ವಿಷಯಕ್ಕೆ ಹೋಗು

ಶ್ರೀ ರಾಮ ಜನ್ಮಭೂಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಶ್ರೀ ರಾಮ ಜನ್ಮಭೂಮಿ' ಅಯೋಧ್ಯೆ ಭಾರತದ ಪ್ರಾಚೀನ ನಗರಗಳಲ್ಲೊಂದು. ಇದು ಉತ್ತರ ಪ್ರದೇಶದಫೈಜಾಬಾದ್ ಜಿಲ್ಲೆಯಲ್ಲಿದೆ. ಅಯೋಧ್ಯೆಯು ಸರಯೂ ನದಿಯ ತೀರದಲ್ಲಿದ್ದು, ಭಾರತದ ರಾಜಧಾನಿ ದೆಹಲಿಯಿಂದ ೫೫೫ ಕಿಲೋಮೀಟರ್ ದೂರದಲ್ಲಿದೆ. ಅಯೋಧ್ಯೆಯು ಭಾರತೀಯರ ಆರು ಪವಿತ್ರ ಸ್ಥಳಗಳಲ್ಲಿ ಒಂದೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ರಾಮಾಯಣದ ನಾಯಕನಾದ ಶ್ರೀರಾಮ ಅಯೋಧ್ಯೆಯಲ್ಲಿ ಜನ್ಮ ತಾಳಿದ್ದರಿಂದ ಈ ಸ್ಥಳವನ್ನು ರಾಮ ಜನ್ಮಭೂಮಿ ಎಂದು ಕರೆಯಲಾಗುತ್ತದೆ.

ರಾಮ ಮಂದಿರದ ಇತಿಹಾಸ (History of Ram Mandir)

ರಾಮ ಮಂದಿರ ಭವ್ಯ ನಿರ್ಮಾಣವು ಭಾರತದ ಸಮಾಜದ ಭಾವನಾತ್ಮಕ ಮತ್ತು ಸಾಂಸ್ಕೃತಿಕ ಪರಂಪರೆಗೆ ಮಹತ್ವದ ಘಟನೆಯಾಗಿದೆ. ಈ ಮಂದಿರವು ಅಯೋಧ್ಯಾ ನಗರದಲ್ಲಿ ಸ್ಥಾಪಿತವಾಗಿದ್ದು, ಭಗವಾನ್ ರಾಮಚಂದ್ರನ ಪೂಜೆಗೆ ಅಂತರರಾಷ್ಟ್ರೀಯ ಪ್ರಮುಖವಾಗಿದೆ. ಇದು ಹಿಂದೂ ಸಂಸ್ಕೃತಿಯ ಸಾಕಾರ ಪ್ರತಿಷ್ಠಾನವಾಗಿದ್ದು, ಇತಿಹಾಸದ ವಿಭಾಗಕ್ಕೆ ಅನೇಕ ಅದ್ಭುತ ಘಟನೆಗಳನ್ನು ಹೊಂದಿದೆ. ಇಲ್ಲಿ ರಾಮಚಂದ್ರ ಭಗವಾನನ ಜೀವನದ ಘಟನೆಗಳ ಪ್ರತಿಷ್ಠಾನವಾಗಿದ್ದು, ಭಕ್ತರು ಆತನನ್ನು ಪೂಜಿಸುತ್ತಾರೆ.

ರಾಮ ಮಂದಿರದ ಆರಂಭ:

ರಾಮ ಮಂದಿರದ ನಿರ್ಮಾಣವು ಹಿಂದೂ ಸಮಾಜದಲ್ಲಿ ರಾಮ ಮಂದಿರದ ಸ್ಥಾನವನ್ನು ಅದೆಷ್ಟು ಮುಖ್ಯವಾಗಿ ಕಲ್ಪಿಸಿತ್ತು ಎಂದರೆ ಅದು ಭಾರತೀಯ ಇತಿಹಾಸದ ಕಡೆಗೆ ಹೊಸ ಅಧ್ಯಾಯವನ್ನು ತೆರೆದಿತ್ತು. ಈ ಮಂದಿರದ ಸ್ಥಾನವು ಅಯೋಧ್ಯಾ ನಗರದಲ್ಲಿ ಶ್ರೀರಾಮಚಂದ್ರನ ಜನ್ಮಸ್ಥಳದಲ್ಲಿತ್ತು. ಭಗವಾನ್ ರಾಮಚಂದ್ರನ ಅಭೂತಪೂರ್ವ ಕಥೆ ಮತ್ತು ಅದರ ಮೂಲಕ ಜನ್ಮ ಹೊಂದಿದ ಭಗವಾನ್ ರಾಮಚಂದ್ರನ ಮಹತ್ವವನ್ನು ಧರಿಸಿತ್ತು. ಇದರ ಪ್ರಕಾರ, ರಾಮಚಂದ್ರನು ಅಯೋಧ್ಯೆಯ ರಾಜ್ಯವನ್ನು ವಿರಾಟ್ ರಾಜನ ಹಸ್ತದಿಂದ ಪಡೆದು ಹೊಡೆದ ಅವಧಿಯನ್ನು ಪೂಜಿಸಲು ನಿರ್ಮಿತವಾಯಿತು.[]

ಇತಿಹಾಸ

[ಬದಲಾಯಿಸಿ]

ವಿಷ್ಣುವಿನ ಏಳನೇ ಅವತಾರ ಶ್ರೀರಾಮ. ಶ್ರೀರಾಮ ಅಪಾರ ಭಕ್ತರ ದೈವೀಕ ಚೇತನ. ರಾಮಾಯಣ ಸೇರಿದಂತೆ ಹಿಂದೂ ಧರ್ಮದ ಯಾವುದೇ ಗ್ರಂಥಗಳಲ್ಲಿ ರಾಮ ಹುಟ್ಟಿದ ದಿನಾಂಕ ಅಥವಾ ವರ್ಷವನ್ನು ನಮೂದಿಸಲಾಗಿಲ್ಲ. ಆದರೆ ಹುಟ್ಟಿದ್ದು, ರಾಜ್ಯಭಾರ ಮಾಡಿದ್ದು ಕೋಸಲ ರಾಜ್ಯದಲ್ಲಿ. ಅದರ ರಾಜಧಾನಿ ಅಯೋಧ್ಯೆ ಈಗಿನ ಉತ್ತರ ಪ್ರದೇಶದ ಅಯೋಧ್ಯೆ ನಗರ. ಕೋಟ್ಯಂತರ ಹಿಂದೂಗಳು ನಂಬಿಕೊಂಡಿರುವ ಪ್ರಕಾರ ರಾಮಮಂದಿರ ಮತ್ತು ರಾಮ ಹುಟ್ಟಿದ್ದು ಅಯೋಧ್ಯೆಯಲ್ಲೇ. ಋಗ್ವೇದದ ಕ್ರಿ.ಪೂ. ೧೪೫೦ರ ಆಸುಪಾಸಿನಲ್ಲಿ ರಾಮ ಅವತಾರ ತಾಳಿದ್ದ. ಅಯೋಧ್ಯೆಯ ಚಕ್ರವರ್ಥಿ ದಶರಥ ಮತ್ತು ಕೌಸಲ್ಯರ ಹಿರಿಯ ಪುತ್ರನಾಗಿದ್ದ ರಾಮ ಮರ್ಯಾದ ಪುರುಷೋತ್ತಮ ಎಂದೇ ಭಕ್ತರ ಹೃದಯದಲ್ಲಿ ಸ್ಥಾನ ಪಡೆದುಕೊಂಡಿದ್ದಾನೆ.

ರಾಮ ಜನ್ಮಭೂಮಿಯು ಸೀತೆ ಅಡುಗೆ ಮಾಡಿದ್ದ ಸ್ಥಳ ಅಥವಾ ಸೀತಾ ಕೀ ರಸೋಯಿ ಹಾಗೂ ಹನುಮಾನ(ಶ್ರೀರಾಮನ ಪರಮ ಭಕ್ತ) ಮಂದಿಗಳಿಂದ ಕೂಡಿದೆ. ಕಟ್ಟಡಗಳ ನಿರ್ಮಾಣ . ಅಯೋಧ್ಯೆಯಲ್ಲಿ ಹಿಂದೂಗಳಿಂದರಾಮ ಜನ್ಮಸ್ಥಳ ಅಥವಾ ರಾಮ ಚಬೂತರ ಮತ್ತು ಸೀತೆ ಅಡುಗೆ ಮಾಡಿದ್ದ ಸ್ಥಳ ಅಥವಾ ಸೀತಾ ಕೀ ರಸೋಯಿ (ಸೀತಾ ಮಾತೆ ಶ್ರೀರಾಮನ ಧರ್ಮಪತ್ನಿ) ಮಂದಿಗಳ ನಿರ್ಮಾಣವಾಗಿದೆ.ರಾಮ ಜನ್ಮಭೂಮಿಯು ಶ್ರೀರಾಮಚಂದ್ರನ ಮತ್ತು ಹಿಂದೂಗಳ ಪೂಜಾ ಸ್ಥಳ. ಹಿಂದೂಗಳು ಅನಾದಿ ಕಾಲದಿಂದಲೂ ಈ ಪ್ರದೇಶವನ್ನು ತೀರ್ಥಕ್ಷೇತ್ರವೆಂದು ಪರಿಗಣಿಸಿ ಪೂಜಿಸಿಕೊಂಡು ಬರುತ್ತಿದ್ದಾರೆ.

ರಾಮ ಜನ್ಮಭೂಮಿಯು ೧೯೯೪ರ ಡಿಸೆಂಬರ ೨೨/೨೩ರ ಮಧ್ಯರಾತ್ರಿ ಹಿಂದೂಗಳಿಂದ ವಿಗ್ರಹಗಳನ್ನು ತಂದಿಟ್ಟದ್ದು ಸ್ಥಾಪಿಸಲಾಗಿದೆ. ಅಲ್ಲದೆ ಹೊರ ಒಳ ಆವರಣದಲ್ಲಿಯೂ ಅವರು ಪೂಜಾ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದಾರೆ.

ಶ್ರೀ ರಾಮ ಅವತಾರ ತಾಳಿ ಹುಟ್ಟಿದ್ದು ಅಯೋಧ್ಯೆಯಲ್ಲೇ. ಭಗವಾನ್ ಶ್ರೀರಾಮ ಜನ್ಮಸ್ಥಾನವಾಗಿದ್ದು ಅಯೋಧ್ಯೆ.

೧೪೫೦ ರಿಂದ ೧೫೫೦

[ಬದಲಾಯಿಸಿ]

ಅಯೋಧ್ಯೆಯ ಚಕ್ರವರ್ಥಿ ದಶರಥ ಮತ್ತು ಕೌಸಲ್ಯರ ಹಿರಿಯ ಪುತ್ರನಾಗಿದ್ದ ರಾಮ ಮರ್ಯಾದ ಪುರುಷೋತ್ತಮ ಶ್ರೀ ರಾಮ ರಾಜ್ಯಭಾರ ಮಾಡಿದ್ದು ಕೋಸಲ ರಾಜ್ಯದಲ್ಲಿ ಉತ್ತರ ಪ್ರದೇಶದ ಅಯೋಧ್ಯೆ ನಗರ.

೧೪೫೮ : ೧೯೫೮ ರವರೆಗೆ ಇಲ್ಲಿ ರಾಮನ ದೇವಸ್ಥಾನವಿತ್ತು ಎಂದೇ ಹಿಂದೂಗಳು ನಂಬಿಕೊಂಡು ಬಂದಿದ್ದಾರೆ. ಆದರೆ ರಾಮಮಂದಿರ ಇತ್ತು ಎನ್ನುವ ಕುರಿತು ಪ್ರತ್ಯಕ್ಷ ಸಾಕ್ಷಿ ನೀಡಲು ಈಗ ಯಾರಿಂದಲೂ ಸಾಧ್ಯವಿಲ್ಲ.

೧೪೮೩ ರ ಫೆಬ್ರವರಿ ೨೩ರಿಂದ ೧೫೩೧ರ ಜನವರಿ ೫ರವರೆಗೆ ನಡುವೆ ಬದುಕಿದ್ದ ಉಜ್ಬೇಕಿಸ್ತಾನದ ಫರ್ಗಾನಾ ನಗರದ ಜಹೀರ್ ಉದ್ ದಿನ್ ಮೊಹಮ್ಮದ್ ಬಾಬರ್ (ಬಾಬರ್ ಎಂದೇ ಪ್ರಸಿದ್ಧ) ಎಂಬ ಮೊಘಲ್ ದೊರೆ ೧೫೨೭ರಲ್ಲಿ ಭಾರತದ ಮೇಲೆ ದಾಳಿ ನಡೆಸಿದ್ದ.

ಬ್ರಿತಾನೀ ಶಾಸಕೋಂ ನೇ ವಿವಾದಿತ ಸ್ಥಲ ಪರ ಬಾಡ ಲಗಾ ದೀ ಔರ ಪರಿಸರ ಕೇ ಭೀತರೀ ಹಿಸ್ಸೇ ಮೇಂ ಮುಸಲಮಾನೋಂ ಕೋ ಔರ ಬಾಹರೀ ಹಿಸ್ಸೇ ಮೇಂ ಹಿಂದುಓಂ ಕೋ ಪ್ರಾರ್ಥನಾ ಕರನೇ ಕೀ ಅನುಮತಿ ದೇ ದೀ.

ಬಾಬರ ನೀಡಿದ ಆದೇಶದಂತೆ ೧೫೨೮ ರಲ್ಲಿ ಮಿರ್ ಅಯೋಧ್ಯೆಯಲ್ಲಿದ್ದ ರಾಮಮಂದಿರವನ್ನು ಧ್ವಂಸ ಮಾಡಿ ಬಾಬ್ರಿ ಮಸೀದಿಯನ್ನು ನಿರ್ಮಿಸಿದ.

ಅಯೋಧ್ಯೆಯ ಪ್ರಕರಣವು ಮೊದಲ ಬಾರಿ ನ್ಯಾಯಾಲಯ ಪ್ರವೇಶಿಸಿದ್ದು ೧೮೮೫ರಲ್ಲಿ. ಮಹಂತಾ ರಘುವರ್ ದಾಸ್ ಎಂಬವರು ರಾಮ ಜನ್ಮಸ್ಥಳಕ್ಕೆ ಮೇಲ್ಛಾವಣಿ ನಿರ್ಮಿಸಲು ಅವಕಾಶ ನೀಡಬೇಕು ಎಂದು ಕೋರಿ ಪ್ರಕರಣ ದಾಖಲಿಸಿದ್ದರು.

ಅಯೋಧ್ಯೆಯಲ್ಲಿದ್ದ ಮಸೀದಿಯ ಒಂದು ಭಾಗದಲ್ಲಿ ಪೂಜಾ ಸ್ಥಳ ಮಾಡಿಕೊಂಡರು.

ಹಿಂದೂ-ಮುಸ್ಲಿಮರ ನಡುವೆ ಪೂಜಾ ಸ್ಥಳ ತೀವ್ರ ವಿವಾದಕ್ಕೆ ಕಾರಣವಾಗುತ್ತಿರುವುದನ್ನು ಮನಗಂಡ ಬ್ರಿಟೀಷರು, ಎರಡು ಗೋಡೆಗಳನ್ನು ಕಟ್ಟುವ ಮೂಲಕ ಪ್ರತ್ಯೇಕವಾಗಿ ಎರಡೂ ಧರ್ಮೀಯರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಿದರು.

ಮಸೀದಿಯ ಒಳಗಡೆ ರಾಮನ ವಿಗ್ರಹಗಳನ್ನು ಪ್ರತಿಷ್ಠಾಪಿಸಿದರು. ಸಿವಿಲ್ ಕೇಸ್ ದಾಖಲಾದ ಕಾರಣ ಸರಕಾರವು ಮಧ್ಯ ಪ್ರವೇಶಿಸಿತು. ಅಲ್ಲದೆ ಇದನ್ನು ವಿವಾದಿತ ಸ್ಥಳ ಎಂದು ಘೋಷಿಸಿ, ಸರಕಾರವು ಬೀಗ ಜಡಿಯಿತು.

ಹಿಂದೂ ಮಹಾಸಭಾ ಸದಸ್ಯ ಗೋಪಾಲ್ ಸಿಂಗ್ ವಿಶಾರದ್ ಎಂಬವರು ಅಯೋಧ್ಯೆಯಲ್ಲಿನ ರಾಮ ಮಂದಿರದಲ್ಲಿ ಪೂಜೆ ಸಲ್ಲಿಸಲು ಅವಕಾಶಕ್ಕೆ ಸಂಬಂಧಪಟ್ಟಂತೆ ಫೈಜಾಬಾದಿನಲ್ಲಿ ಪ್ರಕರಣ ದಾಖಲಿಸಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿ ೧೯೫೦ ವರ್ಷ ದಿಗಂಬರ ಅಖಾಡದ ಪರಮಹಂಸ ರಾಮಚಂದ್ರ ದಾಸ್ ಎರಡನೇ ಪ್ರಕರಣ ದಾಖಲಿಸಿ, ನಂತರ ಹಿಂದಕ್ಕೆ ಪಡೆದುಕೊಂಡಿದ್ದರು.

ವಿವಾದಿತ ಪ್ರದೇಶವನ್ನು ಬಿಟ್ಟುಕೊಡುವಂತೆ ನಿರ್ದೇಶನ ನೀಡಬೇಕೆಂದು ೧೯೫೯ರಲ್ಲಿ ನಿರ್ಮೋಹಿ ಅಖಾಡಾ ಎಂಬ ಸಂಸ್ಥೆ ಮತ್ತೊಂದು ದಾವೆ ಹೂಡಿತ್ತು.

ನಂತರ ೧೯೬೧ರಲ್ಲಿ ಡಿಕ್ಲರೇಶನ್ ಮತ್ತು ಒಡೆತನಕ್ಕಾಗಿ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ಪ್ರಕರಣ ದಾಖಲಿಸಿತ್ತು.

ವಿಶ್ವ ಹಿಂದೂ ಪರಿಷದನ ನೇತೃತ್ವದಲ್ಲಿ ಶ್ರೀ ರಾಮ ರಾಮ ಮಂದಿರ ನಿರ್ಮಾಣ ಸಮಿತಿಯ ರಚನೆ ಮಾಡಲಾಯಿತು.

೧೯೪೯ರಲ್ಲಿ ವಿವಾದಿತ ಮಸೀದಿಗೆ ಜಡಿದಿದ್ದ ಬೀಗವನ್ನು ಅಂದಿನ ಪ್ರಧಾನಿ ರಾಜೀವ್ ಗಾಂಧಿ. ವಿಶ್ವ ಹಿಂದೂ ಪರಿಷತ್ ಭಾರೀ ಪ್ರತಿಭಟನೆಗಳನ್ನು ನಡೆಸಿತು. ಇದಕ್ಕೆ ಮಣಿದ ರಾಜೀವ್ ೧೯೮೫ರಲ್ಲಿ ಬೀಗ ತೆಗೆಸಿದರು.

೧ ಫೆಬ್ರವರಿ, ೧೯೮೬: ಹರಿಶಂಕರ್ ದುಬೆಯವರ ಅರ್ಜಿಯನ್ನು ಪರಿಶೀಲಿಸಿ ೧೯೮೬ರ ಫೆಬ್ರವರಿ ೧ರಂದು ಮಸೀದಿಯ ಗೇಟುಗಳನ್ನು ತೆರೆದು ಹಿಂದೂಗಳಿಗೆ ದರ್ಶನ, ಪೂಜೆಗೆ ನ್ಯಾಯಾಧೀಶರು ಅವಕಾಶ ಕೊಟ್ಟರು. ಇದೇ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ 'ರಾಮ ಜನ್ಮಭೂಮಿ ನ್ಯಾಸ'ವನ್ನು ಸ್ಥಾಪಿಸಿತು

-- ಫೆಬ್ರವರಿ, ೧೯೮೬ :ಮುಸಲ್ಮಾನರು ಫೆಬ್ರವರಿಯಲ್ಲಿ ಬಾಬ್ರಿ ಮಸೀದಿ ಕ್ರಿಯಾ ಸಮಿತಿಯನ್ನು ರಚಿಸಿಕೊಂಡರು.

ಡಿಕ್ಲರೇಶನ್ ಮತ್ತು ಒಡೆತನ ನೀಡಬೇಕೆಂದು ೧೯೮೯ರಲ್ಲಿ ಭಗವಾನ್ ಶ್ರೀ ರಾಮ್ ಲಾಲಾ ವಿರಾಜಮಾನ್ ಹೆಸರಿನಲ್ಲಿ ಪ್ರಕರಣ ದಾಖಲಾಗಿತ್ತು.

ವಿಶ್ವ ಹಿಂದೂ ಪರಿಷದನ ರಾಮ ಮಂದಿರ ನಿರ್ಮಾಣಕ್ಕಾಗಿ ಅಭಿಯಾನದ ಫಲವಾಗಿ ವಿವಾದಿತ ಸ್ಥಳ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮುಂದಾಯಿತು. ಅಲ್ಲದೆ ಮಸೀದಿಯನ್ನು ಸ್ಥಳಾಂತರಿಸುವಂತೆ ಒತ್ತಾಯಿಸಲಾಯಿತು.

೨೫ ಆಗಸ್ಟ್ , ೧೯೮೯: ವಿವಾದಿತ ಕಟ್ಟಡದ ೨.೭೭ ಎಕರೆ ಪ್ರದೇಶವನ್ನು ಹೊರತುಪಡಿಸಿ ೪೨.೦೯ ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲು ಉತ್ತರ ಪ್ರದೇಶ ಸರಕಾರಕ್ಕೆ ನ್ಯಾಯಾಲಯ ಅನುಮತಿ ನೀಡಿತು.

೨೫ ನವೆಂಬರ, ೧೯೮೯: ವಿವಾದಿತ ಪ್ರದೇಶದ ಹೊರಗಡೆ ರಾಮಮಂದಿರ ನಿರ್ಮಾಣಕ್ಕಾಗಿ ಶಿಲಾನ್ಯಾಸ ಮಾಡಲು ವಿಶ್ವಹಿಂದೂ ಪರಿಷತ್ತಿಗೆ ಕೇಂದ್ರದಲ್ಲಿನ ಕಾಂಗ್ರೆಸ್ ಸರಕಾರವು ಒಪ್ಪಿಗೆ ಸೂಚಿಸಿತು.

ವಿಶ್ವ ಹಿಂದೂ ಪರಿಷದನ ಕಾರ್ಯಕರ್ತರಿದ ಬಾಬರೀ ಮಸೀದಿಯ ದ್ವಂಸ.

೨೫ ಸೆಪ್ಟೆಂಬರ್,೧೯೯೦ : ಅಯೋಧ್ಯೆ ಕುರಿತು ಭಾರತದಾದ್ಯಂತ ಜಾಗೃತಿ ಮೂಡಿಸಿದ್ದು ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿ. ಅವರು 1990ರ ಸೆಪ್ಟೆಂಬರ್ 25ರಂದು ಗುಜರಾತಿನ ಸೋಮನಾಥ ಮಂದಿರದಿಂದ ತನ್ನ ಮಹತ್ವಾಕಾಂಕ್ಷೆಯ ರಥಯಾತ್ರೆಯನ್ನು 10,000 ಕಿಲೋ ಮೀಟರ್ ದೇಶದಾದ್ಯಂತ ಕೊಂಡೊಯ್ಡು ಅಯೋಧ್ಯೆಯಲ್ಲಿ ಸಮಾಪ್ತಿಗೊಳಿಸಿದರು. ಇದು ದೇಶದ ಹಿಂದೂಗಳಲ್ಲಿ ಭಾರೀ ಅಲೆಯನ್ನೇ ಎಬ್ಬಿಸಿತ್ತು.

-- ನವೆಂಬರ್ ,೧೯೯೦ :ನವೆಂಬರ್ ತಿಂಗಳ ಹೊತ್ತಿಗೆ ಬಿಹಾರದಲ್ಲಿ ಅಡ್ವಾಣಿಯವರನ್ನು ಬಂಧಿಸಿದಾಗ ರಥಯಾತ್ರೆಗೂ ತೊಡಕಾಯಿತು.

ಅಡ್ವಾಣಿಯವರ ರಥ ಯಾತ್ರೆಯಿಂದಾಗಿ ಬಿಜೆಪಿಯು ದೇಶದ ಸಂಸತ್ತಿನಲ್ಲಿ ಪ್ರಬಲ ವಿರೋಧ ಪಕ್ಷವಾಗಿ ಮೂಡಿ ಬಂತು ಮತ್ತು ಅಯೋಧ್ಯೆ ಇರುವ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೂ ಬಂತು.

೧೯೯೧ ವರ್ಷ ರಾಮ ಮಂದಿರ ಪರ ಚಳವಳಿ ಮತ್ತೂ ತೀವ್ರ ಗೊಂಡಿತು. ಸಂಘ ಪರಿವಾರದ ಕಾರ್ಯಕರ್ತರು ಅಥವಾ ಕರಸೇವಕರು ಚಳವಳಿಯನ್ನು ತೀವ್ರಗೊಳಿಸಿ ಅಯೋಧ್ಯೆ ಪ್ರವೇಶಿಸಲು ಯತ್ನಿಸಿದರು. ದೇಶಾದ್ಯಂತದಿಂದ ಇಟ್ಟಿಗೆಗಳನ್ನು ಸಂಗ್ರಹಿಸಿ ಕಳುಹಿಸಲಾಗಿತ್ತು.

೨೦ ಮಾರ್ಚ್, ೧೯೯೨: ಉತ್ತರ ಪ್ರದೇಶದ ಕಲ್ಯಾಣ್ ಸಿಂಗ್ ನೇತೃತ್ವದ ಬಿಜೆಪಿ ಸರಕಾರವು ವಿವಾದಿತ ಪ್ರದೇಶದ ಸುತ್ತಮುತ್ತವಿದ್ದ ೪೨.೦೯ ಎಕರೆ ಜಾಗವನ್ನು ರಾಮ ಜನ್ಮಭೂಮಿ ಶಿಲಾನ್ಯಾಸಕ್ಕೆ ಹಸ್ತಾಂತರಿಸಿತು.

೨೭ ನವೆಂಬರ್,೧೯೯೨: ಉತ್ತರ ಪ್ರದೇಶದ ರಾಜ್ಯ ಬಿಜೆಪಿ ಸರಕಾರ ಭರವಸೆ ನೀಡಿದ ನಂತರ, ಸಾಂಕೇತಿಕ ಕರಸೇವೆಗೆ ಸುಪ್ರೀಂ ಕೋರ್ಟ್ ಅವಕಾಶ ನೀಡಿತು.

೦೬ ಡಿಸೆಂಬರ್ ,೧೯೯೨: ಬಾಬರಿ ಮಸೀದಿ ಧ್ವಂಸ.

೧೬ ಡಿಸೆಂಬರ್ ,೧೯೯೨: ಬಾಬರಿ ಮಸೀದಿ ಧ್ವಂಸದ ಹತ್ತು ದಿನಗಳ ಬಳಿಕ ಡಿಸೆಂಬರ್ ೧೬ರಂದು, ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಆಗಿನ ಪ್ರಧಾನಿ ಪಿ.ವಿ. ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರಕಾರವು ಘಟನೆಯ ಕುರಿತು ತನಿಖೆ ನಡೆಸಲು ನ್ಯಾಯಮೂರ್ತಿ ಲಿಬರ್ಹಾನ್ ನೇತೃತ್ವದ ಆಯೋಗವನ್ನು ನೇಮಿಸಿತು.

ಪ್ರಧಾನಮಂತ್ರೀ ಅಟಲ ಬಿಹಾರೀ ವಾಜಪೇಯೀ ನೇತೃತ್ವದ ಭಾರತೀಯ ಜನತಾ ಪಕ್ಷದಿಂದ ಸರ್ಕಾರ ರಚನೆ.

ವಿಶ್ವ ಹಿಂದೂ ಪರಿಷದ ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಸಂಕಲ್ಪ.

ಜನವರಿ ೨೦೦೨: ಅಯೋಧ್ಯಾ ವಿವಾದ ಬಗೆಹರಿಸಲು ಪ್ರಧಾನಮಂತ್ರೀ ವಾಜಪೇಯೀಯವರು ಅಯೋಧ್ಯಾ ಸಮಿತಿ ರಚಿಸಿದರು.ಅಯೋಧ್ಯೆಯ ಒಡೆತನ ಯಾರಿಗೆ ಸೇರಿದ್ದು ಎಂಬುದನ್ನು ನಿರ್ಧರಿಸಲು ಅಲಹಾಬಾದ್ ಹೈಕೋರ್ಟ್ ಲಕ್ನೋದ ವಿಶೇಷ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ಆರಂಭಿಸಲಾಗುತ್ತದೆ

ಪೆಬ್ರವರಿ ೨೦೦೨: ಭಾರತೀಯ ಜನತಾ ಪಕ್ಷವು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಘೋಷಣಾಪತ್ರದಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ನಮೂದಿಸಲಿಲ್ಲ.

೧೫ ಮಾರ್ಚ ೨೦೦೨: ವಿಶ್ವ ಹಿಂದೂ ಪರಿಷದ ನೇ ೧೫ ಮಾರ್ಚದಿಂದ ರಾಮ ಮಂದಿರ ನಿರ್ಮಾಣ ಕಾರ್ಯ ಶುರು ಮಾಡುವದಾಗಿ ಘೋಷಣೆ. ಸಾವಿರಾರು ಕರಸೇವಕರು ಅಯೋಧ್ಯಾಯಲ್ಲಿ ಜಮಾಯಿಸಿದ್ದರು.

ಗುಜರಾತಿನ ತಂಡ ವಾಪಸ್ ಹೋಗುತ್ತಿದ್ದಾಗ ಗೋದ್ರಾ ರೈಲಿನಲ್ಲಿ ಜೀವಂತ ಸುಟ್ಟು ಕರಕಲಾದರು. ಈ ಘಟನೆಯಲ್ಲಿ ೫೮ ಕರಸೇವಕರು ಬಲಿಯಾಗಿದ್ದರು.ಇದೇ ಹಿನ್ನೆಲೆಯಲ್ಲಿ ನಡೆದ ಕೋಮುಗಲಭೆಗೆ ಗುಜರಾತ್ ಹೊತ್ತಿ ಉರಿದು ಎರಡು ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾದರು.

೧೩ ಮಾರ್ಚ, ೨೦೦೨: ಸರ್ವೋಚ್ಚ ನ್ಯಾಯಾಲಯದ ಆದೇಶ. ಕೇಂದ್ರ ಸರ್ಕಾರದಿಂದ ನ್ಯಾಯಾಲಯದ ಆದೇಶ ಪಾಲನೆಗೆ ಸಮ್ಮತಿ.

೧೫ ಮಾರ್ಚ, ೨೦೦೨: ವಿಶ್ವ ಹಿಂದೂ ಪರಿಷದ ಮತ್ತು ಸರ್ಕಾರದ ಮಾತುಕತೆ. ೨೨ ಜೂನ, ೨೦೦೨: ವಿಶ್ವ ಹಿಂದೂ ಪರಿಷದದಿದ ಮಂದಿರ ನಿರ್ಮಾಣದ ವಿವಾದಿತ ಭೂಮಿಯ ಹಸ್ತಾಂತರಣಕ್ಕೆ .

ಜನೆವರ ೨೦೦೩: ವಿವಾದಿತ ತಾಣದಲ್ಲಿ ರಾಮ ಮಂದಿರವಿತ್ತೇ ಎಂಬ ಕುರಿತು ಸಮೀಕ್ಷೆ ನಡೆಸಲು ನ್ಯಾ ಯಾಲಯ ಆದೇಶಿಸಿತು.ರೇಡಿಯೋ ತರಂದಿದ ವಿವಾದಿತ ರಾಮ ಜನ್ಮಭೂಮಿ-ಬಾಬರೀ ಮಸ್ಜಿದ ಪರಿಸರ ಕೆಳಗೆ ಪ್ರಾಚೀನ ಕಟ್ಟಡದ ಅವಶೇಷಗಳು ಇರುವೆಕೆ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ.

ಮಾರ್ಚ ೨೦೦೩: ವಿವಾದಿತ ತಾಣದಲ್ಲಿ ರಾಮ ಮಂದಿರವಿತ್ತೇ ಎಂಬ ಕುರಿತು ಸಮೀಕ್ಷೆ ನಡೆಸಲು ನ್ಯಾ ಯಾಲಯ ಆದೇಶಿಸಿತು. ಮಾರ್ಚ ೨೦೦೩: ಸಿಬಆಯ್ ನೇ ೧೯೯೨ರ ಅಯೋಧ್ಯಯ ಬಾಬರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿ ಉಪಪ್ರಧಾನಮಂತ್ರೀ ಲಾಲಕೃಷ್ಣ ಆಡವಾಣೀ ಸಹಿತ ೮ ಜನರ ವಿರುದ್ದ ಪೂರಕ ಆರೋಪಪತ್ರ ದಾಖಲಿಸಿತು. ಹಾಗೂ ವಿಚಾರಣೆಗೊಳಪಡುವಂತೆ ನ್ಯಾಯಾಲಯ ಸೆಪ್ಟಂಬರ್‌ನಲ್ಲಿ ಆದೇಶಿ ಸಿತು. ಆದರೆ ಶ್ರಿ .ಎಲ್.ಕೆ. ಅಡ್ವಾಣಿಯವರ ವಿರುದ್ಧ ಯಾವುದೇ ದೋಷಾರೋಪಗಳನ್ನು ದಾಖಲಿಸಲಾಗಲಿಲ್ಲ.

ಎಪ್ರಿಲ ೨೦೦೩: ಅಲಹಾಬಾದ್ ಹೈಕೋರ್ಟ್ ಲಕ್ನೋದ ವಿಶೇಷ ಪೀಠದಲ್ಲಿ ನಿರ್ದೇಶದಿಂದ ಪುರಾತಾತ್ವಿಕ ಸರ್ವೇಕ್ಷಣ ವಿಭಾಗವು ವಿವಾದಿತ ಸ್ಥಲದಲ್ಲಿ ಉತ್ಖನ ಮಾಡಿತು. ಜೂನ ೨೦೦೩:ಮಸೀದಿಯನ್ನು ದೇವಸ್ಥಾನದ ಮೇಲೆಯೇ ನಿರ್ಮಿಸಲಾಗಿದೆ. ೧೦ನೇ ಶತಮಾನದಲ್ಲಿ ದೇವಾಲಯವಿತ್ತು ಎಂದು ಉತ್ಖನನದ ವರದಿಗಳು ಹೇಳಿದವು ಆದಾಗ್ಯೂ ಆಗಸ್ಟ್‌ನಲ್ಲಿ ವರದಿ ಸಲ್ಲಿಸಿದ ತನಿಖಾ ಸಂಸ್ಥೆಯು, ಮಸೀದಿ ಯಡಿ ಮಂದಿರವಿದ್ದ ಕುರುಹುಗಳ ಕುರಿತ ವರದಿಯನ್ನು ಹಾಜರು ಪಡಿಸಿತು. ಆದರೆ ಆ ವಿಷಯ ವನ್ನು ಮಸೀದಿ ಪರವಾದಿಗಳು ಒಪ್ಪಲಿಲ್ಲ.

ಜೂನ ೨೦೦೩: ಕಾಂಚೀ ಪೀಠ ಕೇ ಶಂಕರಾಚಾರ್ಯ ಜಯೇಂದ್ರ ಸರಸ್ವತೀಯವರ ಮಧ್ಯಸ್ಥಿಕೆ.

ಎಪ್ರಿಲ ೨೦೦೪: ಲಾಲಕೃಷ್ಣ ಆಡವಾಣಿಯವರಿದ ಅಯೋಧ್ಯಾ ಅಸ್ಥಾಯೀ ರಾಮಮಂದಿರದಲ್ಲಿ ಪೂಜೆ.

ಜುಲೈ ೨೦೦೪: ಶಿವ ಸೇನಾ ಪ್ರಮುಖ ಬಾಲ ಠಾಕರೇಯವರಿಂದ ಅಯೋಧ್ಯಾ ವಿವಾದಿತ ಸ್ಥಳದಲ್ಲಿ ಮಂಗಲ ಪಾಂಡೇಯವರ ಹೆಸರಿನಲ್ಲಿ ರಾಷ್ಟ್ರೀಯ ಸ್ಮಾರಕದ ಬಗ್ಗೆ ಹೆಳಿಕೆ.

ಜುಲೈ ೨೦೦೫: ೫ ಬಂದೂಕದಾರಿಗಳಿಂದ ವಿವಾದಿತ ಪರಿಸರ ಮೇಲೆ ಗುಂಡುಗಳ ಸುರಿಮಳೆ. ಒಬ್ಬಸ ಸಾವು ಹಾಗೂ ನಾಲ್ವರ ಬಂದನ.

೦೪ ಅಗಸ್ಟ ೨೦೦೫: ಫೈಜಾಬಾದ ಅದಾಲತ ಅಯೋಧ್ಯಾ ವಿವಾದಿತ ಪರಿಸರ ಮೇಲೆ ಗುಂಡುಗಳ ಸುರಿಮಳೆಗೈದ ೪ ಜನರನ್ನು ನ್ಯಾಯಾಲಯದ ಹಿರಾಸತನಲ್ಲಿ ಕಳಧಿಸಿದರು.

೨೦ ಎಪ್ರೀಲ ೨೦೦೬: ಕಾಂಗ್ರೇಸ ನೇತೃತ್ವದ ಯೂಪೀಏ ಸರ್ಕಾರವು ಲಿಬ್ರಹಾನ ಆಯೋಗಕ್ಕೆ ಸಮಕ್ಷ ಲಿಖಿತರ ರೂಪದಲ್ಲಿ ಆರೋಪ. ಜುಲೈ ೨೦೦೬: ಸರ್ಕಾರವು ಅಯೋಧ್ಯಾ ವಿವಾದಿತ ಸ್ಥಳದಲ್ಲಿ ಅಸ್ಥಾಈ ರಾಮ ಮಂದಿರದ ಸುರಕ್ಷೆಗಾಗಿ ಗುಂಡು ನಿರೋದಕ ಬೇಲಿ ನಿರ್ಮಾಣದ ಪ್ರಸ್ತಾವ. ಇದಕ್ಕೆ ಮುಸ್ಲಿಮ ಸಮುದಾಯದ ವಿರೋಧ.

ಅಯೋಧ್ಯೆ ಭೂ ವಿವಾದದ ದೂರನ್ನು ಮರು ಪರಿಶೀಲಿಸಲು ಸುಪ್ರೀಂ ಕೋರ್ಟ್ ತಿರಸ್ಕರಿಸಿತು.

  • ೩೦ ಜೂನ ೨೦೦೯: ಲಿಬ್ರಹಾನ ಆಯೋಗವು ೧೭ ವರ್ಷದ ನಂತರ ಪ್ರಧಾನಮಂತ್ರಿ ಮನಮೋಹನ ಸಿಂಗರಿಗೆ ವರದಿಯನ್ನು ಒಪ್ಪಿಸಿತು.
  • ೩೦ ಜೂನ್ ,೨೦೦೯: ಬಾಬರಿ ಮಸೀದಿ ಧ್ವಂಸಗೊಂಡ ಹತ್ತು ದಿನಗಳ ಬಳಿಕ ಘಟನೆಯ ತನಿಖೆಗಾಗಿ ನಿರ್ಮಾ ಣಗೊಂಡ ಲಿಬರ್ಹಾನ್ ಆಯೋಗವು ತನ್ನ ವರದಿಯನ್ನು ೧೭ ವರ್ಷಗಳ ಬಳಿಕ ಜೂನ್ 30ರಂದು ಸಲ್ಲಿಸಿತು. ಆಯೋಗದ ತನಿಖೆಯ ಅಂಶಗಳು ಬಯಲಾಗಿಲ್ಲ.
  • ಲಿಬರ್ಹಾನ್ ಆಯೋಗದ ವರದಿ ಉಲ್ಲೇಖಿಸಿದಂತೆ
  • [೧] ಪ್ರಕಟಿಸಿದ ದಿನಾಂಕ : ೨೦೦೯-೧೧-೨೫
  • ೧೫೨೮: ಮೊಘಲ್ ರಾಜವಂಶದ ಸಂಸ್ಥಾಪಕ ಬಾಬರ್‌ನಿಂದ ತನ್ನ ದಂಡನಾಯಕ ಮೀರ್ ಬಕಿಗೆ ಮಸೀದಿ ನಿರ್ಮಿಸಲು ಸೂಚನೆ. ಶ್ರೀರಾಮನ ಮಂದಿರವನ್ನು ಕೆಡವಿ ಅಲ್ಲಿ ಈ ಮಸೀದಿ ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ.
  • ೧೭೬೭: ಹಿಂದೂಗಳು ಪ್ರಾಂಗಣವನ್ನು ವಶಪಡಿಸಿಕೊಂಡು ರಾಮ ಜನ್ಮಭೂಮಿ(ರಾಮ ಚಬೂತ್ರಾ) ಮತ್ತು ಆರಾಧನೆ ಮಾಡುತ್ತಿದ್ದಾರೆ ಎಂದು ಆಸ್ಟ್ರಿಯಾದ ಪ್ರವಾಸಿ ಜೇಸಲ್ಟ್ ಹೇಳಿಕೆ. ಇದನ್ನು ಉಲ್ಲೇಖಿಸಿ ಬಿಜೆಪಿಯಿಂದ ಶ್ವೇತಪತ್ರ ಸಲ್ಲಿಕೆ.
  • ೧೯೩೪: ಕಟ್ಟಡವನ್ನು ಮರು ಸ್ವಾಧೀನಕ್ಕೆ ಕೆಲವು ಹಿಂದೂಗಳ ಯತ್ನ. ಅಲ್ಲಿಂದೀಚೆಗೆ ಅಲ್ಲಿ ಬೀಗಮುದ್ರೆ. ಅಂದು ಗುಮ್ಮಟ್ಟಕ್ಕೆ ಸ್ವಲ್ಪ ಧಕ್ಕೆ.
  • ೧೯೪೯: ಡಿಸೆಂಬರ್‌ನಲ್ಲಿ ಬಾಬ್ರಿ ಮಸೀದಿಯಲ್ಲಿ ತಂಗಿದ್ದ ಕೆಲವು ಪ್ರವಾಸಿಗರನ್ನು ಚುಡಾಯಿಸಿದ ಪ್ರಸಂಗ ನಡೆದ ಬಳಿಕ ಪೊಲೀಸ್ ಚೌಕಿ ಸ್ಥಾಪನೆ, ಸ್ಮಾರಕದ ಒಳಗೆ ವಿಗ್ರಹಗಳನ್ನು ಸ್ಥಾಪಿಸಲು ಯತ್ನಿಸಿದ ೬೪ ಜನರ ವಿರುದ್ಧ ಎಫ್‌ಐಆರ್ ದಾಖಲು.
  • ೧೯೬೧: ಸುನ್ನಿ ವಕ್ಫ್ ಮಂಡಳಿಯಿಂದ ವಿವಾದಾತ್ಮಕ ಕಟ್ಟಡದ ಸ್ವಾಧೀನ ಮತ್ತು ಸುತ್ತಮುತ್ತಲಿನ ಜಮೀನಿನ ಸ್ವಾಧೀನ ಕೋರಿ ಸಿವಿಲ್ ಕೋರ್ಟ್‌ನಲ್ಲಿ ದಾವೆ.
  • ೧೯೮೪: ರಾಮ ಜನ್ಮಭೂಮಿ ಚಳವಳಿ ಅಧಿಕೃತ ಆರಂಭ.
  • ೧೯೮೯: ರಾಮಮಂದಿರಕ್ಕಾಗಿ ಶಿಲಾನ್ಯಾಸ.
  • ೧೯೯೦: ಅಯೋಧ್ಯೆಯಲ್ಲಿ ೨೮ ಸಾವಿರ ಪಿಎಸಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅಲ್ಲಿ ೪೦ ಸಾವಿರ ಕರಸೇವಕರು ಜಮಾಯಿಸಿದ್ದರು. ಈ ಪೈಕಿ ಒಂದು ಸಾವಿರ ಮಂದಿಯಿಂದ ಒಳಾವರಣ ಪ್ರವೇಶ. ಪರಿಸ್ಥಿತಿ ನಿಯಂತ್ರಿಸಲು ಭದ್ರತಾ ಪಡೆಗಳಿಂದ ಗುಂಡು ಹಾರಾಟ. ಹೀಗಾಗಿ ಜನ್ಮಭೂಮಿ ಚಳವಳಿಯನ್ನು ೧೯೯೨ರ ಜುಲೈ ೯ಕ್ಕೆ ಮುಂದೂಡಲು ನಿರ್ಧಾರ.
  • ೧೯೯೧: ಅಕ್ಟೋಬರ್ ೨೧ರಂದು ಗುಮ್ಮಟವೇರಿದ ಕರಸೇವಕರು. ಅವರನ್ನು ತಕ್ಷಣ ಪತ್ತೆ ಹಚ್ಚಿ ಧ್ವಜ ಸಹಿತ ಅಲ್ಲಿಂದ ಕೆಳಗೆ ಇಳಿಸಲಾಯಿತು.
  • ೧೯೯೨: ಡಿಸೆಂಬರ ೨ ರಂದು ೬೦ ಸಾವಿರ ಕರಸೇವಕರು ಅಯೋಧ್ಯೆಯಲ್ಲಿ ೬೦ ಸಾವಿರ ಕರಸೇವಕರ ಜಮಾವಣೆ, ಅಲ್ಲಿನ ಮಜಾರ್‌ಗಳು ಮತ್ತು ಮಸೀದಿಗಳಿಗೆ ಕರಸೇವಕರಿಂದ ಹಾನಿ. ಆದರೂ ಜನರನ್ನು ತಡೆಯಲು ಆಡಳಿತ ಮುಂದಾಗಲಿಲ್ಲ. ಇನ್ನಷ್ಟು ಹೆಚ್ಚಿನ ಪಡೆ ರವಾನಿಸಲು ಜಿಲ್ಲಾಡಳಿತ ಕೋರಿದರೂ ರಾಜ್ಯ ಸರ್ಕಾರ ಅದನ್ನು ನಿರಾಕರಿಸಿತು.
  • ೧೯೯೨: ಡಿಸೆಂಬರ ೪ಕ್ಕೆ ಕರಸೇವಕರ ಸಂಖ್ಯೆ ೨ ಲಕ್ಷ ದಾಟಿತ್ತು. ಮಧ್ಯರಾತ್ರಿ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ ಅಯೋಧ್ಯೆ ತಲುಪಿದರು. ಜಿಲ್ಲೆಯ ಅಧಿಕಾರಿಗಳು ಅವರನ್ನು ಭೇಟಿ ಮಾಡಿದಾಗ, ಶಾಂತಿಯುತ ಕರಸೇವೆ ನಡೆಸುವ ಭರವಸೆಯನ್ನು ನಾಯಕರು ನೀಡಿದರು (ಆಗ ರಾಜ್ಯದ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರು ಡಿಸೆಂಬರ ೬ರಂದು ಗುಂಡು ಹಾರಿಸಬಾರದು ಎಂದು ಸೂಚನೆ ನೀಡಿದರು).
  • ೧೯೯೨: ಡಿಸೆಂಬರ ೬ರಂದು ಬೆಳಿಗ್ಗೆ ೧೦.೩೦ಕ್ಕೆ ಬಿಜೆಪಿ ಮತ್ತು ವಿಎಚ್‌ಪಿ ನಾಯಕರು ಪೂಜೆ ನಡೆಸಲು ಉದ್ದೇಶಿಸಿದ ವೇದಿಕೆಗೆ ಆಗಮಿಸಿದರು ಮತ್ತು ಸಾಂಕೇತಿಕ ಕರಸೇವೆ ನಡೆಸಿದರು. ೧೨.೧೫ಕ್ಕೆ ಕರಸೇವಕನೊಬ್ಬ ಗುಮ್ಮಟದ ಮೇಲ್ಭಾಗಕ್ಕೆ ಹತ್ತಿದ, ಆತನನ್ನು ಅನುಸರಿಸಿದ ಇತರರ ಕೈಯಲ್ಲಿ ಪಿಕ್ಕಾಸಿ, ಸುತ್ತಿಗೆ, ಕಬ್ಬಿಣದ ಸರಳುಗಳಿದ್ದವು.
  • ಕರಸೇವಕರು ಗರ್ಭಗೃಹಕ್ಕೆ ತೆರಳಿ ಅಲ್ಲಿನ ವಿಗ್ರಹ ಮತ್ತು ಕಾಣಿಕೆ ಡಬ್ಬವನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದುರು. ಭದ್ರತಾ ಪಡೆಗಳು ಮೂಕಪ್ರೇಕ್ಷಕವಾಗಿ ಇದ್ದುದರಿಂದ ಕಟ್ಟಡವನ್ನು ಹಾನಿಗಡೆವಲು ಕರಸೇವಕರಿಗೆ ಸಾಕಷ್ಟು ಅವಕಾಶ. ೧.೫೫ಕ್ಕೆ ಮೊದಲ ಗುಮ್ಮಟ ನೆಲಸಮ. ಇದರಿಂದಾಗಿ 3.30ಕ್ಕೆ ಅಯೋಧ್ಯೆಯಲ್ಲಿ ಕೋಮು ಗಲಭೆ ಆರಂಭ.
  • ಕರಸೇವಕರಿಂದ ಪತ್ರಕರ್ತರು ಮತ್ತು ಛಾಯಾಗ್ರಾಹಕರ ಮೇಲೆ ಹಲ್ಲೆ. ದೆಹಲಿಯಲ್ಲಿ ಸಂಜೆ ೬.೩೦ಕ್ಕೆ ಸಂಪುಟ ಸಭೆ. ೬.೪೫ಕ್ಕೆ ಅಂದಿನ ಮುಖ್ಯಮಂತ್ರಿ ಕಲ್ಯಾಣ್‌ಸಿಂಗ್ ಅವರಿಂದ ರಾಜೀನಾಮೆ ಪ್ರಕಟ. ೭.೩೦ಕ್ಕೆ ವಿವಾದಿತ ಸ್ಥಳದಲ್ಲಿ ತಾತ್ಕಾಲಿಕ ಮಂದಿರ ನಿರ್ಮಾಣ ಕಾರ್ಯ ಆರಂಭ. ೯.೧೦ಕ್ಕೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ

೨೪ ಸೆಪ್ಟಂಬರ್,೨೦೧೦: ವಿವಾದಿತ ಪ್ರಕರಣದ ತೀರ್ಪು ಘೋಷಿಸುವುದಾಗಿ ಅಲಹಾಬಾದ್ ಹೈ ಕೋರ್ಟ್ ಘೋಷಿಸಿತ್ತು. ತೀರ್ಪು ಹೊರಬೀಳುವ ಹಿನ್ನೆಲೆಯಲ್ಲಿ ದೇಶಾದ್ಯಂತ ಎಲ್ಲ ಮುಂ ಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಆದರೆ ತೀರ್ಪು ಹೊರಬೀಳಲಿರುವ ಒಂದು ದಿನಕ್ಕೆ ಮುಂಚೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತು. ರಮೇಶ್‌ಚಂದ್ರ ತ್ರಿಪಾಠಿ ಸಲ್ಲಿಸಿದ ಅರ್ಜಿಯ ಮೇರೆಗೆ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೆಪ್ಟಂಬರ್ ೨೮ ಕ್ಕೆ ನಿಗದಿ ಗೊಳಿಸಿತು. ಸೆಪ್ಟಂಬರ್ 28ರಂದು ತ್ರಿಪಾಠಿಯವರ ಅರ್ಜಿಯ ವಿಚಾರಣೆ ನಡೆದು, ಅರ್ಜಿ ತಿರಸ್ಕಾರಗೊಂಡಿತು. ಇದೀಗ ವಿವಾದಕ್ಕೆ ಸಂಬಂಧಿಸಿ ಅಲಹಾಬಾದ್ ಹೈಕೋರ್ಟ್ ತೀರ್ಪು ಗುರುವಾರ ಮಧ್ಯಾಹ್ನ ೩:೩೦ಕ್ಕೆ ಹೊರಬೀಳುವ ನಿರೀಕ್ಷೆಯಿದೆ.

ಪುರಾತತ್ವ ಶಾಸ್ತ್ರ

[ಬದಲಾಯಿಸಿ]

ಪುರಾತತ್ವ ಶಾಸ್ತ್ರ ಉತ್ಖನನಗೊಂಡ ಅವಶೇಷಗಳ ಅಧ್ಯಯನ ತಂಡವು ಸ್ಥಳದಲ್ಲಿ ನಡೆದ ಉತ್ಖನನದಲ್ಲಿ ದೊರೆತ ಪುರಾವೆಗಳು ರಾಮಮಂದಿರ ಇತ್ತು ಎನ್ನುವುದನ್ನು ಸೂಚಿಸುತ್ತವೆ ಎಂದು ವರದಿಗಳು ಹೇಳುತ್ತಾ ಬಂದಿವೆ. ಪ್ರಮುಖವಾಗಿ ಜೇಡಿ ಮಣ್ಣಿನಿಂದ ತಯಾರಿಸಲಾದ ಆಕೃತಿಗಳು, ಪ್ರಾಣಿ ಮತ್ತು ಮಾನವ ಉಪಯೋಗಿ ವಸ್ತುಗಳು, ಕಂಬದ ರಚನೆಗಳು, ಅಡಿಪಾಯ, ಗೋಡೆಗಳ ಸಂದುಗಳು, ಸಮಾಧಿಗಳು, ದೇವನಾಗರಿ ಲಿಪಿಯಲ್ಲಿರುವ ಶಿಲಾಶಾಸನಗಳು, ಛಬೂತರಗಳು ಉತ್ಖನನದ ವೇಳೆಯಲ್ಲಿ ಪತ್ತೆಯಾಗಿವೆ.


ಲಿಬರ್ಹಾನ್ ಆಯೋಗದ ವರದಿ ಉಲ್ಲೇಖಿಸಿದಂತೆ

[ಬದಲಾಯಿಸಿ]

[೨] ಪ್ರಕಟಿಸಿದ ದಿನಾಂಕ : ೨೦೦೯-೧೧-೨೫

  • ೧೫೨೮: ಮೊಘಲ್ ರಾಜವಂಶದ ಸಂಸ್ಥಾಪಕ ಬಾಬರ್‌ನಿಂದ ತನ್ನ ದಂಡನಾಯಕ ಮೀರ್ ಬಕಿಗೆ ಮಸೀದಿ ನಿರ್ಮಿಸಲು ಸೂಚನೆ. ಶ್ರೀರಾಮನ ಮಂದಿರವನ್ನು ಕೆಡವಿ ಅಲ್ಲಿ ಈ ಮಸೀದಿ ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ.
  • ೧೭೬೭: ಹಿಂದೂಗಳು ಪ್ರಾಂಗಣವನ್ನು ವಶಪಡಿಸಿಕೊಂಡು ರಾಮ ಜನ್ಮಭೂಮಿ(ರಾಮ ಚಬೂತ್ರಾ) ಮತ್ತು ಆರಾಧನೆ ಮಾಡುತ್ತಿದ್ದಾರೆ ಎಂದು ಆಸ್ಟ್ರಿಯಾದ ಪ್ರವಾಸಿ ಜೇಸಲ್ಟ್ ಹೇಳಿಕೆ. ಇದನ್ನು ಉಲ್ಲೇಖಿಸಿ ಬಿಜೆಪಿಯಿಂದ ಶ್ವೇತಪತ್ರ ಸಲ್ಲಿಕೆ.
  • ೧೯೩೪: ಕಟ್ಟಡವನ್ನು ಮರು ಸ್ವಾಧೀನಕ್ಕೆ ಕೆಲವು ಹಿಂದೂಗಳ ಯತ್ನ. ಅಲ್ಲಿಂದೀಚೆಗೆ ಅಲ್ಲಿ ಬೀಗಮುದ್ರೆ. ಅಂದು ಗುಮ್ಮಟ್ಟಕ್ಕೆ ಸ್ವಲ್ಪ ಧಕ್ಕೆ.
  • ೧೯೪೯: ಡಿಸೆಂಬರ್‌ನಲ್ಲಿ ಬಾಬ್ರಿ ಮಸೀದಿಯಲ್ಲಿ ತಂಗಿದ್ದ ಕೆಲವು ಪ್ರವಾಸಿಗರನ್ನು ಚುಡಾಯಿಸಿದ ಪ್ರಸಂಗ ನಡೆದ ಬಳಿಕ ಪೊಲೀಸ್ ಚೌಕಿ ಸ್ಥಾಪನೆ, ಸ್ಮಾರಕದ ಒಳಗೆ ವಿಗ್ರಹಗಳನ್ನು ಸ್ಥಾಪಿಸಲು ಯತ್ನಿಸಿದ ೬೪ ಜನರ ವಿರುದ್ಧ ಎಫ್‌ಐಆರ್ ದಾಖಲು.
  • ೧೯೬೧: ಸುನ್ನಿ ವಕ್ಫ್ ಮಂಡಳಿಯಿಂದ ವಿವಾದಾತ್ಮಕ ಕಟ್ಟಡದ ಸ್ವಾಧೀನ ಮತ್ತು ಸುತ್ತಮುತ್ತಲಿನ ಜಮೀನಿನ ಸ್ವಾಧೀನ ಕೋರಿ ಸಿವಿಲ್ ಕೋರ್ಟ್‌ನಲ್ಲಿ ದಾವೆ.
  • ೧೯೮೪: ರಾಮ ಜನ್ಮಭೂಮಿ ಚಳವಳಿ ಅಧಿಕೃತ ಆರಂಭ.
  • ೧೯೮೯: ರಾಮಮಂದಿರಕ್ಕಾಗಿ ಶಿಲಾನ್ಯಾಸ.
  • ೧೯೯೦: ಅಯೋಧ್ಯೆಯಲ್ಲಿ ೨೮ ಸಾವಿರ ಪಿಎಸಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅಲ್ಲಿ ೪೦ ಸಾವಿರ ಕರಸೇವಕರು ಜಮಾಯಿಸಿದ್ದರು. ಈ ಪೈಕಿ ಒಂದು ಸಾವಿರ ಮಂದಿಯಿಂದ ಒಳಾವರಣ ಪ್ರವೇಶ. ಪರಿಸ್ಥಿತಿ ನಿಯಂತ್ರಿಸಲು ಭದ್ರತಾ ಪಡೆಗಳಿಂದ ಗುಂಡು ಹಾರಾಟ. ಹೀಗಾಗಿ ಜನ್ಮಭೂಮಿ ಚಳವಳಿಯನ್ನು ೧೯೯೨ರ ಜುಲೈ ೯ಕ್ಕೆ ಮುಂದೂಡಲು ನಿರ್ಧಾರ.
  • ೧೯೯೧: ಅಕ್ಟೋಬರ್ ೨೧ರಂದು ಗುಮ್ಮಟವೇರಿದ ಕರಸೇವಕರು. ಅವರನ್ನು ತಕ್ಷಣ ಪತ್ತೆ ಹಚ್ಚಿ ಧ್ವಜ ಸಹಿತ ಅಲ್ಲಿಂದ ಕೆಳಗೆ ಇಳಿಸಲಾಯಿತು.
  • ೧೯೯೨: ಡಿಸೆಂಬರ ೨ ರಂದು ೬೦ ಸಾವಿರ ಕರಸೇವಕರು ಅಯೋಧ್ಯೆಯಲ್ಲಿ ೬೦ ಸಾವಿರ ಕರಸೇವಕರ ಜಮಾವಣೆ, ಅಲ್ಲಿನ ಮಜಾರ್‌ಗಳು ಮತ್ತು ಮಸೀದಿಗಳಿಗೆ ಕರಸೇವಕರಿಂದ ಹಾನಿ. ಆದರೂ ಜನರನ್ನು ತಡೆಯಲು ಆಡಳಿತ ಮುಂದಾಗಲಿಲ್ಲ. ಇನ್ನಷ್ಟು ಹೆಚ್ಚಿನ ಪಡೆ ರವಾನಿಸಲು ಜಿಲ್ಲಾಡಳಿತ ಕೋರಿದರೂ ರಾಜ್ಯ ಸರ್ಕಾರ ಅದನ್ನು ನಿರಾಕರಿಸಿತು.
  • ೧೯೯೨: ಡಿಸೆಂಬರ ೪ಕ್ಕೆ ಕರಸೇವಕರ ಸಂಖ್ಯೆ ೨ ಲಕ್ಷ ದಾಟಿತ್ತು. ಮಧ್ಯರಾತ್ರಿ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ ಅಯೋಧ್ಯೆ ತಲುಪಿದರು. ಜಿಲ್ಲೆಯ ಅಧಿಕಾರಿಗಳು ಅವರನ್ನು ಭೇಟಿ ಮಾಡಿದಾಗ, ಶಾಂತಿಯುತ ಕರಸೇವೆ ನಡೆಸುವ ಭರವಸೆಯನ್ನು ನಾಯಕರು ನೀಡಿದರು (ಆಗ ರಾಜ್ಯದ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರು ಡಿಸೆಂಬರ ೬ರಂದು ಗುಂಡು ಹಾರಿಸಬಾರದು ಎಂದು ಸೂಚನೆ ನೀಡಿದರು).
  • ೧೯೯೨: ಡಿಸೆಂಬರ ೬ರಂದು ಬೆಳಿಗ್ಗೆ ೧೦.೩೦ಕ್ಕೆ ಬಿಜೆಪಿ ಮತ್ತು ವಿಎಚ್‌ಪಿ ನಾಯಕರು ಪೂಜೆ ನಡೆಸಲು ಉದ್ದೇಶಿಸಿದ ವೇದಿಕೆಗೆ ಆಗಮಿಸಿದರು ಮತ್ತು ಸಾಂಕೇತಿಕ ಕರಸೇವೆ ನಡೆಸಿದರು. ೧೨.೧೫ಕ್ಕೆ ಕರಸೇವಕನೊಬ್ಬ ಗುಮ್ಮಟದ ಮೇಲ್ಭಾಗಕ್ಕೆ ಹತ್ತಿದ, ಆತನನ್ನು ಅನುಸರಿಸಿದ ಇತರರ ಕೈಯಲ್ಲಿ ಪಿಕ್ಕಾಸಿ, ಸುತ್ತಿಗೆ, ಕಬ್ಬಿಣದ ಸರಳುಗಳಿದ್ದವು.
  • ಕರಸೇವಕರು ಗರ್ಭಗೃಹಕ್ಕೆ ತೆರಳಿ ಅಲ್ಲಿನ ವಿಗ್ರಹ ಮತ್ತು ಕಾಣಿಕೆ ಡಬ್ಬವನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದುರು. ಭದ್ರತಾ ಪಡೆಗಳು ಮೂಕಪ್ರೇಕ್ಷಕವಾಗಿ ಇದ್ದುದರಿಂದ ಕಟ್ಟಡವನ್ನು ಹಾನಿಗಡೆವಲು ಕರಸೇವಕರಿಗೆ ಸಾಕಷ್ಟು ಅವಕಾಶ. ೧.೫೫ಕ್ಕೆ ಮೊದಲ ಗುಮ್ಮಟ ನೆಲಸಮ. ಇದರಿಂದಾಗಿ 3.30ಕ್ಕೆ ಅಯೋಧ್ಯೆಯಲ್ಲಿ ಕೋಮು ಗಲಭೆ ಆರಂಭ.
  • ಕರಸೇವಕರಿಂದ ಪತ್ರಕರ್ತರು ಮತ್ತು ಛಾಯಾಗ್ರಾಹಕರ ಮೇಲೆ ಹಲ್ಲೆ. ದೆಹಲಿಯಲ್ಲಿ ಸಂಜೆ ೬.೩೦ಕ್ಕೆ ಸಂಪುಟ ಸಭೆ. ೬.೪೫ಕ್ಕೆ ಅಂದಿನ ಮುಖ್ಯಮಂತ್ರಿ ಕಲ್ಯಾಣ್‌ಸಿಂಗ್ ಅವರಿಂದ ರಾಜೀನಾಮೆ ಪ್ರಕಟ. ೭.೩೦ಕ್ಕೆ ವಿವಾದಿತ ಸ್ಥಳದಲ್ಲಿ ತಾತ್ಕಾಲಿಕ ಮಂದಿರ ನಿರ್ಮಾಣ ಕಾರ್ಯ ಆರಂಭ. ೯.೧೦ಕ್ಕೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ

ಅಲಹಾಬಾದ್ ಹೈಕೋರ್ಟಿನ ಐತಿಹಾಸಿಕ ತೀರ್ಪು

[ಬದಲಾಯಿಸಿ]

೩೦.೦೯.೨೦೧೦ರಂದು ಲಖನೌ ಅಲಹಾಬಾದ್ ಹೈಕೋರ್ಟಿ ಐತಿಹಾಸಿಕ ತೀರ್ಪನ್ನುನೀಡಿದೆ, ಅತ್ಯಂತ ಕುತೂಹಲ ಮತ್ತು ಕಾತರದಿಂದ ನಿರೀಕ್ಷಿಸಲಾಗುತ್ತಿದ್ದ ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿವಾದ ಕುರಿತ ಅಲಹಾಬಾದ್ ಹೈಕೋರ್ಟಿನ ತೀರ್ಪು ಹೊರಬಿದ್ದಿದೆ. ವಿವಾದಿತ ೨.೭ ಎಕರೆ ಭೂಮಿಯನ್ನು ಯಾವುದೇ ಒಂದು ಪಂಗಡಕ್ಕೆ ನೀಡದೆ ಮೂರು ಹೋಳುಗಳನ್ನಾಗಿ ಹಂಚಿ ಸಾಮಾಜಿಕ ನ್ಯಾಯ ಮೆರೆದಿದೆ.

ಪ್ರಸ್ತುತ ರಾಮಲಲ್ಲಾ ಇರುವ ಸ್ಥಳ ರಾಮಮಂದಿರ ನಿರ್ಮಾಣಕ್ಕೆ ಬಿಡಬೇಕು ಮತ್ತು ಅದರ ಹೊರಗಿನ ಜಾಗ ಬಾಬ್ರಿ ಮಸೀದಿ ಕ್ರಿಯಾ ಸಮಿತಿಗೆ ಸೇರಬೇಕು ಮತ್ತು ಉಳಿದ ಮೂರನೇ ಒಂದು ಭಾಗವನ್ನು ನಿರ್ಮೋಹಿ ಅಖಾಡಕ್ಕೆ ನೀಡಬೇಕು ಎಂದು ಹೇಳಿದೆ. ನ್ಯಾಯಮೂರ್ತಿಗಳಾದ ಸಿಬಘತ್ ಉಲ್ಲಾ ಖಾನ್, ನ್ಯಾ. ಧರಂ ವೀರ್ ಶರ್ಮಾ ಮತ್ತು ನ್ಯಾ. ಸುಧೀರ್ ಅಗರವಾಲ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈ ಐತಿಹಾಸಿಕ ತೀರ್ಪನ್ನು ಲಖನೌ ಪೀಠದ ೨೧ನೇ ಕೋಣೆಯಿಂದ ನೀಡಿದೆ

ಅಲಹಾಬಾದ್ ಹೈ ಕೋರ್ಟ್ ನ ವೆಬ್ ತಾಣದಲ್ಲಿ ತೀರ್ಪಿನ ಸಂಪೂರ್ಣ ಪ್ರತಿ

[ಬದಲಾಯಿಸಿ]

ಮೊದಲಿಗೆ ವೆಬ್ ಸೈಟ್ ನಲ್ಲಿ ಮಸೀದಿ ಮಂದಿರ ತೀರ್ಪುತೀರ್ಪಿನ ಸಂಪೂರ್ಣ ಪ್ರತಿಯನ್ನು ಅಲಹಾಬಾದ್ ಹೈ ಕೋರ್ಟ್ ನ ವೆಬ್ ತಾಣದಲ್ಲಿ ಪ್ರಕಟಿಸಲಾಗುವುದು. ಅಲಹಾಬಾದ್ ಹೈ ಕೋರ್ಟ್ ನ ವೆಬ್ ತಾಣದಲ್ಲಿ ತೀರ್ಪಿನ ಸಂಪೂರ್ಣ ಪ್ರತಿ

ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಅಲಹಾಬಾದ್ ಹೈಕೋರ್ಟ್ ವೆಬ್‌ಸೈಟ್ ನೋಡಲು ಜನರು ಮುಗಿಬಿದ್ದಿದ್ದರಿಂದ ಗುರುವಾರ ಜಾಲತಾಣ ಕುಸಿತಗೊಂಡಿದೆ.

ಅಯೋಧ್ಯೆ ತೀರ್ಪಿಗಾಗಿ ಲಕ್ಷಾಂತರ ಮಂದಿ ಒಮ್ಮೆಲೆ ಅಲಹಾ ಬಾದ್ ವೆಬ್‌ಸೈಟ್ ನೋಡಲು ಮುಗಿಬಿದ್ದಿದ್ದರಿಂದ ಒತ್ತಡದಿಂದಾಗಿ ಜಾಲತಾಣವು ಕುಸಿತ ಗೊಂಡಿದೆ.

ಸಂಜೆ ೪ ಗಂಟೆಗೆ ತೀರ್ಪನ್ನು ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಕೆಲವು ಗಂಟೆಗಳಿಂದ ಜಾಲತಾಣ ಸಂಪೂರ್ಣವಾಗಿ ಕುಸಿತಗೊಂಡು ಅಂತರ್ಜಾಲಿಗರಲ್ಲಿ ನಿರಾಸೆ ಮೂಡಿಸಿದೆ.

ಬಾಬರಿ ಮಸೀದಿ ಧ್ವಂಸ ಪ್ರಕರಣ

[ಬದಲಾಯಿಸಿ]
  • 20-4-2017
  • ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು 1990ರ ದಶಕಗಳಲ್ಲಿ ದೇಶದಾ­ದ್ಯಂತ ಬಡಿದೆಬ್ಬಿಸಲಾದ ಹಿಂದುತ್ವದ ಅಲೆಯು ಬಾಬರಿ ಮಸೀದಿ ಧ್ವಂಸಕ್ಕೆ ದಾರಿ ಮಾಡಿತ್ತು. ಹಿಂದೂ ರಾಷ್ಟ್ರೀಯತೆ ಸ್ಥಾಪನೆಯ ಪ್ರಬಲ ಪ್ರತಿಪಾದನೆಯನ್ನು ದೇಶದಾದ್ಯಂತ ಮತ್ತೊಮ್ಮೆ ಬಡಿದೆಬ್ಬಿಸಿದ ಬೆಳವಣಿಗೆ ಬಾಬರಿ ಮಸೀದಿ ಧ್ವಂಸ. ಸಂಘ ಪರಿವಾರ ಬಣ್ಣಿಸಿದ ಈ ‘ಹಿಂದೂ ಜಾಗೃತಿ ಯಜ್ಞ’ದ ಪ್ರಮುಖ ಋತ್ವಿಕ ಲಾಲ್ ಕೃಷ್ಣ ಅಡ್ವಾಣಿಯವರೇ ಆಗಿದ್ದರು. ಪೌರಾಣಿಕ ಯುದ್ಧಗಳಲ್ಲಿ ಬಳಕೆಯಾಗುವುದೆಂದು ಬಣ್ಣಿಸಲಾಗುವ ರಥವೊಂದನ್ನು ಏರಿ ದೇಶದಾದ್ಯಂತ ಯಾತ್ರೆ ನಡೆಸಿದ್ದರು ಅಡ್ವಾಣಿ. ಈ ದಿನಗಳಲ್ಲಿ ತಮಗೆ ಅಂಟಿಕೊಂಡಿದ್ದ ಕಟ್ಟರ್ ಹಿಂದೂವಾದಿಯ ವರ್ಚಸ್ಸನ್ನು ಕಳೆದುಕೊಳ್ಳುವ ಪ್ರಯತ್ನದಲ್ಲಿ ಅವರು ಯಶಸ್ಸು ಕಾಣಲಿಲ್ಲ. ಪಾಕಿಸ್ತಾನದ ಸ್ಥಾಪಕ ಜಿನ್ನಾ ಒಬ್ಬ ಜಾತ್ಯತೀತ ವ್ಯಕ್ತಿಯಾಗಿದ್ದರು ಎಂಬ ಅವರ ಹೇಳಿಕೆ ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಿ ಅವರ ರಾಜಕಾರಣಕ್ಕೆ ತಿರುಗುಬಾಣವಾಗಿ ಪರಿಣಮಿಸಿತ್ತು. ಒಡಿಶಾದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮುರಳಿ ಮನೋಹರ ಜೋಷಿಯವರನ್ನು ವೇದಿಕೆಗೆ ಕರೆದಿದ್ದರು ಮೋದಿಯವರು. ಅವರ ಈ ಚರ್ಯೆ ಜೋಷಿಯವರಿಗೆ ರಾಷ್ಟ್ರಪತಿ ಹುದ್ದೆ ಸಿಕ್ಕೀತು ಎಂಬ ಅಸ್ಪಷ್ಟ ನಿರೀಕ್ಷೆಗಳನ್ನು ಹುಟ್ಟಿಹಾಕಿತ್ತು.
  • ಎಂಬತ್ತೊಂಬತ್ತು ವರ್ಷ ವಯಸ್ಸಿನ ಎಲ್.ಕೆ.ಅಡ್ವಾಣಿ ಮತ್ತು ಎಂಬತ್ತೆರಡರ ಡಾ. ಮುರಳಿ ಮನೋಹರ ಜೋಷಿ ಇಬ್ಬರೂ ರಾಷ್ಟ್ರಪತಿ ಹುದ್ದೆಯ ಮೇಲೆ ಕಣ್ಣಿರಿಸಿದ್ದವರು. ಹೊಸ ರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆ ಕೆಲವೇ ತಿಂಗಳುಗಳಲ್ಲಿ ಆರಂಭ ಆಗಲಿರುವ ಈ ಹಂತದಲ್ಲಿ ಇಬ್ಬರೂ ನಾಯಕರ ನಿರೀಕ್ಷೆಯ ಮೇಲೆ ಸುಪ್ರೀಂ ಕೋರ್ಟ್ ಆದೇಶ ತಣ್ಣೀರು ಸುರಿದಿದೆ.

ಸುಪ್ರೀಂ ಕೋರ್ಟ್ ಆದೇಶ

[ಬದಲಾಯಿಸಿ]
  • ೧೯-೪-೨೦೧೭
  • ಸುಪ್ರೀಂ ಕೋರ್ಟ್ ಬುಧವಾರ ನೀಡಿರುವ ಆದೇಶ, ಈ ಇಬ್ಬರೂ ಹಿರಿಯರ ನಿರೀಕ್ಷೆಯ ಮೇಲೆ ಚಪ್ಪಡಿ ಎಳೆದಿದೆ. ಚುನಾವಣೆಗಳಲ್ಲಿ ಈಗಲೂ ಕೋಮು ಧ್ರುವೀಕರಣವನ್ನು ಕೂಡ ನೆಚ್ಚುವ ಬಿಜೆಪಿಯು ಇಂದಿನ ಬೆಳವಣಿಗೆಯನ್ನು 2019ರ ಲೋಕಸಭಾ ಚುನಾವಣೆಗಳ ಹೊತ್ತಿನಲ್ಲಿ ಬಳಕೆ ಮಾಡಿಕೊಳ್ಳುವ ಸನ್ನಾಹ ಹೊಂದಿದೆ ಎಂದು ರಾಜಕೀಯ ಪಂಡಿತರ ಒಂದು ವರ್ಗ ವ್ಯಾಖ್ಯಾನಿಸಿದೆ. ಹದಿಮೂರು ನಾಯಕರ ಮೇಲಿನ ಆರೋಪಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಎರಡು ವರ್ಷಗಳ ಗಡುವು ವಿಧಿಸಿದೆ. ಆನಂತರ ಬಾಬರಿ ಮಸೀದಿ- ರಾಮಮಂದಿರ ವಿವಾದ ಮತ್ತೆ ಭುಗಿಲೆದ್ದರೆ ಅದರ ಲಾಭ ಬಿಜೆಪಿಗೇ ಎಂಬ ಲೆಕ್ಕಾಚಾರವನ್ನು ಈ ಪಂಡಿತರು ಗುರುತಿಸುತ್ತಾರೆ.

[]

ರಾಮಮಂದಿರ ರಾಜಕಾರಣ

[ಬದಲಾಯಿಸಿ]
  • ಆದರೆ ರಾಮಮಂದಿರ ನಿರ್ಮಾಣದ ರಾಜಕಾರಣ ತನ್ನ ರಾಜಕೀಯ ಉಪಯುಕ್ತತೆಯನ್ನು ಕಳೆದುಕೊಂಡಿದೆ, ಅದು ಅವಧಿ ತೀರಿರುವ ಹಳೆಯ ಸರಕು ಎಂಬುದು ಹಲವು ರೂಪಗಳಲ್ಲಿ ಹಲವು ರಂಗುಗಳಲ್ಲಿ ಈಗಾಗಲೇ ವ್ಯಕ್ತವಾಗಿರುವ ಭಾವನೆ. ಅಶೋಕ ಚಟರ್ಜಿ ಕರಸೇವೆಯಲ್ಲಿ ಪಾಲ್ಗೊಂಡ ಆಯೋಧ್ಯೆಯ ಒಬ್ಬ ವ್ಯಾಪಾರಿ. ಸಂಘ ಪರಿವಾರದ ಮುಖವಾಣಿ ‘ಪಾಂಚಜನ್ಯ’ದ ಬಾತ್ಮೀದಾರ. ಈತನ ಪ್ರಕಾರ, ರಾಮಮಂದಿರ ಆಂದೋಲನ ‘ಹಿಂದುತ್ವ ಯೋಜನೆ’ಯ ತನ್ನ ಉದ್ದೇಶವನ್ನು ಈಗಾಗಲೇ ಸಾಧಿಸಿಬಿಟ್ಟಿದೆ. ಈ ಸಾಧನೆಯ ಫಲವೇ 282 ಸೀಟು ಗೆದ್ದು ಪ್ರಧಾನಿಯಾಗಿ ಮೋದಿಯವರ ಅಧಿಕಾರಗ್ರಹಣ.[]

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯ ವಿವಾದ: ಅಂತಿಮತೀರ್ಪು

[ಬದಲಾಯಿಸಿ]
  • 134 ವರ್ಷಗಳಲ್ಲಿ ನಾನಾ ಹಂತದ ನ್ಯಾಯಾಲಯಗಳಳ್ಲಿ ವಿಚಾರಣೆಗೆ ಗುರಿಯಾಗಿದ್ದ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂವಿವಾದದ ಕುರಿತು ಐವರು ಜಸ್ಟೀಸ್ ಗಳು ತೀರ್ಪನ್ನು ದಿ. 9, ನವೆಂಬರ್ 2019 ಘೋಷಿಸದರು. ರಾಮಜನ್ಮಭೂಮಿ, ಬಾಬ್ರಿ ಮಸೀದಿ ಭೂ ವಿವಾದದ ಕುರಿತಂತೆ ಸಿಜೆಐ ರಂಜನ್ ಗೋಗೊಯಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ತೀರ್ಪಿನ್ನು ನೀಡಿತು.
  • ಅದರಲ್ಲಿ ನಿರ್ಮೋಹಿ ಅಖಾಡದ ಅರ್ಜಿ ವಜಾ. ಶಿಯಾ ವಕ್ಫ್ ಬೋರ್ಡ್ ಅರ್ಜಿ ಕೂಡಾ ವಜಾ ಮಾಡಿತು. ರಾಮಲಲ್ಲಾ ಸಂಸ್ಥೆ ಮುಖ್ಯ ಅರ್ಜಿದಾರ ಎಂದು ಮಾನ್ಯತೆ ನೀಡಿತು. ನಿರ್ಮೋಹಿ ಅಖಾಡಕ್ಕೆ ಅಲ್ಲಿ ಪೂಜಾ ಅಧಿಕಾರವಿಲ್ಲ ಎಂದು ಹೇಳಿತು. ಕಂದಾಯ ದಾಖಲೆ ಪ್ರಕಾರ ಈ ವಿವಾದಿತ ಭೂಮಿ ಸರ್ಕಾರಿ ಜಾಗವಾಗಿತ್ತು. ಉತ್ಖನನದಲ್ಲಿ ಕಂಡಂತೆ ಮಸೀದಿ ಅಡಿಪಾಯದ ಕೆಳಗೆ ವಿಶಾಲ ರಚನೆ ಇತ್ತು. ಆದರೆ ಇದು ಇಸ್ಲಾಂ ರಚನೆಯಾಗಿರಲಿಲ್ಲ. ಆದರೆ ಮಂದಿರ ಒಡೆದು ಮಸೀದಿ ಕಟ್ಟಲಾಗಿದೆ ಎನ್ನುವುದಕ್ಕೆ ಆಧಾರ ಖಚಿತತೆ ಇಲ್ಲ. ಉತ್ಖನನದ ವೇಳೆ ಸಿಕ್ಕ ಕುರುಹುಗಳು ಇಸ್ಲಾಂ ಧಾರ್ಮಿಕ ಅಥವಾ ಶಿಲ್ಪ ರಚನೆಯಾಗಿರಲಿಲ್ಲ. ರಾಮನು ಅಯೋಧ್ಯೆಯಲ್ಲೇ ಹುಟ್ಟಿದ ಎಂಬ ನಂಬುಗೆಯ ಬಗ್ಗೆ ವಿವಾದವಿಲ್ಲ. ಆದರೆ ಕೇವಲ ನಂಬಿಕೆಯಿಂದ ಹಕ್ಕನ್ನು ಸಾಬೀತು ಮಾಡಲು ಸಾಧ್ಯವಿಲ್ಲ. ಕಾನೂನಿನ ಆಧಾರದ ಮೇಲೆ ಭೂಮಿಯ ಹಕ್ಕನ್ನು ನಿರ್ಧರಿಸಲಾಗುತ್ತದೆ. ಮಸೀದಿ ಕೆಳಗೆ ಇದ್ದ ರಚನೆ ಹಿಂದು ರಚನೆಯೇ ಸರಿ ಎಂದು ನಂಬಲು ಆಧಾರವಿಲ್ಲ.
  • ವಿವಾದಿತ ಜಾಗದಲ್ಲಿ ಹಿಂದೂ-ಮುಸ್ಲಿಂ ಇಬ್ಬರೂ ಪೂಜೆ ಸಲ್ಲಿಸುತ್ತಿದ್ದರು. ಮಸೀದಿಯ ಮುಖ್ಯ ಗುಂಬಝ್ ಕೆಳ ಭಾಗದಲ್ಲಿ ಗರ್ಭ ಗುಡಿ ಇತ್ತೆಂದು ನಂಬಲಾಗುತ್ತಿದೆ. ಮುಸ್ಲಿಮರಿಗೆ ಒಳಭಾಗದಲ್ಲಿ ಪ್ರಾರ್ಥನೆಗೆ ಅವಕಾಶ ಇರದಿದ್ದರು, ಪ್ರಾರ್ಥನೆ ಮಾಡುತ್ತಿದ್ದರು. ಮಸೀದಿಯ ಒಳಭಾಗದಲ್ಲಿಯೂ ವಿವಾದ ಇದೆ. ಆದರೆ ಮಸೀದಿಗೆ ಹಾನಿ ಮಾಡಿದ್ದು ಕಾನೂನಿನ ಉಲ್ಲಂಘನೆ. ವಿವಾದಿತ ಸ್ಥಳವನ್ನು ಮೂರು ವಿಭಾಗ ಮಾಡಿರುವುದು ಸರಿ ಎಂದು ಯಾರೂ ಒಪ್ಪುತ್ತಿಲ್ಲ.[]

ಅಯೋಧ್ಯೆ ತೀರ್ಪಿನ ಮುಖ್ಯಾಂಶಗಳು

[ಬದಲಾಯಿಸಿ]
  • ರಾಮಮಂದಿರ ನಿರ್ಮಾಣಕ್ಕೆ ಟ್ರಸ್ಟ್‌ ರಚಿಸಲು ಮತ್ತು ವಿವಾದಿತಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮತ್ತು ಮಸೀದಿಗೆ ಪರ್ಯಾಯ ಭೂಮಿ ನೀಡಲು ಸರ್ಕಾರಕ್ಕೆ 3–4 ತಿಂಗಳ ಗಡುವನ್ನು ಸುಪ್ರೀಂ ಕೋರ್ಟ ವಿಧಿಸಿದೆ. ರಾಮಮಂದಿರ ನಿರ್ಮಾಣ ಹೊಣೆಯನ್ನು ಸರ್ಕಾರಕ್ಕೂ, ಅದ ನಿರ್ವಹಣೆ ಹೊಣೆಯನ್ನು ಟ್ರಸ್ಟ್‌ಗೂ ನೀಡುವಂತೆ ಸರ್ಕಾರಕ್ಕೆ ಆದೇಶ ನೀಡಿದೆ. [][]

ಭೂಮಿ ಪೂಜೆ

[ಬದಲಾಯಿಸಿ]

ಆಗಸ್ಟ್ ೦೫, ೨೦೨೦ ರಂದು ಮಧ್ಯಾಹ್ನ ೧೨:೪೪ ಕ್ಕೆ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ಶ್ರೀರಾಮ ದೇವಸ್ಥಾನದ ಕಟ್ಟಡವನ್ನು ಕಟ್ಟು ಕಾರ್ಯಕ್ಕೆ ಭೂಮಿ ಪೂಜೆ ಮಾಡಿದರು.[]

ಹೊರಗಿನ ಕೊಂಡಿ

[ಬದಲಾಯಿಸಿ]


ಅಯೋಧ್ಯೆ ರಾಮ ಮಂದಿರ

[ಬದಲಾಯಿಸಿ]

ಇದು ಒಂದು ಅಧ್ಬುತ ದೇವಾಲಯ.೦೬-೦೮-೨೦೧೮ ರಂದು ದೇವಾಲಯದ ಶಿಲಾನ್ಯಾಸವು ನೆರವೇರಿತು

ಉಲ್ಲೇಖಗಳು

[ಬದಲಾಯಿಸಿ]
  1. "Vistara News". Vistara News. Retrieved 11 January 2024.
  2. [೧]
  3. ಅಡ್ವಾಣಿ, ಜೋಷಿ ಆಸೆಗೆ ತಣ್ಣೀರು ಸುರಿದ ಆದೇಶ;ಡಿ.ಉಮಾಪತಿ;20 Apr, 2017
  4. 134 ವರ್ಷಗಳ ಅಯೋಧ್ಯೆ ಭೂವಿವಾದದ ಐತಿಹಾಸಿಕ ತೀರ್ಪಿನ ಹೈಲೈಟ್ಸ್; Nov 9, 2019
  5. ಅಯೋಧ್ಯೆ ತೀರ್ಪಿನ ಮುಖ್ಯಾಂಶಗಳು09 ನವೆಂಬರ್ 2019
  6. ಅಯೋಧ್ಯೆ ತೀರ್ಪು ಬರೆದ ಐವರು ನ್ಯಾಯಮೂರ್ತಿಗಳು ಇವರುd: 09 ನವೆಂಬರ್ 2019
  7. ಪ್ರಜಾವಾಣಿ ವರದಿ, ಆಗಸ್ಟ್ ೫, ೨೦೨೦