ಕಿ. ರಂ. ನಾಗರಾಜ್
ಕಿತ್ತಾನೆ ರಂಗಣ್ಣ ನಾಗರಾಜ್ | |
---|---|
ಚಿತ್ರ:Krnagaraj.jpg | |
ಜನನ | ಡಿಸೆಂಬರ್ ೫, ೧೯೪೩ ಕಿತ್ತಾನೆ , ಹಾಸನ ಜಿಲ್ಲೆ |
ಮರಣ | ಆಗಸ್ಟ್ ೭ , ೨೦೧೦ ಬನಶಂಕರಿ, ಬೆಂಗಳೂರು |
ವೃತ್ತಿ | ಕವಿ, ಲೇಖಕ, ಪ್ರಾಧ್ಯಾಪಕ |
ರಾಷ್ಟ್ರೀಯತೆ | ಭಾರತೀಯ |
ಕಾಲ | 20ನೆಯ ಶತಮಾನ |
ಪ್ರಕಾರ/ಶೈಲಿ | ವಿಮರ್ಶೆ,ನಾಟಕ, ಸಂಪಾದನೆ |
ಕಿತ್ತಾನೆ ರಂಗಣ್ಣ ನಾಗರಾಜ್ ಕನ್ನಡ ಸಾರಸ್ವತ ಲೋಕದ ಹಿರಿಯ ವಿಮರ್ಶಕ, ಚಿಂತಕ. ಕಿರಂ ಎಂದೇ ಖ್ಯಾತರು. ಕಿ. ರಂ. ನಾಗರಾಜ್ ಸಾಕಷ್ಟು ಶಿಷ್ಯವರ್ಗವನ್ನು ಹೊಂದಿದ್ದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ . ಹಲವಾರು ಪಠ್ಯಪುಸ್ತಕಗಳ ಸಂಪಾದನೆ, ನೂರಕ್ಕೂ ಹೆಚ್ಚು ಲೇಖನಗಳು ಹಾಗೂ ಮುನ್ನಡಿಗಳ ಪ್ರಕಟಣೆ ನಾಡಿನಾದ್ಯಂತ ಸಾವಿರಾರು ಉಪನ್ಯಾಸಗಳು , ಹತ್ತಾರು ಸಾಹಿತ್ಯ ಶಿಬಿರಗಳ ಸಂಯೋಜನೆ , ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಗಳ ಸದಸ್ಯತ್ವ. [೧]
ಕಿ. ರಂ. ಬರೆದಿದ್ದರೆ ಹಲವು ಸಂಪುಟಗಳೇ ಆಗಿರುತಿದ್ದವು . ಆದರೆ ಬರೆದದ್ದು ಕಡಿಮೆ . ಉಪನ್ಯಾಸಗಳಲ್ಲೇ ತಾವು ಹೇಳಬಯಸಿದ್ದನ್ನು ಹೇಳುತ್ತಾ ಹೋದರು . ಕಾವ್ಯ ಅವರ ಆಸಕ್ತಿಯಷ್ಟೇ ಅಲ್ಲದೆ ಬದುಕನ್ನೂ ಕಾವ್ಯವನ್ನು ಒಂದೇ ಎಂದು ಕಂಡವರು . ನಾಡಿನ ಹಲವು ಬಗೆಯ ಚಳುವಳಿಗಳ ಸಂಗಾತಿ ಕೂಡ ಆದರು. [೨]
ಜನನ
[ಬದಲಾಯಿಸಿ]ಬಾಲ್ಯ
[ಬದಲಾಯಿಸಿ]'ಕಿ.ರಂ.ನಾಗರಾಜ್,' ಹಾಸನ ಜಿಲ್ಲೆಯ ’ಕಿತ್ತಾನೆ’ಯಲ್ಲಿ ೧೯೪೩, ಡಿಸೆಂಬರ್, ೫ ರಂದು, ಜನಿಸಿದರು.
ಶಿಕ್ಷಣ
[ಬದಲಾಯಿಸಿ]'ಬಿ.ಎ.ಪದವಿ'ಯನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಡೆದರು. ಮುಂದಿನ 'ಎಂ.ಎ ಸ್ನಾತಕೋತ್ತರ ಪದವಿ'ಯನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಗಳಿಸಿದರು.[೩]
ವೃತ್ತಿಜೀವನ
[ಬದಲಾಯಿಸಿ]ಬೆಂಗಳೂರು ನ್ಯಾಷನಲ್ ಕಾಲೇಜಿನಲ್ಲಿ ಕೆಲ ಕಾಲ ಕನ್ನಡ ಅಧ್ಯಾಪಕರಾಗಿ ಸೇವೆ ಮೂರು ದಶಕಗಳ ಕಾಲ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕನ್ನಡ ಪ್ರಾಧಾಪಕರಾಗಿ ಸೇವೆ ಎರಡು ವರ್ಷ ಹ೦ಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧಾಪಕರಾಗಿ ಸೇವೆ ಬೆಂಗಳೂರಿನಲ್ಲಿ ಕನ್ನಡ ವಿಶ್ವವಿದ್ಯಾಲಯದ ಬೆಂಗಳೂರಿನಲ್ಲಿ ಕನ್ನಡ ವಿಶ್ವವಿದ್ಯಾನಿಲಯದ ವತಿಯಿಂದ ಎಂ. ಫಿಲ್ , ಪಿ ಎಚ್ ಡಿ ಪದವಿಗಾಗಿ ಸಂಶೋಧನಾ ಅವಕಾಶ ಕಲ್ಪಿಸುವ ಕಾವ್ಯಮಂಡಲ ಸಂಸ್ಥೆಯ ನಿರ್ದೇಶಕ ಹುದ್ದೆ ನ್ಯಾಷನಲ್ ಕಾಲೇಜು ಹಾಗೂ ಜೈನ್ ವಿಶ್ವವಿದ್ಯಾಲಯಗಳ ಕನ್ನಡ ಸಾತಕೋತ್ತರ ಕೇಂದ್ರಗಳ ಸಂದರ್ಶಕ ಪ್ರಾಧಾಪಕ ಹುದ್ದೆ . ಹಲವು ವಿಶ್ವವಿದ್ಯಾಲಯಗಳ ಸಾತಕೋತ್ತರ ಹಾಗೂ ಸ್ನಾತಕ ಪದವಿಗಳ ಪಠ್ಯಕ್ತಮ ರಚನೆಯಲ್ಲಿ ಭಾಗಿ .
ವೈವಾಹಿಕ ಜೀವನ
[ಬದಲಾಯಿಸಿ]ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಮೂವರು ಹೆಣ್ಣು ಮಕ್ಕಳು. ನಿಧಾನವಾಗುವ ಹೊತ್ತಿಗೆ ಹೆಣ್ಣು ಮಕ್ಕಳ ಪೈಕಿ ಚಂದನಾ ಅವರೊಂದಿಗೆ ವಾಸವಾಗಿದ್ದರು.
ಕೃತಿಗಳು
[ಬದಲಾಯಿಸಿ]ನಾಟಕಗಳು
[ಬದಲಾಯಿಸಿ]- ನೀಗಿಕೊಂಡ ಸಂಸ.
- ಕಾಲಜ್ಞಾನಿ ಕನಕ.
ವಿಮರ್ಶೆ
[ಬದಲಾಯಿಸಿ]- ಮತ್ತೆ ಮತ್ತೆ ಬೇಂದ್ರೆ
ಸಂಪಾದಿತ ಕೃತಿಗಳು
[ಬದಲಾಯಿಸಿ]ವಚನಕಮ್ಮಟ, ಆಪತ್ಕಾಲೀನ ಕವಿತೆಗಳು, ಕುವೆಂಪು ನುಡಿಚಿತ್ರ ,ಬಹುರೂಪಿ
ಪ್ರಶಸ್ತಿ ಪುರಸ್ಕಾರಗಳು
[ಬದಲಾಯಿಸಿ]- ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
- ಎಸ್. ವಿ. ಪರಮೇಶ್ವರಭಟ್ಟ ಪ್ರಶಸ್ತಿ
- ಡಾ.ಜಿ.ಎಸ್. ಶಿವರುದ್ರಪ್ಪ ಪ್ರಶಸ್ತಿ
- ಡಾ.ಎಲ್.ಬಸವರಾಜು ಪ್ರಶಸ್ತಿ
- ಕರ್ನಾಟಕ ಅಕಾಡೆಮಿ ಫೆಲೋಶಿಪ್
- ಕನ್ನಡ ಪುಸ್ತಕ ಪ್ರಾಧಿಕಾರದ ಜಿ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ [೪]
- ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ
- ಮಾನು ಪ್ರಶಸ್ತಿ
- ಕೆಂಪೇಗೌಡ ಪ್ರಶಸ್ತಿ
- ೨೦೦೭ರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
ಮರಣ
[ಬದಲಾಯಿಸಿ]ಸನ್, ೨೦೧೦ ರ ಆಗಸ್ಟ್, ೭ ನೇ ತಾರೀಖು, ಶನಿವಾರ ರಾತ್ರಿ, ೬೬ ವರ್ಷ ವಯಸ್ಸಿನ 'ಕಿ. ರಂ. ನಾಗರಾಜ್,' ರವರು ಹೃದಯಾಘಾತದಿಂದ ಮರಣಿಸಿದರು.ಸಂಜೆ ಸುಚಿತ್ರಾ ಫಿಲಂ ಸೊಸೈಟಿ ಸಭಾಂಗಣದಲ್ಲಿ ಬೇಂದ್ರೆ ಕಾವ್ಯದ ಬಗ್ಗೆ ಸುಮಾರು ಎರಡು ಗಂಟೆ ಕಾಲ ಉಪನ್ಯಾಸ ನೀಡಿದ ನಂತರ ನಿವಾಸಕ್ಕೆ ತೆರಳಿದವರೇ ಎದೆ ನೋವಿಗೆ ಒಳಗಾದರು. ತಕ್ಷಣ ಆಸ್ಪತ್ರೆಗೆ ಅವರನ್ನು ಸೇರಿಸಲಾಯಿತಾದರೂ, ಚಿಕಿತ್ಸೆ ಹೆಚ್ಚು ಫಲಕಾರಿಯಾಗದೆ, ಕೊನೆಯುಸಿರೆಳೆದರು.