ವಿಷಯಕ್ಕೆ ಹೋಗು

ಭಾರತದ ಬಹಾಯಿ ಆರಾಧನಾ ಮಂದಿರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
'ನವ ದೆಹಲಿಯ, ಬಹಾಯಿ ಆರಾಧನಾ ಮಂದಿರ'

ಪ್ರಮುಖವಾದ ಉದ್ದೇಶ

[ಬದಲಾಯಿಸಿ]
'ಕಮಲ ಪುಷ್ಪದ ಎಸಳುಗಳ ಆಕಾರದ ಭಿತ್ತಿಚಿತ್ರಗಳು'

’ಬಹಾಯಿ ಆರಾಧನಾ ಮಂದಿರ’ ವು, ಸೃಷ್ಟಿಕರ್ತನ ನಾಮಸ್ಮರಣೆಯ ಉದಯ ಸ್ಥಾನ ಮತ್ತು ಕೇಂದ್ರವಾಗಿದೆ. ಮಾನವ ಮತ್ತು ಭಗವಂತನ ಪರಸ್ಪರ ಪ್ರೀತಿಯನ್ನು ವ್ಯಕ್ತಪಡಿಸುವಂತೆ ಅದನ್ನು ರೂಪಿಸಲಾಗಿದೆ. ಬಹಾಯಿ ಆರಾಧನಾ ಮಂದಿರವು ಧರ್ಮ, ಜನಾಂಗ, ರಾಷ್ಟ್ರೀಯತೆ, ವರ್ಣ, ಭಾಷೆ, ಅಥವಾ ಮತಗಳನ್ನು ಲೆಕ್ಕಿಸದೆ, ಸಕಲ ಮಾನವ ಜನಂಗಕ್ಕೂ ಮಂದಿರವನ್ನು ತೆರೆದಿಡಲಾಗಿದೆ. ಇಲ್ಲಿ ಯಾವವ್ಯಕ್ತಿಯಾದರೂ ಮೌನವಾಗಿ ಧ್ಯಾನಮಾಡಲು ಅನುಕೂಲ ಕಲ್ಪಿಸಿರುವ ಒಂದು ದೇವಸ್ಥಳವಾಗಿದೆ.

ಭವಿಷ್ಯದಲ್ಲಿ

[ಬದಲಾಯಿಸಿ]

ವಿದ್ಯಾಪ್ರಸಾರದ ಅನುಕೂಲತೆಗಳಿಗಾಗಿ ಶಾಲೆಗಳನ್ನು ಮತ್ತು ವಾಚನಾಲಯಗಳನ್ನು ಮತ್ತು ರೋಗಿಗಳಿಗೆ ಮತ್ತು ಅಶಕ್ತರಿಗೆ ದೀನದಲಿತರಿಗೆ, ಸೇವೆಗಾಗಿ ಆಸ್ಪತ್ರೆಗಳು, ವೃದ್ಧರಿಗಾಗಿ, ವೃದ್ಧಾಶ್ರಮಗಳು, ಅನಾಥಲಯಗಊಉ, ಮತ್ತು ವಸತಿ ಸೌಲಬ್ಯಗಳು ಮುಂತಾದ ಮಾನವೀಯ ಸಾಮಾಜಿಕ ಸೆವಾಸಂಸ್ಥೆಗಳು ಈ ಭವನದ ಸುತ್ತಲೂ ಇರುವುವು. ನಿಜಾರ್ಥದಲ್ಲಿ ಮೇಲೆಹೇಳಿದ ಎಲ್ಲಾ ತತ್ವಗಳನ್ನೂ ಕೃತಿರೂಪಕ್ಕೆ ತಂದಾಗ ಮಾತ್ರ ಬಹಾಯಿ ಆರಾಧನೆ ಪೂರ್ಣಗೊಳ್ಳುತ್ತದೆ.

ಬಹಾಯಿ-ಧರ್ಮಸ್ಥಾಪಕರ ಜನ್ಮ ವೃತ್ತಾಂತ

[ಬದಲಾಯಿಸಿ]

೧೮೪೪ ರಲ್ಲಿ, ಪ್ರಾರಂಭವಾದ ಧರ್ಮವು, ಸ್ವತಂತ್ರವಾದ ವಿಶ್ವದ ಧರ್ಮವಾಗಿದೆ. 'ಬಹಾ-ಉಲ್ಲಾರವರು ,' ಅಂದರೆ, ’ದೇವರ ಜ್ಯೋತಿ ,' ವಿಶ್ವಧರ್ಮಗಳ ಹೊಸ ಅಧ್ಯಾಯದ ಲೇಖಕರಾಗಿರುವರು. ಬಹಾ-ಉಲ್ಲಾರವರು, ೧೮೧೭ ನೇ ನವೆಂಬರ್, ೧೨ ರಂದು, ಆಗಿನ ಪರ್ಶಿಯಾದೇಶದ ಪ್ರಸಿದ್ಧ ಕುಟುಂಬವೊಂದರಲ್ಲಿ ಜನಿಸಿದರು. ದೇವರು ಒಬ್ಬನೇ, ಧಾರ್ಮಿಕ ಸತ್ಯವು ಅನಿರ್ಬಂಧಿತವಾಗಿರದಿದ್ದರೂ ಪೂರಕವಾಗಿದೆ, ಮಾನವನ ಅಧ್ಯಾತ್ಮಿಕ ವಿಕಾಸಕ್ಕೆ ಮಾರ್ಗದರ್ಶನ ನೀಡುವ ದಿವ್ಯ ಬೋಧನೆಗಳನ್ನೊಳಗೊಂಡ ಧರ್ಮವು ಪ್ರಗತಿಶೀಲವಾಗಿದೆ, ಎಂಬುದನ್ನು ಜಗತ್ತಿಗೆ ಘೋಶಿಸಲು ಅವರು ತಮ್ಮ ಭೋಗ-ಜೀವನವನ್ನು ತ್ಯಾಗಮಾಡಿದರು. ’ ಮಾನವ ಜನಾಂಗ,’ ಒಂದು ಹಾಗೂ ಇಡೀ ವಿಶ್ವವೇ ಒಂದು ರಾಷ್ಟ್ರಹಾಗೂ ಮಾನವ ಜನಾಂಗ-ಅದರ ಪ್ರಜೆಗಳು ". ಎಂದು ಉದ್ಘೋಶಿಸಿದರು.

'ಬಹಾ-ಉಲ್ಲಾರವರು , ವಿಶ್ವಕ್ಕೆ ನೀಡಿದ ಸಂದೇಶ

[ಬದಲಾಯಿಸಿ]
ಬಹಾಯಿ ಮಂದಿರ, ಚಿಕಾಗೊ ನಗರ

ತಾವು ಭಗವಂತನ ಸಂದೇಶವಾಹಕರು-ದೂತರು. ಎಂಬುದು ೧೮೫೩ ರಲ್ಲಿ ಅವರಿಗೆ ಪ್ರಥಮವಾಗಿ ತಿಳಿದುಬಂತು. ಬಹಾ-ಉಲ್ಲಾರವರು, ಇರಾಕಿನ ಬಾಗ್ದಾದಿಗೆ ಗಡೀಪಾರಾಗಿ ಹೋದ ೧೦ ವರ್ಷಗಳ ಬಳಿಕ ಪ್ರಪಂಚದ ಎಲ್ಲಾ ಧರ್ಮಗಳೂ ಭವಿಷ್ಯ ನುಡಿದ ಧರ್ಮ-ಭರವಸಿಗ ತಾನೆ, ಎಂದು ಸಾರ್ವಜನಿಕವಾಗಿ ಘೋಷಿಸಿದರು. 'ಇಸ್ತಾಂಬುಲ್ ,' ನ 'ಕಾನ್ ಸ್ಟಾಂಟಿನೋಪಲ್ ,' ಮತ್ತು 'ಆಡ್ರಿಯೊನೋಪಲ್ ,' ಗೆ ಗಡೀಪಾರಾಗಿ ಹೋದ ಅವರು, ಕೊನೆಯದಾಗಿ ೧೮೬೮ ರಲ್ಲಿ ಕ್ರೈಸ್ತರ ಪವಿತ್ರ ಸ್ಥಳವಾದ ಕಾರಾಗೃಹ-ನಗರ, 'ಅಕ್ಕಾ,' ಎಂಬಲ್ಲಿಗೆ ಗಡೀಪಾರಾದರು. ೪೦ ವರ್ಷಗಳಕಾಲ, ಗಡೀಪಾರು, ಸೆರೆಮನೆವಾಸ, ಮತ್ತು ಕಷ್ಟ-ಸಂಕಷ್ಟಗಳ ಬಾಳಿನ ನಂತರ, ಬಹಾ-ಉಲ್ಲಾರವರು, ೧೮೯೨ ರಲ್ಲಿ, ಸ್ವರ್ಗಸ್ಥರಾದರು. ಬಹಾ-ಉಲ್ಲಾರವರ ಸಂದೇಶಗಳು, ಮಾನವ ಪೂರೈಕೆಯ ತೀರ ವ್ಯಕ್ತಿಗತ ವಿಷಗಳಿಂದ ಹಿಡಿದು, ಗಹನ ಗಂಭೀರವಾದ ವಿಷಯಗಳುಳ್ಳ ಸಾವಿರಾರು ಶಾಸನ ಪತ್ರಗಳನ್ನೊಳಗೊಂಡಿದೆ. ಆಧುನಿಕ ಸಮಾಜದ ಆವಶ್ಯಕತೆಗಳು ಹಾಗೂ ಅದ್ಯತೆಗಳನ್ನು ಸಮರ್ಥವಾಗಿ ಕ್ರೋಢೀಕರಿಸಿರುವ ಬಹಾ-ಉಲ್ಲಾರವರ, ಬೋಧನೆಗಳು ವಿಶ್ವದ ವಿವಿಧ ಜನಾಂಗ, ರಾಷ್ಟ್ರ, ಧರ್ಮಗಳನ್ನು ಮಾನವಕುಲ ಒಂದೇ ಎನ್ನುವ ದನಿಯನ್ನು ಒತ್ತಿಹೇಳುತ್ತವೆ. ಅವೆಲ್ಲಾ ಒಂದೇ ಸಮಾಜದ ವಿವಿಧ ಪರಿವಾರಗಳಂತೆ, ಮತ್ತು ವಿಶ್ವಶಾಂತಿಯ ಪ್ರಬಲ ಉದ್ದೇಶವನ್ನಿಟ್ಟುಕೊಂಡಿವೆ. ಇಂದು, ಜಗತ್ತಿನಲ್ಲಿ, ೩೪೦ ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಆಶ್ರಿತದೇಶಗಳಲ್ಲಿ, ಸಂಸ್ಥಾನಗಳಲ್ಲಿ, ದ್ವೀಪಗಳಲ್ಲಿ, ೧,೧೧,೦೦೦ ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಬಹಾಯಿ ಧರ್ಮಾನುಯಾಯಿಗಳು ವಾಸಿಸುತ್ತಿದ್ದಾರೆ. ಬಹಾಯಿಧರ್ಮ-ಸಂದೇಶಗಳನ್ನು, ಜಗತ್ತಿನ ೭೦೦ ಕ್ಕಿಂತ ಹೆಚ್ಚು ಭಾಷೆಗಳಲ್ಲಿ, ಮತ್ತು ಪ್ರಾಂತೀಯ ಭಾಷೆಗಳಲ್ಲಿ ಅನುವಾದಮಾಡಲಾಗಿದೆ.

ಭಾರತದಲ್ಲಿ ಬಹಾಯಿಧರ್ಮ

[ಬದಲಾಯಿಸಿ]

ವಿಶ್ವದ ಧರ್ಮಗಳೆಲ್ಲ, ತಮ್ಮ ಶಾಖೆಗಳನ್ನು ನಮ್ಮದೇಶದಲ್ಲಿ ನೆಲೆಹೊಂದಿರುವಂತ, ಬಹಾಯಿಧರ್ಮವೂ ೧೮೭೨ ರಲ್ಲಿ ಅಸ್ತಿತ್ವಕ್ಕೆ ಬಂದಿತು. ಇಂದು, ಭಾರತದ ೩,೫೦೦ ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಬಹಾಯಿಧರ್ಮಾನುಯಾಯಿಗಳು, ವಾಸಿಸುತ್ತಿದ್ದು, ಸುಮಾರು, ೧೦,೦೦೦ ಬಹಾಯಿ ಅಧ್ಯಾತ್ಮಿಕ ಕೇಂದ್ರಗಳಿವೆ. ಭಾರತದಲ್ಲಿ ನೆಲೆಸಿರುವ ಬಹಾಯಿಧರ್ಮ ಸಮುದಾಯವು, ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿ ಕಾರ್ಯಗಳಲ್ಲಿ, ಉತ್ತಮ ಯೋಜನೆಗಳನ್ನು ಹಮ್ಮಿಕೊಂಡಿವೆ.

ಶುದ್ಧ-ಪ್ರಾರ್ಥನೆಯ ಕಲ್ಪನೆ

[ಬದಲಾಯಿಸಿ]

" ಪರಮೋನ್ನತವಾದ ಅಧ್ಯಾತ್ಮಕತೆ ಮತ್ತು ತೇಜಸ್ಸಿನಿಂದ ಸಲ್ಲಿಸಿದ ಪ್ರಾರ್ಥನೆಯು ಸ್ವೀಕಾರ ಯೋಗ್ಯವಾದದ್ದು. ಅದರ ವಿಸ್ತರಿಸುವಿಕೆಯನ್ನು ಭಗವಂತ ಒಪ್ಪಿಲ್ಲ. ಮತ್ತು ಅವು ಅವನಿಗೆ ಪ್ರಿಯವಲ್ಲ. ಪ್ರಾರ್ಥನೆಯಲ್ಲಿ ನಿರ್ಲಿಪ್ತತೆ, ಮತ್ತು ಪರಿಶುದ್ಧತೆ ಹೆಚ್ಚಿದಷ್ಟೂ ಭಗವಂತನ ಸಾನ್ನಿಧ್ಯದಲ್ಲಿ ಅದು ಹೆಚ್ಚಾಗಿ ಸ್ವೀಕಾರವಾಗುವುದು.-ಬಾಬ್

ಬಹಾಯಿಧರ್ಮದ ದೆಹಲಿಯ ಆರಾಧನಾಮಂದಿರ ಶುರುವಾದ ಬಗ್ಗೆ ವಿವರಗಳು

[ಬದಲಾಯಿಸಿ]
  • ಭಾರತದಲ್ಲಿರುವ ಬಹಾಯಿ ಧರ್ಮದ ಆರಾಧನಾ ಮಂದಿರ ವಿಶ್ವದ ೭ ನೆಯ ಮಂದಿರ.
  • ೧೯೫೩ ರ ಕೊನೆಯಲ್ಲಿ ನಮ್ಮದೇಶದ ನವ-ದೆಹಲಿಯ, ಬಹಾಪುರ-ಬಡಾವಣೆಯಲ್ಲಿ, ಈ ಮಂದಿರಕ್ಕಾಗಿ ನಿವೇಶವನ್ನು ಖರೀದಿಸಲಾಯಿತು.
  • ೧೯೮೦ ರ ಎಪ್ರಿಲ್ ೨೧ ರಂದು ಕಟ್ಟಡ ಕೆಲಸ ಶುರುವಾಗಿ, ೧೯೮೬ ರ ಡಿಸೆಂಬರ್ ೨೪ ರಂದು ಮಾನವಜನಾಂಗಕ್ಕೆ ಸಮರ್ಪಿಸಲಾಯಿತು. ವಿಶ್ವದ ಧರ್ಮಗಳೆಲ್ಲಾ ಸಾರುವ ಸಂದೇಶವೊಂದೇ. ದೇವನೊಬ್ಬ, ಧರ್ಮಗಳೆಲ್ಲಾ ಒಂದೆ.

ಭಾರತೀಯ ಶೃತಿ, ಪುರಾಣಗಳಲ್ಲಿ, ತಾವರೆ ಹೂವಿಗೆ ಅತ್ಯಂತ (ಲಕ್ಷೀದೇವಿಗೆ, ಅದು ಪ್ರಿಯವಾದ ಹೂವು) ಮಹತ್ವದ ಸ್ಥಾನವಿದೆ. ಅದನ್ನು ವಿಶ್ವಧರ್ಮ-ಚಿನ್ಹೆಯನ್ನಾಗಿ ಪರಿಗಣಿಸಿದ್ದಾರೆ. ವಾಸ್ತು-ಶಿಲ್ಪಿ, ’ಫರೀಬೋರ್ಜ್ ಸಾಭಾ,’ ರವರು, ಮಂದಿರವನ್ನು ತಾವರೆಯಾಕಾರದಲ್ಲಿ ನಿರ್ಮಿಸಿದ್ದಾರೆ.

’ವಿಲ್ಮೆಟ್ಟೆ, ಇಲಿನಾಯ್, ಅಮೆರಿಕ ಸಂಯುಕ್ತ ಸಂಸ್ಥಾನಗಳು

’,

  • ಮಂದಿರಕ್ಕೆ ಭಾರತದಲ್ಲಿವಾಸವಾಗಿರುವ ಬಹಾಯಿ-ಧರ್ಮಾನುಯಾಯಿಗಳು ಹಾಗೂ ವಿಶ್ವದ ಬಹಾಯಿ-ಸಮುದಾಯಗಳು, ಕಾಣಿಕೆಯನ್ನು ಸಲ್ಲಿಸಿವೆ.
  • ಈ ಭವನವನ್ನು ಪ್ರವೇಶಿಸಿದಾಗ ಕಾಣಿಸುವ ಪ್ರಮುಖ ಕೊಠಡಿಗಳು, ನಂತರ, ಸ್ವಾಗತಕೇಂದ್ರ, ವಾಚನಾಲಯ, ದೃಷ್ಯ/ಶ್ರವಣ ಕೊಠಡಿ,ವಿಶಾಲವಾದ ಭವ್ಯವಾದ ಆರಾಧನಾ ಮಂದಿರ, (audio/video) ಹಾಗೂ ಆಡಳಿತ ಕಚೇರಿಗಳನ್ನೊಳಗೊಂಡ ಉಪವಿಭಾಗಗಳಿವೆ.
  • ಮಂದಿರದ ಸುತ್ತಲೂ ಸುಂದರವಾದ ವರ್ತುಲಾಕಾರದ ಕಟಕಟೆ, ಸಂಪರ್ಕ ಸೇತುವೆಗಳು, ಮೆಟ್ಟಿಲುಗಳು, ಕಾಲ್ದಾರಿಗಳಿವೆ.
  • ಮಧ್ಯದ ಕಟ್ಟಡ, ಕೊಳದ ತೇಲುವ -ತಾವರೆಯ ಹಸಿರು ಎಲೆಗಳನ್ನು, ಪ್ರತಿನಿಧಿಸುತ್ತಿರುವ ೯ ಕೊಳಗಳಿಂದ ಸುತ್ತುವರಿಯಲ್ಪಟ್ಟಿದೆ.
  • ಕಮಲದ ದಳಗಳನ್ನು ಶ್ವೇತ ವರ್ಣದ ಕಾಂಕ್ರೀಟ್ ಮತ್ತು ನಿರ್ಮಿಸಲ್ಪಟ್ಟಿದೆ. ದಳದ ಹೊರಮೈಯನ್ನು ಅಮೃತಶಿಲೆಯ ಹೊದಿಕೆ ಆವರಿಸಿದೆ.ಮಂದಿರದೊಳಗೆ, ತಮ್ಮ-ತಮ್ಮ ಪ್ರಾರ್ಥನೆಗಳನ್ನು ಮೆಲುದನಿಯಲ್ಲಿ ತೀರ ಮೆಲ್ಲಗೆ ಮನಸ್ಸಿನಲ್ಲೇ ಹೇಳಲುಹಾಗೂ ಧ್ಯಾನಿಸಲು ಎಲ್ಲರಿಗೂ ಸ್ವಾಗತವಿದೆ.

ಹೆಚ್ಚಿನ ವಿವರಗಳಿಗೆ ಬೆಂಗಳೂರಿನ ಬಹಾಯಿ ಮಂದಿರದಲ್ಲಿ,ಸಂಪರ್ಕಿಸುವ ಸ್ಥಳ

[ಬದಲಾಯಿಸಿ]

'ಕರ್ನಾಟಕ ರಾಜ್ಯ ಬಹಾಯಿ ಮಂಡಳಿ', 'ಬಹಾಯಿ ಕೇಂದ್ರ', ೮೨, ಕೋಲ್ಸ್ ರಸ್ತೆ, ಬೆಂಗಳೂರು-೫೬೦೦೦೫ ದೂರವಾಣಿ : ೨೫೩೬೭೭೦೭

ವಿಶ್ವದಾದ್ಯಂತ ಸ್ಥಾಪಿಸಿರುವ, ಇನ್ನುಳಿದ ೬ ಶಾಖೆಗಳು

[ಬದಲಾಯಿಸಿ]

೧. ’ಏಪಿಯ, ಪಶ್ಚಿಮ ಸಮೋಅ’,

೨. ’ಪ್ರಾಂಕ್ ಫರ್ಟ್, ಪ. ಜರ್ಮನಿ’,

೩. ’ಕಂಪಾಲ, ಯುಗಾಂಡ’,

೪. ’ಪನಾಮ ನಗರ, ಪನಾಮ’,

೫. ’ಸಿಡ್ನಿ, ಆಷ್ಟ್ರೇಲಿಯ’,

೬. ’ವಿಲ್ಮೆಟ್ಟೆ, ಇಲಿನಾಯ್, ಅಮೆರಿಕ ಸಂಯುಕ್ತ ಸಂಸ್ಥಾನಗಳು’,