ವಿಷಯಕ್ಕೆ ಹೋಗು

ವಿಜ್ಞಾನ ಶಿಕ್ಷಕರಿಗೆ, ಸಂವಹಕರಿಗೆ ಕರ್ನಾಟಕ ಸರ್ಕಾರದ ವಾರ್ಷಿಕ ಪ್ರಶಸ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಮಾಹಿತಿ ತಂತ್ರಜ್ಞಾನ,' 'ಬಯೋಟೆಕ್ನಾಲಜಿ,' ಮತ್ತು 'ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ,'ವಿಷನ್ ಗ್ರೂಪ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜೀಸ್,' ಈ ಪ್ರಶಸ್ತಿಯನ್ನು ಸ್ಥಾಪಿಸಿದೆ. ಈ ವಿಷನ್ ಗ್ರೂಪ್ ಖ್ಯಾತ ವಿಜ್ಞಾನಿ 'ಪ್ರೊ.ಸಿ ಎನ್ ಆರ್ ರಾವ್' ಅವರ ಅಧ್ಯಕ್ಷತೆಯಲ್ಲಿ ೨೦೦೮ ರಲ್ಲಿ ಸ್ಥಾಪಿತವಾಯಿತು. ಕರ್ನಾಟಕ ಸರಕಾರ ವಿಜ್ಞಾನ ಸಂವಹಕರಿಗೆ ಪ್ರಶಸ್ತಿ ನೀಡುತ್ತಿರುವುದು ಇದು ಮೊದಲನೆಯ ಬಾರಿ. ೨೦೧೦-೧೧ ಸಾಲಿಗೆ ವಿಜ್ಞಾನ ಶಿಕ್ಷಕರು ಮತ್ತು ಸಂವಹಕರು ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಏಳು ಜನ ವಿಜ್ಞಾನ ಶಿಕ್ಷಕರು ಮತ್ತು ಸಂವಹಕರು, 'ಕರ್ನಾಟಕ ಸರಕಾರ ನೀಡುತ್ತಿರುವ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. ಕರ್ನಾಟಕ ಸರಕಾರದ 'ವಿಷನ್ ಗ್ರೂಪ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜೀಸ್' ನ ಉಪ-ಸಮಿತಿ ಕೆಳಗಡೆ ನಮೂದಿಸಲಾಗಿರುವ ಸಾಧಕರಿಗೆ ಪ್ರಶಸ್ತಿ ನೀಡಬೇಕೆಂದು ಶಿಫಾರಸು ಮಾಡಿದೆ. ಪ್ರಶಸ್ತಿ ೫೦ ಸಾವಿರ ರು.ನಗದನ್ನು ಒಳಗೊಂಡಿರುತ್ತದೆ.

ಪ್ರಶಸ್ತಿ ಭಾಜನರು

[ಬದಲಾಯಿಸಿ]

೧. ಅಜ್ಜಯ್ಯ. ಟಿ, ವಿಜ್ಞಾನ ಶಿಕ್ಷಕ, ವಿಎಮ್ ಬಾಯ್ಸ್ ಹೈಸ್ಕೂಲ್, ಹುನಗುಂದ್, ಬಾಗಲಕೋಟೆ.

೨. ಕೇಶವ್. ಎ. ಬುಲ್ ಬುಲೆ, ಅಸೋಸಿಯೇಟ್ ಪ್ರೊ. ಮತ್ತು ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥ, ನಿಜಲಿಂಗಪ್ಪ ಕಾಲೇಜು, ರಾಜಾಜಿನಗರ, ಬೆಂಗಳೂರು.

೩. ಎಚ್.ಎಸ್. ನಿರಂಜನಾರಾಧ್ಯ, ಅಸೋಸಿಯೇಟ್ ಪ್ರೊ. ಜೀವಶಾಸ್ತ್ರಿ, ಶ್ರೀ ಸಿದ್ದಗಂಗಾ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ ಫಾರ್ ಬಾಯ್ಸ್, ಬಿ.ಎಚ್.ರೋಡ್, ತುಮಕೂರು.

೪. ಟಿ. ಅರ್. ಅನಂತರಾಮು, ಕುಮಾರಸ್ವಾಮಿ ಬಡಾವಣೆ, ಮೊದಲನೇ ಹಂತ, ಬೆಂಗಳೂರು.

೫. ಸುಧೀಂದ್ರ ಹಾಲ್ದೊಡ್ಡೇರಿ, ಪ್ರೊ. ಏರೋಸ್ಪೇಸ್ ಇಂಜಿನಿಯರಿಂಗ್ ವಿಭಾಗ, ಭಗವಾನ್ ಮಹಾವೀರ್ ಕಾಲೇಜ್ ಆಫ್ ಇಂಜಿನಿಯರಿಂಗ್, ಜಕ್ಕಸಂದ್ರ ಪೋಸ್ಟ್, ಕನಕಪುರ.ಕಳೆದ ೧೩ ವರ್ಷಗಳಿಂದ ವೈಜ್ಞಾನಿಕ ಸಂಗತಿಗಳನ್ನು ಸಾಮಾನ್ಯರಿಗೂ ಮನದಟ್ಟಾಗುವಂತೆ ಸರಳವಾಗಿ ಮತ್ತು ಅತ್ಯಂತ ವಿಶಿಷ್ಟ ರೀತಿಯಲ್ಲಿ ಬರೆಯುತ್ತಿರುವ ವಿಜ್ಞಾನಿ, ಲೇಖಕ.

೬. ಎಂ.ಅಬ್ದುಲ್ ರೆಹಮಾನ್ ಪಾಶಾ, ಶಿವನಗರ, ಬೆಂಗಳೂರು.

೭. ಸಾತನೂರ ದೇವರಾಜ್ ಯು, ಕೆ.ಎಚ್.ಬಿ. ಕಾಲೋನಿ, ಹೂಟಗಳ್ಳಿ, ಮೈಸೂರು.