ರಾಬರ್ಟ್ ಕಾಟನ್ ಹೈಸ್ಕೂಲ್, ಮುಂಬೈ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಗಿನ 'ಬೊಂಬಾಯಿನ|ಮುಂಬಯಿ' ಯೆಂದು ಕರೆಯಲ್ಪಡುತ್ತಿದ್ದ ನಗರದ, 'ಗ್ರಾಂಟ್ ರೋಡ್' (ಪೂರ್ವ)ದಲ್ಲಿನ, 'ಪ್ರೊಕ್ಟರ್ ರಸ್ತೆ'ಯಲ್ಲಿ ಸ್ಥಾಪಿಸಲ್ಪಟ್ಟಿದ್ದು, ಇಂದಿಗೂ ಕಾರ್ಯದಲ್ಲಿ ತೊಡಗಿರುವ 'ರಾಬರ್ಟ್ ಕಾಟನ್ ಹೈಸ್ಕೂಲ್,' ನ ಕೆಂಪುಬಣ್ಣದ ಕಟ್ಟಡ, '೧೭೫ ವರ್ಷಗಳ ಗತ ಇತಿಹಾಸದ ಪ್ರತೀಕ'ವಾಗಿದೆ. ಆ ಶಾಲಾ ಕಟ್ಟಡದ ಒಂದೊಂದು ಇಟ್ಟಿಗೆಗಳೂ ಒಂದೊಂದು ಕಥೆಯನ್ನು ಹೇಳಲು ಸಮರ್ಥವಾಗಿವೆ.

ದೇಶದಲ್ಲಿ ತಾಂತ್ರಿಕೆ ಶಿಕ್ಷಣ ಶಾಲೆ ಆಗಲೇ ಮೈದಳೆದಿತ್ತು[ಬದಲಾಯಿಸಿ]

'ರಾಬರ್ಟ್ ಕಾಟನ್ ಶಾಲೆ, 'ದೇಶದ ಪ್ರಪ್ರಥಮ ತಾಂತ್ರಿಕ ಶಿಕ್ಷಣವೀಯುವ ಶಾಲೆ'ಯಾಗಿತ್ತು. ನಮ್ಮ ದೇಶದ ಸ್ವಾತಂತ್ರ್ಯ ಸಮರದ ಸಮಯದಲ್ಲಿ ನಮ್ಮ ದೇಶ ಭಕ್ತರು ಆ ಶಾಲೆಯ ಒಳಗೆ ಕುಳಿತು ಗುಟ್ಟಾಗಿ ಸಭೆಗಳನ್ನು ಮಾಡಿದ ಸಂದರ್ಭಗಳನ್ನು ಹಳೆಯ ವಿದ್ಯಾರ್ಥಿಗಳು ನೆನೆಸಿಕೊಳ್ಳುತ್ತಾರೆ. ಸನ್. ೧೮೩೬ ರಲ್ಲಿ ಅನಕ್ಷರತೆಯನ್ನು ನಿವಾರಿಸುವ ಸಲುವಾಗಿ ಆಗಿನ 'ಈಸ್ಟ್ ಇಂಡಿಯಾ ಕಂಪೆನಿ'ಯ ಕೆಲವು ಪ್ರಭಾವೀ ನಾಯಕರು, ಈ ಶಾಲೆಯನ್ನು ಸ್ಥಾಪಿಸಿದ್ದರು. 'ರಾಬರ್ಟ್ ಕಾಟನ್ ಮನಿ'ಯವರ ಸ್ಮರಣಾರ್ಥವಾಗಿ ನಿರ್ಮಿಸಿದ ಶಾಲೆ, ದೇಶದ ಕೆಲವೇ ಹಳೆಯ ಶಾಲೆಗಳಲ್ಲೊಂದಾಗಿದೆ. 'ರಾಬರ್ಟ್ ಕಾಟನ್ ಮನಿ', ಆಗಿನ ಮುಂಬಯಿ ರಾಜ್ಯ ಸರಕಾರ ಅನೇಕ ವಿಭಾಗಗಳಲ್ಲಿ ಸೆಕ್ರೆಟರಿಯಾಗಿ ದುಡಿದಿದ್ದರು. ಮೊದಲು ಕಂದಾಯದ ವಿಭಾಗದ ಅಧಿಕಾರಿಯಾಗಿ, ಆನಂತರ ಶಿಕ್ಷಣ ಖಾತೆಯಲ್ಲಿ ಕೆಲಸಮಾಡಿದ್ದರು. ಇದಾದ ಕೆಲವು ವರ್ಷಗಳಲ್ಲಿ ಅವರು ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ, ಮತಪ್ರಚಾರಕರಾಗಿ ದೇಶದುದ್ದಕ್ಕೂ ಸಂಚಿರಿಸುತ್ತಿದರು. ಆ ಸಮಯದಲ್ಲಿ ವಿಧ್ಯಾಭ್ಯಾಸವನ್ನು ಜನಗಳಲ್ಲಿ ಹರಡಲು ಜನಜಾಗೃತಿಯ ಅನೇಕ ಕೆಲಸಗಳನ್ನು ಮಾಡಿದರು. ತಮ್ಮ ೩೨ ವರ್ಷದ ಪ್ರಾಯದಲ್ಲೇ ಅವರು ನಿಧನರಾದರು. ಆಗ, ಅವರಗೆಳೆಯರಲ್ಲನೇಕರು, ಒಂದು ನೆನಪಿನಲ್ಲಿ ಶಾಲೆಯೊಂದನ್ನು ಪ್ರಾರಂಭಿಸಲು ’ಚರ್ಚ್ ಮಿಶನರಿ ಸೊಸೈಟಿ'ಗೆ, ಧನವನ್ನು ಕಾಣಿಕೆಯಾಗಿ ಸಲ್ಲಿಸಿ, ಧನಸಂಗ್ರಹಮಾಡಿದರು. ಆ ಹಣದಿಂದ ಸೊಸೈಟಿಯು ಮುಂದೆ ಶಾಲೆಯನ್ನು ಸ್ಥಾಪಿಸಿತು. ಆಗ ಜನಸಾಮಾನ್ಯರಲ್ಲಿ ವಿದ್ಯೆಯ ಮಹತ್ವದ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಹಾಗೂ ಜೀವನದ ಅವಶ್ಯಕತೆಗಳಿಗೆ ವಿದ್ಯೆಯನ್ನು ಆರಾಧಿಸುವ ಪದ್ಧತಿಯಿರಲಿಲ್ಲ.

'ಜಿನ್ನಾ ಹೌಸ್', ನ ಬಳಿಯಲ್ಲೇ 'ರಾಬರ್ಟ್ ಕಾಟನ್ ಮನಿ ಹೈಸ್ಕೂಲು', ಸ್ಥಾಪಿಸಲ್ಪಟ್ಟಿತ್ತು[ಬದಲಾಯಿಸಿ]

ಈಗ ಮುಂಬಯಿನ, ಆಗಿನ 'ಮುಂಬಯಿ' ನಗರದ), 'ಗ್ರಾಂಟ್ ರೋಡ್', ಉಪನಗರದ, 'ಲೆಮೆಂಟಿಂಗ್ ರಸ್ತೆ'ಯಲ್ಲಿ 'ಕಾಂಗ್ರೆಸ್ ಭವನ'ದ ಹಿಂದೆ ’ಜಿನ್ನಾ ಹೌಸ್’ ಗೆ ಸಮೀಪದಲ್ಲಿರುವ,'ರಾಬರ್ಟ್ ಕಾಟನ್ ಹೈಸ್ಕೂಲ್' ನಲ್ಲಿ ಒಮ್ಮೆ, 'ಜವಹರ್ಲಾಲ್ ನೆಹರೂ', 'ಮಹಾತ್ಮ ಗಾಂಧಿಜಿ', 'ಸರ್ದಾರ್ ಪಟೇಲ್' ರಂತಹ 'ಮಹಾನ್ ದೇಶ ನಾಯಕರುಗಳು' ಸಮಾಲೋಚನೆಮಾಡಿ ಕೆಲವು ನಿರ್ಣಯಗಳನ್ನು ಗುಟ್ಟಾಗಿ ಪಡೆದ ಸ್ಥಳವದು. ಸನ್, ೧೯೪೭ ರಲ್ಲಿ 'ಲಾರ್ಡ್ ಮೌಂಟ್ ಬ್ಯಾಟೆನ್' ರವರು 'ಟೆಕ್ನಿಕಲ್ ಶಾಲೆಗೆ ಶಂಕುಸ್ಥಾಪನೆ,' ಮಾಡಿದ್ದರು. ಮುಂಬಯಿ ಸರ್ಕಾರ ತಾಂತ್ರಿಕ ವಿದ್ಯಾಭ್ಯಾಸವನ್ನು ಇನ್ನೂ ಕೆಲವು ಕಡೆಗಳಲ್ಲಿ ಹರಡಲು ಶ್ರಮವಹಿಸುತ್ತಿದ್ದ ಕಾಲದಲ್ಲಿ ಸ್ಥಾಪನೆಯಾದ ಶಾಲೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಶಾಲೆಯ, 'C.A. Christie' ಎಂಬ ಪ್ರಾಂಶುಪಾಲರು, (೧೯೪೧-೬೮) ರವರೆಗೆ, ೨೭ ವರ್ಷ ಅಲ್ಲಿ ಕೆಲಸಮಾಡಿದರು. ಅನೇಕ ಪ್ರಗತಿಪರ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದರು. ಹೊಸ-ಹೊಸ ತಂತ್ರಗಳನ್ನು ಶಾಲೆಯಲ್ಲಿ ಅಳವಡಿಸಿದ್ದರು. ಸುಮಾರು ಸನ್. ೧೯೬೦ ರ ವರೆವಿಗೂ ಆ ಜಾಗದಲ್ಲಿ ಇದೊಂದೇ ಆಗಿತ್ತು.'blue labourers of the red factory' ಎಂದು ಜನರು ಹೇಳುತ್ತಿದ್ದ ಕಾಲವದು. ಈಗ, ಸರಕಾರದಿಂದ 'ಮರಾಠಿ ಮೀಡಿಯಮ್ ಗೆ ಅನುದಾನ ಸಿಗುತ್ತದೆ. ಬೇರೆ ಶಾಖೆಗಳಿಗೆ, ಮುಂಬಯಿ ’ಡಸೊಸಿಯೆನ್ ಸೊಸೈಟಿ', '(Bombay Diocesan Society)' ಯ ವತಿಯಿಂದ ಹಣದ ಪೂರೈಕೆಯಾಗುತ್ತದೆ. 'ರಾಬರ್ಟ್ ಕಾಟನ್ ಶಾಲೆ'ಯಲ್ಲಿ ಒಟ್ಟು ೫೫ ಉಪಾಧ್ಯಾಯರುಗಳು, ಹಾಗೂ ೮೦೦ ವಿದ್ಯಾರ್ಥಿಗಳಿದ್ದಾರೆ.

'Old Moneyans Association (OMA)[ಬದಲಾಯಿಸಿ]

'ರಾಬರ್ಟ್ ಹೈಸ್ಕೂಲ್' ನ ಹಳೆಯ ವಿದ್ಯಾರ್ಥಿಗಳೆಲ್ಲಾ ಸೇರಿ 'Old Moneyans Association (OMA)' ಸ್ಥಾಪಿಸಿದ್ದಾರೆ. ಸನ್, ೧೯೬೪ ರಲ್ಲಿ ಈ ಶಾಲೆಯಲ್ಲಿ ವಿದ್ಯಾರ್ಜನೆಮಾಡಿದ್ದ, 'ಕಿಶೋರ್ ಶೇಟೆಯವರು', 'ಅಸೋಸಿಯೇಷನ್ ನ ಸದಸ್ಯ', ಹಾಗೂ 'ಖಜಾಂಚಿ'ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

'ರಾಬರ್ಟ್ ಕಾಟನ್ ಮನಿಯವರ ವೃತ್ತಾಂತ'[ಬದಲಾಯಿಸಿ]

'ರಾಬರ್ಟ್ ಕಾಟನ್ ಮನಿಯವರು', ಆಗಿನ, ಈಸ್ಟ್ ಇಂಡಿಯ ಕಂಪೆನಿಯಲ್ಲಿ ಕೆಲಸದಲ್ಲಿದ್ದ, 'ಸರ್ ಡಬ್ಲ್ಯು. ಟಿ. ಮನಿ'ಯವರ ಮಗ. ಅವರ ತಂದೆಯವರು, 'ವೆನಿಸ್ ನಲ್ಲಿ ಕನ್ಸಲ್ಟ್ ಜನೆರಲ್' ಆಗಿದ್ದರು. 'ರಾಬರ್ಟ್ ಕಾಟನ್ ಮನಿ', ಸಾಂಕ್ರಾಮಿಕ ರೋಗದಿಂದ ನರಳಿ, ಬೊಂಬಾಯಿನಲ್ಲೇ ೨೪, ರ ಜನವರಿ, ೧೮೩೫ ರಲ್ಲಿ, ಮರಣಿಸಿದರು. ಆಗ ಅವರಿಗೆ, ಕೇವಲ ೩೨ ವರ್ಷಗಳು.

  • ಸನ್, ೧೮೨೬ ರಲ್ಲಿ 'ಚರ್ಚ್ ಮಿಶನರಿ ಸೊಸೈಟಿ'ಯವರು 'ಇಂಗ್ಲೀಷ್ ಮಾಧ್ಯಮ'ದಲ್ಲಿ ಒಂದು ಬಾಲಕಿಯರ ಶಾಲೆಯನ್ನು ಮುಂಬಯಿನ ಉಪನಗರವಾಗಿದ್ದ, ’ಧೋಭಿ ತಲಾಬ್’ ನ ಹತ್ತಿರ ಪ್ರಾರಂಭಿಸಿದರು.
  • ಸನ್, ೧೮೩೬ ರಲ್ಲಿ,'ರಾಬರ್ಟ್ ಕಾಟನ್ ಮನಿ'ಯವರ ಹೆಸರಿನಲ್ಲಿ, ಬಾಲಕರ ಶಾಲೆ, ಶುರುವಾಯಿತು.
  • ಸನ್, ೧೯೦೮,ರಲ್ಲಿ 'ಗ್ರಾಂಟ್ ರೋಡಿನ ಪ್ರೊಕ್ಟರ್ ರಸ್ತೆ'ಯಲ್ಲಿ ಅದೇ ಶಾಲೆ ಪುನರ್-ಸ್ಥಾಪಿಸಲ್ಪಟ್ಟಿತು.
  • ಸನ್, ೧೯೩೬ ರಲ್ಲಿ 'ರಾಬರ್ಟ್ ಕಾಟನ್ ಶಾಲೆಯ ಶತಮಾನೋತ್ಸವ'ದ ಸಮಯದಲ್ಲಿ, ಆಗಿನ 'ಬೊಂಬಾಯಿನ ಗವರ್ನರ್' ಆಗಿದ್ದ, 'ಲಾರ್ಡ್ ಬ್ರಬೋರ್ನ್' ರವರು 'ಪ್ರಮುಖ ಅತಿಥಿ'ಯಾಗಿಬಂದಿದ್ದರು.
  • ಸನ್, ೧೯೪೭ ರಲ್ಲಿ ಪ್ರಥಮವಾಗಿ ದೇಶದಲ್ಲಿ, '೧೧ ನೆ ಇಯತ್ತೆ' ಪ್ರಾರಂಭವಾಯಿತು.
  • ಸನ್, ೧೯೭೫ ರಲ್ಲಿ 'ಮರಾಠಿ ಕಕ್ಷ', ಆರಂಭವಾಯಿತು.
  • ಸನ್, ೧೯೮೫ ರಲ್ಲಿ ಬಾಲಕ-ಬಾಲಕಿಯರ ಸಹ-ವಿದ್ಯಾಭ್ಯಾಸ, ಆರಂಭವಾಯಿತು.

ಭಾರತದೇಶ’ದ ೧೫೦ ಕ್ಕೂ ಹೆಚ್ಚು ವರ್ಷಗಳಿಂದ, ಕಾರ್ಯ ನಿರ್ವಹಿಸುತ್ತಿರುವ ಶಾಲಾ-ಕಾಲೇಜುಗಳುಗಳ, ಪಟ್ಟಿ ಈ ರೀತಿಯಿದೆ[ಬದಲಾಯಿಸಿ]

'ಪ್ರೆಸಿಡೆನ್ಸಿ ಕಾಲೇಜ್, ಕೊಲ್ಕಟ್ಟಾ'[ಬದಲಾಯಿಸಿ]

ಸನ್, ೧೮೧೭ ರಲ್ಲಿ ,'ಹಿಂದೂ ಕಾಲೇಜ್'ಯೆಂಬ ಹೆಸರಿನಲ್ಲಿ ಆರಂಭವಾದ ಕಾಲೇಜ್, ಸನ್, ೧೮೫೫ ನಲ್ಲಿ 'ಪ್ರೆಸಿಡೆನ್ಸಿ ಕಾಲೇಜ್' ಎಂದು ಹೆಸರನ್ನು ಬದಲಾಯಿಸಿತು. ರಾಜ್ಯ ಸರ್ಕಾರದ ಅಧಿಕಾರದಲ್ಲಿ ಕೆಲಸಮಾಡುತ್ತಿದೆ. ಮೊದಲು ಕುಲೀನ ವರ್ಗದ ಹಿಂದು ಬಾಲಕರಿಗೆಂದು ಆರಂಭವಾದ ಶಾಲೆ, ಈಗ, ೧೮೫೫ ರಲ್ಲಿ ಎಲ್ಲ ವರ್ಗದ ಜನರಿಗೂ ಉಪಲಭ್ದವಾಯಿತು. ಈಗ ಬಾಲಕ ಬಾಲಕಿಯರ ಸಹ ವಿದ್ಯಾಭ್ಯಾಸದ ಆಗರವಾಗಿದೆ.

'ಲಾ ಮಾರ್ಟಿನೆರಿ ಕಾಲೇಜ್'[ಬದಲಾಯಿಸಿ]

ಈ ಹೆಸರಿನ ಕಾಲೇಜಿನ ಕೆಲವು ಶಾಖೆಗಳು, ಲಖ್ನೋ, ಕೊಲ್ಕಟ್ಟಾ, ಲಯಾನ್ಮ್, ಫ್ರಾನ್ಸ್, ನಗರಗಳಲ್ಲಿವೆ. ಲಖ್ನೋ ಮತ್ತು ಫ್ರಾನ್ಸ್ ನಲ್ಲಿ ಅವರದೇ ಆದ ಬಾಲಕ ಬಾಲಕಿಯರಗೆ ಸೀಮಿತವಾದ ಶಾಲೆಗಳು, ೧೮೩೬ ರಲ್ಲಿ ಕೊಲ್ಕಟ್ಟಾದಲ್ಲಿ ಶುರುವಾಯಿತು. ಲಕ್ನೋವಿನಲ್ಲಿ ೧೯೪೫ ರಲ್ಲಿ ಬಾಲಕರ ಶಾಲೆ, ಹಾಗೂ, ೧೮೬೯ ರಲ್ಲಿ ಬಾಲಿಕೆಯರ, ಶಾಲೆ ಶುರುವಾಯಿತು. ಅದು ಖಾಸಗಿ ಶಾಲೆ.

'ಮದರಾಸ್ ಮೆಡಿಕಲ್ ಕಾಲೇಜ್'[ಬದಲಾಯಿಸಿ]

೧೮೩೫ ರಲ್ಲಿ 'ಒಂದು ಖಾಸಗಿ ಚಿಕಿತ್ಸಾಲಯ'ಕ್ಕೆ ಮೀಸಲಾದ ಒಂದು 'ಕೊಠಡಿ'ಯನ್ನು ಆರಂಭಿಸಿದರು. ಅದು, ಅದೇ ವರ್ಷದಲ್ಲಿ ಸರಕಾರಿ ಶಾಲೆಗೆ ಸೇರಿ, ಸರಕಾರದ ಧನ ಸಹಾಯದಿಂದ. ನಿಯಮಿತವಾಗಿ ಸೌಕರ್ಯಗಳನ್ನು ಹೊಂದಿ, ಸಮರ್ಥವಾಗಿ, ರೋಗಿಗಳ ಯೋಗಕ್ಷೇವನ್ನು ನೋಡಿಕೊಳ್ಳತೊಡಗಿತು.

'ಜಾಹಿರ್ ಹುಸೇನ್ ಕಾಲೇಜ್', ಹೊಸ ದೆಹಲಿ[ಬದಲಾಯಿಸಿ]

೧೭೯೨ ರಲ್ಲಿ ಆರಂಭವಾದ ಕಾಲೇಜ್, ಈಗ, ದೆಹಲಿಯ ಕಾಲೇಜ್ ನ ಅಡಿಯಲ್ಲಿ ಕೆಲಸಮಾಡುತ್ತಿದೆ. Arts, Science, Graduate, and Post graduate degrees, ಆ ಕಾಲೇಜ್ ನಲ್ಲಿ ಉಪಲಭ್ದವಿದೆ.