ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:M. G. Road.jpg
'ಮಹಾತ್ಮ ಗಾಂಧಿ ರಸ್ತೆ,

ಭಾರತದ ಪ್ರತಿನಗರಗಳಲ್ಲೂ ’ ಮಹಾತ್ಮಾಗಾಂಧಿ ರಸ್ತೆ,’ ಗಳಿವೆ[ಬದಲಾಯಿಸಿ]

ಎಂ. ಜಿ ರೋಡ್ ನ ಹೆಸರಿನ ರಸ್ತೆಗಳು, ಭಾರತದ ಬಹುತೇಕ ಎಲ್ಲಾ ನಗರಗಳಲ್ಲೂ ಇವೆ. ಬೆಂಗಳೂರಿನ ಅತಿ ಹೆಚ್ಚು ವಾಹನ ಸಂಚಾರವಿರುವ ಪ್ರದೇಶಗಳಲ್ಲೊಂದಾದ, ಎಂ. ಜಿ. ರಸ್ತೆಯ, ಮುಂಚಿನ ಹೆಸರು ಸೌತ್ ಪೆರೇಡ್. ಇದಲ್ಲದೆ, ಅತ್ಯಾಧುನಿಕ ಕಾರುಗಳು, ದ್ವಿಚಕ್ರ ವಾಹನಗಳನ್ನು ಯುವಜನರು ಇಲ್ಲಿಗೆ ತರುತ್ತಾರೆ. ಅವರವರ ’ಗರ್ಲ್ ಫ್ರೆಂಡ್’ ಗಳನ್ನು ಕೂರಿಸಿಕೊಂಡು ವೇಗವಾಗಿ ಸವಾರಿಮಾಡಿಸುವುದು, ರೆಸ್ಟಾರೆಂಟ್ ಗಳಲ್ಲಿ ಪೀಝಾ ಮತ್ತು ಐಸ್ ಕ್ರೀಮ್ ಗಳನ್ನು ಮೆಲ್ಲುವುದು, ಮಾತುಕತೆ, ಮೋಜು, ಗೆಳೆಯರ ಭೇಟಿ, ಇತ್ಯಾದಿ, ಅವರಿಗೆ ಅತಿ ಉತ್ಸಾಹದ ಮೋಜಿನ ಸಂಗತಿ. ಐಟಿ ಉದ್ಯಮ ಗಳಲ್ಲಿ ಕೆಲಸಮಾಡುವ, ಎಗ್ಸಿ ಕ್ಯುಟಿವ್ ಗಳು, ಕಾಲೇಜ್ ಗಳಲ್ಲಿ ವಿದ್ಯಾಭ್ಯಾಸಮಾಡುವ ಪಡ್ಡೆಹುಡುಗರ ಸಂಖ್ಯೆ ಅತಿ-ಹೆಚ್ಚು. ಬೆಂಗಳೂರಿನಲ್ಲಿ ಪಬ್ ಗಳೂ ಎಲ್ಲೆಲ್ಲೂ ನಾಯಿಕೊಡೆಗಳಂತೆ ಮೇಲೆದ್ದಿವೆ. ಪ್ರತಿದಿನ ರಾತ್ರಿ ಇಲ್ಲಿಗೆ ಬರುವ ಉದ್ಯೋಗಿಗಳ ಗುಂಪುಗಳನ್ನು ಅಲ್ಲಲ್ಲಿ ಕಾಣಬಹುದು. ಕೆಲವು ಬೇಳೆ ಕದನ, ಅಶ್ಲೀಲ ಮಾತುಕತೆ, ಪೋಲೀಸರ ಮಧ್ಯಸ್ತಿಕೆಯಿಂದ ಪರಿಸ್ಥಿತಿಯ ಸಮತೋಲನ ಇತ್ಯಾದಿಗಳನ್ನು ನಾವು ದಿನಪತ್ರಿಕೆಗಳಲ್ಲಿ ಓದಿ ತಿಳಿಯುತ್ತೇವೆ. ಒಂದು ಕಾಲದಲ್ಲಿ ದಂಡು [Cantonment], ಎಂದು ಕರೆಯಲಾಗುತ್ತಿದ್ದ ಈ ಪ್ರದೇಶದಲ್ಲಿ, ಸಾಮಾನ್ಯವಾಗಿ 'ಆಂಗ್ಲ-ಸೈನಿಕರು', 'ರಿಟೈರ್ಡ್ ಆರ್ಮಿ ಆಫೀಸರ್ ಗಳು', ನಾಗರಿಕರು, ಮತ್ತು 'ಆಂಗ್ಲೋ-ಇಂಡಿಯನ್' ಜನರು ಹೆಚ್ಚಾಗಿ ವಾಸಿಸುತ್ತಿದ್ದರು. ಈಗ ಅದೆಲ್ಲಾ ಬದಲಾಗಿ ಎಲ್ಲಾ ವರ್ಗದ ಜನರನ್ನೂ, ಸಾಮಾನ್ಯವಾಗಿ ಹೆಚ್ಚು ಹಣವಂತರನ್ನು ನಾವು ಅಲ್ಲಿ ಕಾಣುತ್ತೇವೆ. ಯುದ್ಧಕಾಲದಲ್ಲಿ ಬ್ರಿಗೆಡಿಯರ್ ಆಗಿದ್ದ, 'ವಿನ್ ಸ್ಟನ್ ಚರ್ಚಿಲ್,' ಬೆಂಗಳೂರಿನ ದಂಡಿನಲ್ಲಿನ ಒಂದು ಪ್ರಖ್ಯಾತ ಹೋಟೆಲ್ ಒಂದರ ಹಸಿರು ಲಾನ್ ಮೇಲೆ, ಅಂದಿನದಿನಗಳಲ್ಲಿ ಕುಳಿತು 'ಸಿಗಾರ್,' ಸೇದುತ್ತಿದ್ದ ಜಾಗವನ್ನು ತೋರಿಸಬಹುದು. ತಮಿಳರು, ಮತ್ತು ಮರಾಠಿ ಜನರೂ ಈ ಜಾಗದಲ್ಲಿ ಹೆಚ್ಚಾಗಿದ್ದಾರೆ. ಹೋಟೆಲ್ ಫ್ಯಾನ್ಸಿ ಡ್ರೆಸ್ ಅಂಗಡಿಗಳು, ದೇಶವಿದೇಶದ ಆಹಾರಗಳನ್ನು ಒದಗಿಸುವ ರೆಸ್ಟಾರೆಂಟ್ ಗಳಿವೆ. ಥಿಯೇಟರ್ ಗಳು. ಟ್ರಿನಿಟಿ ಸರ್ಕಲ್ ನಿಂದ ಅನಿಲ್ ಕುಂಬ್ಳೆ ವೃತ್ತದ ವರೆಗೆ, ಅನೇಕ ರಾಜ್ಯಸರ್ಕಾರಿ ಹಾಗೂ ಕಾರ್ಪೊರೇಟ್ ಆಫೀಸ್ ಗಳು, ಭಾರಿ ಭಾರಿ ಹೆಸರಾಂತ ಕಟ್ಟಡಗಳು, ಬ್ಯಾಂಕ್ ಗಳು, ಕೆಂಪ್ಸ್ ಕಾರ್ನರ್ನಂತಹ, 'ಅತ್ಯಾಧುನಿಕ-ರೆಡಿಮೇಡ್ ಶಾಪ್ಸ್,' ಗಳು, ಬಹುಮಹಡಿಯ ವಾಣಿಜ್ಯ ಕಟ್ಟಡ, 'ಪಬ್ಲಿಕ್ ಯುಟಿಲಿಟೀಸ್ ಬಿಲ್ಡಿಂಗ್', ಈ ರಸ್ತೆಯಲ್ಲೇ ಇದೆ. ಇದು ಬೆಂಗಳೂರಿನ ಪ್ರತಿಷ್ಠಿತ ಕಟ್ಟಡಗಳಲ್ಲೊಂದು.

ಎಂ. ಜಿ. ರೋಡ್ ನ ಇನ್ನೊಂದು ಪ್ರಮುಖ ಆಕರ್ಷಣೆ ಬೆಂಗಳೂರು ಮೆಟ್ರೊ

’ಮೆಟ್ರೋ ರೈಲ್ವೆ ನಿರ್ಮಾಣ,’ ಕ್ಕೆ ರಸ್ತೆಗಳನ್ನು ಸಿದ್ಧಪಡಿಸುತ್ತಿದ್ದಾರೆ[ಬದಲಾಯಿಸಿ]

ಈಗ ಬೆಂಗಳೂರಿನಲ್ಲಿ ಬಹಳ ದಿನಗಳಿಂದ 'ಮೆಟ್ರೋ ರೈಲಿನ ವ್ಯವಸ್ಥೆ' ಯನ್ನು ನಗರಕ್ಕೆ ತರಲು ಮೂಲಭೂತ ಸೌಕರ್ಯಗಳ ಕಟ್ಟುವಿಕೆಗೆ ಅಲ್ಲಿನ ಪರಿಸರಗಳನ್ನು ಸಿದ್ಧಪಡಿಸುತ್ತಿದ್ದಾರೆ. ಪೂರ್ವ ಬೆಂಗಳೂರನ್ನು ಮತ್ತು ಪಶ್ಚಿಮ ಬೆಂಗಳೂರಿನ ಭಾಗಗಳನ್ನು ಸೇರಿಸುವ ಪ್ರಯತ್ನ ನಡೆದಿದೆ. ಬೆಂಗಳೂರಿನ ವಾಹನ ಸಂಚಾರ, ಅತಿ ಮಂದಗತಿಯಲ್ಲಿ ಸಾಗುತ್ತಿದೆ. 'ಮೆಟ್ರೋ ರೈಲುಮಾರ್ಗದ ಕೆಲಸದಿಂದಾಗಿ, ಅದಕ್ಕೆ ಸಮಾನಾಂತರವಾದ ಕೆಲವು ರಸ್ತೆಗಳಲ್ಲಿ ಸುತ್ತಿ-ಬಳಸಿ ಹೋಗಿ ಬೇಗ ತಲುಪಬಹುದು. ’ವಾಹನಗಳನ್ನು ಪಾರ್ಕ್ ಮಾಡುವುದು’, ಅತಿ ಕಷ್ಟದ ಕೆಲಸ. ನಿಗದಿಯಾದ ಜಾಗದಲ್ಲಿ ಗುರುತುಮಾಡಿರುವ ಜಾಗದಲ್ಲಿಯೇ ನಿಲ್ಲಿಸಬೇಕು. ಎಷ್ಟೋ ಜನ ೨-೩ ಮೈಲಿದೂರದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ, ತಾವು ಬರಬೇಕಾದ ಸ್ಥಳಕ್ಕೆ, ನಡೆದೇ ಅಲ್ಲಿ ಇಲ್ಲಿ ಸುತ್ತುತ್ತಾರೆ. ಇಲ್ಲವೇ ಆಟೊ ರಿಕ್ಷಾದಲ್ಲಿ ಬರುತ್ತಾರೆ. ೫ ಕಿ. ಮೀ ನಷ್ಟು ಅಂತರವಿದ್ದರೆ, ನಡೆದು ಬರುವುದು ಸುಲಭಸಾದ್ಯ. ಎಂ. ಜಿ. ರೋಡ್, ಮ್ಯೂಸಿಯೆಮ್ ಗೆ ಹತ್ತಿರ. ಬ್ರಿಗೇಡ್ ರೋಡ್ ಗೆ ಸಮಕೋನದಲ್ಲಿರುವ, ಪ್ರಖ್ಯಾತ ’ಕಮರ್ಶಿಯಲ್ ರಸ್ತೆ’ ಗೆ ಅತಿ ಹತ್ತಿರ.

’ಕಂಟೋನ್ಮೆಂಟ್,’ ಅಂದರೆ ಯುವ-ಜನರಿಗೆ ಇಂದಿಗೂ ಹಿಗ್ಗು[ಬದಲಾಯಿಸಿ]

ಹಿಂದೆ ಹಾಲಿವುಡ್ ಚಲನಚಿತ್ರಗಳನ್ನು ವೀಕ್ಷಿಸಲು, ಫಾರಿನ್ ವಸ್ತುಗಳ ಖರೀದಿಗೆ, ಶೂ, ಚಪ್ಪಲಿ, ಸಾಕ್ಸ್, ಟೀ ಶರ್ಟ್ಸ್, ಬೆಲ್ಟ್ಸ್, ಕ್ಯಾಮೆರ, ಫೋಟೋ ತೆಗೆಸಿಕೊಳ್ಳಲು, ಒಳ್ಳೆಯ ಉಡುಪುಗಳನ್ನು ಹೊಲೆಸಲು ದರ್ಜಿಗಳ ಶಾಪಿಗೆ, ಫಾರಿನ್ ಕ್ಯಾಮೆರಾ, ಸೆಂಟ್, ರೆಡಿಮೇಡ್ ಉಡುಪುಗಳು, ಮ್ಯೂಸಿಕ್ ಸಿ. ಡಿ ಗಳು, ದೇಶವಿಧೇಶದ ಫ್ಯಾಶನ್ ಜನರನ್ನು ನೋಡಲು ಹೋಗುತ್ತಿದ್ದರು. ಜನಗಳು ಅರಸಿಕೊಂಡು ಹೋಗುತ್ತಿದ್ದರು. ಚೈನೀಸ್ ತಿಂಡಿ-ತಿನಸುಗಳನ್ನು ಮೆಲ್ಲಲು, ಹೋಗುವ ಯುವಜನರ ಸಂಖ್ಯೆ ಹೆಚ್ಚಾಗಿತ್ತು.

ಮೈಸೂರ್ ಹ್ಯಾಂಡಿಕ್ರಾಫ್ಟ್ ಎಂಪೋರಿಯಮ್’, ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲೊಂದು[ಬದಲಾಯಿಸಿ]

ಬೆಂಗಳೂರಿನ ನಗರದ ಪತ್ರಿಕೆಗಳಾದ, 'ಪ್ರಜಾವಾಣಿ' , 'ಡೆಕ್ಕನ್ ಹೆರಾಲ್ಡ್', 'ಮಯೂರ', 'ಸುಧಾ ' ಪತ್ರಿಕೆಗಳ ಪ್ರಮುಖ ಕಛೇರಿ ಈ ರಸ್ತೆಯ ಮುಖ್ಯ ಜಾಗದಲ್ಲಿದೆ. ’ಮೈಸೂರ್ ಹ್ಯಾಂಡಿಕ್ರಾಫ್ಟ್ ಎಂಪೋರಿಯಮ್,’ ಇದೆ. ಇಲ್ಲಿ ಕರ್ನಾಟಕದ ಗ್ರಾಮೀಣ ಜನರ, ಕರಕುಶಲ ವಸ್ತುಗಳು, ದೊರೆಯುತ್ತವೆ. ದಂತ, ರೇಷ್ಮೆ, ಮತ್ತು ಶ್ರೀಗಂಧದ ಮರದಲ್ಲಿ ಮಾಡಿದ ದೇವಿ-ದೇವತೆಗಳ, ದೇವಸ್ಥಾನಗಳ, ಹಾಗೂ ಅನೇಕ ವೈವಿಧ್ಯಮಯ ಸುಂದರ ಕೆತ್ತನೆ-ಕೆಲಸದ ಶಿಲ್ಪಗಳು ಹೇರಳವಾಗಿ ಸಿಗುತ್ತವೆ.