ಟೆರಾಡಾಟಾ
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (April 2007) |
ಸಂಸ್ಥೆಯ ಪ್ರಕಾರ | Public (NYSE: TDC) |
---|---|
ಸ್ಥಾಪನೆ | ೧೯೭೯ |
ಮುಖ್ಯ ಕಾರ್ಯಾಲಯ | ಮಿಯಾಮಿಸ್ಬರ್ಗ್, ಓಹಿಯೋ, ಅಮೇರಿಕ ಸಂಯುಕ್ತ ಸಂಸ್ಥಾನ |
ಪ್ರಮುಖ ವ್ಯಕ್ತಿ(ಗಳು) |
|
ಉದ್ಯಮ | Data Warehouse technologies |
ಉತ್ಪನ್ನ | Integrated Data Warehouse Hardware and Software, Professional Services, Customer Services |
ಆದಾಯ | $1.83 billion USD (2019) |
ಉದ್ಯೋಗಿಗಳು | 8,535 (2019)[೧] |
ಜಾಲತಾಣ | www.teradata.com |
ಟೆರಾಡಾಟಾ ಕಾರ್ಪೊರೇಷನ್ (NYSE: TDC) ಇದು ಡಾಟಾ ವೇರ್‌ಹೌಸಿಂಗ್ ಮತ್ತು ಅನಲಿಟಿಕ್ ಅಪ್ಲಿಕೇಷನ್‌ಗಳಲ್ಲಿ ಪ್ರಾವೀಣ್ಯತೆ ಹೊಂದಿರುವ ಒಂದು ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ವೆಂಡರ್ ಕಂಪನಿಯಾಗಿದೆ. ಟೆರಾಡಾಟಾ ಮೊದಲಿಗೆ ಡೇಟನ್, ಓಹಿಯೋದಲ್ಲಿರುವ ಅತಿ ದೊಡ್ಡ ಕಂಪನಿ ಎನ್‌ಸಿಆರ್ ಕಾರ್ಪೊರೇಷನ್‌ನ (NCR ಕಾರ್ಪೊರೇಷನ್) ಒಂದು ಭಾಗವಾಗಿತ್ತು. ಟೆರಾಡಾಟಾದ ಪ್ರಧಾನ ಕಛೇರಿ ಓಹಿಯೋದ ಮಿಯಾಮ್ಸ್‌ಬರ್ಗ್‌ನಲ್ಲಿದೆ. ಅಕ್ಟೋಬರ್ 1, ೨೦೦೭ರಲ್ಲಿ ಎನ್‌ಸಿಆರ್‌ನ ಉಪ ಉತ್ಪನ್ನಗಳನ್ನು ಉತ್ಪಾದಿಸುವ ಕಂಪನಿಯಾಗಿ ಮಾರ್ಪಟ್ಟಿತು.
ಪರಿಚಯ
[ಬದಲಾಯಿಸಿ]ಟೆರಾಡಾಟಾವು 1979ರಲ್ಲಿ ಸ್ಥಾಪನೆಯಾದ ಒಂದು ಸಾಫ್ಟ್‌ವೇರ್ ಕಂಪನಿ, ಇದು ತನ್ನದೇ ಹೆಸರಿನಲ್ಲಿ ಸಂಬಂಧಕ ದತ್ತಾಧಾರದ ನಿರ್ವಹಣಾ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸುತ್ತದೆ ಹಾಗೂ ಮಾರಾಟ ಮಾಡುತ್ತದೆ. ಟೆರಾಡಾಟಾವು NCR ಕಾರ್ಪೊರೇಷನ್‌ನ ಒಂದು ವಿಭಾಗವಾಗಿತ್ತು, ಇದು ಟೆರಾಡಾಟಾವನ್ನು ಫೆಬ್ರವರಿ 28, 1991ರಂದು ತನ್ನದಾಗಿಸಿಕೊಂಡಿತು. ಆದಾಗ್ಯೂ, ಜನವರಿ 8, 2007ರಲ್ಲಿ, ಟೆರಾಡಾಟಾವು ಉಪ ಉತ್ಪನ್ನಗಳನ್ನು ತಯಾರಿಸಿ ಸ್ವತಂತ್ರವಾಗಿ ವಹಿವಾಟು ನಡೆಸುವ ಕಂಪನಿಯೆಂದು NCR ಪ್ರಕಟಿಸಿತು.2010ರಲ್ಲಿ ಟೆರಾಡಾಟಾವು ಅತ್ಯಂತ ಮೆಚ್ಚುಗೆಪಾತ್ರವಾದ ಕಂಪನಿಗಳಲ್ಲಿ ಒಂದು ಎಂಬುದಾಗಿ ಫಾರ್ಚೂನ್‌ನ ವಾರ್ಷಿಕ ಪಟ್ಟಿಯಲ್ಲಿ ಸೇರಿತು.
ಮೈಕ್ರೋಸಾಫ್ಟ್ ವಿಂಡೋಸ್ ಅಥವಾ UNIXನಲ್ಲಿ ಬಳಕೆಯಾಗುವಂತಹ ಅಪ್ಲಿಕೇಶನ್‌ಗಳಿಂದ ಟೆರಾಡಾಟಾ ವಹಿಸಿಕೊಳ್ಳುವ ಡಾಟಾವೇರ್‌ಹೌಸ್‌ಗಳು ಯಾವಾಗಲೂ [[ODBC, JDBC ಮುಖಾಂತರ ಅಥವಾ ನೇಟೀವ್ ಸಪೋರ್ಟ್ ಮುಖಾಂತರ|ODBC, JDBC ಮುಖಾಂತರ ಅಥವಾ ನೇಟೀವ್ ಸಪೋರ್ಟ್ ಮುಖಾಂತರ]] ಸಾಗುತ್ತವೆ. ವೇರ್‌ಹೌಸ್ ವಿಶಿಷ್ಟವಾಗಿ ಡಾಟಾವನ್ನು ಆಪರೇಶನಲ್ ಸಿಸ್ಟಂಗಳಿಂದ ಬ್ಯಾಚ್ ಮತ್ತು ಟ್ರಿಕಲ್ ಲೋಡ್‌ಗಳ ಸಂಯೋಗದೊಂದಿಗೆ ಪ್ರಾರಂಭಿಸುತ್ತದೆ.
ಹೆಚ್ಚು ಗ್ರಾಹಕರ ಅಪ್ಲಿಕೇಷನ್‌ಗಳಿಂದ ಹೆಚ್ಚಿನ ಸಂಖ್ಯೆಯ ಸಹವರ್ತಿಗಳ ಬೇಡಿಕೆಗಳನ್ನು ಒಪ್ಪಿಕೊಂಡು ಪೂರೈಸುವಲ್ಲಿ ಟೆರಾಡಾಟಾವು ಏಕೈಕ ಡಾಟಾ ಸ್ಟೋರ್ ಆಗಿ ಕಾರ್ಯ ನಿರ್ವಹಿಸುತ್ತದೆ. ಅರ್ಥವತ್ತಾದ ಗುಣಲಕ್ಷಣಗಳನ್ನು ಒಳಗೊಂಡಿರುವ ಅಂಶಗಳೆಂದರೆ:
- ಹಲವಾರು ಸರ್ವರ್ಗಳಲ್ಲಿ ಅಧಿಕ ಪ್ರಮಾಣದ ಹಂಚಿಕೆಯಲ್ಲಿ ಬೇಷರತ್ತಾದ ಸಮಾನಾಂತರತೆ.
- 64 ಜಾಯಿನ್‌ಗಳಷ್ಟರ ಜೊತೆಗೆ ಕಾಂಪ್ಲೆಕ್ಸ್ adhoc ಕ್ವೆರೀಸ್
- ಸಮಾಂತರ ಸಾಮರ್ಥ್ಯ, 100 ರೆಕಾರ್ಡ್‌ಗಳನ್ನು ತಯಾರಿಸಲು ಬೇಕಾಗುವ ಶ್ರಮವು 100,000 ರೆಕಾರ್ಡ್‌ಗಳನ್ನು ತಯಾರಿಸಲು ಬೇಕಾಗುವ ಶ್ರಮಕ್ಕೆ ಸಮನಾಗಿರುತ್ತದೆ.
- ಆರೋಹ್ಯತೆ, ಇದರಿಂದಾಗಿ ಈಗಿರುವ ವ್ಯವಸ್ಥೆಯ ಪ್ರೊಸೆಸರ್‌ಗಳ ಸಂಖ್ಯೆಯ ಹೆಚ್ಚಳವಾದಲ್ಲಿ ಕಾರ್ಯ ನಿರ್ವಹಣೆಯ ಸಾಮರ್ಥ್ಯವನ್ನು ಹೆಚ್ಚಾಗುತ್ತದೆ. ಆದ್ದರಿಂದ ಬಳಕೆದಾರರ ಹೆಚ್ಚಳದಿಂದ ಕಾರ್ಯ ನಿರ್ವಹಣೆಯಲ್ಲಿ ಕೊರತೆಯುಂಟಾಗುವುದಿಲ್ಲ..
ತಂತ್ರಜ್ಞಾನ
[ಬದಲಾಯಿಸಿ]ಟೆರಾಡಾಟಾವು ಶೇರ್ಡ್ ನಥಿಂಗ್ ಆರ್ಕಿಟೆಕ್ಚರ್ ಅನ್ನು ನಡೆಸುವ ಒಂದು ಮ್ಯಾಸೀವ್ಲಿ ಪ್ಯಾರಲಲ್ ಪ್ರೊಸೆಸಿಂಗ್ ಸಿಸ್ಟಂ.
ಟೆರಾಡಾಟಾ DBMSವು ಡಾಟಾಬೇಸ್ ಸಿಸ್ಟಂ ಕೆಲಸದ ಹೊರೆಯ ಎಲ್ಲ ಕಡೆಯೂ ರೇಖಾಮಾನದಲ್ಲಿ ಮತ್ತು ನಿರೀಕ್ಷಿತವಾಗಿ ಮೇಲೆರಬಹುದಾದಂತಹದಾಗಿದೆ. (ಡಾಟಾ ವಾಲ್ಯೂಮ್, ಬ್ರೆಡ್ತ್, ಬಳಕೆದಾರರ ಸಂಖ್ಯೆ, ಕ್ವೆರಿಗಳ ಜಟಿಲತೆ).[೨] ಡಾಟಾ ವೇರ್‌ಹೌಸಿಂಗ್ ಅಪ್ಲಿಕೇಷನ್‌ಗಳ ವ್ಯವಹಾರದಲ್ಲಿನ ಅದರ ಜನಪ್ರಿಯತೆಯನ್ನು ಮೇಲೇರುವ ಸಾಮರ್ಥ್ಯವು ವಿವರಿಸುತ್ತದೆ. BYNET ಮೆಸೇಜಿಂಗ್ ಫ್ಯಾಬ್ರಿಕ್ ಒಡೆತನದ ಜೊತೆ ಪರಸ್ಪರ ಸಂಪರ್ಕ ಹೊಂದಿದ ಇಂಟೆಲ್ ಸರ್ವರ್ಸ್‌ಗಳ ಮೇಲೆ ಟೆರಾಡಾಟಾವು ಪ್ರಸ್ತಾಪ ನೀಡಿತು. ಟೆರಾಡಾಟಾ ಬ್ರಾಂಡ್ ಹೊಂದಿದ LSI ಅಥವಾ EMC ಡಾಟಾಬೇಸ್ ಸ್ಟೋರೇಜ್‌ನ ಡಿಸ್ಕ್ ಅರೇಗಳಲ್ಲಿ ಒಂದರ ಜೊತೆ ಟೆರಾಡಾಟಾ ಸಿಸ್ಟಂಗಳು ಪ್ರಸ್ತಾಪಿಸಿದವು.
ಆಪರೇಟಿಂಗ್ ಸಿಸ್ಟಮ್‌ಗಳಿಗೆ ಹೊಂದಿಕೆಯಾಗುವ ಸಾಮರ್ಥ
[ಬದಲಾಯಿಸಿ]ಟೆರಾಡಾಟಾವು ಕೆಳಕಂಡ ಹಲವಾರು ಆಪರೇಟಿಂಗ್ ಸಿಸ್ಟಂಗಳ ಆಯ್ಕೆ ಮಾಡುವ ಸೌಲಭ್ಯ ಒದಗಿಸುತ್ತದೆ:
- UNIX SVR4.2 MP-RAS, AT&T ನಿಂದ ಒಂದು ಬಿನ್ನವಾದ System V UNIX
- ಮೈಕ್ರೋಸಾಫ್ಟ್ ವಿಂಡೋಸ್ ಸರ್ವರ್ 2003
- 64-bit Intel ಸರ್ವರ್ಗಳ ಮೇಲೆ SUSE Linux ಎಂಟರ್‌ಪ್ರೈಸ್ ಸರ್ವರ್
ಗ್ರಾಹಕರು
[ಬದಲಾಯಿಸಿ]ಟೆರಾಡಾಟಾವು ಪ್ರಸ್ತುತ 1,000ಕ್ಕಿಂತಲೂ ಹೆಚ್ಚು ಗ್ರಾಹಕರನ್ನು ಹೊಂದಿದೆ ಹಾಗೂ ಸುಮಾರು 1,900 ಕ್ಕಿಂತಲೂ ಅಧಿಕ RDBMS ಇನ್‌ಸ್ಟಾಲೇಶನ್‌ಗಳನ್ನು ಹೊಂದಿದೆ. ವಾಲ್-ಮಾರ್ಟ್, ಟೆಸ್ಕೊ ಮತ್ತು SUPERVALU Incಗಳಂತಹ ಬಹುದೊಡ್ಡ ಹಾಗೂ ಪ್ರಖ್ಯಾತ ಕಂಪನಿಗಳು ರೀಟೈಲ್ ಕ್ಷೇತ್ರದಲ್ಲಿ ಗ್ರಾಹಕರಾಗಿವೆ, ಇವುಗಳು ಸೆಂಟ್ರಲ್ ಇನ್ವೆಂಟರಿ, ಎಂಟರ್‌ಪ್ರೈಸ್ ರಿಪೋರ್ಟಿಂಗ್, ಕೆಟಗರಿ ಪ್ಲ್ಯಾನಿಂಗ್ ಮತ್ತು ಇತರೆ ಹಣಕಾಸು ವ್ಯವಸ್ಥೆಗಳನ್ನು ಟೆರಾಡಾಟಾದೊಂಡಿಗೆ ನಡೆಸುತ್ತವೆ. ಇತರೆ ಟೆರಾಡಾಟಾದ ಗ್ರಾಹಕರ ಪಟ್ಟಿಯಲ್ಲಿ ಸೇರಿರುವ ಕಂಪನಿಗಳಲ್ಲಿ AT&T (ಮೊದಲಿನ SBC), ರಾಯಲ್ ಬ್ಯಾಂಕ್ ಆಫ್ ಕೆನಡಾ, ಡೆಲ್, eBay, ವೆಲ್ಸ್ ಫರ್ಗೊ, ಬ್ಯಾಂಕ್ ಆಫ್ ಅಮೆರಿಕಾ, ಬೆಸ್ಟ್ ಬೈ, ಕ್ಯಾಪಿಟಲ್ ಒನ್, ಸಿಯರ್ಸ್, ನೈಕ್, ಕೊಕ ಕೊಲಾ, ಬೆಲ್ ಕೆನಡಾ, ಅಮೆರಿಕನ್ ಏರ್‌ಲೈನ್ಸ್, ಟೆಲ್‌ಸ್ಟ್ರಾ, ಆಪ್ಟಸ್, ಲಾಯ್ಡ್ಸ್ TSB, ಭಾರತಿ ಏರ್‌ಟೆಲ್, ವೋಡಫೋನ್, ಕಾಂಟಿನೆಂಟಲ್ ಏರ್‌ಲೈನ್ಸ್ ಮತ್ತು ಫೆಡೆಕ್ಸ್.[೩]
ಸ್ಪರ್ಧೆ
[ಬದಲಾಯಿಸಿ]ಟೆರಾಡಾಟಾದ ಪ್ರಮುಖ ಸ್ಪರ್ಧಿಗಳೆಂದರೆ ಇತರೆ ಹೈ-ಎಂಡ್ ಸಲ್ಯೂಷನ್‌ಗಳಾದ Oracle, IBM, ಹಾಗೂ Sybase IQ, ಹಾಗೆಯೇ HP Neoview ಇದು ಮ್ಯಾಸೀವ್ಲಿ ಪ್ಯಾರಲಲ್ ಶೇರ್ಡ್ ನಥಿಂಗ್ ಆರ್ಕಿಟೆಕ್ಚರ್ ಮೇಲೆ ಆಧಾರಿತವಾಗಿದೆ. ಡಾಟಾವೇರ್‌ಹೌಸ್ ಅಪ್ಲೈಯನ್ಸ್‌ನಿಂದಾಗಿ ಸ್ಪರ್ಧೆಗಿಳಿದಿರುವ ವೆಂಡರ್ ಕಂಪನಿಗಳೆಂದರೆ Netezza, DATAllegro (ಆಗಸ್ಟ್, 2008 ರಲ್ಲಿ ಇದನ್ನು Microsoft ತನ್ನದಾಗಿಸಿಕೊಂಡಿತು), Aster Data Systems, Greenplum ಮತ್ತು Vertica Systems, ಹಾಗೂ ಪ್ಯಾಕೇಜ್ಡ್ ಡಾಟಾವೇರ್‌ಹೌಸ್ ಅಪ್ಲಿಕೇಶನ್‌ಗಳಾದ SAP ಮತ್ತು Kalido. ಇವುಗಳು ಟೆರಾಡಾಟಾದ ಚುರುಕುತನವನ್ನು ಮಧ್ಯಮ-ಮಾರುಕಟ್ಟೆಯಲ್ಲಿ ಹಾಗೂ ಕೆಲ ಉನ್ನತ ಮಟ್ಟದಲ್ಲಿ, ವಿಶೇಷವಾಗಿ ಶಕ್ತಿಯನ್ನು ನಿಧಾನಗೊಳಿಸಿದವು.
ಇತಿಹಾಸ
[ಬದಲಾಯಿಸಿ]ಟೆರಾಡಾಟಾವು 1979ರಲ್ಲಿ ಕೆಳಕಂಡವರಿಂಡ ಸ್ಥಾಪಿಸಲ್ಪಟಿತು:
- ಡಾ. ಜಾಕ್ ಇ. ಶೆಮರ್, ಸಮಿತಿಯ ಅಧ್ಯಕ್ಷರು ಮತ್ತು ಸಭಾಧಿಪತಿ
- ಡಾ. ಫಿಲಿಪ್ ಎಮ್. ನೆಚೆಸ್, ಉಪಾಧ್ಯಕ್ಷರು ಮತ್ತು ಪ್ರಧಾನ ವಿಜ್ಞಾನಿ
- ವಾಲ್ಟರ್ ಇ. ಮುಯಿರ್, ಮಾರಾಟ ವಿಭಾಗದ ಉಪ ಅಧ್ಯಕ್ಷರು
- ಜೆರಾಲ್ಡ್ ಆರ್.ಮೋಡ್ಸ್, ಉಪಾಧ್ಯಕ್ಷರು ಮತ್ತು ಪ್ರಧಾನ ಹಣಕಾಸು ಅಧಿಕಾರಿ
- ವಿಲಿಯಮ್ ಪಿ. ವರ್ತ್, ಉತ್ಪಾದನೆ ವಿಭಾಗದ ಉಪಾಧ್ಯಕ್ಷರು
- ಕರ್ರೊಲ್ ರೀಡ್, ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಉಪಾಧ್ಯಕ್ಷರು
- ಜಾಕ್ ಗುಸ್ತಾಫ್ಸನ್, ಕೀನೋಟರ್ ಮತ್ತು ಪ್ರೆಸೆಂಟರ್
1976 ಹಾಗೂ 1979ರ ಮಧ್ಯೆ ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧನೆ ಹಾಗೂ ಸಿಟಿ ಬ್ಯಾಂಕ್‌ನ ಸುಧಾರಿತ ತಂತ್ರಜ್ಞಾನದ ತಂಡವು ನಡೆಸಿದ ಚರ್ಚೆಯ ಫಲವಾಗಿ ಟೆರಾಡಾಟಾದ ಕಲ್ಪನೆಯು ಬೆಳೆಯಿತು. ಬಹು ಮೈಕ್ರೋಪ್ರೊಸೆಸರ್‌ಗಳ ಜೊತೆ ಪ್ಯಾರಲಲ್ ಪ್ರೊಸೆಸಿಂಗ್‌ಗಾಗಿ ಡಾಟಾಬೇಸ್ ಮ್ಯಾನೇಜ್‌ಮೆಂಟ್ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲು ಸಂಸ್ಥಾಪಕರು ಕಾರ್ಯ ನಿರ್ವಹಿಸಿದರು, ವಿಶೇಷವಾಗಿ ನಿರ್ಣಯ ಉತ್ತೇಜಿತವಾಗಿತ್ತು.[೪] ಟೆರಾಡಾಟಾವು ಜುಲೈ 13, 1979ರಲ್ಲಿ ಸಂಘಟಿತವಾಯಿತು, ಮತ್ತು ಕಾಲಿಫ್, ಬ್ರೆಂಟ್‌ವುಡ್‌ನಲ್ಲಿ ಒಂದು ಗ್ಯಾರೇಜನ್ನು ಪ್ರಾರಂಭಿಸಿತು. ಟೆರಾಬೈಟ್‌ಗಳಷ್ಟು (ಟ್ರಿಲಿಯನ್‌ಗಳಷ್ಟು ಬೈಟ್‌ಗಳು) ಡಾಟಾವನ್ನು ನಿರ್ವಹಿಸುವ ಸಾರ್ಮರ್ಥವುಳ್ಳದೆಂದು ಸೂಚಿಸುವದಕ್ಕಾಗಿ ಇದರ ಹೆಸರು ಟೆರಾಡಾಟಾ ಎಂದು ಆಯ್ಕೆ ಮಾಡಲಾಯಿತು.[೪]
1983ರಲ್ಲಿ ಒಂದು ಬೀಟಾ ಸಿಸ್ಟಂ, ವೆಲ್ಸ್ ಫಾರ್ಗೊ ಬ್ಯಾಂಕ್‍ಗೆ ಕೊಡಲಾಯಿತು,[೪] ಹಾಗೂ ವಿಶ್ವದ ಮೊದಲ ನಿರ್ಧಾರವನ್ನು ಉತ್ತೇಜಿಸುವುದಕ್ಕಾಗಿ RDBMS ಸಮಾಂತರವಾಗಿ ಸೃಷ್ಟಿಯಾದ ಉತ್ಪನ್ನವು 1984ರಲ್ಲಿ ಬಿಡುಗಡೆಯಾಯಿತು.[೫]
1986ರಲ್ಲಿ FORTUNE ಮ್ಯಾಗಜೀನ್ ಟೆರಾಡಾಟಾವನ್ನು “ವರ್ಷದ ಉತ್ಪನ್ನ” ಎಂದು ಪ್ರಕಟಿಸಿತು.[೪] ನಂತರದ ನಾಲ್ಕು ವರ್ಷಗಳಲ್ಲಿ IBM MVS[೪] ಮತ್ತು Univac ಸಂಪರ್ಕದಲ್ಲಿ OS1100 ಮೆಯಿನ್‌ಫ್ರೇಮ್‌ಗಳನ್ನು ಪರಿಚಯಿಸಿತು, ಮತ್ತು ಒಂದು ಟೆರಾಬೈಟ್ (ಒಂದು ಟ್ರಿಲಿಯನ್ ಬೈಟ್‌ಗಳು)ನಷ್ಟು ಟೆರಾಡಾಟ ವ್ಯವಸ್ಥೆಯು ಬಿಡುಗಡೆಯಾಯಿತು.[೪]
ಡಿಸೆಂಬರ್ 1991ರಲ್ಲಿ, NCR, ನಂತರ AT&Tನ ಒಂದು ಭಾಗವು ಟೆರಾಡಾಟಾವನ್ನು ತನ್ನದಾಗಿಸಿಕೊಂಡಿತು.[೪] ಟೆರಾಡಾಟಾವು NCRನಿಂದ ವಿಭಜನೆ ಹೊಂದಿತು ಮತ್ತು ಅಕ್ಟೋಬರ್ 1, 2007ರಂದು ಅಧಿಕೃತವಾಗಿ ಟೆರಾಡಾಟಾ ಕಾರ್ಪೊರೇಷನ್ ಆಗಿ ರೂಪುಗೊಂಡಿತು (NYSE: TDC).
1996ರಲ್ಲಿ 11 ಟೆರಾಬೈಟ್‌ಗಳ ದತ್ತಾಂಶದ ಒಂದು ಟೆರಾಡಾಟಾ ಡಾಟಾಬೇಸ್ ವಿಶ್ವದಲ್ಲೆ ಅತಿ ದೊಡ್ಡದಾಗಿತ್ತು, ಹಾಗೂ 1999ರ ಹೊತ್ತಿಗೆ ಬಳಕೆದಾರರ 176 ನೋಡ್‌ಗಳ 130 ಟೆರಾಬೈಟ್‌ಗಳೊಂದಿಗಿನ ಉತ್ಪನ್ನದಿಂದಾಗಿ ಟೆರಾಡಾಟಾದ ಗ್ರಾಹಕ ಕಂಪನಿಗಳಲ್ಲಿ ಒಂದರ ಡಾಟಾಬೇಸ್ ವಿಶ್ವದಲ್ಲೇ ಅತಿ ದೊಡ್ಡ ಡಾಟಾಬೇಸ್ ಆಗಿತ್ತು.[೪].
ಪ್ರಯೋಜನಗಳು
[ಬದಲಾಯಿಸಿ]ಟೆರಾಡಾಟಾವು ಡಾಟಾ ವೇರ್ ಹೌಸಿಂಗ್ ಮ್ಯಾನೇಂಜ್‌ಮೆಂಟ್‍ಗೆ ಸಹಾಯವಾಗುವಂತಹ ಕೆಲ ಪ್ರಯೋಜನಗಳನ್ನು ಒದಗಿಸುತ್ತದೆ ಹಾಗೂ ಟೆರಾಡಾಟಾ RDBMS ಜೊತೆಯಲ್ಲಿ ನಿರ್ವಹಣೆ ಮಾಡುವಂತವ ಕೆಲ ಅಂಶಗಳು ಹೀಗಿವೆ
- BTEQ
- ಮಲ್ಟಿಲೋಡ್
- ಟೆರಾಡಾಟಾ ಫಾಸ್ಟ್ಲೋಡ್
- ಫಾಸ್ಟ್ಎಕ್ಪೋರ್ಟ್
- TPump
- TPT (ಟೆರಾಡಾಟಾ ಪ್ಯಾರಲಲ್ ಟ್ರ್ಯಾನ್ಸ್ಪೋರ್ಟ್)
- SQL ಅಸಿಸ್ಟೆಂಟ್ / ಕ್ವೆರಿಮನ್
- ಪ್ರಿಪ್ರೊಸೆಸರ್ r 2 / PP2
ಉತ್ಪನ್ನಗಳು
[ಬದಲಾಯಿಸಿ]- ಗ್ರಾಹಕ ಸಂಬಂಧಿ ವ್ಯವಸ್ಥೆ: ಟೆರಾಡಾಟಾ ರಿಲೇಷನ್ಶಿಪ್ ಮ್ಯಾನೇಜರ್
- ಡಾಟಾ ವೇರ್‌ಹೌಸಿಂಗ್
- ಡಿಮ್ಯಾಂಡ್ ಚೈನ್ ಮ್ಯಾನೇಜ್‌ಮೆಂಟ್
- ಹಣಕಾಸು ವ್ಯವಸ್ಥೆ
- ಕೈಗಾರಿಕೆಗಳ ಪರಿಹಾರಗಳು
- ಪ್ರಾಫಿಟಬಿಲಿಟಿ ಅನಲಿಟಿಕ್ಸ್
- ಸಪ್ಲೈ ಚೈನ್ ಇಂಟಲಿಜೆನ್ಸ್
- ಮಾಸ್ಟರ್ ಡಾಟಾ ಮ್ಯಾನೇಜ್‌ಮೆಂಟ್
ಆಕರಗಳು
[ಬದಲಾಯಿಸಿ]- ↑ "For 10-K: Annual Report for the Fiscal Year Ending December 31, 2019". February 28, 2020. Retrieved August 10, 2020.
- ↑ "Born To Be Parallel". Archived from the original on 2008-09-27. Retrieved 2010-05-07.
- ↑ "Customers A-Z". Archived from the original on 2008-02-23. Retrieved 2010-05-07.
- ↑ ೪.೦ ೪.೧ ೪.೨ ೪.೩ ೪.೪ ೪.೫ ೪.೬ ೪.೭ "Teradata Milestones". Archived from the original on 2007-08-15. Retrieved 2010-05-07.
- ↑ "Softwarememories.com: Database machines and data warehouse appliances – the early days".
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Company Home page
- Teradata CMO Darryl McDonald's Blog Archived 2009-04-27 ವೇಬ್ಯಾಕ್ ಮೆಷಿನ್ ನಲ್ಲಿ.
- Yahoo! - Teradata Profile
- Teradata decides to compete head-on as a data warehouse appliance vendor
ಇವನ್ನೂ ಗಮನಿಸಿ
[ಬದಲಾಯಿಸಿ]- Pages using the JsonConfig extension
- Articles needing additional references from April 2007
- All articles needing additional references
- Companies listed on the New York Stock Exchange
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಯುನೈಟೆಡ್ ಸ್ಟೇಟ್ಸ್ನ ಸಾಫ್ಟ್‌ವೇರ್ ಕಂಪನಿಗಳು
- ಡಾಟಾವೇರ್ ಹೌಸಿಂಗ್
- ಟೆರಾಡಾಟಾ
- ಓಹಿಯೊ ಡೇಟನ್ ಮೂಲದ ಕಂಪನಿಗಳು