸಿ]ಅರಣ್ಯ ಇಲಾಖೆಯ ಸೇವೆಗಳು ಕೆಲವೆಡೆ ರೋಗಪೀಡಿತ ಸಸ್ಯಗಳನ್ನು ಸಂಪೂರ್ಣವಾಗಿ ನಿರ್ಮೂಲನಗೊಳಿಸುತ್ತವೆ.ಅಲ್ಲದೇ ಕೀಟಬಾಧೆಗೆ ಒಳಗಾದ ಈ ಗಿಡಗಳನ್ನು ತೆಗೆದು ಹಾಕುತ್ತದೆ.ಇದರಿಂದಾಗಿ ಕೀಟಗಳ ಪ್ರಸರಣ ತಡೆಯಬಹುದಾಗಿದೆ. ಗದ್ದೆಗಳಲ್ಲಿ ರೋಗ ಪೀಡಿತ ಕೆಲವು ಕೀಟಗಳಿಂದ ದುಷ್ಪರಿಣಾಮಕ್ಕೆ ಈಡಾಗಿದ್ದರೆ ಅಲ್ಲಿನ ಸಂಪೂರ್ಣ ಈ ಸಸ್ಯವರ್ಗವನ್ನು ನಿರ್ಮೂಲನೆ ಮಾಡಿ ಉಳಿದೆಡೆಗೆ ಹರಡದಂತೆ ಮಾಡಲಾಗುತ್ತದೆ.
ನೈಸರ್ಗಿಕ ದಂಶಕಗಳ ನಿಯಂತ್ರಣ
[ಬದಲಾಯಿಸಿ]ಹಲವು ವನ್ಯಜೀವಿ ಪುನರ್ವಸತಿ ಸಂಘಟನೆಗಳು ದಂಶಕಗಳನ್ನು ವಿಷ ನೀಡಿ ಕೊಲ್ಲುವುದಕ್ಕಿಂತ ಅವುಗಳನ್ನು ನೈಸರ್ಗಿಕ ಪದ್ದತಿಗಳಲ್ಲಿ ದೂರ ಮಾಡುವಂತಹ ಕ್ರಮಗಳನ್ನು ಪ್ರೊತ್ಸಾಹಿಸುತ್ತವೆ.ಯಾಕೆಂದರೆ ಒಂದು ಜೀವಿಗಾಗಿ ಬಳಸುವ ರಾಸಾಯನಿಕ ವಿಷವು ಇನ್ನುಳಿದಕ್ಕೆ ಪರಿಣಾಮ ಬೀರಬಾರದು.[೪]
ಯುನೈಟೆಡ್ ಸ್ಟೇಟ್ಸ್ ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಎಜೆನ್ಸಿಯು ಇಂತಹ ಅಪಾಯಗಳ ಬಗ್ಗೆ ಅಧ್ಯಯನ ನಡೆಸಿದೆ.ಪ್ರೊಪೊಸ್ಡ್ ರಿಸ್ಕ್ ಮಿಟಿಗೇಶನ್ ಡಿಸಿಜನ್ ಎಂಬ ಅಧ್ಯಯನವನ್ನು ಒಟ್ಟು ಒಂಭತ್ತು ದಂಶಕಗಳ ಬಗ್ಗೆ ನಡೆಸಿದೆ.ಸಹವರ್ತಿ ಜೀವಿಗಳ ಬದುಕಿಗೆ ಮಾರಕವಾಗುವ ಯಾವುದೇ ಕ್ರಮದ ಬಗ್ಗೆ ಅದು ಸಮ್ಮತಿಸಿಲ್ಲ."ಒಮ್ಮೆಲೆ ಇಂತಹ ದಂಶಕಗಳ ನಿರ್ಮೂಲನೆಯು ಇನ್ನುಳಿದ ಪ್ರಾಣಿ ವರ್ಗದ ಬೆಳವಣಿಗೆಗೆ ಕಾರಣವಾಗಬಹುದು."ಎಂದು ಅದು ವ್ಯಾಖ್ಯಾನಿಸಿದೆ.[೫]
ನಿವಾರಕಗಳು
[ಬದಲಾಯಿಸಿ]- ಬಾಲ್ಸಮ್ ಎಂಬ ಭದ್ರದಾರು ಅಬೆಸ್ ಬಾಲ್ಸಮಿಯಾ ಗಿಡದ ರಸವು ಕ್ರಿಮಿನಾಶಕವಾಗಿ ಬಳಸಲು EPA ಸಮ್ಮತಿಸಿದ್ದು, ಇದು ವಿಷಕಾರಿಯಲ್ಲದ ದಂಶಕಗಳ ನಿವಾರಣೆಗೆ ನೆರವಾಗುತ್ತದೆ. [೨]
- ಅಕೆಸಿಯಾ ಪಾಲಿಕಂತಾ subsp.ಕ್ಯಾಂಪಿಲಿಕಾಂತಾ ದ ಬೇರುಗಳು ರಾಸಾಯನಿಕ ಸಂಯುಕ್ತಗಳನ್ನು ಒಳಗೊಂಡಿರುತ್ತವೆ.ಇವು ಮೊಸಳೆಗಳು.ಹಾವುಗಳು ಮತ್ತು ಇಲಿಗಳನ್ನು [೬] ದೂರ ಓಡಿಸಿ ಅವುಗಳ ಪೀಡೆ ನಿವಾರಣೆಗೆ ನೆರವಾಗುತ್ತವೆ.[೭]
ಇವನ್ನೂ ಗಮನಿಸಿ
[ಬದಲಾಯಿಸಿ]- ಆನಿಮಲ್ ರಿಪೆಲ್ಲಂಟ್
- ಅಸೊಶಿಯೇಶನ್ ಆಫ್ ನ್ಯಾಚುರಲ್ ಬಯೊಕಂಟ್ರೊಲ್ ಪ್ರೊಡ್ಯುಸರ್ಸ್
- ಬೆಳೆ ಸರದಿ
- ರೋಗ ನಿಯಂತ್ರಣ
- ಕೀಟ ನಿವಾರಕ
- ಕೀಟನಾಶಕ ಸಸ್ಯಗಳು
- ಇಂಟರ್ ನ್ಯಾಶನಲ್ ಆರ್ಗೈನೈಜೇಶನ್ ಫಾರ್ ಬಯಾಲಾಜಿಕಲ್ ಕಂಟ್ರೊಲ್
- ಅನಿಯಮಿತ ಅಳವಡಿಕೆ
- ಅತಿಕ್ರಮಣದ ತಳಿಗಳು
- ಮನೆಗಳಲ್ಲಿನ ಸಾಮಾನ್ಯ ಕೀಟಗಳ ಪಟ್ಟಿ
- ಪ್ರಾಣಿಗಳ ವಂಶವೇ ರಾಜಕೀಯ ಕಾರಣದಿಂದಾಗಿ ಸಂಪೂರ್ಣ ನಾಶವಾದ ಪಟ್ಟಿ
- ಸೊಳ್ಳೆಯ ನಿಯಂತ್ರಣ
- ನ್ಯಾಶನಲ್ ಪೆಸ್ಟ್ ಟೆಕ್ನಿಸಿಯನ್ಸ್ ಅಸೊಶಿಯೇಶನ್ ( UK ನಲ್ಲಿ)
- ಕೀಟ ನಾಶಕಗಳ ಅನ್ವಯಿಕೆ
- ಕೀಟನಾಶಕಗಳ ನಿಯಂತ್ರಣ
- ವಿಷಕಾರಿಗಳ ಆತಂಕ
- ರೇಡಿಯೊ ಅಲೆಗಳ ವಿಕಿರಣದ ಕೀಟ ನಿಯಂತ್ರಕ
- ಇಲಿ-ಹಿಡಿಯುವಿಕೆ
- ಇಲಿ ಬಲೆ
- ಇಲಿಗಳ ಆಕರ್ಷಣೆ
- ದೂರ-ಸಂವೇದಿಗಳ ಮೂಲಕ ಪ್ರಾಣಿಗಳ ನಿಯಂತ್ರಕ
- ಕ್ರಿಮಿಮುಕ್ತವಾದ ಕೀಟ ವಿಧಾನ
- ಪುಂಡ ಪ್ರಾಣಿಗಳ ಬೇಟೆ
- ಕಳೆ ಹತೋಟಿ
- ವನ್ಯಜೀವಿಗಳ ನಿರ್ವಹಣೆ
ಉಲ್ಲೇಖಗಳು
[ಬದಲಾಯಿಸಿ]- ↑ "Bacillus thuringienis Factsheet". Colorado State University. Archived from the original on 2015-09-06. Retrieved 2010-06-02.
- ↑ ೨.೦ ೨.೧ Baur, Fred. Insect Management for Food Storage and Processing. American Ass. of Cereal Chemists. p. 133. ISBN 0913250384.
{{cite book}}
: Cite has empty unknown parameter:|coauthors=
(help) - ↑ [೧]
- ↑ WildcareBayArea.org (http://www.wildcarebayarea.org/site/PageServer?pagename=TakeAction_Rodenticide Archived 2014-03-05 ವೇಬ್ಯಾಕ್ ಮೆಷಿನ್ ನಲ್ಲಿ.)
- ↑ http://www.epa.gov/opp00001/reregistration/rodenticides/
- ↑ "ಪ್ಲಾಂಟ್ಜ್ ಆಫ್ರಿಕಾ". Archived from the original on 2011-05-14. Retrieved 2011-05-04.
- ↑ "ವರ್ಲ್ಡ್ ಅಗ್ರೊ ಫಾರೆಸ್ಟ್ರಿ ಸೆಂಟರ್". Archived from the original on 2007-09-28. Retrieved 2011-05-04.
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (April 2008) |
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಗ್ಲೊಬಲ್-ಸಾಲುಶನ್ಸ್ ಪೆಸ್ಟ್ ಫ್ರೀ ಸಾಲುಶನ್ಸ್ Archived 2011-03-19 ವೇಬ್ಯಾಕ್ ಮೆಷಿನ್ ನಲ್ಲಿ.
- ನ್ಯಾಶನಲ್ ಪೆಸ್ಟ್ ಮ್ಯಾನೇಜ್ ಮೆಂಟ್ ಅಸೊಶಿಯೇಶನ್
- ಪೆಸ್ಟ್ ಕಂಟ್ರೊಲ್ ಟ್ಯಾಕ್ಟಿಕ್ಸ್
- ಪೆಸ್ಟಿಸೈಡ್ ಅಪ್ಲಿಕೇಶನ್ ನೆಟ್ವರ್ಕ
- ಅಸೊಶಿಯೇಶನ್ ಆಫ್ ನ್ಯಾಚುರಲ್ ಬಯೊಕಂಟ್ರೊಲ್ ಪ್ರೊಡ್ಸ್ಸರ್ಸ್ - ಟ್ರೇಡ್ ಅಸೊಶಿಯೇಶನ್ ಆಫ್ ದಿ ಬಯಲಾಜಿಕಲ್ ಕಂಟ್ರೊಲ್ ಇಂಡಸ್ಟ್ರಿ
- ಪೆಸ್ಟ್ ಮ್ಯಾನೇಜ್ ಮೆಂಟ್ ಇನ್ ಫಾರ್ಮೇಶನ್ ಫ್ರಾಮ್ ಪ್ರಿಜರ್ವೇಶನ್ ಡಿಪಾರ್ಟ್ ಮೆಂಟ್ ಆಫ್ ಸ್ಟ್ಯಾನ್ ಫೊರ್ಡ್ ಯುನ್ವರ್ಸಿಟಿ ಲೈಬ್ರರೀಸ್
- ನ್ಯಾಶನಲ್ ಪೆಸ್ಟ್ ಟೆಕ್ನಿಸಿಯನ್ಸ್ ಅಸೊಶಿಯೇಶನ್,ಇಂಗ್ಲೆಂಡ್ U.K
- UF/IFAS ಪೆಸ್ಟ್ ಅಲರ್ಟ್ ವೆಬ್ಸೈಟ್ - ಅರ್ಥ್ರೊಪೊಡ್ಸ್, ನೆಮಾಟೊಡ್ಸ್ ಅಂಡ್ ಪ್ಲಾಂಟ್ ಡಿಸೀಸಿಸ್ ಅಗ್ಫೆಕ್ಟಿಂಗ್ ಹುಮನ್ಸ್, ಲೈವ್ ಸ್ಟಾಕ್/ಪೆಟ್ಸ್, ಅಗ್ರಿಕಲ್ಚರ್ ಅಂಡ್ ಆರ್ನಾಮೆಂಟಲ್ ಪ್ಲಾಂಟ್ಸ್
- [೩]