ವಿಷಯಕ್ಕೆ ಹೋಗು

ಹಾಲೆಂಡ್‌ (Holland)

Coordinates: 52°15′00″N 4°40′01″E / 52.250°N 4.667°E / 52.250; 4.667
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಾಲೆಂಡ್‌

ನೆದರ್ಲೆಂಡ್‌ ದೇಶದೊಳಗೆ ಒಟ್ಟಿಗೆ ತೋರಿಸಲಾದ ಉತ್ತರ ಮತ್ತು ದಕ್ಷಿಣ ಹಾಲೆಂಡ್‌

ವಿಸ್ತೀರ್ಣ [1] ಟೆಂಪ್ಲೇಟು:Km2 to sq mi
ಜನಸಂಖ್ಯೆ 6,065,459 (2006 est.)
ಸಾಂದ್ರತೆ 1105.22/km2 (3032.72/sq mi)
ಪ್ರದೇಶಗಳು 2
ರಹವಾಸಿಗಳನ್ನು ಉಲ್ಲೇಖಿಸುವ ಪದ Hollander (ಹಾಲೆಂಡರ್‌) (ಹಾಲೆಂಡ್‌ನವರು)
ಭಾಷೆಗಳು ಡಚ್
(ಮುಖ್ಯವಾಗಿ ಹಾಲೆಂಡಿಕ್‌ ಪ್ರಾಂತ ಭಾಷೆ)
ಕಾಲವಲಯ (Time Zones) CEST (UTC+1)
ಬೇಸಿಗೆ (DST) CEST (UTC+2)
ಅತಿದೊಡ್ಡ
ನಗರಗಳು
(2010)
ಆಮ್ಸ್ಟರ್ಡಾಮ್‌ (739,290)
ರಾಟ್ಟರ್ಡಾಮ್‌ (607,460)
ದಿ ಹೇಗ್‌ (473,940)
ಹಾರ್ಲೆಮ್‌ (146,960)
ಡೋರ್ಡ್ರೆಕ್ಟ್‌ (118,540)
ಅಂದಿನ ಕೌಂಟಿ ಆಫ್‌ ಹಾಲೆಂಡ್‌ನಲ್ಲಿ 'ಕೋಟ್‌ ಆಫ್‌ ಆರ್ಮ್ಸ್‌'

ಹಾಲೆಂಡ್ ‌ ಎಂಬುದು ನೆದರ್ಲೆಂಡ್ಸ್‌ನ ಪಶ್ಚಿಮ ಭಾಗದ ಈ ಪ್ರಾದೇಶಿಕ ವಲಯವು ಉಲ್ಲೇಖಿತ, ಸಾಮಾನ್ಯ, ಬಳಕೆಯ ಹೆಸರು. ಹಾಲೆಂಡ್‌ ಎಂಬ ಪದವನ್ನು ಆಗಾಗ್ಗೆ ಇಡೀ ನೆದರ್ಲೆಂಡ್ಸ್‌ ದೇಶವನ್ನೇ ಉಲ್ಲೇಖಿಸಲು ಬಳಸಲಾಗುತ್ತಿದೆ. ಸಾಮಾನ್ಯವಾಗಿ ಸ್ವೀಕೃತವಾದರೂ, ಹಾಲೆಂಡ್‌ ಎಂಬ ಪದದ ಬಳಕೆ ಅನಧಿಕೃತವಾಗಿ ಉಳಿದಿದೆ.[]

ಇದು 10ನೆಯ ಶತಮಾನದಿಂದ 16ನೆಯ ಶತಮಾನದ ವರೆಗೆ, ಹಾಲೆಂಡ್‌ ನೈಜ ಭಾಗವು ಏಕೀಕೃತ ರಾಜಕೀಯ ಪ್ರದೇಶವಾಗಿತ್ತು. ಹಾಲೆಂಡ್‌ನ ಕೌಂಟ್‌ ಆಳ್ವಿಕೆಯಲ್ಲಿದ್ದ ಒಂದು ಕೌಂಟಿಯಾಗಿತ್ತು. ಆಗ 17 ಶತಮಾನದ ವೇಳೆಗೆ, ಹಾಲೆಂಡ್‌ ಕಡಲ ಸಂಪತ್ತು ಮತ್ತು ಇನ್ನಿತರಗಳಿಂದ ಆರ್ಥಿಕವಾಗಿ ಪ್ರಬಲ ರಾಷ್ಟ್ರವಾಯಿತು. ಡಚ್‌ ಗಣರಾಜ್ಯದ ಇತರೆ ಪ್ರಾಂತಗಳಿಗಿಂತಲೂ ಬಹಳಷ್ಟು ಪ್ರಾಬಲ್ಯ ಮೆರೆದಿತ್ತು.

ಇಂದು, ಹಾಲೆಂಡ್‌ನ ಈ ಹಿಂದೆ ಇದ್ದ ಸಣ್ಣ ದ್ವೀಪ, ಕೌಂಟಿಯಲ್ಲಿ ಉತ್ತರ ಹಾಲೆಂಡ್‌ ಮತ್ತು ದಕ್ಷಿಣ ಹಾಲೆಂಡ್‌ ಎಂಬ ಎರಡು ಡಚ್‌ ಪ್ರಾಂತಗಳಿವೆ. ಇವೆರಡೂ ಒಟ್ಟಾಗಿ ನೆದರ್ಲೆಂಡ್ಸ್‌ನ ಮೂರು ಅತಿದೊಡ್ಡ ನಗರಗಳನ್ನು ಒಳಗೊಳ್ಳುತ್ತವೆ: ದೇಶದ ರಾಜಧಾನಿ ಆಮ್ಸ್ಟರ್ಡಾಮ್ ‌ಆಗಿದ್ದರೆ, ಸರ್ಕಾರದ ಪ್ರಧಾನ ಕಾರ್ಯಸ್ಥಳ, ದಿ ಹೇಗ್‌; ಅಲ್ಲದೇ ಯುರೋಪ್‌ನ ಅತಿದೊಡ್ಡ ಬಂದರು ರಾಟರ್ಡಾಮ್‌.

ವ್ಯುತ್ಪತ್ತಿ

[ಬದಲಾಯಿಸಿ]

ಪ್ಲಿನಿ ದಿ ಎಲ್ಡರ್‌ (ಹಿರಿಯರಾಗಿದ್ದ ಪ್ಲಿನಿ) (ಕ್ರಿಸ್ತ ಶಕ 23–79) ಈ ಪ್ರದೇಶವನ್ನು ಹೆಲಿನಿಯಮ್‌ ಮತ್ತು ಫ್ಲೆವೊ ಎಂದು ಉಲ್ಲೇಖಿಸಿದರು. ("inter Helinium ac Flevum") . ರೈನ್‌ ನದಿ ಇಬ್ಭಾಗವಾಗುವ ಎರಡು ನದಿಮುಖಗಳ ಹೆಸರುಗಳಾಗಿವೆ. ಮೊದಲ ನದಿಮುಖವು ಬ್ರಿಯೆಲ್‌ ಸುತ್ತಮುತ್ತಲ ಪ್ರದೇಶದಲ್ಲಿ ಮೊಸಾದಲ್ಲಿ ನೀರನ್ನು ವಿಲೀನಗೊಳಿಸಿದರೆ, ಇನ್ನೊಂದು ಉತ್ತರದಿಕ್ಕಿನಲ್ಲಿರುವ ಕೆರೆಗಳಿಗೆ (ಇಜೆಸೆಲ್ಮೀರ್‌) ನದಿಯ ನೀರನ್ನು ಹರಿಯಬಿಡಲಾಗುತ್ತದೆ.[] ಹಾಲೆಂಡ್‌ ಎಂಬ ಹೆಸರು, ಮೂಲಗಳಲ್ಲಿ ಮೊದಲ ಬಾರಿಗೆ ಕ್ರಿಸ್ತಶಕ 866ರಲ್ಲಿ, ಹಾರ್ಲೆಮ್‌ ಸುತ್ತಮುತ್ತಲ ಪ್ರದೇಶಗಳಿಗಾಗಿ ಬಳಸಲಾಯಿತು. ಕ್ರಿಸ್ತಶಕ 1064ರಲ್ಲಿ ಈ ಹೆಸರನ್ನು ಇಡೀ ಕೌಂಟಿಗೇ ಬಳಸಲಾಯಿತು. ಈ ಸಮಯದಲ್ಲಿ, ಹಾಲೆಂಡ್‌ನ ವಾಸಿಗಳು ತಮ್ಮನ್ನು 'ಹಾಲೆಂಡ್‌ನವರು' (Hollanders) ಎಂದು ಕರೆದುಕೊಳ್ಳುತ್ತಿದ್ದರು.[] Holland (ಹಾಲೆಂಡ್‌) ಪದವನ್ನು ಮಧ್ಯ ಡಚ್ ಪದ holtland (ಹೋಲ್ಟ್‌ಲೆಂಡ್‌) ('wooded land' (ಬಹಳಷ್ಟು ಮರಗಳುಳ್ಳ ಭೂಪ್ರದೇಶ)) ಎಂಬುದರಿಂದ ಪಡೆಯಲಾಗಿದೆ. ಈ ಕಾಗುಣಿತದಲ್ಲಿನ ವ್ಯತ್ಯಾಸವು ಸುಮಾರು 14ನೆಯ ಶತಮಾನದ ತನಕ ಬಳಕೆಯಲ್ಲಿತ್ತು. ಅದೇ ವೇಳೆಗೆ ಈ ಹೆಸರು ಹಾಲೆಂಡ್‌ ಎಂದು ಸ್ಥಿರವಾಗತೊಡಗಿತ್ತು. (ಆ ಸಮಯದಲ್ಲಿ Hollant ಮತ್ತು Hollandt ಪರ್ಯಾಯ ಕಾಗುಣಿತಗಳಾಗಿದ್ದವು). ಜನಪ್ರಿಯ, ಆದರೆ ತಪ್ಪು ಮಾಹಿತಿಯುಳ್ಳ ವ್ಯುತ್ಪತ್ತಿಶಾಸ್ತ್ರದ ಪ್ರಕಾರ, [ಸೂಕ್ತ ಉಲ್ಲೇಖನ ಬೇಕು] ಹಾಲೆಂಡ್‌ ಎಂಬ ಪದವು hol land ('hollow land' (ಖಾಲಿ[ಟೊಳ್ಳು] ಪ್ರದೇಶ)) ಇಂದ ಉದ್ಭವಿಸಿತು. ಹಾಲೆಂಡ್‌ನ ತಗ್ಗು-ಪ್ರದೇಶದ ಭೌಗೋಳಿಕ ಲಕ್ಷಣವು ಇದಕ್ಕೆ ಪ್ರೇರಣೆಯಾಗಿತ್ತು.

ಕೆಳಕಂಡ ಬಳಕೆಗಳು ಕೆಲವು ನಿರ್ದಿಷ್ಟ ಸೀಮಿತ ಸ್ಥಿತಿಗಳಲ್ಲಿ ಅನ್ವಯಿಸುತ್ತವೆ, ಆದರೆ, ಡಚ್‌ ಭಾಷೆಯಲ್ಲಿ ಸಾಮಾನ್ಯವಾಗಿ ಬಳಸಲಾದ 'Hollands ' ಗುಣವಾಚಕದ ಇಂಗ್ಲಿಷ್‌ ಸಮಾನ ಪದದಂತೆ ಸಾಧಾರಣವಾಗಿ ಬಳಸಲಾಗದು.

  • ಕೆಲವೊಮ್ಮೆ ಸಾಂದರ್ಭಿಕವಾಗಿ, ಹಾಲೆಂಡ್ ಎಂಬ ನಾಮಪದವನ್ನು ಏಕಾನ್ವಯದಲ್ಲಿ ಬಳಸಲಾಗಿದೆ. (ಉದಾಹರಣೆಗೆ, 'the Holland Society').
  • ಇತಿಹಾಸಕಾರರು ಹಾಗೂ ಇತರೆ ಶೈಕ್ಷಣಿಕ ಬರಹಗಾರರು ಕೆಲವೊಮ್ಮೆ Hollandic ಪದವನ್ನು ಕೆಲವೊಮ್ಮೆ ಹಾಲೆಂಡ್‌ (Holland) ಪದದ ಗುಣವಾಚಕ ರೂಪದಲ್ಲಿ ಬಳಸುತ್ತಾರೆ. ಈ ಪದ ಬಳಸುವ ಇತಿಹಾಸಕಾರರು ಪೂರ್ವ ನಪೊಲಿಯನ್-ಯುಗದ ಹಿಂದಿನ ಕಾಲಕ್ಕೆ ಉಲ್ಲೇಖಿಸಿ ಮಾತ್ರ ಬಳಸುವ ಪ್ರವೃತ್ತಿಯಿದೆ. ಹಾಲೆಂಡ್‌ನಲ್ಲಿ ಮಾತನಾಡುವ ಭಾಷೆಗೂ ಹಾಲೆಂಡಿಕ್‌ (Hollandic) ಎಂದು ಭಾಷಾ ತಜ್ಞರು ಉಲ್ಲೇಖಿಸುವರು.
  • Hollandish ಎಂಬುದು ಇಂಗ್ಲಿಷ್‌ ಭಾಷೆಯ ಗುಣವಾಚಕ ಪದ, ಆದರೆ ಅದು ಇಂದು ಬಳಕೆಯಲ್ಲಿಲ್ಲ.

ಭೌಗೋಳಿಕತೆ

[ಬದಲಾಯಿಸಿ]
ಉತ್ತರ ಹಾಲೆಂಡ್‌
ದಕ್ಷಿಣ ಹಾಲೆಂಡ್‌

ಹಾಲೆಂಡ್‌ ನೆದರ್ಲೆಂಡ್ಸ್‌ನ ಪಶ್ಚಿಮ ಭಾಗದಲ್ಲಿದೆ. ಕಡಲ ತೀರ ಪ್ರದೇಶವಾಗಿರುವ ಹಾಲೆಂಡ್, ಉತ್ತರ ಸಮುದ್ರತೀರದಲ್ಲಿ, ರೈನ್‌ ಮತ್ತು ಮಾಸ್ (Meuse)‌ ನದಿಮುಖಜಗಳಲ್ಲಿದೆ. ಇಲ್ಲಿ ಹಲವು ನದಿಗಳು ಮತ್ತು ಕೆರೆಗಳಿವೆ, ಹಾಗೂ ವಿಸ್ತಾರವಾದ ಅಂತರ್ದೇಶೀಯ ನಾಲೆ ಮತ್ತು ಜಲಮಾರ್ಗ ವ್ಯವಸ್ಥೆಯಿದೆ. ಝೀಲೆಂಡ್‌ ದಕ್ಷಿಣದಲ್ಲಿದೆ. ಈ ಪ್ರದೇಶದ ಪೂರ್ವದಲ್ಲಿ ಇಜೆಸೆಲ್ಮೀರ್‌ ಹಾಗೂ ನೆದರ್ಲೆಂಡ್ಸ್‌ನ ನಾಲ್ಕು ವಿವಿಧ ಪ್ರಾಂತಗಳಿವೆ.

ಸಾಗರ ತೀರದುದ್ದಕ್ಕೂ ಹರಡಿರುವ ಮರಳುದಿಬ್ಬದಿಂದಾಗಿ ಹಾಲೆಂಡ್ ಸಾಗರದ ಪ್ರದೇಶ ಅಪಾಯದಿಂದ‌ ಸುರಕ್ಷಿತವಾಗಿದೆ. ಮರಳುದಿಬ್ಬಗಳ ಹಿಂದಿರುವ ಭೂ ಪ್ರದೇಶದಲ್ಲಿ ಬಹಳಷ್ಟು ಪಾಲು, ಸಮುದ್ರ ಮಟ್ಟಕ್ಕಿಂತಲೂ ಬಹಳಷ್ಟು ಕೆಳಗಿರುವ ತಗ್ಗು ಭೂ ಪ್ರದೇಶವಿದೆ. ಸದ್ಯಕ್ಕೆ, ಹಾಲೆಂಡ್‌ನಲ್ಲಿ ರಾಟರ್ಡಾಮ್‌ ಸನಿಹದ ತಗ್ಗು ಭೂಪ್ರದೇಶವು, ಸಮುದ್ರಮಟ್ಟಕ್ಕಿಂತಲೂ ಏಳು ಮೀಟರ್ ಆಳದ ತಗ್ಗಿದ್ದು, ಅತಿಯಾದ ತಗ್ಗಿರುವ ಕಡಿದಾದ ಸ್ಥಳವಾಗಿದೆ. ಹಾಲೆಂಡ್‌ನಲ್ಲಿ‌ ಯಾವುದೇ ಪ್ರವಾಹ ಸಂಭವಿಸದಿರಲೆಂದು ನಿರಂತರ ಜಲನಿರ್ಗಮನ,ನೀರು ಹರಿದು ಹೋಗುವ ವ್ಯವಸ್ಥೆಯ ಅಗತ್ಯವಿದೆ. ಆರಂಭಿಕ ಶತಮಾನಗಳಲ್ಲಿ, ಈ ಕಾರ್ಯಕ್ಕಾಗಿ ಗಾಳಿಯಂತ್ರಗಳನ್ನು ಬಳಸಲಾಗುತ್ತಿತ್ತು. ಮುಂಚೆ, ಈ ಭೂಚಿತ್ರಣದಲ್ಲಿ ಬಹಳಷ್ಟು ಗಾಳಿಯಂತ್ರಗಳಿದ್ದವು, ಇಂದಿಗೂ ಸಹ ಇಂತಹ ಯಂತ್ರಗಳಿವೆ. ಇವು ಹಾಲೆಂಡ್‌ನ ಒಂದು ರೀತಿಯ ಲಾಂಛನವೆಂದೆನಿಸಿವೆ.

ಭೂಪ್ರದೇಶ ಮತ್ತು ಜಲಪ್ರದೇಶವೆರಡೂ ಸೇರಿ, ಹಾಲೆಂಡ್‌ನ ವಿಸ್ತೀರ್ಣವು 7,494 ಚದರ ಕಿಲೋಮೀಟರ್‌ಗಳಷ್ಟಿದ್ದು, ನೆದರ್ಲೆಂಡ್ಸ್‌ನ ವಿಸ್ತೀರ್ಣದ ಸುಮಾರು 13%ರಷ್ಟಿದೆ. ಕೇವಲ ಭೂಪ್ರದೇಶವನ್ನು ಮಾತ್ರ ಪರಿಗಣಿಸಿದರೆ, ಇದರ ವಿಸ್ತೀರ್ಣ 5,488 ಚದರ ಕಿಲೋಮೀಟರ್‌ಗಳಷ್ಟಿದೆ. ಒಟ್ಟು ಜನಸಂಖ್ಯೆ 6.1 ದಶಲಕ್ಷದಷ್ಟಿದೆ.

ಆಮ್ಸ್ಟರ್ಡಾಮ್‌, ರಾಟರ್ಡಾಮ್‌ ಹಾಗೂ ದಿ ಹೇಗ್‌, ಹಾಲೆಂಡ್‌ನ ಪ್ರಮುಖ ನಗರಗಳು. ಆಮ್ಸ್ಟರ್ಡಾಮ್‌ ವಿಧ್ಯುಕ್ತವಾಗಿ ನೆದರ್ಲೆಂಡ್ಸ್‌ನ ರಾಜಧಾನಿ, ಹಾಗೂ ಬಹಳ ಪ್ರಮುಖ ನಗರವೂ ಆಗಿದೆ. ರಾಟರ್ಡಾಮ್‌ ಯುರೋಪ್‌ನ ಅತಿದೊಡ್ಡ ಮತ್ತು ಅತಿ ಮುಖ್ಯ ಬಂದರು ಎನಿಸಿದೆ. ದಿ ಹೇಗ್‌ನಲ್ಲಿ ನೆದರ್ಲೆಂಡ್ಸ್‌ ದೇಶದ ಸರ್ಕಾರದ ಪ್ರಧಾನ ಕಾರ್ಯಸ್ಥಾನವಿದೆ. ಉಟ್ರೆಕ್ಟ್‌ ಮತ್ತು ಇತರೆ ಸಣ್ಣ ಸ್ಥಳೀಯ ಆಡಳಿತದ ಪ್ರದೇಶಗಳು ಸೇರಿ, ರಾಂಡ್ಸ್ಟಾಡ್‌ ಎಂಬ ಏಕೀಕೃತ ನಗರಕೂಟವಾಗಿದೆ.

ರಾಂಡ್ಸ್ಟಾಡ್‌ ಪ್ರದೇಶವು ಯುರೋಪ್‌ನಲ್ಲೇ ಅತಿಹೆಚ್ಚು ಜನನಿಬಿಡತೆ ಹೊಂದಿದ್ದರೂ, ನಗರವಲಯಕ್ಕೆ ಸಂಬಂಧಿಸಿದ ಗದ್ದಲವಿಲ್ಲ. ಇಲ್ಲಿ ಕಟ್ಟುನಿಟ್ಟಾದ ವಲಯ ರಚನಾ ಕಾನೂನುಗಳಿವೆ. ಜನಸಂಖ್ಯಾ ಒತ್ತಡಗಳು ಬಹಳಷ್ಟಿವೆ, ಭೂಸ್ವತ್ತು ಬೆಲೆಗಳು ಗಗನಕ್ಕೇರುತ್ತಿವೆ, ನಿರ್ಮಿತ ಪ್ರದೇಶದ ಅಂಚುಗಳಲ್ಲಿ ಹೊಸ ವಸತಿಗೃಹ ನಿರ್ಮಾಣವು ನಿರಂತರ ಅಭಿವೃದ್ಧಿ ಸ್ಥಿತಿಯಲ್ಲಿದೆ. ಈ ಪ್ರಾಂತವು ಇನ್ನೂ ಗ್ರಾಮಾಂತರ ಪ್ರದೇಶದ ಲಕ್ಷಣವನ್ನು ಉಳಿಸಿಕೊಂಡಿರುವುದು ಅಚ್ಚರಿ ಮೂಡಿಸುವಂತಿದೆ. ಉಳಿದ ಕೃಷಿ ಭೂಮಿ ಮತ್ತು ನೈಸರ್ಗಿಕ ಸಂಪತ್ತಿನ ಪ್ರದೇಶಗಳು ಅತ್ಯಮೂಲ್ಯ ಎಂದು ಪರಿಗಣಿಸಲಾಗಿದ್ದು, ಅವುಗಳನ್ನು ಸಂರಕ್ಷಿಸಲಾಗಿದೆ. ಕೃಷಿ ಚಟುವಟಿಕೆ ನಡೆಸಬಹುದಾದ ಭೂಮಿಯ ಬಹಳಷ್ಟು ಪಾಲನ್ನು ತೋಟಗಾರಿಕೆ ಮತ್ತು ಹಸಿರುಮನೆ ಕೃಷಿ ವ್ಯವಸಾಯಗಳು ಸೇರಿದಂತೆ ಅಧಿಕ ಇಳುವರಿಯ ಕೃಷಿಗಾಗಿ ಬಳಸಲಾಗಿದೆ.

ಹಾಲೆಂಡ್‌ನಲ್ಲಿರುವ ಬಹಳಷ್ಟು ಜನರು ಡಚ್‌ ಭಾಷೆ ಮಾತನಾಡುವರು. ಹಾಲೆಂಡಿಗರು ಕೆಲವೊಮ್ಮೆ ಡಚ್‌ ಭಾಷೆಯನ್ನು, ನೆದರ್ಲೆಂಡ್ಸ್‌ ಎಂಬ ಪ್ರಮಾಣಿತ ಉಕ್ತಿಯ ಬದಲಿಗೆ ಹಾಲೆಂಡ್ಸ್‌ ಎಂದು ಉಲ್ಲೇಖಿಸುತ್ತಾರೆ. ನೆದರ್ಲೆಂಡ್ಸ್‌ ದೇಶದ ಫ್ಲಾಂಡರ್ಸ್‌ ಹಾಗೂ ಇತರೆ ಪ್ರಾಂತಗಳ ವಾಸಿಗಳು, ಹಾಲೆಂಡಿಕ್‌ ಭಾಷೆಯಲ್ಲಿ ಮಾತನಾಡುವವರನ್ನು 'ಹಾಲೆಂಡ್ಸ್‌' ಎಂದು ಉಲ್ಲೇಖಿಸುತ್ತಾರೆ.

ನೆದರ್ಲೆಂಡ್ಸ್‌ನಲ್ಲಿ ಮಾತನಾಡಲಾಗುವ ಪ್ರಮಾಣಿತ ಡಚ್‌ ಭಾಷೆಯು ಐತಿಹಾಸಿಕವಾಗಿ, ಸ್ಥೂಲವಾಗಿ, ಹಾಲೆಂಡ್‌ನ ಹಾಲೆಂಡಿಕ್‌ ಭಾಷೆಯನ್ನು ಆಧರಿಸಿದೆ. ಆದರೂ, ಇದು ಫ್ಲೆಮಿಷ್‌ ಮತ್ತು ಬ್ರಬಂಷಿಯನ್‌ ಭಾಷೆಗಳಿಂದಲೂ ಭಾಗಶಃವಾಗಿ ಪಡೆಯಲಾಗಿದೆ. ನೆದರ್ಲೆಂಡ್‌ ದೇಶದುದ್ದಗಲಕ್ಕೂ, ಭಾಷೆಯಲ್ಲಿ ಸ್ಥಳೀಯ ವೈವಿಧ್ಯಗಳಿವೆ. ಇಂದು, ಹಾಲೆಂಡ್‌ನಲ್ಲಿ ಮೂಲ ಭಾಷೆ ಮಾತನಾಡುವುದು ಅತಿ-ಕಡಿಮೆ, ಬಹಳಷ್ಟು ಪ್ರದೇಶಗಳಲ್ಲಿ ಈ ಭಾಷೆಯ ಸ್ಥಳದಲ್ಲಿ ಪ್ರಮಾಣಿತ ಡಚ್‌ ಭಾಷೆಯನ್ನೇ ಮಾತನಾಡಲಾಗುತ್ತದೆ. ಬೆಲ್ಜಿಯಮ್‌ ದೇಶದಲ್ಲಿ ಮಾತನಾಡಲಾದ ಡಚ್‌ ಹೊರತುಪಡಿಸಿ, ಪ್ರಮಾಣಿತ ಭಾಷಾಭಿವೃದ್ಧಿಯ ಮೇಲೆ ಇದು ಅತಿ ಹೆಚ್ಚು ಪ್ರಭಾವ ಬೀರಿದೆ.[]

ಪ್ರಮಾಣಿತ ಡಚ್‌ ಮತ್ತು ಹಾಲೆಂಡ್‌ ಪ್ರದೇಶದಲ್ಲಿ ಮಾತನಾಡಲಾಗುವ ಡಚ್‌ ಭಾಷೆಗಳ ನಡುವೆ ಆಂತರಿಕ ಸಂಪರ್ಕವಿದ್ದರೂ, ಹಾಲೆಂಡ್‌ ಪ್ರದೇಶದೊಳಗೇ ಸ್ಥಳೀಯ ವಿಭಿನ್ನತೆಗಳಿವೆ. ಇದು ಪ್ರಮಾಣಿತ ಡಚ್‌ ಭಾಷೆಯಿಂದ ವಿಭಿನ್ನವಾಗಿದೆ. ಪ್ರಮುಖ ನಗರಗಳಲ್ಲಿ ಅವುಗಳದೇ ಆದ ನಗರ ಭಾಷೆಗಳಿವೆ. ಇವನ್ನು ಸಾಮಾಜಿಕ ಭಾಷೆ (sociolect) ಎಂದು ಪರಿಗಣಿಸಬಹುದಾಗಿದೆ.[] ವಿಶಿಷ್ಟವಾಗಿ ಆಮ್ಸ್ಟರ್ಡಾಮ್‌ನ ಉತ್ತರದಲ್ಲಿರುವ ಪ್ರದೇಶದಲ್ಲಿ, ಕೆಲವರು ಆ ಕೌಂಟಿಯ ಮೂಲ ಹಾಲೆಂಡಿಕ್ ‌ಭಾಷೆ ಮಾತನಾಡುವರು. ಉತ್ತರದಲ್ಲಿರುವ ವೊಲೆಂಡಾಮ್‌ ಮತ್ತು ಮಾರ್ಕೆನ್‌ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ, ವೆಸ್ಟ್‌ ಫ್ರೀಸ್ಲೆಂಡ್‌ ಹಾಗೂ ಝಾಂಸ್ಟ್ರೀಕ್‌; ಅಗ್ನೇಯ ಗಡಿಯಲ್ಲಿ, ನಾರ್ತ್‌ ಬ್ರಬಾಂಟ್‌ ಮತ್ತು ಉಟ್ರೆಕ್ಟ್‌ ಪ್ರಾಂತಗಳ ಗಡಿಗಳಲ್ಲಿ, ಹಾಲೆಂಡಿಕ್‌ ಭಾಷೆಯು ಪ್ರಚಲಿತವಾಗಿದೆ. ದಕ್ಷಿಣದಲ್ಲಿ, ಗೀರೀ-ಒವರ್ಫ್ಲಾಕೀ ದ್ವೀಪದಲ್ಲಿ ಝೀಲೆಂಡಿಕ್‌ ಭಾಷೆ ಮಾತನಾಡಲಾಗುತ್ತದೆ.

ಇತಿಹಾಸ

[ಬದಲಾಯಿಸಿ]

ನೆದರ್ಲೆಂಡ್ಸ್‌ನಲ್ಲಿರುವ ಪ್ರತಿಯೊಂದು ಪ್ರಾಂತಕ್ಕೂ ಬಹಳಷ್ಟು ಗಮನ ಕೊಡಬೇಕಾದಂತಹ ಗಮನಾರ್ಹ ಇತಿಹಾಸ ಹೊಂದಿದೆ. ಆದರೂ, ಕನಿಷ್ಠಪಕ್ಷ ಸ್ವಲ್ಪ ಮಟ್ಟಿಗಾದರೂ, ಹಾಲೆಂಡ್‌ನ ಇತಿಹಾಸವು ನೆದರ್ಲೆಂಡ್‌ನ ಇತಿಹಾಸವಾಗಿದೆ, ಅದೇ ರೀತಿ, ನೆದರ್ಲೆಂಡ್‌ನ ಇತಿಹಾಸವು ಹಾಲೆಂಡ್‌ನ ಇತಿಹಾಸವೂ ಆಗಿದೆ. ಇನ್ನಷ್ಟು ವಿಸ್ತೃತ ಇತಿಹಾಸಕ್ಕಾಗಿ ಹಿಸ್ಟರಿ ಆಫ್‌ ದಿ ನೆದರ್ಲೆಂಡ್ಸ್‌ ಬಗೆಗಿನ ಲೇಖನ ಓದಿ. ಇಲ್ಲಿನ ಲೇಖನವು ಹಾಲೆಂಡ್‌ಗೆ ಸಂಬಂಧಿತ ಅಂಶಗಳ ಮೇಲೆ ಕೇಂದ್ರೀಕೃತವಾಗಿದೆ ಅಥವಾ ಇಡಿಯಾಗಿ ನೆದರ್ಲೆಂಡ್ಸ್‌ ದೇಶದ ಮೇಲೆ ಹಾಲೆಂಡ್‌ ನಿರ್ವಹಿಸಿದ ಪಾತ್ರವನ್ನು ವಿವರಿಸುತ್ತದೆ.

ಭೂ ಸುಧಾರಣೆ

[ಬದಲಾಯಿಸಿ]

ಇಂದು ಹಾಲೆಂಡ್‌ ಎನ್ನಲಾದ ಭೂಪ್ರದೇಶವು ಎಂದಿಗೂ ಸ್ಥಿರತೆ ಹೊಂದಿರಲಿಲ್ಲ. ಸಹಸ್ರವರ್ಷಗಳ ಕಾಲದಿಂದಲೂ, ಈ ಪ್ರದೇಶದ ಭೂಗೋಳವು ಕ್ರಿಯಾಸಂಬದ್ಧವಾಗಿದೆ. ಪಶ್ಚಿಮ ಕಡಲತೀರವು ಸುಮಾರು ಮುವ್ವತ್ತು ಕಿಲೋಮೀಟರ್‌ಗಳಷ್ಟು ಪೂರ್ವಕ್ಕೆ ಸ್ಥಳಾಂತರಗೊಂಡಿತು. ಬಿರುಗಾಳಿಯ ಅಲೆಗಳು ಕಡಲತೀರದ ಮರಳುದಿಣ್ಣೆ ಶ್ರೇಣಿಯನ್ನು ಭೇದಿಸಿ ಮುನ್ನುಗ್ಗುತ್ತಿರುವುದು ನಿರಂತರವಾಗಿತ್ತು. ಮೂಲತಃ ಮುಖ್ಯ ಭೂಮಿಗೆ ಅಂಟಿಕೊಂಡಿದ್ದ ಫ್ರಿಷಿಯನ್‌ ಐಲ್ಸ್‌, ಉತ್ತರದಲ್ಲಿ ಬೇರ್ಪಟ್ಟ ದ್ವೀಪಗಳಾದವು. ರೈನ್‌ ಮತ್ತು ಮೋಸ್‌ (ಮಾಸ್)‌ ನದಿಗಳು ಪದೇ-ಪದೇ ಪ್ರವಾಹವನ್ನುಂಟು ಮಾಡುತ್ತಿದ್ದವು. ಅವು ನಿರಂತರವಾಗಿ ಮತ್ತು ದಿಢೀರನೆ ತಮ್ಮ ಪಥ ಬದಲಿಸುತ್ತಿದ್ದವು.

ಹಾಲೆಂಡ್‌ನ ಜನರು ಅಸ್ಥಿರ ಮತ್ತು ಜಲಾವೃತವಾಗುವ ಪರಿಸರದಲ್ಲಿ ವಾಸಿಸುವ ಸ್ಥಿತಿಯನ್ನು ಎದುರಿಸುತ್ತಿದ್ದರು. ನೆದರ್ಲೆಂಡ್ಸ್‌ ಕಡಲತೀರದಲ್ಲಿ ಮರಳುದಿಣ್ಣೆಗಳ ಹಿಂದೆ, ಎತ್ತರದ ಸಸ್ಯದಿದ್ದಿಲಿನಿಂದಾಗಿ ಆವೃತ ಪ್ರಸ್ಥಭೂಮಿ ಬೆಳೆದಿತ್ತು. ಇದರಿಂದಾಗಿ, ಸಮುದ್ರದ ವಿರುದ್ಧ ಸೈಸರ್ಗಿಕ ರಕ್ಷಣಾ ವ್ಯವಸ್ಥೆ ಕಲ್ಪಿಸಿದಂತಾಯಿತು. ಪ್ರದೇಶದ ಬಹಳಷ್ಟು ಭಾಗವು ಜವುಗು ಮತ್ತು ಕೆಸರುಳ್ಳ ಪ್ರದೇಶವಾಗಿತ್ತು. ಹತ್ತನೆಯ ಶತಮಾನ ಆರಂಭದ ಹೊತ್ತಿಗೆ ಮೂಲವಾಸಿಗಳು, ಈ ಭೂಮಿಯಲ್ಲಿದ್ದ ಕೆಸರನ್ನು ಹರಿಯಬಿಟ್ಟು, ಈ ಭೂಮಿಯಲ್ಲಿ ಉಳುಮೆ ಮಾಡತೊಡಗಿದರು. ಆದರೂ, ರಾಡಿನೀರು ಹರಿಯಬಿಟ್ಟ ಕಾರಣ, ಮಣ್ಣು ತೀವ್ರವಾಗಿ ಕುಗ್ಗಿಹೋಯಿತು, ಭೂಮಿಯ ಮೇಲ್ಮೈ ಸುಮಾರು ಹದಿನೈದು ಮೀಟರ್‌ಗಳಷ್ಟು ಕುಸಿಯಲು ಕಾರಣವಾಯಿತು.

ಏರಿಯೊಂದರಿಂದ ಬೆಂಥುಯಿಝೆನ್‌ ತಗ್ಗು ಭೂಮಿಯ ನೋಟ

ಹಾಲೆಂಡ್‌ನ ದಕ್ಷಿಣದಲ್ಲಿರುವ ಝೀಲೆಂಡ್‌ ಹಾಗೂ ಉತ್ತರದಲ್ಲಿರುವ ಫ್ರಿಸಿಯಾ ಪ್ರದೇಶಗಳಲ್ಲಿ, ಈ ಭೌಗೋಳಿಕ ಕಾರಣದಿಂದಾಗಿ, ಮಹಾದುರಂತದ ಪ್ರವಾಹಗಳು ಸಂಭವಿಸಿದವು. ಸಸ್ಯದಿದ್ದಿಲಿನ ಪದರಗಳು ಚದುರಿಹೋಗಿ ಅಥವಾ ತಮ್ಮ ಮೂಲಗಳಿಂದ ಬೇರೆಯಾಗಿ, ಪ್ರವಾಹದ ನೀರಿನಲ್ಲಿ ಕೊಚ್ಚಿಹೋದ ಪರಿಣಾಮವಾಗಿ, ಇಡೀ ಪ್ರದೇಶ ಜಲಾವೃತಗೊಂಡಿತು. ಫ್ರಿಸಿಯನ್‌ ಕಡೆಯಿಂದ ಸಮುದ್ರದ ನೀರು ಪೂರ್ವದಲ್ಲಿರುವ ಪ್ರದೇಶವನ್ನೂ ಜಲಾವೃತಗೊಳಿಸಿತು. ವಲಯದ ಆಚೆಯ ಅಂಚಿನಿಂದ ಅದು ಹಾಲೆಂಡ್‌ನ್ನು ತಗ್ಗುಪ್ರದೇಶವಾಗಿಸಿತು. ಈ ಮೂಲಕ, ಇಂದಿನ ಇಜಸೆಲ್ಮೀರ್‌ ಎಂದು ಪರಿಚಿತವಾದ ಝಯ್ಡರ್ಝೀ ರಚನೆಗೆ ಕಾರಣವಾಯಿತು. ಈ ಅಂತರ್ದೇಶೀಯ ಸಮುದ್ರವು, ದಕ್ಷಿಣದಲ್ಲಿರುವ ಝೀಲೆಂಡ್‌ನ 'ಮುಳುಗಿದ ಭೂಪ್ರದೇಶ'ಗಳೊಂದಿಗೆ ಸೇರಿಕೊಳ್ಳುವ ಅಪಾಯಕಾರಿ ಸ್ಥಿತಿ ಎದುರಾಯಿತು. ಇದರಿಂದಾಗಿ, ಹಾಲೆಂಡ್‌ನ್ನು ಕೇವಲ ತಗ್ಗಾದ ಮರಳುದಂಡೆಯ ಮುಂದೆ, ಇಕ್ಕಟ್ಟಾದ ಮರಳುದಿಣ್ಣೆಯ ಸರಣಿ ತಡೆಗಟ್ಟು ದ್ವೀಪಗಳ ಜೋಡಣೆಗೆ ಅಡ್ಡಿಯಾಗುವ ಸ್ಥಿತಿಗೆ ತಂದೊಡ್ಡಿತು. ಇಂತಹ ನೈಸರ್ಗಿಕ ಪ್ರಕೋಪದ ಸಮಸ್ಯೆಯಿಂದ ಪಾರಾಗಲು, ಕಟ್ಟುನಿಟ್ಟಾದ ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕಾಯಿತು. ಕೌಂಟ್‌ಗಳು ಹಾಗೂ ದೊಡ್ಡ ಸಂನ್ಯಾಸಿ ಮಠಗಳು ಈ ಯತ್ನದಲ್ಲಿ ಸಕ್ರಿಯವಾಗಿ, ಬಹಳಷ್ಟು ಮುಖ್ಯವಾದ ಹಂತಗಳಲ್ಲಿ ಪ್ರವಾಹ ತಡೆಗಟ್ಟುವ ಶಕ್ತಿಯುಳ್ಳ, ಮೊಟ್ಟಮೊದಲ ಏರಿ ನಿರ್ಮಾಣದಲ್ಲಿ ನೆರವಾದರು. ಆನಂತರ, ವಿಶೇಷ ಸ್ವಯಮಾಧಿಕಾರದ ಆಡಳಿತ ಮಂಡಳಿಗಳು ರಚನೆಯಾದವು. ವಾಟರ್ಷಾಪ್‌ಪೆನ್ ‌ (ಜಲ ನಿಯಂತ್ರಣಾ ಮಂಡಳಿಗಳು) ನೀರು ನಿರ್ವಹಣೆಯ ವಿಚಾರವಾಗಿ, ತಮ್ಮ ನಿಯಮಾವಳಿಗಳು ಮತ್ತು ನಿರ್ಧಾರಗಳನ್ನು ಜಾರಿಗೊಳಿಸಲು ಕಾನೂನಿನ ಅಧಿಕಾರಗಳಿದ್ದವು. ಶತಮಾನಗಳು ಕಳೆದಂತೆ, ಕಡಲತೀರದುದ್ದಕ್ಕೂ ಚಾಚಿರುವ, ಹಾಗೂ ತಗ್ಗು ಭೂಮಿಯನ್ನು ರಕ್ಷಿಸುವ ವಿಸ್ತಾರವಾದ ಏರಿಯ ವ್ಯವಸ್ಥೆ ನಿರ್ಮಾಣವಾಯಿತು. ಸಮುದ್ರದ ಕೊರೆತಗಳಿಂದ ಭೂಮಿಯನ್ನು ರಕ್ಷಿಸಲು ಈ ಏರಿ ನಿರ್ಮಾಣವಾಯಿತು.

ಆದರೂ, ಹಾಲೆಂಡ್‌ನವರು ಅಷ್ಟಕ್ಕೇ ಅಲ್ಲಿಯೇ ನೆಲೆ ನಿಲ್ಲಲಿಲ್ಲ. ಆಗ 16ನೆಯ ಶತಮಾನದಲ್ಲಿ ಆರಂಭಗೊಂಡು, ಸ್ವಪ್ರೇರಣೆಯಿಂದ ಭೂಸುಧಾರಣಾ ಯೋಜನೆ ಕೈಗೊಂಡರು. ಕೆರೆ, ಜವುಗು ಮತ್ತು ಸುತ್ತಮುತ್ತಲ ಕೆಸರಿನ ಪ್ರದೇಶಗಳನ್ನು ತಗ್ಗು ಭೂಮಿಗಳನ್ನಾಗಿ ಪರಿವರ್ತಿಸಿದರು. ಇದು 20ನೆಯ ಶತಮಾನದ ವರೆಗೂ ಮುಂದುವರೆಯಿತು. ಇದರ ಫಲವಾಗಿ, ಮಧ್ಯಯುಗೀಯ ಮತ್ತು ಆಧುನಿಕ ಕಾಲದ ಹಾಲೆಂಡ್‌ನ ಆರಂಭಿಕ ಕಾಲದ ಐತಿಹಾಸಿಕ ನಕ್ಷೆಗಳನ್ನು ಗಮನಿಸಿದರೆ, ಇಂದಿನ ಹಾಲೆಂಡ್‌ನ ನಕ್ಷೆಗಳನ್ನು ಯಾವುದೇ ರೀತಿಯಲ್ಲೂ ಹೋಲುವುದಿಲ್ಲ.

ನೀರಿನ ಸದುಪಯೋಗಪಡಿಸಿಕೊಳ್ಳಲು ಚಾಲ್ತಿಯಲ್ಲಿರುವ ಕಷ್ಟಕರ ಯತ್ನವು, ಹಾಲೆಂಡ್‌ ಇಂದು ಕಡಲ ಸಂಪತ್ತಲ್ಲದೇ ಆರ್ಥಿಕವಾಗಿ ಪ್ರಬಲ ರಾಷ್ಟ್ರವಾಗಲು ಕಾರಣವಾಯಿತು, ಅಲ್ಲದೆ, ಹಾಲೆಂಡ್‌ನ ಜನತೆಯ ವ್ಯಕ್ತಿತ್ವ ವಿಕಸನಕ್ಕೂ ನೆರವಾಯಿತು.

ಹಾಲೆಂಡ್‌ ಕೌಂಟಿ (ಹಾಲೆಂಡ್ ನ ಸಣ್ಣ ದ್ವೀಪ)

[ಬದಲಾಯಿಸಿ]

ಒಂಬತ್ತನೆಯ ಶತಮಾನದ ತನಕ, ಮುಂದೆ ಹಾಲೆಂಡ್‌ ಎನ್ನಲಾಗಲಿದ್ದ ಈ ಪ್ರದೇಶದಲ್ಲಿ ವಾಸವಾಗಿದ್ದವರನ್ನು ಫ್ರಿಸಿಯನ್ಸ್‌ ಎಂದು ಉಲ್ಲೇಖಿಸಲಾಗುತ್ತಿತ್ತು. ಈ ವಲಯವು ಫ್ರಿಸಿಯಾದ ಭಾಗವಾಗಿತ್ತು. ಪವಿತ್ರ ರೋಮನ್‌ ಸಾಮ್ರಾಜ್ಯದ ಕಾಲವೆನಿಸಿದ್ದ 9ನೆಯ ಶತಮಾನದಲ್ಲಿ, ಹಾಲೆಂಡ್‌ ಪ್ರತ್ಯೇಕ ಕೌಂಟಿಯಾಯಿತು. ಹಾಲೆಂಡ್‌ನ ಮೊದಲ ಕೌಂಟ್‌ನ್ನು ಖಚಿತವಾಗಿ ಮೊದಲ ಡಿರ್ಕ್ I‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌, ಈತ ಫ್ರಿಸಿಯಾದ ಕೌಂಟ್‌ಸ ಕೌಂಟ್‌ ಸಹ ಆಗಿದ್ದು, ಫ್ರಿಸಿಯಾ ಮತ್ತು ಹಾಲೆಂಡ್‌ ಕೌಂಟಿಗಳಲ್ಲಿ 896ರಿಂದ 931ರ ತನಕ, ತನ್ನ ಆಡಳಿತ ನಡೆಸಿದ. ಡಿರ್ಕ್‌ ನಂತರ, ಹೌಸ್‌ ಆಫ್‌ ಹಾಲೆಂಡ್‌ನಲ್ಲಿಯೂ ಆಡಳಿತ ನಡೆಸಿದ;ಆಗ ಕೌಂಟ್‌ಗಳ ಉದ್ದನೆಯ ಸಾಲೇ ಇತ್ತು. ಹಾಲೆಂಡ್‌ನ ಕೌಂಟ್‌ ಮೊದಲ ಜಾನ್ ಮಕ್ಕಳಿಲ್ಲದೆ 1299ರಲ್ಲಿ ನಿಧನರಾದಾಗ, ಹೈನಾಟ್‌ ಕೌಂಟಿ ಅವೆಸ್ನೆಸ್‌ನ ಎರಡನೆಯ ಜಾನ್‌ ಈ ಕೌಂಟಿಯನ್ನು ತಮ್ಮದಾಗಿ ಪಡೆದುಕೊಂಡರು. ಹೌಸ್‌ ಆಫ್‌ ವಿಟೆಲ್ಸ್‌ಬ್ಯಾಚ್‌ನ ಐದನೆಯ ವಿಲಿಯಮ್ (1354-1388) ಅಧಿಕಾರ ವಹಿಸಿಕೊಳ್ಳುವಷ್ಟರಲ್ಲಿ, ಹಾಲೆಂಡ್‌ನ ಕೌಂಟ್‌ ಹೈನಾಟ್‌, ಫ್ಲಾಂಡರ್ಸ್‌ ಮತ್ತು ಝೀಲೆಂಡ್‌ ಪ್ರದೇಶಗಳ ಕೌಂಟ್‌ ಸಹ ಆಗಿದ್ದರು.

ಚಿತ್ರ:Holland & West Vriesland.JPG
ಅವರ ನಿರ್ಧಾರಗಳ (1654) ಆರಂಭದಲ್ಲಿ ತಿಳಿಸಲಾದ ವಾಕ್ಯಭಾಗ 'De Staten van Hollandt ende West-Vrieslandt...'

ಈ ಸಮಯದಲ್ಲಿ, ಫ್ರಿಸಿಯಾದ ಭಾಗವಾದ ವೆಸ್ಟ್‌ ಫ್ರೀಸ್ಲೆಂಡ್‌ನ್ನು ಯುದ್ಧದಲ್ಲಿ ಜಯಿಸಿಕೊಳ್ಳಲಾಯಿತು. ಇದರ ಫಲವಾಗಿ, ಹಲವು ಶತಮಾನಗಳ ಕಾಲ, ಸ್ಟೇಟ್ಸ್‌ ಆಫ್‌ ಹಾಲೆಂಡ್‌ ಮತ್ತು ವೆಸ್ಟ್‌ ಫ್ರಿಸಿಯಾ ಸೇರಿದಂತೆ, ಬಹಳಷ್ಟು ಪ್ರಾಂತೀಯ ಸಂಸ್ಥೆಗಳನ್ನು ಹಾಲೆಂಡ್‌ ಮತ್ತು ಪಶ್ಚಿಮ ಫ್ರಿಸಿಯಾ ಪ್ರದೇಶಗಳನ್ನು ಒಟ್ಟಿಗೆಯೇ ಏಕೀಕೃತ ಪ್ರದೇಶವೆಂದು ಉಲ್ಲೇಖಿಸುತ್ತಿದ್ದರು. ಈ ಸಮಯದಲ್ಲಿ ಹುಕ್‌ ಅಂಡ್‌ ಕಾಡ್ ಸಮರಗಳು ಒಟ್ಟಿಗೆ ಆರಂಭವಾದವು. ಹಾಲೆಂಡ್‌ನ ಕೌಂಟೆಸ್‌ ಜೇಕಬಾ ಅಥವಾ ಜ್ಯಾಕ್ವಿಲೀನ್‌ 1432ರಲ್ಲಿ ಹಾಲೆಂಡ್‌ನ್ನು ಬರ್ಗಂಡಿಯನ್‌ ಮೊದಲ ಫಿಲಿಪ್‌‌ಗೆ ಬಿಟ್ಟುಕೊಟ್ಟಾಗ ಈ ಯುದ್ಧವು ಸಮಾಪ್ತಿಯಾಯಿತು.

ಮೂರನೆಯ ಫಿಲಿಪ್ III‌, ಹಾಲೆಂಡ್‌ನ ಕೊನೆಯ ಕೌಂಟ್‌ ಆಗಿದ್ದ. ಈತನನ್ನು ಸ್ಪೇನ್‌ನ ರಾಜ ಫಿಲಿಪ್‌ II ಎಂದು ಉಲ್ಲೇಖಿಸಲಾಗುತ್ತಿತ್ತು.ಆಗ 1581ರಲ್ಲಿ ಈ ರಾಜನ ಆಳ್ವಿಕೆಯನ್ನು ಪರಿತ್ಯಾಗ ಕಾಯಿದೆಯಡಿ ರದ್ದುಪಡಿಸಲಾಯಿತು. ಆದರೂ, 1648ರಲ್ಲಿ ಮೂನ್ಸ್ಟರ್‌ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ತನಕ, ಸ್ಪೇಯ್ನ್‌ ದೇಶದ ರಾಜರು ಕೌಂಟ್‌ ಆಫ್‌ ಹಾಲೆಂಡ್‌ ಎಂಬ ಬಿರುದು ಹೊಂದಿರುತ್ತಿದ್ದರು.

ಸಂಯುಕ್ತ ಪ್ರಾಂತಗಳು ಹಾಗೂ ಡಚ್‌ ಗಣರಾಜ್ಯದಲ್ಲಿ ಹಾಲೆಂಡ್‌ನ ಪ್ರಾಮುಖ್ಯತೆ

[ಬದಲಾಯಿಸಿ]

ಹಾಲೆಂಡ್‌ 1432ರಲ್ಲಿ, ಬರ್ಗಂಡಿಯನ್‌ ನೆದರ್ಲೆಂಡ್ಸ್‌ನ ಅಂಗ ಹಾಗೂ 1477ರಲ್ಲಿ ಹ್ಯಾಬ್ಸ್‌ಬರ್ಗ್‌ ಹದಿನೇಳು ಪ್ರಾಂತಗಳ ಪ್ರದೇಶದ ಅಂಗವಾಯಿತು. ಈ ಕೌಂಟಿಯು 16ನೆಯ ಶತಮಾನದಲ್ಲಿ, ಯುರೋಪ್‌ನಲ್ಲಿಯೇ ಅತಿಹೆಚ್ಚು ಸಾಂದ್ರತೆಯುಳ್ಳ ನಗರೀಕರಣಗೊಂಡ ಕೌಂಟಿಯಾಗಿತ್ತು. ಬಹಳಷ್ಟು ಜನರು ನಗರಗಳಲ್ಲಿ ವಾಸಿಸುತ್ತಿದ್ದರು. ಬರ್ಗಂಡಿಯನ್‌ ನೆದರ್ಲೆಂಡ್ಸ್‌ನಲ್ಲಿ, ಉತ್ತರದಲ್ಲಿ ಹಾಲೆಂಡ್ ಪ್ರಬಲ ಪ್ರಾಂತವಾಗಿತ್ತು. ಆ ಪ್ರದೇಶದಲ್ಲಿ ಬರ್ಗಂಡಿಯನ್‌ ಪ್ರಾಬಲ್ಯವನ್ನು ಹಾಲೆಂಡ್‌ನ ರಾಜಕೀಯ ಪ್ರಭಾವವು ನಿರ್ಣಯಿಸುತ್ತಿತ್ತು.

Comitatus Hollandiae (1682)

ಎಂಭತ್ತು ವರ್ಷಗಳ ಯುದ್ಧದಲ್ಲಿ ಹ್ಯಾಬ್ಸ್‌ಬರ್ಗ್ಸ್‌ ವಿರುದ್ಧ ಡಚ್‌ ಬಂಡಾಯದಲ್ಲಿ, ವಾಟರ್ಗೋಝೆನ್‌ ಎನ್ನಲಾದ ಬಂಡುಕೋರರ ಜಲಸೇನೆಯು ಬ್ರಿಲ್‌ ಪಟ್ಟಣದಲ್ಲಿ 1572ರಲ್ಲಿ ತಮ್ಮ ಮೊದಲ ಕಾಯಂ ಶಿಬಿರ ಸ್ಥಾಪಿಸಿತು. ಈ ರೀತಿ, ಇನ್ನಷ್ಟು ವಿಶಾಲವಾದ ಡಚ್‌ ಒಕ್ಕೂಟದಲ್ಲಿ ಸ್ವಯಮಾಧಿಕಾರದ ರಾಜ್ಯವಾಗಿದ್ದ ಹಾಲೆಂಡ್‌, ಬಂಡಾಯದ ಕೇಂದ್ರಬಿಂದುವಾಯಿತು. ಡಚ್‌ ಸ್ವರ್ಣ ಯುಗ ಎನ್ನಲಾದ 17ನೆಯ ಶತಮಾನದಲ್ಲಿ, ಸಂಯುಕ್ತ ಪ್ರಾಂತ್ಯಗಳ ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಕೇಂದ್ರವಾಯಿತು. ಈ ಸಮಯ, ಈ ದೇಶವು ವಿಶ್ವದಲ್ಲೇ ಅತಿ ಶ್ರೀಮಂತ ರಾಷ್ಟ್ರವೆನಿಸಿತು. ಸ್ಪೇಯ್ನ್‌ನ ರಾಜನನ್ನು ಕೌಂಟ್‌ ಅಫ್‌ ಹಾಲೆಂಡ್‌ ಸ್ಥಾನದಿಂದ ಕೆಳಗಿಳಿಸಿದ ನಂತರ, ಗ್ರ್ಯಾಂಡ್‌ ಪೆನ್ಷನರಿ ಅಧಿಕಾರ ವಹಿಸಿಕೊಂಡಿರುವ ರಾಜಕೀಯ ಮುಖಂಡರ ನೇತೃತ್ವದಲ್ಲಿ, ಕಾರ್ಯಕಾರಿ ಮತ್ತು ಶಾಸನಬದ್ಧ ಅಧಕಾರವು ಸ್ಟೇಟ್ಸ್‌ ಆಫ್‌ ಹಾಲೆಂಡ್‌ನೊಂದಿಗೇ ಇತ್ತು.

ಡಚ್‌ ಗಣರಾಜ್ಯದಲ್ಲಿನ ಅತಿದೊಡ್ಡ ನಗರಗಳು ಹಾಲೆಂಡ್‌ ಪ್ರಾಂತದಲ್ಲೇ ಇದ್ದವು: ಆಮ್ಸ್ಟರ್ಡಾಮ್‌, ರಾಟರ್ಡಾಮ್‌, ಲೇಯ್ಡೆನ್‌, ಅಲ್ಕ್ಮಾರ್‌, ದಿ ಹೇಗ್‌, ಡೆಲ್ಫ್ಟ್‌, ಡೊರ್ಡ್ರೆಕ್ಟ್‌ ಹಾಗೂ ಹಾರ್ಲೆಮ್‌. ಹಾಲೆಂಡ್‌ನ ಬೃಹತ್‌ ಬಂದರುಗಳಿಂದ, ಹಾಲೆಂಡಿಕ್‌ ವ್ಯಾಪಾರಿಗಳು ಯುರೋಪ್‌ನೆಲ್ಲೆಡೆ ವಿವಿಧ ಸ್ಥಳಗಳಿಗೆ ಜಲಯಾನ ಮಾಡಿದರು. ಯುರೋಪಿನೆಲ್ಲೆಡೆಯಿಂದ ಬಂದ ವ್ಯಾಪಾರಿಗಳು, ಆಮ್ಸ್ಟರ್ಡಾಮ್‌ ಹಾಗೂ ಹಾಲೆಂಡ್‌ನ ಇತರೆ ವ್ಯಾಪಾರಿ ನಗರಗಳ ಮಾರಾಟದ ದಾಸ್ತಾನು ಕಟ್ಟಡಗಳಲ್ಲಿ ವ್ಯಾಪಾರ ನಡೆಸುತ್ತಿದ್ದರು.

ಹಲವು ಯುರೋಪಿಯನ್ನರು ಮೊದಲಿಗೆ, ನೆದರ್ಲೆಂಡ್ಸ್‌ನ ಏಳು ಸಂಯುಕ್ತ ಪ್ರಾಂತಗಳ ಗಣರಾಜ್ಯ ಎನ್ನುವುದಕ್ಕಿಂತಲೂ ಹೆಚ್ಚಾಗಿ, ಈ ಸಂಯುಕ್ತ ಪ್ರಾಂತವನ್ನು ಹಾಲೆಂಡ್‌ ಎಂದು ಭಾವಿಸುತ್ತಿದ್ದರು. ಇತರೆ ಯುರೋಪಿಯನ್ನರಲ್ಲೂ ಸಹ ಹಾಲೆಂಡ್‌ ಬಗ್ಗೆ ಪ್ರಬಲವಾದ ಅಭಿಪ್ರಾಯವನ್ನು ಅಚ್ಚೊತ್ತಲಾಯಿತು. ಇದನ್ನು ಇಡೀ ಗಣರಾಜ್ಯಕ್ಕೆ ಅನ್ವಯಿಸಲಾಗುತ್ತಿತ್ತು. ಪ್ರಾಂತಗಳೊಳಗೆ, ಹಂತ-ಹಂತವಾದ ಸಾಂಸ್ಕೃತಿಕ ವಿಸ್ತರಣೆಯು ನಿಧಾನಗತಿಯಲ್ಲಿ ನಡೆಯತೊಡಗಿತು. ಇದರಿಂದಾಗಿ ಇತರೆ ಪ್ರಾಂತಗಳ ಹಾಲೆಂಡೀಕರಣ ಹಾಗೂ ಇಡೀ ಗಣರಾಜ್ಯದಲ್ಲಿ ಸಮಾನಾದ ಸಂಸ್ಕೃತಿಗೆ ನಾಂದಿಯಾಯಿತು. ಹಾಲೆಂಡ್‌ನ ನಗರವಲಯದ ಭಾಷೆಯು ಪ್ರಮಾಣಿತ ಭಾಷೆಯಾಯಿತು.

ಹಾಲೆಂಡ್‌ ಸಾಮ್ರಾಜ್ಯ

[ಬದಲಾಯಿಸಿ]

ಫ್ರೆಂಚ್‌ ಕ್ರಾಂತಿಯಿಂದ ಪ್ರೇರಿತವಾಗಿ ರಚನೆಯಾದ ಬಟಾವಿಯನ್‌ ಗಣರಾಜ್ಯದಿಂದಾಗಿ, ಕೇಂದ್ರೀಕೃತ ಸರ್ಕಾರಕ್ಕೆ ನಾಂದಿಯಾಯಿತು. ಹಾಲೆಂಡ್‌ ಏಕೀಕೃತ ರಾಜ್ಯದ ಪ್ರಾಂತವಾಯಿತು. ಆಡಳಿತಾತ್ಮಕ ಸುಧಾರಣೆಗಾಗಿ, 1978ರಲ್ಲಿ ಜಾರಿಗೊಳಿಸಿದ ಕಾನೂನಿಂದಾಗಿ ಇದರ ಸ್ವಾತಂತ್ರ್ಯವು ಇನ್ನಷ್ಟು ಕಡಿಮೆಯಾಯಿತು. ಇದರಲ್ಲಿರುವ ಇದರ ಪ್ರಾಂತವನ್ನು ಆಮ್ಸ್ಟೆಲ್‌ , ಡೆಲ್ಫ್‌ , ಟೆಕ್ಸೆಲ್‌ ಹಾಗೂ ಷೆಲ್ಡ್‌ ಎನ್‌ ಮಾಸ್‌ ನ ಅಂಗ ಎಂದು ಹಲವು ವಿಭಾಗಗಳಾಗಿ ವಿಂಗಡಿಸಲಾಯಿತು.

ತಮ್ಮ ಲೂಯಿ ನೆಪೊಲಿಯನ್‌ ಆಡಳಿತದ ಸಾಮಂತ ಆಳರಸ ರಾಜ್ಯವನ್ನು 1806ರಿಂದ 1810ರವರೆಗೆ ನೆಪೊಲಿಯನ್ ಮರುರೂಪ ನೀಡಿ ವಿನ್ಯಾಸ ಮಾಡಿದರು. ನಂತರ ಲೂಯಿ ನಪೊಲಿಯನ್‌ರ ಪುತ್ರ ನೆಪೊಲಿಯನ್‌ ಲೂಯಿ ಬೊನಾಪಾರ್ಟ್‌‌ ಈ ರಾಜ್ಯವನ್ನು ಹಾಲೆಂಡ್‌ ಸಾಮ್ರಾಜ್ಯ ಎಂದು ಪುನರ್ವಿನ್ಯಾಸ ಮಾಡಿದರು. ಮುಂದೆ ಆಧುನಿಕ ನೆದರ್ಲೆಂಡ್‌ ಆಗಲಿದ್ದ ಬಹಳಷ್ಟು ಪ್ರದೇಶಗಳು ಈ ಸಾಮ್ರಾಜ್ಯದ ವ್ಯಾಪ್ತಿಯಲ್ಲಿ ಬಂದವು. ಆ ಸಮಯದಲ್ಲಿ, ಹಾಲೆಂಡ್‌ನ್ನು ಇಡಿಯಾಗಿ ಬೆಲ್ಜಿಯನ್ನೇತರ ನೆದರ್ಲೆಂಡ್ಸ್‌ ಒಂದಿಗೆ ಅದೆಷ್ಟು ಸ್ವಾಭಾವಿಕವಾಗಿ ಹೋಲಿಸಬಹುದು ಎಂಬುದನ್ನು ಈ ಹೆಸರೇ ನಿರೂಪಿಸುತ್ತದೆ.[]

ಈ ಸಮಯದಲ್ಲಿ ತಗ್ಗು ಪ್ರದೇಶದಲ್ಲಿರುವ ಗ್ರಾಮಾಂತರ ವಲಯಗಳನ್ನು ಫ್ರೆಂಚ್‌ ಸಾಮ್ರಾಜ್ಯಕ್ಕೆ ಸೇರಿಸಲಾಯಿತು. ಇದನ್ನು 1810ರಿಂದ 1813ರವರೆಗೆ ಫ್ರಾನ್ಸ್‌ನ ಭಾಗ ಎಂದು ಘೋಷಿಸಲಾಯಿತು. ಹಾಲೆಂಡ್‌ನ್ನು(ಮೂರು ಶಾಖೆಗಳನ್ನಾಗಿ) départements Zuyderzée ಮತ್ತು Bouches-de-la-Meuse ಎಂಬ ಮೂರು ವಲಯಗಳಲ್ಲಿ ವಿಭಾಗಿಸಲಾಯಿತು.

ಇನ್ನಿತರೆ ವಲಯಗಳಂತೆ ಪ್ರಾಂತಗಳು

[ಬದಲಾಯಿಸಿ]

ಹಾಲೆಂಡ್‌ನ್ನು 1813ರ ನಂತರ ನೆದರ್ಲೆಂಡ್ಸ್‌ನ ಸಂಯುಕ್ತ ಸಾಮ್ರಾಜ್ಯಕ್ಕೆ ಸೇರಿಸಲಾಯಿತು.(ಯುನೈಟೆಡ್ ಕಿಂಗ್ಡಮ್ ಆಫ್ ದಿ ನೆದರ್ಲೆಂಡ್ಸ್)

ಆಗಿನ 1830ರ ಬೆಲ್ಜಿಯನ್‌ ಕ್ರಾಂತಿಯ ನಂತರ 1840ರಲ್ಲಿ ಇಂದಿನ ಉತ್ತರ ಹಾಲೆಂಡ್‌ ಮತ್ತು ದಕ್ಷಿಣ ಹಾಲೆಂಡ್‌ ಎಂದು ವಿಭಾಗಿಸಲಾಯಿತು. ಐಜೆಯುದ್ದಕ್ಕೂ, ದಕ್ಷಿಣದಲ್ಲಿ ನಾಲ್ಕನೆಯ ಒಂದು ಭಾಗ ಝಯಿಡರ್ಕ್ವಾರ್ಟಿಯರ್‌ ಮತ್ತು ಉತ್ತರದಲ್ಲಿ ನಾಲ್ಕನೆಯ ಒಂದು ಭಾಗ ನೂರ್ಡರ್ಕ್ವಾರ್ಟಿಯರ್‌ ಹಾಲೆಂಡ್‌ನ ಐತಿಹಾಸಿಕ ವಿಂಗಡನೆಯನ್ನು ಇದು ನಿರೂಪಿಸಿತು. ಆದರೆ, ನಿಜವಾದ ವಿಭಾಗಿಸುವಿಕೆಯು ಹಳೆಯ ಭಾಗಿಸುವಿಕೆಗಿಂತಲೂ ವಿಭಿನ್ನವಾಗಿದೆ.

ರಾಷ್ಟ್ರ ನಿರ್ಮಾಣದ ಪ್ರಬಲ ಪ್ರಕ್ರಿಯೆಯು 1850ರಿಂದ ನಡೆಯಿತು. ಆಧುನೀಕರಣದ ಮೂಲಕ ನೆದರ್ಲೆಂಡ್‌ ಸಾಂಸ್ಕೃತಿಕವಾಗಿ ಹಾಗೂ ಆರ್ಥಿಕವಾಗಿ ಏಕೀಕೃತವಾಗಿದ್ದು, ಹಾಲೆಂಡ್‌ನಲ್ಲಿರುವ ನಗರಗಳು, ರಾಷ್ಟ್ರದ ಮಧ್ಯಭಾಗದಲ್ಲಿದ್ದವು.[]

ಸ್ವದೇಶ ಮತ್ತು ವಿದೇಶಗಳಲ್ಲಿ ಹಾಲೆಂಡ್‌ನ ಸ್ಥಾನಮಾನ

[ಬದಲಾಯಿಸಿ]

ನೆದರ್ಲೆಂಡ್‌ ದೇಶದಲ್ಲಿ ಹಾಲೆಂಡ್‌ನ ಪ್ರಾಬಲ್ಯವು ಇತರೆ ಪ್ರಾಂತಗಳಲ್ಲಿ ಪ್ರಾದೇಶಿಕತೆ ತತ್ವಕ್ಕೆ ಕಾರಣವಾಗಿದೆ. ಇತರೆ ಪ್ರಾಂತಗಳ ಅಸ್ತಿತ್ವ ಮತ್ತು ಸ್ಥಳೀಯ ಸಂಸ್ಕೃತಿಗಳಿಗೆ ಹಾಲೆಂಡ್‌ ಒಡ್ಡುವ ಪ್ರತಿಕೂಲಕರ ಸ್ಥಿತಿಗೆ ಇದು ಪ್ರತಿಕ್ರಿಯೆಯಾಗಿದೆ. ಹಾಲೆಂಡ್‌ ಮತ್ತು ಹಾಲೆಂಡಿಗರ ಬಗ್ಗೆ ಇತರೆ ಪ್ರಾಂತದವರು ಬಹಳ ಬಲವಾದ, ಆಗಾಗ್ಗೆ ನಕಾರಾತ್ಮಕ [] ಭಾವನೆ ಹೊಂದಿರುತ್ತಾರೆ. ಹಾಲೆಂಡಿಗರ ದೃಷ್ಟಿಯಿಂದ, ಈ ಮನೋಭೂಮಿಕೆಯ ಕೆಲವು ಗುಣಲಕ್ಷಣಗಳು ಮಾನಸಿಕ ಭೌಗೋಳಿಕತೆಯೊಳಗೆ ಕಲ್ಪಿತವಾಗಿರುತ್ತವೆ.[]

ಹೇಗೆಯಾದರೂ ಸ್ವತಃ ಹಾಲೆಂಡಿಗರು ತಮ್ಮ ಬಗ್ಗೆ ದುರ್ಬಲವೆನಿಸುವ ಸ್ವಯಂ ಸ್ಥಾನಮಾನ ಇಟ್ಟುಕೊಂಡಿದ್ದಾರೆ.[] ಹಾಲೆಂಡ್‌ನ ಸಾಂಸ್ಕೃತಿಕ ಪ್ರಾಬಲ್ಯವನ್ನು ಹಗುರವಾಗಿ ಪರಿಗಣಿಸುತ್ತಾರೆ. ಅವರ ದೃಷ್ಟಿಯಿಂದ, 'ಹಾಲೆಂಡ್‌' ಮತ್ತು 'ನೆದರ್ಲೆಂಡ್ಸ್‌'ನ ಪರಿಕಲ್ಪನೆಗಳು ಸಾದೃಶ್ಯವಾಗಿರುತ್ತವೆ. ಇದರ ಫಲವಾಗಿ, ಅವರು ತಮ್ಮನ್ನು ಪ್ರಾಥಮಿಕವಾಗಿ 'ಹಾಲೆಂಡರ್ಸ್‌' ಎನ್ನುವ ಬದಲು ಸರಳವಾಗಿ, 'ಡಚ್‌' (ನೆದರ್ಲೆಂಡರ್ಸ್‌ (Nederlanders) ) ಎಂದು ಕರೆದುಕೊಳ್ಳುತ್ತಾರೆ.[೧೦] ಈ ವಿದ್ಯಮಾನಕ್ಕೆ (ಹಾಲೆಂಡ್ ಗೆ ಕೇಂದ್ರೀಕೃತ)"hollandocentrism"ಎನ್ನಲಾಗಿದೆ.[೧೧]

ಹಾಲೆಂಡ್‌ ವಿಶಿಷ್ಟ ಚಿತ್ರಣದೊಂದಿಗೆ ಸಂಬಂಧಿತವಾಗುವ ಪ್ರವೃತ್ತಿ ಹೊಂದಿದೆ. ಹಾಲೆಂಡ್‌ ಬಗೆಗೆ ತಕ್ಷಣ ಗುರುತಿಸುವ 'ರೂಢಮಾದರಿ'ಯಂತಹ ಚಿತ್ರಣವೆಂದರೆ, ಟ್ಯೂಲಿಪ್‌ ಗಿಡಗಳು, ಗಾಳಿಯಂತ್ರಗಳು, ಮರದ ಕೊರಡುಗಳು, ಗಿಣ್ಣು ಹಾಗೂ klederdracht ಎಂಬ ಸಾಂಸ್ಕೃತಿಕ ಉಡುಗೆಗಳು. ಇನ್ನೂ ಹಲವು ರೀತಿಯ ರೂಢಿಯಾಗಿರುವ ಮಾದರಿಗಳಂತೆ, ಹಾಲೆಂಡ್‌ನಲ್ಲಿನ ಜೀವನಶೈಲಿಯು ಸತ್ಯ ಮತ್ತು ನೈಜ ಸ್ಥಿತಿಗಳಿಂದ ಬಹಳ ದೂರವಾಗಿದೆ. ಹಾಲೆಂಡ್‌ ಮತ್ತು ನೆದರ್ಲೆಂಡ್ಸ್‌ನ್ನು ಉತ್ತೇಜಿಸಲು ಈ ರೀತಿಯ ರೂಢಮಾದರಿಗಳನ್ನು ಸಕ್ರಿಯವಾಗಿ ಬಳಸಿಕೊಳ್ಳುವ ಕಾರಣಗಳನ್ನು ವಿವರಿಸಬಹುದಾಗಿದೆ. ವೊಲೆಂಡಾಮ್‌ನಂತಹ ಸಾಂಪ್ರದಾಯಿಕ ಗ್ರಾಮಗಳು ಹಾಗೂ ಝಾನ್‌ ಪ್ರದೇಶಗಳಲ್ಲಿನ ಕೆಲವು ಸ್ಥಳಗಳಲ್ಲಿ ಮಾತ್ರ, ನಿವಾಸಿಗಳು ಇಂದಿಗೂ ವಿವಿಧ ಉಡುಪು,ವಸ್ತ್ರವಿನ್ಯಾಸಗಳು ಹಾಗೂ ಮರದ ಪಾದರಕ್ಷೆ ಧರಿಸುವರು.

ಉಲ್ಲೇಖಗಳು

[ಬದಲಾಯಿಸಿ]
  1. "Holland or the Netherlands?". Dutch Ministry of Foreign Affairs. Archived from the original on 4 ಏಪ್ರಿಲ್ 2010. Retrieved 7 February 2010.
  2. ಪ್ಲೀನಿ ದಿ ಎಲ್ಡರ್‌, ದಿ ನ್ಯಾಚುರಲ್‌ ಹಿಸ್ಟರಿ, ಪುಸ್ತಕ 1, ಸಮರ್ಪಿತ. ತಮ್ಮ ಶೀರ್ಷಿಕೆ ಪುಟದಲ್ಲಿ ಲೆಮೇಯ್ರ್‌ ತಿಳಿಸುವಂತೆ, ನ್ಯಾಚುರಲ್‌ ಹಿಸ್ಟರಿಯ ಮೊದಲೆರಡು ಪುಸ್ತಕಗಳನ್ನು ಎಂ. ಅಲೆಕ್ಸಾಂಡ್ರೆ ಅವರು ತಮ್ಮ ಆವೃತ್ತಿಯಲ್ಲಿ ಸಂಪಾದಿಸಿದ್ದಾರೆ. ಪ್ಲೀನಿ ದಿ ಎಲ್ಡರ್‌, ದಿ ನ್ಯಾಚುರಲ್‌ ಹಿಸ್ಟರಿ (ಸಂಪಾದಕರು ಜಾನ್‌ ಬೊಸ್ಟಾಕ್‌, M.D., F.R.S., H.T. Riley, Esq., B.A.)
  3. Antheun Janse, "Een zichzelf verdeeld rijk" in Thimo de Nijs and Eelco Beukers (eds.), 2003, Geschiedenis van Holland , ಸಂಪುಟ 1, ಪಿ. 73
  4. Sijs, Nicoline van der, 2006, De geschiedenis van het Nederlands in een notendop , Amsterdam, Uitgeverij Bert Bakker, ಪಿಪಿ. 127–128
  5. Sijs, Nicoline van der, 2006, De geschiedenis van het Nederlands in een notendop , Amsterdam, Uitgeverij Bert Bakker, ಪಿಪಿ. 123
  6. Willem Frijhoff, "Hollands hegemonie" in Thimo de Nijs and Eelco Beukers (eds.), 2002, Geschiedenis van Holland , ಸಂಪುಟ 2, ಪಿ. 468
  7. Hans Knippenberg ಮತ್ತು Ben de Pater, "Brandpunt van macht en modernisering" in Thimo de Nijs and Eelco Beukers (eds.), 2003, Geschiedenis van Holland , ಸಂಪುಟ 3, ಪಿ. 548
  8. Rob van Ginkel, "Hollandse Tonelen" in Thimo de Nijs and Eelco Beukers (eds.), Geschiedenis van Holland , Volume 3, ಪು. 688
  9. ೯.೦ ೯.೧ Hans Knippenberg and Ben de Pater, "Brandpunt van macht en modernisering" in Thimo de Nijs and Eelco Beukers (eds.), 2003, Geschiedenis van Holland , ಸಂಪುಟ 3, ಪಿ. 556
  10. Thimo de Nijs, "Hollandse identiteit in perspectief" in Thimo de Nijs and Eelco Beukers (eds.), 2003, Geschiedenis van Holland , ಸಂಪುಟ 3, ಪಿ. 700
  11. Rob van Ginkel, "Hollandse Tonelen" in Thimo de Nijs and Eelco Beukers (eds.), 2003, Geschiedenis van Holland , ಸಂಪುಟ 3, ಪು. 647

ಬಾಹ್ಯ ಕೊಂಡಿಗಳು

[ಬದಲಾಯಿಸಿ]

52°15′00″N 4°40′01″E / 52.250°N 4.667°E / 52.250; 4.667