ವಿಷಯಕ್ಕೆ ಹೋಗು

ಸಾತ್ವಿಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ತತ್ತ್ವಚಿಂತನೆಯ ಪ್ರಕಾರ, ಸತ್ವ (ಸಂಸ್ಕೃತ sattva /सत्त्व "ಶುದ್ಧತೆ", ಅಕ್ಷರಶಃ "ಅಸ್ತಿತ್ವ, ವಾಸ್ತವ" ಎಂಬುದು "ಶುದ್ಧ" ಎಂಬ ಪದದ ಗುಣವಾಚಕsāttvika ಶಬ್ದವಾಗಿದೆ, ಇದನ್ನು ಸಾತ್ವಿಕ್ ಎಂದು ಆಂಗ್ಲೀಕರಿಸಲಾಗಿದೆ), ಇದು ಸಾಂಖ್ಯದಲ್ಲಿ ಬರುವ ಮೂರು ಗುಣಗಳಲ್ಲಿ ಅತ್ಯಂತ ಪರಿಶುದ್ಧ ಗುಣವಾಗಿದೆ, ಸಾತ್ವಿಕ ಎಂದರೆ "ಶುದ್ಧ", ರಾಜಸಿಕ ಎಂದರೆ "ಕಾಂತಿಹೀನ", ಹಾಗೂ ತಾಮಸಿಕ ಎಂದರೆ "ಕತ್ತಲೆ". ಬಹು ಮುಖ್ಯವಾಗಿ, ಯಾವುದೇ ಮೌಲ್ಯಾಧಾರಿತ ತರ್ಕವನ್ನು ಪರಭಾರೆ ಮಾಡಲಾಗಿಲ್ಲ, ಏಕೆಂದರೆ ಎಲ್ಲ ಗುಣಗಳು ಅಖಂಡವಾಗಿರುವುದರ ಜೊತೆಗೆ ಪರಸ್ಪರವಾಗಿ ಅರ್ಹತಾ ನಿರ್ಧಾರಕವಾಗಿವೆ. ಲೌಕಿಕ ಪ್ರಪಂಚದಲ್ಲಿ ಪುರುಷ-ಅವತಾರವಾಗಿ ಜನ್ಮ ತಾಳಿದ ವಿಷ್ಣು ಅಥವಾ ಶುದ್ಧತೆಯ ಮೂರ್ತಿರೂಪವಾದ ದೇವತೆಯನ್ನು ಕ್ಷಿರೋದಕಸಾಯಿ ವಿಷ್ಣು ಅಥವಾ ಪರಮಾತ್ಮ ಎಂದು ಕರೆಯಲಾಗುತ್ತದೆ [೧] Archived 2010-11-23 ವೇಬ್ಯಾಕ್ ಮೆಷಿನ್ ನಲ್ಲಿ..

ಸಾತ್ವಿಕ ಪದಾರ್ಥಗಳು

[ಬದಲಾಯಿಸಿ]

ಒಂದು ಪದಾರ್ಥ ಅಥವಾ ಆಹಾರವು ಸಾತ್ವಿಕ ವಾದದ್ದು ಎನಿಸಿಕೊಳ್ಳಬೇಕಾದರೆ, ಅದು ಶುದ್ಧವಾಗಿರುವುದರ ಜೊತೆಗೆ ಜಗತ್ತಿನಲ್ಲಿ ಯಾವುದೇ ರೀತಿಯಲ್ಲಿ ಕೆಡುಕನ್ನು ಅಥವಾ ಕಾಯಿಲೆಯನ್ನು ಅದು ಉಂಟುಮಾಡದಂತಿರಬೇಕು. ಇದಕ್ಕೆ ಪರಸ್ಪರ ವಿರುದ್ಧವಾಗಿ ಇದರ ಅಸ್ತಿತ್ವವು ಸುತ್ತಮುತ್ತಲಿನ ಪರಿಸರವನ್ನು ಶುದ್ಧಗೊಳಿಸುವಂತಿರಬೇಕು. ಈ ರೀತಿಯಾಗಿ, ಒಬ್ಬ ವ್ಯಕ್ತಿಯು ಇಂತಹ ಆಹಾರವನ್ನು ಸೇವಿಸಿದಾಗ, ಅವನಿಗೆ ತಾನು ಒಳ್ಳೆಯ ಆಹಾರವನ್ನು ಸೇವಿಸುತ್ತಿರುವುದಾಗಿ ಭಾಸವಾಗಬೇಕು. ಆಹಾರವು ಆರೋಗ್ಯಕರವಾಗಿ, ಪೌಷ್ಟಿಕರವಾಗಿ ಹಾಗೂ ಶುದ್ಧವಾಗಿರಬೇಕು. ಇದು ಶಕ್ತಿಯನ್ನು ಕುಂದಿಸುವ ರೀತಿಯಲ್ಲಾಗಲಿ ಅಥವಾ ಮಾನಸಿಕ ಸಮತೋಲನಕ್ಕೆ ಧಕ್ಕೆ ತರುವ ರೀತಿಯಲ್ಲಾಗಲಿ ಇರಬಾರದು. ಈ ಕಲ್ಪನೆಯು ಕಾಮೋತ್ತೆಜನಕ್ಕೆ ಅವಕಾಶ ಮಾಡಿಕೊಡದಂತೆಯೂ ಅಥವಾ ಈ ಮಾರ್ಗದಲ್ಲಿ ಮನಸ್ಸಿನ ಮೇಲೆ ಪರಿಣಾಮವನ್ನು ಉಂಟುಮಾಡುವ ಔಷಧಗಳು ಹಾಗೂ ಮಾದಕದ್ರವ್ಯವನ್ನು ನಿಷೇಧಿಸುವಂತಿರಬೇಕು. ಇದು, ಒಂದು ಜೀವಿಗೆ ನೋವನ್ನುಂಟುಮಾಡಿ, ಅದನ್ನು ಸಾಯಿಸಿದ ನಂತರ ಒದಗುವ ಆಹಾರ ಅಥವಾ ಪದಾರ್ಥಗಳನ್ನೂ ಸಹ ನಿಷೇಧಿಸುತ್ತದೆ. ಇದಕ್ಕೆ ಕಾರಣ, ಪದಾರ್ಥವು ನಂತರದಲ್ಲಿ ಒಂದು ಪಾಪ ಕೃತ್ಯಕ್ಕೆ ಮೂಲವಾಗುತ್ತದೆ. ಇದು ಹಳಸಿದ ಹಾಗು ಘಾಟಿನ ತೀಕ್ಷ್ಣತೆಯಿರುವ ಆಹಾರವನ್ನೂ ಸಹ ಬಹಿಷ್ಕರಿಸುತ್ತದೆ.

ಸಾತ್ವಿಕ ವೆಂದು ಪರಿಗಣಿಸಲಾಗಿರುವ ಕೆಲವು ಪದಾರ್ಥಗಳೆಂದರೆ:

  • ಹೂವುಗಳು, ಹಣ್ಣುಗಳು ಹಾಗೂ ದೇವರ ನೈವೇದ್ಯಕ್ಕೆ ಇಡುವಂತಹ ಆಹಾರಗಳು
  • ಬೇವಿನ ಮರ
  • ಉತ್ತಮ ಪರಿಸರದಲ್ಲಿ ಪೋಷಿಸಲಾದಂತಹ ಹಸುವಿನ ಹಾಲು, ಹಸುವು ಕರುವಿಗೆ ಹಾಲನ್ನು ಉಣಿಸಿದ ನಂತರ ಹಿಂಡಲಾದಂತಹ ಹಾಲು ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಹಸುವನ್ನು ಕೆಟ್ಟದಾಗಿ ನಡೆಸಿಕೊಂಡಂತಹ ಸಂದರ್ಭದಲ್ಲಿ, ಇಂತಹ ಹಾಲನ್ನು ಕುಡಿಯುವುದರಿಂದ ಪಾಪಕೃತ್ಯ ಅಥವಾ ಕೆಟ್ಟ ಪರಿಣಾಮವು ಉಂಟಾಗಬಹುದು. ಹಿಂದೂಗಳಿಗೆ ಗೋವು ಪವಿತ್ರವಾದುದೆಂಬುದನ್ನು ಗಮನದಲ್ಲಿರಿಸಿಕೊಳ್ಳಬೇಕು.
  • ಪ್ರಕೃತಿಯು, ಸಾತ್ವಿಕತೆ ಯೊಂದಿಗೆ ಯಾವಾಗಲೂ ಸೂಚಿತಾರ್ಥವನ್ನು ಹೊಂದಿದೆ. ಈ ಕಾರಣದಿಂದಾಗಿ, ಹಿಂದೂ ತತ್ತ್ವಚಿಂತನೆಯು ಪ್ರಾಣಿಗಳನ್ನು ತಿನ್ನುವುದಕ್ಕಾಗಲಿ, ಅಥವಾ ಪ್ರಕೃತಿ ಹಾಗೂ ಅದರ ಆವಾಸಸ್ಥಾನಗಳನ್ನು ನಾಶಪಡಿಸಲು ಉತ್ತೇಜಿಸುವುದಿಲ್ಲ.

ಸತ್ತ್ವ ಎಂಬುದು ಮನಸ್ಸಿನ ಒಂದು ಸ್ಥಿತಿಯಾಗಿದ್ದು, ಇದರಲ್ಲಿ ಮನಸ್ಸು ಸ್ಥಿರವಾಗಿ, ಸಮಾಧಾನವಾಗಿ ಹಾಗೂ ಶಾಂತಿಯಿಂದ ಕೂಡಿರುತ್ತದೆ. ಒಬ್ಬ ಸಾತ್ವಿಕ ಪುರುಷ ಅಥವಾ ಸ್ತ್ರೀ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ.

ಸಾತ್ವಿಕ ಜೀವಿಗಳು

[ಬದಲಾಯಿಸಿ]

ಒಬ್ಬ ವ್ಯಕ್ತಿ ಅಥವಾ ಜೀವಿಯನ್ನು ಸಾತ್ವಿಕ ವೆಂದು ಕರೆಯಬೇಕಾದರೆ, ಅಂತಹವನು ಮುಖ್ಯವಾಗಿ ಸಾತ್ವಿಕ ಪ್ರವೃತ್ತಿಗಳನ್ನು ಹೊಂದಿರಬೇಕು. "ಸಾತ್ವಿಕ" ಎಂಬ ಪದವು ದೈವಿಕ, ಶುದ್ಧ, ಹಾಗು ಆಧ್ಯಾತ್ಮಕ್ಕೆ ಸೂಚಿತವಾಗುತ್ತದೆ.

ಒಬ್ಬ ಸಾತ್ವಿಕ ನಾದ ವ್ಯಕ್ತಿಯು ಯಾವಾಗಲೂ ಜಗತ್ತಿನ ಒಳಿತಿಗಾಗಿ ಕೆಲಸವನ್ನು ಮಾಡುತ್ತಾನೆ. ಇವರುಗಳು ಯಾವಾಗಲೂ ಶ್ರಮಜೀವಿಗಳಾಗಿದ್ದು, ಜಾಗರೂಕರಾಗಿ ಹಾಗು ಅತಿರೇಕವಿಲ್ಲದ ಜೀವನಶೈಲಿಯನ್ನು ಅನುಸರಿಸುತ್ತಾರೆ. ಸರಳವಾದ ಜೀವನವನ್ನು ಸಾಗಿಸುತ್ತಾರೆ. ಮಿತವಾಗಿ ಆಹಾರವನ್ನು ಸೇವಿಸುತ್ತಾರೆ. ಸತ್ಯವನ್ನು ನುಡಿಯುವುದರ ಜೊತೆಗೆ ದಿಟ್ಟವಾಗಿರುತ್ತಾರೆ. ಅಶ್ಲೀಲವಾದ ಅಥವಾ ಅವಮಾನ ಮಾಡುವ ರೀತಿಯಲ್ಲಿ ಎಂದಿಗೂ ಮಾತನಾಡುವುದಿಲ್ಲ. ಅಭಿನಂದನಾರ್ಹವಾಗಿ ಮಾತನಾಡುವುದರ ಜೊತೆಗೆ ನಿಖರವಾದ ಭಾಷೆಯನ್ನೂ ಬಳಸುತ್ತಾರೆ. ಇವರು ಹೊಟ್ಟೆಕಿಚ್ಚು ಪಡುವುದಿಲ್ಲ ಅಥವಾ ದುರಾಸೆ ಹಾಗು ಸ್ವಾರ್ಥ ಇವರ ಮೇಲೆ ಪರಿಣಾಮ ಬೀರುವುದಿಲ್ಲ. ಭರವಸೆ, ಸಮೃದ್ಧತೆ ಹಾಗು ಔದಾರ್ಯವನ್ನು ಮೆರೆಯುತ್ತಾರೆ. ಯಾವುದೇ ಕಾರಣಕ್ಕೂ ಒಬ್ಬರಿಗೆ ಮೋಸ ಮಾಡುವುದಾಗಲಿ ಅಥವಾ ತಪ್ಪುದಾರಿಗೆ ಎಳೆಯುವುದಾಗಲಿ ಮಾಡುವುದಿಲ್ಲ. ಇರುವುದನ್ನೇ ಹೇಳುವುದರ ಜೊತೆಗೆ ಗಮ್ಯವನ್ನು ವಿವರಿಸಿ, ಜನರು ತಮಗೆ ಬೇಕಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತಾರೆ. ತಮ್ಮ ಮನಸ್ಸಿನ ಮೇಲೆ ಯಾವುದೇ ಕೆಡುಕಿನ ಪ್ರವೃತ್ತಿಗಳು ಆಳಲು ಅವಕಾಶ ಮಾಡಿಕೊಡುವುದಿಲ್ಲ. ಆಂತರಿಕ ಪರಮಾನಂದದ ಸ್ಥಿತಿಗೆ ಬೆಂಬಲಿಸಿ, ಅದು ಜಗತ್ತಿಗೆ ಹರಡುವಂತೆ ಮಾಡುತ್ತಾರೆ. ಅವರು ಸ್ಮರಣಶಕ್ತಿ ಹಾಗು ಚಿತ್ತೈಕಾಗ್ರತೆಯು ಉತ್ತಮವಾಗಿರುತ್ತದೆ. ಆಧ್ಯಾತ್ಮಿಕ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಹೆಚ್ಚು ಆಸಕ್ತರಾಗಿರುವುದರ ಜೊತೆಗೆ ದೈವತ್ವವನ್ನು ಪೂಜಿಸುತ್ತಾ ಅಥವಾ ಧ್ಯಾನಿಸುತ್ತಾ ಕಾಲವನ್ನು ಕಳೆಯುತ್ತಾರೆ. ತೀವ್ರತರವಾದ ಪರಿಸ್ಥಿತಿಗಳಲ್ಲಿ ದೇಹವನ್ನು ದಂಡಿಸಬಹುದು ಅಥವಾ ಭಂಗ ಬರದಂತೆ ಧ್ಯಾನವನ್ನು ಮಾಡಬಹುದು. ಮನಸ್ಸು, ಮಾತು ಹಾಗು ಕೃತ್ಯಗಳು ಸಮನ್ವಯಗೊಂಡಿದ್ದಾಗ, ಅಂತಹ ವ್ಯಕ್ತಿಯನ್ನು ಒಬ್ಬ ಸಾತ್ವಿಕ ನೆಂದು ಗುರುತಿಸಬಹುದು. ಇಂತಹ ಸ್ಥಿತಿಯನ್ನು ಸಂಸ್ಕೃತ ಪದಗಳಲ್ಲಿ ಮನಸಾ, ವಾಚ, ಕರ್ಮಣ ಎಂದು ವಿವರಿಸಲಾಗುತ್ತದೆ.

ಹಿಂದೂಗಳಲ್ಲಿ ಸಾತ್ವಿಕ ರೆಂದು ಪರಿಗಣಿಸಲಾದ ಕೆಲವು ವ್ಯಕ್ತಿಗಳೆಂದರೆ:

  • ತುಲಸಿದಾಸ, ತ್ಯಾಗರಾಜ, ಧ್ಯಾನೇಶ್ವರ, ತುಕಾರಾಮರಂತಹ ಪವಿತ್ರ ವ್ಯಕ್ತಿಗಳು ಹಾಗು ಭಕ್ತರು
  • ವಸಿಷ್ಠ, ಕಶ್ಯಪರಂತಹ ಪ್ರಾಚೀನ ಋಷಿಗಳು
  • ರಮಣ ಮಹರ್ಷಿ, ಅರಬಿಂದೋ, ವಿವೇಕಾನಂದರಂತಹ ಆಧುನಿಕ ಸಂತರು
  • ಸ್ವರ್ಗದಲ್ಲಿರುವಂತಹ ದೈವಿಕ ಪುರುಷರು
  • ತಾವರೆ (ಶುದ್ಧತೆಯನ್ನು ಸಂಕೇತಿಸುತ್ತದೆ), ಹಸುವಿನಂತಹ (ಮಾತೃ ಭೂಮಿಯನ್ನು ಸಂಕೇತಿಸುತ್ತದೆ) ಕೆಲವು ಹೂವು ಹಾಗು ಪ್ರಾಣಿ

ಇವನ್ನೂ ಗಮನಿಸಿ‌

[ಬದಲಾಯಿಸಿ]
  • ಸಾತ್ವಿಕ ಆಹಾರಕ್ರಮ
  • ಮತಾಚರಣೆಯ ಶುದ್ಧತೆ
  • ಸತ್ಯ
  • ಸತ್(ಸಂಸ್ಕೃತ)

ಬಾಹ್ಯ ಕೊಂಡಿಗಳು‌

[ಬದಲಾಯಿಸಿ]
"https://kn.wikipedia.org/w/index.php?title=ಸಾತ್ವಿಕ&oldid=1127497" ಇಂದ ಪಡೆಯಲ್ಪಟ್ಟಿದೆ