ಅಗ್ನಿ-೧
ಗೋಚರ
Agni-I/Agni-II/Agni-III/Agni-V | |
---|---|
Agni-II MRBM (Medium range ballistic missiles) | |
ನಮೂನೆ | Medium Range Ballistic Missile (Agni-I) Intermediate Range Ballistic Missile (Agni-II, Agni-III) Intercontinental Ballistic Missile (Agni-V) |
ಮೂಲ ಸ್ಥಳ | India |
ಕಾರ್ಯನಿರ್ವಹಣಾ ಇತಿಹಾಸ | |
ಸೇವೆಯಲ್ಲಿ | (Tests) 04/11/99, 01/17/01 and 08/29/04 |
ನಿರ್ಮಾಣ ಇತಿಹಾಸ | |
ನಿರ್ಮಾರ್ತೃ | Defence Research and Development Organisation (DRDO), Bharat Dynamics Limited (BDL) |
ಘಟಕ ವೆಚ್ಚ | Rs 250-350 million (INR) or $ 5.6-7.9 million (USD) |
ವಿವರಗಳು | |
ಭಾರ | 12,000 kg (Agni-I) 16,000 kg (Agni-II) |
ಉದ್ದ | 15 m (Agni-I) 20 m (Agni-II) 16 m (Agni-III) |
ವ್ಯಾಸ | 1.0 m (Agni-I, Agni-II) 2.0 m (Agni-III) |
ಸಿಡಿತಲೆ | Strategic nuclear (15 KT to 250 KT), conventional HE-unitary, penetration, sub-munitions, incendiary or fuel air explosives |
ಎಂಜಿನ್ | Single Stage (Agni-I) Two-and-half-stage (Agni-II) Two stage (Agni-III) solid propellant engine |
ಕಾರ್ಯವ್ಯಾಪ್ತಿ | 700 km (Agni-I) 2500 km (Agni-II) 3500 km (Agni-III) 5000-6000 km (Agni-V) |
ಉಡ್ಡಯನದ ಎತ್ತರ | > 90 km |
ವೇಗ | 5-6 km/s (Agni-II) |
ಮಾರ್ಗದರ್ಶಕ ವ್ಯವಸ್ಥೆ |
Ring Laser Gyro- INS (Inertial Navigation System), optionally augmented by GPS terminal guidance with possible radar scene correlation |
ಉಡ್ಡಯನ ನೌಕೆ | 8 x 8 Tatra TELAR (Transporter erector launcher) Rail Mobile Launcher |
ಅಗ್ನಿ ಅನುಕ್ರಮ ಕ್ಷಿಪಣಿಗಳು
[ಬದಲಾಯಿಸಿ]- ಕ್ಷಿಪಣಿಯು ಯಾವುದೇ ರೀತಿಯಲ್ಲಿ) ಚಿಮ್ಮಿದ ವಸ್ತು ಯಾ ಚಿಮ್ಮಿದ ಅಸ್ತ್ರ. ಅಗ್ನಿ (ಕ್ಷಿಪಣಿ) ಭಾರತದ ರಕ್ಷಣಾ ವ್ಯವಸ್ಥೆಯ ಭಾಗವಾಗಿರುವ ಇಂಧನದಿಂದ ಚಿಮ್ಮಿ ನೂರಾರು ಕಿಲೋಮೀಟರು ದೂರ ಸಿಡಿತಲೆ ಯಾ ಬಾಂಬನ್ನು, ಅಣು ಬಾಂಬನ್ನು ಕೂಡಾ ಹೊತ್ತೊಯ್ಯಬಲ್ಲ ದೂರಗಾಮಿ ಅಸ್ತ್ರ. ಇದರ ದೂರಗಾಮಿತ್ವ ಗಾತ್ರಗಳಿಗೆ ಅನುಸರಿಸಿ ಅಗ್ನಿ ೧ - ೨ - ೩ - ೪ - ೫ಎಂದು ಹೆಸರು ಕೊಟ್ಟಿದೆ. ಇದೇ ರೀತಿ ರಕ್ಷಣಾ ಮತ್ತು ಧಾಳಿ ಆದ ಅಸ್ತ್ರಗಳೂ ಪೃಥ್ವಿ ಕ್ಷಿಪಣಿಗಳನ್ನೂ ಭಾರತದ ಸೈನ್ಯ ಹೊಂದಿದೆ.
- ಅಗ್ನಿ I (ಸಂಸ್ಕೃತ: अग्नि, ಅಗ್ನಿ "ಫೈರ್"; "ಬೆಂಕಿ" 'ಆಗ್ನೇಯಾಸ್ತ್ರ') ಇಂಟಿಗ್ರೇಟೆಡ್ ನಿರ್ದೇಶಿತ ಕ್ಷಿಪಣಿಯ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಭಾರತದ ಡಿ.ಆರ್.ಡಿ.ಒ.[The Defence Research and Development Organisation (DRDO)] ಅಭಿವೃದ್ಧಿಪಡಿಸಿದ ಒಂದು ಮಧ್ಯಮ ಶ್ರೇಣಿಯ ಖಂಡಾಂತರ ಕ್ಷಿಪಣಿ. ಇದು, 250 km ವ್ಯಾಪ್ತಿಯ ಪೃಥ್ವಿ-II ಮತ್ತು 2,500 km ವ್ಯಾಪ್ತಿಯ ಅಗ್ನಿ II ರ ನಡುವಿನ ಅಂತರವನ್ನು ತುಂಬಲು, ಕಾರ್ಗಿಲ್ ಯುದ್ಧದ ನಂತರ ಅಭಿವೃದ್ಧಿ ಪಡಿಸಿದ ಒಂದು ಹಂತದ ಕ್ಷಿಪಣಿಯಾಗಿದೆ. ಇದು ಮೊದಲ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR) ಎರಡೂ, ವೀಲರ್ ದ್ವೀಪದಲ್ಲಿ ಒಂದು ಮಾರ್ಗ ಮೊಬೈಲ್ ಲಾಂಚರ್ ನಿಂದ ಜನವರಿ 25, 2002 ರಂದು ಉಡಾಯಿಸಲಾಗಿತ್ತು. [೧]
ಕ್ಷಿಪಣಿ ಪರೀಕ್ಷಾ ಪ್ರಯೋಗ
[ಬದಲಾಯಿಸಿ]- ಮಂಗಳವಾರ, ನವೆಂಬರ್ 22, 2016;
- ಭುವನೇಶ್ವರದ ಹತ್ತಿರ ನವೆಂಬರ್ 22ರಂದು ದೇಶಿ ನಿರ್ಮಿತ ಅಣ್ವಸ್ತ್ರ ಸಾಮರ್ಥ್ಯವುಳ್ಳ ಅಗ್ನಿ -I ಕ್ಷಿಪಣಿ ಪ್ರಯೋಗ ಮಂಗಳವಾರ ಯಶಸ್ವಿಯಾಗಿದೆ. ಈ ಮೂಲಕ ಸಂಪೂರ್ಣವಾಗಿ ದೇಶೀಯವಾಗಿ ಅಭಿವೃದ್ಧಿಗೊಳಿಸಲಾದ ಅಣ್ವಸ್ತ್ರ ಸಾಮರ್ಥ್ಯದ ಕ್ಷಿಪಣಿ ಪ್ರಯೋಗಕ್ಕೆ ಭಾರತ ಸಜ್ಜಾಗಿದೆ. ಒಡಿಶಾದ ಕರಾವಳಿಯ ಚಂಡಿಪುರ್ ನಲ್ಲಿರುವ ಅಬ್ದುಲ್ ಕಲಾಂ ದ್ವೀಪದಲ್ಲಿ ಈ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. ಸೋಮವಾರದಂದು ಪೃಥ್ವಿ-2 ಅವಳಿ ಅಣ್ವಸ್ತ್ರ ಕ್ಷಿಪಣಿ ಉಡಾವಣೆ ಯಶಸ್ವಿಯಾಗಿತ್ತು. ಸಮಗ್ರ ಪ್ರಯೋಗ ವಲಯದ (ಐಟಿಆರ್) ಉಡಾವಣೆ ಸಂಕೀರ್ಣ-3ರಲ್ಲಿ ಸಂಚಾರಿ ವಾಹಕ-4(LC IV) ರ ಮೂಲಕ ಬೆಳಗ್ಗೆ 10.10ರ ಸುಮಾರಿಗೆ ಅಗ್ನಿ I ಕ್ಷಿಪಣಿ ಪರೀಕ್ಷೆ ಉಡಾವಣೆ ಸಫಲವಾಗಿದೆ ಎಂದು ರಕ್ಷಣಾ ಮೂಲಗಳು ಹೇಳಿವೆ.
- ಈ ಖಂಡಾಂತರ(ballistic) ಕ್ಷಿಪಣಿಯು 700 ಕಿ.ಮೀ.ದೂರದಲ್ಲಿರುವ ಗುರಿಯನ್ನು ಮುಟ್ಟಿ, ಶತ್ರುಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ. ಪೃಥ್ವಿ-2 ಕ್ಷಿಪಣಿ ಭೂಮಿಯಿಂದ ಭೂಮಿಗೆ ಚಿಮ್ಮುವ ಈ ಎರಡು ಕ್ಷಿಪಣಿಗಳು 350 ಕಿ.ಮೀ.ದೂರದಲ್ಲಿರುವ ವೈರಿ ಗುರಿಯನ್ನು ಧ್ವಂಸ ಮಾಡುವ ಶಕ್ತಿ ಹೊಂದಿದೆ. 500 ರಿಂದ 1,000 ಕೆ.ಜಿ. ಸಿಡಿತಲೆಗಳನ್ನು ಹೊರುವ ಸಾಮರ್ಥ್ಯವನ್ನು ಹೊಂದಿದೆ.(ಪಿಟಿಐ)[೨]
ಕ್ಷಿಪಣಿ ವಿವರ
[ಬದಲಾಯಿಸಿ]- ಕ್ಷಿಪಣಿ ಅಗ್ನಿ 1 ನ್ನು 12 ಟನ್ಗಳಷ್ಟು ತೂಕ, 15 ಮೀಟರ್ ಉದ್ದದ, ಒಂದಕ್ಕಿಂತ ಹೆಚ್ಚು ಟನ್ ವಸ್ತುಗಳನ್ನು ಸಾಗಿಸಲು ವಿನ್ಯಾಸಗೊಳಿಸಲಾಗಿದೆ. ಇದರ ಧಾಳಿ ವ್ಯಾಪ್ತಿಯ ಪೇಲೋಡ್(ತೂಕ) ಕಡಿಮೆಯಾದಂತೆ ಹೆಚ್ಚುತ್ತದೆ.
- ಅಗ್ನಿ -1 ರಕ್ಷಣಾ ಸಂಶೋಧನೆ ಅಭಿವೃದ್ಧಿ ಪ್ರಯೋಗಾಲಯ ಮತ್ತು ಸಂಶೋಧನಾ ಕೇಂದ್ರ ಇಮಾರತ್ ಸಹಯೋಗದೊಂದಿಗೆ ಡಿಆರ್ಡಿಒ ಮತ್ತು ಪ್ರಧಾನ ಕ್ಷಿಪಣಿ ಅಭಿವೃದ್ಧಿ ಪ್ರಯೋಗಾಲಯ ಮತ್ತು ಭಾರತ್ ಡೈನಮಿಕ್ಸ್ ಲಿಮಿಟೆಡ್, ಹೈದರಾಬಾದ್ ಮೂಲಕ ಅಭಿವೃದ್ಧಿ ಪಡಿಸಲಾಗಿದೆ. ಅಗ್ನಿ -1 ಕೊನೆಯ ಪ್ರಯೋಗ, ಅದೇ ನೆಲೆಯಿಂದ ಮಾರ್ಚ್ 14, 2016 ರಂದು ಯಶಸ್ವಿಯಾಗಿ ನಡೆಸಿದ್ದರು.[೩]
- ಸಾಗರಿಕ ಕ್ಷಿಪಣಿ
ಅಗ್ನಿಯ ಉನ್ನತೀಕರಣ
[ಬದಲಾಯಿಸಿ]- 13 Jul, 2017;
- ದಕ್ಷಿಣ ಭಾರತದಿಂದ ಚೀನಾದಾದ್ಯಂತ ಯಾವುದೇ ನೆಲೆಯ ಮೇಲೂ ದಾಳಿ ನಡೆಸಬಲ್ಲಂಥ ಕ್ಷಿಪಣಿಯನ್ನು ಭಾರತ ಅಭಿವೃದ್ಧಿಪಡಿಸುತ್ತಿದೆ. ಚೀನಾವನ್ನು ಗಮನದಲ್ಲಿಟ್ಟುಕೊಂಡು ಅಣ್ವಸ್ತ್ರಗಳನ್ನು ಆಧುನೀಕರಣಗೊಳಿಸುತ್ತಿದೆ ಎಂದು ಅಮೆರಿಕದ ಇಬ್ಬರು ಹಿರಿಯ ಪರಮಾಣು ತಜ್ಞರು ಹೇಳಿದ್ದಾರೆ. ಸಾಮಾನ್ಯವಾಗಿ ಪಾಕಿಸ್ತಾನವನ್ನು ಗುರಿಯಾಗಿಸಿಕೊಂಡು ಭಾರತ ಅಣ್ವಸ್ತ್ರ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಿತ್ತು. ಇದೀಗ ಚೀನಾವನ್ನು ಗುರಿಯಾಗಿಸಿದೆ ಎಂದು ಹ್ಯಾನ್ಸ್ ಎಂ ಕ್ರಿಸ್ಟೆನ್ಸನ್ ಮತ್ತು ರಾಬರ್ಟ್ ಎಸ್ ನಾರ್ರಿಸ್ ಎಂಬ ತಜ್ಞರು ‘ಇಂಡಿಯನ್ ನ್ಯೂಕ್ಲಿಯರ್ ಫೋರ್ಸಸ್ 2017’ ಎಂಬ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.
ಅಣ್ವಸ್ತ್ರ ವಾಹಕ
[ಬದಲಾಯಿಸಿ]- 150–200ರಷ್ಟು ಅಣ್ವಸ್ತ್ರ ಸಿಡಿತಲೆಗಳನ್ನು ತಯಾರಿಸಲು ಬೇಕಾಗಬಲ್ಲ 600 ಕಿಲೋದಷ್ಟು ಪ್ಲುಟೋನಿಯಂ ಅನ್ನು ಭಾರತ ಉತ್ಪಾದಿಸಿದೆ. ಆದರೆ, ಅದೆಲ್ಲವನ್ನೂ ಅಣ್ವಸ್ತ್ರ ಸಿಡಿತಲೆಗಳನ್ನಾಗಿ ಪರಿವರ್ತಿಸಿಲ್ಲ. ಸದ್ಯ 120–130 ಅಣ್ವಸ್ತ್ರ ಸಿಡಿತಲೆಗಳನ್ನು ಅಭಿವೃದ್ಧಿಪಡಿಸಿರುವ ಸಾಧ್ಯತೆ ಇದೆ ಎಂದು ಲೇಖನದಲ್ಲಿ ಹೇಳಲಾಗಿದೆ.ಸಿಡಿತಲೆಗಳ ಭಾರಿ ಸಂಗ್ರಹ
- ‘ಅಣು ಸಿಡಿತಲೆ (ನ್ಯೂಕ್ಲಿಯರ್ ವಾರ್ ಹೆಡ್) ತಯಾರಿಕೆಗೆ ಬೇಕಾದ ಪ್ಲುಟೋನಿಯಂನ ಸಂಗ್ರಹ ಭಾರತದ ಬಳಿ ಸಾಕಷ್ಟಿದೆ. ಹೀಗಾಗಿ ಬೇಕಾದಷ್ಟು ಅಣು ಸಿಡಿತಲೆಗಳನ್ನು ತಯಾರಿಸಲು ಭಾರತದ ಶಕ್ತವಾಗಿದೆ’ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿರುವ ಅಣು ವಿದ್ಯುತ್ ಸ್ಥಾವರಗಳ ಸಂಖ್ಯೆಯ ಆಧಾರದಲ್ಲಿ ಪ್ಲುಟೋನಿಯಂ ಪ್ರಮಾಣವನ್ನು ಅವರು ಅಂದಾಜಿಸಿದ್ದಾರೆ.
- 600 ಕೆ.ಜಿ: ಭಾರತದ ಬಳಿ ಇರುವ ಅಣ್ವಸ್ತ್ರ ತಯಾರಿಕಾ ಗುಣಮಟ್ಟದ ಪ್ಲುಟೋನಿಯಂ
- 120–130: ಭಾರತ ಈಗಾಗಲೇ ತಯಾರಿಸಿರಬಹುದಾದ ಅಣು ಸಿಡಿತಲೆಗಳ ಸಂಖ್ಯೆ[೪]
ವ್ಯಾಪ್ತಿ
[ಬದಲಾಯಿಸಿ]- ಆಗ್ನಿ 1 700ಕಿಮೀ ಗುರಿ ಪಾಕೀಸ್ತಾನದ ಪ್ರದೇಶಗಳು ಉಡಾವಣೆಯ ಪ್ರದೇಶ ಗುಜರಾತು.
- ಅಗ್ನಿ 2 2500 ಕಿಮೀ. ಚೀನಾದ ದಕ್ಷಿಣ ಭಾಗ ಉಡಾವಣೆ ಪ್ರದೇಶ ಚೀನಾ ಗಡಿಯ ಹತ್ತಿರ
- ಅಗ್ನಿ 3 3500 ಕಿ.ಮೀ. ಚೀನಾ ಪಾಕಿಸ್ತಾನ ಉಡಾವಣಾಕೇಂದ್ರ ಮಧ್ಯ ಭಾರತ
- ಅಗ್ನಿ 4 4000 ಕಿ.ಮೀ. “” 2018ಕ್ಕೆಚಾಲೂ ಚೀನಾದ ಈಶಾನ್ಯ ಮತ್ತಿತರ ಪ್ರದೇಶಗಳು
- ಅಗ್ನಿ 5 5000 ಕಿಮೀ. ಚೀನಾದ ಎಲ್ಲಾಭಾಗ ದಕ್ಷಣ ಏಷ್ಯಾ ; ಸಂಚಾರಿ ವಾಹನದಿಂದ ತಕ್ಷಣದ ಉಡಾವಣಾ ಸಾಮರ್ಥ್ಯ 2020ಕ್ಕೆ ಸಿದ್ಧತೆ [೫]
ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ The significance of Agni-I ;Volume 19 - Issue 03, Feb. 02 - 15, 2002;T.S. SUBRAMANIAN
- ↑ ಪೃಥ್ವಿ ನಂತರ ಅಗ್ನಿ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ
- ↑ India test-fires nuclear capable Agni-I ballistic missile; Balasore |Updated: Nov 22, 2016
- ↑ ‘ಚೀನಾ ಗುರಿಯಾಗಿಸಿ ಕ್ಷಿಪಣಿ ಅಭಿವೃದ್ಧಿಪಡಿಸುತ್ತಿದೆ ಭಾರತ’ಏಜೆನ್ಸಿಸ್;13 Jul, 2017
- ↑ ಮೇಲಿನದು