ವಿಷಯಕ್ಕೆ ಹೋಗು

ಮಾಗೋಡು ಜಲಪಾತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾಗೋಡು ಜಲಪಾತ


ಮಾಗೋಡು ಜಲಪಾತ ಯಲ್ಲಾಪುರದಿಂದ ನೈಋತ್ಯದಲ್ಲಿ ೨೦ ಕಿಲೋಮೀಟರ್ ದೂರದಲ್ಲಿದೆ. ಬೇಡ್ತಿ ನದಿ (ಗಂಗಾವಳಿ) ಯು ಸುಮಾರು ೨೦೦ ಮೀಟರ್ ಎತ್ತರದಿಂದ ಎರಡು ಘಟ್ಟಗಳಲ್ಲಿ ಧುಮುಕುತ್ತದೆ.

ಈ ಜಲಪಾತದ ಮೂಲ ಬೇಡ್ತಿ ನದಿ.ಮಳೆಗಾಲದುದ್ಡಕ್ಕೂ ಹಸಿರು ಕಾವ್ಯ ಮೈದಳೆಯುತ್ತದೆ.ಯಲ್ಲಾಪುರದಿಂದ ೨೦ ಕಿ.ಮೀ ದೂರ.ಜಲಪಾತದ ಬಳಿಯವರೆಗೂ ವಾಹನವನ್ನು ಒಯ್ಯಬಹುದು.ತಂಗುವ ವಿಚಾರವಿದ್ದರೆ ಮತ್ತೆ ಯಲ್ಲಾಪುರ ಪಟ್ಟಣಕ್ಕೆ ಬರಬೇಕು.


ಕಾರವಾರ-ಹುಬ್ಬಳ್ಳಿ ಮಾರ್ಗದಲ್ಲಿ ಯಲ್ಲಾಪುರಕ್ಕೆ ಪಶ್ಚಿಮದಲ್ಲಿ ಸುಮಾರು 3 ಕಿ.ಮೀ. ದೂರದಲ್ಲಿ ಕವಲೊಡೆಯುವುದು. ಈ ಕವಲಿನ ಎಡಮಾರ್ಗದಲ್ಲಿ ಸುಮಾರು 13ಕಿಮೀ ದೂರದಲ್ಲಿ ಮಾಗೋಡು ಗ್ರಾಮವಿದೆ. ಇದರ ಬಳಿಯೇ ಜಲಪಾತವಿದೆ. ಹಚ್ಚ ಹಸುರಿನ ಕಾಡಿನ ಮಧ್ಯೆ ಸುಮಾರು ಒಂದೂವರೆ ಕಿ.ಮೀ. ನಡೆದು ದಟ್ಟವಾಗಿ ಬೊಂಬುಗಳು ಬೆಳೆದಿರುವ ಬೆಟ್ಟವನ್ನು ಹತ್ತಿ ಮೇಲೆ ಪೂರ್ವಾಭಿಮುಖವಾಗಿ ನಿಂತರೆ ಬೇಡ್ತಿ ನದಿಯ ಮೇಲಿನ ಕಣಿವೆಯ ದೃಶ್ಯ ಕಾಣಬಹುದು. ಇಲ್ಲಿಂದ ನದಿ ಬೆಟ್ಟದ ಇಳಿಜಾರಿನಲ್ಲಿ ಮುಂದುವರಿದು ಸುಮಾರು 60 ಮೀ. ಕೆಳಕ್ಕೆ ಹಂತ ಹಂತವಾಗಿ ದುಮುಕಿ ಕೊಳದಂತೆ ಸೇರಿ ಮತ್ತೆ ಅಲ್ಲಿಂದ ಮುಂದೆ 184 ಮೀ. ದುಮುಕುವುದು. ಇತ್ತೀಚೆಗೆ ಜಲಪಾತದ ವೀಕ್ಷಣೆಗೆ ಅನುಕೂಲಿಸಲು ದುರ್ಗಮದಾರಿ ಸರಿಪಡಿಸಿ, ಪ್ರವಾಸಿಮಂದಿರ ಕಟ್ಟಿಸಿದ್ದಾರೆ. ಹಾಲಿನ ನೊರೆಯಂತೆ ನಯವಾಗಿ ಹರಿದಿಳಿವ ಈ ಜಲಪಾತದ ಸೌಂದರ್ಯ ಬೆರಗುಗೊಳಿಸುವಂಥದು.

ಸಿರ್ಸಿ-ಯಲ್ಲಾಪುರ ಮಾರ್ಗದಲ್ಲಿರುವ ಮಂಚಿಕೇರಿ ಗ್ರಾಮದಿಂದ 8 ಕಿ.ಮೀ. ದೂರ ಕಾಲುನಡಿಗೆಯಿಂದ ಸಾಗಿ ಮಾಗೋಡು ಜಲಪಾತದೆ ತಳಕ್ಕೆ ಹೋಗಬಹುದು. ಈ ಜಲಪಾತದ ಸಮೀಪದಲ್ಲಿರುವ ಗುಡ್ಡದಲ್ಲಿ ಚಕ್ರವ್ಯೂಹಾಕಾರದ ಒಂದು ಪುರಾತನ ಕೋಟೆ ಇದೆ. ಸ್ವಾದಿ ಅರಸ ತನ್ನ ಪ್ರೇಯಸಿಯ ರಕ್ಷಣೆಗಾಗಿ ಇದನ್ನು ಕಟ್ಟಿಸಿದ್ಧನೆನ್ನಲಾಗಿದೆ ತನ್ನ ಪ್ರೇಯಸಿ ಹೊಲಯರ ಹೆಣ್ಣುಮಗಳನ್ನು ಪ್ರೀತಿ ಮಾಡುತಿದ್ದನು ಎನ್ನಲಾಗಿದೆ []. ಈ ಕೋಟೆಗೆ ಹೊಲತಿ ಕೋಟೆ ಎಂಬ ಹೆಸರು ಈಗಲೂ ಇದೆ. ಈ ಕಾರಣಕ್ಕಾಗಿಯೇ ಮಾಗೋಡು ಜಲಪಾತಕ್ಕೆ ಹೊಲತಿ ಜೋಗ ಎಂದೂ ಹೆಸರಿದೆ. ಕೋಟೆಗೆ ಒಂದೇ ಪ್ರವೇಶದ್ವಾರವಿದ್ದು ಬೇಡ್ತಿ ಮತ್ತು ಶಾಲ್ಮಲಾ ಹೊಳೆಗಳು ಈ ಕೋಟೆಯನ್ನು ಮೂರು ಕಡೆಗಳಿಂದ ಸುತ್ತುವರಿದಿವೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. ಹೊಲಯರು ನಾವು ಚಲವಾದಿಗರು. {{cite web}}: Missing or empty |title= (help); Missing or empty |url= (help)