ಮೂರನೇ ಆಂಗ್ಲೋ-ಬರ್ಮನ್ನರ ಯುದ್ಧ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Third Anglo-Burmese War
တတိယ အင်္ဂလိပ် - မြန်မာစစ်

The nominal surrender of the Burmese Army,
27 November 1885, at Ava.
ದಿನಾಂಕ14 November 1885 – 27 November 1885
ಸ್ಥಳBurma
ಫಲಿತಾಂಶ British victory, end of the Konbaung Dynasty in Upper Burma. The province of Burma becomes part of the British Raj
ಯುದ್ಧಾಕಾಂಕ್ಷಿಗಳು
ಯುನೈಟೆಡ್ ಕಿಂಗ್ಡಂ British Empire Kingdom of Burma
ದಂಡನಾಯಕರು ಮತ್ತು ನಾಯಕರು
Harry Prendergast Thibaw Min

೧೮೮೫ರ ನವೆಂಬರ್ ೧೪ - ೨೭ ರ ಸಮಯದಲ್ಲಿ ನಡೆದ ಸಂಘರ್ಷಣೆಯೇ ಮೂರನೇ ಆಂಗ್ಲೋ-ಬರ್ಮನ್ನರ ಯುದ್ಧ . ಅಗಾಗ ನಡೆಯುತ್ತಿದ್ದ ಪ್ರತಿಭಟನೆ ಮತ್ತು ಬಂಡಾಯವೇಳುವ ಪರಿಸ್ಥಿತಿಯು ೧೮೮೭ರ ವರೆಗೆ ಮುಂದುವರೆಯಿತು. ೧೯ನೇ ಶತಮಾನದಲ್ಲಿ ಬರ್ಮನ್ನರು ಮತ್ತು ಬ್ರಿಟೀಷರ ನಡುವೆ ನಡೆದ ಮೂರು ಯುದ್ಧಗಳಲ್ಲಿ ಅದು ಕೊನೆಯ ಯುದ್ಧವಾಗಿತ್ತು. ೧೮೫೩ರಲ್ಲಿ ನಡೆದ ಎರಡನೇ ಆಂಗ್ಲೋ-ಬರ್ಮನ್ನರ ಯುದ್ಧದ ಪರಿಣಾಮವಾಗಿ ಕೆಳಗಿನ ಬರ್ಮಾದ ಪ್ರದೇಶಗಳು ಬ್ರಿಟೀಷರಿಗೆ ಸೇರಿದ್ದು, ಮೇಲಿನ ಬರ್ಮಾ ಎಂದು ಕರೆಯಲ್ಪಡುವ ಪ್ರದೇಶಗಳ ಮೇಲೆ ತನ್ನ ಅಧಿಕಾರವನ್ನು/ಆಡಳಿತವನ್ನು ಕಳೆದುಕೊಂಡಿರುವ ಕೊಂಬಾಂಗ್ ರಾಜವಂಶದಡಿಯಲ್ಲಿ ಸ್ವತಂತ್ರ ಬರ್ಮಾವು ತನ್ನ ಸಾರ್ವಭೌಮತ್ವವನ್ನು ಕಳೆದುಕೊಳ್ಳುವುದನ್ನು ಈ ಯುದ್ಧವು ಕಂಡಿತು.

ಈ ಯುದ್ಧದೊಂದಿಗೇ, ಬರ್ಮಾವು ಭಾರತದ ಒಂದು ಪ್ರಾಂತವಾಗಿ ಬ್ರಿಟೀಷ್‌ ರಾಜ್‌ದ ಆಳ್ವಿಕೆಗೆ ಒಳಪಟ್ಟಿತು. ೧೯೩೭ರ ನಂತರ, ಬರ್ಮಾವನ್ನು ಒಂದು ಪ್ರತ್ಯೇಕ ವಸಾಹತು ಎಂಬಂತೆ ಬ್ರಿಟೀಷರು ಆಳಿದರು. ಬರ್ಮಾವು ಗಣರಾಜ್ಯವಾಗಿ ೧೯೪೮ರಲ್ಲಿ ಸ್ವಾತಂತ್ರವನ್ನು ಪಡೆಯಿತು.

ಹಿನ್ನೆಲೆ[ಬದಲಾಯಿಸಿ]

ರಾಜ ತೈಬೊ, ರಾಣಿ ಸುಪಯಲಟ್ ಹಾಗೂ ರಾಜಕುಮಾರಿ ಸುಪಯಾಜಿ(ನವೆಂಬರ್ 1885)

೧೮೭೯ರಲ್ಲಿ ಬರ್ಮಾದಲ್ಲಿ ಉತ್ತರಾಧಿಕಾರ ವಿವಾದ ತಲೆದೋರಿದ ಹಿನ್ನೆಲೆಯಲ್ಲಿ ಅಲ್ಲಿನ ದೂತವಾಸ ಕಚೇರಿಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಮೂಲಕ ಈ ಎರಡು ದೇಶಗಳ ನಡುವಿನ ಎಲ್ಲ ರಾಜತಾಂತ್ರಿಕ ಮಾತುಕತೆಗಳು ಮುಕ್ತಾಯಗೊಂಡವು. ಇದು ಹೊಸದೊಂದು ಯುದ್ಧಕ್ಕೆ ಸೂಚನೆ ಎಂದು ಬ್ರಿಟೀಷ್‌ ಸರಕಾರ ಪರಿಗಣಿಸಿತು. ಆದರೆ ಆಫ್ರಿಕಾ ಮತ್ತು ಅಫ್ಘಾನಿಸ್ತಾನದಲ್ಲಿ ಯುದ್ಧ ನಡೆಯುತ್ತಿದ್ದ ಕಾರಣ ಈ ಸಮಯದಲ್ಲಿ ಯುದ್ಧದ ಅವಕಾಶವನ್ನು ತಿರಸ್ಕರಿಸಿತು.

೧೮೮೦ರ ಅವಧಿಯಲ್ಲಿ ಬರ್ಮಾ ಮತ್ತು ಫ್ರಾನ್ಸ್ ನಡುವೆ ಸಂಪರ್ಕ ಸಾಧಿಸಲು ಬ್ರಿಟೀಷರು ಪ್ರಯತ್ನಿಸಿದರು. ಇಂಡೋ ಚೀನಾದಲ್ಲಿ ಯುದ್ಧ ನಡೆಯುತ್ತಿದ್ದ ಕಾರಣ ಸೈನಿಕರು ಫ್ರೆಂಚ್‌ನಿಂದ ಬರ್ಮಾದ ಗಡಿಗೆ ಬರುವಂತೆ ಮಾಡಿತ್ತು. ೧೮೮೩ರಲ್ಲಿ ಬರ್ಮಾದ ಉನ್ನತ ಪ್ರತಿನಿಧಿಗಳ ನಿಯೋಗವೊಂದು ಯುರೋಪ್ ಪ್ರವಾಸವನ್ನು ಕೈಗೊಂಡಿತ್ತು. ಅಧಿಕೃತವಾಗಿ ಇದು ಕೈಗಾರಿಕೆಗಳ ಕುರಿತ ಅಧ್ಯಾಯನ ಪ್ರವಾಸವೆಂದಿದ್ದರೂ, ಇದು ತ್ವರಿತವಾಗಿ ಫ್ರಾನ್ಸ್‌ಗೆ ಪಯಣವನ್ನು ಮುಂದುವರಿಸಿತು. ಅಲ್ಲಿನ ವಿದೇಶಾಂಗ ಸಚಿವ ಜುಲಿಸ್ ಫೆರಿ ಜೊತೆ ಮಾತುಕತೆ ಆರಂಭಿಸಿತು. ಈ ಕುರಿತು ಪ್ರಸಂಗಿಕವಾಗಿ ಬ್ರಿಟೀಷ್‌ ರಾಯಭಾರಿಗೆ ಮಾಹಿತಿ ನೀಡಿದ ಫೆರಿ, ಬರ್ಮಾವು ಯುದ್ಧ ಸಾಮಗ್ರಿಗಳ ಖರೀದಿ ಸೇರಿದಂತೆ ರಾಜಕೀಯ ಮಾತುಕತೆಯನ್ನು ನಡೆಸಲು ಪ್ರಯತ್ನಿಸುತ್ತಿರುವುದನ್ನು ತಿಳಿಸಿದರು. ಬರ್ಮಾದ ಈ ಕ್ರಮದಿಂದಾಗಿ ಬ್ರಿಟೀಷರಿಗೆ ಅನಾನುಕೂಲವಾಯಿತು. ಎರಡು ದೇಶಗಳ ಸಂಬಂಧವನ್ನು ಕೆಡಿಸಿತು.

ಪ್ಯಾರೀಸ್‌ನಲ್ಲಿ ನಡೆದ ಫ್ರಾನ್ಸ್ ಮತ್ತು ಬರ್ಮಾದ ನಡುವಿನ ಮಾತುಕತೆಯು ಭಾರತ ಮತ್ತು ಬರ್ಮಾದೊಂದಿಗಿನ ಗಡಿ ವಿವಾದವನ್ನು ಬಹಿರಂಗಗೊಳಿಸಿತು. ಈ ಎರಡು ದೇಶಗಳ ನಡುವೆಯಿರುವ ಗಡಿಯನ್ನು ಏಕಪಕ್ಷೀಯವಾಗಿ ಗುರುತು ಮಾಡಲು ಭಾರತದಲ್ಲಿನ ಬ್ರಿಟೀಷ್‌ ಆಡಳಿತ ೧೮೮೧ರಲ್ಲಿ ನಿಯೋಗವೊಂದನ್ನು ನೇಮಿಸಿತು. ಈ ಸಂಬಂಧ ತನ್ನ ಕಾರ್ಯವನ್ನು ಆರಂಭಿಸಿದ ನಿಯೋಗ, ಬರ್ಮಾ ಸರಕಾರವು ಬ್ರಿಟೀಷರು ನಿರ್ಧರಿಸಿದ ಪಾಶ್ವದಿಂದ ಹಿಂದಕ್ಕೆ ಸರಿಯುವಂತೆ ಒತ್ತಾಯಿಸಿತು. ಇದಕ್ಕೆ ಬರ್ಮಾ ನಿರಂತರವಾಗಿ ಆಕ್ಷೇಪ ವ್ಯಕ್ತಪಡಿಸಿತು, ಆದರೆ ನಂತರ ಹಿಂತೆದುಕೊಂಡಿತು.

ಚಿತ್ರ:Mindhla after capture1885.jpg
ಮಿನ್ಹಲ, ಬ್ರಿಟೀಷ್‌‌ರಿಂದ ಇದರ ಸೆರೆಯಾದ ಮೇಲೆ, 1885ರ ಮಧ್ಯ ನವೆಂಬರ್, ಸಾವು ಹಾಗೂ ನಾಶವನ್ನು ತೋರಿಸುತ್ತದೆ. ಛಾಯಾಚಿತ್ರಗಾರ: ಹೂಪರ್, ವಿಲೊಘಬೈ ವಾಲೇಸ್ (1837-1912).

೧೮೮೫ ರಲ್ಲಿ ಫ್ರಾಸ್‌ನ ವಾಣಿಜ್ಯ ರಾಯಭಾರಿ ಎಂ.ಹಸ್ಸ್ ಮಾಂಡಲೈಗೆ ಪ್ರಯಣಿಸಿದ. ಬರ್ಮಾದಲ್ಲಿ ಫೆಂಚ್ ಬ್ಯಾಂಕನ್ನು ಸ್ಥಾಪಿಸುವ ಕುರಿತು ಮತ್ತು ಫ್ರಾನ್ಸ್ ಏಕಸಾಮ್ಯದಲ್ಲಿರುವ ಬರ್ಮಾ ಸರಕಾರ ನಿಯಂತ್ರಿಸುತ್ತಿರುವ ಮಾಂಡಲೈಯಿಂದ ಬ್ರಿಟೀಷ್‌ ಬರ್ಮದ ಗಡಿಯ ವರೆಗೆ ರೈಲ್ವೆ ಮಾರ್ಗಕ್ಕೆ ವಿನಾಯಿತಿ ನೀಡುವ ಕುರಿತು ಮಾತುಕತೆಯನ್ನು ಹಸ್ಸ್ ನಡೆಸಿದ. ಇದಕ್ಕೆ ರಾಜತಾಂತ್ರಿಕವಾಗಿ ಪ್ರತಿಕ್ರಿಯೆಯನ್ನು ಬ್ರಿಟೀಷ್‌ ಸರಕಾರ ನೀಡಿತ್ತು. ಫ್ರಾನ್ಸ್ ಸರಕಾರ ಹಸ್ಸ್‌ನನ್ನು "ಆರೋಗ್ಯದ ಕಾರಣಕ್ಕಾಗಿ” ಆತನನ್ನು ಹಿಂದಕ್ಕೆ ಕರೆಸಿದ್ದು, ಆತನನ್ನು ಮತ್ತೆ ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಹೇಳಿತು. ಈ ನಡುವೆ ಫ್ರಾನ್ಸ್ ಬರ್ಮಾದಲ್ಲಿ ಮುಗ್ಗರಿಸಿತು. ಫ್ರಾನ್ಸ್ ಸರಕಾರದ ಚಟುವಟಿಕೆ ಮತ್ತಿತರ ಘಟನೆಗಳು ಬರ್ಮಾದ ವಿರುದ್ಧ ಬ್ರಿಟೀಷರು ಕ್ರಮ ತೆಗೆದುಕೊಳ್ಳುವಂತೆ ಮಾಡಿತು.

ಟೌಂಗೂನಿಂದ ತೇಗದ ಮರವನ್ನು ಅನಧಿಕೃತವಾಗಿ ಸಾಗಣೆ ಮಾಡಿರುವುದು ಮತ್ತು ಉದ್ಯೋಗಿಗಳಿಗೆ ವೇತನವನ್ನು ಪಾವತಿ ಮಾಡಿಲ್ಲ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬಾಂಬೆ ಬರ್ಮಾ ಟ್ರೆಡಿಂಗ್ ಕಾರ್ಪೋರೇಶನ್‌ಗೆ ಬರ್ಮಾ ನ್ಯಾಯಾಲಯವು ದಂಡ ವಿಧಿಸಿತು. ಇದರ ಜೊತೆಗೆ ಕಂಪೆನಿಯ ಕೆಲವು ಮರಮುಟ್ಟುಗಳನ್ನು ಬರ್ಮಾದ ಅಧಿಕಾರಿಗಳು ವಶಪಡಿಸಿಕೊಂಡರು. ಆದರೆ ಕಂಪೆನಿ ಮತ್ತು ಬ್ರಿಟೀಷ್‌ ಸರಕಾರ ಈ ಆರೋಪ ಸುಳ್ಳು ಮತ್ತು ಬರ್ಮಾದ ನ್ಯಾಯಾಲಯ ಭ್ರಷ್ಟವಾಗಿದೆ ಎಂದು ಹೇಳಿತು. ಈ ವಿವಾದವನ್ನು ಬಗೆ ಹರಿಸಲು ಬ್ರಿಟೀಷ್‌ ಸರಕಾರ ನೇಮಿಸುವ ನ್ಯಾಯಾಧೀಶನನ್ನು ಅಂಗೀಕರಿಸಬೇಕು. ಇದನ್ನು ಬರ್ಮಾ ನಿರಾಕರಿಸಿದಾಗ, ಬ್ರಿಟೀಷ್‌ ಸರಕಾರ ೧೮೮೫ರ ಅಕ್ಟೋಬರ್ ೨೨ ರಂದು ಅಂತಿಮ ಪ್ರಸ್ತಾಪವೊಂದನ್ನು ಕಳುಹಿಸಿತು. ಮಾಂಡಲೈನಲ್ಲಿ ಬ್ರಿಟೀಷ್‌‌ರ ಹೊಸ ರಾಯಭಾರಿ ನಿವಾಸ ಮತ್ತು ಈ ರಾಯಭಾರಿ ಅಲ್ಲಿಗೆ ತಲುಪುವ ವರೆಗೆ ಕಂಪೆನಿಯ ವಿರುದ್ಧ ಯಾವುದೇ ಕಾನೂನು ಕ್ರಮ ಅಥವಾ ದಂಡವನ್ನು ವಿಧಿಸುವುದನ್ನು ಅಮಾನತುಗೊಳಿಸುವುದು, ಬರ್ಮಾವು ತನ್ನ ವಿದೇಶಾಂಗ ವ್ಯವಹಾರಗಳನ್ನು ಬ್ರಿಟೀಷ್‌ ಸರಕಾರಕ್ಕೆ ಹಾಜರುಪಡಿಸಬೇಕು ಹಾಗೂ ಉತ್ತರ ಬರ್ಮಾ ಮತ್ತು ಚೀನಾದ ನಡುವೆ ವ್ಯಾಪಾರ ಅಭಿವೃದ್ಧಿಗೊಳಿಸಲು ವಾಣಿಜ್ಯ ಸೌಲಭ್ಯಗಳನ್ನು ಬ್ರಿಟೀಷರಿಗೆ ಒದಗಿಸಬೇಕು ಎಂಬುದು ಈ ಅಂತಿಮ ಪ್ರಸ್ತಾಪದ ಒತ್ತಾಯವಾಗಿತು. ಬರ್ಮಾಕ್ಕೆ ಯಾವುದೇ ನಿಜವಾದ ಸ್ವಾತಂತ್ರ್ಯ ಸಿಗುವ ವರೆಗೆ ಮತ್ತು ಬ್ರಿಟೀಷ್‌ ರಾಜಾಧಿಕಾರದ ನಿಯಂತ್ರಣದಲ್ಲಿರುವ ಭಾರತದ ನಾಮನಿರ್ದೇಶಿತ ಸ್ವಾಯತ್ತೆತೆಯ ರೀತಿಯ ಸ್ವಾತಂತ್ರ್ಯ ಸಿಗುವವರೆಗೆ ಅಂತಿಮ ಪ್ರಸ್ತಾಪವು ಇರಲಿದೆ ಎಂದು ಪ್ರಸ್ತಾಪದಲ್ಲಿ ತಿಳಿಸಲಾಗಿತ್ತು. ಈ ಕುರಿತು ನವೆಂಬರ್ ೯ ರಂದು ಪ್ರಾಯೋಗಿಕ ನಿರಾಕರಣೆ ರಂಗೂನ್‌ನಲ್ಲಿ ಸ್ವೀಕರಿಸಲಾಯಿತು. ಮಾಂಡಲೈ ವ್ಯವಹಾರ ಮತ್ತು ಬರ್ಮಾರ ರಾಜ ಥಿಬೌ ಮಿನ್‌ನನ್ನು ಹುದ್ದೆಯಿಂದ ಕೆಳಗಿಳಿಸುವುದನ್ನು ನಿರ್ಧಾರಿಸಲಾಯಿತು. ಇದನ್ನು ಬರ್ಮಾ ಸಾಮ್ರಾಜ್ಯದ ಅಕ್ರಮಣ ಎಂಬುದನ್ನು ನಿರ್ಧಾರಿಸಲಾಯಿತು ಎಂದೂ ತಿಳಿದುಕೊಳ್ಳಬಹುದು.

ಯುದ್ಧ[ಬದಲಾಯಿಸಿ]

ಚಿತ್ರ:King thebaws steamer fullyarmed1885.jpg
ರಾಜ ತೈಬೌನ ಹಡುಗುಗಳಲ್ಲಿ ಇರವಡಿಯ ಮೇಲಿರುವ ಒಂದರ ಛಾಯಾಚಿತ್ರ, 26 ನವೆಂಬರ್ 1885.ಛಾಯಾಚಿತ್ರಗಾರ: ಹೂಪರ್, ವಿಲೊಘಬೈ ವಾಲೇಸ್ (1837-1912).

ಈ ಸಮಯದಲ್ಲಿ, ದೇಶವು ತುಂಬ ಕ್ಲಿಷ್ಟಕರವಾದ ಕಾಡುಗಳಿಂದ ಕೂಡಿದ್ದರಿಂದ ಸೈನಿಕರಿಗೆ ತೂಂಬ ಅನಾನುಕೂಲವಾದ ಪರಿಸ್ಥಿತಿ ಇತ್ತು. ಬ್ರಿಟೀಷರು ಮೇಲಿನ ಬರ್ಮಾದ ಸ್ವಲ್ಪ ಮಾತ್ರ ಆಂತರಂಗಿಕ ಪರಿಸ್ಥಿತಿಯನ್ನು ತಿಳಿದುಕೊಂಡವರಾಗಿದ್ದರು. ಆದರೆ ಆವಿಯಂತ್ರವನ್ನು ಹೊಂದಿದ್ದ ಬ್ರಿಟೀಷ್‌‌ ಹಡಗುಗಳು ರಂಗೂನ್‌ನಿಂದ ಮಾಂಡಲಿಗೆ ವರ್ಷಗಟ್ಟಲೆ ಇರಾವತಿ ನದಿಯಲ್ಲಿ ಒಡಾಡಿದ್ದವು. ಮತ್ತು ಈ ಮಾರ್ಗವು ಅತ್ಯಂತ ಬೇಗನೇ ಬ್ರಿಟೀಷ್‌ ತುಕಡಿಯನ್ನು ರಾಜಧಾನಿಯ ಹತ್ತಿರ ಕರೆದೊಯ್ಯಬಲ್ಲ ಮಾರ್ಗವಾಗಿತ್ತು. ನಂತರ, ರಂಗೂನ್‌ನಲ್ಲಿ ಸಿಗುವ ಇರಾವತಿ ಪ್ಲೋಟಿಲಾ ಕಂಪನಿಗೆ ಸೇರಿದ ಹಗುರ ಆವಿ ಯಂತ್ರದ ಹಡಗುಗಳನ್ನು ಮತ್ತು ತೆಪ್ಪಗಳನ್ನು ದೊಡ್ಡಪ್ರಮಾಣದಲ್ಲಿ ತೆಗೆದುಕೊಂಡು ಹೊರಟಿತು, ಮತ್ತು ಸ್ಥಳಿಯ ಕಂಪನಿಯ ಅಧಿಕಾರಿಗಳ ಕಷ್ಟಕರ ನದಿ ಪ್ರಯಾಣದ ಬಗೆಗಿನ ಜ್ಞಾನವು ಬ್ರಿಟೀಷ್‌‌ ತುಕಡಿಗಳಿಗೆ ಸಹಾಯಕವಾಯಿತು.

ನಂತರ ಮೇಜರ್‌-ಜನರಲ್‌ ಸರ್‌ ಹ್ಯಾರಿ ನಾರ್ಥ್‌ ದಾರ್ಲಿಂಪಲ್‌ ಪ್ರೆಂಡರ್‌ಗಾಸ್ಟ್‌ ಅವರು ನೌಕಾ ಸೈನಿಕ ತುಕಡಿಯ ನೇತ್ರತ್ವವಹಿಸಿದರು. ಬ್ರಿಟೀಷ್‌‌ ಪಡೆಯು ಭೂ ಸೈನಿಕ ಮತ್ತು ನೌಕಾನೆಲೆಯ ಬಂದುಕುದಾರಿಗಳ ಸೇವೆಯನ್ನು ಹೊಂದಿತ್ತು. ಒಟ್ಟಾರೆ ಲಭ್ಯವಿದ್ದ ಸೈನಿಕರ ಸಂಖ್ಯೆಯು ೯,೦೩೪ ಇತ್ತು. ೨೮೧೦ ಸ್ಥಳಿಯ ಸಹಾಯಕರು ಮತ್ತು ೬೭ ಬಂದುಕುಗಳನ್ನು ಒಳಗೊಂಡಿತ್ತು. ಮತ್ತು ನದಿಯಲ್ಲಿನ ಸೇವೆಗಾಗಿ ೨೪ ಯಂತ್ರಚಾಲಿತ ಬಂದೂಕುಗಳನ್ನು ಹೊಂದಿತ್ತು. ತುಕಡಿಯು ಒಟ್ಟಾರೆ ೫೪ ನೌಕಾ ಉಗಿಯಂತ್ರಗಳು, ತೆಪ್ಪಗಳು(ಬಾರ್ಜ್‌),ಮತ್ತು ಲಾಂಚ್‌ಗಳನ್ನು ಹೊಂದಿತ್ತು.

ದಾಯೆಟ್‌ಮ್ಯೋ ಇದು ನದಿಗೆ ಅತ್ಯಂತ ಹತ್ತಿರವಿರುವ ಬ್ರಿಟೀಷರ ಮುಂದಿರುವ ತಂಗುವ ಸ್ಥಳವಾಗಿತ್ತು, ಮತ್ತು ೧೪ ನವೆಂಬರ್‌ನಿಂದ ಐದು ದಿನದ ನಂತರ ಥೈಬೊರವರ ಉತ್ತರವು ದೊರೆಯಿತು. ಪ್ರಾಯೋಗಿಕವಾಗಿ ಎಲ್ಲ ವ್ಯವಸ್ಥೆಗಳನ್ನು ವ್ಯವಸ್ಥಿತವಾಗಿ ಜೋಡಿಸಲಾಗಿತ್ತು. ಅದೇ ದಿನ ಜನರಲ್ ಪ್ರೆಂಡರ್‌ಗಾಸ್ಟ್‌ರವರು ಮುಂದಿನ ಕಾರ್ಯಾಚರಣೆಯನ್ನು ಕೈಗೋಳ್ಳಲು ಸೂಚನೆಯನ್ನು ನೀಡಲಾಯಿತು. ಬರ್ಮಾದ ರಾಜ ಮತ್ತು ಅವನ ರಾಜ್ಯವನ್ನು ಅತೀವೇಗದಿಂದ ಸಂಪೂರ್ಣ ಸುತ್ತುವರಿಯಲ್ಪಟ್ಟಿತು. ಅಲ್ಲಿನ ರಾಜನಿಗೆ ಪ್ರತಿರೋಧವೊಡ್ಡಲು ತಯಾರಿಯನ್ನು ನಡೆಸಲು ಸಮಯವೇ ಇರಲಿಲ್ಲ. ನದಿಯನ್ನಾವರಿಸಿದ ಬ್ರಿಟೀಷರ ಉಗಿ ಯಂತ್ರದ ಹಡಗುಗಳನ್ನು ಸಹ ತಡೆಯಲು ಬರ್ಮಾಯರು ಅಸಮರ್ಥವಾಗಿದ್ದರು. ಇರಾವತಿ ಮತ್ತು ಕಾತಲಿನ್‌ ಕಂಪನಿಯವರು ಮುಂಗಡ ಪಾವತಿಯನ್ನು ಪಡೆದ ಮರುದಿನವೇ ಬರ್ಮಾದ ರಾಜನ ಹಡಗನ್ನು ಸೆರೆಹಿಡಿಯಲಾಯಿತು. ಆ ತಿಂಗಳ ಹದಿನಾರರಂದು ನದಿಯ ಎರಡೂ ದಡಗಳಲ್ಲಿ ಭೂಸೇನೆಯಿಂದ ದಾಳಿ ಮಾಡಲಾಯಿತು ಆದರೆ ಬರ್ಮಾದವರು ಪರಿಸ್ಥಿಯನ್ನು ನಿಗ್ರಹಿಸುವ ಶಕ್ತಿಯನ್ನು ಹೊಂದಿರಲಿಲ್ಲ. ನವೆಂಬರ್‌ ೧೭ರಂದು ನದಿಯ ಬಲಭಾಗದಲ್ಲಿನ ಮಿನ್‌ಹಾಲಾದಲ್ಲಿನ ಬಹುಮಹಡಿ ಪವಿತ್ರ ಗೋಪುರವನ್ನು ಬರ್ಮಾಗಳು ಬ್ರಿಟೀಷ್‌‌ ಪಡೆಯನ್ನು ತಡೆಯಲು ಸಮರ್ಥವಾದವು. ಇದರಿಂದಾಗಿ ಎರಡು ಪಡೆಗಳ ನಡುವೆ ಗುಂಡಿನ ಚಕಮಕಿಗಳು ಶುರುವಾದವು, ಕೊನೆಗೂ ಬರ್ಮಾದ ತುಕಡಿಯು ೧೭೦ ಜನರ ಸಾವು ಮತ್ತು ೨೭೬ ಜನ ಕೈದಿಗಳಾಗುವುದರೊಂದಿಗೆ ಸೋಲನ್ನು ಒಪ್ಪಿಕೊಂಡಿತು. ಮತ್ತೆ ಕೆಲವರು ನದಿಗಳ ಮೂಲಕ ತಪ್ಪಿಸಿಕೊಂಡು ಓಡಿಹೊದರು. ಸೈನಿಕರ ಮುಂದುವರಿಯುವಿಕೆಯು ಮುಂದಿನ ದಿನಗಳಲ್ಲೂ ಮುಂದುವರೆಯಿತು. ನೌಕಾನೆಲೆ ಮತ್ತು ಫಿರಂಗಿಗಳ ನೇತ್ರತ್ವವನ್ನು ಹೊಂದಿದ ಪಡೆಗಳು ಬರ್ಮಾದ ಪಡೆಗಳನ್ನು ಸುಮ್ಮನಾಗಿಸುವಲ್ಲಿ ನ್ಯಾಂಗ್‌-ಯು, ಪಕೋಕ್ಕು, ಮತ್ತು ಮೈಗೆನ್‌ಗಳ್ಳಲ್ಲಿ ಸಫಲವಾದವು.

ಕೆಲವು ಸುದ್ದಿ ಮೂಲಗಳ ಪ್ರಕಾರ ಬರ್ಮಾದ ಮೂಲ ನಿವಾಸಿಗಳು ಹೆಚ್ಚಿನ ಪ್ರತಿರೋಧವನ್ನು ಒಡ್ಡಲಿಲ್ಲ. ಏಕೆಂದರೆ ಥೈಬೋ ದೊರೆಯ ರಕ್ಷಣಾ ಮಂತ್ರಿಯಾದ ಕಿನವಾನ್‌ ಮಿನ್‌ ಗಯಿ ಯು ಕಾಂಗ್‌ ಇವರು ಬ್ರಿಟೀಷರೊಂದಿಗೆ ಬಾಂದವ್ಯಗಳನ್ನು ಬೆಳೆಸಿಕೊಳ್ಳುವಂತೆ ಸೂಚನೆ ನೀಡಿದ್ದರಿಂದ ಬಹಳಷ್ಟು ತುಕಡಿಗಳು ಯುದ್ದವನ್ನು ಮಾಡಲಿಲ್ಲ. ಆದರೆ ಕೆಲವು ತುಕಡಿಗಳು ಮಾತ್ರ ಅವರ ಮಾತನ್ನು ಕೇಳದೇ ಯುದ್ದವನ್ನು ಮಾಡಿದವು. ಬ್ರಿಟೀಷರು ಬರ್ಮಾದವರಿಗೆ(ಯು ಕಾಂಗ್ ಸೇರಿದಂತೆ) ತಾವು ಥೈಬೋ ದೊರೆಯನ್ನು ಕೆಳಗಿಳಿಸಿ ನಾಯುಂಗ್‌ ಯಾನ್‌(ಥೈಬೋನ ದೊಡ್ಡಪ್ಪನ ಮಗ)ನನ್ನು ಗದ್ದುಗೆಯ ಮೇಲೆ ಕುಳ್ಳಿಸಿ ತಾವು ವಾಪಸಾಗುತ್ತೇವೆಂದು ನಂಬಿಸಿದ್ದರು. ಆ ಸಂದರ್ಭದಲ್ಲಿ ಥೈಬೋ ದೊರೆಯನ್ನು ಬರ್ಮಾದವರು ಒಂದನೇಯದಾಗಿ ಅವನ ಕೆಳದರ್ಜೆಯ ಆಡಳಿತಕ್ಕಾಗಿ ಮತ್ತು ಇದಕ್ಕಿಂತ ಮೊದಲು ೧೮೭೮ರಲ್ಲಿ ದೊರೆಯಾಗುವ ಸಂದರ್ಭದಲ್ಲಿ ಥೈಬೋ ದೊರೆ ಮತ್ತು ಅವನನ್ನು ರಾಜನನ್ನು ದೊರೆಯಾಗಿ ಮಾಡಿದ ಸಹಾಯಕರು ಸೇರಿ ನೂರಾರು ರಾಜ ಬಂದುಗಳನ್ನು ಗಲ್ಲಿಗೇರಿಸಿದ್ದಾರೆ ಎಂಬ ಕಾರಣಕ್ಕಾಗಿ ದೊರೆಯನ್ನು ವಿರೋಧಿಸುತ್ತಿದ್ದರು. ನಾಯುಂಗ್‌ ಯಾನ್‌ ಇವರು ಥೈಬೋ ದೊರೆಯ ಈ ಕುಕ್ರತ್ಯದಿಂದ ಪಾರಾಗಿ ದೇಶ ಬೃಷ್ಟನಾಗಿ ಬ್ರಿಟೀಷರು ಆಳುತ್ತಿದ್ದ ಭಾರತಕ್ಕೆ ಬಂದು ತಲೆಮರೆಸಿಕೊಂಡಿದ್ದನು. ಆ ವಿಷಯವು ಯುದ್ದದ ವೇಳೆಗಾಗಲೇ ಮರೆತು ಹೋದ ವಿಷಯವಾಗಿತ್ತು ಆದರೆ ಬ್ರಿಟೀಷರು ಅದನ್ನೇ ಮೂಲ ವಿಷಯವನ್ನಾಗಿ ಮಾಡಿದರು ಕೆಲವು ಮಾಹಿತಿಗಳ ಪ್ರಕಾರ ಬರ್ಮಾಯರನ್ನು ಸುಲಭವಾಗಿ ನಂಬಿಸುವ ಸಲುವಾಗಿ ನಾಯಂಗ್‌ಯಾನ್‌ನಂತೆ ವೇಷಧಾರಿಯೊಬ್ಬನನ್ನೂ ಕೂಡ ಮಾಂಡಲೇಯ ಮಾರ್ಗದಲ್ಲಿ ಕರೆದುಕೊಂಡು ಬಂದಿದ್ದರೆಂದು ತಿಳಿದುಬರುತ್ತದೆ. {{citation}}: Empty citation (help) ಇದರಿಂದಾಗಿ ಬರ್ಮಾಯರು ಬ್ರಿಟೀಷರ ದೇಶಾಡಳಿತವನ್ನು ಬದಲಾಯಿಸುವ ಕರೆಗೆ ಸ್ಪಂದಿಸಿದರು ಮತ್ತು ಬ್ರಿಟೀಷ್‌‌ ಪಡೆಗಳಿಗೆ ಪ್ರತಿರೋಧವನ್ನು ಒಡ್ಡಲಿಲ್ಲ. ಆದರೆ ಬ್ರಿಟೀಷ್‌‌ ಪಡೆಯು ಹೊಸ ಸರ್ಕಾವನ್ನು ರಚಿಸಲು ವಿಫಲವಾಗಿ ಬರ್ಮಾ ತನ್ನ ಸ್ವತಂತ್ರವನ್ನು ಕಳೆದುಕೊಂಡಿತು. ಹಿಂದಿನ ಬರ್ಮಾದ ರಾಜನ ಸೇನಾ ತುಕಡಿಯೂ ಸೇರಿದಂತೆ ಬರ್ಮಾದ ಹಲವು ಗುಂಪುಗಳಿಂದ ಉಗ್ರ ಪ್ರತಿರೋಧವನ್ನು ಒಡ್ಡಿದರು. ಈ ಪ್ರತಿರೋಧವು ದಶಗಳಿಗಿಂತಲೂ ಹೇಚ್ಚುಕಾಲ ನಡೆಯಿತು. ಬರ್ಮಾದ ಅಸ್ಥಿತ್ವವನ್ನು ನಾಶ ಮಾಡುವುದರಲ್ಲಿಯ ಯು ಕಾಂಗ್‌ರವರ ಮೊದಲ ಪಾತ್ರವು ಜನಪ್ರಿಯ ನಿಮೊನಿಕ್ "U Kaung lein htouk, minzet pyouk "("ಯು ಕಾಂಗ್‌ರ ವಿಶ್ವಾಸ ಘಾತುಕತೆ,ಅರಸು ಮನೆತನದ ಕೊನೆ" ಬರ್ಮಾದ ಸಂಖ್ಯಾ ಭವಿಷ್ಯ ಯು=೧,ಕೆ.ಎ=೨,ಎಲ್‌.ಎ=೪, ಎಚ್‌.ಟಿ.ಎ=೭)ಗಳ ಉಗಮಕ್ಕೆ ಕಾರಣವಾಯಿತು. ಅಂದರೆ ೧೨೪೭ ಬರ್ಮಾಯುಗ ಅಥವಾ ಕ್ರಿಸ್ತಶಕ ೧೮೮೫).

28 ನವೆಂಬರ್ 1885ರಂದು, ಮ್ಯಾಂಡಲೆಯಲ್ಲಿ ಬ್ರಿಟೀಷ್‌ ದಳಗಳ ಆಗಮನದ ಛಾಯಾಚಿತ್ರ, ಮೂರನೇಯ ಆಗ್ಲೊ-ಬರ್ಮನ್ನರ ಯುದ್ಧ.ಛಾಯಾಚಿತ್ರಗಾರ: ಹೂಪರ್, ವಿಲೊಘಬೈ ವಾಲೇಸ್ (1837-1912).

ನವೆಂಬರ್‌ ೨೬ರಂದು,ಯಾವಾಗ ನೌಕಾಪಡೆಗಳು ರಾಜಧಾನಿಯಾದ 'ಅವಾ'ವನ್ನು ಸುತ್ತುವರೆದರೋ ಆಗ ಜನರಲ್‌ ಪ್ರೆಂಡರ್‌ಗಾಸ್ಟರು ದೊರೆಯಿಂದ ಶರಣಾಗುತ್ತೇನೆಂಬ ಸಂದೇಶವನ್ನು ಹೊತ್ತ ದೂತನನ್ನು ಭೇಟಿಯಾದರು.ಮತ್ತು ೨೭ನೇ ತಾರೀಕಿನಂದು ಹಡಗುಗಳು ನಗರವನ್ನು ಸುತ್ತುವರೆದು ಇನ್ನೇನು ಯುದ್ಧ ಪ್ರಾರಂಭಿಸಬೇಕು ಅನ್ನುವಷ್ಟರಲ್ಲಿ,ದೊರೆಯ ಸೇನಾಪಡೆಯು ತನ್ನ ಎಲ್ಲ ಶಸ್ತ್ರಾಸ್ತ್ರಗಳನ್ನು ಕೆಳಗಿಳಿಸಿ ಶರಣಾಗುವಂತೆ ದೊರೆಯಿಂದ ಆಜ್ಞೆಯನ್ನು ಪಡೆಯಿತು. ಅಲ್ಲಿ ಮೂರು ಪ್ರಭಲವಾದ ಕೋಟೆಗಳು ಇದ್ದವು ಬರ್ಮಾದ ಸಾವಿರಾರು ಸುಸಜ್ಜಿತ ಸೈನಿಕರು ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಶರಣಾಗತರಾದರು. ಆದರೆ ಕೆಲವರು ಮಾತ್ರ ತಮ್ಮ ಶಸ್ತ್ರಾಗಳ ಸಮೇತ ದಿಕ್ಕಾಪಾಲಾಗಿ ಒಡಿಹೋದರು ಮತ್ತು ಗೇರಿಲ್ಲಾ ಪಡೆಗಳಾಗಿ ಬಹಳಕಾಲದವರೆಗೆ ಯುದ್ದವನ್ನು ಮುಂದುವರೆಸಿದರು. ಇಲ್ಲಿಗೆ ದೊರೆಯ ಶರಣಾಗತಿ ಕಾರ್ಯವು ಮುಗಿದಂತಾಯಿತು. ಮತ್ತು ನವೆಂಬರ್‌ ೨೮ರೊಳಗಾಗಿ ಯುದ್ದಸಾರಿದ ಕೇವಲ ಹದಿನೈದು ದಿನಗಳ ಒಳಗಾಗಿ ಮ್ಯಾಂಡಲೆಯು ಸಂಪೂರ್ಣ ಶರಣಾದಂತ್ತಾಗಿತ್ತು, ಮತ್ತು ದೊರೆ ಥೈಬೋನನ್ನು ಕೈದಿಯಾಗಿ ಸೆರೆಹಿಡಿದು, ಆತನನ್ನು ಮತ್ತು ಆತನ ಕುಟುಂಬವರ್ಗದವರನ್ನು ಭಾರತಕ್ಕೆ ಗಡಿಪಾರು ಮಾಡಿದರು.ಅತ್ಯಂತ ಭದ್ರವಾದ ನದಿತೀರದ ಕೋಟೆಯನ್ನು ಮತ್ತು ನಗರವನ್ನು ಮತ್ತು ದೊರೆಯ ಎಲ್ಲ ಅಂದರೆ ದೊರೆಯ ಫಿರಂಗಿಗಳು(೧೮೬೧ ಫೀರಂಗಿಗಳು), ಸಾವಿರಾರು ರೈಫಲ್ಲುಗಳನ್ನೂ, ಹಗುರ ಬಂದೂಕುಗಳನ್ನೂ,ಮತ್ತು ಆಯುಧಗಳನ್ನೂ ವಶಪಡಿಸಿಕೊಂಡರು. ಬ್ರಿಟೀಷರು ಮಾಂಡಲೇ ನಗರವನ್ನು ಲೂಟಿಮಾಡಿದರು ಮತ್ತು ಅವುಗಳನ್ನು ೯ಲಕ್ಷ ರೂಪಾಯಿ ಲಾಭ ಮಾಡಿಕೊಂಡು ಮಾರಿದರು.

ಮಾಂಡಲೆಯಿಂದ, ಜನರಲ್ ಪ್ರೆಂಡರ್‌ಗೆಸ್ಟ್‌ ಡಿಸೆಂಬರ್‌ ೨೮ರಂದು ಭಾಮೊವನ್ನು ತಲುಪಿದನು. ಭಾಮೋ ಚಿನಾದ ಚರಿತ್ರಾಹ ಸ್ಥಳವಾಗಿದ್ದು ಇದು ಬಹಳ ಮಹತ್ವದ ನಡಿಗೆಯಾಗಿತ್ತು, ಮೊದಲೇ ಚೀನಾವು ಈ ಸ್ಥಳವನ್ನು ತನ್ನ ನೆಲವೆಂದು ತಕರಾರು ತೆಗೆದು ಬರ್ಮಾದೊಂದಿಗೆ ವಿರೋಧವನ್ನು ಹೊಂದಿತ್ತು. ದೊರೆಯನ್ನು ಮತ್ತು ಅವನ ಕುಟುಂಬವನ್ನೂ ರಾಷ್ಟ್ರದಿಂದ ಗಡಿಪಾರು ಮಾಡಿ ಭಾರತಕ್ಕೆ ಕಳುಹಿಸಿದ ನಂತರವೂ, ಮತ್ತು ನದಿ ದಂಡೆಯ ಸಂಪೂರ್ಣ ರಾಜ್ಯದ ಹಿಡಿತವು ಬ್ರಿಟೀಷರ ಕೈಲಿದ್ದಾಗ್ಯೂ ದಂಗೆಕೋರರು ಸೈನಿಕರಿಂದ ಸೋಲಿಸಲು ಕಷ್ಟಕರವಾದ ಈ ಸಂದರ್ಭವನ್ನು ಚೆನ್ನಾಗಿ ಬಳಸಿಕೊಂಡರು.

ಆಕ್ರಮಣ ಮತ್ತು ಪ್ರತಿರೋಧ[ಬದಲಾಯಿಸಿ]

ಬರ್ಮಾವು ಬ್ರಿಟೀಷರಿಂದ ಜನವರಿ ೧, ೧೮೮೬ರಂದು ದಾಳಿಗೊಳಗಾಯಿತು. ಬ್ರಿಟೀಷರ ದಾಳಿಯ ನಿಜವಾದ ಉದ್ದೇಶವು ಯುದ್ದದ ಸಂದರ್ಭದಲ್ಲಿ ಸ್ಪಷ್ಟವಾಯಿತು. ಆದರೆ ಯುದ್ದದಲ್ಲಿ ಬರ್ಮಾದವರು ತೋರಿದ ಪ್ರತಿರೋಧವು ೧೮೯೬ರ ವರೆಗೆ ನಡೆದ ದಂಗೆಯ ಪ್ರಾರಂಭವಷ್ಟೇ ಆಗಿತ್ತು.

ರಾಜ ತೈಬೌನ ಕಾವಲುಗಾರರ ಛಾಯಾಚಿತ್ರ, ಪಶ್ಚಿಮ ಪ್ರವೇಶದ್ವಾರ, ಮ್ಯಾಂಡಲೆ ಅರಮನೆ, 28 ನವೆಂಬರ್ 1885.ಛಾಯಾಚಿತ್ರಗಾರ: ಹೂಪರ್, ವಿಲೊಘಬೈ ವಾಲೇಸ್ (1837-1912).

ತದನಂತರ ದೇಶವು ಸರ್‌ ಪ್ರೆಡರಿಕ್‌ (ನಂತರದಲ್ಲಿ ಅರ್ಲ ಆದ)ರಾಬರ್ಟ್ ರ ಮುಂದಾಳತ್ವದಲ್ಲಿ ಯಶಸ್ವಿಯಾಗಿ ಸಂಪೂರ್ಣ ಶಾಂತಿಯನ್ನು ಕಂಡಿತು. ಇವರು ಆರಕ್ಷಕ ತುಕಡಿಗಳನ್ನು ಸಣ್ಣ ಗುಂಪುಗಳಾಗಿ ಮಾಡಿ ದೇಶದ ತುಂಬ ನೆಲೆಯೂರುವಂತೆ ಮಾಡಿದರು, ಮತ್ತು ಒಂದು ವೇಳೆ ದಂಗೆಗಳುಂಟ್ಟಾದಲ್ಲಿ ಬೇಕಾಗುವ ಸಣ್ಣ ಶಸ್ತ್ರಾಸ್ತ್ರಗಳನ್ನು ಒದಗಿಸಿದರು. ಬ್ರಿಟೀಷರು ದೇಶದ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸಿದರು, ಹಲವಾರು ವರ್ಷಗಳ ನಂತರದ ಕಠಿಣವಾದ ದಂಡಯಾತ್ರೆಯ ನಂತರ, ಕೊನೆಗೂ ಪ್ರತಿರೋಧವು ಹಳ್ಳಿಗಳ ಮೇಲೆ ಶಿಕ್ಷೆಯಾಗುವುದರೊಂದಿಗೆ ಸಮಾಪ್ತಿಯಾಯಿತು. ಹಲವಾರು ಊರುಗಳು ಸುಡಲ್ಪಟ್ಟವು ಮತ್ತು ಆಸ್ತಿ ಪಾಸ್ತಿಗಳು ಒಂದೋ ನಾಶವಾದವು ಇಲ್ಲವೇ ಜಪ್ತಿಮಾಡಲ್ಪಟ್ಟವು. ಹಳ್ಳಿಗಳ ವಿರುದ್ಧ ಬ್ರಿಟೀಷರ ಹಗೆತನದ ನೀತಿಯಿಂದಾಗಿ ದಂಗೆಯಿಂದ ಸೋಲಿಸಬಹುದೆಂದು ನಂಬಿದ್ದ ಇಡೀ ದೇಶವನ್ನು ತಮ್ಮ ಹಿಡಿತದಲ್ಲಿ ತಂದುಕೊಂಡರು.

ಬ್ರಿಟೀಷರು ತಮ್ಮ ಅಧಿಕಾರವನ್ನು ಬುಡಕಟ್ಟು ಪ್ರದೇಶಗಳಾದ ಕಾಚಿನ್‌ ಪರ್ವತ ಮತ್ತು ಚಿನ್‌ ಪರ್ವತಗಳಿಗೂ ವಿಸ್ತರಿಸಿದರು. ಈ ಗಡಿ ಪ್ರದೇಶಗಳು ಬರ್ಮಾಯರಿಂದ ಕೂಡ ಹೆಸರಿಗಷ್ಟೇ ಆಳಲ್ಪಡುತ್ತಿದ್ದವು. ಮತ್ತು ಬ್ರಿಟೀಷರು ಚಿನಾವು ತನ್ನ ನೆಲವೆಂದು ವಾದಿಸಿ ತಕರಾರಿನಲ್ಲಿದ್ದ ಉತ್ತರದ ಗಡಿಯನ್ನೂ ಸಹ ಆವರಿಸಿಕೊಂಡರು.

ಮೊದಲ ಬರ್ಮಾ ಯುದ್ಧ(ಬಹುಶಃ ಇದೇ ಕಾರಣಕ್ಕಾಗಿ ಬಹಳ ಮುಖ್ಯವಾಗಿದೆ)ದ ಭೂಭಾಗದ ಆಕ್ರಮಿಸುವಿಕೆಯ ವಿವರಗಳ ಆಧಾರವಿಲ್ಲದೇ ಮೂರನೇ ಯುದ್ದದ ವರದಿಯು ಸಂಪೂರ್ಣವಾಗುವುದಿಲ್ಲ. ಇದು ನವೆಂಬರ್‌,೧೮೮೫ರಲ್ಲಿ ಬ್ರಿಟೀಷರ ಪೂರ್ವದ ಗಡಿನಾಡಿನ ಬಂಕರಾಗಿದ್ದ ಟೌಂಗೋದಿಂದ ಪ್ರಾರಂಭವಾಯಿತು. ಎಲ್ಲ ಸಣ್ಣ ಸೈನಿಕ ತುಕಡಿಗಳು ಕರ್ನಲ್‌ ಡಬ್ಲೂ.ಪಿ.ದಿಕ್ಕೆನ್‌ ಮತ್ತು ೩ನೇ ಮರ್ದಾಸ್‌ ಲೈಟ್‌ ಇನ್‌ಫೆಂಟ್ರಿಯಿಂದ ನಿಗ್ಯಾನ್‌(ಪೈನ್‌ಮಾನಾ)ದ ಉದ್ದೇಶಾರ್ಥವಾಗಿ ಹಿಡಿಯಲ್ಲಪಟ್ಟಿತ್ತು. ಚೆಲ್ಲಾಪಿಲ್ಲಿಯಾದ ಪ್ರತಿರೋಧಿಗಳ ಪ್ರತಿರೋಧದ ನಡುವೆಯೂ ಈ ಕಾರ್ಯಾಚರಣೆಯು ಸಂಪೂರ್ಣ ಯಶಸ್ವಿಯಾಯಿತು. ಮತ್ತು ಸೈನ್ಯವು ಯಮೆಥಿನ್‌ ಮತ್ತು ಲೈಂಗ್‌ಡೆಟ್‌ಗಳ ಕಡೆಗೆ ತಮ್ಮ ಪ್ರಯಾಣ ಬೆಳೆಸಿದವು. ಒಳನಾಡಿನ ಕಾರ್ಯಾಚರಣೆಯು ಚುರುಕಾಗುತ್ತಿದ್ದಂತೆ ಪರ್ವತ ಪ್ರದೇಶಗಳಲ್ಲಿ ಹೋರಾಡುವವರ ಕೊರತೆಯು ಎದುರಾಯಿತು. ಮತ್ತು ಬಹಳಷ್ಟು ಅಶ್ವಸೈನ್ಯದ ರೆಜಿಮೆಂಟುಗಳನ್ನು ಭಾರತದಿಂದ ತರಿಸಲಾಯಿತು.ಮತ್ತು ಪಧಾಥಿಗಳನ್ನು ಸ್ಥಳಿಯರನ್ನು ಸೇರಿಸಿಕೊಳ್ಳಲಾಯಿತು. ಬರ್ಮಾಯರೊಂದಿಗೆ ಹೋರಾಡುವುದು ಪರ್ವತಾರೋಹಿ ಸೈನ್ಯವಿಲ್ಲದೇ ಅಸಾಧ್ಯವೆಂದು ಬ್ರಿಟೀಷರು ಮನಗಂಡರು.

ಇವನ್ನೂ ಗಮನಿಸಿ[ಬದಲಾಯಿಸಿ]

  • ಬರ್ಮಾದ ಇತಿಹಾಸ
  • ಕೊನ್‌ಬೌಗ್ ರಾಜವಂಶ
  • ಮೊದಲ ಆಂಗ್ಲೋ-ಬರ್ಮನ್ನರ ಯುದ್ಧ (೧೮೨೩-೧೮೨೬)
  • ಎರಡನೇಯ ಆಂಗ್ಲೋ-ಬರ್ಮನ್ನರ ಯುದ್ಧ (೧೮೫೨)
  • ಬರ್ಮಾದಲ್ಲಿ ಬ್ರಿಟಷ್ ರಾಜ್ಯ

ಉಲ್ಲೇಖಗಳು[ಬದಲಾಯಿಸಿ]

  • Public Domain This article incorporates text from a publication now in the public domainChisholm, Hugh, ed. (1911). Encyclopædia Britannica (11th ed.). Cambridge University Press. {{cite encyclopedia}}: Cite has empty unknown parameters: |separator= and |HIDE_PARAMETER= (help); Invalid |ref=harv (help); Missing or empty |title= (help)
  • ಡಿ. ಜಿ. ಇ. ಹಾಲು, ಯುರೋಪ್ ಹಾಗೂ ಬರ್ಮಾ (ಅಕ್ಸಫೋರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ, ೧೯೪೫)
  • ಮಾರ್ಟಿನ್ ಡಿ. ಡಬ್ಲೂ. ಜೊನ್ಸ್, ’ದಿ ವಾರ್ ಒಫ್ ಲೊಸ್ಟ್ ಫುಟ್‌ಸ್ಟೆಪ್ಸ್. ಮೂರನೇಯ ಬರ್ಮನ್ನರ ಯುದ್ಧದ ಒಂದು ಪುನಃ-ನಿರ್ಧರಿಸುವಿಕೆ, ೧೮೮೫-೧೮೯೬', ಮಿಲಿಟರಿ ಐತಿಹಾಸಿಕ ಸಂಘಟನೆಯ ಸುದ್ದಿಪತ್ರಿಕೆ, xxxx (ಸಂಖ್ಯೆ. ೧೫೭), ಆಗಸ್ಟ್ ೧೯೮೯, ಪು. ೩೬-೪೦
  • ಮೂರನೇಯ ಆಂಗ್ಲೋ-ಬರ್ಮನ್ನರ ಯುದ್ಧ Archived 2005-11-22 ವೇಬ್ಯಾಕ್ ಮೆಷಿನ್ ನಲ್ಲಿ. ಪುಟ OnWar.com ನಲ್ಲಿದೆ

ಬಾಹ್ಯ ಕೊಂಡಿಗಳು[ಬದಲಾಯಿಸಿ]