ವಿಷಯಕ್ಕೆ ಹೋಗು

ಎಚ್ಎಲ್7

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೆಲ್ತ್ ಲೆವೆಲ್ ಸೆವೆನ್‌  (ಎಚ್ಎಲ್7 ), ಒಂದು ಸಂಪೂರ್ಣ ಸ್ವಯಂಸೇವಕ, ಲಾಭ ರಹಿತವಾದ ಸಂಸ್ಥೆಯಾಗಿದ್ದು, ಅಂತಾರಾಷ್ಟ್ರೀಯ ಆರೋಗ್ಯಸೇವೆಯ ಗುಣಮಟ್ಟವನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.[]   "ಎಚ್ಎಲ್7"ನ್ನು ಇದೇ ಸಂಸ್ಥೆಯಿಂದ ತಯಾರಿಸಲ್ಪಟ್ಟ ಕೆಲವು ವಿಶೇಷ ಗುಣಮಟ್ಟಕ್ಕಾಗಿ ಪ್ರಸ್ತಾಪಿಸಲಾಗುತ್ತದೆ (ಉದಾ. ಎಚ್ಎಲ್7 ವಿ2.x., ವಿ3.0, ಎಚ್ಎಲ್7 ಆರ್ಐಎಂ).[ಸೂಕ್ತ ಉಲ್ಲೇಖನ ಬೇಕು]

ಎಚ್ಎಲ್7 ಮತ್ತು ಅದರ ಸದಸ್ಯರು ಆರೋಗ್ಯ ಮಾಹಿತಿಯ ವಿನಿಮಯ, ಐಕ್ಯತೆ, ಹಂಚುವಿಕೆ ಮತ್ತು ಮರಳಿ ಪಡೆಯಲು ಒಂದು ಚೌಕಟ್ಟನ್ನು (ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದ) ನೀಡುತ್ತಾರೆ. v2.x ಪ್ರಕಾರದ ಪ್ರಮಾಣವು ಚಿಕಿತ್ಸಕ ಕಾರ್ಯ ಮತ್ತ್ತು ನಿರ್ವಹಣೆ, ಆರೋಗ್ಯ ಸೇವೆಗಳನ್ನು ನೀಡುತ್ತಿದ್ದು, ಜಾಗತೀಕವಾಗಿ ಅದನ್ನು ಅತ್ಯಂತ ಹೆಚ್ಚಾಗಿ ಬಳಸಿಕೊಳ್ಳಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಸಂಘಟನೆ

[ಬದಲಾಯಿಸಿ]
ಎಚ್ಎಲ್7 ಆರೋಗ್ಯ ಸೇವೆಯ ವಿಷಯದ ದಕ್ಷ ವ್ಯಕ್ತಿಗಳ ಮತ್ತು ಮಾಹಿತಿ ವಿಜ್ಞಾನಿಗಳು ವಿದ್ಯುತ್ ಆರೋಗ್ಯ ಸೇವೆ ಮಾಹಿತಿಯ ಅದಲು ಬದಲಾವಣೆ, ನಿರ್ವಹಣೆ ಮತ್ತು ಐಕ್ಯತೆಗಾಗಿ ಸಹಕಾರ ಹೊಂದಿದ ಒಂದು ಅಂತಾರಾಷ್ಟ್ರೀಯ ವರ್ಗವಾಗಿದೆ.[] 
ಕೆಲವು ಗುಣಮಟ್ಟವು ಆರೋಗ್ಯ ಸೇವೆ ಸಂಸ್ಥೆಯ ಒಳಗೆ ಹಾಗೂ ಹೊರಗೆ ಆರೋಗ್ಯ ಸೇವೆ ಪಡೆಯುವವರಿಗೆ ಪರಿಣಾಮ ಹಾಗೂ ದಕ್ಷತೆ ಹೆಚ್ಚಳಕ್ಕೆ ಎಚ್ಎಲ್7 ಪ್ರೋತ್ಸಾಹಿಸುತ್ತದೆ.[ಸೂಕ್ತ ಉಲ್ಲೇಖನ ಬೇಕು]
ಎಚ್ಎಲ್7 ವರ್ಗವು ಜಾಗತಿಕ ಸಂಸ್ಥೆಯ ರೀತಿಯಲ್ಲಿ ಸಂಘಟಿಸಲ್ಪಟ್ಟಿದೆ. (ಹೆಲ್ತ್ ಲೆವೆಲ್ ಸೆವೆನ್, ಇಂಕ್.) ಮತ್ತು ವಿಶೇಷವಾಗಿ ದೇಶವನ್ನು ದತ್ತು ಸ್ವೀಕರಿಸುವ ಸಂಘಟನೆಗಳು: 

ಎಚ್ಎಲ್7 --- ಇದರ ಸಂಘಟನಾ ವಿಧಾನ ಈ ಕೆಳಗಿನಂತಿದೆ:[ಸೂಕ್ತ ಉಲ್ಲೇಖನ ಬೇಕು]

  • ಸಂಘಟನೆಯು 10 ಚುನಾಯಿಸಲ್ಪಟ್ಟ ಸ್ಥಾನಗಳು ಹಾಗೂ 3 ನೇಮಿಸಲ್ಪಟ್ಟ ಸ್ಥಾನಗಳ ನಿರ್ದೇಶಕರ ಮಂಡಳಿಯಿಂದ ನಿಯಂತ್ರಿಸಲ್ಪಡುತ್ತದೆ.
  • ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಪ್ರಸ್ತುತ ಚಾರ್ಲ್ಸ್ ಜಾಫ್ಫೆ, ಎಂಡಿ, ಪಿಎಚ್ ಡಿ) ಪದನಿಮಿತ್ತ ಸದಸ್ಯನಂತೆ ಸೇವೆ ಸಲ್ಲಿಸುತ್ತಾನೆ ಹಾಗೂ ನಿರ್ದೇಶಕರ ಮಂಡಳಿಗೆ ವರದಿ ಸಲ್ಲಿಸುತ್ತಾನೆ. ಮುಖ್ಯ ತಾಂತ್ರಿಕ ಅಧಿಕಾರಿ (ಪ್ರಸ್ತುತ ಜಾನ್ ಕ್ವಿನ್) ಮತ್ತು ಮುಖ್ಯ ಕಾರ್ಯಕಾರಿ ಅಧಿಕಾರಿ (ಪ್ರಸ್ತುತ ಮಾರ್ಕ್ ಮಾಕ್ ಡೊಗಾಲ್) ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ವರದಿ ಸಲ್ಲಿಸುತ್ತಾನೆ ಮತ್ತು ನಿರ್ದೇಶಕ ಮಂಡಳಿಯ ಮಾಜಿ ಪದನಿಮಿತ್ತ ಸದಸ್ಯನಂತೆಯೂ ಸೇವೆ ಸಲ್ಲಿಸುತ್ತಾನೆ.
  • ಎಚ್ಎಲ್7 ನ ಸದಸ್ಯರು ಪ್ರಸ್ತುತ ಸಮುದಾಯಿಕವಾಗಿ “ಕೆಲಸ ಮಾಡುವ ಗುಂಪಿನಂತೆ” ಅರ್ಥೈಸಲ್ಪಡುತ್ತಾರೆ. ಕಾರ್ಯನಿರತ ಗುಂಪು ಎಚ್ಎಲ್7 ನ ಗುಣಲಕ್ಷಣದ ಮೂಲರೂಪವನ್ನು ಹೇಳಲು ಜವಾಬ್ದಾರವಾಗಿರುತ್ತದೆ ಮತ್ತು ಇದು ವೃತ್ತಿನಿರತ ಆಡಳಿತ ಸಮಿತಿಗಳು ಹಾಗೂ ಕಾರ್ಯನಿರತ ಗುಂಪನ್ನು ಹೊಂದಿರುತ್ತವೆ.
    • ವೃತ್ತಿನಿರತ ಆಡಳಿತ ಸಮಿತಿಗಳು ಸಂಘಟಿತ ಅಥವಾ ಪ್ರೋತ್ಸಾಹದಾಯಕ ಚಟುವಟಿಕೆಗಳಾದ ಶಿಕ್ಷಣ, ನಿರ್ವಹಣೆ, ಮಾರುಕಟ್ಟೆ, ದವಾಖಾನೆ ಸಂಶೋಧನೆಯಲ್ಲಿ ಮೀರಿ ಹೋದ ಸಮಿತಿ, ಪ್ರಕಾಶನ ಹಾಗೂ ಪದ್ಧತಿ ಸುಧಾರಣೆ ಹಾಗೂ ಸಾಧನಗಳನ್ನು ಒದಗಿಸುವಲ್ಲಿ ಕೇಂದ್ರೀಕೃತವಾಗಿರುತ್ತದೆ.
    • ಕಾರ್ಯನಿರತ ಗುಂಪು ನೇರವಾಗಿ ಗುಣಮಟ್ಟಗಳು ಹೊಂದಿರುವುದಕ್ಕೆ ಜವಾಬ್ದಾರರಾಗಿದ್ದು, ಇದು ನಿರ್ದಿಷ್ಟತೆಗಳ ನೈಜ ಭಾಷೆಯನ್ನು ರೂಪಿಸುತ್ತದೆ.

ಹುಟ್ಟು

[ಬದಲಾಯಿಸಿ]

ಎಚ್ಎಲ್7 1987 ರಲ್ಲಿ ಆಸ್ಪತ್ರೆ ಮಾಹಿತಿ ಪದ್ಧತಿಗೆ ಗುಣಮಟ್ಟವನ್ನು ತಯಾರಿಸುವ ಸಲುವಾಗಿ ಪ್ರತಿಷ್ಠಾಪಿಸಲ್ಪಟ್ಟಿತು. ಎಚ್‌ಎಲ್‌7 ಇಂಕ್., ಒಂದು ಗುಣಮಟ್ಟದ ಸಂಸ್ಥೆಯಾಗಿದ್ದು, 1994 ರಲ್ಲಿ ಅಮೆರಿಕಾದ ರಾಷ್ಟ್ರೀಯ ಗುಣಮಟ್ಟದ ಶಿಕ್ಷಣಸಂಸ್ಥೆ (ಎಎನ್ಎಸ್ಐ) ಯಿಂದ ನಿಯುಕ್ತಿಗೊಂಡಿತು. ಎಚ್ಎಲ್7 ಅನೇಕ ಅಮೇರಿಕಾದ ರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಸಂಸ್ಥೆ (ಎಎನ್ಎಸ್ಐ) ಗಳಲ್ಲಿ ಒಂದಾಗಿದ್ದು, ಗುಣಮಟ್ಟ ಅಭಿವೃದ್ಧಿ ಸಂಸ್ಥೆ (ಎಸ್ ಡಿಓ ಗಳು)ಗಳನ್ನು ನಿಯುಕ್ತಿಗೊಳಿಸಿದ್ದು, ಆರೋಗ್ಯ ಸೇವೆ ಕ್ಷೇತ್ರದಲ್ಲಿ ಕಾರ್ಯ ಮಾಡುತ್ತದೆ. ಹೆಚ್ಚಿನ ಎಸ್ ಡಿಓ ಗಳು (ಕೆಲವೊಮ್ಮೆ ನಿರ್ದಿಷ್ಟತೆಗಳು ಅಥವಾ ಪ್ರೊಟೊಕಾಲ್ ಎಂದು ಕರೆಯಬಹುದು) ಔಷಧ ಅಂಗಡಿ, ಔಷಧ ವಸ್ತುಗಳು, ಇಮೇಜಿಂಗ್ ಅಥವಾ ವಿಮೆ (ಹಕ್ಕು ಪ್ರಕ್ರಿಯೆ) ವ್ಯಾಪಾರದಂತಹ ನಿಗದಿತ ಆರೋಗ್ಯ ಸೇವೆಗಳಿಗೆ ಗುಣಮಟ್ಟವನ್ನು ನಿರ್ಮಿಸುತ್ತವೆ. ಆರೋಗ್ಯ ಕ್ಷೇತ್ರ ಏಳರ ಅಧಿಕಾರವ್ಯಾಪ್ತಿ ನಿರ್ಲಿಪ್ತವಾದ ಹಾಗೂ ಆಡಳಿತ ದತ್ತಾಂಶವಾಗಿದೆ.[ಸೂಕ್ತ ಉಲ್ಲೇಖನ ಬೇಕು] ಇಂದು ಎಚ್ಎಲ್7 ಅನೇಕ ರಾಷ್ಟ್ರೀಯ ಎಸ್ ಡಿಓ ಗಳಿಂದ ಅಮೇರಿಕಾದ ಹೊರಗಡೆ ದತ್ತು ಸ್ವೀಕರಿಸಲ್ಪಟ್ಟಿದೆ. ಆ ಎಸ್ ಡಿಓ ಗಳು ಎಎನ್ಎಸ್ಐ ದಿಂದ ನಿಯುಕ್ತಿಗೊಂಡಿಲ್ಲ. ಏನೇ ಆದರೂ ಎಚ್ಎಲ್7 ಈಗ ಐಎಸ್ಓ ದಿಂದ ಅಂತಾರಾಷ್ಟ್ರೀಯ ಪ್ರಮಾಣ ಬದ್ಧತೆಯಲ್ಲಿನ ಗುಂಪಿನ ಕೇಂದ್ರದಂತೆ ದತ್ತು ಸ್ವೀಕರಿಸಲ್ಪಟ್ಟಿದೆ. ಮತ್ತು ಗುಣಮಟ್ಟದ ಪರಸ್ಪರ ಹಂಚುವಿಕೆಗೆ ಪಾಲುದಾರ ಸಂಸ್ಥೆಯಾಗಿ ನಿಯುಕ್ತಿಗೊಂಡಿದೆ. ಮೊದಲ ಪರಸ್ಪರ ಪ್ರಕಾಶನಗೊಂಡ ಗುಣಮಟ್ಟವೆಂದರೆ ಐಎಸ್ಓ/ ಎಚ್ಎಲ್7 21731: 2006 ಆರೋಗ್ಯ ಮಾಹಿತಿ- ಎಚ್ಎಲ್7 ವರದಿ 3- ಪರಾಮರ್ಶಿಕ ಮಾಹಿತಿ ಮಾದರಿ- ಬಿಡುಗಡೆ 1.[ಸೂಕ್ತ ಉಲ್ಲೇಖನ ಬೇಕು]

“ಆರೋಗ್ಯ ಮಟ್ಟ-7” ಹೆಸರು

[ಬದಲಾಯಿಸಿ]

“ಆರೋಗ್ಯ ಮಟ್ಟ-7” ಎಂಬ ಹೆಸರು ಐಎಸ್ಓ ಪರಾಮರ್ಶಿಕ ಮಾದರಿಯ ಏಳನೇಯ “ಅನುಲೇಪ” ಪದರ ದ ಪರಾಮರ್ಶೆಯಾಗಿದೆ. ಹೆಸರು ಹೇಳುವಂತೆ ಎಚ್ಎಲ್7 ಆರೋಗ್ಯ ಸೇವೆಯ ವ್ಯಾಪ್ತಿಗಾಗಿ ಅನುಲೇಪದ ಪದರದ ಮೂಲ ಪ್ರತಿಯ ಮೇಲೆ ಕೇಂದ್ರೀಕರಿಸುತ್ತದೆ, ತಳಮಟ್ಟದ ಪದರವು ಸ್ವತಂತ್ರವಾಗಿರುತ್ತದೆ. ಎಚ್ಎಲ್7 ಎಲ್ಲ ಕೆಳಮಟ್ಟದ ಪದರಗಳನ್ನು ಬರಿಯ ಸಾಮಗ್ರಿ ಎಂದು ಪರಿಗಣಿಸುತ್ತದೆ.[]

ಸಹಭಾಗಿತ್ವ

[ಬದಲಾಯಿಸಿ]

ಎಚ್ಎಲ್7 ಇತರ ಗುಣಮಟ್ಟ ಅಭಿವೃದ್ಧಿಪಡಿಸುವ ಸಂಘಟನೆಗಳ ಜೊತೆ ಮತ್ತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಅಂಗೀಕಾರ ಸಮಿತಿಗಳ ಜೊತೆ ಸಹಭಾಗಿತ್ವವನ್ನು ಹೊಂದಿದೆ (ಉದಾ. ಎಎನ್ಎಸ್ಐ ಮತ್ತು ಐಎಸ್ಓ), ಆರೋಗ್ಯ ಸೇವೆ ಹಾಗೂ ಮಾಹಿತಿಯ ಮೂಲ ರೀತಿಯ ಕಾರ್ಯಕ್ಷೇತ್ರವು ಬೆಂಬಲ ಮತ್ತು ಸಾಮರಸ್ಯದ ಗುಣಮಟ್ಟವನ್ನು ಪ್ರೋತ್ಸಾಹಿಸಲು ಉಪಯೋಗವಾಗುತ್ತದೆ. ಎಚ್ಎಲ್7 ಗುಣಮಟ್ಟವು ಜಗತ್ತಿನ ನೈಜ ಅಗತ್ಯವನ್ನು ಮುಟ್ಟುತ್ತದೆ ಎಂಬುದನ್ನು ದೃಢಪಡಿಸಲು ಆರೋಗ್ಯಸೇವೆ ಮಾಹಿತಿ ತಂತ್ರಜ್ಞಾನ ಉಪಯೋಗಿಸುವವರೊಂದಿಗೆ ಎಚ್ಎಲ್7 ಸಹಕರಿಸುತ್ತದೆ. ಇಂತಹ ಅನ್ವರ್ಥಕವಾದ ಗುಣಮಟ್ಟ ಅಭಿವೃದ್ಧಿ ಪ್ರಯತ್ನಗಳು ಅತ್ಯಗತ್ಯಗಳನ್ನು ಪೂರೈಸಲು ಎಚ್ಎಲ್7 ನಿಂದ ಪ್ರಾರಂಭಿಸಲ್ಪಟ್ಟಿವೆ.[ಸೂಕ್ತ ಉಲ್ಲೇಖನ ಬೇಕು]

ಜಾಗತಿಕ ಸದಸ್ಯತ್ವದಲ್ಲಿ ಶೇ. 45 ರಷ್ಟು (ಎಚ್ಎಲ್7 --- ನಿಂದಾಗಿರಬಹುದು, ಅಥವಾ ಎಚ್ಎಲ್7 ಸ್ವೀಕಾರವಾಗಿರಬಹುದು) ಯುರೋಪ್ ನಲ್ಲಿ ಇದೆ, ಶೇ. 35 ರಷ್ಟು ಉತ್ತರ ಅಮೇರಿಕಾದಲ್ಲಿದೆ, ಶೇ. 15 ರಷ್ಟು ಏಷಿಯಾ-ಓಸೀನಿಯಾ ಮತ್ತು ಶೇ. 5 ರಷ್ಟು ಇತರೆಡೆ ಇವೆ.[]

ಎಚ್‌ಎಲ್‌7 ಪ್ರಮಾಣಗಳು

[ಬದಲಾಯಿಸಿ]

ಆಸ್ಪತ್ರೆಗಳು ಹಾಗೂ ಇತರ ಆರೋಗ್ಯ ಸೇವೆ ನೀಡುವ ಸಂಘಟನೆಗಳು ರೋಗಿಗಳ ಜಾಡು ಹಿಡಿಯಲು ಅನೇಕ ರೀತಿಯ ಗಣಕಯಂತ್ರ ಪದ್ಧತಿಯ ನಮೂನೆಗಳನ್ನು ಶುಲ್ಕ ದಾಖಲೆ ಸೇರಿದಂತೆ ಎಲ್ಲದಕ್ಕೂ ಉಪಯೋಗಿಸುತ್ತಾರೆ. ಈ ಎಲ್ಲ ಗಣಕಯಂತ್ರಗಳು ಅವರು ಮಾಹಿತಿಯನ್ನು ಪಡೆದಾಗ ಒಮ್ಮೆ ಎಲ್ಲವನ್ನೂ ಮಾಡಲು ಸಾಧ್ಯವಾಗದಿದ್ದರೂ ಕೂಡ ಒಬ್ಬರಿಗೊಬ್ಬರು ಸಂಪರ್ಕಹೊಂದಬೇಕು (ಅಥವಾ ಮುಖತಃ ಭೇಟಿಯಾಗಬೇಕು). ಎಚ್ಎಲ್7 ನಮ್ಯ ಗುಣಮಟ್ಟವನ್ನು ವಿಶೇಷಿಸುತ್ತದೆ. ಮಾರ್ಗದರ್ಶಕಗಳು ಮತ್ತು ಪದ್ಧತಿಗಳು ವಿವಿಧ ಆರೋಗ್ಯ ಸೇವೆಗಳಿಂದ ಪದ್ಧತಿಗಳು ಒಂದಕ್ಕೊಂದು ಸಂಪರ್ಕ ಹೊಂದುತ್ತವೆ. ಅಂತಹ ಮಾರ್ಗದರ್ಶಕಗಳು ಹಾಗೂ ಅಂಕಿ ಅಂಶ ಗುಣಮಟ್ಟಗಳು ನಿಮಯಗಳ ಒಂದು ಗುಂಪಾಗಿದ್ದು, ಅವು ಮಾಹಿತಿಗಳನ್ನು ಹಂಚಿಕೊಳ್ಳಲು ಮತ್ತು ಸಮಾನವಾಗಿ ಪರಿಷ್ಕರಿಸಲು ಹಾಗೂ ಸುಸಂಭದ್ಧ ರೀತಿಗೆ ಅವಕಾಶ ನೀಡುತ್ತವೆ. ಈ ಅಂಕಿ ಅಂಶಗಳ ಗುಣಮಟ್ಟಗಳು ಆರೋಗ್ಯ ಸೇವೆಯ ಸಂಘಟನೆಗಳಿಗೆ ಆರಾಮವಾಗಿ ದವಾಖಾನೆಯ ಮಾಹಿತಿಯನ್ನು ಹಂಚಿಕೊಳ್ಳಲು ಅವಕಾಶ ನೀಡುತ್ತವೆ. ಸೈದ್ಧಾಂತಿಕವಾಗಿ ಈ ಮಾಹಿತಿ ಹಂಚಿಕೆಯ ಸಾಮಾರ್ಥ್ಯವು ಆರೋಗ್ಯ ಸೇವೆಯಲ್ಲಿ ಪ್ರದೇಶಗಳ ಪ್ರತ್ಯೇಕತೆ ಹಾಗೂ ಹೆಚ್ಚಿನ ರೀತಿಯಲ್ಲಿ ಮಾರ್ಪಾಡಾಗುವ ಪೃವೃತ್ತಿಯನ್ನು ಕಡಿಮೆಗೊಳಿಸುತ್ತದೆ.[ಸೂಕ್ತ ಉಲ್ಲೇಖನ ಬೇಕು] ಎಚ್ಎಲ್ 7 ಪರಿಕಲ್ಪನೆ ಗುಣಮಟ್ಟವನ್ನು (ಉದಾ. ಎಚ್ಎಲ್7 ಆರ್ಐಎಂ), ಕಾಗದಪತ್ರ ಗುಣಮಟ್ಟ (ಉದಾ. ಎಚ್ಎಲ್ಎ7 ಸಿಡಿಎ), ಅರ್ಜಿ ಗುಣಮಟ್ಟ (ಉದಾ. ಎಚ್ಎಲ್7 ಸಿಸಿಓಡಬ್ಲೂ) ಮತ್ತು ಸಂದೇಶದ ಗುಣಮಟ್ಟವನ್ನು (ಉದಾ. ಎಚ್ಎಲ್7 v2.x ಮತ್ತು v3.0) ಅಭಿವೃದ್ಧಿಪಡಿಸುತ್ತದೆ. ಸಂದೇಶದ ಗುಣಮಟ್ಟವು ವಿಶೇಷವಾಗಿ ಪ್ರಾಮುಖ್ಯತೆ ಪಡೆದಿದೆ. ಏಕೆಂದರೆ ಸಂದೇಶ ಹೇಗೆ ತಯಾರಿಸಲ್ಪಟ್ಟಿದೆ ಎಂಬುದನ್ನು ಹಾಗೂ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬರಿಗೆ ಹೇಗೆ ಸಂಪರ್ಕಿಸಲ್ಪಡುತ್ತದೆ ಎಂಬುದನ್ನು ವಿವರಿಸುತ್ತದೆ. ಇಂತಹ ಗುಣಮಟ್ಟಗಳು ಭಾಷೆಯನ್ನು, ವ್ಯವಸ್ಥೆಯನ್ನು ಮತ್ತು ಒಂದು ವ್ಯವಸ್ಥೆಯಿಂದ ಮತ್ತೊಂದು ವ್ಯವಸ್ಥೆಗೆ ಐಕ್ಯತೆಯಿರುವಂತೆ ಕಂಡುಬರದ ಅಗತ್ಯ ಅಂಕಿ ಅಂಶಗಳನ್ನು ಜೋಡಿಸುತ್ತವೆ.[] ಎಚ್ಎಲ್7 ಅಭಿವೃದ್ಧಿ, ದತ್ತು ಸ್ವೀಕಾರ, ಮಾರುಕಟ್ಟೆ ಗುರುತಿಸುವಿಕೆ, ಉಪಯೋಗಪಡಿಸಿಕೊಳ್ಳುವಿಕೆ, ಅನುಕರಣೆ ಸೇರಿದಂತೆ ಗುಣಮಟ್ಟದ ವೈಶಿಷ್ಠ್ಯದ ಸಂಪೂರ್ಣ ಜೀವನ ಚಕ್ರವನ್ನು ಸೂಚಿಸುತ್ತದೆ. [ಸೂಕ್ತ ಉಲ್ಲೇಖನ ಬೇಕು] ಎಚ್ಎಲ್7 ಗುಣಮಟ್ಟವು ಪ್ರವೇಶಕ್ಕಾಗಿ ಎಚ್ಎಲ್7 ಇಂಕ್. ನಿಂದ ಹಣ ಪಾವತಿಸಿದ ಸದಸ್ಯರನ್ನು ಅಥವಾ ಅದರ ಭಾಗವನ್ನು ಬಯಸುತ್ತದೆ.

ಎಚ್‌ಎಲ್‌7 ಆವೃತ್ತಿ 2.x

[ಬದಲಾಯಿಸಿ]

ಎಚ್ಎಲ್7 ಆವೃತ್ತಿ 2 ಗುಣಮಟ್ಟವು ಆಸ್ಪತ್ರೆಯ ಕೆಲಸ ಕಾಯ೯ಗಳಿಗೆ ಬೆಂಬಲಿಸುವ ಗುರಿ ಹೊಂದಿದೆ. ಇದು ಪ್ರಾಥಮಿಕವಾಗಿ 1987 ರಲ್ಲಿ ತಯಾರಿಸಲ್ಪಟ್ಟಿದೆ.[ಸೂಕ್ತ ಉಲ್ಲೇಖನ ಬೇಕು] V2.x ಸಂದೇಶ ಕಳುಹಿಸುವಿಕೆ ಎಚ್ಎಲ್7 ಆವೃತ್ತಿ 2 ಆಡಳಿತ, ಲೊಜಿಸ್ಟಿಕ್, ಆರ್ಥಿಕ ಹಾಗೂ ದವಾಖಾನೆಯಂತಹ ಕೆಲಸಗಳಿಗೆ ಬೆಂಬಲಿಸಲು ಇಲೆಕ್ಟ್ರಾನಿಕ್ ಸಂದೇಶದ ಶ್ರೇಣಿಯನ್ನು ವಿವರಿಸುತ್ತದೆ. 1987 ರಿಂದ ಗುಣಮಟ್ಟವು ನಿಯಮಬದ್ಧವಾಗಿ ಆಧುನಿಕಗೊಂಡಿದೆ. 2.1, 2.2, 2.3, 2.3.1, 2.4, 2.5, 2.5.1 ಮತ್ತು 2.6 ಆವೃತ್ತಿಗಳಲ್ಲಿ ಹೊರಬಂದಿದೆ. ಸಾಮೂಹಿಕವಾಗಿ ಈ ಆವೃತ್ತಿಗಳು 2.x. ಎಂದು ತಿಳಿಯಲ್ಪಟ್ಟಿವೆ. ವಿ2.x. ಗುಣಮಟ್ಟಗಳು ಹಿಂದುಳಿದ ಹೊಂದಾಣಿಕೆಗಳು. ಅಂದರೆ, 2.3 ರ ಆವೃತ್ತಿ ಅಡಿಯಲ್ಲಿ ಸಂದೇಶವು 2.6 ಕ್ಕೆ ಬೆಂಬಲಿಸಿದ ಅರ್ಜಿಯಿಂದ ಅರ್ಥೈಸಲ್ಪಡುತ್ತದೆ. ಎಚ್ಎಲ್7 ವಿ2.x ಹೆಚ್ಚಾಗಿ ಉಪಯೋಗಿಸುವುದು ಡೆಲಿಮೀಟರ್ ಆಧಾರದ ಮೇಲೆ ಪಠ್ಯ, ನಾನ್-ಎಕ್ಸ್ಎಂಎಲ್ ವಾಕ್ಯಲಕ್ಷಣದಲ್ಲಿ ಗುಟ್ಟುಬರೆಯುವುದನ್ನು. ಎಚ್‌ಎಲ್‌7 v2.x ಯು ವಿದ್ಯುನ್ಮಾನ ರೋಗಿ ನಿರ್ವಹಣಾ ವ್ಯವಸ್ಥೆ(PAS), ವಿದ್ಯುನ್ಮಾನ ವೃತ್ತಿ ನಿರ್ವಹಣೆ (EPM) ವ್ಯವಸ್ಥೆಗಳು, ಪ್ರಯೋಗಾಲಯ ಮಾಹಿತಿ ವ್ಯವಸ್ಥೆಗಳು(LIS), ಡಯಟರಿ, ಫಾರ್ಮಸಿ, ಮತ್ತು ಬಿಲ್ಲಿಂಗ್ ವ್ಯವಸ್ಥೆಗಳು ಅಷ್ಟೇ ಅಲ್ಲದೇ ವಿದ್ಯುನ್ಮಾನ ವೈದ್ಯಕೀಯ ದಾಖಲೆ (EMR) ಅಥವಾ ವಿದ್ಯುನ್ಮಾನ ಆರೋಗ್ಯ ದಾಖಲೆ (EHR) ವ್ಯವಸ್ಥೆಗಳ ನಡುವೆ ಮಾಹಿತಿ ಹಂಚಿಕೆಯನ್ನು ಸಾಧ್ಯವಾಗಿಸಿದೆ. ಪ್ರಸ್ತುತವಾಗಿ, ಎಚ್‌ಎಲ್‌7’s v2.x ಸಂದೇಶ ಕಳಿಸುವಿಕೆ ಪ್ರಮಾಣವು ಅಮೇರಿಕಾ ಸಂಯುಕ್ತ ಸಂಸ್ಥಾನದ ಎಲ್ಲಾ ಪ್ರಮುಖ ವೈದ್ಯಕೀಯ ಮಾಹಿತಿ ವ್ಯವಸ್ಥೆಗಳ ಗ್ರಾಹಕರಲ್ಲಿ ಬೆಂಬಲಿಸಲ್ಪಟ್ಟಿದೆ.[೧] Archived 2005-11-13 ವೇಬ್ಯಾಕ್ ಮೆಷಿನ್ ನಲ್ಲಿ..

ಎಚ್‌ಎಲ್‌7 ಆವೃತ್ತಿ 3

[ಬದಲಾಯಿಸಿ]

ಎಚ್ಎಲ್7 3 ನೇ ಆವ್ರತ್ತಿಯ ಗುಣಮಟ್ಟವು ಯಾವುದೇ ಅಥವಾ ಎಲ್ಲ ಆರೋಗ್ಯಸೇವಾ ಕೆಲಸಗಳಿಗೆ ಬೆಂಬಲ ನೀಡುವ ಗುರಿ ಹೊಂದಿದೆ. 3 ನೇ ಆವ್ರತ್ತಿಯ ತಯಾರಿಕೆಯು 1995 ರ ಸುತ್ತಮುತ್ತ ಆರಂಭಗೊಂಡಿತು. ಇದರ ಪ್ರಾಥಮಿಕ ಗುಣಮಟ್ಟದ ಪ್ರಕಾಶನವು 2005 ರಲ್ಲಿ ನಡೆಯಿತು. ವಿ3 ಗುಣಮಟ್ಟವು ಆವ್ರತ್ತಿ 2ಕ್ಕೆ ವಿರುದ್ಧವಾಗಿದ್ದು, ಸಾಂಪ್ರದಾಯಿಕ ಪದ್ಧತಿಯ ಆಧಾರದ ಮೇಲೆ ಮತ್ತು ಭೌತಿಕ ವಸ್ತು ನೆರವಿನ ತತ್ವವನ್ನು ಒಳಗೊಂಡಿದೆ. ಆರ್‌ಐಎಮ್ - ಐಎಸ್‌ಒ/ಎಚ್‌ಎಲ್‌7 21731 ಹೋಲಿಕೆಯ ಮಾಹಿತಿ ಮಾದರಿ (ಆರ್ಐಎಂ) ಇದು ಎಚ್ಎಲ್7 3 ನೇ ಆವ್ರತ್ತಿಯ ಅಭಿವೃದ್ಧಿ ಪದ್ಧತಿಯ ಮೂಲಾಧಾರವಾಗಿದೆ. ಮತ್ತು ಎಚ್ಎಲ್7 ವಿ3 ಅಭಿವೃದ್ಧಿ ಪದ್ಧತಿಯ ಅತ್ಯವಶ್ಯಕ ಭಾಗವಾಗಿದೆ. ದವಾಖಾನೆ ಅಥವಾ ಆಡಳಿತ ಸಂದರ್ಭದಲ್ಲಿ ಅಗತ್ಯವಿರುವ ಅಂಕಿ ಅಂಶಗಳನ್ನು ಆರ್ಐಎಂ ತಿಳಿಸುತ್ತದೆ. ಮತ್ತು ಎಚ್ಚರಿಸುವ ಹಾಗೂ ಎಚ್ಎಲ್7 ಸಂದೇಶ ಕ್ಷೇತ್ರದಿಂದ ತೆಗೆದ ಮಾಹಿತಿಗಳ ಮಧ್ಯೆ ಇರುವ ಶಬ್ದಕ್ಕೆ ಸಂಬಂಧಪಟ್ಟ ಮತ್ತು ಒಂದು ಅಭಿವ್ಯಕ್ತ ಪ್ರಾತಿನಿಧ್ಯವನ್ನು ನೀಡುತ್ತದೆ. ಅಸಂದಿಗ್ಧತೆ ಹೆಚ್ಚಿಸಲು ಹಾಗೂ ನಿರ್ವಹಣೆಯ ವ್ಯಚ್ಛ ಕಡಿಮೆ ಮಾಡಲು ಆರ್ಐಎಂ ಅತ್ಯವಶ್ಯಕವಾಗಿದೆ. ಮಾದರಿಗಳು ಲಭ್ಯವಿವೆ. ಎಚ್ಎಲ್7 ಅಭಿವೃದ್ಧಿ ಚೌಕಟ್ಟುಕೆಲಸ – ಐಎಸ್ಓ/ಎಚ್ಎಲ್7 27931 ಎಚ್ಎಲ್7 ಅಭಿವೃದ್ಧಿ ಚೌಕಟ್ಟುಕೆಲಸ (ಎಚ್‌ಡಿಎಫ್) ಒಂದು ಕ್ರಮವಾಗಿ ಬರುವ ಪದ್ಧತಿಯಾಗಿದೆ. ಅದು ಆರೋಗ್ಯ ಸೇವೆ ವ್ಯವಸ್ಥೆಗಳ ಮಧ್ಯೆ ಆಗುವ ಕೆಲಸಗಳನ್ನು ಸುಲಭ ಮಾಡುವ ವೈಶಿಷ್ಠ್ಯತೆಯನ್ನು ಅಭಿವೃದ್ಧಿಪಡಿಸಲು ಅನ್ವೇಷಿಸುತ್ತದೆ. ಎಚ್‌ಎಲ್‌7 ಆರ್‌ಐಎಮ್‌, ಶಬ್ದಭಂಡಾರ ನಿರ್ದಿಷ್ಟತೆಗಳು, ಮತ್ತು ವಿಶ್ಲೇಷಣೆಯ ಮಾದರಿ-ನಿರ್ದೇಶಿತ ಪ್ರಕ್ರಿಯೆ ಮತ್ತು ವಿನ್ಯಾಸವು ಜೊತೆಯಾಗಿ ಎಚ್‌ಎಲ್‌7 ಆವೃತ್ತಿ 3 ಯನ್ನು ಆರೋಗ್ಯಸುರಕ್ಷೆ ಮಾಹಿತಿ ವ್ಯವಸ್ಥೆಯ ಮಾಹಿತಿ ವಿನಿಮಯಕ್ಕಾಗಿ ಒಪ್ಪಿಗೆ-ಆಧಾರಿತ ಪ್ರಮಾಣಗಳ ಬೆಳವಣಿಗೆಗಾಗಿ ಒಂದು ವಿಧಾನಶಾಸ್ತ್ರವನ್ನಾಗಿ ಮಾಡುತ್ತವೆ.

 ಎಚ್‌ಡಿಎಫ್ ಇದು ಎಚ್ಎಲ್7 ವಿ3 ಅಭಿವೃದ್ಧಿ ಪದ್ಧತಿಯ ಅತ್ಯಂತ ಈಚಿನ ಆವೃತ್ತಿಯಾಗಿದೆ.

ಎಚ್‌ಡಿಎಫ್ ಕಾಗದಪತ್ರ ಕಾರ್ಯವಿಧಾನ, ಸಾಮಗ್ರಿ, ನಟನಾಕಾರರು, ನಿಯಮಗಳು ಮತ್ತು ಸಂದೇಶವಷ್ಟೇ ಅಲ್ಲದೆ, ಎಲ್ಲ ರೀತಿಯ ಎಚ್ಎಲ್7 ಗುಣಮಟ್ಟ ವೈಶಿಷ್ಠ್ಯ ಅಭಿವೃದ್ಧಿಗೆ ಮನುಷ್ಯನಿಂದ ನಿರ್ಮಿತವಾದ ಪ್ರಸ್ತುತತೆಯನ್ನು ಎಚ್‌ಡಿಎಫ್ ದಾಖಲೆಯನ್ನು ತಯಾರಿಸುತ್ತದೆ. ಕಾಲಕಳೆದಂತೆ ಇಲೆಕ್ಟ್ರಾನಿಕ್ ಆರೋಗ್ಯ ದಾಖಲೆಯ ವಾಸ್ತುಶಿಲ್ಪಗಳು ಮತ್ತು ಅಗತ್ಯತೆಗಳ ವಿಶ್ಲೇಷಣೆಯಿಂದ ಸಿಗುವ ಹೊಸ ಗುಣಮಟ್ಟವನ್ನು ಕೂಡ ಒಳಗೊಂಡ ಎಲ್ಲ ರೀತಿಯ ಎಚ್ಎಲ್7 ಗುಣಮಟ್ಟ ವೈಶಿಷ್ಠ್ಯಗಳನ್ನು ಎಚ್‌ಡಿಎಫ್ ಒಳಗೊಂಡಿರುತ್ತದೆ. ಎಚ್ಎಲ್7 ವೈಶಿಷ್ಠ್ಯತೆಗಳು ಗುಪ್ತ ಮತ್ತು ವಿವಿಧ ಮೂಲಗಳ ಶಬ್ದಕೋಶಗಳನ್ನು ಆಕರ್ಷಿಸುತ್ತವೆ. ವ್ಯವಸ್ಥೆಯು ನಿರ್ವಹಿಸುವ ಎಚ್ಎಲ್7 ವೈಶಿಷ್ಠ್ಯತೆಗಳು ಒಂದು ಸ್ಪಷ್ಟವಾದ ಗುಪ್ತ ಮೂಲವನ್ನು ಅರಿಯುವ ಮತ್ತು ಗುಪ್ತ ಬೆಲೆಯು ಉಪಯೋಗಿಸಲ್ಪಡುವ ವ್ಯಾಪ್ತಿಯನ್ನು ವಿ3 ಶಬ್ದಕೋಶ ಕೆಲಸವು ದೃಢಪಡಿಸುತ್ತದೆ. V3 ಸಂದೇಶ ಕಳಿಸುವಿಕೆ ಎಚ್ಎಲ್7 ಆವೃತ್ತಿ 3 ಸಂದೇಶ ನೀಡುವ ಗುಣಮಟ್ಟವು ಯಾವುದೇ ಅಥವಾ ಎಲ್ಲ ಆರೋಗ್ಯ ಸೇವೆ ಕೆಲಸದ ಒತ್ತಡವನ್ನು ಬೆಂಬಲಿಸಲು ಒಂದು ಇಲೆಕ್ಟ್ರಾನಿಕ್ ಸಂದೇಶಗಳ ಕ್ರಮಾಂಕಗಳನ್ನು (ವಹಿವಾಟು ಎಂದು ಕರೆಯುವ) ವಿಶ್ಲೇಷಿಸುತ್ತದೆ. ಎಚ್ಎಲ್7 ವಿ3 ಸಂದೇಶಗಳು ಒಂದು ಎಕ್ಸ್ಎಂಎಲ್ ಗುಪ್ತತೆಯನ್ನು ಬಿಡಿಸುವ ಪ್ರಕ್ರಿಯೆಯ ಮೇಲೆ ಆಧರಿಸಿರುತ್ತವೆ. ವಿ3 ದವಾಖಾನೆ ದಾಖಲೆಪತ್ರ ವಾಸ್ತುಶಿಲ್ಪ – ಐಎಸ್ಓ 10781 ಎಚ್ಎಲ್7 3 ನೇ ಆವೃತ್ತಿ ದವಾಖಾನೆ ದಾಖಲೆಪತ್ರ ವಾಸ್ತುಶಿಲ್ಪ (ಸಿಡಿಎ) ಒಂದು ಎಕ್ಸ್ಎಂಎಲ್ ಆಧರಿಸಿದ ಗುಪ್ತತೆಯನ್ನು ಬಿಡಿಸುವಿಕೆಯನ್ನು ವಿಶ್ಲೇಷಿಸುವ ಇಚ್ಛಿಸಿದ ಮತ್ತು ದವಾಖಾನೆ ದಾಖಲೆಪತ್ರಗಳನ್ನು ವಹಿವಾಟಿಗಾಗಿ ಎಚ್ಚರಿಸುವ ಗುರುತಿಸಲ್ಪಟ್ಟ ಗುಣಮಟ್ಟವಾಗಿದೆ.

ಎಚ್ಎಲ್7 ನಿಂದ ಅನ್ವಯಿಸಲ್ಪಟ್ಟ ಪದ್ಧತಿಗಳು

[ಬದಲಾಯಿಸಿ]

ಚೌಕಟ್ಟುಕೆಲಸ ವಹಿವಾಟಿನ ಸೇವೆಗಳ ಜ್ಞಾನ

[ಬದಲಾಯಿಸಿ]

ಎಚ್ಎಲ್7 ಸರ್ವೀಸಸ್-ಅವೇರ್ ಎಂಟರ್ ಪ್ರೈಸ್ ಅರ್ಕಿಟೆಕ್ಚರ್ ಪ್ರೇಮ್ ವರ್ಕ್ (ಎಸ್ಎಐಎಫ್) ಇದು ಎಲ್ಲ ಎಚ್ಎಲ್7 ಮಾನವ ನಿರ್ಮಿತಗಳ ಮಧ್ಯೆ ಸುಸಂಬದ್ಧತೆಯನ್ನು ನೀಡುತ್ತದೆ ಹಾಗೂ ಎಂಟರ್ ಪ್ರೈಸ್ ಆರ್ಕಿಟೆಕ್ಚರ್ (ಇಎ) ಅಭಿವೃದ್ಧಿ ಮತ್ತು ನಿರ್ವಹಣೆಯು ಗುಣಮಟ್ಟದತ್ತ ಸಮೀಪಿಸುವಂತೆ ಶಕ್ತಗೊಳಿಸಲು ಹಾಗೂ ಸುಸಂಬದ್ಧತೆಯನ್ನು ಪ್ರಮಾಣಗೊಳಿಸುವ ಒಂದು ದಾರಿಯಾಗಿದೆ. ಎಸ್ಎಐಎಫ್ ಇದೊಂದು ಸ್ಫುಟವಾಗಿ ಆಡಳಿತ, ಸರಿಹೊಂದಿಸುವಿಕೆ, ಹೇಳಿದಂತೆ ಕೇಳುವುದು ಮತ್ತು ನಡೆತೆಯನ್ನು ಎಚ್ಚರಿಸುವುದನ್ನು ವಿವರಿಸುವಂತಹ ವೈಶಿಷ್ಠ್ಯತೆಗಳನ್ನು ನಿರ್ಮಿಸುವ ಕುರಿತು ಯೋಜಿಸುವ ದಾರಿಯಾಗಿದೆ. ಇವು ಲೆಕ್ಕಮಾಡಬಲ್ಲಂತಹ ನಡೆಯುತ್ತಿರುವ ವಹಿವಾಟಿನ ಕುರಿತು ಎಚ್ಚರಿಕೆ ನೀಡುವುದನ್ನು ಸಾಧಿಸಲು ಅಗತ್ಯವಾಗಿವೆ. ಉದ್ದೇಶಿತ ಮಾಹಿತಿ ಪ್ರಸರಣ ತಾಂತ್ರಿಕತೆಯು ಸಂದೇಶ ನೀಡುವುದನ್ನು, ದಾಖಲೆಪತ್ರ ವಹಿವಾಟನ್ನು ಅಥವಾ ಸೇವೆಯ ಸಾಮಿಪ್ಯವನ್ನು ಉಪಯೋಗಿಸಬಹುದು. ಎಸ್ಎಐಎಫ್ ಇದು ಚೌಕಟ್ಟುಕೆಲಸವಾಗಿದ್ದು, ಇದು ಇತರ ಗುಣಮಟ್ಟಗಳ ವಹಿವಾಟನ್ನು ವೈಚಾರಿಕತೆಯಿಂದ ವಿವರಿಸಲು ಅಗತ್ಯವಾಗಿದೆ. ಎಸ್ಎಐಎಫ್ ವಹಿವಾಟನ್ನು ಸಾಧಿಸಲು ಒಂದು ವಾಸ್ತುಶಿಲ್ಪವಾಗಿದೆ. ಆದರೆ, ಇದು ವಾಸ್ತುಶಿಲ್ಪ ವ್ಯವಸ್ಥೆಯ ಉದ್ಯಮಕ್ಕೆ ಎಲ್ಲ ರೀತಿಯ ಪರಿಹಾರಾತ್ಮಕ ಮಾದರಿಯಲ್ಲ.

ಆರ್ಡೆನ್ ಪದವಿನ್ಯಾಸ

[ಬದಲಾಯಿಸಿ]

ಆರ್ಡೆನ್ ಪದವಿನ್ಯಾಸವು ವೈದ್ಯಕೀಯ ತಿಳಿವಳಿಕೆಯನ್ನು ಬಹಿರಂಗಪಡಿಸಲು ಒಂದು ಭಾಷೆಯಾಗಿದೆ. ಆರ್ಡೆನ್ ಪದವಿನ್ಯಾಸ 2.0 ದಿಂದ ಆರಂಭವಾಗುವ ಗುಣಮಟ್ಟವನ್ನು ಎಚ್ಎಲ್7 ದತ್ತು ಪಡೆದು ಮತ್ತು ಮೇಲ್ವಿಚಾರಣೆ ಮಾಡುತ್ತದೆ. ಈ ವೈದ್ಯಕೀಯ ತರ್ಕ ಶಕ್ತಿ(ಎಂಎಲ್ಎಂ)ಗಳು ಒಂದು ವೈದ್ಯಕೀಯ ನಿರ್ಧಾರ ತೆಗೆದುಕೊಳ್ಳಲು ಸಾಕಷ್ಟು ತಿಳಿವಳಿಕೆಯನ್ನು ಹೊಂದಿರುವಂತಹ ದವಾಖಾನೆ ವಾತಾವರಣದಲ್ಲಿ ಉಪಯೋಗಿಸಲ್ಪಡುತ್ತವೆ.[ಸೂಕ್ತ ಉಲ್ಲೇಖನ ಬೇಕು] ಅವು ಜಾಗರೂಕತೆಯನ್ನು, ರೋಗನಿಧಾನವನ್ನು ಮತ್ತು ಅರ್ಥವಿವರಣೆಯನ್ನು ಮತ್ತು ಗುಣಮಟ್ಟದ ಭರವಸೆಯ ಕಾರ್ಯ ಮತ್ತು ಆಡಳಿತ ಬೆಂಬಲವನ್ನು ನಿರ್ಮಿಸುತ್ತವೆ. ಒಂದು ಎಂಎಲ್ಎಂ ಒಂದು ಗಣಕಯಂತ್ರದಲ್ಲಿ ನಡೆಯಬೇಕು, ಇದರಿಂದ ಅವು ಕನಿಷ್ಠ ವ್ಯವಸ್ಥೆಯ ಅಗತ್ಯಗಳಿಗೆ ಸರಿಹೊಂದುತ್ತವೆ ಮತ್ತು ಸರಿಯಾದ ಪ್ರೋಗ್ರಾಮನ್ನು ಪ್ರತಿಷ್ಠಾಪಿಸುತ್ತದೆ. ನಂತರ ಎಂಎಲ್ಎಂ ಎಂದು ಹಾಗೂ ಎಲ್ಲಿ ಇದು ಅಗತ್ಯ ಹೊಂದಿದೆ ಎಂಬುದಕ್ಕೆ ಸಲಹೆಯನ್ನು ನೀಡುತ್ತದೆ.

ಎಂಎಲ್ಎಲ್‌ಪಿ

[ಬದಲಾಯಿಸಿ]

ಎಚ್ಎಲ್7 ಸಂದೇಶ ನೀಡುವುದರ ಒಂದು ದೊಡ್ಡ ಭಾಗವು ಅತಿಸೂಕ್ಷ್ಮವಾದ ತಳಮಟ್ಟದ ಪದರದ ಮೂಲಾಂಶ (ಎಂಎಲ್ಎಲ್‌ಪಿ) ದಿಂದ ರವಾನಿಸಲ್ಪಡುತ್ತದೆ. [೨][೩]

ಸಿಸಿಓಡಬ್ಲ್ಯೂ

[ಬದಲಾಯಿಸಿ]

ಸಿಸಿಓಡಬ್ಲ್ಯೂ ಅಥವಾ ‘ದವಾಖಾನೆ ಸಂದರ್ಭದ ವಸ್ತುವಿನ ಕೆಲಸದಗುಂಪು’ ಒಂದು ಗುಣಮಟ್ಟದ ಮೂಲಾಂಶವಾಗಿದೆ, ವಿವಿಧ ಅರ್ಜಿಗಳನ್ನು ಉಪಯೋಗಕಾರರ ಸಂದರ್ಭದಲ್ಲಿ ಹಂಚಿಕೊಳ್ಳಲು ಹಾಗೂ ನಿಜವಾದ ಸಮಯದಲ್ಲಿ ರೋಗಿಗಳ ಸಂದರ್ಭ ಹಾಗೂ ಬಳಕೆದಾರರ ಮಟ್ಟದಲ್ಲಿ ಶಕ್ತಿಯುತಗೊಳಿಸುವಂತೆ ತಯಾರಿಸಲ್ಪಟ್ಟ ಮಾದರಿಯಾಗಿದೆ. ಸಿಸಿಒಡಬ್ಲೂ ಅನ್ವಯಗಳು ಎರಡು ಅಪ್ಲಿಕೇಶನ್‌ಗಳ ನಡುವಿನ ಬಳಕೆದಾರ ಭದ್ರತೆಯನ್ನು ನಿರ್ವಹಿಸಲು ವಿಶೇಷವಾಗಿ ಒಂದು ಸಿಸಿಒಡಬ್ಲೂ ವಾಲ್ಟ್ ವ್ಯವಸ್ಥೆಯ ಅಗತ್ಯತೆಯನ್ನು ಹೊಂದಿವೆ.

ಕಾರ್ಯಕಾರಿ ಇಎಚ್ಆರ್ ಮತ್ತು ಪಿಎಚ್ಆರ್ ವಿವರಗಳು

[ಬದಲಾಯಿಸಿ]

ಕಾರ್ಯಕಾರಿ ವಿವರಗಳು ಒಂದು ಇಲೆಕ್ಟ್ರಾನಿಕ್ ಆರೋಗ್ಯ ದಾಖಲೆಗಾಗಿ ಇವೆ.

ದೇಶಗಳ ನಿಶ್ಚಿತವಾದ ನೋಟಗಳು

[ಬದಲಾಯಿಸಿ]

ಆಸ್ಟ್ರೇಲಿಯಾ

[ಬದಲಾಯಿಸಿ]

ಎಚ್ಎಲ್7 ಆಸ್ಟ್ರೇಲಿಯಾ 1998 ರಲ್ಲಿ ಸಂಸ್ಥಾಪಿಸಲ್ಪಟ್ಟಿತು. ಆಸ್ಟ್ರೇಲಿಯಾ ದೇಶವು ಎಚ್ಎಲ್7 ವಿ2.x ಗುಣಮಟ್ಟವನ್ನು ಅತ್ಯಂತ ಮೊದಲು ದತ್ತು ಪಡೆದ ದೇಶ. ಇಂದು ಆಸ್ಟ್ರೇಲಿಯಾದ ಸಾರ್ವಜನಿಕ ಹಾಗೂ ಖಾಸಗಿ ಆರೋಗ್ಯ ಸೇವಾ ಸಂಘಟನೆಗಳು ಎಲ್ಲೆಡೆ ಉಪಯೋಗಿಸುತ್ತಿವೆ. ಎಚ್ಎಲ್7 ಗುಣಮಟ್ಟದ ಸ್ಥಳೀಯಕರಣವು ರಾಷ್ಟ್ರೀಯ ಗುಣಮಟ್ಟ ಸಮಿತಿಯಿಂದ ಆಸ್ಟ್ರೇಲಿಯಾದಲ್ಲಿ ಕೈಗೊಳ್ಳಲ್ಪಟ್ಟಿದೆ. ಎಚ್ಎಲ್7 ಆಸ್ಟ್ರೇಲಿಯಾ ರಾಷ್ಟ್ರೀಯ ಇ-ಆರೋಗ್ಯ ಸ್ಥಿತ್ಯಂತರ ಪಾರುಪತ್ಯ (ಎನ್ಇಎಚ್‌ಟಿಎ) ದ ಜೊತೆ ಅತ್ಯಂತ ಸಮೀಪದಿಂದ ಸಹಕಾರ ನೀಡುತ್ತದೆ.

ಫಿನ್‌ಲ್ಯಾಂಡ್

[ಬದಲಾಯಿಸಿ]

ಆರೋಗ್ಯ ಸೇವೆಗಾಗಿ ರಾಷ್ಟ್ರೀಯ ಐಟಿ ಸೇವೆ ಫಿನ್ ಲ್ಯಾಂಡಿನ ಸಾಮಾಜಿಕ ವಿಮಾ ಸಂಸ್ಥೆಯು ರಾಷ್ಟ್ರೀಯ ಇ‌ನಿರೂಪಣೆ

ಮತ್ತು ರೋಗಿಯ ದಾಖಲೆಯ ಸಾರ್ವಜನಿಕ ದಫ್ತರಖಾನೆ ಸೇವೆಯನ್ನು ಕಟ್ಟುತ್ತಿದ್ದು, ಎಚ್ಎಲ್7 ಸಿಡಿಎ ಆರ್2 ಮತ್ತು ವಿ3 ಸಂದೇಶಗಳನ್ನು ಆಧರಿಸಿದೆ.  ಹಂತಾಧಾರಿತ

ನಿಯೋಜನೆಯನ್ನು 2008-2011ಗಾಗಿ ಮಾಡಲಾಗಿದೆ. ಆವೃತ್ತಿ 2 ಸಂದೇಶ ಕಳಿಸುವಿಕೆಯನ್ನು ಹೆಚ್ಚಿನ ಆಸ್ಪತ್ರೆಗಳು ಮತ್ತು ಶುಶ್ರೂಶಾ ಕೇಂದ್ರಗಳಲ್ಲಿ ಸ್ಥಾಪಿಸಲಾಯಿತು. ಸಿಡಿಎ ಆರ್‌1 ಅನ್ನು ರೋಗಿಗಳ ದಾಖಲೆಗಳನ್ನು ಸ್ಥಳೀಯ ಮಟ್ಟದಲ್ಲಿ ಹಂಚಿಕೊಳ್ಳಲು ಬಳಸಲಾಯಿತು.

ಜರ್ಮನಿ

[ಬದಲಾಯಿಸಿ]

ಎಚ್ಎಲ್7 ಇದರ ಜರ್ಮನ್ ಅಧ್ಯಾಯವು 1993 ರಲ್ಲಿ ಪಾಯ ಹಾಕಲ್ಪಟ್ಟಿತು. ಇದೊಂದು ಅಸ್ತಿತ್ವದಲ್ಲಿರುವ ಸಾರ್ವಜನಿಕ ಹಾಗೂ ಎಚ್ಎಲ್7 ಇ.ವಿ. ಎಂದು ದಾಖಲಾತಿ ಹೊಂದಿದ ಸಂಸ್ಥೆಯಾಗಿದೆ. ಜರ್ಮನಿಯ ಆರೋಗ್ಯ ಸೇವೆಯಲ್ಲಿ ಸಂಯುಕ್ತ ಆಡಳಿತ ಕಾರ್ಯದ ವ್ಯವಸ್ಥೆ ಇರುವ ಕಾರಣ ಗುಣಮಟ್ಟ ನೀಡುವ ಮಗ್ಗಲು ಸಾರ್ವಜನಿಕ ಆರ್ಥಿಕತೆಯ ಹಿಂದೆ ಹೆಚ್ಚಿನ ಸಾಧ್ಯತೆ ಹೊಂದಿದೆ ಮತ್ತು ಕೈಗಾರಿಕೆಯಲ್ಲಿನ ಸ್ಪರ್ಧಾತ್ಮಕ ಹೂಡಿಕೆಗಳ ಕಾರಣ ಆರೋಗ್ಯ ಸೇವೆಯ ಮಾಹಿತಿ ವ್ಯವಸ್ಥೆಯಲ್ಲಿನ ಅಭಿವೃದ್ಧಿ ಅತ್ಯಂತ ಕಡಿಮೆ ಫಲಶೃತಿ ಹೊಂದಿದೆ. ಪ್ರಸ್ತುತವಾಗಿ ಜರ್ಮನಿಯಲ್ಲಿ ಎಚ್‌ಎಲ್‌7 ಮಾಹಿತಿ ಗುಚ್ಚವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅದು ಇತರ ರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆಗಳೊಂದಿಗೆ ಅಂಗವಾಗಿ ಕಾರ್ಯ ನಿರ್ವಹಿಸುತ್ತಿದೆ[]. ಎಚ್ಎಲ್7 ನಲ್ಲಿನ ಸ್ವಯಂಸೇವಾ ಸದಸ್ಯತ್ವವು ವೈಯಕ್ತಿಕ ಮತ್ತು ದವಾಖಾನೆ ಉಪಯೋಗಿಸುವ ಕೆಲಸ ಹೊಂದಿದವರು ಮತ್ತು ಮುಖ್ಯವಾಗಿ ಕೈಗಾರಿಕಾ ಆಸಕ್ತಿ ಹೊಂದಿದ ಅಲ್ಪಸಂಖ್ಯೆಯಲ್ಲಿರುವ ದವಾಖಾನೆ ಸದಸ್ಯರ ಆಸಕ್ತಿಯಲ್ಲಿ ವಿಶ್ವಾಸವಿಟ್ಟಿದೆ. ಅಲ್ಲಿ ಸರ್ಕಾರಿ ಆಡಳಿತವು ಅತ್ಯಂತ ಕಡಿಮೆ ಸದಸ್ಯತ್ವ ಹೊಂದಿದೆ ಮತ್ತು ಇದರಿಂದ ಅತ್ಯಂತ ಕಡಿಮೆ ಕೊಡುಗೆಯನ್ನು ನಡೆಯುತ್ತಿರುವ ಚರ್ಚೆಯಲ್ಲಿ ನೀಡಿದೆ. ಉದಾ. ರೋಗಿಗಳ ಅಂಕಿ ಅಂಶ ದಾಖಲೆಯು (ಇಪಿಎ= ಇಲೆಕ್ಟ್ರಾನಿಸ್ಚ್ ಪೇಷಂಟಿನಕ್ಟೆ) ಅಂಕಿ ಅಂಶ ಲಭ್ಯತೆ ವಿರುದ್ಧ ಅಂಕಿ ಅಂಶದ ಭದ್ರತೆಯ ಮೇಲೆ ಸರಿದೂಗಿಸುತ್ತಿದೆ. ಆಸ್ಪತ್ರೆ ಮಾಹಿತಿ ವ್ಯವಸ್ಥೆಯಲ್ಲಿನ ಅತ್ಪಾದನೆಗಳ ಮೇಲಿನ ಫಲಶೃತಿಯಾಗಿ (ಕೆಐಎಸ್ ಎಂದು ಕರೆಯಲ್ಪಡುವ = ಕ್ರಾಂಕೆನ್ಹಾಸ್-ಇನ್ಫೋರ್ಮೇಶನ್ ಸಿಸ್ಟಮ್ ಇನ್ ಜರ್ಮನ್) ಇಂದಿನವರೆಗೂ ಯಾವುದೇ ಪ್ರಾಮುಖ್ಯತೆ ಹೊಂದಿಲ್ಲ. ಎಚ್ಐಎಸ್ ನ ಮಾರ್ಪಾಡುವಿಕೆಯು ಎಚ್ಎಲ್7 ನಿಂದ ಸವಾಲು ಹಾಕಲ್ಪಟ್ಟಿಲ್ಲ. ಎಚ್ಎಲ್7 ನ ದೊಡ್ಡ ಪ್ರಮಾಣದಲ್ಲಿ ದತ್ತು ಸ್ವೀಕಾರಕ್ಕೆ ಸರ್ಕಾರ ಹಣ ನೀಡುವುದು ಜರ್ಮನಿಯಲ್ಲಿ ಒಕ್ಕೂಟ ವ್ಯವಸ್ಥೆಯಲ್ಲಿಯೇ ಇರಲಿ ಅಥವಾ ಹೆಚ್ಚಿನ ಪ್ರಾದೇಶಿಕ ಸರ್ಕಾರದಲ್ಲಿಯೇ ಇರಲಿ ಇನ್ನೂ ಬಂದಿಲ್ಲ.

ನೆದರ್‌ಲ್ಯಾಂಡ್ಸ್

[ಬದಲಾಯಿಸಿ]

ಏಓಆರ್ಟಿಎ- ರಾಷ್ಟ್ರೀಯ ಆರೋಗ್ಯ ಸೇವೆ ಐಸಿಟಿ ಮೂಲ ಪದ್ಧತಿ ಎಓಆರ್ ಟಿಎ ಇದು ಡಚ್ ರಾಷ್ಟ್ರೀಯ ಮೂಲಪದ್ಧತಿಯಾಗಿದ್ದು, ಆರೋಗ್ಯ ಸೇವೆ ನೀಡುವವರ ಮಧ್ಯೆ ಅಂಕಿ ಅಂಶಗಳ ಕೈ ಬದಲಾವಣೆಗಾಗಿ ಉಪಯೋಗಿಸಲ್ಪಡುತ್ತದೆ. ಎಓಆರ್ ಟಿಎ ಎಚ್ಎಲ್7 ಆವೃತ್ತಿ 3 ಸಂದೇಶಗಳನ್ನು ಉಪಯೋಗಿಸುತ್ತದೆ ಮತ್ತು ಮಾಹಿತಿ ಕೈ ಬದಲಾವಣೆಗಾಗಿ ಯಾಂತ್ರಿಕ ರಚನೆಯ ಗುಂಪಿನ ದಾಖಲೆಪತ್ರ ಮಾಡುತ್ತದೆ. ಪ್ರಾಸ್ತಾವಿಕ ವಿವರವು 2003 ರಲ್ಲಿ ತಯಾರಿಸಲ್ಪಟ್ಟಿತು. ಡಚ್ ನ ಆರೋಗ್ಯ ಸಚಿವಾಲಯವು ಆರೋಗ್ಯ ಸೇವೆ ನೀಡುವವರಿಗೆ ರೋಗಿಗಳ ಅಂಕಿ ಅಂಶ ಹಂಚಿಕೊಳ್ಳಲು ಸಹಾಯಕವಾಗುವಂತೆ ಮಾಡುವ ಇಲೆಕ್ಟ್ರಾನಿಕ್ ರೋಗಿಗಳ ದಾಖಲೆಪತ್ರ (ಈಪಿಎ) ಮೇಲೆ ಕೆಲಸ ಮಾಡುತ್ತಿದೆ. ಈ ಬೆಳವಣಿಗೆಯು ಆರೋಗ್ಯ ಸೇವೆಗಾಗಿ ರಾಷ್ಟ್ರೀಯ ಮಾಹಿತಿ ಮತ್ತು ಸಂಪರ್ಕ ತಾಂತ್ರಿಕತೆಯ ಸಂಸ್ಥೆಯಾದ ನಿಕ್ಚಿಜ್ ಜೊತೆಗೆ ಅತ್ಯಂತ ಸಾಮಿಪ್ಯ ಹೊಂದಿದ ಸಹಕಾರಕ್ಕೆ ಅವಕಾಶ ಒದಗಿಸಿದೆ. ನಿಕ್ಟಿಜ್ ಇದು ನೆದರ್ ಲ್ಯಾಂಡ್ ನ ಎಚ್ಎಲ್7 ಸ್ವಯಂಸೇವಕರ ಜೊತೆಗೆ ಎಚ್ಎಲ್7 ಆವೃತ್ತಿ 3 ರ ಆಚರಣೆಯಲ್ಲಿ ಶ್ರಮ ವಹಿಸುವತ್ತ ಲಕ್ಷ್ಯಕೊಟ್ಟಿದೆ. ಹೆಚ್ಚುಕಡಿಮೆ ಎಲ್ಲ ಆಸ್ಪತ್ರೆಗಳು ಎಚ್ಎಲ್7 ಆವೃತ್ತಿ 2 ನ್ನು ಆಸ್ಪತ್ರೆ-ಆಂತರಿಕ ಕೆಲಸದಒತ್ತಡಕ್ಕೆ ಬೆಂಬಲವಾಗಿ ಉಪಯೋಗಿಸುತ್ತವೆ. ಇಡಿಐಫ್ಯಾಕ್ಟ್ ಇದು ಸಾಮಾನ್ಯ ಆಚರಣೆಕಾರರ (ಜಿಪಿ ಗಳು/ಪಿಸಿಪಿ ಗಳು) ಕೆಲಸದ ಒತ್ತಡಕ್ಕೆ ಬೆಂಬಲ ನೀಡಲು ಉಪಯೋಗಿಸಲ್ಪಡುತ್ತಿದೆ. ಇಡಿಐಫ್ಯಾಕ್ಟ್ ನಿಧಾನವಾಗಿ ಎಚ್ಎಲ್7 ಆವೃತ್ತಿ 3 ರಿಂದ ಬದಲಾಯಿಸಲ್ಪಡಲಿದೆ.

ಯುಎಸ್‌ಎ

[ಬದಲಾಯಿಸಿ]

ಲೈಕಾ ಸರ್ಟಿಫಿಕೇಶನ್ ಕಮಿಷನ್ ಫಾರ್ ಹೆಲ್ತ್ ಕೇರ್ ಇನ್ಫಾಫಾರ್ಮೇಶನ್ ತಾಂತ್ರಿಕತೆ (ಸಿಸಿಎಚ್ಐಟಿ) ಇದು ಒಂದು ಲೈಕಾ ಎಂಬ ಹೆಸರಿನ ಒಂದು ಬಹಿರಂಗ-ಮೂಲ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸಿದೆ. ಸಿಸಿಎಚ್ಐಟಿ ವಹಿವಾಟು ಗುಣಮಟ್ಟವು ಹೇಳಿದಂತೆ ಕೇಳುವ ಇಎಚ್ಆರ್ ತಂತ್ರಾಂಶ ಪರೀಕ್ಷಿಸುವುದು ಇದರ ಉದ್ದೇಶ. ಎಚ್ಐಪಿಎಎ ಆರೋಗ್ಯ ವಿಮೆ ಒಯ್ಯುವಂತಹ ಮತ್ತು ಉತ್ತರದಾಯಿತ್ವ ಕಾಯ್ದೆ (ಎಚ್ಐಪಿಎಎ) ಜೊತೆ ಎಚ್ಎಲ್7 ಪ್ರಾಸ್ತಾವಿಕ ಒಳಗೊಳ್ಳುವಿಕೆಯ ಶಾಸನವು 1996 ರಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ ಗುಂಪನ್ನು ಆರಂಭಿಸುವುದರರೊಂದಿಗೆ ಪ್ರಾರಂಭವಾಯಿತು. ಆರೋಗ್ಯ ಸೇವಾ ವಿಮೆ ಮತ್ತು ಇತರ ಇ-ವಾಣಿಜ್ಯ ವ್ಯವಹಾರಕ್ಕೆ ಬೆಂಬಲಿಸಲು ಅವಶ್ಯಕವಾದ ಹೆಚ್ಚಿನ ಮಾಹಿತಿಯನ್ನು ಪ್ರಮಾಣಬದ್ಧಗೊಳಿಸುವುದು ಇದರ ಉದ್ದೇಶವಾಗಿತ್ತು. ಈ ಗುಂಪಿನ ಪ್ರಾರಂಭಿಕ ಕೊಡುಗೆಯೆಂದರೆ, ಆರು ಪ್ರಸ್ತಾಪಿತ ನಿಯಮ ರೂಪಿಸುವಿಕೆಯ (NPRM) ಪ್ರಕ್ರಿಯೆಯ ಸೂಚನೆಗಾಗಿ ಮಾಡಿದ ಆರು ಶಿಫಾರಸು ಮಾಡಿದ ಹಕ್ಕುಗಳ ಲಗತ್ತುಗಳ ಒಂದು ಗುಚ್ಚ. ಭವಿಷ್ಯದ ಮೆಚ್ಚಿನ ಯೋಚನೆ ಒಳಗೊಂಡಿದ್ದರೂ ಮನೆ, ಆರೋಗ್ಯ, ಸೇವೆ ಸಲ್ಲಿಸುವ ಕೌಶಲ್ಯವುಳ್ಳ ಸೌಲಭ್ಯ, ತಡೆದುಕೊಳ್ಳಬಲ್ಲ ವೈದ್ಯಕೀಯ ಸಾಧನ (ಡಿಎಂಇ), ಕೊನೆಯ ಹಂತದ ಕಿಡ್ನಿಗೆ ಸಂಬಂಧಿಸಿದ ಕಾಯಿಲೆ (ಇಎಸ್ಆರ್ ಡಿ) ಮತ್ತು ಪೂರ್ವ-ಅಧಿಕಾರ ಮತ್ತು ಪ್ರಸ್ತಾವನೆಗಳಿಗೆ ಪರಿಮಿತಿ ಹೊಂದಿಲ್ಲ. ಎಚ್‌ಐಪಿಎ‌ಎ‌‍ ಆದೇಶಗಳ ಆಡಳಿತ ಸರಳೀಕರಣ ಕರಾರುಗಳನ್ನು ಜಾರಿಗೆ ತರುವಲ್ಲಿ ಈ ಲಗತ್ತು ವಿಶೇಷ ಆಸಕ್ತಿ ಗುಂಪು ಜವಾಬ್ದಾರಿ ಹೊಂದಿದ್ದು, ಇದು ನಿರಂತರ ಬೆಂಬಲ ನೀಡುತ್ತದೆ, ಮತ್ತು ಎಚ್‌ಎಲ್‌7 ಅನ್ನು ಎಚ್‌ಐಪಿಎ‌ಎ‌‍ ನಿಯಮಿತ ಪ್ರಮಾಣಗಳ ನಿರ್ವಹಣೆ ಸಂಸ್ಥೆಯ(DSMO) Archived 2010-05-27 ವೇಬ್ಯಾಕ್ ಮೆಷಿನ್ ನಲ್ಲಿ. ಪ್ರಯತ್ನಗಳಲ್ಲಿ ಪ್ರತಿನಿಧಿಸುತ್ತದೆ. ಇದರ ಉದ್ದೇಶ ಎಂದರೆ ಹೆಚ್ಚಿನ ಮಾಹಿತಿಯ ಸಮಾನ ನಿರ್ವಹಣೆಗಾಗಿ ಎಚ್ಎಲ್7 ನ ಉಪಯೋಗವನ್ನು ಪ್ರಚೋದಿಸುವುದು. ಈ ಎಸ್ಐಜಿ ಕೈಗಾರಿಕೆಗೆ ನಿರ್ಮಾಣಕ್ಕಾಗಿ ಹಾಗೂ ಎಚ್ಎಲ್7 ಸಂದೇಶಗಳಿಗೋಸ್ಕರ ನಡೆಸಿಕೊಂಡುಬರುವ ಮಾರ್ಗದರ್ಶಕಗಳಿಗಾಗಿ ಸಹಕರಿಸುತ್ತವೆ. ಇವು ಸ್ವತಂತ್ರವಾಗಿ ನಿಲ್ಲಬಹುದು ಅಥವಾ ಎನ್ಎಸ್ಐ ಎಕ್ಸ್12 ವ್ಯವಹಾರದೊಳಗೆ ಖಚಿತಪಡಿಸಿಕೊಳ್ಳಬಹುದು. ಕಟ್ರಿನಾ ಚಂಡಮಾರುತ ಕಟ್ರಿನಾ ಚಂಡಮಾರುತದ ಪರಿಣಾಮಗಳಲ್ಲಿ ರೋಗಿಗಳಿಗೆ ಸಹಾಯ ಮಾಡಲು ಎಚ್ಎಲ್7 ಗಂಪು ಎಲೆಕ್ಟ್ರಾನಿಕ್ ಆರೋಗ್ಯ ದಾಖಲೆ ಮಾರಾಟಗಾರರ ಸಂಘ (ಇಎಚ್ಆರ್ ವಿಎ) ವನ್ನು ಸೇರಿತು. ಎರಡೂ ಸಂಘಟನೆಗಳ ಸದಸ್ಯರು ಅಲ್ಲಿನ ತೊಂದರೆಗೊಳಗಾದ ಪ್ರದೇಶದಲ್ಲಿ ಪರಿಹಾರ ನಿರ್ಮಿಸಲು ಸ್ಥಳೀಯ, ರಾಜ್ಯದಾದ್ಯಂತ ಹಾಗೂ ರಾಷ್ಟ್ರೀಯ ಏಜೆನ್ಸಿಗಳ ಜೊತೆಗೆ ಅತ್ಯಂತ ಚಟುವಟಿಕೆಯಿಂದ ಕೆಲಸ ಮಾಡುತ್ತಿವೆ.

ಇವನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "About Health Level Seven". Health Level Seven.
  2. www.hl7.org
  3. "Contact Health Level Seven". Health Level Seven.
  4. ಎಚ್‌ಎಲ್7 ಮೆಂಬರ್‌ಶಿಪ್ ನಂಬರ್ಸ್ 2007-11-08ರಂದು ಎಚ್‌ಎಲ್7 ನ್ನು ಸೇರಿಸಿಕೊಳ್ಳಲು ಕಳುಹಿಸಲಾಗಿದೆ.
  5. "ಆರ್ಕೈವ್ ನಕಲು" (PDF). Archived from the original (PDF) on 2011-07-16. Retrieved 2010-06-29.
  6. "ಡಿಐಎನ್ ನೇಮ್ಡ್ ಜಹ್ರೆಸ್‌ಬೆರಿಚ್ಟ್ 2007" (PDF). Archived from the original (PDF) on 2011-07-26. Retrieved 2010-06-29.


ಬಾಹ್ಯ ಕೊಂಡಿಗಳು

[ಬದಲಾಯಿಸಿ]

ವಿಮರ್ಶಾತ್ಮಕ ಅವಲೋಕನಗಳು

[ಬದಲಾಯಿಸಿ]

ಮುಕ್ತವಾದ ಮೂಲ ಉಪಕರಣಗಳು

[ಬದಲಾಯಿಸಿ]

ಹಲವಾರು ಎಫ್‌ಒಎಸ್‌ಎಸ್ ಆಧಾರಿತ ಉಪಕರಣಗಳು ಜಗತ್ತಿನಾದ್ಯಂತ ಎಚ್‌ಎಲ್7 ಸ್ಟ್ಯಾಂಡರ್ಸ್ ಅಳವಡಿಕೆಗೆ ಪ್ರೋತ್ಸಾಹ ನೀಡಬಹುದು.

"https://kn.wikipedia.org/w/index.php?title=ಎಚ್ಎಲ್7&oldid=1245259" ಇಂದ ಪಡೆಯಲ್ಪಟ್ಟಿದೆ